অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಿಪ್ ಕೊ ಚಳವಳಿ

ಚಿಪ್ ಕೊ ಚಳವಳಿ

ಚಿಪ್ ಕೊ ಚಳುವಳಿ ಭಾರತ ದೇಶದ ಉತ್ತರ ಕನ್ನಡ ಪ್ರಾಂತ್ಯದಲ್ಲಿ ಹಳ್ಳಿಯ ಜನರಿಂದ ಪ್ರಾರಂಭವಾಯಿತು. ಅವರು ವಆಣಿಜ್ಯ ಉದ್ದೇಶ್ಯಕ್ಕಾಗಿ ಗಿಡಮರಗಳನ್ನು ಕಡಿಯುವುದನ್ನು ವಿರೋಧಿಸಿದರು. ಮಹಾತ್ಮಗಾಂಧಿಯವರಿಂದ ಪ್ರಭಾವಿತರಾದ ಮಹಿಳೆಯರು ಈ ಚಳವಳಿಯ ನೇತೃತ್ವವನ್ನು ವಹಿಸಿದರು.

ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಆರ್ಥಿಕವಾಗಿ ಬದುಕಿ ಉಳಿಯಲು ಪರಿಸರ ಸಂರಕ್ಷಣೆಯು ಅತ್ಯಗತ್ಯ. ಮೊದಲನೆಯದಾಗಿ ಆಹಾರ, ಉರುಲು, ನೀರಿನ ಸಂಗ್ರಹಕ್ಕೆ ಹಾಗೂ ಸಂರಕ್ಷಣೆಗಳಿಗೆ ಮಹಿಳೆಯರು ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಮರಬೆಳೆಸಲು, ಮರುಭೂಚಿಯಾಗದಂತೆ ತಡೆಯಲು ಮತ್ತು ಜಲ ಮಾಲಿನ್ಯ ತಡೆಗಟ್ಟಲು ಆಸಕ್ತಿ ವಹಿಸುತ್ತಾರೆ. ಹಿಮಾಲಯ ತಪ್ಪಲಿನಲ್ಲಿ ವಾಸಿಸುವ ಮಹಿಳೆಯರು ಕಾಡೆನ್ನು ಆಹಾರ ಉತ್ಪಾದಿಸಲು ಅವಲಂಭಿಸುತ್ತಾರೆ.

1960ರಲ್ಲಿ ಭಾರತ ದೇಶವು ವಾಣಿಜ್ಯ ಬೆಳವಣಿಗೆ ಸಾಧಿಸಲು ಗಿಡಮರಗಳನ್ನು ಕಡಿದು ಹೊರದೇಶಕ್ಕೆ ಸಾಗಿಸುವುದರ ಮೂಲಕ ವಿದೇಶಿ ವಿನಿಮಯ ಗಳಿಸಿತು. ಇದರ ಪರಿಣಾಮವಾಗಿ ಭೂಮಿ ಸವಕಳಿಯಾಗಿ ಭೂ ಕುಸಿತ, ನೆರೆ ಹಾವಳಿ ಮತ್ತು ಗುಡ್ಡಗಳ ಕೆಳಗಿನ ನದಿಯಲ್ಲಿ  ನೀರಿನ ಕೊರತೆ ಉಂಟಾಯಿತು. ಇದರಿಂದಾಗಿ ಬೆಳೆ ಹಾಗೂ ಮನೆಗಳಿಗೂ ತೊಂದರೆಯಾಯಿತು. ಮಹಿಳೆಯರಿಗೆ ಕಟ್ಟಿಗೆ, ಮೇವು ಮತ್ತು ನೀರಿಗೆ ತೊಂದರೆ ಆಯಿತು. ಇದೆಲ್ಲದರಿಂದ ಭಾರತ ದೇಶದ ಅರಣ್ಯ ಬೆಳೆಸುವ ನೀತಿಯಿಂದಾಗಿ ಹೆಚ್ಚಾಗಿ ಮಹಿಳೆಯರು ಬಲಿಯಾದರು.

ಈ ತರಹದ ಅಸುರಕ್ಷಿತ ಅರಣ್ಯ ಬೆಳೆಸುವ ನೀತಿಗೆ ಎದುರಾಗಿ ಚಿಪ್ ಕೊ ಚಳುವಳಿ ಹುಟ್ಟು ಪಡೆಯಿತು. "ಚಿಪ್ಕೊ" ಎಂದರೆ "ತಬ್ಬಿಕೊ", ಅಂದರೆ ಪ್ರತಿಭಟನಾಕಾರರು ಮರ ಕಡಿಯಲು ಗುರುತು ಮಾಡಿರುವ ಮರವನ್ನು ಎರಡೂ ತೋಳುಗಳಿಂದ ಬಂಧಿಸಿ ಅಲ್ಲಿಂದ ಕದಲಲು ಒಪ್ಪುತ್ತಿರಲಿಲ್ಲ. ತೀರಾ ಒಳಗಿರುವ ಗುಡ್ಡ ಪ್ರದೇಶದಲ್ಲಿ, ಆಟದ ಸಾಮಾನಿನ ತಯಾರಿಕೆಗಾಗಿ ಒಬ್ಬ ಗುತ್ತಿಗೆದಾರನಿಗೆ ಸರ್ಕಾರ 3000 ಗಿಡ ಉರುಳಿಸಲು ಪರವಾನಗಿ ನೀಡಿತ್ತು. ಆ ಸ್ಥಳ ಆಗಲೇ ಬಂಜರು ಭೂಮಿ ಆಗುತ್ತಿತ್ತು. ಆ ಹಳ್ಳಿಯ ಮಹಿಳೆಯರು ಇದಕ್ಕೆ ವಿರುದ್ಧವಾಗಿ ಹೋರಾಡಲು ನಿಶ್ಚಯಿಸಿದರು. ಮರ ಕಡಿಯುವವರು ಬರುವ ಸಮಯಕ್ಕೆ ಹಳ್ಳಿಯ ಪುರುಷರು ಕೆಲಸಕ್ಕೆ ಹೋದಾಗ ಮಹಿಳೆಯರು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಮರ ಕಡಿಯುವವರು ಬಂದ ಲಕ್ಷಣ ಎಮ್ಮರಿಕೆ ಘಂಟೆ ಬಾರಿಸಿತು ಮತ್ತು 50 ವರ್ಷದ ವಿಧವಾ ಮಹಿಳೆ ಮುಖಂಡತ್ವದಲ್ಲಿ 27 ಮಹಿಳೆಯರು ಅರಣ್ಯಕ್ಕೆ ಹೋದರು. ಆ ಮಹಿಳೆಯರು ಮರಕಡಿಯುವವರೊಂದಿಗೆ ವಾಗ್ವಾದಕ್ಕೆ ಇಳಿದು, ಅರಣ್ಯವು "ನಮ್ಮ ತವರು ಮನೆ" ಇದ್ದಂತೆ ಮತ್ತು ಇದನ್ನು ಉರುಳಿಸುವುದರಿಂದ ಅಡ್ಡ ಪರಿಣಾಮಗಳ ಬಗ್ಗೆ ತಿಳಿಸಿದರು. ಮರ ಕಡಿಯುವವರು ಆ ಮಹಿಳೆಯರನ್ನು ಬೈಯ್ಯುವುದರೊಂದಿಗೆ ನಿಂದಿಸಿದರು. ನಂತರ ಪಿಸ್ತೀಲಿನಿಂದ ಎಲ್ಲರನ್ನು ಹೆದರಿಸಿದರು. ಇದಕ್ಕುತ್ತರವಾಗಿ ಮಹಿಳೆಯರು ಗುರುತು ಮಾಡಿದ ಮರಗಳನ್ನು ತಬ್ಬಿಕೊಂಡು ಅದರ ಜೊತೆ ತಾವೂ ಪ್ರಾಣ ನೀಡುವುದಾಗಿ ಹೆದರಿಸಿದರು. ಇದು ಕೆಲಸ ಮಾಡಿತು. ಕೂಲಿಗಾರರು ಹೆದರಿ ಹಿಂದೆ ಹೋದರು ಹಾಗೂ ಗುತ್ತಿಗೆದಾರರನ್ನು ಹಿಂದೆ ಕಳಿಸಿದರು. 1974ರಲ್ಲಿ ಹತ್ತಿರದ ಹಳ್ಳಿಗಳ ಮಹಿಳೆಯರು ಸಹ "ಚರ ಅಪ್ಪಿಕೊ" ತಂತ್ರ ಉಪಯೋಗಿಸಿ ತಮ್ಮ ಹಳ್ಳಿಯಲ್ಲಿ ಅರಣ್ಯ ನಾಶವನ್ನು ತಡೆಯುವುದರ ವಿರುದ್ಧ ಪ್ರತಿಭಟನೆ ಮಾಡಿದರು.

ಇದೇ ರೀತಿ ನಿಮಗೆ ಸಮುದಾಯದಲ್ಲಿ ಕೆಲವು ವಿಷಯಗಳನ್ನು ಮಂಡಿಸುವ ಅವಕಾಶ ಬರಬಹುದು. ಉದಾಹರಣೆಗೆ ಅಂಗನವಾಡಿಯು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಮಕ್ಕಳು ಹಾಗೂ ಮಹಿಳೆಯರಿಗೆ ದೊರಕಬಹುದಾದ ಪೌಷ್ಟಿಕ ಆಹಾರ ಸಿಗದಿರಬಹುದು, ಪೂರೈಸಿದ ಮಧ್ಯಾಹ್ನದ ಊಟ ಸಾಕಾಗದಿರಬಹುದು ಅಥವಾ ಸರಿಯಾಗಿ ಬೇಯಿಸಿಲ್ಲದಿರಬಹುದು. ಹಳ್ಳಿಯಲ್ಲಿ ವಿಧವೆಯು ಸರಿಯಾದ ಎಲ್ಲಾ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದರೂ ಅವಳಿಗೆ ವಿಧವಾ ಭತ್ಯೆ ದೊರಕದೇ ಇರುವುದು. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಬದಲಾವಣೆ ತರಲು ಕೆಲವು ಕಾರ್ಯಗಳನ್ನು ಒಗ್ಗಟ್ಟಿನಿಂದ ಮಾಡಬೇಕಾಗುತ್ತದೆ.

ಆದಾಗ್ಯೂ ಕಾರ್ಯ ಶಕ್ತಿ ಅಥವಾ ಪ್ರತಿಭಟನೆ ಬದಲಾವಣೆಯ ಪ್ರಕ್ರಿಯೆಯಲ್ಲಿ ಮೊದಲನೇ ಮೆಟ್ಟಿಲು ಅಲ್ಲ. ಮೊದಲನೆಯದಾಗಿ ಸಂದರ್ಭವನ್ನು ಅರಿತುಕೊಳ್ಳಬೇಕು. ಹಾಗೂ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡಿಕೊಳ್ಳಬೇಕು ಹಾಗೂ ಮುಖತಃ ಮಾತನಾಡಿ ಕೆಲಸವು ಸುಗಮವಾಗಿ ಆಗುವಂತೆ ಮಾಡಬೇಕು.

ಉದಾಹರಣೆಗೆ ನೀವು ಕೆಲವು ಸಂಬಂಧಪಟ್ಟವರನ್ನು ಮುಖ್ಯವಾದ ವಿಷಯಗಳಿಗೆ ಭೇಟಿಯಾಗಬಹುದು. ಅಂದರೆ, ಪಂಚಾಯತ್ ಅಧ್ಯಕ್ಷ. ದಾದಿ, ಶಿಕ್ಷಕರು, ತಲಾಢಿ ಇವರೊಂದಿಗೆ ಸಮಾಲೋಚನೆ ಮಾಡಿ ವಿಷಯವನ್ನು ಪರಿಹರಿಸಬಹುದು.

ಜಗತ್ತನ್ನು ಬದಲಾಯಿಸಲು ಕ್ರಿಯಾಶಕ್ತಿಯಾಗಿ ಕೆಲಸ ಮಾಡುವುದು ಸರಿಯಾದ ಸಂದರ್ಭಗಳಲ್ಲಿ ಉಪಯೋಗವಾಗುತ್ತದೆ. ಆದರೆ ಯಾವಾಗಲೂ ಇದು ಉಪಯುಕ್ತವಾಗುವುದಿಲ್ಲ. ಅದು ಒಮದು ಕಾರಣಕ್ಕೆ ಧ್ವನಿಯನ್ನು ನೀಡುತ್ತದೆ. ಮೊದಲು ಯಾವುದಾದರೂ ಸಂಘ ಆಥವಾ ಸಂಸ್ಥೆ ಅದೇ ವಿಷಯದ ಮೇಲೆ ಕೆಲಸ ಮಾಡುತ್ತಿದೆಯಾ ಎಂದು ತಿಳಿದುಕೊಂಡು ಅವರ ಸಹಾಯ ತೆಗೆದುಕೊಳ್ಳಿ ಅಥವಾ ಅವರೊಂದಿಗೆ ಅವರ ಕೆಲಸಕ್ಕೆ ಸಹಕಾರ ನೀಡಿ.

ಕೊನೆಯ ಮಾರ್ಪಾಟು : 2/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate