ಔಷಧ ಸೇವಿಸುವುದನ್ನು ಮರೆಯುವವರಿಗೆ ಇಲ್ಲಿದೆ ಒಂದು ಹೊಸ ಆ್ಯಪ್. ಮುಂಬೈ ಮೂಲದ ಹೆಲ್ತ್ ಸೇವರ್ಸ್ ಸಂಸ್ಥೆಯು ‘ಮೈಹೆಲ್ತ್‌ಸೇವರ್ಸ್’ (MyHealthSaverz) ಎಂಬ ಅಪ್ಲಿಕೇಷನ್‌ಅನ್ನು ಪರಿಚಯಿಸಿದೆ. ‘ನಿಯಮಿತ ಔಷಧ ಸೇವನೆ ಕೆಲವೊಮ್ಮೆ ಅಸಾಧ್ಯವಾಗಬಹುದು. ಹಾಗಂತ ಡೋಸ್ ತಪ್ಪಿದರೆ ಅಪಾಯಕಾರಿ.
ಮರೆವು, ಆಲಸ್ಯ ಅಥವಾ ಬಿಡುವಿಲ್ಲದ ಕೆಲಸಗಳಿಂದಾಗಿ ಹೀಗಾಗಬಹುದು. ಆದರೆ ಇದರಿಂದ ಹಲವಾರು ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದು ನನ್ನ ಅನುಭವವೂ ಆಗಿತ್ತು. ಫೋನ್‌ನಲ್ಲಿ ರಿಮೈಂಡರ್ ನಂತೆ ಕೆಲಸ ಮಾಡುವ ಆ್ಯಪ್ ಮಾಡಬಾರದೇಕೆ ಎಂದು ಎನಿಸಲು ಅದೇ ಪ್ರೇರಣೆ ಆಯಿತು. ಸ್ನೇಹಿತರ ಸಲಹೆಯಂತೆ ಈ ಆ್ಯಪ್ ಅಭಿವೃದ್ಧಿ ಪಡಿಸಿ, ಪರಿಚಯಿಸಿದ್ದೇವೆ.
ಈ ಆ್ಯಪ್‌ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸ್ಮಾರ್ಟ್ ಫೋನ್‌ಗಳಿರುವ ಎಲ್ಲರೂ ಈ ಆ್ಯಪ್‌ನ ಸದುಪಯೋಗ ಪಡೆಯ ಬಹುದು’ ಎನ್ನುತ್ತಾರೆ ಹೆಲ್ತ್ ಸೇವರ್ಜ್ ಸಂಸ್ಥೆಯ ಸಹ ಸಂಸ್ಥಾಪಕ ರ್‌್್ಯಾನ್ ಆಲ್ಬುಕರ್ಕ್. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಎಷ್ಟು ಡೋಸ್‌ನ, ಎಷ್ಟು ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಮಾಹಿತಿ ಅಪ್‌ಲೋಡ್ ಮಾಡಬೇಕು.
ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಫೋನು, ನಿಮ್ಮ ಬಳಿ ಇದ್ದಾಗಲೆಲ್ಲ ನಿಮ್ಮನ್ನು ಎಚ್ಚರಿಸುತ್ತದೆ. ಮಧುಮೇಹಿಗಳು, ವಯೋ ಸಹಜ ಕಾಯಿಲೆಯಿಂದ ನರಳುವ ವೃದ್ಧರು ಅಥವಾ ಒತ್ತಡ, ತಾತ್ಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಆ್ಯಪ್ ಅನುಕೂಲಕರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಧ್ಯಯನ ಪ್ರಕಾರ ವಿಶ್ವದಲ್ಲಿ ಅಂದಾಜು ಶೇಕಡ 50ರಷ್ಟು ರೋಗಿಗಳು ವೈದ್ಯರು ಬರೆದುಕೊಟ್ಟ ಔಷಧವನ್ನು ಸೇವಿಸುವುದಿಲ್ಲ. ಶೇಕಡ 69ರಷ್ಟು ಮಂದಿ ಮರೆವಿನಿಂದ ಔಷಧ ಸೇವಿಸುತ್ತಿಲ್ಲ ಎಂಬುದಾಗಿ ಅಧ್ಯಯನ ತಿಳಿಸಿದೆ.
ಆ್ಯಪ್‌ನ ವಿಶೇಷ: ವೈದ್ಯರು ಹೇಳಿರುವ ಔಷಧದ ಪಟ್ಟಿಯನ್ನು ಅಪ್‌ಲೋಡ್ ಮಾಡಬೇಕು. ನೀವು ಯಾವ ಸಮಯಕ್ಕೆ ಎಷ್ಟು ಡೋಸ್‌ನ ಔಷಧ ಸೇವಿಸುತ್ತೀರಿ ಎಂಬುದನ್ನು ಆಲರ್ಮ್ ಸೆಟ್ ಮಾಡಬಹುದು. ಕುಟುಂಬದ ಸದಸ್ಯರು ಸಹ ಅಂದರೆ, ಒಬ್ಬರಿಗಿಂತ ಹೆಚ್ಚಿನ ರೋಗಿಗಳು ಈ ಆ್ಯಪ್ ಉಪಯೋಗ ಪಡೆದುಕೊಳ್ಳಬಹುದು. ರೋಗಿಯು ಔಷಧ ಸೇವಿಸುವುದನ್ನು ಮರೆತರೆ ಪೋಷಕರಿಗೂ ಸಂದೇಶ ರವಾನೆ ಮಾಡುತ್ತದೆ.
ನೀವು ತೆಗೆದುಕೊಳ್ಳುವ ಔಷಧಕ್ಕೆ ಬಣ್ಣ ಮತ್ತು ಆಕಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಹದಿನೈದು ದಿನ, ತಿಂಗಳು, ಮೂರು ತಿಂಗಳು ಹಾಗೂ ಆರು ತಿಂಗಳು… ಹೀಗೆ ಮಾತ್ರೆಗಳನ್ನು ಸೇವಿಸುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅವಧಿ ಮುಗಿದಾಗ ನೀವು ಎಷ್ಟು ಪ್ರಮಾಣದ ಔಷಧವನ್ನು ಸರಿಯಾದ ಸಮಯ ಸೇವಿಸಿದ್ದೀರಿ, ತಡವಾಗಿ ಎಷ್ಟು ಪ್ರಮಾಣ ಹಾಗೂ ಎಷ್ಟು ಬಾರಿ ಮಿಸ್ ಮಾಡಿದ್ದೀರಿ ಎಂಬುದನ್ನು ಗ್ರಾಫ್ ಮೂಲಕ ತೋರಿಸುತ್ತದೆ.
ಮಾಹಿತಿಗೆ: https://play.google.com/ myhealthsaverz
ಮೂಲ : ಕನ್ನಡಿಗ ವರ್ಲ್ಡ್
ಕೊನೆಯ ಮಾರ್ಪಾಟು : 7/5/2020