অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯ ಕವಚ

ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯದ ಯಾವುದೇ ಬಾಗದಿಂದ 108 ನಂಬರ್ ಗೆ ಕರೆಮಾಡಿದರೆ 20 ರಿಂದ 30 ನಿಮಿಷಗಳ ಒಳಗೆ ಅಂಬುಲೆನ್ಸ್ ವಾಹನವು ಅವಶ್ಯಕತೆ ಇರುವೆಡೆಗೆ ತಲಪುವ ವ್ಯವಸ್ಥೆಯೇ “ಆರೋಗ್ಯ ಕವಚ”(108) ಸೇವೆ. 2008 ರ ನವೆಂಬರ್ 01 ರಂದು ರಾಜ್ಯ ಸರ್ಕಾರವು “ಆರೋಗ್ಯ ಕವಚ” ಎಂಬ ಈ ವಿನೂತ ಯೋಜನೆಯನ್ನು ಜಾರಿಗೆ ತಂದಿತು. ರಾಜ್ಯದ ಜನರಿಗೆ ತುರ್ತು ನಿರ್ವಹಣಾ ಪ್ರತಿಕ್ರಿಯೇ ಸೇವೆಯನ್ನು (EMRI-Emergencey Management Response Service) ಸಾರ್ವಜನಿಕ ಮತ್ತು ಖಾಸಗಿ ಸಹ ಭಾಗಿತ್ವದಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ.

ಅಘಾತ ಅಗ್ನಿ ದುರಂತ, ಕಟ್ಟಡಗಳ ಕುಸಿತ, ನೈಸರ್ಗಿಕ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಸೇವೆ ನೀಡುವುದು ಮತ್ತು NRHM ಅಡಿಯಲ್ಲಿ ತಾಯಿ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು ಆರೋಗ್ಯ ಕವಚ 108 ಮುಖ್ಯ ಗುರಿಯಾಗಿರುತ್ತದೆ.

ಆರೋಗ್ಯ ಕವಚ 108 ಸೇವೆಯು ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸಮಗ್ರ ತುರ್ತು ಚಿಕಿತ್ಸೆ ಸೇವೆಯನ್ನು ನೀಡುವ ಸಲುವಾಗಿ ಉಚಿತ ಟೋಲ್ ಫ್ರಿ 108 ನಂಬರ್ ನೊಂದಿಗೆ 24 ಗಂಟೆಗಳ ಕಾಲ ಸಕಾಲಿಕ  ನಿರಂತರ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸುತ್ತಿದೆ. ತುರ್ತು ಅವಶ್ಯಕತೆಯ ಕರೆ ಬಂದಲ್ಲಿ ವಾಹನಗಳನ್ನು 20 ನಿಮಿಷಗಳಲ್ಲಿ ನಗರ ಪ್ರದೇಶಕ್ಕೆ ಹಾಗೂ 30 ನಿಮಿಷಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಈ ಅಂಬುಲೆನ್ಸ್ ನಲ್ಲಿ ಪ್ರಥಮೋಪಚಾರ ನೀಡುವ ಸಿಬ್ಬಂದಿಗಳು (Medical Technicians) ತುರ್ತು ಪರಿಸ್ಥಿಯಲ್ಲಿರುವವರಿಗೆ ಆಸ್ಪತ್ರೆ ಪೂರ್ವ ಚಿಕಿತ್ಸೆಯನ್ನು ವಾಹನದಲ್ಲಿಯೇ ನೀಡುತ್ತಾ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತದೆ ಇದರಿಂದ ಜೀವಹಾನಿ ಅಂಗವಿಕಲತೆ ಆಸ್ತಿ ಹಾನಿ ತಡೆಯಬಹುದಾಗಿದೆ ಮತ್ತು ತಾಯಿ ಮಕ್ಕಳ ಮರಣವನ್ನು ಕಡಿಮೆಗೊಳಿಸಬಹುದಾಗಿದೆ. ಈ ಸೇವೆಯು ದಿನದ 24 ಗಂತೆಗಳು ವಾರದ ಏಳು ದಿನಗಳು ಹಾಗೂ 365 ದಿನವೂ ದೊರೆಯುತ್ತದೆ.

ಉಪಕರಣಗಳ ಸೌಲಭ್ಯ

ಇ ಅಂಬುಲೆನ್ಸ್ ನಲ್ಲಿ ಅವಶ್ಯಕ ಜೀವ ಕಾಪಾಡುವ BLS(Basic life support) ಹಾಗೂ ಕೆಲವು ಆಧುನಿಕ ಉಪಕರಣಗಳ ಸೌಲಭ್ಯವಿರುವ(BLS ನೊಂದಿಗೆ ventilator ಮತ್ತು defibrilator)ಇರುವ ALS (Advanced life support) ಅಂಬುಲೆನ್ಸ್ ಗಳಿರುತ್ತವೆ.  ALS ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸೌಲಭ್ಯದ ಆಂಬುಲೆನ್ಸ್ ಆಗಿರುತ್ತದೆ. ರಾಜ್ಯದ 30ಜಿಲ್ಲೆಗಳಲ್ಲಿ ಸೂಕ್ತ ಸ್ಥಳಗಳಲ್ಲಿ ಒಟ್ಟು ಇಂತಹ 517 ಆಂಬುಲೆನ್ಸ್ ವಾಹನಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ 130 ALS ಆಂಬುಲೆನ್ಸ್ ಹಾಗೂ 387 BLS ಆಂಬುಲೆನ್ಸ್ ಗಳಾಗಿವೆ

ಜನನಿ ಸುರಕ್ಷಾ ವಾಹಿನಿ

  • ತುರ್ತು ಹೆರಿಗೆ ಸೇವೆಗಾಗಿ ಮೀಸಲಿಟ್ಟ ಅಂಬ್ಯುಲೆನ್ಸ್.
  • ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಲಭ್ಯವಿದೆ.
  • ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯಲಾಗುವುದು.

ಮೂಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate