অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಪೌಷ್ಟಿಕತೆ ನಿವಾರಣೆಗೆ ಆಂದೋಲನ

ಅಪೌಷ್ಟಿಕತೆ ನಿವಾರಣೆಗೆ ಆಂದೋಲನ

ಅಪೌಷ್ಠಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳು

ರಾಜ್ಯದಲ್ಲಿ ಅಪೌಷ್ಠಿಕತೆಯಿಂದ  ಬಳಲುತ್ತಿರುವ ಮಕ್ಕಳ ಸಮಸ್ಯೆ ಹಾಗೂ ಅದನ್ನು ನಿವಾರಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಹೈಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯ ಸಮಿತಿ ನೀಡಿದ ಮಾರ್ಗದರ್ಶನದಂತೆ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಹೆವ್ವು ತೊಂದರೆಗೊಳಗಾಗಿರುವ ಆರು ವರ್ಷದೊಳಗಿನ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕೆತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಫೆಬ್ರವರಿಯಲ್ಲಿ ಆದೇಶವೊಂದನ್ನು ಹೊರಪಡಿಸಿತು. ಈ ಆದೇಶದನ್ವಯ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ 47355 ಅತಿ ಕಡಿಮೆ ತೂಕದ ಮಕ್ಕಳಿಗೆ ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಮಕ್ಕಳಲ್ಲಿ 42,108 ಮಕ್ಕಳಿಗೆ ಹೊರ ರೋಗಿಗಳ ಚಿಕಿತ್ಸೆ ನೀಡಲಾಯಿತು. 991 ಮಕ್ಕಳಿಗೆ ಬಾಲ-ಸಂಜೀವಿನಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಯಿತು.

ನಂತರ ಮೇ 14ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆ ಉಪ ನಿರ್ದೇಶಕ್ರು, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಯಿತು. ಈ ವಿಡಿಯೋ ಕಾನ್ಫರೆನ್ಸ್ ಮೇ 31ರೊಳಗೆ ಮತ್ತೊಮ್ಮೆ ಆರು ವರ್ಷದೊಳಗಿನ ಅಪೌಷ್ಠಿಕ ಮಕ್ಕಳ ತಪಾಸಣೆ ನಡೆಸಿ ಚಿಕಿತ್ಸೆ ನೀಡುವಂತೆ ಸೂಚಿಸಲಾಯಿತು.

ಈ ಸೂಚನೆಯನ್ವಯ ಎರಡಾನೇ ಸುತ್ತಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ 53,488 ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು. ಇವರಲ್ಲಿ 2,509 ಮಕ್ಕಳಿಗೆ ಬಾಲ ಸಂಜೀವಿನಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. 1,021 ಮಕ್ಕಳಿಗೆ ಪುನಶ್ಚೇತನ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಲಾಯಿತು.

ಈ ವಿವರಗಳನ್ನು ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಸಮಿತಿ ಹೈಕೋರ್ಟ್ ಗೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ನೀಡಿತು. ವರದಿಯನ್ನು ಪರಿಶೀಲಿಸಿದ ನ್ಯಾಯಲಯ 26.06.2012 ರಂದು ನೀಡಿದ ಆದೇಶದಲ್ಲಿ ಆರೋಗ್ಯ ತಪಾಸಣೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ಮಕ್ಕಳಿಗೆ ಮಾತ್ರ ನಡೆಸಲಾಗಿದೆ. ಅಂಗನವಾಡಿ ಕೇಂದ್ರಗಳಿಂದ ಹೊರಗಿರುವ ಮಕ್ಕಳಿಗೆ ಈ ತಪಾಸಣೆ ನಡೆದಿಲ್ಲ ಎಂದು ಹೇಳಿತು. ಹಾಗಾಗಿ ರಾಜ್ಯದಲ್ಲಿ ಅಂಗನವಾಡಿಯಿಂದ ಹೊರಗಿರುವ ಆರು ವರ್ಷದ ಎಲ್ಲಾ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಜುಲೈ 15 ರಂದು ನಡೆಸಲು ತಿಳಿಸಿದೆ.

ನಿಮ್ಮ ಹತ್ತಿರದ ಅಂಗನವಾಡಿ ಅಥವಾ ಶಾಲೆಗೆ ಆರು ವರ್ಷದೊಳಗಿನ ಎಲ್ಲ ಮಕ್ಕಳನ್ನು ಕರೆದುಕೊಂಡು ಹೋಗಿ, ಆರೋಗ್ಯ ತಪಾಸಣೆ ಮಾಡಿಸಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಯನ್ನು ಆಶಾ, ಅಂಗನವಾಡಿ ಕಾರ್ಯಕರ್ತೆ ಅಥವಾ ಆರೋಗ್ಯ ಸಹಾಯಕರಿಂದ ಪಡೆಯಬಹುದು.

ಜನನಿ ಶಿಶು( ಸುರಕ್ಷಾ ಕಾರ್ಯಕ್ರಮ)

2011 ರ ಸೆಪ್ಟೆಂಬರ 8ರಂದು ಕರ್ನಾಟಕದಲ್ಲಿ ಈ ಯೋಜನೆ ಜಾರಿಗೆಯಾಗಿದೆ. ಈ ಯೀಜನೆಯನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ. ಮಾತ್ರವಲ್ಲ ಯಾವುದೇ ವಿಧದ ಸೇವಾಶುಲ್ಕಗಳನ್ನು ವಿಧಿಸುವುದಿಲ್ಲ. ಗರ್ಭಿಣಿಗೆ ಮನೆಯಿಂದ ಸರಕಾರಿ ಆಸ್ಪತ್ರೆಗೆ ಹಾಗು ಗಂಭಿರ ಸಮಸ್ಯೆ ಇದ್ದಲ್ಲಿ ದೊಡ್ಡ ಆಸ್ಪತ್ರೆಗೆ  ಸಾಗಿಸಲು ಉಚಿತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತದೆ.

ಹೆರಿಗೆ ಸಂಬಂಧಿಸಿದ ಕಾಯಿಲೆ ಹಾಗೂ ಸಮಸ್ಯೆಗಳಿಂದಾಗಿ ಕರ್ನಾಟಕದಲ್ಲಿ ಪ್ರತೀ ವರ್ಷ ಸುಮಾರು 1200 ಮಂದಿ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಜನಿಸಿದ ಒಂದು ವರ್ಷದೊಳಗೆ 36 ಸಾವಿರ ನವಜಾತ ಶಿಶುಗಳು ಮರಣಮರಣ ಹೊಂದುತ್ತಿವೆ. ಹುಟ್ಟಿದ ನಾಲ್ಕೇ ವಾರಗಳಲ್ಲಿ 22ಸಾವಿರ ನವಜಾತ ಶಿಶುಗಳು ಹಾಗು ಹುಟ್ಟಿದ ಮೊದಲನೇ ವಾರದಲ್ಲಿ ಸುಮಾರು 14 ಸಾವಿರ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ.

ದಿಗ್ಭ್ರಮೆಗೊಳಿಸುವ ಈ ಅಂಕಿ ಅಂಶಗಳಿಗೆ ಕಾರಣ ಹುಡುಕುತ್ತಾ ಹೋದರೆ ಸಿಗುವ ಉತ್ತರ ಆರ್ಥಿಕ ಹೊರೆಯಲ್ಲದ ತುರ್ತು ವೈದ್ಯಕೀಯ ಸೇವೆಗಲು ಸಕಾಲದಲ್ಲಿ ಸಿಗದಿರುವುದು. ಇದಕ್ಕೆ ಪರಿಹಾರವೂ ಈ ಉತ್ತರದಲ್ಲೇ ಇದೇ ಉತ್ತಮ ಗುಣಮಟ್ಟದ ಅತ್ಯಾವಶ್ಯಕ ಹಾಗು ತುರ್ತು ಸಾರ್ವಜನಿಕ  ವೈದ್ಯಕೀಯ ಸೇವೆಗಳು ಆರ್ಥಿಕ ಹೊರೆಯಾಗದಂತೆ ಸಕಾಲದಲ್ಲಿ ಲಭಿಸುವಂತಾದರೆ ತಾಯಿ ಹಾಗು ಶಿಶುಗಳನ್ನು ರಕ್ಷಿಸಬಹುದು.

ಜನನಿ ಸುರಖ್ಷ ಯೋಜನೆ ಜಾರಿಗೊಳಿಸಿದ ನಂತರ ದೇಶದಲ್ಲಿ ಸಾಂಸ್ಥಿಕ ಹೆರಿಗೆಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ, ಆದರೂ ಹೆಚ್ಚಿನ ಮಹಿಳೆಯರು ಇನ್ನು ವೈದ್ಯಕೀಯ ಸೇವೆಯನ್ನು ಪಡೆಯುವಲ್ಲಿ ಹಿಂಜರಿಯುತ್ತಿದ್ದಾರೆ. ಸಾಂಸ್ಥಿಕ ಹೆರಿಗೆಗೆ ಮುಂದೆ ಬಂದ ಮಹಿಳೆಯರೂ ಸಹ 48 ತಾಸುಗಳ ತನಕ ಆಸ್ಪತ್ರೆಗಳಲ್ಲಿ ಇರಲು ಇಷ್ಟಪಡುವುದಿಲ್ಲ ಇದರ ಪರಿಣಾಮವಾಗಿ, ತಾಯಿ ಮತ್ತು ನವಜಾತ ಶಿಶುಗಳಿಗೆ ಸೂಕ್ತ ಸೇವೆಗಳನ್ನು ಒದಗಿಸುವುದು ಕಷ್ಟಕರ ಪ್ರಸೂತಿಯಾದ ಮೊದಲ 48 ಗಂಟೆಗಳಲ್ಲಿ ಶುಶ್ರೂಷೆ ಲಭಿಸಿದಲ್ಲಿ ಯಾವುದೇ ಸಮಸ್ಯೆ ತೊಂದರೆಗಳನ್ನು ಗುರುತಿಸಿ ಯೋಗ್ಯ ಪರಿಹಾರ ನೀಡುವುದು ಸುಲಭ.

ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಸಾಂಸ್ಥಿಕ ಆರೋಗ್ಯ ಸವಲತ್ತುಗಳನ್ನು ಬಳಸುವಲ್ಲಿ ದುಬಾರಿ ಹೆಚ್ಚುವರಿ ವೆಚ್ಚಗಳು ದೊಡ್ಡ ಹೊರೆಯಾಗಿ ಪರಿಣಮಿಸುವುದು ನಿಸ್ಸಂದೇಹ. ಬಡ ಕುಟುಂಬಗಳು ಇಂತಹ ವೆಚ್ಚಗಳನ್ನು ಭರಿಸುವುದು ಕಷ್ಟಕರ ಎನ್ನುವುದು ಸ್ಪಷ್ಟ. ಇಂತಹ ಪರಿಸ್ಥಿಯಲ್ಲಿ, ಜನರಿಗೆ ಸುಲಭದಲ್ಲೇ ದೊರಕುವಂತಹ ಆರೋಗ್ಯ ಸೇವೆಗಳನ್ನು ಒದಗಿಸುವ ಎನ್ ಆರ್ ಎಚ್ ಎಮ್ ಗುರಿ ಮತ್ತು ಉದ್ದೇಶಗಳಿಗೆ ಸೋಲುಂಟಗುತ್ತದೆ ಎನ್ ಆರ್ ಎಚ್ ಎಮ್ ಅನ್ವಯ ಪ್ರತೀ ಗರ್ಭಿಣಿಗೆ ಅಗತ್ಯವಿರುವ ಪ್ರಸೂತಿ ಪೂರ್ವ ಪ್ರಸೂತಿ ವೇಳೆ ಮತ್ತು ಪ್ರಸೂತಿ ನಂತರದ ಆರೋಗ್ಯ ಸೇವೆಗಳು ಮತ್ತು ರೋಗದ ವಿರುದ್ಧ ರಕ್ಷಣೆ ಉಚಿತವಾಗಿ ಹಾಗೂ ಸಕಾಲದಲ್ಲಿ ಸಿಗುವಂತಾಗುಬೇಕು.ಈ ನಿಟ್ಟಿನಲ್ಲಿ ಜನನಿ ಶಿಶು ಸುರಕ್ಷ ಕಾರ್ಯಕ್ರಮ 2011 ರ ಸೆಪ್ಟೆಂಬರ 8ರಂದು ಕರ್ನಾಟಕದಲ್ಲಿ ಈ ಯೋಜನೆ ಗಾರಿಗೊಳಿಸಲಾಯಿತು. ಉಚಿತ ಔಷಧ ಮತ್ತು ಅವಶ್ಯಕ ಉಪಯೋಗದ ವಸ್ತುಗಳನ್ನು ರೋಗ ಪತ್ತೆ ಅಹ್ಚ್ಚಲು ಪರೀಕ್ಷಾ ವೆಚ್ಚ, ಅಗತ್ಯವಿದ್ದಾಗ ರಕ್ತ ಪೂರೈಕೆ ಮತ್ತು ಗರ್ಭಿಣಿ ಆಸ್ಪತ್ರೆಯಲ್ಲಿ ಇರಬೇಕಾಗುವಷ್ಟು ಕಾಲ ಸಾಧಾರಣವಾಗಿ ಸಾಮಾನ್ಯ ಹೆರಿಗೆಗೆ ಎರಡು ದಿನ ಮತ್ತು ಸಿಜೇರಿಯನ್ ಶಸ್ತ್ರಚಿಕಿತ್ಸೆ ವೇಳೆ ದಿನ ಉಚಿತ ಆಹಾರ ನೀಡುವುದೂ ಈ ಯೋಜನಯಡಿ ಸೇರಿದೆ.

ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಜನನವಾದಂದಿನಿಂದ 30 ದಿನಗ್ಳಾವರೆಗೆ ಇಂತಹ ಉಚಿತ ಸೇವೆಗಳನ್ನೂ ಈ ಯೋಜನೆಯಲ್ಲಿ ನೀಡಲಾಗುತ್ತದೆ. ಉಚಿತ ಚಿಕಿತ್ಸೆಯೊಂದಿಗೆ ಮನೆಯಿಂದ ಆಸ್ಪತ್ರೆಗೆ ಮತ್ತು ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕೊಂಡೊಯ್ಯಬೇಕಾದಲ್ಲಿ ಉಚಿತ ಸಾರಿಗೆ ವ್ಯವಸ್ಥೆಯನ್ನು ಪಡೆಯಬಹುದಾಗಿದೆ.

ಗರ್ಭಿಣಿಯರಿಗೆ

1. ಉಚಿತ ಹೆರಿಗೆ ಸೇವೆಗಳು

2. ಉಚಿತ ಸಿಜೇರಿಯನ್ ಶಸ್ತ್ರಚಿಕಿತ್ಸೆ

3. ಉಚಿತ ಪ್ರಯೋಗಶಾಲೆಸೇವೆಗಳು

4. ಉಚಿತ ಔಷಧಿಗಳು ಮತ್ತು ಬಳಕೆ ಸಾಮಾಗ್ರಿಗಳು

5. ಗರ್ಭಿಣಿಯರು ಹೆರಿಗೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಉಚಿತ ಊಟ ತಿಂಡಿ

6. ಅವಶ್ಯಕವಿರುವ ಗರ್ಭಿಣಿಯರಿಗೆ ಉಚಿತ ರಕ್ತದ ವ್ಯವಸ್ಥೆ.

7. ಆಸ್ಪತ್ರೆಗೆ ಮತ್ತು ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕೊಂಡೊಯ್ಯಬೇಕಾದಲ್ಲಿ ಉಚಿತ ಸಾರಿಗೆ ವ್ಯವಸ್ಥೆ.

8. ಎಲ್ಲಾ ರೀತಿಯ ಸೇವಾಶುಲ್ಕ ಪಾವತಿಯಿಂದ ವಿನಾಯಿತಿ.

ಮೂಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate