অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ

ಪರಿಚಯ

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದಡಿಯಲ್ಲಿ ೧೯೬೫ ರಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಪೂರ್ಣ ಪ್ರಮಾಣದ ಅನುದಾನದಲ್ಲಿ ಪಡೆದಿದ್ದು ಸ್ವಯಂಶಾಸನವನ್ನು ಹೊಂದಿರುವ ಒಂದು ವಿಶೇಷ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ವೃತ್ತಿಪರ ತರಬೇತಿ ನೀಡುವುದು, ರೋಗಿಗಳಿಗೆ ಅವಶ್ಯ ಸೇವೆ ಒದಗಿಸುವುದು ಸಂಶೋಧನೆ ಮಾಡುವುದು ಹಾಗೂ ಸಫಲ ಸಂವಹನಕ್ಕೆ ತಡೆಯುಂಟು ಮಾಡುವ ತೊಂದರೆಗಳಾದ ಶ್ರವಣದೋಷ, ಬುದ್ಧಿಮಾಂದ್ಯತೆ, ಧ್ವನಿ, ತಡೆಯಿಲ್ಲದೆ ಮಾತನಾಡುವ ಮತ್ತು ಶಬ್ದಗಳು ಹಾಗೂ ಭಾಷೆಯ ಬಗ್ಗೆ ಜನರಲ್ಲಿ ಅರಿವುಂಟು ಮಾಡಿಸುವುದಾಗಿದೆ.

ಈ ಸಂಸ್ಥೆಯುಉ ೧೯೬೫ರಲ್ಲಿ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿಯಿಂದ ಪ್ರಾರಂಭಿಸಲ್ಪಟ್ಟು ಈಗ ವಿಸ್ತರಣೆಗೊಂಡಿದ್ದು ಈ ಕೆಳಕಂಡ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಸಕ್ತರಿಗೆ ನೀಡುತ್ತಿದೆ. The Foundation Stone Was Laid by Dr.S.Radhakrishnan, President of India

೧. ಸರ್ಟಿಫ಼ಿಕೇಟ್ ಕೋರ್ಸ್

೨. ಡಿಪ್ಲೊಮಾ ಶಿಕ್ಷಣ

ಎ. ಡಿಪ್ಲೊಮಾ ಇನ್ ಹಿಯರಿಂಗ್ ಎಡ್ ಆಂಡ್ ಇಯರ್ಮೋಲ್ಡ್ ಟೆಕ್ನಾಲಜಿ

ಬಿ. ಡಿಪ್ಲೊಮಾ ಇನ್ ಯಂಗ್ ಹಿಯರಿಂಗ್ ಇಂಪೇರ್ಡ್ ಚಿಲ್ಡ್ರನ್

ಸಿ. ಡಿಪ್ಲೊಮಾ ಇನ್ ಹಿಯರಿಂಗ್ ಲ್ಯಾಂಗ್ವೇಜ್ ಮತ್ತು ಸ್ಪೀಚ್ - ತ್ರೂ ಡಿಸ್ಟೆನ್ಸ್ ಮೋಡ್

೩. ಪದವಿ ಶಿಕ್ಷಣ ಎ. ಬಿ. ಎಸ್ಸಿ. ಇನ್ ಸ್ಪೀಚ್ ಅಂಡ್ ಹಿಯರಿಂಗ್ ಬಿ. ಬಿ. ಎಸ್ಸಿ. ಎಡ್ ಇನ್ ಹಿಯರಿಂಗ್ ಇಂಪೇರ್ಮೆಂಟ್

೪. ಸ್ನಾತಕೋತ್ತರ ಡಿಪ್ಲೊಮಾ

ಎ. ಕ್ಲಿನಿಕಲ್ ಲಿಂಗ್ವಿಸ್ಟಿಕ್ಸ್

ಬಿ. ಫೊರೆಂಸಿಕ್ ಸ್ಪೀಚ್ ಸೈನ್ಸ್ ಆಂಡ್ ಟೆಕ್ನಾಲಜಿ

೫. ಸ್ನಾತಕೋತ್ತರ ಶಿಕ್ಷಣ ಎ. ಎಂ. ಎಸ್ಸಿ. ಇನ್ ಆಡಿಯಾಲಜಿ ಬಿ. ಎಂ. ಎಸ್ಸಿ. ಇನ್ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ಸಿ. ಎಂ. ಎಸ್ಸಿ. ಎಡ್. ಇನ್ ಹಿಯರಿಂಗ್ ಇಂಪೇರ್ಮೆಂಟ್

೬. ಪಿ. ಎಚ್. ಡಿ ಕಾರ್ಯಕ್ರಮ

ಎ. ಆಡಿಯಾಲಜಿ ಆನ್ಡ್ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ

೭. ಪಿ. ಎಚ್.

ಡಿ. ಫೆಲೋ ಪದವಿ ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ, ಮೈಸೂರು - ಇದಕ್ಕೆ ಹೊಂದಿರುವಂತೆ ಹುಲುಸಾಗಿ ಬೆಳೆದಿರುವ ದಟ್ಟ ಹಸಿರಿನ ಮೂವತ್ತೆರಡು ಎಕರೆ ಭೂಮಿಯಲ್ಲಿ ಇರುವ ಈ ಸಂಸ್ಥೆಯು ಏಷ್ಯಾ ಉಪಖಂಡದಲ್ಲೇ ಒಂದು ಸರಿಸಾಟಿ ಇಲ್ಲದ ಸಂಸ್ಥೆ.ಇಲ್ಲಿ ೧೧ ಪ್ರತ್ಯೇಕ ವಿಭಾಗಗಳಿದ್ದು, ಸುಸಜ್ಜಿತವಾದ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸುಶಿಕ್ಷಣವನ್ನು ನೀಡಲು ಬೇಕಾದ ಸಲಕರಣೆಗಳನ್ನು ಪ್ರತಿ ಪ್ರತ್ಯೇಕ ವಿಭಾಗಗಳಿಗೂ ಹೊಂದಿವೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಸಂವಹನ ನ್ಯೂನತೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಯಸ್ಸಿನ ತನ್ನ ಕಕ್ಷಿದಾರರ ಅಗತ್ಯೆಗಳಿಗೆ ಸ್ಪಂದಿಸುತ್ತದೆ.ಈ ಸಂಸ್ಥೆಯು ಭಾರತದ ವಿವಿಧ ಭಾಗಗಳಿಂದ ಮತ್ತು ಪ್ರಪಂಚದ ಎಲ್ಲೆಡಗಳಿಂದ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ.ಕಳೆದ ೪೩ ವರ್ಷಗಳಲ್ಲಿ ಶ್ರವಣ ದೋಷ ಮತ್ತು ಮಾತಿನ ತೊಂದರೆಗಳ ರೋಗನಿವಾರಣಾ ತಂತ್ರಗಳು ಹಾಗೂ ಅವುಗಳ ವಿಶೇಷ ವಿದ್ಯಾಭ್ಯಾಸವನ್ನು ಕುರಿತಂತೆ ಇನ್ನೂ ಹೆಚ್ಚಾಗಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದೆ. ಸಂವಹನ ನ್ಯೂನತೆಗಳಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಲು ಸಂಸ್ಥೆಗೆ ಇರುವ ಉತ್ಸಾಹಕ್ಕೆ ಯಾವ ಎಲ್ಲೆಯೂ ಇಲ್ಲ.

ವಿಶ್ವ ಆರೋಗ್ಯ ಸಂಸ್ಥೆಯಿಂದ ’ಶ್ರವಣ ದೋಷದ ಕ್ಷೇತ್ರದಲ್ಲಿ ಬಹಳ ಅತ್ಯುತ್ತಮವಾದ ಕೇಂದ್ರ’ ವೆಂದೂ, ಯು. ಜಿ. ಸಿ. ಯಿಂದ ’ಮುಂದುವರಿದ ಸಂಶೋಧನಾ ಕೇಂದ್ರ’ವೆಂದೂ ಮತ್ತು ಡಿ.ಎಸ್.ಟಿ ಯಿಂದ ’ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ ಎಂದೂ ಗುರುತಿಸಪಟ್ಟಿದೆ.ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು, ಈ ಸಂಸ್ಥೆಯನ್ನು ಶ್ರವಣದೋಷವನ್ನು ತಡೆಗಟ್ಟಲು ಮತ್ತು ನಿಯಂತ್ರಣದಲ್ಲಿಡುವ ರಾಷ್ಟ್ರೀಯ ಕಾರ್ಯಕ್ರಮದ ಕೇಂದ್ರಸ್ಥಾನವೆಂದು ಹಾಗೂ ಈ ದಿಸೆಯಲ್ಲಿ ಕೆಲಸ ಮಾಡಲು ಬೇಕಾಗುವಂತಹ ನುರಿತ ಪರಿಣಿತರನ್ನು ಒದಗಿಸುವ ಕೇಂದ್ರ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿಯವರೆಗೂ 1148 ವಿದ್ಯಾರ್ಥಿಗಳು ಪದವಿನಿರತರಾಗಿದ್ದು ಮತ್ತು 915 ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.ಇಷ್ಟೇ ಅಲ್ಲದೆ, ೪೦ ಜನ ವಿದ್ಯಾರ್ಥಿಗಳು ವಾಕ್ ಶ್ರವಣ ಮತ್ತು ವಾಕ್ ಶ್ರವಣ ಭಾಷಾ ರೋಗವಿಧಾನವನ್ನು ಕುರಿತಂತೆ ಸಂಸ್ಥೆಯ ನುರಿತ ಪ್ರಾಧ್ಯಾಪಕರುಗಳ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ.ಪದವಿಯನ್ನು ಪಡೆದುಕೊಂಡಿರುತ್ತಾರೆ.

ಇಷ್ಟೇ ಅಲ್ಲದೇ ಇದಕ್ಕೆ ಸಂಬಂಧಪಟ್ಟ ಖಾಯಿಲೆಗೆ ಸಂಬಂಧಿಸಿದ ಮನಃಶಾಸ್ತ್ರ, ಭಾಷಾವಿಜ್ಞಾನ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಎಂಟು ಜನರು ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದು, ಇನ್ನೂ ಕೆಲವರು ಅದೇ ಕ್ಷೇತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆಯಲು ವ್ಯಾಸಂಗ ಮಾಡುತಿದ್ದು ಮುಂದುವರೆಯುತ್ತಿದ್ದಾರೆ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ,ಭಾರತ ಸರ್ಕಾರದ ಅನುದಾನವನ್ನು ಪಡೆದು ಕಾರ್ಯನಿರ್ವಾಹಕ ಮಂಡಳಿಯ ನಿರ್ದೇಷನದಲ್ಲಿ ಸ್ವತಂತ್ರವಾಗಿ ಕೆಲಸ ನಿರ್ವಹಿಸುವ ಸಂಸ್ಥೆಯಾಗಿದ್ದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನ್ಯ ಸಚಿವರು ಇದರ ಅಧ್ಯಕ್ಷಾರಗಿದ್ದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನ್ಯ ಸಚಿವರು ಇದರ ಉಪಾಧ್ಯಕ್ಷರಾಗಿರುತ್ತಾರೆ.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಹಳೇ ವಿದ್ಯಾರ್ಥಿಗಳು ಶೈಕ್ಷಣಿಕ,ವೈದ್ಯಕೀಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಭಾರತದಲ್ಲಷ್ಟೇ ಅಲ್ಲದೇ ವಿಶ್ವದ ಬೇರೆ ಬೇರೆ ಭಾಗಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಷ್ಟೇ ಅಲ್ಲದೇ ಅವರು ವಾಕ್,ಶ್ರವಣ ಮತ್ತು ಭಾಷೆಗೆ ಸಂಬಂಧಿಸಿದ ಹಲವಾರು ಅಂತ್ರರಾಷ್ಟ್ರೀಯ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಸಂವಹನ ತೊಂದರೆಗಳಿಂದ ಬಲಹೀನರಾಗಿ ಬಳಲುತ್ತಿರುವವರ ಸಮಸ್ಯೆಗಳನ್ನು ಎದುರಿಸಲು ನೆರವಾಗುವಂತಹ ಗುಣಾತ್ಮಕ ಪರಿಣಿತರನ್ನು ತಯಾರು ಮಾಡುವಲ್ಲಿ ಸಂಸ್ಥೆಯು ಕಟಿಬದ್ಧವಾಗಿದೆ. ಮುಂಬರುವ ದಿನಗಳಲ್ಲಿ ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ತುದಿಗಾಲಲ್ಲಿ ನಿಂತಿರುವವರಿಗೆ ನಿರ್ದಿಷ್ಟಮಾನಗಳನ್ನು ನಿಗದಿಪಡಿಸುವುದು ಸಂಸ್ಥೆಯ ಆಶಯವಾಗಿದೆ. ನಮ್ಮ ವಿದ್ಯಾರ್ಥಿಗಳು ನಮ್ಮ ಸಂಸ್ಥೆ ಹಾಗೂ ನಮ್ಮ ದೇಶ ಹೆಮ್ಮೆಪಡುವಂತೆ ಮಾಡುತ್ತರೆಂಬ ನಂಬಿಕೆ ನಮಗಿದೆ.

ನಿರ್ದೇಶಕರ ಸಂದೇಶ

ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ವಿಶ್ವದಾದ್ಯಂತದ ಅಂತರ್ಜಾಲ ವಿಭಾಗಕ್ಕೆ ಸ್ವಾಗತ. ಈ ಪುಟಗಳು ನಿಮಗೆ ಸಂಸ್ಥೆಯ ಚಟುವಟಿಕೆಗಳು, ಕೊಡುಗೆಗಳು, ಸಾಧನೆಗಳು ಮತ್ತು ಭವಿಶ್ಯದ ಕನಸುಗಳನ್ನು ಪರಿಚಯಿಸುತಿದ್ದೇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲ್ಯದಡಿಯಲ್ಲಿ ೯ನೇ ಆಗಸ್ಟ್ ೧೯೬೫ ರಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ’ವಾಕ್ ದೋಷ ಸಂಸ್ಥೆ’ (ಇನ್ಸ್ಟಿಟ್ಯೂಟ್ ಆಫ಼್ ಲೋಗೋಪೆಡಿಕ್ಸ್) ಯೆಂಬ ಹೆಸರಿನಿಂದ ಜನ್ಮ ಪಡೆಯಿತು. ನಂತರದ ದಿನಗಳಲ್ಲಿ ಇದು ೧೮೬೦ರ ’ಸಂಸ್ಥೆಗಳ ನೋಂದಣಿ ನಿಯಮ ಈರ (ಪಂಜಾಬ್ ತಿದ್ದುಪಡಿ ಕಾಯಿದೆ) ೧೯೫೭ರ ಅಡಿಯಲ್ಲಿ ೧೦ನೇ ಅಕ್ಟೊಬರ್ ೧೯೬೬ರಲ್ಲಿ ನೋಂದಾಯಿಸಲ್ಪಟ್ಟು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲ್ಯದಡಿಯಲ್ಲಿ ಕೆಲಸ ನಿರ್ವಹಿಸುತಿದ್ದ ಸ್ವಯಂ ಶಾಸನ (ಅಟೋನಮಸ್) ವನ್ನು ಹೊಂದಿದೆ.

ಈ ಸಂಸ್ಥೆಯು ’ಶ್ರವಣ ದೋಷದ ಕ್ಷೇತ್ರದಲ್ಲಿ ಬಹಳ ಅತ್ಯುತ್ತಮವಾದ ಕೇಂದ್ರ (ವಿಶ್ವ ಆರೋಗ್ಯ ಸಂಸ್ಥೆ), ’ಮುಂದುವರಿದ ಸಂಶೋಧನಾ ಕೇಂದ್ರ’ (ಯು.ಜಿ.ಸಿ.) ಮತ್ತು ’ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’(ಡಿ.ಎಸ್.ಟಿ.) ಎಂದು ಗುರುತಿಸಲ್ಪಟ್ಟಿದೆ. ವಾಕ್ ಶ್ರವಣ ಕ್ಷೇತ್ರದ ಈ ವಿಶೇಷ ಸಂಸ್ಥೆಯ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಕೇಂದ್ರ, ರೋಗಿಗಳಿಗೆ ಅವಶ್ಯ ಸೇವೆ ಒದಗಿಸುವುದು ಮತ್ತು ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಸಂಶೋಧನಾ ಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಇಂದು, ಈ ಸಂಸ್ಥೆಯು ವಿಸ್ತೃತವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಮಾತನಾಡುವಿಕೆ, ಭಾಷೆ, ಆಲಿಸುವಿಕೆ ಮತ್ತು ವಿಶೇಷ ಶಿಕ್ಷಣದ ಕ್ಷೇತ್ರದಲ್ಲಿ ಪಿ.ಎಚ್.ಡಿ. ಪದವೀಧರರಿಗೆ ಸರ್ಟಿಫ಼ಿಕೇಟ್ ಕೋರ್ಸುಗಳು, ಸಂವಹನ ತೊಂದರೆಗಳಿಂದ ಬಳಲುತ್ತಿರುವ ಎಲ್ಲ ವಯೋಮಾನದವರಿಗೆ ಸುಸಜ್ಜಿತವಾದ ಬೇರೆ ಬೇರೆ ವಿಭಾಗಗಳಲ್ಲಿ ರೋಗಿಗಳನ್ನು ಪರೀಕ್ಷಿಸಿ ರೋಗ ಪತ್ತೆಮಾಡುವುದು,

ಚಿಕಿತ್ಸೆ ನೀಡುವುದು ಮತ್ತು ವಿದ್ಯಾಭ್ಯಾಸವನ್ನು ನೀಡುವ ಸೇವಯಷ್ಟೇ ಅಲ್ಲದೇ ವೈಶಿಷ್ಟ್ಯಪೂರ್ಣವಾದ ರೋಗ ಚಿಕಿತ್ಸಾ ವಿಭಾಗಗಳಾದ ಆಲಿಸುವ ತರಬೇತಿ ವಿಭಾಗ, ಎ.ಎ.ಸಿ. ವಿಭಾಗ, ಧ್ವನಿ ಸಂರಕ್ಷಣಾ ವಿಭಾಗ ಹಾಗೂ ಸಂವಹನ ನ್ಯೂನತೆ, ಮಾನಸಿಕ ಹಿಂಜರಿಕೆ (ಆಟಿಸಂ) ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕಲಿಕಾಪೂರ್ವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಧ್ವನಿ ವಿಶ್ಲೇಷಣೆಗೆ ಸಂಬಂಧಿಸಿದ ಸೌಲಭ್ಯಗಳೂ ಸಹ ಇವೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ತಮಗಷ್ಟೇ ಅಲ್ಲದೇ ಭಾರತ ಹಾಗೂ ವಿದೇಶಗಳಲ್ಲಿಯೂ ಸಹ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಶ್ರವಣದೋಷ ಮತ್ತು ಸಂವಹನ ನ್ಯೂನತೆಗಳನ್ನು ತಡೆಗಟ್ಟುವುದು, ಆರಂಭಿಕ ಹಂತದಲ್ಲೇ ಗುರುತಿಸುವುದು, ರೋಗ ತಡೆಗಟ್ಟುವಿಕೆಗೆ ಅವಶ್ಯಕವಾದ ತಂತ್ರಗಳು, ಸಾಧನ ಮತ್ತು ಉಪಕರಣಗಳ ಅಭಿವೃದ್ಧಿ, ಶ್ರವಣ ದೋಷದ ಅನುವಂಶೀಕತೆ, ಮಾತನಾಡುವುದು ಹಾಗೂ ಕೇಳುವುದರ ಗುರುತಿಸುವಿಕೆ ಮುಂತಾದ ಮುಖ್ಯವಾದ ಕ್ಷೇತ್ರಗಳಲ್ಲಿ ಈ ಸಂಸ್ಥೆಯಲ್ಲಿ ಸಂಶೋಧನೆ ನಡೆಯುತ್ತಿದೆ.

ಈ ಸಂಸ್ಥೆಯು ತನ್ನದೇ ಆದ ಸಂಶೋಧನಾ ನಿಧಿಯನ್ನು ಹೊಂದಿದ್ದು ಸರ್ಕಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಬೋಧನಾ ಸಿಬ್ಬಂದಿ /ಸಲಹಾಗಾರರಿಗೆ ಕಡಿಮೆ ಅವಧಿಯ ಸಂಶೋಧನೆಗಳಿಗೆ ಧನ ಸಹಾಯವನ್ನು ಮಾಡುತ್ತದೆ. ಇದಕ್ಕೆ ಸಂಬಂಧಿಸಿದ ನರರೋಗಶಾಸ್ತ್ರ, ಅನುವಂಶೀಯತೆ, ಭಾಷಾ ವಿಜ್ಞಾನ, ಜೈವಿಕ ತಂತ್ರಜ್ಞಾನ, ಕಿವಿ, ಗಂಟಲು, ಮೂಗುಗಳ ಶಾಸ್ತ್ರ (ಒಟೊಲ್ಯಾರಿಂಗಾಲಜಿ), ರೋಗ ಚಿಕಿತ್ಸಾ ಮನಃಶಾಸ್ತ್ರ (ಕ್ಲಿನಿಕಲ್ ಸೈಕಾಲಜಿ), ನವಜಾತ ಶಿಶುವಿಗೆ ಸಂಬಂಧಿಸಿದ ಶಾಸ್ತ್ರ (ನಿಯೋನೇಟಾಲಜಿ) ಮತ್ತು ಮಕ್ಕಳ ವೈದ್ಯಕೀಯ ಉಪಚಾರ ಶಾಸ್ತ್ರ (ಪೀಡಿಯಾಟ್ರಿಕ್ಸ್)ದ ಕ್ಷೇತ್ರಗಳಲ್ಲಿ ಸರ್ಕಾರ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವ ಪರಿಣಿತರು ಈ ಸಂಶೋಧನಾ ನಿಧಿಯಿಂದ ಹಣದ ನೆರವನ್ನು ಪಡೆಯಬಹುದು. ಮುಂಬರುವ ವರ್ಷಗಳಲ್ಲಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಮೂಲಕ ದೂರ ಶಿಕ್ಷಣ, ಸಾಮಾನ್ಯ ಶಿಕ್ಷಣ, ಸಮಾಚಾರ ಪ್ರಸಾರ ಮಾಡುವುದು, ಸಂವಹನ ನ್ಯೂನತೆಯುಳ್ಳ ಮಕ್ಕಳು ಮತ್ತು ಅವರ ಪಾಲಕರಿಗೆ ಅವರ ಮನೆಯಲ್ಲೇ ತರಬೇತಿ ಮತ್ತು ಅಂತಹ ಮಕ್ಕಳ ತಾಯಂದಿರ / ಪೋಷಕರ ಸಾಮರ್ಥ್ಯವನ್ನು ಹೆಚ್ಚಿಸುವುದು ಇತ್ಯಾದಿ ಗುರಿಗಳನ್ನು ಹೊಂದಿದ್ದು, ಇದಕ್ಕೆ ಅವಶ್ಯಕವಿರುವ ವಿವಿಧ ಕ್ಷೇತ್ರಗಳ ಪರಿಣಿತರನ್ನ ತಯಾರುಮಾಡುವುದೇ ಆಗಿದೆ. ಅಗತ್ಯ ಪರಿಣಿತರನ್ನು ತಯಾರು ಮಾಡುವಲ್ಲಿ ಮತ್ತು ರೋಗವಿಧಾನ ಚಿಕಿತ್ಸೆಯಲ್ಲಿ ಈ ಸಂಸ್ಥೆಯ ಸೇವೆಯನ್ನು ಈ ಪ್ರಖ್ಯಾತ ರಾಷ್ಟ್ರದ ಜನರು ಶ್ಲಾಘಿಸುತ್ತಾರೆ. ಈ ವಿದ್ಯುನ್ಮಾನ ಪುಟಗಳನ್ನು ಓದಿದನಂತರ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಅಗತ್ಯವಾದ ಸಲಹೆಗಳನ್ನು ನೀಡಿ ಸಹಾಯಮಾಡಿ, ಈ ಸಂಸ್ಥೆಯ ಹಳೇ ವಿದ್ಯಾರ್ಥಿಗಳು ತಮ್ಮ ಮಾತೃ ಸಂಸ್ಥೆಯ ಬೆಳವಣಿಗೆಯಲ್ಲಿ ಭಾಗಿಗಳಾಗಬೇಕೆಂದು ಅವರಲ್ಲಿ ನಮ್ಮ ವಿಶೇಷ ಬಿನ್ನಹ

ಕೇಂದ್ರಗಳು - ಡಿ.ಎಚ್.ಎಲ್.ಎಸ್

  • ಜವಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೊಸ್ಟ್ ಗ್ರಾಜ್ಯೂಯೆಟ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ (ಝೀಫ್ಂಏರ‍್), ಪುದುಚೆರಿ
  • ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸಸ್ (ರ‍ೀಂಶ್), ಇಂಫಾಲ್, ಮಣಿಪುರ್
  • ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ನವ ದೆಹಲಿ
  • ಆಲ್ ಇಂಡಿಅ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಮತ್ತು ಮೆಡಿಕಲ್ ಆಂಡ್ ರಿಹ್ಯಾಬಿಲಿಟೇಷನ್ (ಆಈಈಫ್ಂರ‍್), ಹಾಜಿ ಅಲಿ, ಮುಂಬೈ
  • ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್, ಹಿಮಾಚಲ್ ಪ್ರದೇಶ್ ವಿಶ್ವವಿದ್ಯಾನಿಲಯ, ಹಿಮಾಚಲ್ ಪ್ರದೇಶ್
  • ಶ್ರೀ ಛತ್ರಪತಿ ಸಾಹುಜಿ ಮಹಾರಾಜ್ ಮೆಡಿಕಲ್ ಕಾಲೇಜ್, ಲಕ್ನೌ ವಿಶ್ವವಿದ್ಯಾನಿಲಯ ಚೌಕ, ಲಕ್ನೌ, ಉತ್ತರ ಪ್ರದೇಶ್
  • ಜವಹರಲಾಲ್ ನೆಹ್ರೂ ಮೆಡಿಕಲ್ ಕಾಲೇಜ್, ಅಜ್ಮೇರ್, ರಾಜಾಸ್ಥಾನ್
  • ಶ್ರೀರಾಮಚಂದ್ರ ಭಾನ್ಜ್ ಮೆಡಿಕಲ್ ಕಾಲೇಜ್, ಕಟ್ಟಕ್, ಒರಿಸ್ಸಾ
  • ಡಾ. ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸಸ್, ಬರಿತಾಯು, ರಾಂಚಿ, ಜಾರ್ಖಂಡ್
  • ನೇತಾಜಿ ಸುಭಾಸ್ ಚಂದ್ರ ಬೋಸ್ ಮೆಡಿಕಲ್ ಕಾಲೇಜ್, ಜಬಲಪುರ್, ಮಧ್ಯಪ್ರದೇಶ್
  • ಜವಹರಲಾಲ್ ನೆಹ್ರೂ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಮಾಯಾಗಂಜ್, ಭಾಗಲ್ಪುರ್, ಬಿಹಾರ್

ಗ್ರಂಥಾಲಯದ ಬಗ್ಗೆ

ಪೀಠಿಕೆ

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮೈಸೂರು - ಇಲ್ಲಿಯ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಸಂಸ್ಥೆಯು ಪ್ರಾರಂಭಾವಾದಾಗಿನಿಂದಲೂ ಅಸ್ತಿತ್ವದಲ್ಲಿದೆ. ೨೪,೦೦೦ ಚದರಡಿ ಪ್ರದೇಶದಲ್ಲಿ ಕಟ್ಟಿರುವ ೪ ಅಂತಸ್ತಿನ ಕಟ್ಟಡಕಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಇದೆ. ಪುಸ್ತಕ ವಿಭಾಗ, ನಿಯತಕಾಲಿಕ ಪತ್ರಿಕೆಯ ಹಳೆಯ ಸಂಚಿಕೆಗಳು ಮತ್ತು ಒಂದು ಅಂತರ್ಜಾಲವನು ಶೋಧಿಸಲು ತಂತ್ರಾಂಶ ಕೇಂದ್ರವು ಕೆಳ ಅಂತಸ್ತಿನಲ್ಲಿದೆ. ಮೊದಲನೇ ಅಂತಸ್ತಿನಲ್ಲಿ ಒಂದು ಭಾಗದಲ್ಲಿ ಹೊಸ ಪುಸ್ತಕಗಳ ಪ್ರದರ್ಶನ, ಪ್ರಚಲಿತ ಜರ್ನಲ್ ಗಳು ಮತ್ತು ಪರಾಮರ್ಶ ಗ್ರಂಥಗಳು ಇದ್ದು ಎರಡನೇ ಮಹಡಿಯಲ್ಲಿ ವಾತಾಯನನುಕೂಲ ಹೊಂದಿಂದ ಒಂದು ಕಂಪ್ಯೂಟರ್ ಬ್ರೌಸಿಂಗ್ ಸೆಂಟರ್ ಮತ್ತು ವಿಸ್ತಾರವಾದ ಎರಡು ಓದುವ ಸಭಾಂಗಣಗಳು ಇದ್ದು ಮೂರನೇ ಅಂತಸ್ತಿನಲ್ಲಿ ಶೈಕ್ಷಣಿಕ ವಿಭಾಗದ ಕಛೇರಿಗಳು ಇದೆ. ಈ ಕಟ್ಟಡದ ಮತ್ತು ಪೀಠೋಪಕರಣಗಳನ್ನು ಕೆಲಸ ಮಾಡಲು ಅನುಕೂಲವಾಗುವಂತೆ ಹಾಗೂ ಕಲಾತ್ಮಕವಾಗಿ ವಿನ್ಯಾಸಮಾಡಲಾಗಿದೆ. ಸುಂದರವಾದ, ಹುಲುಸಾಗಿ ಬೆಳೆದಿರುವ ಹಚ್ಚನೆಯ ಬಯಲು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿರುವ ಗುಲಾಬಿ ತೋಟ ಮತ್ತು ಅಲಂಕಾರಿಕೆ ಗಿಡಗಳು ಈ ಕಟ್ಟಡವನ್ನು ಸುತ್ತುವರಿದಿದೆ. ಈ ಆಹ್ಲಾದಕಾರಕ ವಾತಾವರಣವು ದೀರ್ಘಾವಧಿ ಓದಿಗೆ ಸಹಾಯಕವಾಗಿದೆ. ಸಾಂಪ್ರದಾಯಿಕ ಸಂಪನೂಲಗಳಿಂದ ಹಾಗೂ ತಂತ್ರಜ್ಞಾನ ಆಧಾರಿತ ಮಾಹಿತಿ ಸೇವೆಗಳಿಂದ ಗ್ರಂಥಾಲಯವು ಸುಸಜ್ಜಿತವಾಗಿದೆ.

ಇದು ಭಾರತದ ಒಂದು ಅತ್ಯುತ್ತಮ ವೈಜ್ಞಾನಿಕ ಮತ್ತು ತಾಂತ್ರಿಕ ಗ್ರಂಥಾಲಯವೆಂದು ಪರಿಗಣಿಸಲ್ಪಟ್ಟಿದೆ. ಎ.ಐ.ಐ.ಎಸ್.ಎಚ್.ನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಸಾಮಾನ್ಯವಾಗಿ ಪುನರ್ವಸತಿ ತಜ್ಞರಿಗೆ ಹಾಗೂ ವಿಶೇಷವಾಗಿ ವಾಕ್-ಭಾಷಾ ಮತ್ತು ಶ್ರವಣ ತಜ್ಞರಿಗೆ ವಿಶೇಷವಾಗಿ ದಾಖಲೆಗಳನ್ನು ಉಪಯೋಗ ಮಾಡುವ ಕೇಂದ್ರವಾಗಿದೆ.

ಗ್ರಂಥಾಲಯವು ಮುಕ್ತ ಅಧಿಕಾರ ಪದ್ಧತಿಯನ್ನು ಅನುಸರಿಸುತ್ತಿದ್ದು ಪುಸ್ತಕಗಳನ್ನು ಡ್ಯೂಯಿಡೆಸಿಮಲ್ ವರ್ಗೀಗರಣದನ್ವಯ ಜೋಡಿಸಿಯಾಗಿದೆ. ಕಾರ್ಡ್ ಕ್ಯಾಟಲಾಗುಗಳು ಅನುಕ್ರಮಣಿಕೆಗಳನ್ನು ಪುಸ್ತಕಗಳನ್ನು ಹುಡುಕಲು ಒದಗಿಸಲಾಗಿದ್ದು, ಜರ್ನಲ್ ಗಳು ಮತ್ತು ಪುಸ್ತಕದ ಅಂಕಿ ಅಂಶಗಳನ್ನು ’ಆನ್-ಲೈನ್’ ಪಬ್ಲಿಕ್ ಆಕ್ಸಿಸ್ ಕ್ಯಾಟಲಾಗ್ ನಲ್ಲಿ ಕಂಪ್ಯೂಟರ್ ಮೂಲಕ ಹುಡುಕಬಹುದಾಗಿದೆ. 

ಗಣಕೀಕರಣ:

ಗ್ರಂಥಾಲಯವು ಎಲ್.ಐ.ಬಿ.ಆರ್.ಐ.ಎಸ್. (ಇಂಟಿಗ್ರೇಟೆಡ್ ಲೈಬ್ರೆರಿ ಮ್ಯಾನೇಜ್ ಮೆಂಟ್ ಸಾಫ್ಟ್ ವೇರ್) ಪ್ಯಾಕೇಜನ್ನು ಅದರ ಎಲ್ಲ ಮಾಡ್ಯೂಲ್ಗಳ ಸಹಿತ ಗ್ರಂಥಾಲಯದ ಕಾರ್ಯಕ್ರಿಯೆಯಲ್ಲಿ ಬಳಸುತ್ತದೆ. ಗ್ರಂಥಾಲಯದ ಆನ್ ಲೈನ್ ಡೆಪಾಸಿಟ್ ನಲ್ಲಿ ೧೩,೭೫೦ಕ್ಕೂ ಹೆಚ್ಚಿನ ಪುಸ್ತಕಗಳ ದಾಖಲೆ ಮತ್ತು ನಿಯತಕಾಲಿಕ ಪತ್ರಿಕೆಗಳ ಹಿಂದಿನ ಸಂಚಿಕೆಗಳ ದಾಖಲೆ ಇದೆ. ಎಲ್.ಐ.ಬಿ.ಆರ್.ಐ.ಎಸ್. - ಒ.ಪಿ.ಎ.ಸಿ ನ್ನು ಬಳಸಿ ಬಳಕೆದಾರರು ಗ್ರಂಥಾಲಯದ ಆನ್ ಲೈನ್ ಕ್ಯಾಟಲಾಗ್ ನಲ್ಲಿ ಗ್ರಂಥಕರ್ತ, ಶೀರ್ಷಿಕೆ, ವಿಷಯ ಮತ್ತು ಮುಖ್ಯ ಪದಗಳನ್ವಯ ಹುಡುಕಬಹುದು. ಪುಸ್ತಕಗಳು ಮತ್ತು ನಿಯತಕಾಲಿಕ ಪತ್ರಿಕೆಗಳ ಹೊಸ ಸೇರ್ಪಡೆಗಳು ಹಾಗೂ ಯಾವುದೇ ದಾಖಲೆಗಳ ಬಗ್ಗೆ ಬಳಕೆದಾರರು ತಿಳಿದುಕೊಳ್ಳಬಹುದು. ಆನ್ ಲೈನ್ ಮೂಲಕ ಪುಸ್ತಕವನ್ನು ಸಹ ಕಾಯ್ದಿರಸಬಹುದು.

ಗ್ರಂಥಾಲಯವು ೧೨೮ ಕೆ.ಬಿ.ಪಿ.ಎಸ್. ಮೈಕ್ರೋವೇವ್ ಲಿಂಕ್ ನ್ನು ಅಂತರ್ಜಾಲದ ಸಂಪರ್ಕದಲ್ಲಿ ಹೊಂದಿದೆ ಗ್ರಂಥಾಲಯದಲ್ಲಿರುವ ಮತ್ತು ಕ್ಯಾಂಪಸ್ ನಲ್ಲಿರುವ ಎಲ್ಲ ಕಂಪ್ಯೂಟರ್ ಗಳು ಒಂದು ೧೦೦ ಎಂ.ಬಿ.ಪಿ.ಎಸ್. ಲ್ಯಾನ್ ವಿತ್ ಫೈಬರ್ ಆಪ್ಟಿಕ್ ಸಂಬಂಧವನ್ನು ಹೊಂದಿದೆ. ಮೂರು ಸರ್ವರ್ ಗಳು ನೆಟ್ ವರ್ಕ್ ಗಳ ನಿರ್ವಹಣೆ ಮತ್ತು ಒ.ಪಿ.ಎ.ಸಿ. ಸೇರಿದಂತೆ ಎಲ್ಲ ಡ್ಯಾಟಾಬೇಸಗಳು ಅಂತರ್ಜಾಲದಲ್ಲಿ ಲಭ್ಯವಿದೆ.

ಗ್ರಂಥಾಲಯ ತೆರೆದಿರುವ ಸಮಯ ಸೋಮವಾರದಿಂದ ಶುಕ್ರವಾರ 08.30 AM - 08.00 PM ಶನಿವಾರ 09.00 AM - 5.00 PM ಎಲ್ಲ ಸಾರ್ವಜನಿಕ ರಜಾ ದಿನಗಳಂದು ಗ್ರಂಥಾಲಯವು ಮುಚ್ಚಿರುತ್ತದೆ.

ಶಿಬಿರಗಳು

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು - ಇದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿರುವ ಒಂದು ವಿಶೇಷ ಸಂಸ್ಥೆಯಾಗಿದೆ. ಈ ಸಂಸ್ಥೆಯು ತರಬೇತಿಗಳನ್ನು ಆಯೋಜಿಸುವುದು ಮತ್ತು ವಾಕ್ ಶ್ರವಣ ತೊಂದರೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಸೇವೆ ನೀಡುವುದು, ನ್ಯೂನತೆಯುಳ್ಳವರಿಗೆ ಶಿಬಿರಗಳನ್ನು ವಿವಿದೆಡೆಗಳಲ್ಲಿ ಏರ್ಪಡಿಸಲು ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಒ) ಮತ್ತು ಸಾಮಾಜಿಕ ಸಂಸ್ಥೆಗಳಿಂದ ಬೇಡಿಕೆ ಬಂದರೆ ಸಂಸ್ಥೆಯ ಕ್ಷೇಮಾಭಿವೃದ್ಧಿ ಚಟುವಟಿಕೆಯಡಿಯಲ್ಲಿ ಅವರಿಗೆ ಶಿಬಿರಗಳನ್ನು ಆಯೋಜಿಸುವಲ್ಲಿ / ನಿರ್ವಹಿಸುವಲ್ಲಿ ಸಹಾಯ ಮಾಡುವುದಾಗಿದೆ. ಈ ಕ್ಷೇಮಾಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ಸಂಸ್ಥೆಗೆ ಸಂತೋಷದ ವಿಷಯವಾಗಿದ್ದು ಅಂತಹ ಚಟುವಟಿಕೆಗಳಿಗೆ ಸಂಸ್ಥೆಯ ನುರಿತ ತಂಡವನ್ನು ನಿಯೋಜಿಸುವುದು / ರೋಗಿಗಳ ಉಪಚಾರಕ್ಕೆ ಬೇಕಾದ ಪರಿಕರಗಳೊಡನೆ ತಂತ್ರಜ್ಞರನ್ನು ನಿಯೋಜಿಸುವುದು ಮತ್ತು ಅಗತ್ಯವಾದ ಪ್ರಮಾಣ ಪತ್ರಗಳನ್ನು ಕೊಡುವುದು ಹಾಗೂ ಲಭ್ಯವಿದ್ದರೆ ಶ್ರವಣಸಾಧನಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ / ಅಥವಾ ಕ್ರಯಕ್ಕೆ ನೀಡುವುದನ್ನು ಮಾಡುತ್ತದೆ.

ಸಂಸ್ಥೆಯ ತಂಡವು ಶಿಬಿರಗಳಲ್ಲಿ ಈ ಕೆಳಕಂಡ ಸೇವೆಗಳನ್ನು ಒದಗಿಸುತ್ತದೆ:

  • ರೋಗದ ಲಕ್ಷಣವನ್ನು ಗುರುತಿಸುವುದು
  • ಸಲಹೆಗಳನ್ನು ನೀಡುವುದು
  • ಸೂಕ್ತ ಔಷಧಿಗಳನ್ನು ಸೂಚಿಸುವುದು
  • ಶ್ರವಣಸಾಧನಗಳನ್ನು ವಿತರಿಸುವುದು
  • ವಾಕ್ ಶ್ರವಣ ದೋಷ ಮತ್ತು ಬುದ್ದಿಮಾಂಧ್ಯತೆಯುಳ್ಳ ಪ್ರತಿಯೊಬ್ಬರಿಗೂ ಸರ್ಕಾರದಿಂದ ಕೊಡುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಗತ್ಯವಾದ ಪ್ರಮಾಣ ಪತ್ರಗಳನ್ನು ನೀಡುವುದು
  • ಕಿವಿಯಚ್ಚು ತೆಗೆದುಕೊಳ್ಳುವುದು

ಶಿಬಿರಗಳನ್ನು ಹೇಗೆ ಏರ್ಪಡಿಸುವುದು?

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಸಹಾಯವನ್ನು ಪಡೆಯಲು ಇಚ್ಛಿಸುವ ಕ್ಷೇಮಾಭಿವೃದ್ಧಿ ಸಂಸ್ಥೆಗಳು ಇ-ಮೇಲ್ ಮೂಲಕ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕರನ್ನು ಸಂಪರ್ಕಿಸಬಹುದು ಅಥವಾ ಪತ್ರ ಮುಖೇನ ಕೊಟ್ಟಿರುವ ವಿಳಾಸಗಳಿಗೆ ಪತ್ರ ಬರೆದು ಸಂಪರ್ಕಿಸಬಹುದು. ಏನೇ ಆದರೂ ಶಿಬಿರಗಳನ್ನು ನಡೆಸಲು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಿಂದ ನಿಯೋಜಿಸಲ್ಪಡುವ ಸಿಬ್ಬಂದಿವರ್ಗಕ್ಕೆ ಕೆಳಕಂಡ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ.

  • ನಿಯೋಜನೆ ಮಾಡಲ್ಪಟ್ಟ ಸಿಬ್ಬಂದಿವರ್ಗಕ್ಕೆ (೧೫ ರಿಂದ ೩೦ ಜನ ಸಿಬ್ಬಂದಿಗಳು) ಹೋಗಿ ಬರುವ ಸೌಲಭ್ಯವನ್ನು ಕಲ್ಪಿಸುವುದು
  • ನಿಯೋಜಿಸಿರುವ ಸಿಬ್ಬಂದಿವರ್ಗದ ಹುದ್ದೆಗನುಗುಣವಾಗಿ ಸ್ಥಳೀಯವಾಗಿ ಉಳಿದುಕೊಳ್ಳುವದಕ್ಕೆ ಮತ್ತು ಭೋಜನ ವ್ಯವಸ್ಥೆಯನ್ನು ಆದರಪೂರ್ವಕ ಮಾಡುವುದು
  • ನಾಲ್ಕು ಜನರನ್ನು ಪರೀಕ್ಷಿಸಲು ಅಗತ್ಯವಾದ ವಿದ್ಯುತ್ತಿನ ಬಿರಟೆ (ಪವರ್ ಪಾಯಿಂಟ್)ಗಳನ್ನು ಹೊಂದಿರುವ ಶಬ್ದಮಾಲಿನ್ಯವಿಲ್ಲದಿರುವ ನಿಶ್ಶಬ್ದ ಕೊಠಡಿಗಳು
  • ನಾಲ್ಕು ಜನರನ್ನು ಪರೀಕ್ಷಿಸಲು ಅಗತ್ಯವಿರುವ ಮೇಜುಗಳು ಮತ್ತು ಕುರ್ಚಿಗಳನ್ನೊಳಗೊಂಡಿರುವ ಕೊಠಡಿಗಳು
  • ಅಗತ್ಯವಿದ್ದಷ್ಟು ಸ್ವಯಂಸೇವಕರು

ಕಲಿಕಾಪೂರ್ವ ತರಬೇತಿ

ಉದ್ದೇಶಗಳು

ಸಂವಹನ ನ್ಯೂನತೆಗಳಿಂದ ಬಳಲುತ್ತಿರುವ ಮಕ್ಕಳನ್ನು ಬೇಗನೆ ಗುರುತಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆ ಸಮರ್ಥವಾಗಿ ಆಗುವಂತೆ ಮಾಡುವುದು ಮತ್ತು ಅವರು ಮುಖ್ಯವಾಹಿನಿಗೆ ಬರಲು ನೆರವಾಗುವುದು. ಈ ಉದ್ದೇಶಗಳನ್ನು ಈಡೇರಿಸುವ ಆಕಾಂಕ್ಷೆಯಿಂದ :

  • ಬಾಲ್ಯಾವಸ್ಥೆಯ ಪ್ರಾರಂಭಿಕ ಹಂತದಲ್ಲಿ ಪ್ರಗತಿ ಹೊಂದಲು ಅವಶ್ಯಕವಾದ ತರಬೇತಿಗಳನ್ನು ನೀಡಿ ಉತ್ತೇಜಿಸುತ್ತದೆ.
  • ಸಂವಹನ ನ್ಯೂನತೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಕಲಿಕಾಪೂರ್ವ ತರಬೇತಿಗಳನ್ನು ನೀಡಿ ಯಶಸ್ವಿಯಾಗಿ ಶಾಲೆಗೆ ತೆರಳಲು ಹಾಗೂ ವಿಶೇಷವಾಗಿ ಮುಖ್ಯವಾಹಿನಿಯ ಕಲಿಕಾ ಪರಿಸರದಲ್ಲಿ ಕಲಿಯುವಂತೆ ಮಾಡುವುದು.
  • ಸಂವಹನ ನ್ಯೂನತೆಗಳಿಂದ ಬಳಲುತ್ತಿರುವ ಚಿಕ್ಕಮಕ್ಕಳಿಗೆ ಉತ್ತೇಜನಕಾರಿ ಕಲಿಕಾ ವಾತಾವರಣವನ್ನು ಆದರ್ಶಪ್ರಾಯವಾದ ಪ್ರೌಢ ಮಗುವಿನ ಅನುಪಾತದಲ್ಲಿ ನಿರ್ಮಿಸುವುದು.
  • ಸಂವಹನ ನ್ಯೂನತೆಗಳಿಂದ ಬಳಲುತ್ತಿರುವ ಚಿಕ್ಕಮಕ್ಕಳ ಪಾಲಕರು ತಮ್ಮ ಮಕ್ಕಳಿಗೆ ಸಮಾಂತರವಾಗಿ ಕಲಿಸಲು ಮತ್ತು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಬೆಂಬಲಿಸಲು ಅವರನ್ನು ಸಶಕ್ತಗೊಳಿಸುವುದು.
  • ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಾದ ಆಲಿಸುವಿಕೆ ಮತ್ತು ಮಾತನಾಡುವುದು, ಬಾಲ್ಯಾವಸ್ಥೆಯ ಪ್ರಾರಂಭಿಕ ಹಂತದ ವಿದ್ಯಾಭ್ಯಾಸ ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ನೀಡಿ ಅಗತ್ಯ ಮಾನವ ಸಂಪನ್ಮೂಲ ಸೃಷ್ಟಿಸುವುದು.

ಜಿಮ್ ಖಾನಾ ಕುರುತಂತೆ

ಅ.ಭಾ.ವಾ.ಶ್ರ.ಸಂ.ಯ ಜಿಮ್ ಖಾನಾವು ಅ.ಭಾ.ವಾ.ಶ್ರ.ಸಂ.ಯ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳ ಸಂಘವಾಗಿದೆ. ಈ ಸಂಸ್ಥೆಯ ಸದಸ್ಯರಿಗೆ ಇದು ಸಾಂಸ್ಕೃತಿಕ, ಸಾಮಾಜಿಕ ಮತ್ತು ಮನೋರಂಜನಾ ವೇದಿಕೆಯಾಗಿದೆ. ಈ ಸಂಸ್ಥೆಯ ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಸಂರಕ್ಷಿಸುವುದರ ಜೊತೆಗೆ ಸಹವರ್ತಿಸುತ್ತದೆ.

ಮನರಂಜನೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ಅ.ಭಾ.ವಾ.ಶ್ರ.ಸಂ.ಅಭಿವೃದ್ಧಿಪಡಿಸಿದೆ. ’ಪಂಚವಟಿ’ಯ ಆವರಣದಲ್ಲಿ ಒಂದು ಕ್ರೀಡಾ ಕಟ್ಟಡ ಸಂಕೀರ್ಣವಿದ್ದು, ಅಲ್ಲಿ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಆಟಗಳನ್ನು ಆಡುವ ಸೌಲಭ್ಯವಿದೆ. ಸುಸಜ್ಜಿತವಾದ ನವೀನ ವ್ಯಾಯಾಮಶಾಲೆ ಹಾಗೂ ಗ್ರಂಥಾಲಯವೂ ಸಹ ಇದೆ. ಒಂದು ಸುಂದರ ಚಿತ್ರದಂಥ (ಆಕರ್ಷಕ ಚಿತ್ರಯೋಗ)ಬಯಲು ಚಿತ್ರಮಂದಿರವು ಕ್ರೀಡಾಕಟ್ಟಡ ಸಂಕೀರ್ಣದ ಭಾಗವಾಗಿದೆ. ಸುಸಜ್ಜಿತವಾದ ದೃಕ್-ಶ್ರವಣ ಸಾಧನಗಳನ್ನೊಳಗೊಂಡ್ ೪೦೦ ಕುಳಿತುಕೊಳ್ಳಬಹುದಾದ ಒಂದು ಸಭಾಗೃಹವು ಸಹ ಇದೆ.

ರಾಷ್ಟ್ರೀಯ ಸೇವಾ ಯೋಜನೆ (ರಾ.ಸೇ.ಯೋ.)

ದ್ಯಾರ್ಥಿಗಳು ಸರ್ವಾಂಗೀಣ ಬೆಳವಣಿಗೆಯೇ ಸಂಸ್ಥೆಯ ಗುರಿಯಾಗಿದೆ. ರಾ.ಸೇ.ಯೋ.ಯ ಚಟುವಟಿಕೆಯು ಈ ದಿಸೆಯಲ್ಲಿ ಸಹಾಯಕಾರಿಯಾಗಿದೆ. ವಿದ್ಯಾರ್ಥಿಗಳು ಅಂತರ್ಗತವಾಗಿರುವ ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಮತ್ತು ಸಮಾಜಸೇವೆಯನ್ನು ಉತ್ಸಾಹಪೂರ್ಣವಾಗಿ ಮಾಡಲು ಸಂಸ್ಥೆಯು ವಿದ್ಯಾರ್ಥಿಗಲನ್ನು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಯತ್ನಿಸುತ್ತದೆ. ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವು ಯುವಕರು ಸಮಾಜದಲ್ಲಿ ಸಮರ್ಪಕವಾಗಿ ಬೆರತು ಒಂದಾಗುವಂತಹ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸುವ ಗುರಿಯನ್ನು ಹೊಂದಿದೆ.

ಧ್ಯೇಯ ವಾಕ್ಯ: “ನಾನಲ್ಲ ಆದರೆ ನೀನು”

ನಾಗರೀಕರ ಸನದು

ಪ್ರಸ್ತಾವನೆ

ರಾಷ್ಟ್ರದಲ್ಲಿ ವಿವಿಧ ದೌರ್ಬಲ್ಯಗಳಿಂದ ಬಳಲುತ್ತಿರುವವರಿಗೋಸ್ಕರ ಸರ್ಕಾರದ ನೇತೃತ್ವದಲ್ಲಿ ಮತ್ತು ಕಾನೂನುಗಳಿಂದ ಹಲವಾರು ಸೇವಾ ಸೌಲಭ್ಯಗಳು ಲಭ್ಯವಿರುವುದರಿಂದ ಇಂದು ಅವರುಗಳಿಗೆ ಸೇವಾಮನೋಭಾವವಿರುವವರ ಅಥವಾ ಪುರ್ನವಸತಿ ಕಲ್ಪಿಸುವ ತಜ್ಞರ ಸೇವೆಗಳ ಐಚ್ಛಿಕ ಔದಾರ್ಯವನ್ನು ಅವಲಂಬಿಸುವ ಪ್ರಶ್ನೆ ಏಳುವುದಿಲ್ಲ. ಅದೇ ರೀತಿಯಲ್ಲಿ ಗ್ರಾಹಕರೂ ಸಹ ಪುರ್ನವಸತಿ ತಜ್ಞರಿಂದ ಪಡೆಯುವ ಸೇವೆಗಳಲ್ಲಿ ಯಾವುದೇ ಆಕ್ಷೇಪಣೆ ಇಲ್ಲದೇ ನಿಷ್ಕ್ರಿಯವಾಗಿ ಭಾಗವಹಿಸುವುದು ಅಥವಾ ಗ್ರಹಿಸುವುದೂ ಸಹ ಅನಪೇಕ್ಷಣೀಯವಾಗಿದೆ.

ದೌರ್ಬಲ್ಯಗಳಿಂದ ಬಳಲುತ್ತಿರುವ ವ್ಯಕ್ತಿಗಳು, ಅವರನ್ನು ನೋಡಿಕೊಳ್ಳುವವರು ಮತ್ತು ಅವರ ಕುಟುಂಬದ ಸದಸ್ಯರುಗಳು ತಮ್ಮ ಹಕ್ಕಿನನ್ವಯ ಗ್ರಾಹಕರೇ ಆಗಿರುತ್ತಾರೆ. ಪುನರ್ವಸತಿ ಸೇವಾ ಕೈಗಾರಿಕೆಯ ಗ್ರಾಹಕರಾಗಿ ಅವರುಗಳು ಸಿದ್ಧಪಡಿಸಿದ ವಸ್ತುಗಳನ್ನು ಅಥವಾ ಸೇವೆಗಳನ್ನು ಅಂಗನ್ಯೂನತೆಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ಮತ್ತು ಅಂಗನ್ಯೂನತೆಗಳನ್ನು ಸುಧಾರಿಸಲು ಉಪಯೋಗಿಸುವ ಉಪಕರಣಗಳ ರೂಪದಲ್ಲಿ ತ್ರಿಚಕ್ರವಾಹನಗಳನ್ನು, ಮಾರ್ಗದರ್ಶಿ ಕೈದೊಣ್ಣೆಗಳು, ಕನ್ನಡಕಗಳು, ಶ್ರವಣಸಾಧನಗಳು, ಬ್ರೈಲ್ ಪುಸ್ತಕಗಳು, ಬೋಧನೋಪಕರಣಗಳು ಮುಂತಾದುವುಗಳನ್ನು ಪಡೆಯುತ್ತಾರೆ.

ಮಾರ್ಗದರ್ಶನ, ಸಲಹೆಗಳು, ಚಿಕಿತ್ಸೆ, ವಿಶೇಷ ವಿದ್ಯಾಭ್ಯಾಸ, ಬುದ್ಧಿವಾದ, ಬೆಂಬಲ ಮುಂತಾದ ಸೇವೆಗಳನ್ನು ಪಡೆಯುವುದರಿಂದ ಅವರುಗಳು ಸಾಧಾರಣ ಗ್ರಾಹಕರಿಗಿಂತ ಭಿನ್ನವಾದ ಗ್ರಾಹಕರಾಗಿರುತ್ತಾರೆ. ಅವರು ಮಲಿನತೆಯ ವಿರುದ್ಧ ರಕ್ಷಿಸಿಕೊಳ್ಳಬೇಕು, ಕಾನೂನು ಉಲ್ಲಂಘನೆಯ ವಿರುದ್ಧ ಹೋರಾಡಬೇಕು, ಬಲಾತ್ಕಾರದ ವಿರುದ್ಧ ಪ್ರತಿಭಟಿಸಬೇಕು ಮತ್ತು ಅತಿಕ್ರಮಣವನ್ನು ಆಕ್ಷೇಪಿಸಬೇಕು. ಮೇಲ್ಕಂಡ ಅಂಶಗಳ ದೃಢೀಕರಣದನ್ವಯ ಮೈಸೂರಿನ ಎ.ಐ.ಐ.ಎಸ್.ಎಚ್. ಸಂಸ್ಥೆಯಿಂದ ಸೇವೆ ಪಡೆಯುವ ಪ್ರಜೆಗಳಿಸ್ಕೋರ ಗ್ರಾಹಕರ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಕುರಿತಂತೆ ಈ ಕೆಳಗಿನ ಸನದನ್ನು ರಚಿಸಿ ಬಹಿರಂಗವಾಗಿ ಘೋಷಿಸಿ ಪ್ರಕಟಿಸಲಾಗಿದೆ.

ಕಾಯಿದೆ ೧ : ಸಮಾನತೆಯ ಹಕ್ಕು

ಅಂದರೆ ಜಾತಿ, ಮತ, ಧರ್ಮ, ವಯಸ್ಸು, ಭಾಷೆ, ಅಂತಸ್ತು, ಲಿಂಗ, ನ್ಯೂನತೆಯ ಮಟ್ಟ, ಪ್ರಾಂತ್ಯ, ಭೌಗೋಳಿಕ ಪ್ರದೇಶ ಇತ್ಯಾದಿಗಳನ್ವಯ ಬೇಧಭಾವವಿಲ್ಲದೆ ಔಷಧಿಗಳನ್ನು ಮತ್ತು ಇತರ ಸೇವೆಗಳನ್ನು ಪಡೆಯಲು ಎಲ್ಲ ಗ್ರಾಹಕರಿಗೂ ಸಮಾನ ಹಕ್ಕಿದೆ. ಮಾನವೀಯ ದೃಷ್ಟಿಯನ್ನು ಬಿಟ್ಟು ಇತರ ಯಾವುದೇ ಕಾರಣದಿಂದ ಪಕ್ಷಪಾತ ಮಾಡಿದರೆ, ಸೇವೆ ನಿರಾಕರಿಸಿದರೆ, ಜಾತಿ, ಮತ, ಧರ್ಮ, ವಯಸ್ಸು, ಭಾಷೆ, ಲಿಂಗ, ನ್ಯೂನತೆಯ ಮಟ್ಟ, ಸಾಮಾಜಿಕ ಆರ್ಥಿಕ ಸ್ಥಾನಮಾನ, ಪ್ರಾಂತ್ಯ, ಭೌಗೋಳಿಕ ಪ್ರದೇಶ ಇತ್ಯಾದಿ ಕಾರಣಗಳಿಂದ ಪುರ್ನವಸತಿ ತಜ್ಞರೇನಾದರೂ ಸೇವೆ ನೀಡುವ ಗುಣಮಟ್ಟದಲ್ಲಿ ತಾರತಮ್ಯ ಮಾಡಿದರೆ ಗ್ರಾಹಕರು ತಕ್ಷಣ ಸಂಬಂಧಿಸಿದವರಿಗೆ ದೂರು ನೀಡಬೇಕು.

 

ಕಾಯಿದೆ ೨ : ತಿಳಿದು ಸಮ್ಮತಿಸುವ ಹಕ್ಕು

ಅಂದರೆ ರೋಗ ಪರೀಕ್ಷೆಯ ಅಭಿಪ್ರಾಯ, ಪರೀಕ್ಷೆ ಅಥವಾ ರೋಗ ಪತ್ತೆಗೆ ನಡೆಸಿದ ಪರೀಕ್ಷೆಗಳು, ಸಂಶೋಧನೆಯಲ್ಲಿ ಸಂಶೊಧನಾ ವಸ್ತುವಾಗಿ ಪಾಲ್ಗೊಳ್ಳುವುದು, ಫಲಿತಾಂಶದ ವರದಿಗಳು, ಸೇವೆಗಳ ಅಂದಾಜು ವೆಚ್ಚ, ಚಿಕಿತ್ಸಾಕ್ರಮಕ್ಕಾಗಿ ಸೂಚಿಸಿರುವ ಕಾರ್ಯಯೋಜನೆ, ಚಿಕಿತ್ಸೆಯಿಂದಾಗುವ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಣಾಮಗಳು ಅಥವಾ ಚಿಕಿತ್ಸೆಯ ತೊಡರುಗಳು, ರೋಗದ ಮುನ್ನರಿವು ಕೊಡುವುದು, ಫಲಿತಾಂಶ ಇತ್ಯಾದಿಗಳ ಬಗ್ಗೆ. ತಿಳಿದುಕೊಳ್ಳಲು ಗ್ರಾಹಕರಿಗೆ ಹಕ್ಕಿದೆ. ಪುನರ್ವಸತಿ ತಜ್ಞರಿಂದ ತಮ್ಮ ಖಾಯಿಲೆಯನ್ನು ಕುರಿತಂತೆ ಅಥವಾ ಖಾಯಿಲೆಗೆ ಸಂಬಂಧಿಸಿದ ಪರೀಕ್ಷೆಗಳನ್ವಯ ಕೊನೆಯ ನಿರ್ಧಾರ, ಕೆಲವು ಪರೀಕ್ಷೆಗಳ ಅಗತ್ಯತೆ, ಚಿಕಿತ್ಸಾಕ್ರಮ ಅಥವಾ ಚಿಕಿತ್ಸಾತಂತ್ರ, ಚಿಕಿತ್ಸೆಗೆ ಬೇಕಾಗುವ ಕಾಲಾವಧಿ, ಬೇಕಾಗುವ ಹಣ, ರೋಗದ ಮುನ್ನರಿವು ಇತ್ಯಾದಿಗಳನ್ನು ಕುರಿತಂತೆ ಮಾಹಿತಿಗಳನ್ನು ಆಗ್ರಹಪೂರ್ವಕವಾಗಿ ಪಡೆಯಬಹುದು. ಸಂಸ್ಥೆಯ ಪರವಾಗಿ ಅಧಿಕೃತ ರಸೀದಿ ಪಡೆಯದೆ ಯಾವುದೇ ಹಣವನ್ನು ನಗದಾಗಿ ಕೊಡಬಾರದು. ಪೂರ್ಣ ಮಾಹಿತಿಯನ್ನು ಕೊಡಲು ನಿರಾಕರಿಸದಲ್ಲಿ ತಕ್ಷಣ ದೂರು ದಾಖಲಿಸಬೇಕು. ಗ್ರಾಹಕರು ತಾವೇ ಅಥವಾ ತಮ್ಮ ರಕ್ಷಣೆಯಲ್ಲಿರುವವರು ಸಂಶೋಧನಾ ಚಟುವಟಿಕೆಯ ಭಾಗವಾಗಿದ್ದರೆ ಆ ಸಂಶೋಧನೆಯ ವಿವರಗಳನ್ನು ತಿಳಿಯಲು ಹಕ್ಕಿದೆ. ಸಂಶೋಧನಾ ಚಟುವಟಿಕೆಯಲ್ಲಿ ಭಾಗವಹಿಸಲು ಒಪ್ಪಿಗೆ ಕೊಡದಿರಲು / ನಿರಾಕರಿಸಲು ಅಥವಾ ಯಾವುದೇ ಸಂಶೋಧನಾ ಚಟುವಟಿಕೆಯಲ್ಲಿ ಭಾಗವಹಿಸದಿರಲು ಹಾಗೂ ಈಗಾಗಲೇ ಒಪ್ಪಿಗೆ ಪಡೆದು ಸಂಶೋಧನೆ ನಡೆಯುತ್ತಿರುವ ಯೋಜನೆಗಳನ್ನು ಕುರಿತಂತೆ ಈ ಉದ್ದೇಶಕ್ಕಾಗೆಯೇ ರಚನೆ ಮಾಡಿರುವ ನೀತಿ ನಿಯಮಗಳ ಸಮಿತಿಯಿಂದ ವಿವರಗಳನ್ನು ಪಡೆಯಬಹುದು.

 

ಕಾಯಿದೆ ೩ : ಆಯ್ಕೆಯ ಹಕ್ಕು

ಅಂದರೆ ಗ್ರಾಹಕರಿಗೆ ತಿಳಿಸಿಹೇಳದ ಪರೀಕ್ಷೆಗಳು, ರೋಗಪರೀಕ್ಷಾ ವಿಧಾನಗಳು ಅಥವಾ ರೋಗ ಪತ್ತೆ ಮಾಡುವುದು, ಸಲಹೆಗಳು, ಚಿಕಿತ್ಸಾ ವಿಧಾನ ಇತ್ಯಾದಿಗಳ ಆಯ್ಕೆ ಅಥವಾ ನಿರಾಕರಣೆ ಮುಂತಾದುವುಗಳನ್ನು ನ್ಯೂನತೆಯಿಂದ ಬಳಲುತ್ತಿರುವ ವ್ಯಕ್ತಿಯ ಹಿತಾಸಕ್ತಿಯ ದೃಷ್ಟಿಯಿಂದ ಅವರ ರಕ್ಷಕರು, ಕುಟುಂಬವರ್ಗ ಮತ್ತು ಸಮಾಜದ ದೃಷ್ಟಿಯಿಂದ ಆಯ್ಕೆ ಮಾಡುವುದು, ನಿರಾಕರಿಸುವುದು ಮತ್ತು / ಅಥವಾ ಒಪ್ಪಿಗೆ ಕೊಡುವುದಕ್ಕೆ ಹಕ್ಕಿದೆ. ತಿಳಿಸಿಹೇಳದಂತ ಪರೀಕ್ಷೆ, ರೋಗ ಪರೀಕ್ಷಾ ವಿಧಾನಗಳು ಅಥವಾ ರೋಗಪತ್ತೆ ಮಾಡುವುದು, ಯಾವುದೇ ರೀತಿಯ ಚಿಕಿತ್ಸೆ ಮತ್ತು ಸಲಹೆಗಳನ್ನು ಒಪ್ಪಿಕೊಳ್ಳುವುದು ಅಥವಾ ನಿರಾಕರಣೆ ಮಾಡುವುದು ಮುಂತಾದವುಗಳನ್ನು ನ್ಯೂನತೆಯಿಂದ ನರಳುತ್ತಿರುವ ವ್ಯಕ್ತಿಯ ಹಿತಾಸಕ್ತಿ, ಅವರ ರಕ್ಷಕರು, ಕುಟುಂಬ ಮತ್ತು ಸಮಾಜದ ವ್ಯಾಪ್ತಿಯಲ್ಲಿ ಗ್ರಾಹಕರು ನಿರಾಕರಿಸುವುದು ಅಥವಾ ಒಪ್ಪಿಗೆ ಕೊಡುವುದನ್ನು ಆಗ್ರಹಪೂರ್ವಕವಾಗಿ ಮಾಡಬಹುದಾಗಿದೆ.

 

ಕಾಯಿದೆ ೪ : ಆಲಿಸುವ ಹಕ್ಕು

ರೋಗ ಪರೀಕ್ಷೆಗೆ ಸಂಬಂಧಿಸಿದಂತೆ ಚಿಕಿತ್ಸಾ ಕ್ರಮ, ಕಾರ್ಯಕ್ರಮಗಳು, ರೋಗ ಪರೀಕ್ಷಾ ವಿಧಾನಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಅಭಿಪ್ರಾಯಗಳನ್ನು ಕೇಳಿಸಬೇಕಾದದ್ದು ಹಾಗೂ ಗ್ರಾಹಕರ ಕಲ್ಯಾಣಕ್ಕೋಸ್ಕರ ಮಾಡುವ ಕ್ರಿಯಾಯೋಜನಾ ಸಂಶೋಧನೆಗಳಿಗಾಗಿ ಸ್ಥಾಪಿಸಲ್ಪಟ್ಟಿರುವ ವಿವಿಧ ಚರ್ಚಾವೇದಿಕೆಗಳಲ್ಲಿ ಪ್ರತಿನಿಧಿಸಲು ಸಹ ಗ್ರಾಹಕರಿಗೆ ಹಕ್ಕಿದೆ. ನ್ಯೂನತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಮತ್ತು / ಅಥವಾ ಅವರ ಕುಟುಂಬವರ್ಗದವರಿಗೆ ನೀಡುವ ಸೇವೆಯನ್ನು ಕುರಿತಂತೆ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಲು, ರಚನಾತ್ಮಕ ವಿಮರ್ಶೆ ಮಾಡಲು, ಚರ್ಚಿ ಮಾಡಲು, ಸಲಹೆ ನೀಡಲು, ಪ್ರಶ್ನೆಗಳನ್ನು ಕೇಳಲು ಗ್ರಾಹಕರಿಗೆ ಹಕ್ಕಿದೆ. ಗ್ರಾಹಕರು ರಾಜಕೀಯ ಮನೋಭಾವವಿರದ ಮತ್ತು ವ್ಯಾಪಾರೀ ಮನೋಭಾವವಿರದ ಸ್ವಸಹಾಯ ಗುಂಪುಗಳನ್ನು ಅಥವಾ ಗ್ರಾಹಕರ ಸಂಸ್ಥೆಗಳನ್ನು ಆರಂಭಿಸಬಹುದು ಮತ್ತು ಇವುಗಳಿಗೆ ಸಂಸ್ಥೆಯಲ್ಲಿ ಗ್ರಾಹಕರ ಹಿತಾಸಕ್ತಿ ಮತ್ತು ಸಮಾಧಾನಕ್ಕೆ ಸಂಬಂಧಿಸಿದ ವಿಷಯಗಳಿಗೋಸ್ಕರ ವಿಶೇಷವಾಗಿ ಪ್ರಾರಂಭಿಸಲ್ಪಟ್ಟ ಸಾರ್ವಜನಿಕರ ಕುಂದುಕೊರತೆಗಳ / ನಿವಾರಿಸುವ ಸಮಿತಿಯಲ್ಲಿ ಪ್ರಾತಿನಿಧ್ಯವನ್ನು ಕೊಡಬಹುದು.

ಕಾಯಿದೆ ೫ : ಪರಿಹಾರ ಪಡೆಯಲು ಹಕ್ಕು

ಸೇವೆ ಪಡೆಯುವವರು ವಿವೇಚನೆಯಿಲ್ಲದೆ ಶೋಷಣೆಗೆ ಗುರಿಯಾದರೆ, ರೋಗ ಪರೀಕ್ಷಾ ವಿಧಾನದಲ್ಲಿ ಪಕ್ಷಪಾತ ನಡೆದರೆ ಅಥವಾ ಅಕಾರ್ಯ ನಡೆದರೆ ಗ್ರಾಹಕರು ಇದಕ್ಕೆ ಪರಿಹಾರ ಪಡೆಯುವ ಹಕ್ಕಿದೆ. ಸೇವೆ ನೀಡುವವರಿಂದ ಅಥವಾ ಪುನರ್ವಸತಿ ತಜ್ಞರಿಂದ ಅಕಾರ್ಯ ನಡೆದ, ಹಣವನ್ನು ದುರುಪಯೋಗ ಮಾಡಿದ ದುರ್ನಡತೆಯ ಆಧಾರಯುಕ್ತವಾದ ಕುಂದುಕೊರತೆಗಳು ನಿರ್ದಿಷ್ಟ ಸಂದರ್ಭಗಳೇನಾದರೂ ಇದ್ದರೆ ಅವುಗಳನ್ನು ಆಲಿಸಿ ಪರಿಣಾಮಕಾರಿಯಾಗಿ ನಿರ್ಧರಿಸುವುದೂ ಸಹ ಈ ಹಕ್ಕಿನಲ್ಲಿ ಅಡಕವಾಗಿದೆ. ಆಧಾರಸಹಿತವಾದ ಕುಂದುಕೊರತೆಗಳೇನಾದರೂ ಇದ್ದಲ್ಲಿ ಗ್ರಾಹಕರು ಸಂಸ್ಥೆಯ ಸಾರ್ವಜನಿಕರ ಕುಂದುಕೊರತೆಗಳ / ನಿವಾರಿಸುವ ಸಮಿತಿಯಲ್ಲಿ ನಿಗದಿತ ರೀತಿಯಲ್ಲಿ ದೂರು ನೀಡಬಹುದು. ದೂರಿನ ಸ್ವರೂಪ ಅಲ್ಪ ಪ್ರಮಾಣದ್ದಾಗಿರಬಹುದು ಅಥವಾ ಗುರುತರವಾಗಿದ್ದು ನ್ಯೂನತೆಯುಳ್ಳ ವ್ಯಕ್ತಿಗಳಿಗೆ, ಅವರ ರಕ್ಷಕರಿಗೆ ಅಥವಾ ಸಮಾಜಕ್ಕೆ ಸಂಬಂಧಿಸಿದಂತೆ ವಿಶಾಲ ವ್ಯಾಪ್ತಿಯನ್ನು ಹೊಂದಿರಬಹುದು. ಸಾರ್ವಜನಿಕ ಕುಂದುಕೊರತೆಗಳ / ನಿವಾರಿಸುವ ಸಮಿತಿಯು ಪಡೆದಿರುವ ಫಿರ್ಯಾದಿಗಳನ್ನು ಆಪಾದನೆಗಳನ್ನು ಅಥವಾ ದೂರುಗಳನ್ನು ಪರಿಶೀಲಿಸಿ, ತನಿಖೆನಡೆಸಿ ಸಂಬಂಧಿಸಿದಂತೆ ಸಲಹೆಗಳನ್ನು ಮತ್ತು ಶಿಫಾರಸ್ಸುಗಳನ್ನು ಕಾರ್ಯರೂಪಕ್ಕೆ ತರಲು ನಿರ್ದೇಶಕರ ಗಮನಕ್ಕೆ ತರುತ್ತದೆ.

ಕಾಯಿದೆ ೬ : ಗ್ರಾಹಕರ ವಿದ್ಯಾಭ್ಯಾಸದ ಹಕ್ಕು

ಅರಿವಿರುವ ಸೇವೆ ಪಡೆಯುವ ವ್ಯಕ್ತಿಗಳಿಗಾಗಿ ಅಥವಾ ನ್ಯೂನತೆಯುಳ್ಳ ವ್ಯಕ್ತಿಗಳ ಪರವಾಗಿ, ಅವರ ರಕ್ಷಕರು ಜೀವನ ಪರ್ಯಂತ ಅವರ ಕುಟುಂಬದ ಸದಸ್ಯರಾಗಿರುವವರು ವಿಷಯದ ಬಗ್ಗೆ ಅರಿವನ್ನು ಪಡೆಯಲು ಅಗತ್ಯವಾದ ಜ್ಞಾನ ಮತ್ತು ಕೌಶಲಗಳನ್ನು ಪಡೆಯುವುದೇ ಈ ಹಕ್ಕಿನ ಅರ್ಥ. ಅರಿವಿಲ್ಲದ ಗ್ರಾಹಕರು ವಿಶೇಷವಾಗಿ ಓದುಬರಹ ಬಾರದವರು, ಹಳ್ಳಿಗಳಲ್ಲಿ ಸೇವೆ ಪಡೆಯುವವರು ಅವರ ಶೋಷಣೆಗೆ ಅವರೇ ಜವಾಬ್ದಾರರಾಗಿರುತ್ತಾರೆ. ನ್ಯೂನತೆಗಳಿಂದ ಬಳಲುತ್ತಿರುವವರಿಗೆ ಸೇವೆಗಳನ್ನು ಒದಗಿಸುವ ಸಂಸ್ಥೆಯಲ್ಲಿ ಅನಾರೋಗ್ಯಕರವಾದ ಇಂತಹ ಶೋಷಣೆಗಳನ್ನು ತಡೆಗಟ್ಟಲು, ಗ್ರಾಹಕರಿಗೆ ಅರಿವುಂಟು ಮಾಡಲು ಮತ್ತು ಅವರ ಹಕ್ಕುಗಳ ರಕ್ಷಣೆ ಮಾಡಲು ಒಂದು ಯುಕ್ತ ಫೋರಂ ನ ಅವಶ್ಯಕತೆ ಕಡ್ಡಾಯವಾಗಿದೆ. ಗ್ರಾಹಕರು ಅಧಿಕಾರಯುಕ್ತವಾಗಿ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ಕೇಳಲು ಹಾಗೂ ತಮ್ಮ ಸ್ವಂತ ಉಪಯೋಗಕ್ಕಾಗಿ ಅಥವಾ ತಮ್ಮ ಪಾಲನೆಯಲ್ಲಿರುವವರ ಅನುಕೂಲಕ್ಕಾಗಿ ಪ್ರಚಲಿತ ಚಟುವಟಿಕೆಗಳ ಕುರಿತಂತೆ ನಿರಂತರವಾಗಿ ಸಭೆಗಳು, ಚರ್ಚೆಗಳು, ಭಾಷಣ ಮಾಲಿಕೆಗಳು, ತಜ್ಞರ ಸಭೆಗಳು, ವಾಗ್ವಾದಗಳು ಮತ್ತು ಉಜ್ವಲ ಭಾಷಣಗಳ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಚಿಕಿತ್ಸಾ ತಂತ್ರದ ಯೋಜನೆ, ಕಾರ್ಯಕ್ರಮ, ನಿರ್ವಹಣೆ, ನ್ಯೂನತೆಯುಳ್ಳ ವ್ಯಕ್ತಿಗಳಿಗೆ ಸೇವೆಯನ್ನು ಕಾರ್ಯಗತಗೊಳಿಸುವಿಕೆ ಮುಂತಾದ ವಿಷಯಗಳು ಪಾರದರ್ಶಕವಾಗಿರಬೇಕು. ಈ ಸಂಸ್ಥೆಯು ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ತಜ್ಞರನ್ನು ತಯಾರುಮಾಡುವ ಕೇಂದ್ರವಾಗಿದ್ದು ವಿದ್ಯಾರ್ಥಿಗಳ ಪುನರ್ವಸತಿ ತಜ್ಞರ ಮೇಲ್ವಿಚಾರನೆಯಲ್ಲಿ ರೋಗಿಗಲನ್ನು ಪರೀಕ್ಷಿಸಿ ಅಧಿಕೃತವಾದ ಪ್ರಯತ್ನಗಳನ್ನು ಮಾಡಿ ಸೇವೆಯನ್ನು ನೀಡುವುದನ್ನು ಗ್ರಾಹಕರು ಮೆಚ್ಚಿಕೊಳ್ಳಲೇಬೇಕು.

ಕಾಯಿದೆ ೭ : ಗೌಪ್ಯತೆಯ ಹಕ್ಕು

ಸೇವೆ ನೀಡುವವರು ಅಥವಾ ಪುನರ್ವಸತಿ ತಜ್ಞರು ಗ್ರಾಹಕರ ಖಾಯಿಲೆಯನ್ನು ಗೊತ್ತುಪಡಿಸಿಕೊಳ್ಳುವುದರ ಕಾರ್ಯವಿಧಾನ, ಖಾಯಿಲೆಯನ್ನು ತಿಳಿಸುವುದು, ವೈದ್ಯಕೀಯ ಚಿಕಿತ್ಸೆ / ಚಿಕಿತ್ಸಾ ಯೋಜನೆ, ಯೋಜಿತ ಕಾರ್ಯಕ್ರಮಗಳು, ಮಾರ್ಗದರ್ಶನ, ಸಲಹೆಗಳು, ರಿಕಾರ್ಡ್ ಗಳು ಮತ್ತು ವರದಿಗಳನ್ನು ಸಂರಕ್ಷಿಸುವುದು ಅಥವಾ ವರ್ಜಿಸುವುದು, ದೂರುಗಳ ನೋಂದಣಿ ಇತ್ಯಾದಿಗಳನ್ನು ಕುರಿತಂತೆ ಗೋಪ್ಯತೆಯನ್ನು ಕಾಪಾಡುವಂತೆ ಕೇಳುವ ಹಕ್ಕು ಗ್ರಾಹಕರಿಗಿದೆ. ಖಾಯಿಲೆ ಗುರುತಿಸುವ ಹಂತದಿಂದ ಪ್ರಾರಂಭಿಸಿ, ಚಿಕಿತ್ಸಾ ಕಾರ್ಯಕ್ರಮವನ್ನು ಯೋಜಿಸಿ ಕಾರ್ಯಗತ ಮಾಡುವವರೆಗೂ ಎಲ್ಲವನ್ನೂ ಏಕಾಂತದಲ್ಲಿ ಮಾಡುವಂತೆ ಕೇಳುವ ಹಕ್ಕು ಗ್ರಾಹಕರಿಗಿದೆ. ಈ ನಿಯಮದ ಉಲ್ಲಂಘನೆಯಾದರೆ ಅದನ್ನು ಸಂಬಂಧಿಸಿದ ಚರ್ಚಾ ವೇದಿಕೆಗಳಲ್ಲಿ ಗ್ರಾಹಕರು ದೂರು ದಾಖಲಿಸಬಹುದು ಮತ್ತು ಮಾನನಷ್ಟದ ವ್ಯಾಪ್ತಿಯನ್ವಯ ಸೂಕ್ತವಾದ ಪರಿಹಾರವನ್ನು ಪಡೆಯಬಹುದು.

ಕಾಯಿದೆ ೮ : ಮುಖ್ಯವಾಹಿನಿಯಲ್ಲಿ ಒಂದಾಗಿ ಬೆರೆಯುವ ಹಕ್ಕು

ಚಿಕಿತ್ಸೆಯ ಯೋಜನೆ, ಕಾರ್ಯವಿಧಾನ ಮತ್ತು ಆಚರಣೆಗಳಲ್ಲಿ ಗೌರವವಾಗಿ ಪರಿಗಣಿಸುವಂತೆ ಕೇಳುವುದೇ ಈ ಹಕ್ಕಿನ್ ಅರ್ಥ. ಇದು ನ್ಯೂನತೆಗಳಿರುವ ವ್ಯಕ್ತಿಗಳು ಮತ್ತು / ಅಥವಾ ಅವರ ಕುಟುಂಬದವರನ್ನು ಸಮಾಜದಲ್ಲಿ ಸಾಮಾನ್ಯವಾಗಿ ಒಂದಾಗಿ ಬೆರೆಯಲು ಮತ್ತು ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ. ಪುನರ್ವಸತಿ ಕಾರ್ಯವಿಧಾನದಲ್ಲಿ ನ್ಯೂನತೆಯುಳ್ಳವರನ್ನು ಅವರ ವಯಸ್ಸು, ಲಿಂಗ ಅಥವಾ ಸಾಂಸ್ಕೃತಿಕ ಹಿನ್ನಲೆಗೆ ಅನುಗುಣವಾದ ಚಟುವಟಿಕೆಗಳಲ್ಲಿ ಅವರು ಮತ್ತು / ಅಥವಾ ಅವರ ಕುಟುಂಬದವರನ್ನು ಇತರರಿಂದ ಬೇರ್ಪಡಿಸಿದಂತೆ ಸೂಚಿಸುವ ಯಾವುದೇ ಭಾವವಿರಬಾರದು. ನ್ಯೂನತೆಯುಳ್ಳ ವ್ಯಕ್ತಿಗಳ ಆರೈಕೆ ಮಾಡುವಲ್ಲಿ ಗ್ರಾಹಕರು ತಾವೂ ಕೂಡ ಪಾಲುದಾರರಾಗಿರಬೇಕೆಂದು ಕೇಳುವ ಹಕ್ಕು ಗ್ರಾಹಕರಿಗಿದೆ. ಎಲ್ಲಿಯಾದರೂ ಅವರುಗಳನ್ನು ನ್ಯೂನತೆ ಇರದ ಇತರ ಸರಿಸಮಾನರೊಡನೆ ವಯಸ್ಸು, ಲಿಂಗ ಅಥವಾ ಸಾಂಸ್ಕೃತಿಕ ಹಿನ್ನಲೆಯ ಕಾರಣದಿಂದ ಬೇರ್ಪಡಿಸಿದಂತಹ, ನಿಷೇದಿಸಿದಂತಹ, ಬಹಿಷ್ಕರಿಸಿದಂತಹ ಭಾವವಿರುವ ಸಾಕ್ಷ್ಯಘಟಾನೆಗಳೇನಾದರೂ ಇದ್ದಲ್ಲಿ ಅದನ್ನು ವರದಿ ಮಾಡಬೇಕು.

ಕಾಯಿದೆ ೯ : ಅಡ್ಡಿಆತಂಕವಿಲ್ಲದ ಪರಿಸರದ ಹಕ್ಕು

ಖಾಯಿಲೆಯವರಿಗೆ ಚಿಕಿತ್ಸೆ ನೀಡುವ ಪರಿಸರ ಯಾವುದೇ ರೀತಿಯ ಅಡ್ಡಿ ಆತಂಕಗಳಿಂದ ಮುಕ್ತವಾಗಿದ್ದು, ಕಾರ್ಯ ವಿಧಾನಗಳು, ಪರೀಕ್ಷಾ ವಿಧಾನಗಳು ಹಾಗೂ ಪುನರ್ವಸತಿ ತಜ್ಞರು ಮತ್ತು ಸೇವಾಚಿಕಿತ್ಸೆ ನೀಡುವವರ ಮನೋವೃತ್ತಿಯೂ ಸಹ ಮುಕ್ತವಾಗಿದ್ದು ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲದೆ ಇರಬೇಕೆಂದು ಕೇಳುವುದೇ ಈ ಹಕ್ಕಿನ ಅರ್ಥ. ನ್ಯೂನತೆಗಳಿಂದ ಬಳಲುತ್ತಿರುವ ಮತ್ತು / ಅಥವಾ / ಅವರ ಕುಟುಂಬದವರಿಗೆ ಮಾನಸಿಕವಾಗಿ ತೊಂದರೆಯಾಗುವಂತಹ ಅವರನ್ನು ನಿಷೇಧಿಸಿದ, ಮಾನನಷ್ಟಕರವಾದ ಅಥವಾ ತುಚ್ಛವಾದ ಟೀಕೆಗಳನ್ನು ಪ್ರಜ್ಞಾಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಲ್ಲದೇ ಮಾಡಿದ ಘಟನೆಗಳೇನಾದರೂ ನಡೆದರೆ ಗ್ರಾಹಕರು ಅದನ್ನು ಕಡ್ಡಾಯವಾಗಿ ವರದಿ ಮಾಡಬೇಕು. ಯಾವುದೇ ಕಾರಣಕ್ಕೂ ನ್ಯೂನತೆಯುಳ್ಳ ವ್ಯಕ್ತಿಗಳನ್ನಾಗಲೀ ಅಥವಾ ಅವರ ಕುಟುಂಬದವರನ್ನಾಗಲೀ ಗೇಲಿಮಾಡುವ, ದ್ವಂದ್ವಾರ್ಥದ ಮಾತುಗಳನ್ನಾಡುವ ಅಥವಾ ಹಾಸ್ಯಮಾಡುವ ವಸ್ತುಗಳಂತೆ ಕಾಣಬಾರದು. ರೋಗಚಿಕಿತ್ಸಾ ಪರಿಸರವು ನ್ಯೂನತೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅವರು ನ್ಯೂನತೆಯ ಕಾರಣದಿಂದ ಅನುಭವಿಸುತ್ತಿರುವ ಅನಾನುಕೂಲಕ್ಕಿಂತ ಹೆಚ್ಚಿನ ಅನಾನುಕೂಲವನ್ನುಂಟು ಮಾದುತ್ತಿದ್ದಲ್ಲಿ ಗ್ರಾಹಕರು ಆ ಪರಿಸರದಲ್ಲಿ ಅಥವಾ ಕಟ್ಟಡ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಮಾಡಲು ಕೇಳಬಹುದು.

ಮಾಹಿತಿ ಹಕ್ಕು ಕಾಯಿದೆ ೨೦೦೫

ಯಾರು ಅರ್ಜಿ ಸಲ್ಲಿಸಬಹುದು? 
ಮಾಹಿತಿ ಬೇಕಾಗಿರುವ ಎಲ್ಲ ಭಾರತೀಯ ಪ್ರಜೆಗಳು ಈ ಕಾಯಿದೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಈ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಅನ್ವಯಿಸುವುದಿಲ್ಲ.

ಮಾಹಿತಿ ಎಂದರೇನು?
>ಯಾವುದೇ ದಾಖಲೆಗಳು, ಜ್ಞಾಪಕ ಪತ್ರ / ಎಚ್ಚರಿಕೆ ಪತ್ರ, ನಮೂನೆಗಳು ಇತ್ಯಾದಿ. 

ಮಾಹಿತಿ ಹಕ್ಕು ಎಂದರೇನು? 
ಮಾಹಿತಿಯಲ್ಲಿ ಕೆಳಕಂಡಂತೆ ನಾಲ್ಕು ವಿಧಗಳಿವೆ:
ಎ) ದಾಖಲೆಗಳ ಪರಿವೀಕ್ಷಣೆ 
ಬಿ) ಗುರುತಿಸಿಕೊಂಡ ಮತ್ತು ಮಾಹಿತಿಗಳ ದೃಢೀಕೃತ ನಕಲು ಪ್ರತಿಗಳನ್ನು ಪಡೆಯುವುದು 
ಸಿ) ನಮೂನೆಗಳನ್ನು ಪಡೆಯುವುದು 
ಡಿ) ಎಲೆಕ್ಟ್ರಾನಿಕ್ ಮಾಧ್ಯಮದ ಮುಖಾಂತರ ಮಾಹಿತಿ ಪಡೆಯುವುದು

ಅರ್ಜಿ ಹಾಕುವುದು ಹೇಗೆ?
ಪ್ರಕಟಣೆಗಳ ಮುಖಾಂತರ ಮಾಹಿತಿ ಪಡೆಯುವುದು ಮತ್ತು ಅಥವಾ ಅರ್ಜಿಗಳನ್ನು ಹಾಕಿ ಮಾಹಿತಿ ಪಡೆಯಬಹುದು. ಮಾಹಿತಿ ಪಡೆಯಲು ಇಚ್ಛಿಸುವವರು ಎ.ಐ.ಐ.ಎಸ್.ಎಚ್. ಸಂಸ್ಥೆಯ ಕ್ಯಾಷ್ ಕೌಂಟರ್ ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯಲ್ಲಿ ಲಿಖಿತ ಬೇಡಿಕೆಯನ್ನು ಸಲ್ಲಿಸಬೇಕು. 
ಅರ್ಜಿ ಶುಲ್ಕ
೧೦ ರೂ. ಶುಲ್ಕವನ್ನು ನಗದಾಗಿ, ಬೇಡಿಕೆ ಹುಂಡಿ ಅಥವಾ ಬ್ಯಾಂಕರ್ಸ್ ಚೆಕ್ ಮೂಲಕ ಪ್ರತಿ ಅರ್ಜಿಗೂ ಸಲ್ಲಿಸಬೇಕು. 

ಅರ್ಜಿಯನ್ನು ಯಾರಿಗೆ ಕಳುಹಿಸಬೇಕು? 
ಭರ್ತಿ ಮಾಡಿದ ಅರ್ಜಿಗಳನ್ನು Dr.H.Sundararaju,Professor, ಇ.ಎನ್.ಟಿ. ವಿಭಾಗ, ಎ.ಐ.ಐ.ಎಸ್.ಎಚ್., ಮಾನಸಗಂಗೋತ್ರಿ, ಮೈಸೂರು - ೬. ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು. 

ಮಾಹಿತಿಯ ಶುಲ್ಕ ಎಷ್ಟು? 
ಪುಟಕ್ಕೆ (ಎ೪ ಅಥವಾ ಎ೩ ಅಳತೆ) ರೂ. ೨/- ರಂತೆ ದೊಡ್ಡ ಗಾತ್ರದ ಪುಟಗಳಿಗೆ ಯಥಾರ್ಥ ಬೆಲೆ ತೆಗೆದುಕೊಳ್ಳಲಾಗುತ್ತದೆ. 
ಡಿಸ್ಕ್ ಅಥವಾ ಫ್ಲಾಪಿಯಲ್ಲಿ (ಮಾಹಿತಿಯು ಈ ರೂಪದಲ್ಲಿ ಇದ್ದರೆ) ಮಾಹಿತಿಯನ್ನು ಪಡೆದರೆ ಒಂದು ಡಿಸ್ಕ್ ಅಥವಾ ಫ್ಲಾಪಿಗೆ ರೂ. ೫೦/- ರಂತೆ ಬೆಲೆ ತೆಗೆದುಕೊಳ್ಳಲಾಗುತ್ತದೆ. 
ದಾಖಲೆಗಳ ಪರಿವೀಕ್ಷಣೆ 
ಮೊದಲ ಒಂದು ಗಂಟೆಗೆ ಶುಲ್ಕವಿಲ್ಲ ನಂತರ ಪ್ರತಿ ಹದಿನೈದು ನಿಮಿಷಕ್ಕೆ ರೂ. ೧೫/- ರಂತೆ ಬೆಲೆ ತೆಗೆದುಕೊಳ್ಳಲಾಗುತ್ತದೆ. 

ಸಮಯಮಿತಿ ಎಷ್ಟು?
ಸಿ.ಪಿ.ಐ.ಒ. ರವರಿಗೆ ಬೇಡಿಕೆ ಬಂದ ದಿನಾಂಕದಿಂದ ಮಾಹಿತಿಯನ್ನು ಕೊಡುವುದಕ್ಕೆ ೩೦ ದಿನಗಳ ಕಾಲಮಿತಿ ಇದೆ. ಮಾಹಿತಿ ರವಾನೆ ಮಾಡಿದ ಮತ್ತು ಶುಲ್ಕ ಪಾವತಿಸಿದ ನಡುವೆ ಬರುವ ದಿನಗಳನ್ನು ಇದರಿಂದ ಹೊರತುಪಡಿಸಿದೆ. 
ಒಬ್ಬ ವ್ಯಕ್ತಿಯ ಜೀವಕ್ಕೆ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮಾಹಿತಿಯಾದರೆ ೪೮ ಗಂಟೆಗಳ ಕಾಲದಲ್ಲಿ ಮಾಹಿತಿ ನೀಡಲಾಗುತ್ತದೆ.
ನಿಗದಿಪಡಿಸಿದ ಸಮಯದಲ್ಲಿ ಯಾವುದೇ ಉತ್ತರ ಅಥವಾ ಮಾಹಿತಿಯನ್ನು ಪಡೆಯದಿದ್ದಲ್ಲಿ ಬೇಡಿಕೆಯು ತಿರಸ್ಕೃತವಾಗಿದೆ ಎಂದು ಅರ್ಥ.

ಅರಿಕೆಮಾಡುವುದು ಹೇಗೆ? / ಅಪೀಲು ಮಾಡುವುದು ಹೇಗೆ? 
ಯಾವುದೇ ವ್ಯಕ್ತಿಗೆ ನಿಶ್ಚಿತ ಅವಧಿಯಲ್ಲಿ ತೀರ್ಮಾನವು ಬರದಿದ್ದಲ್ಲಿ ಅಥವಾ ಸಿ.ಪಿ.ಐ.ಒ. ತೀರ್ಮಾನದಿಂದ ದುಃಖಿತರಾಗಿದ್ದಲ್ಲಿ, ತೀರ್ಮಾನವನ್ನು ಪಡೆದ ದಿನಾಂಕದಿಮ್ದ ೩೦ ದಿನಗಳ ಒಳಗೆ ಮೇಲಿನ ಅಧಿಕಾರಿಗಳಿಗೆ ಅರಿಕೆ ಮಾಡಿಕೊಳ್ಳಬಹುದು. ಮೊದಲ ಅಪೀಲುವಾದಿಯವರು Dr.S.R.Savithri, ನಿರ್ದೇಶಕರು, ಎ.ಐ.ಐ.ಎಸ್.ಎಚ್., ಮೈಸೂರು.
ಮೊದಲ ಅಪೀಲುವಾದಿಯವರು ಕೊಟ್ಟ ತೀರ್ಮಾನದ ಮೇಲೆ ತೀರ್ಮಾನ ಪಡೆದ ದಿನಾಂಕದಿಂದ ೯೦ ದಿನಗಳ ಒಳಗೆ ಎರಡನೇ ಅಪೀಲನ್ನು ಕೇಂದ್ರ ಮಾಹಿತಿ ನಿಯೋಗ, ಬ್ಲಾಕ್ ನಂ. ೪, ೫ನೇ ಮಹಡಿ, ಹಳೇ ಜೆ.ಎನ್.ಯು. ಸಂಕೀರ್ಣ, ನವದೆಹಲಿ - ೧೧೦೦೬೭.
ಕೋರ್ಟುಗಳ ನ್ಯಾಯಪ್ರಭುತ್ವದ ಅಧಿಕಾರದ ವ್ಯಾಪ್ತಿ 
ಭಾರತ ಸಂವಿಧಾನದ ಸೆಕ್ಷನ್ ೨೨೫ ಮತ್ತು ೩೨ರನ್ವಯ ಉಚ್ಛನ್ಯಾಯಾಲಯಗಳು ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ’ಮಾಹಿತಿ ಹಕ್ಕು ನಿಯಮ ೨೦೦೫’ ರ ಮೇಲೆ ಅಧಿಕಾರವನ್ನು ಹೊಂದಿದೆ.

ದೂರವಾಣಿ ಸಂಖ್ಯೆಗಳ ಕೈಪಿಡಿ

ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳು

1 ಸ್ವಾಗತ ಕಛೇರಿ 13 ಕ್ಲಿನಿಕಲ್ ಸೈಕಾಲಜಿ ವಿಭಾಗ
2 ನಿರ್ದೇಶಕರ ಕಛೇರಿ 14 ಕ್ಲಿನಿಕಲ್ ಸೇವೆಗಳ ವಿಭಾಗ
3 ಆಡಳಿತ ಕಛೇರಿ 15 ಎಲೆಕ್ಟ್ರಾನಿಕ್ಸ್ ವಿಭಾಗ
4 ಸಹ ವಿಭಾಗಗಳು 16 ಮೆಟೀರಿಯಲ್ ಡೆವೆಲಪ್ ಮೆಂಟ್ ವಿಭಾಗ
5 ಮಹಿಳಾ ವಿದ್ಯಾರ್ಥಿನಿಲಯ 17 ಇ.ಎನ್.ಟಿ. ವಿಭಾಗ
6 ಅತಿಥಿ ಗೃಹ 18 ವಿಶೇಷ ಶಿಕ್ಷಣ ವಿಭಾಗ
7 ಮನೆಗಳ ದೂರವಾಣಿ ಸಂಖ್ಯೆಗಳು 19 ಸ್ಪೀಚ್ ಸೈನ್ಸ್ ವಿಭಾಗ
8 ರಕ್ಷಣೆ 20 ಸ್ಪೀಚ್ ಪೆಥಾಲಜಿ ವಿಭಾಗ
9 ಹೊಸ ಗ್ರಂಥಾಲಯ ಕಟ್ಟಡ 21 ಪಿ.ಒ.ಸಿ.ಡಿ. ವಿಭಾಗ
10 ಇಂಜಿನೀರಿಂಗ್ ವಿಭಾಗ 22 ಸಿ.ಆರ್.ಇ.ಡಿ.ಎಂ. ವಿಭಾಗ
11 ಶೈಕ್ಷಣಿಕ ವಿಭಾಗ 23 ಡಿ.ಎಚ್.ಎಲ್.ಎಸ್. ವಿಭಾಗ
12 ಆಡಿಯಾಲಜಿ ವಿಭಾಗ 24 ಡೌನ್ ಲೋಡುಗಳು ದೂರವಾಣಿ ಸಂಖ್ಯೆಗಳ ಕೈಪಿಡಿ
ಸಂಖ್ಯೆ. ಕಾರ್ಯಕ್ರಮದ ಹೆಸರು
1 ಆಡಿಯೋಮೀಟರ್ / ಆಡಿಯೋಗ್ರಾಮ್
2 ಆಡಿಯಾಲಾಜಿಕಲ್ ಟೆಸ್ಟ್ಸ್
3 ಬೇಸಿಕ್ ಅನಾಟಮಿ ಆಂಡ್ ಫಿಸಿಯಾಲಜಿ ಆಫ್ ದಿ ಆಡಿಟರಿ ಸಿಸ್ಟಮ್
4 ಇಮಿಟ್ಟೆನ್ಸ್ ಇವ್ಯಾಲುಯೇಷನ್
5 ಇವೋಕ್ಡ್ ರಿಪೋಸ್ ಆಡಿಯೋಮೆಟ್ರಿ
6 ಇನ್ಸರ್ಷನ್ ಗೈನ್ ಮೆಷರ್ಮೆಂಟ್
7 ಆಡಿಟರಿ ಟ್ರೈನಿಂಗ್ / ಲರ್ನಿಂಗ್
8 ಸ್ಪೀಚ್ ರೀಡಿಂಗ್ / ಕಮ್ಯೂನಿಕೇಷನ್ ಟ್ರೈನಿಂಗ್
9 ಸೆಟ್ಟಿಂಗ್ ಅಪ್ ಕ್ಲಾಸ್ ರೂಂಸ್ ಫಾರ್ ದ ಹಿಯರಿಂಗ್ ಇಂಪೇರ್ಡ್
10 ಹಿಯರಿಂಗ್ ಏಡ್ಸ್
11 ಕೊಸಸ್ ಆಫ್ ಹಿಯರಿಂಗ್ ಲಾಸ್
12 ಅಸಿಸ್ಟಿವ್ ಲಿಸನಿಂಗ್ ಡೆವೈಸಸ್
13 ಹಿಯರಿಂಗ್ ಏಡ್ ಕೇರ್ ಆಂಡ್ ಟ್ರಬಲ್ ಶೂಟಿಂಗ್
14 ಮೈನ್ ಸ್ಟ್ರೀಮಿಂಗ್ ದ ಹಿಯರಿಂಗ್ ಇಂಪೇರ್ಡ್
15 ಇಯರ್ಮೊಲ್ಡ್ ಆಂಡ್ ಇಟ್ಸ್ ಮೊಡಿಫಿಕೇಷನ್ಸ್
16 ಎಲೆಕ್ಟ್ರೋ ಅಕೌಸ್ಟಿಕ್ ಮೆಷರ್ಮೆಂಟ್ಸ್ ಆಫ್ ಹಿಯರಿಂಗ್ ಏಡ್ಸ್
17 ಅರ್ಲಿ ಐಡೆಂಟಿಫಿಕೇಷನ್ ಆಫ್ ಹಿಯರಿಂಗ್ ಡಿಸಾರ್ಡರ್ಸ್
18 ಎಲೆಕ್ಟ್ರೊ ಫಿಸಿಯೊಲಾಜಿಕಲ್ ಮೆಷರ್ಸ್ ಆಫ್ ದ ಇಯರ್
19 ಹಿಯರಿಂಗ್ ಏಡ್ಸ್ ಆಂಡ್ ಔರಲ್ ರಿಹ್ಯಾಬಿಲಿಟೇಷನ್
20 ಆಡಿಯೋ ವಿಷುಯಲ್ ಕೋರ್ಸ್ ಇನ್ ನೋಯ್ಸ್ ಮೆಷರ್ಮೆಂಟ್ ಆಂಡ್ ಹಿಯರಿಂಗ್ ಕನ್ಸರ್ವೇಷ

ಮೂಲ : ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate