ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ
ಇದನ್ನು 1982 ರಲ್ಲಿ ಪ್ರಾರಂಭಿಸಲಾಯಿತು. ದೇಶದಲ್ಲಿ ಮಾನಸಿಕ ಅನಾರೋಗ್ಯದ ಪ್ರಮಾಣ ಹಾಗೂ ಭಾರತದಲ್ಲಿ ಸಂಪನ್ಮೂಲ ಮತ್ತು ತರಬೇತಿ ಹೊಂದಿರುವ ಸಿಬ್ಬಂಧಿಯ ಅಭ್ಯತೆಯನ್ನು ಗಮನಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ (ಎನ್.ಎಂ.ಹೆಚ್.ಪಿ) ಯಲ್ಲಿ ಮೂರು ಅಂಶಗಳಿವೆ:
- ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ
- ಪುನರ್ವಸತಿ
- ತಡೆಗಟ್ಟುವಿಕೆ ಮತ್ತು ಸಕಾರಾತ್ಮಕ ಮಾನಸಿಕ ಆರೋಗ್ಯಕ್ಕೆ ಪ್ರೋತ್ಸಾಹ
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ – ಡಿ.ಎಂ.ಹೆಚ್.ಪಿ
ಕೇಂದ್ರ ಸರ್ಕಾರವು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (ಡಿ.ಎಂ.ಹೆಚ್.ಪಿ) ವನ್ನು ಅನುಷ್ಠಾನದ ಮೊದಲನೆ ಐದು ವರ್ಷಗಳಿಗೆ 100% ಕೇಂದ್ರೀಯ ಪ್ರಾಯೋಜಕತ್ವ ಯೋಜನೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಅನುಷ್ಠಾನ ಮಾಡಿತು. ಈ ಯೋಜನೆಯನ್ನು ಪ್ರಾಯೋಗಿಕ ಯೋಜನೆಯಾಗಿ 1996-97 ರ ಸಮಯದಲ್ಲಿ 09 ನೇ ಯೋಜನೆಯಲ್ಲಿ ಅನುಷ್ಠಾನ ಮಾಡಲಾಗಿದೆ.
ಉದ್ದೇಶ
- ಸಮುದಾಯಕ್ಕೆ ಮೂಲ ಸುಸ್ಥಿರ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಮತ್ತು ಈ ಸೇವೆಗಳನ್ನು ಇತರೆ ಆರೋಗ್ಯ ಸೇವೆಗಳೊಂದಿಗೆ ಸಮಗ್ರಗೊಳಿಸುವುದು.
- ಸಮುದಾಯದಲ್ಲಿಯೆ ರೋಗಿಗಳ ಮುಂಚಿತ / ಆರಂಭಿಕ ಪತ್ತೆ ಮತ್ತು ಚಿಕಿತ್ಸೆ.
- ಸಾರ್ವಜನಿಕ ಅರಿವು ಮೂಲಕ ಮಾನಸಿಕ ರೋಗಗಳತ್ತ ಕಳಂಕವನ್ನು ಕಡೆಮೆ ಮಾಡುವುದು.
- ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮತ್ತು ಅವರಿಗೆ ಸಮುದಾಯದೊಂದಿಗೆ ಪುನರ್ವಸತಿ ಕಲ್ಪಿಸುವುದು.
ಸೇವೆಗಳು
ಜಿಲ್ಲಾ ಮಾನಸಿಕ ಆರೋಗ್ಯ ತಂಡವು ಮಾಸನಿಕ ರೋಗಿ ಹಾಗೂ ಆತ / ಆಕೆ ಯ ಕುಟುಂಬದವರಿಗೆ ಕೆಳಗಿನ ಸೇವೆಗಳನ್ನು ಒದಗಿಸುವುದು:
- ಪ್ರತಿದಿನ ಹೊರ ರೋಗಿಗಳ (ಓ.ಪಿ.ಡಿ) ಸೇವೆಗಳು
- ಹತ್ತು ಹಾಸಿಗೆವುಳ್ಳ ಒಳ ರೋಗಿಗಳ (ಐ.ಪಿ.ಡಿ) ಸೇವೆಗಳ ಸೌಲಭ್ಯ
- ರೆಫರಲ್ ಸೇವೆ
- ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಹೆಚ್.ಸಿ) ದೊಂದಿಗೆ ಸಂಪರ್ಕ ಸ್ಥಾಪಿಸುವುದು
- ಅನುಸರಣೆ ಸೇವೆಯನ್ನು ಒದಗಿಸುವುದು
- ಉಪಯುಕ್ತವೆನಿಸಿದರೆ ಸಮುದಾಯ ಸಮೀಕ್ಷೆ ಮಾಡುವುದು
- ಸಮುದಾಯದಲ್ಲಿ ಅರಿವು ಮೂಡಿಸುವುದರ ಮೂಲಕ ಮಾನಸಿಕ ರೋಗಗಳತ್ತ ಕಳಂಕವನ್ನು ಹೋಗಲಾಡಿಸುವುದು
ಕೊನೆಯ ಮಾರ್ಪಾಟು : 5/28/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.