ಮಾನಸಿಕ ಆರೋಗ್ಯ ಎಂದರೇನು?
ಆರೋಗ್ಯವು ದೇಶದ ಅಭಿವೃದ್ಧಿಗೆ ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯು (WHO ) " ಆರೋಗ್ಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿ, ಅದು ಬರಿ ರೋಗ ರಹಿತ ಅಥವ ದುರ್ಬಲತೆ ರಹಿತ ಸ್ಥಿತಿ ಅಲ್ಲ " ಎಂದು ನಿರೂಪಿಸಿದೆ. WHO ಹೇಳುವಂತೆ ಮಾನಸಿಕ ಆರೋಗ್ಯ ಎಂದರೆ ಆ ಸ್ಥಿತಿಯಲ್ಲಿ ವ್ಯಕ್ತಿಯು ತನ್ನ ಸಾಮರ್ಥ್ಯವನ್ನು ಅರಿತು, ಜೀವನದ ಸಾಮಾನ್ಯ ಒತ್ತಡಗಳನ್ನು ನಿಭಾಯಿಸಿ, ಉತ್ಪಾದಕತೆಯಿಂದ ಉದ್ಯೋಗ ಮಾಡುವುದು ಮತ್ತು ಸಮುದಾಯಕ್ಕೆ ಕೊಡುಗೆ ನೀಡುವುದು. ಈ ಧನಾತ್ಮಕ ಅರ್ಥದಲ್ಲಿ, ಮಾನಸಿಕ ಆರೋಗ್ಯವು ವ್ಯಕ್ತಿಯ ಸುಸ್ಥಿತಿ ಮತ್ತು ಸಮುದಾಯದ ಪರಿಣಾಮಕಾರಿ ಕಾರ್ಯ ನಿರ್ವಹಣೆಯಾಗಿದೆ.
ಮಾನಸಿಕ ಆರೋಗ್ಯವು ಕೆಳಗಿವುಗಳ ಮೇಲೆ ಪರಿಣಾಮ ಬೀರುವವು -
- ಶೈಕ್ಷಣಿಕ ಫಲಿತ
- ಉದ್ಯೋಗದಲ್ಲಿ ಉತ್ಪಾದಕತೆ
- ಧನಾತ್ಮಕ ವೈಯಕ್ತಿಕ ಸಂಬಂಧಗಳ ಬೆಳವಣಿಗೆ
- ಅಪರಾಧ ದರ
- ಮದ್ಯ ಮತ್ತು ಮಾದಕ ದ್ರವ್ಯಗಳ ಬಳಕೆ
ಮಾನಸಿಕ ಆರೋಗ್ಯವು ಏಕೆ ಮುಖ್ಯ ?
ವಿಶ್ವದಲ್ಲಿ 450 ಮಿಲಿಯನ್‌ಗೂ ಮಿಗಿಲಾದ ಸಂಖ್ಯೆಯ ಜನರು ಮಾನಸಿಕ ಅನಾರೋಗ್ಯದಿಂದ ನರಳುತ್ತಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 2020 ಇಸ್ವಿಯ ಹೊತ್ತಿಗೆ ಪ್ರಪಂಚದ ಎರಡನೆ ಅತಿ ದೊಡ್ಡ ರೋಗ ಎಂದರೆ ಖಿನ್ನತೆಯೆ ಆಗುವುದು (ಮುರ್ರೆ & ಲೊಪೆಜ್, 1996). ಪ್ರಪಂಚದಲ್ಲಿನ ಮಾನಸಿಕ ಆರೋಗ್ಯ ನಿರ್ವಹಣೆಯ ಸಾಮಾಜಿಕ ಮತ್ತು ಆರ್ಥಿಕ ಹೊರೆಯು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳು ಚಿಕಿತ್ಸೆ ನೀಡಲು ಶಕ್ತವಾಗದಷ್ಟು ಇದೆ. ಮಾನಸಿಕ ಆರೋಗ್ಯವನ್ನು ಉತ್ತೇಜಿಸಿ ಜತೆಗೆ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದರ ಕಡೆ ಗಮನ ಹರಿಸಬೇಕಿದೆ. ಮಾನಸಿಕ ಆರೋಗ್ಯವು ವ್ಯಕ್ತಿಯ ವರ್ತನೆಯ ಜತೆ ಗಾಢ ಸಂಬಂಧ ಹೊಂದಿದೆ ಮತ್ತು ದೈಹಿಕ ಆರೋಗ್ಯ ಮತ್ತು ಜೀವನದ ಗುಣ ಮಟ್ಟಕ್ಕೆ ಮೂಲಕಾರಣ ವಾಗಿದೆ.
- ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯದ ಜತೆ ಗಾಢ ಸಂಬಂಧ ಹೊಂದಿದೆ. ಮತ್ತು ಖಿನ್ನತೆಯು ಹೃದಯ ಮತ್ತು ರಕ್ತನಾಳಗಳ ರೋಗಗಳಿಗೆ ಕಾರಣ ಎಂಬುದು ಅನುಮಾನಕ್ಕೆ ಅವಕಾಶವಿಲ್ಲದಂತೆ ಸಿದ್ದವಾಗಿದೆ.
- ಮಾನಸಿಕ ಅವ್ಯವಸ್ಥೆಯು ವೈಯುಕ್ತಿಕ ಆರೋಗ್ಯಪೂರ್ಣ ವರ್ತನೆಗಳಾದ ಸೂಕ್ತ ಆಹಾರ ಸೇವನೆ, ಸಕ್ರಮ ವ್ಯಾಯಾಮ ,ಸಾಕಷ್ಟು ನಿದ್ರೆ, ಲೈಂಗಿಕಕ್ರಿಯೆಯಲ್ಲಿ ಭಾಗವಹಿಸುವಿಕೆ ,ಮದ್ಯ ಮತ್ತು ತಂಬಾಕು ಬಳಕೆ , ವೈದ್ಯಕೀಯ ಚಿಕಿತ್ಸೆಗೆ ಒಳಗಾದರೆ ದೈಹಿಕ ಅನಾರೋಗ್ಯಕ್ಕೆ ಕಾರಣವಾಗಬಹುದು.
- ಮಾನಸಿಕ ಅನಾರೋಗ್ಯವು ಸಾಮಾಜಿಕ ಸಮಸ್ಯೆಗಳಾದ ನಿರುದ್ಯೋಗ, ಒಡೆದ ಕುಟುಂಬ, ಬಡತನ, ಮಾದಕ ದ್ರವ್ಯಗಳ ಬಳಕೆ ಮತ್ತು ಸಂಬಂಧಿಸಿದ ಅಪರಾಧಗಳಿಗೆ ಕಾರಣವಾಗಬಹುದು.
- ದುರ್ಬಲ ಮಾನಸಿಕ ಆರೋಗ್ಯವು ರೋಗ ನಿರೋಧತೆಯನ್ನು ಕುಗ್ಗಿಸುವುದು.
- ಮಾನಸಿಕ ಅನಾರೋಗ್ಯದವರು ಖಿನ್ನತೆ ಇದ್ದರೆ ಇತರರಿಗಿಂತ ಹೆಚ್ಚು ತೊಂದರೆಗೆ ಒಳಗಾಗುವರು.
- ದೀರ್ಘ ಕಾಲೀನ ರೋಗಗಳಾದ ಮಧು ಮೇಹ, ಕ್ಯಾನ್ಸರ್, ಹೃದಯ ಬೇನೆಗಳು ಖಿನ್ನತೆಯಿಂದ ಉಲ್ಬಣಗೊಳ್ಳುವವು.
ಅನುಷ್ಠಾನಮಾಡಲು ಇರುವ ತೊಂದರೆಗಳು ಯಾವುವು?
ಮಾನಸಿಕ ಕಾಯಿಲೆಗೆ ಅಂಟಿರುವ ಕಳಂಕದಿಂದ ಸಮಾಜವು ಶಿಕ್ಷಣ, ಉದ್ಯೋಗ, ವಿವಾಹ, ಇತ್ಯಾದಿಗಳಲ್ಲಿ ರೋಗಿಗಳಿಗೆ ತಾರತಮ್ಯ ತೋರುವುದು. ಇದರಿಂದ ವೈದ್ಯಕೀಯ ಸಲಹೆ ಪಡೆಯುವುದು ತಡವಾಗುವುದು. ಮಾನಸಿಕ ಆರೋಗ್ಯ ಮತ್ತು ರೋಗದ ಪರಿಕಲ್ಪನೆಯೆ ಅಸ್ಪಷ್ಟವಾಗಿರುವುದರಿಂದ ನಿಗದಿತ ಗುಣಲಕ್ಷಣಗಳ ಅಭಾವದಿಂದ ರೋಗ ಪತ್ತೆ ಮಾಡುವಲ್ಲಿ ಗೊಂದಲವಾಗುವುದು.
- ಜನರು ಮಾನಸಿಕ ರೋಗವು ದುರ್ಬಲ ಮನಸ್ಕರಿಗೆ ಮತ್ತು ಭೂತದೆವ್ವಗಳಿಂದ ಬರುವುದು ಎಂದುಕೊಂಡಿರುವರು
- ಅನೇಕರು ಮಾನಸಿಕ ರೋಗವು ಗುಣವಾಗುವುದೆ ಇಲ್ಲ ಮತ್ತು ಅದರ ಚಿಕಿತ್ಸೆ ವ್ಯರ್ಥ ಎಂದು ಭಾವಿಸಿದ್ದಾರೆ
- ರೋಗ ತಡೆಗಟ್ಟುವ ಕ್ರಮಗಳು ಯಶಸ್ವಿಯಾಗುವುದಿಲ್ಲ ಎಂದು ಅನೇಕರ ಭಾವನೆ
- ಅನೇಕರಿಗೆ ಮಾನಸಿಕ ರೋಗಕ್ಕೆ ಔಷಧಿ ತೆಗೆದುಕೊಂಡರೆ ಅನೇಕ ಅಡ್ಡ ಪರಿಣಾಮಗಳಾಗುವವು ಮತ್ತು ಚಟ ಬೆಳೆಯುವುದು, ಅದರಿಂದ ಬರಿ ನಿದ್ರೆ ಬರುವುದು ಎಂಬ ನಂಬಿಕೆ ಇದೆ.
- ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಮಾನಸಿಕ ರೋಗದ ಸಮಸ್ಯೆಯ ಹೊರೆ ಮತ್ತು ಅದನ್ನು ತಡೆಯುವ ಮತ್ತು ಚಿಕಿತ್ಸೆಕೊಡಲು ಬೇಕಾದ ಸಂಪನ್ಮೂಲಗಳ ನಡುವೆ ಅಪಾರ ಅಂತರವಿದೆ ಎಂದು ತೋರಿಸುತ್ತವೆ.
- ಇತ್ತೀಚಿನ ವರೆಗೆ ಪ್ರಪಂಚದ ಹೆಚ್ಚು ಭಾಗದಲ್ಲಿ ಮಾನಸಿಕ ರೋಗದ ಚಿಕಿತ್ಸೆಯು ಸಾಮಾನ್ಯ ರೋಗದ ಚಿಕಿತ್ಸೆ ಮತ್ತು ಆರೋಗ್ಯ ರಕ್ಷಣೆಗೆ ಹೊರತಾಗಿದ್ದಿತು
- ಎಲ್ಲ ಮಾನಸಿಕ ರೋಗಿಗಳು ಮತ್ತು ಅವರ ಕುಟುಂಬಗಳು ಒಂದು ಗುಂಪಾಗಿ ಒತ್ತಡಹಾಕುವಲ್ಲಿ ವಿಫಲರಾಗಿದ್ದಾರೆ. ಕಾರಣ ಸಾಮಾಜಿಕ ಕಳಂಕ ಮತ್ತು ತಮ್ಮ ಹಕ್ಕುಗಳ ಬಗೆಗಿನ ಅರಿವಿನ ಅಭಾವ
- ಸರಕಾರೇತರ ಸಂಘಟನೆಗಳು ಕೂಡಾ (NGO) ಈ ವಲಯವನ್ನು ಅತಿ ಕಠಿನ ಎಂದು ಕೊಂಡಿವೆ. ಇದಕ್ಕೆ ದೂರಗಾಮಿ ಸಮರ್ಪಣೆ ಅಗತ್ಯ. ಅವರಿಗೂ ಮಾನಸಿಕ ವಿಕಲತೆ ಹೊಂದಿದವರ ಜತೆ ವ್ಯವಹರಿಸಲು ಭಯ
ಮಾನಸಿಕ ಅನಾರೋಗ್ಯದ ಕಾರಣ ಏನು?
ಜೈವಿಕ ಅಂಶಗಳು :
- ನ್ಯೂರೋ ಟ್ರಾನ್ಸಮಿ:ಮಾನಸಿಕ ಅನಾರೋಗ್ಯವು ಮೆದುಳಿನಲ್ಲಿ ಇರುವ ನ್ಯುರೊಟ್ರಾನ್ಸಮಿಟರ್ಸ ಎಂಬ ವಿಶೇಷವಾದ ರಾಸಾಯನಿಕದ ಅಸಹಜವಾದ ಸಮತೋಲನದಿಂದ ಉಂಟಾಗುವುದು. ನ್ಯುರೊಟ್ರಾನ್ಸಮಿಟರ್ಸಗಳು ಮೆದುಳಿನಲ್ಲಿನ ನರಕೋಶಗಳ ಪರಸ್ಪರ ಸಂವಹನಕ್ಕೆ ಕಾರಣವಾಗಿವೆ. ಈ ರಾಸಾಯನಿಕಗಳ ಸಮತೋಲನವು ತಪ್ಪಿದರೆ, ಇಲ್ಲವೆ ಸರಿಯಾಗಿ ಕೆಲಸ ಮಾಡದಿದ್ದರೆ ಸಂದೇಶವನ್ನು ಅವು ಮೆದುಳಿಗೆ ಸರಿಯಾಗಿ ಮುಟ್ಟಿಸಲಾರವು. ಅದರಿಂದ ಮಾನಸಿಕ ಅಸ್ವಸ್ಥತೆ ಉಂಟಾಗುವುದು.
- ವಂಶವಾಹಿನಿಗಳು- (ಅನುವಂಶೀಯತೆ): ಅನೇಕ ಮಾನಸಿಕ ರೋಗಗಳು ವಂಶಾನುಗತವಾಗಿರುವವು. ಅದರ ಪ್ರಕಾರ ಕುಟುಂಬದಲ್ಲಿ ಯಾರಾದರೂ ಮಾನಸಿಕ ಅಸ್ವಸ್ಥ ರಿದ್ದರೆ ಆ ಕುಟುಂಬದ ಇತರ ಸದಸ್ಯರಿಗೂ ಮಾನಸಿಕ ಅನಾರೋಗ್ಯ ಉಂಟಾಗುವ ಸಂಭವ ಇದೆ. ವಂಶವಾಹಿನಿಗಳ ಮೂಲಕ ರೋಗ ಸಂಭವನೀಯತೆಯು ಮುಂದೆ ಸಾಗಿಸಲ್ಪಪಡುವುದು. ತಜ್ಞರ ಪ್ರಕಾರ ಅನೇಕ ರೀತಿಯ ಮಾನಸಿಕ ಅನಾರೋಗ್ಯ ವಂಶವಾಹಿನಿಗಳ ಅಸಹಜತೆಯಿಂದಾಗಿಯೇ ಉಂಟಾಗುತ್ತವೆ. ಆದುದರಿಂದಲೇ ವ್ಯಕ್ತಿಗೆ ಮಾಸಿಕ ಅನಾರೋಗ್ಯದ ಸಾಧ್ಯತೆಯು ಬಳುವಳಿಯಾಗಿ ಹಿರಿಯರಿಂದ ಬರುವುದು. ತನ್ನಿಂದ ತಾನೆ ಬಾರದು. ಬಹು ವಂಶವಾಹಿನಿಗಳ ಸಂವಹನದಿಂದ ಮತ್ತು ಇತರೆ ಅಂಶಗಳಾದ ಒತ್ತಡ , ದುರ್ಬಳಕೆ, ಆತಂಕಕಾರಿ ಘಟನೆ - ಈ ಅಸ್ವಾಸ್ಥ್ಯವು ವಂಶಾನುಗತವಾಗಿ ಬಂದವನಲ್ಲಿ ಅದು ಮೊದಲಾಗಲು ಇಲ್ಲವೆ ಉಲ್ಬಣವಾಗಲು ಪ್ರಭಾವ ಬೀರಬಹುದು.
- ಕೆಲವು ಸೋಂಕುಗಳು ಮೆದುಳಿನ ಹಾನಿಗೆ ಕಾರಣವಾಗಿವೆ ಮತ್ತು ಮಾನಸಿಕ ಅನಾರೋಗ್ಯವು ಹೆಚ್ಚಾಗಲು ಅಥವಾ ಲಕ್ಷಣಗಳು ತೀವ್ರವಾಗಲು ಕಾರಣ ವಾಗಬಹುದು. ಉದಾಹರಣೆಗೆ , ಮಕ್ಕಳ ಆಟೊ ಇಮ್ಯುನ್ ನ್ಯುರೊ ಸೈಕಿಯಾಟ್ರಿಕ್ ಡಿಸ್‌ಆರ್ಡರ್ (PANDA) ವ್ಯಾಧಿಯು ಸ್ಟ್ರೆಪ್ಟೊ ಕೊಕಸ್ ಬ್ಯಾಕ್ಟೀರಿಯಾದಿಂದ ಬರಬಹುದೆಂದು ತಿಳಿದಿದೆ. ಅದರ ಜೊತೆಗೆ ಅಬ್ಸೆಸ್ಸಿವ್ ಕಂಪಲ್ಷನ್ ಡಿಸ್‌ಆರ್ಡರ್ ಮತ್ತು ಇತರೆ ಮಕ್ಕಳ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದಾಗಿದೆ.
- ಮೆದುಳಿನ ಕೆಲವು ಭಾಗದಲ್ಲಿ ಆಗುವ ದೋಷಗಳು ಅಥವಾ ಗಾಯವು ಕೆಲವು ರೀತಿಯ ಮಾನಸಿಕ ಅನಾರೋಗ್ಯಕ್ಕೆ ಕಾರಣ
ರಾಷ್ಟ್ರೀಯಮಾನಸಿಕ ಆರೋಗ್ಯ ನೀತಿಯು ಕೇವಲ ಮಾನಸಿಕ ಅನಾರೋಗ್ಯಕ್ಕೆ ಮಾತ್ರ ಸೀಮಿತವಾಗಿರಕೂಡದು. ಅದು ಇತರೆ ವಿಸ್ತೃತವಾದ ವಿಷಯಗಳನ್ನು ಗುರುತಿಸಿ ಮತ್ತು ಮಾನಸಿಕಾರೋಗ್ಯಕ್ಕೆ ಉತ್ತೇಜನ ನೀಡುವ ಎಲ್ಲವನ್ನೂ ಪರಿಗಣಿಸಬೇಕು.ಇದರಲ್ಲಿ ಮಾನಸಿಕ ಆರೋಗ್ಯವನ್ನೂ ಸರಕಾರದ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಮುಖ್ಯ ವಾಹಿನಿಯಲ್ಲಿ ಒಂದಾಗಿಸಬೇಕು. ಮತ್ತು ಉದ್ಯಮವಲಯಗಳಾದ ಶಿಕ್ಷಣ, ಕಾರ್ಮಿಕರು, ನ್ಯಾಯಾಂಗ, ಸಾರಿಗೆ, ಪರಿಸರ, ಗೃಹನಿರ್ಮಾಣ. ಸಮಾಜಕಲ್ಯಾಣ ಜತೆಗೆ ಆರೋಗ್ಯ ವಲಯಗಳೂ ಪಾಲುಗೊಳ್ಳಬೇಕು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿ ಕ್ರಿಯೆ?
ವಿಶ್ವ ಆರೋಗ್ಯ ಸಂಸ್ಥೆಯು ಸರಕಾರಗಳಿಗೆ ಮಾನಸಿಕ ಆರೋಗ್ಯ ಬಲ ಪಡಿಸುವ ಮತ್ತು ಸುಧಾರಣೆ ಗುರಿ ತಲುಪಲು ಸಹಾಯ ಮಾಡುವುದು. ವಿಶ್ವ ಆರೋಗ್ಯ ಸಂಸ್ಥೆಯು ಮಾನಸಿಕ ಆರೋಗ್ಯವನ್ನು ಉತ್ತೇಜಿಸಿದ ಸಾಕ್ಷ್ಯಾಧಾರಗಳ ಮೌಲ್ಯ ಮಾಪನ ಮಾಡುವುದು. ಸರಕಾರಗಳ ಜೊತೆಯಲ್ಲಿ ಕೆಲಸಮಾಡುತ್ತಾ ಈ ಮಾಹಿತಿಯನ್ನು ಹರಡಲು ಮತ್ತು ಪರಿಣಾಮಕಾರಿ ತಂತ್ರಗಳನ್ನು ನೀತಿ ನಿಯಮಾವಳಿ ನತ್ತು ಯೋಜನೆಯಲ್ಲಿ ಅಳವಡಿಸಲು ಸಹಾಯ ನೀಡುವುದು.ಶೈಶವದ ಪ್ರಾಂಭದ ಮಧ್ಯ ವರ್ತನೆಗಳು (ಉದಾ: ಗರ್ಭಿಣಿ ಮಹಿಳೆಯರ ಮನೆಗೆ ಭೇಟಿ, ಶಾಲಾ ಪೂರ್ವದ ಮಾನಸಿಕ-ಸಾಮಾಜಿಕ ಚಟುವಟಿಕೆಗಳು, ಪೌಷ್ಟಿಕತೆ ಮತ್ತು ಅನಾನಕೂಲಿತ ಜನರಿಗೆ ಮಾನಸಿಕ-ಸಾಮಾಜಿಕ ಸಹಾಯ).
- ಮಕ್ಕಳಿಗೆ ಬೆಂಬಲ (ಉದಾ: ಕೌಶಲ್ಯ ಕಲಿಸುವ ಕಾರ್ಯಕ್ರಮಗಲು, ಮಕ್ಕಳ ಮತ್ತು ಯುವಕರ ಅಭಿವೃದ್ಧಿ ಕಾರ್ಯಕ್ರಮಗಳು)
- ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಮಸಬಲೀಕರಣ (ಉದಾ: ಶಿಕ್ಷಣ ಮತ್ತು ಕಿರುಸಾಲಕ್ಕೆ ಕಾರ್ಯಕ್ರಮಗಳ ಅವಕಾಶ )
- ವೃದ್ಧರಿಗೆ ಸಾಮಾಜಿಕ ಬೆಂಬಲ (e.g.ಸ್ನೇಹಮಯ ಕ್ರಮಗಳು, ಸಮುದಾಯ ಮತ್ತು ವೃದ್ಧರಿಗೆ ದಿನದ ಆರೈಕೆ ಕೇಂದ್ರಗಳು)
- ದುರ್ಬಲ ವರ್ಗದ ಗುಂಪುಗಳನ್ನು ಗುರಿಯಾಗಿಸಿದ, ಅಲ್ಪ ಸಂಖ್ಯಾತರು, ಮೂಲ ನಿವಾಸಿಗಳು, ವಲಸೆಗಾರರು ಮತ್ತು ಸಂಘರ್ಷ ಹಾಗೂ ವಿಕೋಪಗಳಿಗೆ ಗುರಿಯಾದವರು ಸೇರಿದಂತೆ (ಉದಾ: ವಿಕೋಪದ ನಂತರದ ಮಾನಸಿಕ-ಸಾಮಾಜಿಕ ಮಧ್ಯಪ್ರವೇಶ )
- ಮಾನಸಿಕ ಆರೋಗ್ಯ ಉತ್ತೇಜಿಸುವ ಶಾಲಾ ಕಾರ್ಯಕ್ರಮಗಳು (ಉದಾ: ಶಾಲೆಯಲ್ಲಿ ಪರಿಸರ ಬದಲಾವಣಾ ಕಾರ್ಯಕ್ರಮಗಳು ಮತ್ತು ಮಗು ಸ್ನೇಹಿ ಶಾಲೆಗಳು)
- ಕಾರ್ಯಚಟುವಟಿಕೆಯಲ್ಲಿ ಮಾನಸಿಕಆರೋಗ್ಯ ಮಧ್ಯವರ್ತನೆ( ಒತ್ತಡನಿರ್ವಹಣೆ ಕಾರ್ಯಕ್ರಮಗಳು )
- ಗೃಹ ನೀತಿಗಳೂ (ಉದಾ: ಮನೆ ಸುಧಾರಣೆ)
- ಹಿಂಸೆಯ ತಡೆಗೆ ಕಾರ್ಯಕ್ರಮಗಳು (ಸಮುದಾಯ ಉಸ್ತುವಾರಿ ಕ್ರಮಗಳು); ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು (ಉದಾ: 'ಕಳಕಳಿಯಿರುವ ಸಮುದಾಯ ಪ್ರವರ್ತನೆಗಳು, ಸಮಗ್ರ ಗ್ರಾಮೀಣ ಅಭಿವೃದ್ಧಿ)
ಮೂಲ: ಪೋರ್ಟಲ್ ತಂಡ