ಮಾನಸಿಕ ಅನಾರೋಗ್ಯದ ಲಕ್ಷಣಗಳೇನು ?
ಮಾನಸಿಕ ಅಥವಾ ವರ್ತನೆಯಲ್ಲಿನ ಅವ್ಯವಸ್ಥೆಯು, ಸಾಂಸ್ಕೃತಿಕ ನಂಬುಗೆ ಮತ್ತು ನಿಯಮಗಳಿಗೆ ಅನುಸಾರವಾಗಿರದಂತಹ ಆಲೋಚನೆಗಳು, ಮನೋಧರ್ಮಗಳ ವ್ಯತ್ಯಾಸ ಅಥವಾ ವರ್ತನೆಗಳಲ್ಲಿನ ಬದಲಾವಣೆ ಇವುಗಳನ್ನು ಒಳಗೊಂಡಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅದರ ಲಕ್ಷಣಗಳು ಖಿನ್ನತೆ ಮತ್ತು ವೈಯುಕ್ತಿಕ ಕೆಲಸಕಾರ್ಯಗಳಲ್ಲಿ ಅಡಚಣೆಯಾಗುವಿಕೆಯೊಂದಿಗೆ ಹೊಂದಿಕೊಂಡಿರುತ್ತದೆ.
ಸಂವೇದನೆಯ ಸಮಸ್ಯೆ
- ಏಕಾಗ್ರತೆಯ ತೊಂದರೆ, ಮತ್ತು ಸುಲಭವಾಗಿ ಗಲಿಬಿಲಿಯಾಗುವುದು.
- ಮಾಹಿತಿಯ ನೆನಪಿರದಿರುವುದು.
- ಮಾಹಿತಿಯ ಪ್ರಕ್ರಿಯೆ ನಿದಾನ ಮತ್ತು ಗೊಂದಲಮಯ.
- ಸಮಸ್ಯೆಯ ಪರಿಹಾರಕ್ಕೆ ಬಹು ಕಷ್ಟ ಪಡಬೇಕು.
- ಅಮೂರ್ತ ಆಲೋಚನೆ ಮಾಡಲಾಗದು.
ಆಲೋಚನಾ ಸಮಸ್ಯೆಗಳು
- ಯೋಚನೆಗಳು ಅತಿ ವೇಗ ಮತ್ತು ಅತಿ ನಿಧಾನವಾದಂತೆ ಭಾಸವಾಗುವುದು
- ಯೋಚನೆಗಳು ಒಂದು ವಿಷಯದಿಂದ ಇನ್ನೊಂದಕ್ಕೆ ಅರ್ಥ ಹೀನವಾಗಿ ಹಾರಾಡುವವು.
- ನಿಘಂಟಿನಲ್ಲೂ ಇಲ್ಲದ ಹೊಸ ಪದಗಳು ಮತ್ತು ಧ್ವನಿಗಳನ್ನು ಬಳಸುವುದು.
- ಹೊರಗಿನ ಪ್ರಭಾವದಿಂದ ಅವನಿಗೆ ಮಾತ್ರ ಸಾದ್ಯವಿರುವ ವಿಚಿತ್ರ ಯೋಚನೆಗಳು, ವರ್ತನೆಗಳು .
ಗ್ರಹಿಕೆಯ ಸಮಸ್ಯೆಗಳು
- ವಿಕೃತ ಗ್ರಹಿಕೆ, ಅಸಮಾನ್ಯವಾದ ದಟ್ಟ ಬಣ್ಣಗಳು ಅಥವಾ ಧ್ವನಿಗಳು.
- ಇಲ್ಲದಿರುವ ಶಬ್ದ ಕೇಳಿಸಿಕೊಳ್ಳುವುದು, ಯಾರೂ ಇಲ್ಲದೆ ಇದ್ದರೂ ತನ್ನಷ್ಟಕ್ಕೆ ತಾನೆ ಮಾತನಾಡಿಕೊಳ್ಳುವುದು, ನಗುವುದು
- ಹಳೆಯ ಪರಿಸ್ಥಿತಿಗಳನ್ನೇ ವಿಚಿತ್ರವಾಗಿ ಹೊಸದಾದವು ಎಂದು ಭಾವಿಸುವುದು.
- ಟಿವಿ, ರೇಡಿಯೋ ಅಥವ ಸಾರ್ವಜನಿಕ ಸಾರಿಗೆಯಲ್ಲಿ ರಹಸ್ಯ ಸಂದೇಶವಿದೆ ಎಂದುಕೊಳ್ಳುವುದು.
ಭಾವನೆಯ ಸಮಸ್ಯೆ
- ಬೆಲೆ ಇಲ್ಲದ, ಭರವಸೆ ಇಲ್ಲದ ನಿಸ್ಸಹಾಯಕ ಭಾವನೆ.
- ಚಕ್ಕಪುಟ್ಟ ವಿಷಯಗಳಿಗೂ ಅಪರಾಧಿ ಭಾವನೆ.
- ಸಾವು ಮತ್ತು ಆತ್ಮಹತ್ಯೆಯ ಬಗ್ಗೆ ಅಸಹಜ ಯೋಚನೆ.
- ಬಹುತೇಕ ಎಲ್ಲ ವಿಷಯಗಳ್ಲೂ ನಿರಾಸಕ್ತಿ ಮತ್ತು ಅಸಂತೋಷ.
- ಸಾಮರ್ಥ್ಯ,ನಿಪುಣತೆ, ಶ್ರೀಮಂತಿಕೆ ಮತ್ತು ರೂಪ-ಇವುಗಳ ಕುರಿತು ಅತಿ ವಿಶ್ವಾಸ ಮತ್ತು ಉಡಾಫೆ.
- ಅತೀವ ಸಾಮರ್ಥ್ಯ ಮತ್ತು ಕಡಿಮೆ ನಿದ್ರೆಯ ಅಗತ್ಯ.
- ಶೀಘ್ರ ಕಿರಿಕಿರಿ ಮತ್ತು ಕೋಪಗೊಳ್ಳುವುದು.
- ಯಾವುದೇ ಪ್ರಚೋದನೆ ಇಲ್ಲದೆ ತೀವ್ರ ಭಾವೋದ್ವೇಗ.
- ಅತಿ ವಿಶ್ವಾಸ ಮತ್ತು ಇತರರಿಗೆ ಹಾನಿ ಮಾಡುವುದು
- ಬಹುತೇಕ ಸಮಯ ಅತಿ ಜಾಗ್ರತೆ ಮತ್ತು ಎಚ್ಚರಿಕೆ.
- ದೈನಂದಿನ ಘಟನೆಗಳ ಬಗ್ಗೆ ಭಯ, ಚಿಂತೆ ಮತ್ತು ಯೋಚನೆ
- ಭಯದಿಂದ ಸಾಮಾನ್ಯ ಚಟುವಟಿಕೆಗಳನ್ನೂ ಮಾಡದಿರುವುದು ( ಬಸ್ಸು ಹಿಡಿಯುವುದು, ಕಿರಾಣಿ ಖರೀದಿ, ಇತ್ಯಾದಿ).
- ಜನರೊಡನೆ ಆರಾಮಾಗಿ ಇರದೆ ಇರುವುದು.
- ಕಡ್ಡಾಯವಾದ ಆಚರಣೆಗಳು ಅಥವಾ ಪುನರಾವರ್ತಿತ ವರ್ತನೆಗಳು.
- ಹಳೆಯ ಘಟನೆಗಳ ಅಸಂಬದ್ಧ ನೆನಪುಗಳು ಅಥವಾ ದುಃಸ್ವಪ್ನಗಳು..
ಸಮಾಜೀಕರಣದ
- ಆತ್ಮೀಯ ಗೆಳೆಯರು ಕಡಿಮೆ.
- ಸಾಮಾಜಿಕ ಸಂದರ್ಭಗಳೆಂದರೆ ಗಾಬರಿ ಮತ್ತು ಭಯ
- ಮಾತು ಮತ್ತು ದೈಹಿಕವಾಗಿ ವರ್ತನೆಯಲ್ಲಿ ಆಕ್ರಮಣ ಶೀಲತೆ
- ಸಂಬಂಧಗಳಲ್ಲಿ ಗೊಂದಲ. ಅತಿ ಟೀಕೆ, ಅತಿ ಗೌರವ
- ಇತರರೊಡನೆ ಬೆರೆಯುವುದು ಕಠಿನ
- ಇತರರನ್ನು ಅರ್ಥ ಮಾಡಿಕೊಳ್ಳುವುದಿಲ್ಲ
- ಅಸಹಜ ಅನುಮಾನ.
ಕಾರ್ಯ ನಿರ್ವಹಣೆಯ ಸಮಸ್ಯೆ
- ಪದೇ ಪದೇ ಕೆಲಸ ಕಳೆದುಕೊಳ್ಳುವನು ಅಥವಾ ಬಿಡುವನು
- ಕಛೇರಿಯಲ್ಲಿ, ಶಾಲೆಯಲ್ಲಿ ಅಥವಾ ಮನೆಯಲ್ಲಿ ಇತರರೊಡನೆ ಹೊಂದಿಕೆ ಇಲ್ಲ
- ಏಕಾಗ್ರತೆ ಅಥವಾ ಪರಿಣಾಮಕಾರಿ ಕೆಲಸ ಸಾಧ್ಯವಿಲ್ಲ
ಮನೆಯಲ್ಲಿ ಸಮಸ್ಯೆ
- ಇತರರ ಅಗತ್ಯಗಳಿಗೆ ಗಮನ ಇಲ್ಲ
- ಮನೆಕೆಲಸ ಮತ್ತು ಇತರೆ ಕಾರ್ಯಗಳ ಕುರಿತು ಅತಿಯಾದ ಆಲಸ್ಯ ಭಾವನೆ
- ಮನೆಗೆಲಸ ಮಾಡಲು ಆಗದಿರುವುದು
- ಕುಟುಂಬದಲ್ಲಿ ನೇರವಾಗಿ ಇಲ್ಲವೆ ಪರೋಕ್ಷವಾಗಿ ಜಗಳವಾಡುವುದು ಇಲ್ಲವೆ ಕಾರಣವಾಗುವುದು
ಸ್ವ ಆರೈಕೆಯ ಸಮಸ್ಯೆ
- ಶುಚಿತ್ವ ಮತ್ತು ಅಲಂಕಾರದ ಬಗ್ಗೆ ಅಸಡ್ಡೆ
- ತಿನ್ನುವುದೇ ಇಲ್ಲ ಅಥವಾ ಅತಿಯಾಗಿ ತಿನ್ನುವುದು
- ನಿದ್ರಾ ಹೀನತೆ, ಅತಿನಿದ್ದೆ ಅಥವಾ ಹಗಲಿನಲ್ಲಿ ನಿದ್ರೆ
- ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ
ದೈಹಿಕ ಲಕ್ಷಣಗಳ ಸಮಸ್ಯೆ
- ವಿವರಣೆಗೆ ಸಿಗದ ದೈಹಿಕ ಲಕ್ಷಣಗಳು
- ಆಗಾಗ ತಲೆನೋವು, ದೇಹದ ನೋವು, ಬೆನ್ನು ನೋವು ಮತ್ತು ಕತ್ತು ನೋವ
- ದೈಹಿಕ ಬಹುಬಾಧೆಗಳು, ಒಂದೇ ಸಲ ಅನೇಕ ಲಕ್ಷಣಗಳು
ಅಭ್ಯಾಸದ ಸಮಸ್ಯೆ
- ದೈನಂದಿನ ಕೆಲಸಗಳಿಗೆ ಅಡ್ಡಿಯಾಗುವ, ಯಾವುದೇ ಅತಿಯಾದ, ಅನಿಯಂತ್ರಿತ ಅಭ್ಯಾಸ
- ಮಾದಕದ್ರವ್ಯ ಮತ್ತು/ಮದ್ಯದ ವ್ಯಸನಿಯಾಗಿರುವುದು
- ಬೆಂಕಿ ಹಚ್ಚಲು ಅನಿಯಂತ್ರಿತ ಆಸೆ
- ಅನಿಯಂತ್ರಿತ ಜೂಜುಕೋರತನ
- ಅನಿಯಂತ್ರಿತ ಖರೀದಿ ಹಂಬಲ
ಮಕ್ಕಳಲ್ಲಿ ಸಮಸ್ಯೆ
- ಮಾದಕದ್ರವ್ಯ ಅಥವಾ ಮದ್ಯದ ವ್ಯಸನಿಯಾಗಿರುವುದು
- ದೈನಂದಿನ ಚಟುವಟಿಕೆ ಮತ್ತು ಸಮಸ್ಯೆ ನಿಭಾಯಿಸಲು ಅಸಮರ್ಥತೆ
- ಆಹಾರ ಮತ್ತು ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆ
- ದೈಹಿಕ ಸಮಸ್ಯೆಗಳ ಬಗ್ಗೆ ಅತಿಯಾದ ದೂರು
- ಅಧಿಕಾರವನ್ನು ಪ್ರಶ್ನಿಸುವುದು, ಶಾಲೆಗೆ ಚಕ್ಕರ್, ಕಳ್ಳತನ, ಅಥವಾ ಆಸ್ತಿ ಪಾಸ್ತಿಯನ್ನು ಹಾಳುಮಾಡುವುದು
- ತೂಕ ಹೆಚ್ಚಳದ ಬಗ್ಗೆ ಅತಿ ಭಯ
- ಹಸಿವು ಇಲ್ಲ ಮತ್ತು ಪದೆ ಪದೇ ಸಾವಿನ ಯೋಚನೆ, ಬಹುಕಾಲದ ವರೆಗಿನ ನಕಾರಾತ್ಮಕ ಭಾವನೆಗಳು
- ಆಗಾಗ ಕೋಪ ಸ್ಫೋಟಗೊಳ್ಳುವುದ
- ಶಾಲಾ ಸಾಧನೆಯಲ್ಲಿ ಬದಲಾವಣೆ
- ಕಠಿನ ಪರಿಶ್ರಮ ಹಾಕಿದರೂ ಕಳಪೆ ಸಾಧನೆ
- ಅತಿಯಾದ ಚಿಂತೆ ಮತ್ತು ಗಾಬರಿ
- ಅತಿ ಚಟುವಟಿಕೆ
- ಪದೇ ಪದೇ ದುಃಸ್ವಪ್ನಗಳು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 5/13/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.