অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭ್ರಮಿತ ಅಸ್ವಸ್ಥತೆ

ಭ್ರಮಿತ ಅಸ್ವಸ್ಥತೆ

ಭ್ರಮಿತ ಅಸ್ವಸ್ಥತೆಯು ಒಂದು ಮನೋವಿಕೃತ ಕಾಯಿಲೆ, ಒಬ್ಬ ವ್ಯಕ್ತಿಯು ಸತ್ಯಾಂಶವನ್ನು ಗುರುತಿಸುವಲ್ಲಿ ತೊಂದರೆಯಾಗುವ ಒಂದು ರೋಗ, ಎಂದು ವರ್ಗೀಕರಿಸಲಾಗಿದೆ. ಒಬ್ಬ ವ್ಯಕ್ತಿಯು ಕಲ್ಪಿಸಿಕೊಂಡಿದ್ದರಲ್ಲಿ ಯಾವುದು ವಾಸ್ತವವೆಂದು ಹೇಳಲು ಸಾಧ್ಯವಾಗುವುದಿಲ್ಲ. ನೈಜತೆ / ವಾಸ್ತವದ ತಪ್ಪು ವ್ಯಾಖ್ಯಾನದಿಂದ ಉಂಟಾಗುವ ಒಂದು ತಪ್ಪು ನಂಬಿಕೆಯೇ ಭ್ರಮೆ. ಭ್ರಮೆಗಳು, ಇತರೆ ಹಲವು ಮನೋವಿಕೃತ ರೋಗಲಕ್ಷಣಗಳಂತೆ, ವಿವಿಧ ಮಾನಸಿಕ ಅಸ್ವಸ್ಥತೆಗಳ ಭಾಗವಾಗಿ ಸಂಭವಿಸಬಹುದು. ಆದರೆ ಭ್ರಮೆಗಳು ಅತ್ಯಂತ ಪ್ರಮುಖ ರೋಗಲಕ್ಷಣ ಎಂದಾಗ ಹಾಗೂ ಪುನರಾವರ್ತನೆಯಾಗುವ ನಿರಂತರ ವಿಚಿತ್ರವಲ್ಲದ ಭ್ರಮೆಗಳ ಉಪಸ್ಥಿತಿಯಿಂದ ನಿರೂಪಿಸಲ್ಪಟ್ಟಾಗ ಮಾತ್ರ ಭ್ರಮಿತ ಅಸ್ವಸ್ಥತೆ ಎಂಬ ಪದವು ಬಳಸಲಾಗುವುದು. ಜೊತೆಗೆ ಇದರಲ್ಲಿ ವಾಸ್ತವ ಜೀವನದಲ್ಲಿ ಸಂಭವಿಸಬಹುದಾದ ಸನ್ನಿವೇಶಗಳಾದ ಹಿಂಬಾಲಿಸುವುದು, ವಿಷ ಉಣಿಸುವುದು, ವಂಚಿಸುವುದು, ವಿರುದ್ಧ ಸಂಚು ಮಾಡುವುದು, ಅಥವಾ ದೂರದಿಂದ ಇಷ್ಟ ಪಡುವುದನ್ನು ಒಳಗೊಂಡಿರುತ್ತದೆ. ವಿಚಿತ್ರವಲ್ಲದ ಭ್ರಮೆಗಳು ತೋರಿಕೆಗಳೆಂದು ಪರಿಗಣಿಸಲಾಗಿದೆ; ಅಂದರೆ, ವ್ಯಕ್ತಿಯು ನಿಜವೆಂದು ನಂಬಿರುವುದು ವಾಸ್ತವವಾಗಿ ಕೆಲವು ಸಂದರ್ಭಗಳಲ್ಲಿ ಸಣ್ಣ ಪ್ರಮಾಣವನ್ನು ಸಂಭವಿಸುವ ಸಾಧ್ಯತೆ ಇರುವುದು. ಈ ಭ್ರಮೆಗಳು ಸಾಮಾನ್ಯವಾಗಿ ಗ್ರಹಿಕೆಗಳ ಅಥವಾ ಅನುಭವಗಳ ತಪ್ಪು ಗ್ರಹಿಕೆಯನ್ನು ಒಳಗೊಂಡಿರುತ್ತವೆ. ವಾಸ್ತವವಾಗಿ, ಈ ಸನ್ನಿವೇಶಗಳು ಹೆಚ್ಚಿನ ಮಟ್ಟದಲ್ಲಿ ಉತ್ಪ್ರೇಕ್ಷೆ ಅಥವಾ ನಿಜವಾದದ್ದು ಆಗಿರುವುದಿಲ್ಲ.

ವಾಸ್ತವಾಂಶಗಳು:

  • 0.025-0.03% ಗಳಂತೆ ಪ್ರಭುತ್ವವನ್ನು ಅಂದಾಜಿಸಲಾಗಿದೆ, ಇದು ಛಿದ್ರಮನಸ್ಕತೆಯ (1%) ಪ್ರಮಾಣಗಳಿಗಿಂತ ಕಡಿಮೆ ಇರುವುದು.
  • ಭ್ರಮಿತ ಕಾಯಿಲೆಗೆ ಮಾನಸಿಕ ಆಸ್ಪತ್ರೆಗಳಲ್ಲಿ ಒಳರೋಗಿಯ ಪ್ರವೇಶಗಳಲ್ಲಿ 1-2%% ಎಂದು ಅಂದಾಜಿಸಬಹುದು.
  • ಇದು ಆರಂಭವಾಗುವ ವಯಸ್ಸು 18-90 ವರ್ಷಗಳಾಗಿರುವುದು, ಇದರ ಸರಾಸರಿ ವಯಸ್ಸು 40 ವರ್ಷಗಳು.
  • ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ (ಒಟ್ಟು) ಭ್ರಮಿತ ಅಸ್ವಸ್ಥೆತೆಯಿಂದ ಬಳಲುವರು.
  • ಭ್ರಮಿತ ಅಸ್ವಸ್ಥೆತೆಯು ಸಾಮಾನ್ಯವಾಗಿ ಒಂದು ದೀರ್ಘಕಾಲದ (ನಡೆಯುತ್ತಿರುವ) ಸ್ಥಿತಿ, ಆದರೆ ಇದಕ್ಕ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಮಾಡಿದ್ದಲ್ಲಿ, ಈ ರೋಗದಿಂದ ಬಳಲುತ್ತಿರುವ ಅನೇಕ ಜನರು ಇದರ ರೋಗಲಕ್ಷಣಗಳಿಂದ ಶಮನಗೊಳ್ಳಬಹುದು.
  • ಕೆಲವು ಜನರು ಸಂಪೂರ್ಣವಾಗಿ ಗುಣವಾಗುವರು ಮತ್ತು ಇತರರು ಮುಕ್ತಿಹೊಂದುವ ನಂಬಿಕೆಗಳನ್ನು ಕಂತುಗಳಲ್ಲಿ ಪೂರ್ಣವಿರಾಮದ ಭ್ರಮೆಗಳನ್ನು ಅನುಭವಿಸುವರು.
  • ದುರದೃಷ್ಟವಶಾತ್, ಈ ಕಾಯಿಲೆಯಿಂದ ಬಳಲುತ್ತಿರುವ ಅನೇಕ ಜನರು ಸಹಾಯ ಕೇಳುವುದಿಲ್ಲ.
  • ಈ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅವರು ಅಸ್ವಸ್ಥರಾಗಿರುವರು ಎಂದು ಗುರುತಿಸಲು ಸಾಮಾನ್ಯವಾಗಿ ಅವರಿಗೆ ಕಷ್ಟವಾಗುವುದು.
  • ಅವರು ಚಿಕಿತ್ಸೆ ಪಡೆಯಲು ತುಂಬಾ ಸಂಕೋಚ ಅಥವಾ ಹೆದರುತ್ತಿದ್ದರು ಇರಬಹುದು.
  • ಚಿಕಿತ್ಸೆವಿಲ್ಲದೆ, ಭ್ರಮಿತ ಅಸ್ವಸ್ಥತೆಯು ಜೀವನ ಪರಿಯಂತದ ಕಾಯಿಲೆಯಾಗಬಹುದಾಗಿದೆ.
  • ಮುಂಚಿತವಾಗಿ ರೋಗ ನಿರ್ಧಾರಣೆ ಮತ್ತು ಚಿಕಿತ್ಸೆಯು ವ್ಯಕ್ತಿಯ ಜೀವನ, ಕುಟುಂಬ ಮತ್ತು ಸ್ನೇಹಿತರಲ್ಲಿ ಉಂಟಾಗುವ ಅಡಚಣೆಗಳನ್ನು ಕಡಿಮೆ ಮಾಡಬಹುದು.

ರೋಗ ನಿರೂಪಣೆ

ರೋಗನಿರ್ಧಾರಣೆ ಮಾಡಲು ಯಾವುದೇ ನಿರ್ದಿಷ್ಟ ಪ್ರಯೋಗಾಲಯದ ಪರೀಕ್ಷೆ ಲಭ್ಯವಿರುವುದಿಲ್ಲ. ರೋಗಿಯಿಂದ ಎಚ್ಚರಿಕೆಯ ಮತ್ತು ವಿಸ್ತೃತ ಇತಿಹಾಸ ಪಡೆಯುವುದರಿಂದ ಭ್ರಮಿತ ಅಸ್ವಸ್ಥೆಯ ಗುರುತಿಸುವಿಕೆಯಲ್ಲಿ ಸಹಾಯವಾಗುವುದು. ಮನೋವೈದ್ಯರು ಕಾಯಿಲೆಯನ್ನಿ ಪರೀಕ್ಷಿಸಲು ವಿಶೇಷವಾಗಿ ವಿನ್ಯಾಸಗೊಂಡಿರುವ ಸಂದರ್ಶನ ಮತ್ತು ಮೌಲ್ಯಮಾಪನ ಉಪಕರಣಗಳನ್ನು ಬಳಸುವರು. ವ್ಯಕ್ತಿಯ ರೋಗಲಕ್ಷಣಗಳ ವರದಿ, ಮತ್ತು ವ್ಯಕ್ತಿಯ ಮನೋಭಾವನೆ ಮತ್ತು ವರ್ತನೆಯನ್ನುಗಮನಿಸಿದ ಆಧಾರದ ಮೇಲೆ ರೋಗ ನಿರ್ಧಾರಣೆ ಮಾಡಲಾಗುವುದು. ರೋಗನಿರ್ಧಾರಣೆಯನ್ನು ಖಚಿತಗೊಳಿಸಲು ರೋಗಿಯ ಹಿಂದಿನ ವೈದ್ಯಕೀಯ ದಾಖಲೆಗಳು ಮತ್ತು ಕುಟುಂಬದ ಸದಸ್ಯರೊಂದಿಗೆ ಚರ್ಚೆಯು ಸಹ ಸಹಾಯ ಮಾಡುವುದು. ಇತರೆ ಮಾನಸಿಕ ಅಸ್ವಸ್ಥತೆಗಳಾದ ಛಿದ್ರಮನಸ್ಕತೆ ಮತ್ತು ಬಿರುಕು ಭಾವ ಸಂಬಂಧಿ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಭ್ರಮೆಗಳನ್ನು ಗಮನಿಸಬಹುದಾಗಿದೆ. ಮಾನಸಿಕ ಅಸ್ವಸ್ಥತೆಗಳಲ್ಲಿ ಉಂಟಾಗುವುದರ ಜೊತೆಯಲ್ಲಿ,

ಮಾನಸಿಕ ಅಸ್ವಸ್ಥತೆಯಿಂದ ಉಂಟಾಗುವ ಜೊತೆಗೆ, ಭೌತಿಕ, ವೈದ್ಯಕೀಯ ಸ್ಥಿತಿಗಳಾದ ಮೆದುಳಿನ ಗಾಯ ಅಥವ ಮೆದುಳಿನ ಗೆಡ್ಡೆಗಳು, ಅಥವ ಮಾದಕ ವಸ್ತುವಿನ ಚುಚ್ಚುಮದ್ದಿಗೆ ಪ್ರತಿಕ್ರಿಯಿಸುವ ಭಾಗವಾಗಿ ಭ್ರಮೆಗಳುಂಟಾಗುವವು. ಏಕೆಂದರೆ ಭ್ರಮೆಗಳನ್ನು ಅನೇಕ ರೋಗಗಳ ಭಾಗವಾಗಿ ತೋರಿಸಲಾಗುತ್ತದೆ, ಭ್ರಮಿತ ಅಸ್ವಸ್ಥತೆಯ ರೋಗ ನಿರ್ಧಾರಣೆಯನ್ನು ಭಾಗಶಃ ಹೊರಹಾಕುವಿಕೆ ಪ್ರಕ್ರಿಯೆಯಿಂದ ನಡೆಸಲಾಗುತ್ತದೆ.

ರೋಗ ಲಕ್ಷಣಗಳು

  • ವಿಚಿತ್ರವಲ್ಲದ ಭ್ರಮೆಗಳ ಅಸ್ತಿತ್ವವು ಈ ಅಸ್ವಸ್ಥತೆಯ ಸ್ಪಷ್ಟ ರೋಗ ಲಕ್ಷಣ.
  • ಕೆರಳಿಸುವ, ಕೋಪಗೊಂಡ, ಅಥವಾ ಒಂದು ಕುಗ್ಗಿದ ಮನಸ್ಥಿತಿ.
  • ಭ್ರಮಿತ ಅಸ್ವಸ್ಥತೆವುಳ್ಳ ವ್ಯಕ್ತಿಗಳು ಸಾಮಾನ್ಯವಾಗಿ, ತಮ್ಮ ಭ್ರಮೆಯ ವಿಷಯವಲ್ಲದೆ ಎಲ್ಲರೊಂದಿಗೆ ಬೇರೆಯುವರು ಮತ್ತು ಸಾಮಾನ್ಯವಾಗಿ ಕೆಲಸಮಾಡುವುದನ್ನು ಮುಂದುವರೆಸುವರು.
  • ಸಾಮಾನ್ಯವಾಗಿ ನಿಸ್ಸಂಶಯವಾಗಿ ,ಬೇಸತ್ತ ಅಥವಾ ವಿಚಿತ್ರ ರೀತಿಯಲ್ಲಿ ವರ್ತಿಸುವುದಿಲ್ಲ. ಭ್ರಾಂತಿಗಳು ಸಾಮಾನ್ಯವಾಗಿ ಇಲ್ಲದಿದ್ದರೂ ಕೆಲವೊಮ್ಮೆ ತಮ್ಮ ಭ್ರಮೆಗೆ ಸಂಬಂಧಿಸಿದಂತೆ ಇರುವವು.
  • ಆದಾಗ್ಯೂ, ಕೆಲವು ಪ್ರಕರಣಗಳಲ್ಲಿ, ಭ್ರಮಿತ ಅಸ್ವಸ್ಥತೆ ಇರುವ ಜನರು ತಮ್ಮ ಭ್ರಮೆಗಳಲ್ಲಿ ಎಷ್ಟು ಆವರಿಸಿಕೊಳ್ಳುವರು ಅಂದರೆ ತಮ್ಮ ಜೀವನಗಳನ್ನೇ ಅಸ್ತವ್ಯಸ್ತ ಮಾಡಿಕೊಳ್ಳುವರು.

ಉಪ-ಪ್ರಕಾರಗಳು

ಅನುಭವಿಸಲಾಗುವ ಭ್ರಮೆಗಳ ವಿಷಯದ ಆಧಾರದ ಮೇಲೆ ಹಲವು ಪ್ರಕಾರದ ಭ್ರಮಿತ ಅಸ್ವಸ್ಥತೆಗಳನ್ನು ಕಾಣಬುಹುದು:

  • ಎರೋಟೊಮ್ಯಾನಿಕ್:ಈ ಪ್ರಕಾರದ ಭ್ರಮಿತ ಅಸ್ವಸ್ಥತೆ ಇರುವ ವ್ಯಕ್ತಿಯು ಆಗಾಗ ನಂಬುವುದೆಂದರೆ ಯಾರಾದರೂ ಪ್ರಮುಖ ಅಥವ ಪ್ರಸಿದ್ಧ ವ್ಯಕ್ತಿಯು ಆಕೆ ಅಥವ ಆತನೊಂದಿಗೆ ಪ್ರೀತಿಸುವರು ಎಂದು. ಈ ವ್ಯಕ್ತಿಯು ಭ್ರಮೆಯ ವಸ್ತುವಿಗೆ ಸಂಪರ್ಕಿಸಲು ಪ್ರಯತ್ನಿಸಬಹುದು, ಮತ್ತು ಭೇಟಿಯಾದಾಗ ವರ್ತನೆಯು ಸಾಮಾನ್ಯವಾಗಿರುವುದಿಲ್ಲ.
  • ಗ್ರಾಂಡಿಯೋಜ್:ಈ ಪ್ರಕಾರದ ಭ್ರಮಿತ ಅಸ್ವಸ್ಥೆತೆ ಇರುವ ವ್ಯಕ್ತಿಯು ಒಂದು ಅತಿ ಹಣದುಬ್ಬರ ಮೌಲ್ಯದ ಅರ್ಥದಲ್ಲಿ, ಶಕ್ತಿ, ಜ್ಞಾನ, ಅಥವ ಗುರುತಿಸುವಿಕೆ ಹೊಂದಿರುವುದು. ಈ ರೋಗಿಯು, ಆತ ಅಥವ ಆಕೆ ಮಹಾನ್ಪ್ರತಿಭೆ ಹೊಂದಿರುವುದು ಅಥವ ಪ್ರಮುಖ ಆವಿಷ್ಕಾರ ಮಾಡಿರುವುದಾಗಿ, ನಂಬುವುದು.
  • ಅಸೂಯೆ:ಈ ಪ್ರಕಾರದ ಭ್ರಮಿತ ಅಸ್ವಸ್ಥತೆ ಇರುವ ವ್ಯಕ್ತಿಯು ಆಕೆಯ ಅಥವ ಆತನ ಸಂಗಾತಿ ಅಥವ ಲೈಂಗಿಕ ಸಂಗಾತಿಗೆ ನಿಷ್ಠೆವಿಲ್ಲ ಎಂದು ನಂಬುವುದು. ವಿರುದ್ಧವಾದ ಸಾಕ್ಷ್ಯಾಧಾರದ ಹೊರತಾಗಿಯೂ ತನ್ನ ಸಂಗಾತಿ ಅಥವ ಪಾಲುದಾರ ದಾಂಪತ್ಯದಲ್ಲಿ ದ್ರೋಹಿಯಾಗಿರುವವರು ಎಂದು ಆಳವಾಗಿ ಮನವರಿಕೆಯಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ದಾಂಪತ್ಯ ದ್ರೋಹ ವಾಸ್ತವವಾಗಿ ಸಂಭವಿಸುತ್ತಿರಬಹುದು, ಆದರೂ ಅಸೂಯೆ ಪ್ರತಿಕ್ರಿಯೆಯ ಪ್ರಮಾಣ ಮತ್ತು ದ್ರೋಹ ಬೆಂಬಲಿಸಲು ಗಳಿಸಿದ ಸಾಕ್ಷ್ಯಗಳು ಭ್ರಮೆಯ ಗುಣಮಟ್ಟ ತೆಗೆದುಕೊಳ್ಳಬಹುದು. ಮೊಬೈಲ್ ನಲ್ಲಿ ಗುರುತಿಸಲಾಗದ ಸಂಖ್ಯೆ ಕಂಡುಹಿಡಿದು, ಗೋಜಲಾಗಿರುವ ಹಾಸಿಗೆ, ಇತ್ಯಾದಿಗಳಂತಹ ಕನಿಷ್ಠಮಟ್ಟದ ಮಾಹಿತಿಯ ಆಧಾರದ ಮೇಲೆ ಅವರು ತಮ್ಮ ಸಂಗಾತಿಯ ಚಟುವಟಿಕೆಗಳನ್ನು ತಡೆಹಿಡಿಯಲು ಅಥವ ಸಂಗಾತಿಗೆ ಮನೆಯಲ್ಲಿಯೇ ಸೀಮಿತಗೊಳಿಸುವ ಪ್ರಯತ್ನ ಮಾಡಬಹುದು. ಉಪ ಪ್ರಕಾರದ ಈ ಅಸ್ವಸ್ಥತೆಯು ಅತಿ ಸಾಮಾನ್ಯವಾಗಿ ಆಕ್ರಮಣಕ್ಕೆ ಮತ್ತು ಹಿಂಸೆಗೆ ಸಂಬಂಧಿಸಿದೆ ಮತ್ತು ಕೆಲವು ಸನ್ನಿವೇಶಗಳ್ಲಲಿ ತಮ್ಮ ಸಂಗಾತಿಯ ಕೊಲೆಗೆ ಕಾರಣವಾಗಬಹುದು.
  • ಪೀಡಿಸುವ:ಈ ಪ್ರಕಾರದ ಭ್ರಮಿತ ಅಸ್ವಸ್ಥತೆ ಇರುವ ಜನರು, ಅವರಿಗೆ (ಅಥವಾ ಅವರಿಗೆ ಹತ್ತಿರವಿರುವ ಯಾರಾದರೂ) ಕೇಡೆಣಿಸುವ ಉದ್ದೇಶದಿಂದ ನೊಡುವರು ಅಥವಾ ಒಂದಲ್ಲ ಒಂದು ರೀತಿಯಲ್ಲಿ ಹಾನಿಯುಂಟು ಮಾಡುವರು ಎಂದು ಮನವರಿಕೆಗೊಂಡಿರುವರು. ಪೀಡಿಸುವ ಈ ನಂಬಿಕೆಗಳು ಸಾಮಾನ್ಯವಾಗಿ ಮುಂಗೋಪ, ಕಿರಿಕಿರಿ, ಕೋಪ ಮತ್ತು ಆಕ್ರಮಣಕಾರಿ ಅಥವಾ ನರಹತ್ಯೆಯ ವರ್ತನೆಗೆ ಸಂಬಂಧಿಸಿದೆ. ಈ ಪ್ರಕಾರದ ಭ್ರಮಿತ ಅಸ್ವಸ್ಥತೆವಿರುವ ಜನರು ಕಾನೂನು ಅಧಿಕಾರಿಗಳಿಗೆ ಪದೇ ಪದೇ ದೂರು ನೀಡುವುದು ಅಸಾಮಾನ್ಯವೇನಲ್ಲ.
  • ದೈಹಿಕ:ಈ ಪ್ರಕಾರದ ಭ್ರಮಿತ ಅಸ್ವಸ್ಥತೆವುಳ್ಳ ವ್ಯಕ್ತಿಯು ತನಗೆ ದೈಹಿಕ ಕೊರತೆ ಅಥವ ವೈದ್ಯಕೀಯ ಸಮಸ್ಯೆವಿದೆ ಎಂದು ನಂಬುವುದು.
  • ಮಿಶ್ರಿತ:ಈ ಪ್ರಕಾರದ ಭ್ರಮಿತ ಅಸ್ವಸ್ಥತೆವುಳ್ಳ ವ್ಯಕ್ತಿಗಳಿಗೆ ಕೆಳಗೆ ತಿಳಿಸಲಾಗಿರು ಒಂದು ಅಥವ ಎರಡು ಪ್ರಕಾರದ ಭ್ರಮೆಗಳು ಇರುವವು:
  • ಇಟಿಯಾಲಜಿ:ಅನೇಕ ಇತರೆ ಮಾನಸಿಕ ಅಸ್ವಸ್ಥತೆಗಳಂತೆಯೇ ಭ್ರಮಿತ ಅಸ್ವಸ್ಥೆತೆಯ ನಿಖರ ಕಾರಣ ಈ ವರೆಗೆ ತಿಳಿದಿಲ್ಲ. ಆದಾಗ್ಯೂ, ವಿವಿಧ ಆನುವಂಶಿಕ, ಜೈವಿಕ, ಮತ್ತು ಪರಿಸರ ಅಥವಾ ಮಾನಸಿಕ ಅಂಶಗಳ ಪಾತ್ರವನ್ನು ನಿರ್ಧರಿಸಲು ಸಂಶೋಧನಕಾರರು ಪ್ರಯತ್ನಿಸುತ್ತಿರುವರು.
  • ಅನುವಂಶೀಯ:ಕುಟುಂಬದ ಸದಸ್ಯರಿಗೆ ಭ್ರಮಿತ ಅಸ್ವಸ್ಥತೆ ಅಥವ ಛಿದ್ರಮನಸ್ಕತೆವಿರುವವರಲ್ಲಿ ಭ್ರಮಿತ ಅಸ್ವಸ್ಥತೆ ಇರುವುದು ಅತಿ ಸಾಮಾನ್ಯವೆಂದ ವಾಸ್ತವಾಂಶವು ಇದರಲ್ಲಿ ಅನುವಂಶಿಕ ಅಂಶಗಳ ಪಾತ್ರವಿದೆ ಎಂದು ಸೂಚಿಸುತ್ತದೆ. ಇತರೆ ಮಾನಸಿಕ ಅಸ್ವಸ್ಥತೆಗಳಂತೆ ಭ್ರಮಿತ ಅಸ್ವಸ್ಥತೆಯೂ ಸಹ ಪೋಷಕರಿಂದ ತಮ್ಮ ಮಕ್ಕಳಿಗೆ ವರ್ಗಾವಣೆಯಾಗ ಬಹುದು ಎಂದು ನಂಬಲಾಗಿದೆ.
  • ಜೀವವಿಜ್ಞಾನದ:ಭ್ರಮಿತ ಅಸ್ವಸ್ಥತೆಯ ಅಭಿವೃದ್ಧಿಯಲ್ಲಿ ಮಿದುಳಿನ ಕೆಲವು ಕ್ಷೇತ್ರಗಳಲ್ಲಿನ ಅಸಹಜತೆಗಳು ಯಾವ ರೀತಿಯಲ್ಲಿ ಒಳಗೊಳ್ಳುವವು ಎಂದು ಸಂಶೋಧನಕಾರರು ಅಧ್ಯಯನ ನಡೆಸುತ್ತಿರುವರು. ನ್ಯೂರೊಟ್ರಾನ್ಸ್ಮಿಟರ್ಗಳು ಎಂಬ ಮಿದುಳಿನಲ್ಲಿ ಕೆಲವು ರಾಸಾಯನಿಕಗಳ ಅಸಮತೋಲನವು ಭ್ರಮಿತ ರೋಗಲಕ್ಷಣಗಳ ರಚನೆಗೆ ಸಂಬಂಧಿಸಿದೆ. ಈ ರಾಸಾಯನಿಕಗಳಲ್ಲಿ ಅಸಮತೋಲನವು ಸಂದೇಶಗಳ ರವಾನೆಯಲ್ಲಿ ಅಡ್ಡಿಯನ್ನುಂಟು ಮಾಡಿ, ರೋಗಲಕ್ಷಣಗಳಿಗೆ ಅನುವು ಮಾಡುವುದು.
  • ಪರಿಸರದ / ಮಾನಸಿಕ:ಒತ್ತಡವು ಭ್ರಮಿತ ಅಸ್ವಸ್ಥತೆಗೆ ಪ್ರಚೋದನೆ ನೀಡುವುದಾಗಿ ಸಾಕ್ಷಿಗಳು ಸೂಚಿಸುತ್ತವೆ. ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯು ಸಹ ಸ್ಥಿತಿಗೆ ಕೊಡುಗೆ ನೀಡಬಹುದಾಗಿದೆ. ಪ್ರತ್ಯೇಕವಾಗಿರಲು ಒಲವು ತೋರುವ ಜನಗಳಾದ ವಲಸೆಗಾರರು ಅಥವ ಕಳಪೆ ದೃಷ್ಟಿ ಮತ್ತು ಶ್ರವಣ ಇರುವವರು ಭ್ರಮಿತ ಅಸ್ವಸ್ಥತೆಗೆ ಹೆಚ್ಚಾಗಿ ತುತ್ತಾಗುವರು.

ಭ್ರಮಿತ ಅಸ್ವಸ್ಥತೆಯ ಪರಿಣಾಮಗಳು

  • ಭ್ರಮಿತ ಅಸ್ವಸ್ಥತೆ ಇರುವ ಜನರು ಭ್ರಮೆಗಳಿಗೆ ಸಂಬಂಧಿಸಿದ ತೊಂದರೆಗಳ ಪರಿಣಾಮವಾಗಿ ಆಗಾಗ ಕುಗ್ಗಿ ಹೋಗಬಹುದು.
  • ಭ್ರಮೆಗಳ ಆಧಾರದ ಮೇಲೆ ಕ್ರಿಯೆ ನಡೆಸಿದ್ದಲ್ಲಿ ಹಿಂಸೆ ಅಥವ ಕಾನೂನು ಸಮಸ್ಯೆಗಳುಂಟಾಗಬಹುದು; ಉದಾಹರಣೆಗೆ, ತನ್ನ ಭ್ರಮೆಯ ಆಧಾರದ ಮೇಲೆ ವಸ್ತುವನ್ನು ತೊಟ್ಟುವುದು ಅಥವ ಕಿರುಕುಳ ನೀಡುವ ಎರೋಟೊಮ್ಯಾನಿಕ್ ಭ್ರಮವಿರುವ ವ್ಯಕ್ತಿಗೆ ಬಂಧಿಸಲಾಗಬಹುದು.
  • ಪೀಡಿಸುವ ಮತ್ತು ಅಸೂಯೆಯ ಉಪ ಪ್ರಕಾರಗಳು ಆಕ್ರಮಣ ಮತ್ತು ನರಹತ್ಯೆಯ ವರ್ತನೆಗೆ ಅನುವು ಮಾಡುವುದು.
  • ಈ ರೋಗವಿರುವ ಜನರು ಅಂತಿಮವಾಗಿ ಇತರರಿಂದ ದೂರವಾಗಬಹುದು, ಮುಖ್ಯವಾಗಿ ಅವರ ಭ್ರಮೆಗಳು ತಮ್ಮ ಸಂಬಂಧಗಳಲ್ಲಿ ಅಡ್ಡಿಯಾದಲ್ಲಿ ಅಥವ ಅವುಗಳಿಗೆ ಹಾನಿಯಾದಲ್ಲಿ ದೂರವಾಗುವರು.

ಚಿಕಿತ್ಸೆ

ಭ್ರಮಿತ ಅಸ್ವಸ್ಥತೆಯ ಚಿಕಿತ್ಸೆಯು ಹೆಚ್ಚಾಗಿ ಔಷಧೀಕರಣ ಮತ್ತು ಮನಶ್ಚಿಕಿತ್ಸೆ (ಸೈಕೋಥೆರಪಿಯನ್ನು) ಒಳಗೊಂಡಿರುತ್ತದೆ. ಭ್ರಮಿತ ಕಾಯಿಲೆಯು ಕೇವಲ ಔಷಧೀಯ ಚಿಕಿತ್ಸೆಗೆ ಹೆಚ್ಚು ಪ್ರತಿರೋಧ ವ್ಯಕ್ತಪಡಿಸುವುದು.

ಭ್ರಮಿತ ಅಸ್ವಸ್ಥತೆಯನ್ನು ಗುಣಪಡಿಸಲು ಪ್ರಾಥಮಿಕವಾಗಿ ಉಪಯೋಗಿಸುವ ಔಷಧಿಗಳನ್ನು ಮನೋವಿಕೃತಿಗಳೆನ್ನುವರು. ಭ್ರಮಿತ ಅಸ್ವಸ್ಥತೆಯ ರೋಗಲಕ್ಷಣಗಳನ್ನು ಗುಣಪಡಿಸುವಲ್ಲಿ ಎರಡನೆ ತಲೆಮಾರಿನ ನೂತನ ಮನೋವಿಕೃತಿಗಳು ಹೆಚ್ಚಿನ ಪರಿಣಾಮಕಾರಿಯಾಗಿರುವವು. ಸಂಬಂಧಿಸಿದ ಆತಂಕ ಅಥವ ಖಿನ್ನತೆಯನ್ನು ಗುಣಪಡಿಸಲು ಟ್ರಾಕ್ವಿಲೈಝ್ರ್ ಮತ್ತು ಉಪಶಾಮಕಗಳಂತಹ ಇತರೆ ಔಷಧಿಗಳನ್ನು ಸಹ ಉಪಯೋಗಿಸಲಾಗುವುದು.

ತೀವ್ರವಾದ ರೋಗಲಕ್ಷಣಗಳುಳ್ಳ ಜನರಿಗೆ ಅಥವ ತಮ್ಮನ್ನು ಅಥವ ಇತರರಿಗೆ ಹಾನಿಯುಂಟು ಮಾಡುವ ಅಪಾಯದಲ್ಲಿರುವ ಜನಗಳಿಗೆ, ಸ್ಥಿತಿಯು ಸ್ಥಿರವಾಗುವ ವರೆಗೆ, ಆಸ್ಪತ್ರೆಯಲ್ಲಿ ದಾಖಲಿಸುವ ಅಗತ್ಯವಿರುವುದು. ಭ್ರಮಿತ ಅಸ್ವಸ್ಥತೆಗೆ ಸಂಬಂಧಿಸಿದ ವರ್ತನೆಯ ಮತ್ತು ಮಾನಸಿಕ ಸಮಸ್ಯಗಳ ಚಿಕಿತ್ಸೆಯಲ್ಲಿ ಮನೋಸಾಮಾಜಿಕ ಚಿಕಿತ್ಸೆಯು ಸಹಕಾರಿಯಾಗುವುದು. ರೋಗಿಗಳು, ತಮ್ಮ ರೋಗಲಕ್ಷಣಗಳನ್ನು ನಿಯಂತ್ರಿಸಲು, ಮರುಕಳಿಕೆಯ ಆರಂಭಿಕ ಎಚ್ಚರಿಕೆಯ ಸಂಜ್ಞೆಗಳನ್ನು ಗುರುತಿಸಲು, ಮತ್ತು ಮರುಕಳಿಸದಂತೆ ಒಂದು ತಡೆಗಟ್ಟುವಿಕೆಯ ಯೋಜನೆಯನ್ನು ರಚಿಸಲು ಚಿಕಿತ್ಸೆಯ ಮೂಲಕ ಕಲಿಯಬಹುದಾಗಿದೆ.

ಅರಿವಿನ-ವರ್ತನೆ ಯ ಚಿಕಿತ್ಸೆ (ಸಿ.ಬಿ.ಟಿ) ಯು ಗುರುತಿಸುವುದನ್ನು ಕಲಿಯಲು ಮತ್ತು ತ್ರಾಸದಾಯದ ಭಾವನೆಗಳಿಗೆ ಅನುವು ಮಾಡಿಕೊಡುವ ಆಲೋಚನೆ ಮಾದರಿಗಳನ್ನು ಮತ್ತು ನಡವಳಿಕೆಗಳನ್ನು ಬದಲಾಯಿಸಿಕೊಳ್ಳುವಲ್ಲಿ ವ್ಯಕ್ತಿಗೆ ಸಹಾಯ ಮಾಡುವುದು. ಅರಿವಿನ ಚಿಕಿತ್ಸೆಯು ಭ್ರಮೆಗಳಿಗೆ ಒಂದು ಉದಯೋನ್ಮುಖ ಚಿಕಿತ್ಸೆಯಾಗಿ ಭರವಸೆಯನ್ನು ತೋರಿಸಿದೆ.

ಕೌಟುಂಬಿಕ ಚಿಕಿತ್ಸೆಯು ಭ್ರಮಿತ ಅಸ್ವಸ್ಥತೆಗೆ ಬಲಿಯಾಗಿರುವ ತಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ವರ್ತಿಸಲು, ವ್ಯಕ್ತಿಗಾಗಿ ಉತ್ತಮ ಫಲಿತಾಂಶ ಬರುವಂತೆ ಕೋಡುಗೆ ನೀಡುವಂತೆ ಮಾಡುವಲ್ಲಿ ಕುಟುಂಬಗಳಿಗೆ ಸಹಾಯ ಮಾಡಬಹುದು.

ಮೂಲ:ಕಪ್ಲಾನ್ ಸ್ಯಾಡಾಕ್ ನ ಮನೋವೈದ್ದಯ ಸಮಗ್ರ ಪಥ್ಯ ಪುಸ್ತಕ, ಸಂಪುಟ 1, ಒಂಭತ್ತನೆ ಆವೃತ್ತಿ

ಕೊನೆಯ ಮಾರ್ಪಾಟು : 4/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate