অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬುದ್ಧಿಮಾಂದ್ಯತೆ

ನಿರೂಪಣೆ:

ಇದನ್ನು ಸರಾಸರಿಗಿಂತ ಬಹು ಕಡಿಮೆ ಮತ್ತು ದೈನಂದಿನ ಕೌಶಲ್ಯಗಳಲ್ಲಿ ಮಿತಿ ( ಹೊಂದಾಣಿಕೆ ಕಾರ್ಯ) ಇರುವ ಬೌದ್ಧಿಕ ಕಾರ್ಯನಿರ್ವಣೆಯ ಮಟ್ಟ ಎನ್ನುವರು ( ಬುದ್ಧಿ ಪ್ರಮಾಣ ಅಳೆಯುವ ಪ್ರಮಾಣಿತ ಮಾಪನದಿಂದ ಅಳೆಯುವರು).

ವಿವರಣೆ

ಬುದ್ಧಿಮಾಂದ್ಯತೆಯಲ್ಲಿನ ವಿಧಗಳು:

ಬುದ್ಧಿ ಮಾಂದ್ಯತೆಯನ್ನು ತಾರ್ಕಿಕ ಸಾಮರ್ಥ್ಯದ ಮಾನಸಿಕ ವಯಸ್ಸಿನ ಮೂಲಕ ಅಳೆಯುವರು. (ಬುದ್ಧಿಮತ್ತೆಯ ಪ್ರಮಾಣ ಅಥವಾ ಐ ಕ್ಯು ). ಬುದ್ಧಿ ಮಾಂದ್ಯತೆಯಲ್ಲಿ ನಾಲಕ್ಕು ಹಂತಗಳಿವೆ ಸೌಮ್ಯ, ಸಾಧಾರಣ, ತೀವ್ರ ಮತ್ತು ಗಂಭೀರ. ಈ ವಿಭಾಗಗಳನ್ನು ವ್ಯಕ್ತಿಯ ಕಾರ್ಯನಿರ್ವಹಿಸುವ ಮಟ್ಟಕ್ಕೆ ಅನುಗುಣವಾಗಿ ಮಾಡಲಾಗಿದೆ.

ಅತಿಕಡಮೆ ಬುದ್ಧಿಮಾಂದ್ಯತೆ

ಬುದ್ಧಿ ಮಾಂದ್ಯರಲ್ಲಿ ಶೇಕಡಾ 85 ಜನ ಸೌಮ್ಯ ವಿಭಾಗಕ್ಕೆ ಸೇರಿರುವರು. ಅವರ ಐಕ್ಯು 50 ರಿಂದ 75ರ ಪರಿಧಿಯಲ್ಲಿರುವುದು, ಅವರು ಶೈಕ್ಷಣಿಕ ಕೌಶಲ್ಯಗಳನ್ನು VI ನೆ ತರಗತಿಯ ವರೆಗೆ ಪಡೆಯುವರು. ಅವರು ಬಹುತೇಕ ಸ್ವಾವಲಂಬಿಗಳಾಗಿ ಸ್ವತಂತ್ರವಾಗಿ ಬದುಕಬಲ್ಲರು, ಅವರಿಗೆ ಸಮುದಾಯದ ಮತ್ತು ಸಾಮಾಜಿಕ ಸಹಾಯ ದೊರೆತರೆ ಸಾಕು.

ಸಾಧಾರಣ ಬುದ್ಧಿ ಮಾಂದ್ಯತೆ

ಬುದ್ಧಿ ಮಾಂದ್ಯರಲ್ಲಿ ಸುಮಾರು ಶೇಕಡಾ 10 ರಷ್ಟು ಜನ ಸಾಧಾರಣ ವಿಕಲತೆ ಹೊಂದಿರುವುರು. ಅವರ ಐಕ್ಯು 35ರಿಂದ 55 ರ ಪರಿಧಿಯಲ್ಲಿರುವುದು. ಸಾಧಾರಣ ಮೇಲುಸ್ತುವಾರಿಯಲ್ಲಿ ಅವರು ತಮ್ಮ ಕೆಲಸ ತಾವೆ ಮಾಡಿಕೊಳ್ಳಬಲ್ಲರು. ಸಾಮನ್ಯವಾಗಿ ಬಾಲ್ಯದಲ್ಲೆ ಸಂವಹನ ಕೌಶಲ್ಯಗಳನ್ನು ರೂಢಿಸಿಕೊಳ್ಳುವರು. ಅವರು ಸಮುದಾಯದಲ್ಲಿ ಉಸ್ತುವಾರಿಯ ವಾತಾವರಣದಲ್ಲಿ ಅಂದರೆ ಅವರಿಗಾಗಿ ಇರುವ ಸಮೂಹ ಗೃಹಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಬದುಕಬಲ್ಲರು.

ತೀವ್ರ ಬುದ್ಧಿ ಮಾಂದ್ಯತೆ

ಬುದ್ಧಿ ಮಾಂದ್ಯರಲ್ಲಿ ಸುಮಾರು ಶೇಕಡಾ 3 ರಿಂದ 4 ಜನ ತೀವ್ರವಾದ ಕಾಯಿಲೆಗೆ ತುತ್ತಾಗಿರುವರು. ಅವರ ಐ ಕ್ಯು ಪರಿಮಿತಿಯು 20ರಿಂದ 40 ವ್ಯಾಪ್ತಿಯಲ್ಲಿರುವುದು. ಅವರು ಕೆಲವು ಜಿವನಾವಶ್ಯಕ ಕೌಶಲ್ಯಗಳನ್ನು, ಸಂವಹನ ಕ್ರಿಯೆಯನ್ನು ಕಲಿಯುವರು. ಅವರು ಅವರಿಗಾಗಿ ಇರುವ ಸಾಮೂಹಿಕ ಗೃಹಗಳಲ್ಲಿ ಬದುಕಬಲ್ಲರು.

ಅತ್ಯಂತ ಹೆಚ್ಚು ಬುದ್ದಿಮಾಂದ್ಯತೆ

ಬುದ್ಧಿ ಮಾಂದ್ಯರಲ್ಲಿ ಕೇವಲ 1 ರಿಂದ 2 ರಷ್ಟು ಜನ ಗಂಭೀರ ಸ್ವರೂಪದ ಖಾಯಲೆ ಹೊಂದಿರಬಹುದು. ಅವರ ಐ ಕ್ಯು ದರವು 20 ರಿಂದ 25 ರ ಒಳಗೆ ಇರುವುದು. ಅವರು ಕೆಲವು ಸ್ವ ಆರೈಕೆ ಕೌಶಲ್ಯಗಳನ್ನು ಕಲಿಯುವರು. ಅದಕ್ಕೆ ಸೂಕ್ತವಾದ ತರಬೇತಿ ಮತ್ತು ಸಹಾಯ ಅಗತ್ಯ. ಅವರ ಮಾಂದ್ಯತೆಗೆ ಕಾರಣ ನರಸಂಬಂಧಿ ಅವ್ಯವಸ್ಥೆ. ಗಂಭೀರ ಮಾಂದ್ಯತೆ ಇರುವವರಿಗೆ ಅತಿ ಹೆಚ್ಚಿನ ಸೌಲಭ್ಯ ಮತ್ತು ಉಸ್ತುವಾರಿ ಅಗತ್ಯ.

ಬುದ್ದಿಮಾಂದ್ಯತೆಗೆ ಕಾರಣ:

ಹೆತ್ತವರ ಕಾರಣಗಳು ( ಹುಟ್ಟುವ ಮುಂಚಿನ ಕಾರಣ)

  • ಕ್ರೊಮೊಜೊಮಲ್‌ ಡಿಸ್ ಆರ್ಡರ್: ಡೌನ್ಸ ಸಿಂಡ್ರೋಮ್, ಫ್ರಜೈಲ್‌ ಸಿಡ್ರೋಮ್‌, ಪ್ರಾಡರ್‌ವಿಲಿ ಸಿಂಡ್ರೋಮ್‌, ಕ್ಲಿನ್‌ಫೆಲ್ಟರ್‌ಸಿಂಡ್ರೋಮ್‌
  • ಏಕ ವಂಶವಾಹಿನಿ ಅವ್ಯವಸ್ಥೆ :ಹುಟ್ಟುವಾಗಲೇ ಇರುವ ಜೈವಿಕ ದೋಷಗಳಾದ ಗೆಲಕ್ಟೊ ಸೆಮಿಯಾ, ಫಿನೈಲ್‌ ಕೆಟೊನುರಿಯಾ,ಹೈಪೊಥೈರಾಯಿಡಿಸಂ, ಮ್ಯುಕೊಪಾಲಿ ಸ್ಯಾಕರಾಯಿಡೋಸ್‌, ಟೆ ಸ್ಯಾಕ್‌ ವ್ಯಾಧಿ.
  • ನ್ಯೂರೊ ಕ್ಯುಟೆನೆಸ್‌ ಸಿಂಡ್ರೋಮ್: ಟ್ಯೂಬರಸ್‌ ಸ್ಕ್ಲಿರೋಸಿಸ್‌, ನ್ಯೂರೊ ಫೈಬ್ರೊಮಾಟೊಸಿಸ್‌
  • ಡಿಸ್‌ ಮಾರ್ಫಿಕ್‌ ಸಿಂಡ್ರೋಮ್ಸ್ : ಲಾರೆನ್ಸ ಮೂನ್ ಬೀಡ್ಲ್ ಸಿಂಡ್ರೋಮ್‌
  • ಮೆದುಳಿನ ಅಸಹಜ ಕಾರ್ಯ: ಮೈಕ್ರೋಸೆಫಾಲಿ, ಹೈಡ್ರೋ ಸೆಫಾಲಸ್‌, ಮಯಲೊ ಮೆನಿಂಗೊಸೀಲ್

ಅಸಹಜ ಮಾತೃ ಪರಿಸರ ಪರಿಣಾಮ

  • ಕೊರತೆ:ಐಯೊಡಿನ್‌ ಕೊರತೆ ಮತ್ತು ಫೋಲಿಕ್‌ ಆಮ್ಲದ ಕೊರತೆ ತೀವ್ರ ಅಪೌಷ್ಟಿಕತೆ
  • ಕೆಲ ವಸ್ತುಗಳ ಬಳಕೆ :ಮದ್ಯ ,ನಿಕೊಟಿನ್‌, ಕೊಕೈನ್‌
  • ಅಪಾಯಕಾರಿ ರಾಸಾಯನಿಕಗಳಿಗೆ ದೇಹ ಒಡ್ಡುವುದು: ಮಲಿನಕಾರಕಗಳು,ಭಾರ ಲೋಹಗಳು, ಅಪಾಯಕಾರಿ ಔಷಧಗಳಾದ ಥಲಿಡೊಮೈಡ್‌, ಫೆನೈಟೊಯಿನ್‌, ವಾರ್ಫರಿನ್‌ ಸೋಡಿಯಂ ಇತ್ಯಾದಿ
  • ತಾಯ್ತನದ ಸೋಂಕುಗಳು: ರುಬೆಲ್ಲಾ, ಟಾಕ್ಸೊ ಪ್ಲಾಸ್ಮಾಸಿಸ್, ಸೈಟೊ ಮೆಗಲೊ ವೈರಸ್‌ ಸೋಂಕು, ಸಿಫಿಲಿಸ್‌ ಎಚ್‌ ಐವಿ
  • ವಿಕಿರಣಗಳಿಗೆ ಈಡಾಗುವುದು ಮತ್ತು ಆರ್‌ ಎಚ್‌ ಹೊಂದಾಣಿಕೆ ಇಲ್ಲದಿರುವುದು
  • ಬಸಿರಿನಲ್ಲಿನ ಸಮಸ್ಯಗರ್ಭಿಣಿಯರ ರಕ್ತದ ಏರೊತ್ತಡ, ಹೆರಿಗೆ ನಂತರದ ಅತಿರಕ್ತಸ್ರಾವ, ಕೆಲಸ ಮಾಡದ ಮಾಸ
  • ತಾಯ್ತನದ ರೋಗಗಳು: ಮಧು ಮೇಹ, ಹೃದಯ ಮತ್ತು ಮೂತ್ರಪಿಂಡದ ಕಾಯಿಲೆ

ಪ್ರಸವ ಸಮಯದಲ್ಲಿ

ಕಠಿನವಾದ ಮತ್ತು / ಅಥವಾ ಸಮಸ್ಯಾತ್ಮಕ ಹೆರಿಗೆ, ತೀವ್ರ ಅಕಾಲ ಹೆರಿಗೆ, ಜನನಕಾಲದಲ್ಲೆ ಅತಿಕಡಿಮೆ ತೂಕ, ಜನನ ಆಸ್ಫಿಕ್ಸಿಯಾ, ಜನನ ಆಘಾತ

  • ನಿಯೋ ನೇಟಲ್‌ ಅವಧಿ: ಸೆಪ್ಟಿಸಿಮಿಯಾ, ಕಾಮಣಿ/(ಹಳದಿ ಕಾಮಾಲೆ ರೋಗ) , ಹೈಪೊಗ್ಲೈಸಿಮಿಯಾ, ನಿಯೋನೇಟಲ್‌ ಕನ್ವಲ್ಷನ್ಸ್
  • ಶೈಶವನ ಮತ್ತು ಬಾಲ್ಯ :ಮೆದುಳಿನ ಸೋಂಕುಗಳಾದ ಕ್ಷಯ,ಜಪಾನ ಎನಸೆಫಲೈಟಿಸ್‌, ಬ್ಯಾಕ್ಟೀರಿಯಲ್‌ ಮೆನಿಂಜೈಟಿಸ್‌ತಲೆಗೆ ಆಘಾತ, ಸತುವಿಗೆ ದೀರ್ಘಕಾಲದ ಒಡ್ಡುವಿಕೆ, ತೀವ್ರ ಮತ್ತು ದೀರ್ಘಕಾಲೀನ ಅಪೌಷ್ಟಿಕತೆ, ಅತಿಯಾದ ಪ್ರಚೋದನೆಯ ಕೊರತೆ

[ಸೂಚನೆ-ನಕ್ಷತ್ರದ ಗುರುತಿರುವ ಸ್ಥಿತಿಗಳನ್ನು ಖಚಿತವಾಗಿ ತಡೆಗಟ್ಟಬಹುದು ಮತ್ತು ಗುಣ ಮಾಡಬಹುದು]

ಬುದ್ಧಿ ಮಾಂದ್ಯತೆಯ ಲಕ್ಷಣಗಳು :

  • ಬುದ್ಧಿ ಮತ್ತೆಯ ಬೆಳವಣಿಗೆಯ ಗುರುತುಗಳನ್ನು ತಲಪಲು ವಿಫಲತೆ
  • ಬೆಳವಣಿಗೆಯ ಮೈಲುಗಲ್ಲುಗಳಾದ ಕೂಡುವುದು, ತೆವಳುವುದು, ನಡೆಯುವುದು ಮಾತಾಡುವುದನ್ನು ಸರಿಯಾದ ಸಮಯಕ್ಕೆಮಾಡಲು ವಿಫಲತೆ.
  • ಚಿಕ್ಕ ಮಕ್ಕಳ ರೀತಿಯ ವರ್ತನೆ ಮುಂದುವರಿಸುವುದು, ಬಹಳ ಮಟ್ಟಿಗೆ ಮಾತನಾಡುವ ಶೈಲಿ ಮತ್ತು ಸಾಮಾಜಿಕ ನಡವಳಿಕೆ ಅರಿಯದಿರುವುದು ಮತ್ತು ಅವುಗಳ ಪರಿಣಾಮದ ಪರಿವೆ ಇಲ್ಲದಿರುವುದು.
  • ಕುತೂಹಲ ಇಲ್ಲದಿರುವುದು ಮತ್ತು ಸಮಸ್ಯೆ ಪರಿಹಾರ ಶಕ್ತಿಯ ಕೊರತೆ.
  • ಕಲಿಯುವ ಸಾಮರ್ಥ್ಯದ ಕೊರತೆ ಮತ್ತು ತಾರ್ಕಿಕವಾಗಿ ಯೋಚನೆ ಮಾಡಲು ಅಸಾಮರ್ಥ್ಯ.
  • ಯಾವುದನ್ನೂ ನೆನಪಿಡಲು ತೊಂದರೆ.
  • ಶಾಲೆಯಲ್ಲಿನ ಶೈಕ್ಷಣಿಕ ಬೇಡಿಕೆಗಳನ್ನು ಪೂರೈಸಲು ಅಸಾಮರ್ಥ್ಯ.

ಚಿಕಿತ್ಸೆ:

  • ಮನೋರೋಗದ ಚಿಕಿತ್ಸೆಯು ಸುರಕ್ಷತೆಯ ಆತಂಕಗಳನ್ನು ನಿವಾರಿಸುವ ಪ್ರಯತ್ನಮಾಡುವುದು (ಉದಾ: ವ್ಯಕ್ತಿಯು ಮನೆ ಮತ್ತು ಶಾಲೆಯಲ್ಲಿ ಸುರಕೀತವಾಗಿರಲು ಸಹಾಯ ಮಾಡುವುದು) ಮತ್ತು ಸೂಕ್ತವಾದ ಸುಸಂಬದ್ದ ಜೀವನ ಕೌಶಲ್ಯಗಳನ್ನು ಕಲಿಸುವುದು. ವ್ಯಕ್ತಿಯ ಮತ್ತು ಕುಟುಂಬದ ನಿಗದಿತ ಅಗತ್ಯಗಳ ಆಧಾರಿತ ಮಧ್ಯವರ್ತನೆ ಇರುವುದು, ವ್ಯಕ್ತಿಯ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುವುದೇ ಮೂಲ ಗುರಿಯಾಗಿರುವುದು
  • ಅಸಹಜತೆಗಳಾದ ಆಕ್ರಮಣಶೀಲತೆ, ಚಂಚಲತೆ, ಸ್ವತಃ ಗಾಯ ಮಾಡಿಕೊಳ್ಳುವುದು , ಇತರೆ ವರ್ತನೆಯ ಸಮಸ್ಯೆಗಳಿಗೆ ಮತ್ತು 40%ರಿಂದ 70% ಸಂದರ್ಭದಲ್ಲಿ ಬರುವ ಸೆಳೆತಗಳಿಗೆ ಔಷಧಿ ಅಗತ್ಯ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate