অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಛಿದ್ರಮನಸ್ಕತೆ

ಛಿದ್ರಮನಸ್ಕತೆ ಎಂದರೇನು?

ಇದು ಮಿದುಳಿನ ಒಂದು ಅಸ್ವಸ್ಥತೆಯಾಗಿದ್ದು, ಒಬ್ಬ ಮನುಷ್ಯನ ವರ್ತನೆ, ಆಲೋಚನೆ ಮತ್ತು ಪ್ರಪಂಚವನ್ನು ನೋಡುವ ರೀತಿಯ ಮೇಲೆ ಪರಿಣಾಮ ಬೀರುವುದು. ಛಿದ್ರಮನಸ್ಕತೆವಿರುವ ಜನರಿಗೆ ವಾಸ್ತವಾಂಶ ಕುರಿತು ಬದಲಾದ ಗ್ರಹಿಕೆವಿರುವುದು, ಅನೇಕ ವೇಳೆ ವಾಸ್ತವಾಂಶದೊಂದಿಗೆ ಸಂಪರ್ಕವಿರುವುದಿಲ್ಲ. ಅವರು ಇಲ್ಲದಿರುವ ವಸ್ತುಗಳನ್ನು ನೋಡಬಹುದು ಅಥವ ಕೇಳಬಹುದು, ವಿಚಿತ್ರ ಅಥವ ಗೊಂದಲಮಯ ರೀತಿಯಲ್ಲಿ ಮಾತನ್ನಾಡಬಹುದು, ಇತರರು ಅವರಿಗೆ ಹಾನಿಯುಂಟು ಮಾಡುವರು ಎಂದು ನಂಬುವರು, ಅಥವ ಅವರನ್ನು ಯಾರೋ ಸದಾ ನೋಡುತ್ತಿರುವರು ಎಂದು ಭಾವಿಸುವರು. ನೈಜತೆ ಹಾಗೂ ಕಾಲ್ಪನಿಕತೆಯ ನಡುವೆ ಒಂದು ಮಂದ ರೇಖೆಯೊಂದಿಗೆ ಛಿದ್ರಮನಸ್ಕತೆಯು ದೈನಂದಿನ ಜೀವನದ ಚಟುವಟಿಕೆಗಳನ್ನು ಕಷ್ಟಕರವಾಗಿಸುತ್ತದೆ – ಭಯಾನಕವು ಸಹ. ಇದಕ್ಕೆ ಪ್ರತಿಕ್ರಿಯೆ ನೀಡುತ್ತ ಛಿದ್ರಮನಸ್ಕತೆವುಳ್ಳ ಜನರು ಹೊರಗಿನ ಪ್ರಪಂಚದಿಂದ ಹಿಂದೆ ಸರಿಯುವರು. ಅಥವ ಗೊಂದಲ ಮತ್ತು ಭಯದಿಂದ ವರ್ತಿಸುವರು.

ವಾಸ್ತವಾಂಶಗಳು

  • ಪ್ರಪಂಚದಾದ್ಯಂತ 24 ದಶ ಲಕ್ಷ ಜನರು ಛಿದ್ರಮನಸ್ಕತೆಯಿಂದ ಪೀಡಿತರಾಗಿರುವರು.
  • ಚಿಕಿತ್ಸೆವಿಲ್ಲದ ಛಿದ್ರಮನಸ್ಕತೆಯ 90% ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುವರು.
  • ಛಿದ್ರಮನಸ್ಕತೆಯು ಚಿಕಿತ್ಸನೀಯ ರೋಗವಾಗಿದ್ದು, ಇದರ ಪ್ರಾರಂಭದ ಹಂತಗಳಲ್ಲಿ ಚಿಕಿತ್ಸೆಯು ಹಚ್ಚಿನ ಪರಿಣಾಮಕಾರಿಯಾಗಿರುವುದು.
  • ಛಿದ್ರಮನಸ್ಕತೆಯು ಪುರುಷ ಹಾಗೂ ಮಹಿಳೆಯರ ಮೇಲೆ ಸಮಾನವಾಗಿ ಪರಿಣಾಮ ಬೀರುವುದು.
  • ಪ್ರಪಂಚದಾದ್ಯಂತ ಎಲ್ಲಾ ಜನಾಂಗಗಳಲ್ಲಿ ಇದು ಸಮಾನ ಗತಿಯಲ್ಲಿ ಸಂಭವಿಸುವುದು.
  • ಛಿದ್ರಮನಸ್ಕತೆಯ ಹಲವು ಪ್ರಕರಣಗಳು ಹದಿವಯಸ್ಸಿನ ಕೊನೆಯ ವೇಳೆಯಲ್ಲಿ ಅಥವ ವಯಸ್ಕತೆಯ ಮುಂಚಿನ ದಿನಗಳಲ್ಲಿ ಕಾಣಿಸುವುದು.
  • ಪುರುಷರಲ್ಲಿ, ಇದು ಆರಂಭವಾಗುವ ಸರಾಸರಿ ವಯಸ್ಸು 25 ವರ್ಷಗಳು. ವಿಶಿಷ್ಠವಾಗಿ ಮಹಿಳೆಯರಲ್ಲಿ ಇದು ಸುಮಾರು 30 ವರ್ಷದಲ್ಲಿ ಪ್ರಾರಂಭವಾಗುವುದು. ಆದಾಗ್ಯೂ, ಮೊದಲ ಬಾರಿಗೆ ಛಿದ್ರಮನಸ್ಕತೆಯು ಮಧ್ಯಮ ವಯಸ್ಸು ಅಥವ ನಂತರವೂ ಸಹ ಕಾಣಿಸಿಕೊಳ್ಳುವುದು.
  • ಅಪರೂಪದ ಸಂದರ್ಭಗಳಲ್ಲಿ, ಛಿದ್ರಮನಸ್ಕತೆಯು ಮಕ್ಕಳ ಹಾಗೂ ಹದಿಹರೆಯದವರ ಮೇಲೂ ಸಹ ಪರಿಣಾಮಬೀರುವುದು.
  • ಛಿದ್ರಮನಸ್ಕತೆಯು ಎಷ್ಟು ಬೇಗ ಬರುವುದೋ ಅಷ್ಟೇ ತೀವ್ರವಾಗಿರುತ್ತದೆ.
  • ಹದಿವಯಸ್ಸಿನವರಲ್ಲಿ ಛಿದ್ರಮನಸ್ಕತೆಯ ರೋಗ ನಿರೂಪಣೆ ಮಾಡುವುದು ಕಷ್ಟಕರ, ಏಕೆಂದರೆ ಹದಿಹರೆಯದವರಲ್ಲಿ ಸಾಮಾನ್ಯ ನಡವಳಿಕೆಗಳಾದ ಸ್ನೇಹಿತರ ಬದಲಾವಣೆ, ದರ್ಜೆಗಳಲ್ಲಿ ಹಿಂದೆ ಬೀಳುವುದು, ನಿದ್ರಾ ಸಮಸ್ಯೆಯಗಳು, ಮತ್ತು ಸಿಡುಕುತನವು ಮೊದಲ ಚಿಹ್ನೆಗಳಾಗಿವೆ.
  • ಛಿದ್ರಮನಸ್ಕತೆಯು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ತೀವ್ರವಾಗಿರುವುದು. ಛಿದ್ರಮನಸ್ಕತೆವುಳ್ಳ 50% ಕ್ಕಿಂತ ಹೆಚ್ಚು ವ್ಯಕ್ತಿಗಳು ಸಮರ್ಪಕವಾದ ಆರೈಕೆಯನ್ನು ಪಡೆಯುತ್ತಿಲ್ಲ.
  • ಛಿದ್ರಮನಸ್ಕತೆವುಳ್ಳ ವ್ಯಕ್ತಿಗಳಿಗೆ, ಕುಟುಂಬ ಮತ್ತು ಸಮುದಾಯದ ಒಳಗೊಳ್ಳುವಿಕೆಯಿಂದ, ಸಮುದಾಯ ಮಟ್ಟದಲ್ಲಿ ಆರೈಕೆ ನೀಡಬಹುದಾಗಿದೆ.
  • ಚಿಕಿತ್ಸೆ ಎಷ್ಟು ಬೇಗ ಪ್ರಾರಂಭವಾಗುದೋ, ಅಷ್ಟೇ ಪರಿಣಾಮಕಾರಿಯಾಗಿರುವುದು. ಆದಾಗ್ಯೂ, ದೀರ್ಘಕಾಲದ ಛಿದ್ರಮನಸ್ಕತೆವುಳ್ಳ ಬಹುಪಾಲು ಜನರು ಚಿಕಿತ್ಸೆ ಪಡೆಯುವುದಿಲ್ಲ, ಇದು ಬೇರೂರಿರುವಿಕೆಗೆ ಅನುವುಮಾಡುವುದು

ಛಿದ್ರಮನಸ್ಕತೆಯು ದೀರ್ಘಕಾಲದ ಅಸ್ವಸ್ಥತೆಯಾದರೂ, ಸಹಾಯ ಲಭ್ಯವಿದೆ. ಬೆಂಬಲ, ಔಷಧೀಕರಣ ಮತ್ತು ಚಿಕಿತ್ಸೆ ಯಿಂದ ಛಿದ್ರಮನಸ್ಕತೆಯುಳ್ಳ ಹಲವು ಜನರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮತ್ತು ಸಮಾಧಾನಕರ ಜೀವನವನ್ನು ನಡೆಸಲು ಸಾಧ್ಯವಾಗುವುದು. ಆದಾಗ್ಯೂ, ಛಿದ್ರಮನಸ್ಕತೆಯ ರೋಗ ಗುರುತಿಸಿ ಮಾಡಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವುದು ಉತ್ತಮ. ನೀವು ಛಿದ್ರಮನಸ್ಕತೆಯ ಚಿಹ್ನೆ ಮತ್ತು ರೋಗಲಕ್ಷಣಗಳನ್ನು ಗುರುತಿಸಿ ತಡ ಮಾಡದೆ ಸಹಾಯ ಕೇಳಿದ್ದಲ್ಲಿ, ನೀವು ಅಥವ ನಿಮ್ಮ ಪ್ರೀತಿ ಪಾತ್ರರು ಲಭ್ಯವಿರುವ ಅನೇಕ ಚಿಕಿತ್ಸೆಗಳ ಲಾಭ ಪಡೆಯಬಹುದು ಮತ್ತು ಗುಣವಾಗುವ ಅವಕಾಶಗಳನ್ನು ಉತ್ತಮಗೊಳಿಸಬಹುದು.

ಆದರೆ ಹಲವು ಪ್ರಕರಣಗಳಲ್ಲಿ, ಇದು ನಿಧಾನವಾಗಿ, ಸೂಕ್ಷ್ಮ ಎಚ್ಚರಿಕೆ ಚಿಹ್ನೆಗಳೊಂದಿಗೆ ಪ್ರಾರಂಭವಾಗುವುದು, ಮತ್ತು ಮೊದಲ ತೀವ್ರವಾದ ಸಂಚಿಕೆಯ ಮುಂಚೆ ಕಾರ್ಯನಿರ್ವಹಣೆಯಲ್ಲಿ ಕ್ರಮೇಣ ಇಳಿಕೆಯಾಗುವುದು.

ಛಿದ್ರಮನಸ್ಕತೆಯ ಅತಿ ಸಾಮಾನ್ಯ ಮುನ್ನೆಚ್ಚರಿಕೆ ಚಿಹ್ನೆಗಳು ಹೀಗಿವೆ:

  • ಸಾಮಾಜಿಕ ನಿವರ್ತನೆ
  • ದ್ವೇಸ ಅಥವ ಸಂಶಯ ಪ್ರವೃತ್ತಿ
  • ವೈಯಕ್ತಿಕ ಸ್ವಚ್ಛತೆಯ ಕೊರತೆ
  • ಒಂದೇ ಸಮನಾದ, ಭಾವನೆವಿಲ್ಲದೆ ದಿಟ್ಟಿಸಿ ನೋಡುವುದು
  • ಅಸಮಂಜಸ ನಗೆ ಅಥವ ಅಳು
  • ಖಿನ್ನತೆ
  • ಸರಿಯಲ್ಲದ ಅಥವ ವಿವೇಚನಾರಹಿತ ಹೇಳಿಕೆಗಳು
  • ಪದಗಳ ಬಳಕೆ ಅಥವ ಮಾತಾಡುವ ರೀತಿಯಲ್ಲಿ ವಿಲಕ್ಷಣ
  • ನಿದ್ರೆಯಲ್ಲಿ ಅಡಚಣೆಗಳು
  • ತನ್ನಂತಾನೆ ಮಾತನಾಡುವುದು / ನಗುವುದು

ಸೂಚನೆ:ಈ ಎಚ್ಚರಿಕೆ ಚಿಹ್ನೆಗಳು ಕೇವಲ ಛಿದ್ರಮನಸ್ಕೆಯಿಂದಲ್ಲದೆ ಹಲವು ಇತರ ಸಮಸ್ಯೆಗಳ ಪರಿಣಾಮವಾಗಿ ಹೊರಬಹುದು, ಆದರೂ ಇವು ಕಾಳಜಿಗೆ ಕಾರಣವಾಗಿರುವವು. ನಿಮ್ಮ ಅಥವ ನಿಮ್ಮ ಪ್ರೀತಿ ಪಾತ್ರರ ಜೀವನದಲ್ಲಿ ಸಾಮಾನ್ಯ ವರ್ತನೆಯು ಸಮಸ್ಯೆವುಂಟು ಮಾಡುತ್ತಿದ್ದಲ್ಲಿ, ವೈದ್ಯರ ಸಲಹೆ ಪಡೆಯಿರಿ. ಛಿದ್ರಮನಸ್ಕತೆ ಅಥವ ಇತರೆ ಮಾನಸಿಕ ಸಮಸ್ಯೆ ಇದ್ದರೆ ಚಿಕಿತ್ಸೆಯು ಸಹಾಯ ಮಾಡುವುದು.

ಛಿದ್ರಮನಸ್ಕತೆಯ ಕಾರಣಗಳು

ಛಿದ್ರಮನಸ್ಕತೆಯ ಕಾರಣಗಳು ಸಂಪೂರ್ಣವಾಗಿ ತಿಳಿದಿಲ್ಲ. ಆದಾಗ್ಯೂ, ಸಾಮಾನ್ಯವಾಗಿ ಅನುವಂಶಿಕ ಮತ್ತು ಪರಿಸರದ ಅಂಶಗಳ ನಡುವೆ ಸಂಕೀರ್ಣವಾದ ಪ್ರಭಾವದ ಪರಿಣಾಮವಾಗಿ ಛಿದ್ರಮನಸ್ಕತೆ ಯಾಗುವುದು ಎಂದು ಪರಿಗಣಿಸಲಾಗಿದೆ..

ಅನುವಂಶೀಯ ಕಾರಣಗಳು

ಛಿದ್ರಮನಸ್ಕತೆಯಲ್ಲಿ ಒಂದು ಬಲಿಷ್ಠವಾದ ಅನುವಂಶಿಕ ಅಂಶವಿರುವುದು. ಮೊದಲನೆ ದರ್ಜೆಯ ಸಂಬಂಧಿಕರಿಗೆ (ಪೋಷಕ ಅಥವ ರಕ್ತಸಂಬಂಧಿ) ಛಿದ್ರಮನಸ್ಕತೆವಿರುವ ವ್ಯಕ್ತಿಗೆ ಈ ಕಾಯಿಲೆ ಬರುವ ಸಾಧ್ಯತೆಗಳು 10% ರಷ್ಟು ಆಗಿರುವುದು, ಇದನ್ನು ಸಾಮಾನ್ಯ ಜನಸಂಖ್ಯೆಯೊಂದಿಗೆ ಪರಿಗಣಿಸಿದರೆ ಇದು ಕೇವಲ 01% ಆಗಿರುತ್ತದೆ.

ಆದರೆ ಛಿದ್ರಮನಸ್ಕತೆಯ ಮೇಲೆ ಅನುವಂಶಿಕಗಳು ಕೇವಲ ಪ್ರಭಾವ ಬೀರುವವು, ಇದನ್ನು ನಿಶ್ಚಯಿಸುವುದಿಲ್ಲ. ಛಿದ್ರಮನಸ್ಕತೆಯು ಕುಟುಂಬಗಳಲ್ಲಿ ಉಂಟಾದರೆ, ಛಿದ್ರಮನಸ್ಕತೆಯಿಂದ ಬಳಲುತ್ತಿರುವ ಸುಮಾರು 60% ಜನಗಳ ಕುಟುಂಬಗಳಲ್ಲಿ ಈ ಕಾಯಿಲೆ ಇರುವುದಿಲ್ಲ. ಆದರೆ, ಅನುವಂಶೀಯವಾಗಿ ಛಿದ್ರಮನಸ್ಕತೆಗೆ ಗುರಿಯಾಗಿರುವ ವ್ಯಕ್ತಿಗಳು ಯಾವಾಗಲೂ ರೋಗಕ್ಕೆ ತುತ್ತಾಗುವುದಿಲ್ಲ. ಇದರಲ್ಲಿ ಜೀವಶಾಸ್ತ್ರದ ಪಾತ್ರ ಕಡಿಮೆ ಎಂದು ಇದರಿಂದ ತಿಳಿಯುತ್ತದೆ.

ಪರಿಸರದ ಕಾರಣಗಳು

ಅನುವಂಶಿಕವ ಜೀನುಗಳು ವ್ಯಕ್ತಿಯಲ್ಲಿ ಛಿದ್ರಮನಸ್ಕತೆಯನ್ನುಂಟು ಮಾಡುವುದು ಎಂದು ಅವಳಿ ಮತ್ತು ದತ್ತು ಅಧ್ಯಯನಗಳು ಸೂಚಿಸುತ್ತವೆ, ಜೊತೆಗೆ ಪರಿಸರದಲ್ಲಿನ ಅಂಶಗಳು ಇದರ ಮೇಲೆ ಪ್ರಭಾವ ಬೀರಿ ಈ ರೋಗವನ್ನುಂಟು ಮಾಡುವುದು.

ಹೆಚ್ಚಿನ ಮಟ್ಟದ ಒತ್ತಡವು ದೇಹದಲ್ಲಿ ಹಾರ್ಮೋನ್ ಕಾರ್ಟಿಸಾಲ್ ನ ಉತ್ಪಾದನೆಯನ್ನು ಹೆಚ್ಚಿಸುವುದರ ಮೂಲಕ ಛಿದ್ರಮನಸ್ಕತೆಗೆ ದಾರಿ ಮಾಡುವುದು.

ಛಿದ್ರಮನಸ್ಕತೆಯನ್ನು ಪ್ರಚೋದಿಸುವ ಪರಿಸರದಲ್ಲಿನ ಹಲವು ಒತ್ತಡ ಪ್ರಚೋದಕ ಅಂಶಗಳನ್ನು ಸಂಶೋಧನೆಯು ಗುರುತಿಸಿದೆ. ಅವುಗಳಲ್ಲಿ, ಈ ಕೆಳಗಿನವುಗಳು ಒಳಗೊಂಡಿರುವವು:

  • ಪ್ರಸವ ಪೂರ್ವದಲ್ಲಿ ವೈರಲ್ ಸೋಂಕುಗಳಿಗೆ ತೆರೆತ
  • ಜನನ ಸಮಯದಲ್ಲಿ ಆಮ್ಲಜನಕದ ಕಡಿಮೆ ಮಟ್ಟ (ಸುದೀರ್ಘ ಹೆರಿಗೆ ನೋವು ಅಥವ ಅಕಾಲಿಕ ಜನನ)
  • ಕೂಸುತನದಲ್ಲಿ ವೈರಾಣುಗಳಿಗೆ ತೆರೆತ
  • ಆರಂಭದಲ್ಲಿ ಪೋಷಕರ ಸಾವು ಅಥವ ಪ್ರತ್ಯೇಕತೆ
  • ಬಾಲ್ಯದಲ್ಲಿ ದೈಹಿಕ ಅಥವ ಲೈಂಗಿಕ ದುರುಪಯೋಗ

ಮೆದುಳಿನ ಅಸಹಜ ರಚನೆ

ಡೋಪಮೈನ್ ಅಸಮತೆ ಗಳಂತಹ ಮಿದುಳಿನ ಅಸಾಮಾನ್ಯ ರಸಾಯನಿಕ ಮತ್ತು ಅಸಹಜ ಮೆದುಳಿನ ರಚನೆಯು ಕೂಡ ಛಿದ್ರಮನಸ್ಕತೆಯಲ್ಲಿ ಪಾತ್ರವಹಿಸುತ್ತದೆ. ಯೋಜನೆ, ತರ್ಕ ಹಾಗೂ ನಿರ್ಧಾರ ತೆಗೆದುಕೊಳ್ಳುವ ಮಿದುಳಿನ ಭಾಗವಾಗಿರುವ ಮುಂಭಾಗದ ಹಾಲೆಯಲ್ಲಿ ಅಸಾಮಾನ್ಯವಾಗಿ ಕಡಿಮೆ ಚಟುವಟಿಕೆಯ ಹಾಗೂ ವಿಸ್ತೃತ ಮೆದುಳಿನ ಹೃತ್ಕುಹರಗಳ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಿದೆ.

ತಾತ್ಕಾಲಿಕ ಹಾಲೆಗಳಲ್ಲಿ, ಹಿಪ್ಪೊಕ್ಯಾಂಪಸ್ ಮತ್ತು ಅಮಿಗ್ಡೇಲ್ ನಲ್ಲಿನ ಅಸಹಜತೆಗಳು ಛಿದ್ರಮನಸ್ಕತೆಯ ಸಾಕಾರಾತ್ಮಕ ರೋಗಲಕ್ಷಣಗಳೊಂದಿಗೆ ಸಂಪರ್ಕ ಹೊಂದಿವೆ ಎಂದು ಕೆಲವು ಅಧ್ಯಯನಗಳು ಸಲಹೆ ನೀಡುತ್ತವೆ. ಆದರೆ ಮೆದುಳಿನ ಅಸಹಜತೆಯ ಕುರಿತು ಸಾಕ್ಷ್ಯಗಳ ಲಭ್ಯತೆಯ ಹೊರತಾಗಿಯೂ, ಛಿದ್ರಮನಸ್ಕತೆಯು ಮೆದುಳಿನ ಯಾವುದೇ ಒಂದು ಪ್ರದೇಶದಲ್ಲಿನ ಯಾವುದೇ ಒಂದು ಸಮಸ್ಯೆಯ ಪರಿಣಾಮವಾಗುವುದು ಎನ್ನುವುದು ಅತ್ಯಂತ ವಿರಳ.

ಛಿದ್ರಮನಸ್ಕತೆಯ ರೋಗ ಲಕ್ಷಣಗಳು

ಛಿದ್ರಮನಸ್ಕತೆಯಲ್ಲಿ ಐದು ಪ್ರಕಾರದ ರೋಗಲಕ್ಷಣಗಳು ಇರುವವು: ತಪ್ಪು ಅಭಿಪ್ರಾಯಗಳು, ಭ್ರಮೆಗಳು, ಅಸ್ತವ್ಯಸ್ತವಾದ ಮಾತು, ಅಸ್ತವ್ಯಸ್ತವಾದ ನಡವಳಿಕೆ, ಮತ್ತು ಆದ್ದರಿಂದ ಕರೆಯಲ್ಪಡುವ “ನಕರಾತ್ಮಕ” ರೋಗಲಕ್ಷಣಗಳು. ಇವುಗಳು ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಅರಿವಿನ ರೋಗಲಕ್ಷಣಗಳಿಗೆ ಅನುವು ಮಾಡುವವು. ಆದಾಗ್ಯೂ, ಛಿದ್ರಮನಸ್ಕತೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳು, ಮಾದರಿ ಹಾಗೂ ತೀವ್ರತೆಯಲ್ಲಿ, ವ್ಯಕ್ತಿಯಿಂದ ವ್ಯಕ್ತಿಗೆ, ನಾಟಕೀಯವಾಗಿ ಬದಲಾಗುವವು.

ತಪ್ಪು ಅಭಿಪ್ರಾಯಗಳು

ಒಂದು ಭ್ರಮೆ ಎಂಬುದು ಇದು ಸತ್ಯವಲ್ಲ ಎಂದು ಸ್ಪಷ್ಟ ಮತ್ತು ಪ್ರತ್ಯಕ್ಷ ಸಾಕ್ಷ್ಯಾಧಾರದ ಹೊರತಾಗಿಯೂ ಒಂದು ವ್ಯಕ್ತಿಯ ದೃಢವಾದ ನಂಬಿಕೆ. ಛಿದ್ರಮನಸ್ಕತೆಯಲ್ಲಿ ಭ್ರಮೆಗಳು ಅತ್ಯಂತ ಸಾಮಾನ್ಯ, ಇದು ಈ ರೋಗವಿರುವ ಸುಮಾರು 90% ಜನಗಳಲ್ಲಿಉಂಟಾಗುವುದು. ಸಾಮನ್ಯವಾಗಿ ಈ ಭ್ರಮೆಗಳು ತರ್ಕರಹಿತ ಅಥವ ವಿಚಿತ್ರ ಕಲ್ಪನೆ ಅಥವ ಮನೋಭಾವನೆಗಳನ್ನು ಒಳಗೊಂಡಿರುತ್ತವೆ. ಛಿದ್ರಮನಸ್ಕತೆಯ ಭ್ರಮೆಗಳು ಸಾಮಾನ್ಯವಾಗಿ ಇವುಗಳನ್ನು ಒಳಗೊಂಡಿರುತ್ತದೆ:

  • ಕಿರುಕುಳದ ಭ್ರಮೆಗಳು:ಇತರರು, ಒಂದು ಅಸ್ಪಷ್ಟ "ಅವರು," ತನಗೆ ಅಥವಾ ತನ್ನ ಕುಟುಂಬದ ಸದಸ್ಯರಿಗೆ ಹಾನಿಯುಂಟು ಮಾಡಬಹುದು ಎಂಬ ನಂಬಿಕೆ. ಹಿಂಸಿಸುವ ಈ ನಂಬಿಕೆಗಳು ಸಾಮಾನ್ಯವಾಗಿ ವಿಚಿತ್ರ ಕಲ್ಪನೆಗಳನ್ನು ಹಾಗೂ ಸಂಚುಗಳನ್ನು ಒಳಗೊಂಡಿರುತ್ತವೆ.
  • ಉಲ್ಲೇಖದ ಭ್ರಮೆಗಳು:ಒಂದು ತಟಸ್ಥ ಪರಿಸರ ಕ್ರಿಯೆಯಲ್ಲಿ ವಿಶೇಷ ಮತ್ತು ವೈಯಕ್ತಿಕ ಅರ್ಥವಿದೆ ಎಂದು ನಂಬಲಾಗಿದೆ. ಉದಾಹರಣೆಗೆ, ಒಂದು ಜಾಹಿರಾತು ಹಲಗೆ ಅಥವ ಟಿ.ವಿ ಯಲ್ಲಿ ಒಬ್ಬ ವ್ಯಕ್ತಿಯು ವಿಶೇಷವಾಗಿ ಇವರಿಗೆ ಸಂದೇಶವನ್ನು ರವಾನಿಸುತ್ತಿರುವುದಾಗಿ ಛಿದ್ರಮನಸ್ಕತೆವುಳ್ಳ ಒಬ್ಬ ವ್ಯಕ್ತಿಯು ನಂಬುವುದು.
  • ವೈಭವದ ಭ್ರಮೆಗಳು:ಜೀಸಸ್ ಕ್ರೈಸ್ಟ್ ಗಳಂತಹವರು ಪ್ರಸಿದ್ಧ ಅಥವ ಪ್ರಮುಖ ವ್ಯಕ್ತಿಗಳೆಂಬ ನಂಬಿಕೆ. ಪರ್ಯಾಯವಾಗಿ, ಒಬ್ಬ ವ್ಯಕ್ತಿಯು ಇತರರಿಗಿಲ್ಲದಿರುವ ಅಸಾಮಾನ್ಯ ಶಕ್ತಿಗಳನ್ನುಹೊಂದಿರುವುದು ಎಂಬ ನಂಬಿಕೆಗಳನ್ನು ವೈಭವದ ಭ್ರಮೆಗಳಲ್ಲಿ ಒಳಗೊಂಡಿರುವವು (ಉದಾಹರಣೆಗೆ, ಹಾರುವ ಸಾಮರ್ಥ್ಯ).
  • ನಿಯಂತ್ರಣದ ಭ್ರಮೆಗಳು:ಒಬ್ಬರ ಆಲೋಚನೆಗಳನ್ನು ಹಾಗೂ ಕ್ರಿಯೆಗಳನ್ನು ಹೊರಗಿನವರು ಅಥವ ಅನ್ಯಲೋಕದ ಶಕ್ತಿಗಳು ನಿಯಂತ್ರಿಸುತ್ತಿವೆ ಎಂಬ ನಂಬಿಕೆ.

ಭ್ರಮೆಗಳು

ಭ್ರಮೆಗಳು ಅನೇಕ ಸಂಖ್ಯೆಯ ವಿಭಿನ್ನ ಪ್ರಕಾರಗಳನ್ನು ತೆಗೆದುಕೊಳ್ಳಬಹುದು - ಅವುಗಳೆಂದರೆ:

  • ದೃಷ್ಠಿಗೋಚರ (ಇಲ್ಲದಿರುವ ಅಥವ ಇತರೆ ಜನಗಳು ನೋಡಲು ಸಾಧ್ಯವಾಗದ ವಸ್ತುಗಳನ್ನು ನೋಡುವುದು).
  • ಕೇಳಿಸುವ (ಇತರೆ ಜನಗಳು ಕೇಳಿಸಿಕೊಳ್ಳದ ಧ್ವನಿಗಳನ್ನು ಕೇಳುವುದು).
  • ಸ್ಪರ್ಶ (ಇತರೆ ಜನಗಳು ಭಾವಿಸದ ವಸ್ತುಗಳನ್ನು ಭಾವಿಸುವುದು ಅಥವ ಇಲ್ಲದಿರುವ ನಿಮ್ಮ ಚರ್ಮವನ್ನು ಸ್ಪರ್ಶ ಮಾಡುವುದು).
  • ವಾಸನೆಗೆ ಸಂಬಂಧಿತ (ಇತರೆ ಜನಗಳು ಮೂಸುಸದ ವಸ್ತುಗಳನ್ನು ಮೂಸುವುದು, ಅಥವ ಇತರೆ ಜನಗಳು ಮೂಸುವ ವಸ್ತುಗಳನ್ನು ಮೂಸದೇ ಇರುವುದು).
  • ರುಚಿಸಂಬಂಧ ಅನುಭವಗಳು (ಇಲ್ಲದಿರುವ ವಸ್ತುಗಳ ರುಚಿ ನೋಡುವುದು).

ಛಿದ್ರಮನಸ್ಕತೆಯಲ್ಲಿ ಕೇಳಿಸುವ ಭ್ರಮೆಗಳು(ಉದಾಹರಣೆಗೆ ಧ್ವನಿಗಳನ್ನು ಕೇಳುವುದು ಅಥವ ಇತರೆ ಶಬ್ದಗಳನ್ನು ಕೇಳುವುದು) ಅತಿ ಸಾಮಾನ್ಯವಾದದ್ದು. ನೋಡುವ ಭ್ರಮೆಗಳು ಸಹ ಹೆಚ್ಚುಕಡಿಮೆ ಸಾಮಾನ್ಯವಾದದ್ದು. ತಮ್ಮ ಸ್ವಂತ ಆತ್ಮ ಚರ್ಚೆಯನ್ನು ಬಾಹ್ಯ ಮೂಲಗಳಿಂದ ಸಂಭವಿಸುವಂತಾಗಿ ಅಪಾರ್ಥ ಮಾಡಿಕೊಳ್ಳುವುದರಿಂದ ಕೇಳಿಸುವ ಭ್ರಮೆಗಳು ಉಂಟಾಗುವವು ಎಂದು ಸಂಶೋಧನೆ ಸೂಚಿಸುತ್ತದೆ.

ಛಿದ್ರಮನಸ್ಕತೆಯ ಭ್ರಮೆಗಳು, ಇವುಗಳನ್ನು ಅನುಭವಿಸುತ್ತಿರುವ ವ್ಯಕ್ತಿಗಳಿಗೆ, ಸಾಮಾನ್ಯವಾಗಿ ಅರ್ಥಪೂರ್ಣವೆನಿಸುವುದು. ಅನೇಕ ಸಮಯದಲ್ಲಿ ಅವರು ಕೇಳಿಸಿಕೊಳ್ಳುವ ಧ್ವನಿಗಳು ಅವರಿಗೆ ಪರಿಚಯವಿರುವ ವ್ಯಕ್ತಿಗಳದ್ದು ಎಂದು ಅನಿಸುವುದು. ಅತ್ಯಂತ ಸಾಮಾನ್ಯವಾಗಿ, ಈ ಧ್ವನಿಗಳು ಟೀಕೆ, ಅಶ್ಲೀಲ, ಅಥವ ನಿಂದನಾತ್ಮಕವಾಗಿರುವವು. ಒಬ್ಬ ವ್ಯಕ್ತಿಯು ಒಬ್ಬಂಟಿಯಾಗಿದ್ದಾಗ ಈ ಭ್ರಮೆಗಳು ಹಾನಿಕಾರಕವಾಗಿರುವವು.

ಅಸ್ತವ್ಯಸ್ತವಾದ ಮಾತು

ಛಿದ್ರಗೊಂಡ ಚಿಂತನೆಯು ಛಿದ್ರಮನಸ್ಕತೆಯ ಒಂದು ಗುಣಲಕ್ಷಣ. ಬಾಹ್ಯವಾಗಿ, ಇದನ್ನು ಒಬ್ಬ ವ್ಯಕ್ತಿಯು ಮಾತನ್ನಾಡುವಂತೆ ಕಾಣುವುದು. ಛಿದ್ರಮನಸ್ಕತೆವುಳ್ಳ ಜನರಿಗೆ ಗಮನವನ್ನು ಕೇಂದ್ರೀಕರಿಸುವಲ್ಲಿ ಹಾಗೂ ಒಂದೇ ರೀತಿಯಲ್ಲಿ ಯೋಚನೆಯನ್ನು ನಿಭಾಯಿಸುವಲ್ಲಿ ತೊಂದರೆಯಾಗುವುದು. ಸಂಬಂಧವಿಲ್ಲದ ಉತ್ತರಗಳನ್ನು ನೀಡುವುದರ ಮೂಲಕ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವರು, ವಾಕ್ಯಗಳನ್ನು ಒಂದು ವಿಷಯದಿಂದ ಪ್ರಾರಂಭಿಸಿ ಸಂಪುರ್ಣವಾಗಿ ವಿಭಿನ್ನವಾದೆಡೆಯಲ್ಲಿ ಮುಗಿಸುವರು, ಅಸಂಬದ್ಧವಾಗಿ ಮಾತನಾಡುವರು, ಅಥವ ತರ್ಕವಿಲ್ಲದದ್ದನ್ನು ಹೇಳುವರು.

ಛಿದ್ರಮನಸ್ಕತೆಯಲ್ಲಿ ಅಸ್ತವ್ಯಸ್ಥಗೊಂಡ ಮಾತಿನಲ್ಲಿ ಕಂಡುಬರುವ ಸಾಮಾನ್ಯ ಚಿಹ್ನೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

  • ಬಿಗಿಯಿಲ್ಲದ ಸಂಘಟನೆಗಳು:ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ, ಯಾವುದೇ ಸಂಬಂಧವಿಲ್ಲದಂತಿರುವ ವಿಷಯಗಳಿಗೆ ವೇಗವಾಗಿ ರೂಪಾಂತರಗೊಳ್ಳುವರು.
  • ನವಪದಗಳ ಪ್ರಯೋಗಗಳು:ಕೇವಲ ರೋಗಿಗೆ ಅರ್ಥವಿರುವ ನಿರ್ಮಿತ ಪದಗಳು ಅಥವ ನುಡಿಗಟ್ಟುಗಳು.
  • ದೀರ್ಘ ಮುಂದುವರಿಕೆ: ಪದಗಳ ಮತ್ತು ಹೇಳಿಕೆಗಳ ಪುನರಾವರ್ತನೆ; ಹೇಳಿದ್ದನ್ನೆ ಪದೇ-ಪದೇ ಹೇಳುವುದು.

ಅಸ್ತವ್ಯಸ್ತವಾದ ನಡವಳಿಕೆ

ಛಿದ್ರಮನಸ್ಕತೆಯು ನಿದೇರ್ಶಿತ ಚಟುವಟಿಕೆಯಲ್ಲಿ ಅಡ್ಡಿಯಾಗುವುದು, ಇದರಿಂದ ತನ್ನ ಆರೈಕೆ ಮಾಡಿಕೊಳ್ಳುವ, ಕೆಲಸ ಮಾಡುವ ಹಾಗೂ ಇತರರೊಂದಿಗೆ ಮಾತನ್ನಾಡುವ ವ್ಯಕ್ತಿಯ ಸಾಮರ್ಥ್ಯವನ್ನು ಕುಂಠಿತವಾಗುವುದು. ಅಸ್ಥವ್ಯಸ್ತ ವರ್ತನೆಯು ಈ ಕೆಳಕಂಡಂತೆಕಾಣುವುದು:

  • ಒಟ್ಟಾರೆ ದೈನಂದಿನದ ಚಟುವಟಿಕೆಗಳಲ್ಲಿ ಹಿನ್ನೆಡೆ
  • ಅನಿರೀಕ್ಷಿತ ಅಥವಾ ಸೂಕ್ತವಲ್ಲದ ಭಾವನಾತ್ಮಕ ಪ್ರತಿಕ್ರಿಯೆಗಳು
  • ವಿಲಕ್ಷಣ ಮತ್ತು ಯಾವುದೇ ಉದ್ದೇಶವಿಲ್ಲದಿರುವಂತೆ ಅನಿಸುವ ವರ್ತನೆಗಳನ್ನು
  • ನಿಗ್ರಹ ಮತ್ತು ಉದ್ರೇಕ ನಿಯಂತ್ರಣದ ಕೊರತೆ

ನಕಾರಾತ್ಮಕ ರೋಗ ಲಕ್ಷಣಗಳು

ಛಿದ್ರಮನಸ್ಕತೆಯ “ನಕಾರಾತ್ಮಕ” ರೋಗಲಕ್ಷಣಗಳೆಂದರೆ ಆರೋಗ್ಯವಂತ ವ್ಯಕ್ತಿಗಳಲ್ಲಿ ಕಂಡುಬರುವ ಸಾಮಾನ್ಯ ವರ್ತನೆಗಳ ಅನುಪಸ್ಥಿತಿಯನ್ನು ಸೂಚಿಸುತ್ತದೆ. ಛಿದ್ರಮನಸ್ಕತೆಯ ಸಾಮಾನ್ಯ ನಕಾರಾತ್ಮಕ ರೊಗಲಕ್ಷಣಗಳು ಹೀಗಿರುತ್ತವೆ.

  • ಭಾವನೆಯ ಕೊರತೆ – ಮೊದಲಿನಂತೆಯೇ ಸಾಮಾನ್ಯ ಚಟುವಟಿಕೆಗಳನ್ನು ಆನಂದಿಸಲು ಅಸಮರ್ಥತೆ (ಸ್ನೇಹಿತರಿಗೆ ಭೇಟಿ ಮಾಡುವುದು, ಇತ್ಯಾದಿ).
  • ಕಡಿಮೆ ಶಕ್ತಿ – ವ್ಯಕ್ತಿಯು ಹೆಚ್ಚಾಗಿ ಕುಳಿತುಕೊಳ್ಳಲು ಇಚ್ಛಿಸುವುದು ಮತ್ತು ಸಾಮಾನ್ಯಕ್ಕಿಂತ ಹೆಚ್ಚಾಗಿ ಮಲಗುವುದು.
  • ಜೀವನದಲ್ಲಿ ಆಸಕ್ತಿಯ ಕೊರತೆ, ಕಡಿಮೆ ಪ್ರೇರಣೆ.
  • ಭಾವಾತ್ಮಕ ಕುಗ್ಗುವಿಕೆ – ಒಂದು ಖಾಲಿ, ಮೊಂಡು ಮುಖ ಭಾವನೆ ಅಥವ ಕಡಿಮೆ ಯಥಾವತ್ತಾದ ಮುಖದ ಚಲನೆಗಳು, ಕುಗ್ಗಿದ ಧ್ವನಿ (ಸಾಮಾನ್ಯ ಉಚ್ಛಾರಣಗಳ ಮತ್ತು ವೈಷಮ್ಯದ ಕೊರತೆ) ಅಥವ ದೈಹಿಕ ಚಲನಗಳು.
  • ಅಲೋಗಿಯಾ (ಅತಾರ್ಕಿಕತೆ) – ಮಾತನಾಡಲು ಅಸರ್ಮಥತೆ ಅಥವ ಕಷ್ಟ.
  • ಅಸಮರ್ಪಕ ಸಾಮಾಜಿಕ ಕೌಶಲ್ಯಗಳು ಅಥವ ಆಸಕ್ತಿಯ ಅಥವ ಇತರೆ ಜನರೊಂದಿಗೆ ಬೆರೆಯುವ ಸಾಮರ್ಥ್ಯದ ಕೊರತೆ.
  • ಸ್ನೇಹಿತರನ್ನು ಮಾಡಿಕೊಳ್ಳಲು ಅಥವ ಕಾಪಾಡಿಕೊಳ್ಳಲು ಅಸಮರ್ಥತೆ, ಅಥವ ಸ್ನೇಹಿತರನ್ನು ಹೊಂದಲು ಕಾಳಜಿವಿಲ್ಲದಿರುವುದು.
  • ಸಾಮಾಜಿಕ ಪ್ರತ್ಯೇಕತೆ – ವ್ಯಕ್ತಿಯು ತನ್ನ ದಿನದ ಹೆಚ್ಚಿ ಭಾಗವನ್ನು ಒಂಟಿಯಾಗಿ ಅಥವ ನಿಕಟ ಕುಟುಂಬದೊಂದಿಗೆ ಕಳೆಯುವನು.

ಛಿದ್ರಮನಸ್ಕತೆಯ ಅರಿವಿನ ರೋಗ ಲಕ್ಷಣಗಳು

ಅರಿವಿನ ರೋಗ ಲಕ್ಷಣಗಳೆಂದರೆ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಗೆ ಸಂಬಂಧಿತ ತೊಂದರೆಗಳಾಗಿರುತ್ತವೆ. ಇವುಗಳಲ್ಲಿ ಕೆಳಗಿನವು ಒಳಗೊಂಡಿರುತ್ತವೆ:

  • ಅಸ್ತವ್ಯಸ್ತವಾದ ಚಿಂತನೆ
  • ನಿಧಾನಗತಿಯ ಚಿಂತನೆ
  • ಅರ್ಥಮಾಡಿಕೊಳ್ಳುವುದರಲ್ಲಿ ತೊಂದರೆ
  • ಕಳಪೆ ಏಕಾಗ್ರತೆ
  • ಕಳಪೆ ನೆನಪಿನ ಶಕ್ತಿ
  • ಆಲೋಚನೆಗಳನ್ನು ವ್ಯಕ್ತಪಡಿಸುವಲ್ಲಿ ಸಮಸ್ಯೆ
  • ಆಲೋಚನೆ, ಭಾವನೆ ಮತ್ತು ವರ್ತನೆಗಳನ್ನು ಒಟ್ಟುಗೂಡಿಸುವಲ್ಲಿ ಸಮಸ್ಯೆ

ಛಿದ್ರಮನಸ್ಕತೆಯ ರೋಗ ನಿರೂಪಣೆ

ಛಿದ್ರಮನಸ್ಕತೆಯ ಸಂಪೂರ್ಣ ರೋಗನಿರ್ಣಯ ಮಾಡಲು ಯಾವುದೇ ಭೌತಿಕ ಅಥವಾ ಪ್ರಯೋಗಾಲಯದ ಪರೀಕ್ಷೆ ಇರುವುದಿಲ್ಲ - ಒಬ್ಬ ಮನೋರೋಗತಜ್ಞನು ವೈದ್ಯಕೀಯ ರೋಗ ಲಕ್ಷಣಗಳ ಆಧಾರದ ಮೇಲೆ ರೋಗ ನಿರ್ಣಯ ಮಾಡುವನು. ಹಲವು ಸ್ಥಿತಿಗಳಲ್ಲಿ ಸಮಾನವಾದ ರೋಗಲಕ್ಷಣಗಳಿರುವವು ಹಾಗೂ ಗ್ರಹಣ ಕಾಯಿಲೆಗಳು, ಚಯಾಪಚಯ ಕಾಯಿಲೆಗಳು, ಥೈರಾಯ್ಡ್ ನಿಷ್ಕ್ರಿಯತೆ, ಮೆದುಳಿನ ಗೆಡ್ಡೆ, ಬೀದಿ ಔಷಧಿಗಳ ಬಳಕೆ, ಮಾದಕ ವಸ್ತುಗಳು, ತಲೆ ಪೆಟ್ಟುಗಳಂತಹ ಇತರೆ ಸ್ಥಿತಿಗಳನ್ನು ಭೌತಿಕ ಪರೀಕ್ಷೆಗಳು ತಳ್ಳಿಹಾಕುವವು. ಛಿದ್ರಮನಸ್ಕತೆಯ ರೋಗನಿರ್ಣಯ ಮಾಡಲು ರೋಗಲಕ್ಷಣಗಳು ದೀರ್ಘಕಾಲದವರೆಗೆ ದೃಢವಾಗಿ ಪ್ರಸ್ತುತವಿರ ಬೇಕು ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ, ಔದ್ಯೋಗಿಕ ಕಾರ್ಯಗಳಲ್ಲಿ ಅಡ್ಡಿ ಅಥವ ವಿದುದ್ಧವಾಗಿರುವವು, ಹಾಗೂ ಸಾಮಾಜಿಕ ಹಾಗೂ ಪ್ರಸ್ಪರ ಸಂಬಂಧಗಳೊಡನೆ ಹಸ್ತಕ್ಷೇಪ ಮಾಡುವವು.

ಛಿದ್ರಮನಸ್ಕತೆಯ ವಿವಿಧ ಪ್ರಕಾರಗಳು

ಛಿದ್ರಮನಸ್ಕತೆಯಲ್ಲಿ ಐದು ಪ್ರಕಾರಗಳಿರುವವು, ನಿರ್ಧಾರಣೆ ಸಮಯದಲ್ಲಿ ಒಬ್ಬ ವ್ಯಕ್ತಿಯು ಹೊಂದಿರುವ ರೋಗಲಕ್ಷಣಗಳ ಆಧಾರದ ಮೇಲೆ ಪ್ರತಿಯೊಂದು ನಿರ್ಧರಿತವಾಗಿರುವವು.

  • ಬುದ್ಧಿಭ್ರಮಣೆಯಂಥ / ಸಂಶಯಗ್ರಸ್ತ ಛಿದ್ರಮನಸ್ಕತೆ:ಒಬ್ಬ ವ್ಯಕ್ತಿಯು ಒಂದು ಅಥವ ಹೆಚ್ಚಿನ ಭ್ರಮೆಗಳಿಂದ ಆವರಿಸಿಕೊಂಡಾಗ, ಅಥವ ಹೆಚ್ಚಾಗಿ ಕೇಳುವ ಭ್ರಾಂತಿಯನ್ನು ಒಳಗೊಂಡ, ಆದರೆ ಇದರಲ್ಲಿ ಅಸ್ತವ್ಯಸ್ಥಗೊಂಡ ಛಿದ್ರಮನಸ್ಕತೆಯ ರೋಗಲಕ್ಷಣಗಳು ಇರುವುದಿಲ್ಲ.
  • ಅವ್ಯವಸ್ಥೆಯ ಛಿದ್ರಮನಸ್ಕತೆ:ಪ್ರಮುಖ ರೋಗಲಕ್ಷಣಗಳೆಂದರೆ ಅಸ್ತವ್ಯಸ್ತ ಮಾತು ಮತ್ತು ವರ್ತನೆ, ಹಾಗೂ ನೇರ ಅಥವ ಸೂಕ್ತವಲ್ಲದ ಪರಿಣಾಮ.
  • ಕೆಟಾಟೋನಿಯಾದ ಛಿದ್ರಮನಸ್ಕತೆ:ಈ ಮಾದರಿಯ ಛಿದ್ರಮನಸ್ಕತೆಯವುಳ್ಳ ವ್ಯಕ್ತಿಯು ಈ ಕೆಳಗಿನವುಗಳಲ್ಲಿ ಕನಿಷ್ಠ ಎರಡು ರೋಗಲಕ್ಷಣಗಳನ್ನು ಹೊಂದಿರುವನು: ಚಲಿಸಲು ತೊಂದರೆ, ಚಲಿಸುವುದಕ್ಕೆ ಪ್ರತಿರೋಧ, ವಿಪರೀತ ಚಲನೆ, ಅತಿರೇಕ ಚಲನೆಗಳು, ಮತ್ತು / ಅಥವ ಇತರರು ಹೇಳುವುದನ್ನು ಅಥವ ಮಾಡುವುದನ್ನು ಪುನರಾವರ್ತಿಸುವುದು.
  • ಭೇದ ಕಲ್ಪಿಸದ / ವ್ಯತ್ಯಾಸ ಮಡದ ಛಿದ್ರಮನಸ್ಕತೆ:ಈ ಕೆಳಗಿನ ರೋಗಲಕ್ಷಣಗಳಲ್ಲಿ ಎರಡು ಅಥವಾ ಹೆಚ್ಚು ಕಂತುಗಳ ಮೂಲಕ ನಿರೂಪಿತಗೊಳ್ಳುತ್ತದೆ : ಭ್ರಮೆಗಳು, ಭ್ರಾಂತಿಗಳು, ಅಸ್ತವ್ಯಸ್ತಗೊಂಡ ಮಾತು ಅಥವ ವರ್ತನೆ ಅಥವ ನಕಾರಾತ್ಮಕ ರೋಗಲಕ್ಷಣಗಳು, ಆದರೆ ವ್ಯಕ್ತಿಯು ಬುದ್ಧಿಭ್ರಮಣೆ, ಅಸ್ತವ್ಯಸ್ಥತೆ ಅಥವ ಕ್ಯಟಾಟೋನಿಕ್ ಪ್ರಕಾರದ ಛಿದ್ರಮನಸ್ಕತೆ ಪತ್ತೆಗೆ ಅರ್ಹತೆ ಪಡೆಯುವುದಿಲ್ಲ.
  • ಉಳಿದಿರುವ ಛಿದ್ರಮನಸ್ಕತೆ:ಛಿದ್ರಮನಸ್ಕತೆಯ ಪೂರ್ಣ ಹಾರಿಬಂದ ವಿಶಿಷ್ಟ ಧನಾತ್ಮಕ ರೋಗಲಕ್ಷಣಗಳು (ಭ್ರಮೆಗಳು, ಮತಿವಿಕಲ್ಪ ಅಥವ ಪುಷ್ಟಿ ಸಂವೇದನೆ ಗಳಂತಹ ವರ್ತನೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನದ್ದಾಗಿ ಒಳಗೊಂಡಿರುವ) ಇಲ್ಲವಾದರೂ ರೋಗಿಯ ಕಾಯಿಲೆ ಕಡಿಮೆ ತೀವ್ರತೆ ಹೊಂದಿರುವುದು ಅಥವ ಕೇವಲ ನಕಾರಾತ್ಮಕ ರೋಗಲಕ್ಷಣಗಳನ್ನು ಹೊಂದಿರುವುದು (ಕಾರ್ಯದಲ್ಲಿ ಇಳಿತ ಮಾಡುವ ರೋಗಲಕ್ಷಣಗಳಾಗಿರುವ ನಿವರ್ತನೆ, ಆಸಕ್ತಿ ಇಲ್ಲದಿರುವುದು ಮತ್ತು ಮಾತನಾಡದಿರುವುದು ಗಳಂತಹ ರೋಗಲಕ್ಷಣಗಳಿಂದ ಕೂಡಿರುವುದು).

ಛಿದ್ರಮನಸ್ಕತೆಯ ಪರಿಣಾಮಗಳು

ಛಿದ್ರಮನಸ್ಕತೆಯ ಚಿಹ್ನೆ ಹಾಗೂ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದ್ದಲ್ಲಿ ಅಥವ ಸರಿಯಾಗಿ ಚಿಕಿತ್ಸೆ ಮಾಡದಿದ್ದಲ್ಲಿ, ಈ ರೋಗವಿರುವ ವ್ಯಕ್ತಿಗೆ ಹಾಗೂ ಆತ ಅಥವ ಆಕೆಯ ಸುತ್ತಮುತ್ತಲಿನಲ್ಲಿರುವವರಿಗೆ ಇದರ ಪರಿಣಾಮಗಳು ವಿಧ್ವಂಸಕವಾಗಿರುವವು. ಛಿದ್ರಮನಸ್ಕತೆಯಲ್ಲಿ ಸಂಭವಿಸಬಹುದಾದ ಕೆಲವು ಪರಿಣಾಮಗಳೆಂದರೆ:

  • ಸಂಬಂಧದಲ್ಲಿ ಸಮಸ್ಯೆಗಳು:ಛಿದ್ರಮನಸ್ಕತೆವುಳ್ಳ ಜನರು ಆಗಾಗ ನಿವರ್ತನೆ ಮಾಡುವುದರಿಂದ ಮತ್ತು ತಮ್ಮನ್ನು ಏಕಾಂಗಿಯಾಗಿಸುವುದರಿಂದ ಸಂಬಂಧಗಳು ಬಳಲುವವು. ಛಿದ್ರಮನಸ್ಕೆತೆವುಳ್ಳ ವ್ಯಕ್ತಿಯು ಸ್ನೇಹಿತರ ಮತ್ತು ಕುಟುಂಬದವರ ಮೇಲೆ ಸಂಶಯಪಡೆಯುವಂತೆ ಮಾಡಲು ಬುದ್ಧಿಭ್ರಮಣೆ ಕೂಡ ಕಾರಣವಾಗಬಹುದು.
  • ಸಾಮಾನ್ಯ ದಿನನಿತ್ಯದ ಚಟುವಟಿಕೆಗಳಲ್ಲಿ ಅಡ್ಡಿ:ಛಿದ್ರಮನಸ್ಕತೆಯಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ಗಣನೀಯವಾಗಿ ಅಡ್ಡಿಯಾಗುವುದು. ಇದಕ್ಕೆ ಕಾರಣವೆಂದರೆ ಸಾಮಾಜಿಕ ತೊಂದರೆಗಳು ಜೊತೆಗೆ ಪ್ರತಿದಿನದ ಕೆಲಸಗಳು ಮಾಡಲು ಸಾಧ್ಯವಾಗದಂತಿದ್ದರೂ ಕಷ್ಟಕರವಾಗುವವು. ಛಿದ್ರಮನಸ್ಕತೆವುಳ್ಳ ವ್ಯಕ್ತಿಯ ಭ್ರಮೆಗಳು, ತಪ್ಪು ಅಭಿಪ್ರಾಯಗಳು, ಮತ್ತು ಅವ್ಯವಸ್ಥಿತ ಆಲೋಚನೆಗಳು ಆಕೆ / ಆತನಿಗೆ ಸಾಮಾನ್ಯವಾಗಿರುವ ಸ್ನಾನ, ತಿನ್ನುವುದು, ಅಥವ ಅಲ್ಪ ಚಲನೆಯನ್ನು ಮಾಡುವುದರಿಂದ ತಡೆಯುತ್ತದೆ.
  • ಔದ್ಯಮಿಕ ಕಾರ್ಯಗಳನ್ನು ಮಾಡುವಲ್ಲಿ ಕಷ್ಟ:ಕದಡಿದ ಸಂಬಂಧಗಳು ಮತ್ತು ದಿನನಿತ್ಯದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಕಷ್ಟವಾಗಿರುವುದರಿಂದ ಛಿದ್ರಮನಸ್ಕತೆವುಳ್ಳ ವ್ಯಕ್ತಿಗಳು ತಮ್ಮ ಕೆಲಸದ ಜವಾಬ್ದಾರಿಗಳನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ.
  • ಮದ್ಯಪಾನ ಮತ್ತು ಮಾದಕ ವ್ಯಸನೆ:ಛಿದ್ರಮನಸ್ಕತೆವುಳ್ಳ ವ್ಯಕ್ತಿಗಳು ಆಗಾಗ ಮದ್ಯ ಅಥವ ಮಾದಕ ವ್ಯಸನೆಗಳ ಸಮಸ್ಯೆಗಳಿಗೆ ಒಳಗಾಗುವರು. ಇವುಗಳನ್ನು ಸ್ವಯಂ-ಚಿಕಿತ್ಸೆ, ಅಥವ ನಿವಾರಿಸುವ ಲಕ್ಷಣಗಳ ಪ್ರಯತ್ನಗಳಂತೆ ಆಗಾಗ್ಗೆ ಉಪಯೋಗಿಸಲಾಗುವುದು. ಜೊತೆಗೆ, ಇವರು ದೊಡ್ಡ ಧೂಮಪಾನಿಗಳಾಗಿರಬಹುದು, ಇದು ಒಂದು ಸಂಕೀರ್ಣ ಪರಿಸ್ಥಿತಿ ಏಕೆಂದರೆ ಕಾಯಿಲೆಗೆ ಸೂಚಿಸಲಾಗಿರುವ ಚಿಕಿತ್ಸೆಯಲ್ಲಿ ಧೂಮಪಾನವು ಅಡ್ಡಿಯನ್ನುಂಟು ಮಾಡಬಹುದು.
  • ಹೆಚ್ಚಿದ ಆತ್ಮಹತ್ಯೆಯ ಆತಂಕ:ಛಿದ್ರಮನಸ್ಕತೆವುಳ್ಳ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನಗಳು ಅಪಾಯ ಅತಿ ಹೆಚ್ಚಾಗಿರುವುದು. ಯಾವುದೇ ಆತ್ಮ ಹತ್ಯೆಯ ಮಾತು, ಬೆದರಿಕೆಗಳು, ಅಥವ ಸನ್ನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಛಿದ್ರಮನಸ್ಕತೆವುಳ್ಳ ವ್ಯಕ್ತಿಗಳು ಮುಖ್ಯವಾಗಿ ಮನೋವಿಕೃತ ಸಂದರ್ಭದಲ್ಲಿ ಮತ್ತು ಖಿನ್ನತೆಯ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಸುಮಾರು 10% ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡು ಸಾಯುವರು.
  • ಛಿದ್ರಮನಸ್ಕತೆ ಮತ್ತು ದೌರ್ಜನ್ಯ:ಛಿದ್ರಮನಸ್ಕತೆವುಳ್ಳ ವ್ಯಕ್ತಿಗಳು ಸಾಮಾನ್ಯವಾಗಿ ಹಿಂಸಾಚಾರ ಮಾಡುವುದಿಲ್ಲ. ವಾಸ್ತವವಾಗಿ, ಅತ್ಯಂತ ಹಿಂಸಾತ್ಮಕ ಅಪರಾಧಗಳನ್ನು ಛಿದ್ರಮನಸ್ಕತೆವುಳ್ಳ ವ್ಯಕ್ತಿಗಳು ಎಸಗುವುದಿಲ್ಲ. ಆದಾಗ್ಯೂ, ಶೋಷಣೆಯ ಭ್ರಮೆಗಳಂತಹ ಕೆಲವು ರೋಗಲಕ್ಷಣಗಳು ಹಿಂಸಾಚಾರಕ್ಕೆ ಸಂಬಂಧಿಸಿದ್ದವು. ಮಾದಕ ವಸ್ತುಗಳ ವ್ಯಸನವು ಒಬ್ಬ ವ್ಯಕ್ತಿಯು ಹಿಂಸಾತ್ಮಕವಾಗಿಸುವ ಸಾಧ್ಯತೆಗಳು ಹೆಚ್ಚಿಸುವವು. ಛಿದ್ರಮನಸ್ಕತೆವುಳ್ಳ ಒಬ್ಬ ವ್ಯಕ್ತಿಯು ಹಿಂಸಾತ್ಮಕವಾದಲ್ಲಿ, ಹಿಂಸೆಯು ಸಾಮಾನ್ಯವಾಗಿ ಕುಟುಂಬದ ಸದಸ್ಯರೆಡೆಗೆ ನಿರ್ದೇಶಿತವಾಗಿರುವುದು ಮತ್ತು ಮನೆಯಲ್ಲಿ ನಡೆಯುವುದು.

ಚಿಕಿತ್ಸೆ

ಛಿದ್ರಮನಸ್ಕತೆಗೆ ಚಿಕಿತ್ಸೆಯ ಆಯ್ಕೆಗಳು ಉತ್ತಮವಾಗಿವೆ, ಮತ್ತು ಖಾಯಿಲೆಯತ್ತ ದೃಷ್ಠಿಕೋನದ ಸುಧಾರಣೆಯು ಮುಂದುವರೆದಿದೆ. ಔಷಧೋಪಚಾರ, ಮಾನಸಿಕ ಚಿಕಿತ್ಸೆ, ಮತ್ತು ಒಂದು ಬಲಿಷ್ಠ ಬೆಂಬಲ ಕಾರ್ಯಜಾಲ ದಿಂದ ಛಿದ್ರಮನಸ್ಕತೆವುಳ್ಳ ಅನೇಕ ಜನಗಳಿಗೆ ತಮ್ಮ ರೋಗಲಕ್ಷಣಗಳನ್ನು ನಿಯಂತ್ರಿಸಲು, ಹೆಚ್ಚಿನ ಸ್ವಾತಂತ್ರ್ಯ ಪಡೆಯಲು, ಮತ್ತು ತೃಪ್ತಿರಕರ ಜೀವನ ನಡೆಸಲು ಸಾಧ್ಯವಾಗಿದೆ.

ಚಿಕಿತ್ಸೆ ಮತ್ತು ಮಾನಸಿಕ ಹಸ್ತಕ್ಷೇಪಗಳ ಮೇಲೆ ನಿರ್ವಹಣೆಯು ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಛಿದ್ರಮನಸ್ಕತೆಯ ತೀವ್ರ ಸಂದರ್ಭದಲ್ಲಿ ಮಾತ್ರ ಆಸ್ಪತ್ರಗೆ ದಾಖಲಿಸುವ ಅಗತ್ಯವಿರುವುದು. ಛಿದ್ರಮನಸ್ಕತೆಗೆ ಮಾನಸಿಕ ಚಿಕಿತ್ಸೆಯ ಮೂಲ ಆಧಾರವೆಂದರೆ ಹುಚ್ಚು ನಿರೋಧಕ ಔಷಧಿಗಳು. ನಿಯಮಿತವಾಗಿ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದ ಅಥವ ಒಪ್ಪದ ರೋಗಿಗಳಿಗೆ, ನಿಯಂತ್ರಣ ಸಾಧಿಸಲು, ಪ್ರತಿ ಎರಡು ವಾರಗಳಲ್ಲಿ ದೀರ್ಘಕಾಲದ ಪರಿಣಾಮಬೀರುವ ಹುಚ್ಚುನಿರೋಧಕ (ಚುಚ್ಚುಮದ್ದು) ಗಳನ್ನು ನೀಡಲಾಗುವುದು.

ಎಲೆಕ್ಟ್ರೊಕನ್ವಲ್ಸಿವ್ ಚಿಕಿತ್ಸೆಯನ್ನು ಒಂದು ಪ್ರಥಮ ಸಾಲಿನ ಚಿಕಿತ್ಸೆ ಎಂದು ಪರಿಗಣಿಸಲಾಗುವುದಿಲ್ಲ, ಆದರೂ ಇತರೆ ಚಿಕಿತ್ಸೆಗಳು ಪರಿಣಾಮಕಾರಿಯಾಗದಿದ್ದ ಪ್ರಕರಣಗಳಲ್ಲಿ ಶಿಫಾರಸ್ಸು ಮಾಡಬಹುದಾಗಿದೆ.

ಉತ್ತಮ ನಿರ್ವಹಣೆಗಾಗಿ ಸಲಹೆಗಳು

  • ಛಿದ್ರಮನಸ್ಕತೆಯ ಆರಂಭಿಕ ಚಿಹ್ನೆಗಳು ಪತ್ತೆಯಾದಲ್ಲಿ, ಕೂಡಲೆ ಮನೋರೋಗ ತಜ್ಞರ ಸಲಹೆ ಪಡೆಯಿರಿ.
  • ವೈದ್ಯರೊಂದಿಗೆ ಮುಚ್ಚುಮರೆಯಿಲ್ಲದೆ ಮಾತನಾಡಿ ಮತ್ತು ರೋಗಲಕ್ಷಣ, ಔಷಧೀಕರಣ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ.
  • ಔಷಧಿಗಳ ಪ್ರಮಾಣ, ಚಿಕಿತ್ಸೆಯ ಅವಧಿ ಕುರಿತು ಸೂಚನೆಗಳನ್ನು ಸರಿಯಾಗಿ ಪಾಲಿಸಿ. ಔಷಧಿಗಳನ್ನು ಕಡಿಮೆ ಅಥವ ನಿಲ್ಲಿಸುವುದನ್ನು ಎಂದಿಗೂ ಮಾಡದಿರಿ.
  • ನಂಬಲಾರ್ಹ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಒಂದು ಬೆಂಬಲ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಿ.
  • ಒತ್ತಡವು ಹುಚ್ಚು / ಮನೋವಿಕಾರವನ್ನು ಪ್ರಚೋದಿಸುವುದರಿಂದ ನಿಮ್ಮ ಮಿತಿಗಳನ್ನು ಅರಿತುಕೊಳ್ಳುತ್ತ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ.
  • ಸಾಕಷ್ಟು ವ್ಯಾಯಾಮ, ಪೌಷ್ಠಿಕ ಆಹಾರ ಮತ್ತು ನಿದ್ರೆಯ ನಿರ್ವಹಣೆ ಮಾಡಿಕೊಳ್ಳಿ.
  • ಮದ್ಯ ಅಥವ ಇತರೆ ನಿಷಿದ್ಧ ಮಾದಕಗಳನ್ನು ತೊರೆಯಿರಿ.
  • ಜೀವನದ ಗುರಿಗಳತ್ತ ಕಾರ್ಯನಿರ್ವಹಿಸಿ.
  • ನಿಯಮಿತ ಚಿಕಿತ್ಸೆ ಮತ್ತು ಇತರೆ ಸೂಚನೆಗಳನ್ನು ಪಾಲಿಸುವಲ್ಲಿ ಕುಟುಂಬದ ಸದಸ್ಯರು ರೋಗಿಗೆ ಸಹಾಯ ಮಾಡಬೇಕು ಮತ್ತು ಅಗತ್ಯವಿದ್ದಲ್ಲಿ ಸಂಬಂಧಪಟ್ಟ ವೈದ್ಯರಿಗೆ ಕೂಡಲೆ ವರದಿ ಮಾಡಿ.

ಛಿದ್ರಮನಸ್ಕತೆಯ ಕುರಿತು ಪ್ರೋತ್ಸಾಹದಾಯಕ ಅಂಶಗಳು

  • ಛಿದ್ರಮನಸ್ಕತೆಯು ಗುಣಪಡಿಸುವಂತದ್ದು. ಪ್ರಸ್ತುತ, ಛಿದ್ರಮನಸ್ಕತೆಗೆ ಯಾವುದೇ ಮದ್ದು ಇಲ್ಲ, ಆದರೆ ಕಾಯಿಲೆಯನ್ನು ಯಶಸ್ವಿಯಾಗಿ ಗುಣಪಡಿಸಬಹುದು ಮತ್ತು ನಿರ್ವಹಣೆ ಮಾಡಬಹುದಾಗಿದೆ. ಅತ್ಯಂತ ಮಹತ್ವದ ಅಂಶವೆಂದರೆ ಒಂದು ಬಲವಾದ ಬೆಂಬಲ ವ್ಯವಸ್ಥೆ ನಿರ್ಮಿಸುವುದು ಮತ್ತು ನಿಮ್ಮ ಅಗತ್ಯಗಳಿಗನುಗುಣವಾಗಿ ಸರಿಯಾದ ಚಿಕಿತ್ಸೆ ಪಡೆಯುವುದು.
  • ನೀವು ಒಂದು ಪರಿಪೂರ್ಣ ಹಾಗೂ ಅರ್ಥಪೂರ್ಣ ಜೀವನ ಸಂತೋಷವನ್ನು ಪಡೆಯಬಹುದು. ಸರಿಯಾದ ರೀತಿಯಲ್ಲಿ ಚಿಕಿತ್ಸೆಯಾದಲ್ಲಿ, ಛಿದ್ರಮನಸ್ಕತೆವುಳ್ಳ ಹಲವು ಜನಗಳಿಗೆ ಸಮಾಧಾನಕರ ಸಂಬಂಧಗಳನ್ನು ಹೊಂದಲು ಸಾಧ್ಯವಾಗುವುದು, ಕೆಲಸ ಮಾಡಬಹುದು ಅಥವ ಇತರೆ ಅರ್ಥಪೂರ್ಣ ಚಟುವಟಿಕೆಗಳನ್ನು ಮುಂದುವರೆಸಬಹುದು, ಸಮುದಾಯದ ಭಾಗವಾಗಿರಬಹುದು, ಮತ್ತು ಜೀವನದ ಆನಂದ ಪೆಡೆಯಬಹುದು.
  • ನಿಮಗೆ ಕೇವಲ ಛಿದ್ರಮನಸ್ಕತೆ ಇದೆ ಎಂಬ ಕಾರಣದಿಂದ ನಿಮಗೆ ಆಸ್ಪತ್ರೆಯಲ್ಲಿ ದಾಖಲು ಮಾಡಬೇಕಿಲ್ಲ. ನಿಮಗೆ ಸರಿಯಾದ ಚಿಕಿತ್ಸೆ ಸಿಗುತ್ತಿದೆ ಮತ್ತು ನೀವು ಅದಕ್ಕೆ ಬದ್ಧರಾಗಿದ್ದೀರಿ ಅಂದರೆ, ನಿಮಗೆ ಸುರಕ್ಷಿತವಾಗಿರಿಸಲು ಆಸ್ಪತ್ರೆಯಲ್ಲಿ ದಾಖಲೀಕರಣಗೊಳಿಸುವ ಅಗತ್ಯತೆಯ ಬಿಕ್ಕಟ್ಟಿನ ಪರಿಸ್ಥಿತಿ ಅನುಭವಿಸುವ ಸಾಧ್ಯತೆಗಳು ಅತಿ ಕಡಿಮೆ.
  • ಛಿದ್ರಮನಸ್ಕತೆವುಳ್ಳ ಅನೇಕ ಜನರ ಸ್ಥಿತಿಯು ಸಮಯ ಕಳೆದಂತೆ ಉತ್ತಮವಾಗುವುದು. ಛಿದ್ರಮನಸ್ಕತೆವುಳ್ಳ ಜನರು ಸಾಮಾನ್ಯ ಕ್ರಿಯೆಯನ್ನು ಹಿಂತಿರುಗಿ ಪಡೆಯಬಹುದು ಮತ್ತು ರೋಗಲಕ್ಷಣ ಮುಕ್ತವಾಗಬಹುದು. ನೀವು ಪ್ರಸ್ತುತ ಯಾವುದೇ ಸವಾಲನ್ನು ಎದುರಿಸುತ್ತಿದ್ದಾದರೂ, ಸದಾ ಒಂದು ಆಶಾಕಿರಣ ವಿರುವುದು.

ಮೂಲ:ಡಾ. ಸುಧಾ ರಾಣಿ, ಮನೋರೋಗ ಚಿಕಿತ್ಸೆ ಯ ಸಹಾಯಕ ಪ್ರಾಧ್ಯಾಪಕರು, ಮಾನಸಿಕ ಆರೋಗ್ಯ ಸಂಸ್ಥೆ, ಹೈದರಾಬಾದ್, ಆಂಧ್ರ ಪ್ರದೇಶ

ಕೊನೆಯ ಮಾರ್ಪಾಟು : 5/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate