অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಸ್ತ್ರಕ್ರಿಯೆ ಅಗತ್ಯವಿರುವ ಕಾಮಾಲೆ ರೋಗಗಳು

ದೇಹ ದ್ರವಗಳಲ್ಲಿ ಬೈಲಿರೂಬಿನ್­ನ ಸಾಂದ್ರತೆ ಹೆಚ್ಚಿ, ವ್ಯಕ್ತಿಯ ಚರ್ಮ, ಕಣ್ಣುಗುಡ್ಡೆ, ಶೇಷ¾ ಪದರಗಳು ಹಳದಿ ಮಿಶ್ರಿತ ವರ್ಣಕ್ಕೆ ತಿರುಗುವ ರೋಗವನ್ನು ನಾವು ಜಾಂಡೀಸ್ ಎಂದು ಗುರು ತಿಸುತೆೆ¤àವೆ. ವೈದ್ಯಕೀಯವಾಗಿ, ಪ್ಲಾಸ್ಮಾ ದ್ರವದಲ್ಲಿ ರುವ ಬೈಲಿರೂಬಿನ್ ಅಂಶ 3/ ಸಿಲೀಟರ್­ಗಿತ ಹೆಚ್ಚಾದಾಗ ಅಂತ­ಹ ವ್ಯಕ್ತಿ ಯಲ್ಲಿ ಜಾಂಡೀಸ್ ಇದೆ ಎಂದು ಹೇಳುತ್ತೇವೆ.


ಜಾಂಡೀಸ್ ಒಂದು ರೋಗವಲ್ಲ. ಅದೊಂದು ರೋಗ ಲಕ್ಷಣ ಮಾತ್ರ. ಹೆಚ್ಚಾಗಿ ರೋಗಿಯನ್ನು ವೈದ್ಯರ ಬಳಿಗೆ ಕರೆತರುವ ಮೂದಲೇ ಆತನ ಕುಟುಂಬಿಕರು ರೋಗವನ್ನು ಗುರುತಿಸಿರುತ್ತಾರೆ. ಈ ರೋಗ ಸ್ಥಿತಿಗೆ ಹಲವಾರು ಕಾರಣಗಳಿರುತ್ತವೆ. ಅವುಗಳಲ್ಲಿ ಕೆಲವು, ಗಂಭೀರ ಕಾರಣಗಳು. ಇಂದು ಈ ಎಲ್ಲ ಕಾರಣಗಳನ್ನು ವಿಶ್ಲೇಷಿಸಿ, ವಿವರಿಸುವುದು ವೈದ್ಯಕೀಯ ವಿಜ್ಞಾನಕ್ಕೆ ಸಾಧ್ಯವಾಗಿದೆ.


ಪ್ರಾಚೀನ ಗ್ರೀಕರು ಈ ದೇಹ ಹಳದಿ ವರ್ಣಕ್ಕೆ ತಿರುಗುವ ರೋಗವನ್ನು ಗುರುತಿಸಿ ದ್ದರು. ಹಿಪೊ³ಕ್ರೆಟಸ್ ಸಹಿತ, ಅಂದಿನ ಎಲ್ಲ ವೈದ್ಯ ಮಹಾಶಯರೂ ಈ ತೊಂದರೆಗೆ, ಪಿತ್ತ ರಸದ ಪರಿಚಲನೆಗೆ ಪಿತ್ತಕೋಶದಲ್ಲಿ ಉಂಟಾಗಿ ರುವ ಅಡ್ಡಿಗಳು ಕಾರಣ ಎಂದು ತಿಳಿದಿದ್ದರು.


ಬೈಲಿರೂಬಿನ್­ಗಳು ಪ್ರಾಯ ಸಂದು ನಾಶ ಹೊಂದಿದ ಕೆಂಪು ರಕ್ತಕಣಗಳಲ್ಲಿರುವ ಹಿಮೂಗ್ಲೋಬಿನ್ನಿಂದ ವಿಸರ್ಜಿತವಾಗ ಬೇಕಾಗಿರುವ ಅಂಶಗಳು. ತನ್ನ ಗುಣ ಪ್ರವೃತ್ತಿ ಯಲ್ಲಿ ಕರಗದ, ಜೋಡಿರಹಿತ­ ರಸಾಯನಿಕ ಅಂಶವಾಗಿರುವ ಬೈಲಿರೂಬಿನ್, ಆಲುºಮಿನ್ ಗಳ ಜೊತೆ ಪಿತ್ತಕೋಶವನ್ನು ಸೇರುತ್ತದೆ. ಪಿತ್ತಕೋಶದ ಜೀವಕೋಶಗಳಲ್ಲಿರುವ ಯುರಿಡೈನ್ ಡೈಫಾಸೆ–àಟ್&ಗುÉಕುರೋನಿಲ್ ಟ್ರಾನ್ಸ್­ಫರೇಸ್ ಕಿಣÌವು ಈ ಕರಗದ, ಜೋಡಿ ರಹಿತವಾಗಿರುವ ಬೈಲಿರೂಬಿನ್ನ್ನು ಗುÉಕೊ ರಾನಿಕ್ ಆಮ್ಲದ  ಜೊತೆೆ ಜೋಡಿಮಾಡುತ್ತದೆ. ಈ ಜೋಡಿ ಸಹಿತ ಬೈಲಿರೂಬಿನ್ ಮೂನೊಗುÉಕರೊನೈಡ್ ಹಾಗೂ ಬೈಲಿರೂಬಿನ್ ಮೂನೊಗುÉಕರೊನೈಡ್ ಹಾಗೂ ಬೈಲಿರೂಬಿನ್ ಡೈಗುÉಕರೊನೈಡ್­ಗಳು ಈ ಪರಿವರ್ತನೆಯ ವೇಳೆ ಕರಗಬಲ್ಲ ಗುಣವನ್ನು ಪಡೆದಿರುತ್ತವೆ.


ಈ ಕರಗಬಲ್ಲ ಬೈಲಿರೂಬಿನ್ಪಿತ್ತರಸದ ಜೊತೆ ಸೇರಿ, ಕರುಳಿನಲ್ಲಿ ತಲುಪಿ, ಅಲ್ಲಿ ಯುರೋಬೈಲಿನೊಜೆನ್ ಆಗಿ ಪರಿವರ್ತಿತ­ ಗೊಳ್ಳುತ್ತದೆ ಮತ್ತು ಮೂತ್ರಪಿಂಡಗಳು ಇದನ್ನು ಹೀರಿಕೊಂಡು, ಮೂತ್ರದ ಜೊತೆ ದೇಹದಿಂದ ಹೊರಗೆ ವಿಸರ್ಜಿಸುತ್ತವೆ. ಇದು ಆರೋಗ್ಯವಂತ ಮನುಷ್ಯರಲ್ಲಿ ಬೈಲಿರೂಬಿನ್ ಉತ್ಪಾದನೆ&ವಿಸರ್ಜನೆಗಳ ಸ್ವರೂಪ.

ವಿಧಗಳು


ಬೈಲಿರೂಬಿನ್ ವಿಸರ್ಜನೆಗೆ ಅಡಚಣೆೆ ಆಗಿ ರುವ ಸ್ಥಿತಿಗಳನ್ನು 2 ವರ್ಗಗಳಲ್ಲಿ ವಿಂಗಡಿಸಿ, ವಿವರಿಸಬಹುದು. ಮೂದಲನೆಯದು "ವೈದ್ಯಕೀಯ' ಜಾಂಡೀಸ್. ಇಲ್ಲಿ ಬೈಲಿರೂಬಿನ್ ಉತ್ಪಾದನೆ ಹೆಚ್ಚಿ, ಅದರ ವಿಸರ್ಜನೆಯ ಪ್ರಮಾಣ ಕಡಿಮೆಯಾಗಿ, ಕಾಮಾಲೆಯ ಲಕ್ಷಣಗಳು ಕಾಣಿಸಿ ಕೊಂಡಿರುತ್ತವೆ.
ಇನ್ನೊಂದು, ಶಸ್ತ್ರಕ್ರಿಯೆಯ ಅಗತ್ಯವಿರುವ ಜಾಂಡೀಸ್. ಪಿತ್ತರಸದ ಪರಿಚಲನೆಗೆ ಅಡ್ಡಿ ಉಂಟಾಗಿ ಜಾಂಡೀಸ್ ಲಕ್ಷಣಗಳು ಕಾಣಿಸಿ ಕೊಂಡಿರುವ ಈ ವರ್ಗದಲ್ಲಿ, ಶಸ್ತ್ರಕ್ರಿಯೆಗಳ ಮೂಲಕ ಪರಿಚಲನೆಯನ್ನು ಸುಗಮಗೊಳಿ ಸುವುದೇ ಚಿಕಿತ್ಸಾ ವಿಧಾನ. ಈ ರೀತಿಯ ಶಸ್ತ್ರಕ್ರಿಯೆ ಅಗತ್ಯವಿರುವ ಜಾಂಡೀಸ್­ಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಕಾರಣಗಳು


ಪಿತ್ತರಸದ ಪರಿಚಲನೆಗೆ ಅಡ್ಡಿಗಳು ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು.
ಅ) ಪಿತ್ತಕೋಶದಲ್ಲಿ

  • ಕಲ್ಲು.
  • ಪರಕೀಯ ವಸ್ತುಗಳು&ಪರೋಪ ಜೀವಿಗಳು.
  • ಒಡೆದು ಹೋದ  ಆಕಾರದ ನಾಳ.


ಆ) ಪಿತ್ತಕೋಶದ ಗೋಡೆಯಲ್ಲಿ

  • ಪಿತ್ತಕೋಶದ ಗೋಡೆಯಲ್ಲಿ ಸಿಸ್ಟ್ .
  • ಆಘಾತ&ಜಖಂಗಳಿಂದ ಹಾದಿ ಸಪುರಗೊಂಡಿರುವುದು, ಇಲ್ಲವೇ ಮುಚ್ಚಿರುವುದು.
  • ಪಿತ್ತರಸ ಪರಿಚಲನೆಗೆ ಅಡ್ಡಿಯಾಗಿ, ಪಿತ್ತಕೋಶದ ಉರಿಯೂತ ಉಂಟಾಗಿರುವುದು.
  • ಏಡ್ಸ್ನಿಂದಾಗಿ ಪಿತ್ತಕೋಶಕ್ಕೆ ಸೋಂಕು ತಗುಲಿ, ಹದಗೆಟ್ಟಿರುವುದು.
  • ಪಿತ್ತಕೋಶದ ಗಡ್ಡೆಗಳು.


ಇ) ಪಿತ್ತಕೋಶದ ಹೊರಗೆ

  • ಮೇದೋಜೀರಕ ಗ್ರಂಥಿಯ ತುದಿಯ ಕ್ಯಾನ್ಸರ್.
  • ಪಿತ್ತಕೋಶದ ನಾಳಾಗ್ರದ ಕ್ಯಾನ್ಸರ್.
  • ಮೇದೋಜೀರಕದ ಉರಿಯೂತ.
  • ಸೋಂಕು, ಕ್ಯಾನ್ಸರ್ ಗಡ್ಡೆಗಳು ಹರಡಿರುವ ದುಗ್ಧರಸ ಗ್ರಂಥಿಗಳು.

ರೋಗ ಲಕ್ಷಣಗಳು


ಪಿತ್ತಕೋಶದಲ್ಲಿ ಸರ್ಜರಿ ಅಗತ್ಯವಿರುವ ಕಾಮಾಲೆ ರೋಗದ ಲಕ್ಷಣಗಳು ಈ ಕೆಳಗಿನಂತಿರುತ್ತವೆ.

  • ಜಾಂಡೀಸ್ ಲಕ್ಷಣಗಳು, ದಟ್ಟ ಹಳದಿ ಬಣ್ಣದ ಮೂತ್ರ, ಮಾಸು ಬಣ್ಣದ ಮಲವಿಸರ್ಜನೆ ಮತ್ತು ತುರಿಕೆ.
  • ಪಿತ್ತಕೋಶದ ಉರಿಯೂತ ಇರುವವರಲ್ಲಿ ನೋವು, ತೀವ್ರಜ್ವರ.
  • ದೇಹ ತೂಕ ಇಳಿಕೆ, ರಕ್ತಸ್ರಾವ.
  • ದೇಹದಲ್ಲಿ ಕಲೆಗಳು.
  • ಕಿಬ್ಬೊಟ್ಟೆಯಲ್ಲಿ ಒತ್ತಿ ನೋಡಿದರೆ ಸಿಗಬಲ್ಲ ಗಡ್ಡೆ ಬೆಳವಣಿಗೆ ಅಂಶ.
  • ಹಿಗ್ಗಿರುವುದರಿಂದ ಮುಟ್ಟಿ ಗುರುತಿಸಬಲ್ಲ ಪಿತ್ತಕೋಶ, ಪಿತ್ತಜನಕಾಂಗ, ಮೇದೋಜೀರಕಾಂಗ.
  • ಹಿಂದಿನ ಶಸ್ತ್ರಕ್ರಿಯೆಯ ಗಾಯ.
  • ಕಿಬ್ಬೊಟ್ಟೆಯ ಒಳಭಾಗದಲ್ಲಿ ದ್ರವ ತುಂಬಿರುವುದು.
  • ಪಿತ್ತಕೋಶದ ಜೀವಕೋಶಗಳ ವೈಫಲ್ಯದ ಸಂಕೇತಗಳು.
  • ಕಾಲರ್ ಮೂಳೆಯ ಮೇಲಾ½ಗದಲ್ಲಿ ದುಗ್ಧ­­ರಸ ಗ್ರಂಥಿಗಳು ಉಬ್ಬಿರುವುದು.
  • ಈ ಹಿಂದೆ ಪಿತ್ತಕೋಶದ ಶಸ್ತ್ರಕ್ರಿಯೆ ಆಗಿರುವುದು.

ತಪಾಸಣೆಗಳು

  • ರಕ್ತದಲ್ಲಿ ಬೈಲಿರೂಬಿನ್ ಅಂಶ ತಪಾಸಣೆ.
  • ರಕ್ತದಲ್ಲಿ ಆಲ್ಕಲೈನ್ ಫಾಸೆ–àಟೇಸ್, ಟ್ರಾನ್ಸ್ ಅಮೈನೇಸ್, ಅಮೈಲೇಸ್ ಹಾಗೂ ಲಿಪೇಸ್ ಅಂಶಗಳ ಪತ್ತೆ .
  • ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ
  • ಪಿತ್ತಕೋಶದ ಹಿಗ್ಗಿರುವಿಕೆಯನ್ನು ಖಚಿತಪಡಿಸಿಕೊಳ್ಳುವುದು.
  • ಪಿತ್ತಕೋಶದ ಕಲ್ಲು ಅಥವಾ ಕ್ಯಾನ್ಸರ್ ಗಡ್ಡೆಯನ್ನು ಖಚಿತಪಡಿಸಿಕೊಳ್ಳುವುದು.
  • ಮೇದೋಜೀರಕದಲ್ಲಿ ಗಡ್ಡೆಯನ್ನು ಖಚಿತಪಡಿಸಿಕೊಳ್ಳುವುದು.
  • ಎಂಡೊಸ್ಕೋಪಿಕ್ ಅಲ್ಟ್ರಾ ಸೊನೊಗ್ರಫಿ ಮತ್ತು ರೋಗ ತಪಾಸಣೆಗಾಗಿ ಲ್ಯಾಪರೋಸ್ಕೋಪಿ.
  • ಸಿ.ಟಿ. ಸ್ಕ್ಯಾನ್ ಮೂಲಕ ಮೇದೋಜೀರಕದ ಗಡ್ಡೆಗಳನ್ನು ಖಚಿತಪಡಿಸಿಕೊಳ್ಳುವುದು.
  • ಕೊಲಾಂಜಿಯೋಗ್ರಫಿ ನಡೆಸಿ, ಪಿತ್ತರಸ ಪ್ರವಾಹಕ್ಕೆ ಅಡ್ಡಿ ಆಗಿರುವ ಸ್ಥಳವನ್ನು ಖಚಿತಪಡಿಸಿಕೊಳ್ಳುವುದು. ಶಸ್ತ್ರಕ್ರಿಯೆ ಅಗತ್ಯ ಇಲ್ಲದಿದ್ದಲ್ಲಿ, ಮ್ಯಾಗ್ನೆಟಿಕ್ ರೆಸೊನಾನ್ಸ್ ಕೊಲಾಂಜಿಯೋಗ್ರಫಿ ನಡೆಸಬಹುದು.
  • ಪಿತ್ತರಸ ಸ್ರಾವ ಪತ್ತೆಗೆ ಬೈಲರಿ ಸಿಂಟಿಗ್ರಾಫಿ.

ಚಿಕಿತ್ಸೆಗಳು


ಗುಣವಾಗಬಲ್ಲ ಅಡ್ಡಿಗಳಿರುವಲ್ಲಿ

  • ಪಿತ್ತಕೋಶದ ಕಲ್ಲುಗಳನ್ನು ತೆರೆದ ಅಥವಾ ಎಂಡೊಸ್ಕೋಪಿಕ್ ಶಸ್ತ್ರಕ್ರಿಯೆಯ ಮೂಲಕ ತೆಗೆಯಬಹುದು.
  • ಪಿತ್ತಕೋಶದಲ್ಲಿ ಸಿಸ್ಟ್ಗಳು ಅಥವಾ ತೆೆರವು ಸಪುರಗೊಂಡಿರುವ ತೊಂದರೆಗಳನ್ನು ಶಸ್ತ್ರಕ್ರಿಯೆಯ ಮೂಲಕ ಸರಿಪಡಿಸಬಹುದು.
  • ನಾಳಾಗ್ರದ ಸಣ್ಣಗಡ್ಡೆಗಳನ್ನು ಶಸ್ತ್ರ ಕ್ರಿಯೆಯ ಮೂಲಕ ತೆೆಗೆದು ಹಾಕಬಹುದು.
  • ಮೇದೋಜೀರಕದ ತುದಿಯ ಕ್ಯಾನ್ಸರ್ನ್ನು ಶಸ್ತ್ರಕ್ರಿಯೆ ಮೂಲಕ ಆರಂಭಿಕ ಹಂತದಲ್ಲಿ ಗುಣಪಡಿಸಬಹುದು.

ಗುಣವಾಗದಿರುವ ಕ್ಯಾನ್ಸರ್ ತೊಂದರೆಗಳಿರುವವರಲ್ಲಿ

  • ಅಡ್ಡಿಗಳಿರುವಲ್ಲಿ ಸ್ಟೆಂಟ್­ಗಳನ್ನು ಅಳ ವಡಿಸಿ, ಹಾದಿಯನ್ನು ಸುಗಮಗೊಳಿಸುವುದು.
  • ಕೆಲವು ಪ್ರಕರಣಗಳಲ್ಲಿ ತ್ರಿಮುಖ ಬೈಪಾಸ್ ಶಸ್ತ್ರಕ್ರಿಯೆ ಅಗತ್ಯ ಬೀಳಬಹುದು.
  • ತಡೆಯಲಾಗದ ನೋವು ಇರುವವರಲ್ಲಿ ಪ್ರಜ್ಞಾ ನರಗಳಿಗೆ ಅಡ್ಡಿ ಮಾಡಿ, ನೋವು ಅನುಭವವಾಗದಂತೆ ನೋಡಿಕೊಳ್ಳುವುದು.

ಈ ಎಲ್ಲ ಶಸ್ತ್ರಕ್ರಿಯೆಗಳು ಬಹಳ ಸೂಕ್ಷ್ಮವಾಗಿದ್ದು, ಶಸ್ತ್ರಕ್ರಿಯೆಗೆ ಮುನ್ನ ಹಾಗೂ ಆ ಬಳಿಕ ಎಲ್ಲ ಮುನ್ನೆಚ್ಚರಿಕೆ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಶಸ್ತ್ರಕ್ರಿಯೆಗಳಲ್ಲಿ ಅಪಾಯದ ಅಂಶಗಳು ಈ ಕೆಳಗಿನಂತಿವೆ.

  • ಸೋಂಕು ಮತ್ತು ಪಿತ್ತಕೋಶದ ಉರಿಯೂತ.
  • ಪಿತ್ತಕೋಶದಲ್ಲಿ ವಿಷಕಾರಿ ವಸ್ತುಗಳ ಉತ್ಪಾದನೆ.
  • ಪಿತ್ತಕೋಶ ಹಾನಿಗೀಡಾಗಿ ರಕ್ತಸ್ರಾವ.
  • ಕೊಬ್ಬು ಹೀರಿಕೊಳ್ಳುವಲ್ಲಿ ವೈಫಲ್ಯ.
  • ಕತ್ತರಿಸಿ ತೆೆಗೆದಿರುವ ಭಾಗದ ಬಿಳಿ ರಕ್ತ ಪರಿಚಲನೆಗೆ ಅಡ್ಡಿ.

ಕೆಲವು ಸೂಚನೆಗಳು

  • ಪಿತ್ತಕೋಶದ ಶಸ್ತ್ರಕ್ರಿಯೆಗೊಳ ಗಾದ ಎಲ್ಲ ರೋಗಿಗಳಿಗೂ ಆಸ್ಪೆತ್ರೆ ವಾಸ, ವೈದ್ಯಕೀಯ ತೀವ್ರ ನಿಗಾ, ಆರೈಕೆ ಅಗತ್ಯವಿರುತ್ತದೆ.
  • ಜಾಂಡೀಸ್ ತಾನೇ ನೇರವಾಗಿ ರೋಗವಲ್ಲ. ಅದು ದೇಹ ವ್ಯವಸ್ಥೆಯಲ್ಲಿ ಏನೋ ದೋಷ ಉಂಟಾಗಿರುವ ಸೂಚನೆ.
  • ಸ್ಪೆಷ್ಟವಾಗಿ ರೋಗಕ್ಕೆ ಕಾರಣ ಪತ್ತೆ ಯಾಗದೇ ಜಾಂಡೀಸ್ ಔಷಧಗಳನ್ನು ಮನಬಂದಂತೆ ಸೇವಿಸುವುದು ಸಲ್ಲದು.
  • ನೂರಕ್ಕೆ 85 ಮಂದಿ ಜಾಂಡೀಸ್ ರೋಗಿಗಳಲ್ಲಿ ಸರಳ ತಪಾಸಣೆಗಳಿಂದ ರೋಗಕ್ಕೆ ಕಾರಣ ಪತೆೆ¤ಹಚ್ಚಬಹುದು.
  • ಸಕಾಲದಲ್ಲಿ ಚಿಕಿತ್ಸೆ ದೊರೆಯು ವಂತಾದರೆ, ಪಿತ್ತಜನಕಾಂಗದಲ್ಲಿ ಉಂಟಾಗಿರುವ ಹೆಚ್ಚಿನ ಅಡ್ಡಿಗಳನ್ನು ನಿವಾರಿಸಿಕೊಳ್ಳಬಹುದು.
  • ಕೆಲವು ಪ್ರಕರಣಗಳಲ್ಲಿ ವಿಶೇಷ ತಪಾಸಣೆೆಗಳು ಅಗತ್ಯ ಬೀಳಬಹುದು.
  • ಯಾವಾಗಲೂ ಜಾಂಡೀಸ್ ರೋಗಿಗಳು ಆ ರೋಗದ ವಿಶೇಷ ತಜ್ಞರಲ್ಲಿಯೇ (ಗ್ಯಾಸ್ಟ್ರೋ ಎಂಟರಾಲಜಿಸ್ಟ್)ತಪಾಸಣೆಗೆ ಒಳಗಾಗುವುದು ಒಳ್ಳೆಯದು.

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ ಗಣೇಶ್ ಪೈ ಸಿ.,  ಪ್ರೊಫೆಸರ್ ಮತ್ತು  ಮುಖ್ಯಸ್ಥರು, ಗ್ಯಾಸ್ಟ್ರೊ ಎಂಟರಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ.

ಮೂಲ : ಆರೋಗ್ಯವನಿ .ಬ್ಲಾಗ್ಸ್ಪಾಟ್

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate