অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಕ್ತಹೀನತೆ

ರಕ್ತಹೀನತೆ

ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದರೆ ಅದನ್ನು ರಕ್ತಹೀನರೆ ಎನ್ನಲಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12ಮಿ. ಗ್ರಾಂ/ಡಿ.ಎಲ್ ಗಿಂತ ಕಡಿಮೆಯಿರುವುದು ಪರೀಕ್ಷೆಯಲ್ಲಿ  ಕಂಡು ಬಂದರೆ ಅದನ್ನು ರಕ್ತಹೀನತೆ ಎಂದು ಹೇಳಲಾಗುತ್ತದೆ.

ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ನಾವು ದೇಹಕ್ಕೆ ಅತ್ಯಗತ್ಯವದ ಕಬ್ಬಿಣಾಂಶ ನಾವು ದಿನ ನಿತ್ಯ ಸೇವಿಸುವ ಆಹಾರದಿಂದ ದೊರೆಯುತ್ತದೆ. ಈ ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಕಂಡುಬರುತ್ತದೆ. ರಕ್ತಹೀನತೆಯಿಂದ ನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಕಡಿಮೆಯಾಗುವುದು, ಉಸಿರಾಟದಲ್ಲಿ ಕಷ್ಟವಾಗುವುದು ಕಂಡುಬರುತ್ತದೆ. ರಕ್ತಹೀನತೆ ಇರುವವರು ಬಹುಬೇಗ ಆಯಾಸದಿಂದ ಬಳಸುತ್ತಾರೆ. ಮಕ್ಕಳು ಹದಿಹರೆಯದವರು ಮತ್ತು ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಮಹಿಳೆಯರಲ್ಲಿ ಗರ್ಭಿಣಿಯರು ಹಾಗೂ ಬಾನಂತಿಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿ ಕಂಡುಬರುತ್ತದೆ. ರಕ್ತಹೀನತೆಯಿದ್ದವರಿಗೆ ಕಣ್ಣಿನ ರೆಪ್ಪೆಯ ಒಳಭಾಗ,ನಾಲಿಗೆ, ತುಟಿ, ಉಗುರು, ಅಂಗೈಗಳು ಬಿಳಿಚಿಕೊಳ್ಳುತ್ತವೆ. ಇವುಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದ ಕೂಡಲೇ ರಕ್ತ ಪರೀಕ್ಷೆ ಮಾಡಿಸುವುದರಿಂದ ರಕ್ತಹೀನತೆಯನ್ನು ಪತ್ತೆಹಚ್ಚಬಹುದು.

(ಹದಿಹರೆಯದವರಿಗೆ ಉತ್ತಮ ಪೌಷ್ಠಿಕಾಂಶವುಗಳುಳ್ಳ ಆಹಾರವನ್ನು ನೀಡಬೇಕು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಠಿಕ  ಆಹಾರ ಅತ್ಯಗತ್ಯ ರಕ್ತಹೀನತೆಗೆ ಮುಖ್ಯ ಕಾರಣ ಕಬ್ಬಿಣಾಂಶದ ಕೊರತೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು, ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಹೊರೆಯುತ್ತದೆ.)

ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸದಿದ್ದರೆ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆ ಕಂಡುಬರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಲಿಂಗ ತಾರತಮ್ಯದಿಂದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಇರುವುದರಿಂದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡುಬರುತ್ತದೆ. ಪದೇ ಪದೇ ಗರ್ಭಪಾತ ಹಾಗೂ ಹೆಚ್ಚು ಅಂತರವಿಲ್ಲದೆ ಗರ್ಭಧರಿಸುವುದರಿಂದ ಮಹಿಳೆಯರಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಮೂಢ ನಂಬಿಕೆಗಳಿಂದಾಗಿ ಹಲವಾರು ಆಹಾರಗಳನ್ನು ಸೇವಿಸದೆ ಇರುವುದರಿಂದಲೂ ರಕ್ತಹೀನತೆ ಉಂಟಾಗುತ್ತದೆ. ಬಯಲು ಮಲ ವಿಸರ್ಜನೆ ಹಾಗೂ ಪಾದರಕ್ಷೆಗಳಿಲ್ಲದೆ ಓಡಾಡುವುದರಿಂದ ಪಾದಗಳ ಮೂಲಕ ಕೊಕ್ಕೆಹುಳುಗಳು ದೇಹವನ್ನು ಸೇರಿ ದೇಹದ ಪೌಷ್ಠಿಕತೆಯನ್ನು ಹೀರುತ್ತದೆ. ಇದರಿಂದಾಗಿ ರಕ್ತಹೀನತೆ ಉಂಟಾಗುತ್ತದೆ.

ರಕ್ತಹೀನತೆಯ ದುಷ್ಪರಿಣಾಮಗಳು:

  • ರಕ್ತಹೀನತೆಯಿಂದ ನಿಶ್ಯಕ್ತಿ ಉಂಟಾಗಿ ಬಹುಬೇಗ ಆಯಾಸವಾಗುವುದರಿಂದ ದಿನನಿತ್ಯ ಕೆಲಸ ಮಾಡಲೂ ಸಹ ಕಷ್ಟವಾಗುತ್ತದೆ.
  • ರಕ್ತಹೀನತೆ ಇದ್ದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಸುಲಭವಾಗಿ ಸೋಂಕುಗಳಿಗೆ ತುತ್ತಾಗುತ್ತಾರೆ.
  • ಮಹಿಳೆಯರಲ್ಲಿ ಗರ್ಭಪಾತ, ದಿನತುಂಬದ ಹೆರಿಗೆ ಹಾಗೂ ಹೆರಿಗೆ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವವಾಗಿ ಸಾವು ಸಂಭವಿಸಬಹುದು.
  • ರಕ್ತಹೀನತೆಯಿಂದ ಬಳಲುವ ಗರ್ಭಿಣಿಗೆ ಜನಿಸುವ ಮಗುವಿನ ತೂಕ ಕಡಿಮೆ ಇದ್ದು, ಹುಟ್ಟುವ ಮಗುವಿಗೂ ರಕ್ತಹೀನತೆಯಾಗಬಹುದು.
  • ಮಕ್ಕಳಲ್ಲಿ ರಕ್ತಹೀನತೆಯಿಂದಾಗಿ ಅವರ ಮೆದುಳಿನ ಬೆಖಳವಣಿಗೆ ಕುಂಠಿತವಾಗುತ್ತದೆ.
  • ಬಹಳ ಬೇಗ ಆಯಾಸಗೊಳ್ಳುವುದರಿಂದ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ.
  • ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ವೇಳೆ ಅಧಿಕ ರಕ್ತಸ್ರಾವ, ತೂಕ ಕಡಿಮೆಯಾಗುವುದು ಹಾಗೂ ಬಲಹೀನತೆ ಕಾಣಿಸಿಕೊಳ್ಳುತ್ತದೆ.

ರಕ್ತಹೀನತೆ ಬರದಂತೆ ತಡೆಯುವುದು ಹೇಗೆ ?

  • ಹದಿಹರೆಯದವರಿಗೆ ಉತ್ತಮ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ನೀಡಬೇಕು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಅತ್ಯಗತ್ಯ. ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು, ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಹೊರೆಯುತ್ತದೆ.
  • ಅಗತ್ಯವೆನಿಸಿದರೆ ಕಬ್ಬಿಣಾಂಶದ ಮಾತ್ರೆಗಳು ಅಥವಾ ಸಿರಪ್ ಸೇವಸಬೇಕು.
  • ಗರ್ಭಿಣಿಯರು 100 ದಿನಗಳವರೆಗೆ 100 ಮಿ.ಗ್ರಾಂ ನ ಮಾತ್ರೆಗಳನ್ನು ದಿನಕ್ಕೆರೆಡು ಬಾರಿ ಸೇವಿಸಬೇಕು.
  • ಯುವತಿಯರು ಈ ಮಾತ್ರೆಗಳನ್ನು ದಿನಕ್ಕೊಂದರಂತೆ 100ದಿನಗಳು ತೆಗೆದುಕೊಳ್ಳಬೇಕು.
  • ಮಕ್ಕಳು 20 ಮಿ.ಗ್ರಾಂ ನ ಒಂದು ಮಾತ್ರೆ ಅಥವಾ ಸಿರಪ್ ನ್ನು 100ದಿನಗಳವರೆಗೆ ಸೇವಿಸಬೇಕು.
  • ಹೆಣ್ಣು ಮಕ್ಕಳಿಗೆ ಸೂಕ್ತ ವಯಸ್ಸಿನ ನಂತರವೇ ಮದುವೆ ಮಾಡಬೇಕು. ಮಕ್ಕಳ ನಡುವೆ ಅಂತರವನ್ನು ಕಾಪಾಡಿಕೊಳ್ಳಬೇಕು.

ಮೂಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate