অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಳಿಗಾಲದ ತುರಿಕೆ

ಚಳಿಗಾಲದ ತುರಿಕೆ

ಚಳಿಗಾಲ ಕಳೆದು, ಬೇಸಿಗೆ ಕಾಲಿಡುವ ಈ ಸಂಧಿಕಾಲದಲ್ಲಿ ಕೆರೆತ ಸಾಮಾನ್ಯ ಸಮಸ್ಯೆಯಾಗಿದೆ. ತುರಿಕೆ ಅಥವಾ ಕೆರೆತ  ಒಣ ಚರ್ಮದಿಂದಾಗಿ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ- ತುರಿಕೆ ದೇಹದ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೆರೆದುಕೊಳ್ಳುತ್ತೀರಿ, ಇದರಿಂದ ಸಮಾಧಾನವಾಯಿತು ಎಂದು ನಿಮಗೆ ತಕ್ಷಣಕ್ಕೆ ಅನಿಸಿದರೆ ಮತ್ತದೇ ಜಾಗದಲ್ಲಿ ತುರಿಕೆ ಆರಂಭವಾಗುತ್ತದೆ ಇದರಿಂದಾಗಿ ನೀವು ಇನ್ನೂ ಜೋರಾಗಿ ಕೆರೆದುಕೊಳ್ಳುತ್ತೀರಿ ಇರರಿಂದಾಗಿ ಚರ್ಮದ ಭಾಗಕ್ಕೆ ಹಾನಿಯುಂಟಾಗುತ್ತದೆ, ಗಾಯವಾಗುತ್ತದೆ. ತುರಿಕೆಯಂತೂ ನಿಲ್ಲುವುದಿಲ್ಲ. ನಂತರ ಇವೇ ಗಾಯಗಳು ಇನ್ನಷ್ಟು ತೀವ್ರತರಗೊಳ್ಳುತ್ತವೆ.

ಚಳಿಗಾಲದಲ್ಲಿ ಚರ್ಮ ಒಣಗುವುದರಿಂದ ಈ ರೀತಿಯ ಸಮಸ್ಯೆ  ಎದುರಾಗುತ್ತವೆ. ಇನ್ನು ನಿಮ್ಮ ಚರ್ಮವು ಹೆಚ್ಚು ಸೂಕ್ಷ್ಮವಾಗಿದ್ದಲ್ಲಿ ನಿಮ್ಮ ಕೈ, ಕಾಲು ಹಾಗೂ ಮೊಣಕೈ ಭಾಗಗಳಲ್ಲಿ ಸ್ನಾನದ ಬಳಿಕ ತುರಿಕೆ ಕಾಣಿಸಿಕೊಳ್ಳುತ್ತದೆ.

ಕೆರೆದುಕೊಂಡಂತೆಲ್ಲ ಚರ್ಮದ ಶುಷ್ಕತನ ಹೆಚ್ಚುತ್ತ ಹೋಗುತ್ತದೆ. ಶುಷ್ಕತನ ಹೆಚ್ಚಿದಂತೆ ತುರಿಕೆಯೂ ಹೆಚ್ಚುತ್ತದೆ. ಇದೊಂದು ಬಗೆಯ ವರ್ತುಲ. ಇದನ್ನು ತುಂಡರಿಸಬೇಕಾದರೆ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲೇಬೇಕಾಗುತ್ತದೆ.

ಇಲ್ಲದಿದ್ದಲ್ಲಿ ತುರಿಕಯ ಭಾಗದಲ್ಲಿ ಕೆಲವೊಮ್ಮೆ ರಕ್ತವೂ ಬರುತ್ತದೆ. ಇಂಥ ಸಂದರ್ಭಗಳಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಇವು ಜಿಯೋಮಾದಂಥ ಸಮಸ್ಯೆಗಳಿಗೂ ಕಾರಣವಾಗಬಹುದು. ಚರ್ಮದ ಮೇಲ್ಪದರದಲ್ಲಿ ನೀರಿನಂಶ ಕಡಿಮೆಯಾದಂತೆಲ್ಲ ಚರ್ಮ ಒಣಗತೊಡಗುತ್ತದೆ. ಚರ್ಮದಲ್ಲಿ ನಿರ್ಜಲೀಕರಣವಾದಂತೆ ಚರ್ಮದ ಕೋಶಗಳು ಸಾಯಲಾರಂಭಿಸುತ್ತವೆ.

ಇದರಿಂದಾಗಿ ಚರ್ಮ ತನ್ನ ಹಿಗ್ಗುವ ಗುಣ ಕಳೆದುಕೊಳ್ಳು­ತ್ತದೆ. ನೀರಿನ ಅಂಶ ಸಂಪೂರ್ಣವಾಗಿ ಕಡಿಮೆಯಾದಂತೆ ಚರ್ಮ ಸಂಕುಚಿತಗೊಂಡು ಒಡೆಯಲು ಆರಂಭಿಸುತ್ತದೆ. ಈ ಬಿರುಕು ಬಿಟ್ಟ ಚರ್ಮ ಅನೇಕ ಸೋಂಕುಗಳಿಗೆ ಸರಳವಾಗಿ ಈಡಾಗುವ ಸಾಧ್ಯತೆ ಇದ್ದೇ ಇರುತ್ತದೆ.

ಕೆಲವೊಮ್ಮೆ ಒಣ ಚರ್ಮದ ಈ ಸಮಸ್ಯೆಯು ಆನುವಂಶಿಕವಾಗಿರುವ ಸಾಧ್ಯತೆ ಇರುತ್ತದೆ. ಚಳಿಗಾಲದ ಕೊರೆಯುವ ಗಾಳಿಂದಾಗಿಯೂ ಚರ್ಮ ತನ್ನ ಕೋಮಲತನವನ್ನು ಕಳೆದುಕೊಳ್ಳಬಹುದು. ಕ್ಲೋರಿನ್ ಭರಿತ ನೀರಿನಲ್ಲಿ ಹೆಚ್ಚುಕಾಲ ಈಜಾಡುವುದರಿಂದ  ಚರ್ಮ ಒಣಗುವುದು. ಹೆಚ್ಚು ಸುಗಂಧವುಳ್ಳಂತಹ ಸೋಪು ಬಳಸುವುದರಿಂದಲೇ ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ.

ಚರ್ಮ ಒಣಗಿರುವುದನ್ನು ಕಂಡು ಹಿಡಿಯುವುದು ಹೇಗೆ?
  • ನಿಮ್ಮ ಕೈನ ಹಿಂಭಾಗದ ಚರ್ಮವನ್ನು ಹಿಂದಕ್ಕೆ ಎಳೆದು ಬಿಡಿ, ಚರ್ಮ ಕೂಡಲೇ ತನ್ನ ಸ್ಥಳಕ್ಕೆ ಹಿಂದಿರುಗದಿದ್ದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂದರ್ಥ.
  • ಕೇಫೇನ್, ಮದ್ಯ ಹಾಗೂ ಮಾದಕ ಪಾನೀಯಗಳ ಅತಿಯಾದ ಸೇವನೆಯೂ ಚರ್ಮವನ್ನು ಶುಷ್ಕಗೊಳಿಸುತ್ತದೆ.
  • ಎಸ್ಜಿಮಾ ಅಥವಾ ಸೋರಿಯಾಸಿಸ್ ನಂತಹ ಚರ್ಮದ ಸಮಸ್ಯೆಗಳು ಇದ್ದಲ್ಲಿ ತುರಿಕೆಯ ಸಮಸ್ಯೆ ಹೆಚ್ಚಾಗಿಯೇ ಕಾಣಬಹುದು.

ಮನೆ ಆರೈಕೆ

  • ಚಳಿಗಾಲದಲ್ಲಿ ಒಂದು ಸಲ ಸ್ನಾನ ಸಾಕು.
  • ಮೃದು ಚರ್ಮಕ್ಕಾಗಿ ಅತಿಯಾದ ಸೋಪು ಬಳಕೆ ಹಿತವಲ್ಲ.
  • ಆದಷ್ಟು ಸೌಮ್ಯವಾದ ಹೆಚ್ಚು ಸುಗಂಧಗಳಿಲ್ಲದ ಸೋಪುಗಳನ್ನು ಬಳಸುವುದು ಒಳಿತು.
  • ನಿಮ್ಮ ಚರ್ಮದ ಶುಷ್ಕತನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿ. ಚರ್ಮವನ್ನು ಒಣಗಳು ಬಿಡಬೇಡಿ.
  • ಆಗಾಗ ಎಣ್ಣೆ ಸ್ನಾನ ಒಳಿತು.
  • ಸ್ನಾನಕ್ಕೆ ಅತಿಬಿಸಿಯಾದ ನೀರಿನ ಬಳಕೆ ಬೇಡ.
  • ಸ್ನಾನದ ಬಳಿಕ ನಿಮ್ಮ ಚರ್ಮದಲ್ಲಿ ತೇವಾಂಶ ಇರುವಂತೆಯೇ ಮಾಯ್ಸ್ಚರೈಸರ್ ಬಳಕೆ ಮಾಡಿ.
  • ಇದರಿಂದಾಗಿ ನಿಮ್ಮ ಚರ್ಮದಲ್ಲಿನ ತೇವಾಂಶ ಹಾಗೆಯೇ ಉಳಿಯಲು ಸಾಧ್ಯವಾಗುತ್ತದೆ.
  • ಹೆಚ್ಚು ಮಸಾಲೆ ಭರಿತ ಆಹಾರ ಸೇವನೆ ಹಾಗೂ ಕಾಫಿ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡಿ.

ಮೂಲ : ಪ್ರಜಾವಾಣಿ

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate