20ರ ಹರೆಯದಲ್ಲಿ ಮೊಡವೆಗಳೇ ಮಾಯವಾಗಿ ಚರ್ಮದ ಹೊಳಪೇ ಒಡವೆಯಾಗಿರುತ್ತದೆ. ಈ ವಯಸ್ಸಿನಲ್ಲಿ ಚರ್ಮದ ಕಾಂತಿ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡಿದಲ್ಲಿ ಆರೋಗ್ಯವಂತ ಚರ್ಮದ ಆಯಸ್ಸು ಖಂಡಿತವಾಗಿಯೂ ಹೆಚ್ಚುತ್ತದೆ. ಮುಖ ನೋಡಿ ನಿಮ್ಮ ಆಯಸ್ಸನ್ನು ಹೇಳುವಂತೆಯೇ ಇಲ್ಲ. ಹರೆಯದ ಹೊಳಪು ಕೊನೆಯವರೆಗೂ ಉಳಿಯಲು ಈ ಹಂತದಲ್ಲಿ ಒಂಚೂರು ಗಮನ ನೀಡುವುದು ಒಳಿತು.
ಪ್ರಖರವಾದ ಸೂರ್ಯನ ಬೆಳಕಿಗೆ ನೇರವಾಗಿ ಮೈ ಒಡ್ಡುವುದು ಬೇಡ. ಇದರಿಂದ ಚರ್ಮ ಮುಪ್ಪಾಗುವುದನ್ನು ತಡೆಯಬಹುದು. ಚರ್ಮದ ನೆರಿಗೆಯನ್ನು ಮುಂದೂಡಬಹುದು. ಚರ್ಮ ಶುಷ್ಕವಾಗುವುದನ್ನು ತಡೆಯಬಹುದು. ವಯಸ್ಸಾಗುವ ಲಕ್ಷಣಗಳನ್ನು ಹಿಂದಕ್ಕಟ್ಟಿ ಸೌಂದರ್ಯ ಮತ್ತು ಉತ್ಸಾಹಗಳನ್ನೇ ಮುಖದ ಮೇಲೆ ಬಿಂಬಿಸಬಹುದು.
ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದ್ದಲ್ಲಿ ಮುಖದ ಮೇಲೆ ವಯಸ್ಸು ತನ್ನ ಗುರುತು ಬಿಟ್ಟುಕೊಡಲು ಆಗದು. ಸಾಧ್ಯವಿದ್ದಷ್ಟು ಯುವತಿಯರು ತಮ್ಮ ಚರ್ಮದ ಪೋಷಣೆಯನ್ನು ಮಾಡಿಕೊಂಡಲ್ಲಿ, ಬಹುತೇಕರು ಆ್ಯಂಟಿ ಏಜಿಂಗ್ ಕ್ರೀಮ್ ಬಳಸುವ ಸಾಧ್ಯತೆಯೇ ಕಡಿಮೆಯಾಗಬಲ್ಲುದು. ಉತ್ತಮ ಆಹಾರ ಅಭ್ಯಾಸ, ಜೀವನಶೈಲಿಯಿಂದಲೇ ಕಾಂತಿಯುತ ಚರ್ಮ, ಉತ್ಸಾಹಿ ಮನಸು ಪಡೆಯಬಹುದು. ವಯಸ್ಸು ಅಂಕಿಗಳಾಗಿ ಮಾತ್ರ ಉಳಿಯುತ್ತದೆ.
ಅಕ್ಕಿ ಹೊಟ್ಟಿನ ಮಾಸ್ಕ್ ಜಪಾನಿಗರ ಸಾಂಪ್ರದಾಯಿಕ ಚಿಕಿತ್ಸೆಯಾಗಿದೆ. ಚರ್ಮದ ಸೌಂದರ್ಯ ಹಾಗೂ ಸ್ವಚ್ಛತೆಗೆ ಇದನ್ನು ಬಳಸಲಾಗುತ್ತದೆ. ಉರುಟುರುಟು ಆಗಿರುವುದರಿಂದ ಚರ್ಮದಲ್ಲಿರುವ ಸಣ್ಣ ರಂಧ್ರಗಳಿಂದ ಕೊಳೆಯನ್ನು ಎಣ್ಣೆಯಂಶವನ್ನೂ ಹೀರಿಕೊಳ್ಳುತ್ತದೆ. ನುಣಪಾದ ಕೊಳೆರಹಿತ ಚರ್ಮಕ್ಕೆ ಈ ಮಾಸ್ಕ್ ರಾಮಬಾಣವಿದ್ದಂತೆ. ಅಷ್ಟೇ ಅಲ್ಲ ಮುಖದ ಮೇಲೆ ನೆರಿಗೆಗಳಾಗದಂತೆ ತಡೆಯುತ್ತದೆ.
ಭತ್ತದ ತೌಡನ್ನು ಹಸಿಹಾಲಿನೊಂದಿಗೆ ಓಟ್‌ಮೀಲ್‌ನೊಂದಿಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಲೇಪನ ಸಿದ್ಧಪಡಿಸಿಕೊಳ್ಳಿ. ಮುಖದ ಮೇಲೆ ವರ್ತುಲಾಕಾರದಲ್ಲಿ ಮಸಾಜ್ ಮಾಡಿಕೊಳ್ಳುತ್ತ ಈ ಮಾಸ್ಕ್ ಅನ್ನು ಮುಖದ ಮೇಲೆ ಲೇಪಿಸಿ. 10–12 ನಿಮಿಷ ಬಿಟ್ಟು ಉಗುರು ಬಿಸಿ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೊಮ್ಮೆ ಈ ಚಿಕಿತ್ಸೆಯಿಂದ ಚರ್ಮಕ್ಕೆ ಅಗತ್ಯದ ಪೋಷಣೆ ದೊರೆಯುತ್ತದೆ.
(ಮಾಹಿತಿಗೆ: 7676757575)
ಮೂಲ :ಡಾ. ಚೈತ್ರಾ ವಿ.ಆನಂದ,ಕಾಸ್ಮೊಡರ್ಮ ಸ್ಕಿನ್ ಅಂಡ್ ಹೇರ್ ಕ್ಲಿನಿಕ್ ಪ್ರಜಾವಾಣಿ
ಕೊನೆಯ ಮಾರ್ಪಾಟು : 2/15/2020
ಆಯುರ್ವೇದವು ಭಾರತ ಉಪಖಂಡದ ಅತಿ ಪುರಾತನ ವೈದ್ಯಕೀಯ ಪದ್ಧತಿಯ...
ಪ್ರಥಮ ಚಿಕಿತ್ಸೆ ಎಂದರೆ, ಗಾಯ ಅಥವಾ ಅವಘಡಗಳಾದಾಗ ಒದಗಿಸು...
ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಅಧ್ಯಾ...