ದಿನವೂ ಹಾಲು ಕುಡಿಯಬೇಕು ಏಕೆ?
ಹಾಲು ಜೀರ್ಣವಾದ ಬಳಿಕ ಉತ್ಪತ್ತಿಯಾಗುವ ವಿವಿಧ ಅನಿಲಗಳು ಅಪಾನವಾಯುವಿಗೆ ಕಾರಣವಾಗುತ್ತವೆ. ವಿಪರೀತ ಮುಜುಗರ ತರಿಸುವ ಈ ತೊಂದರೆಗೆ ಹಾಲೇ ಮುಖ್ಯ ಕಾರಣ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಹೇಗೆ? ಹಸುವಿನ ಹಾಲಿನಲ್ಲಿ ಸಕ್ಕರೆಯ ಇನ್ನೊಂದು ರೂಪವಾದ ಲ್ಯಾಕ್ಟೋಸ್ ಇದೆ. ಇದು ಕರುಳಿನಲ್ಲಿರುವಾಗ ಕರುಳುಗಳ ಒಳಗಣ ವಿಲ್ಲೈಗಳೆಂಬ ಹೀರುವ ಅಂಗಗಳಿಗೆ ಪ್ರಚೋದನೆ ನೀಡುತ್ತದೆ. ಇದರಿಂದಾಗಿ ಇತರ ಆಹಾರಗಳನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳದೇ ಅನಿಲಗಳನ್ನಾಗಿ ಪರಿವರ್ತಿಸುತ್ತದೆ. ಈ ಅನಿಲಗಳು ಒತ್ತಡ ತಾಳಲಾರದೇ ಹೊರದಬ್ಬಲ್ಪಟ್ಟು ಮುಜುಗರಕ್ಕೆ ಕಾರಣವಾಗುತ್ತವೆ.
ಸಾಮಾನ್ಯವಾಗಿ ಮಕ್ಕಳು ಹಾಲು ಕುಡಿಯಲು ತಂಟೆ ಮಾಡುವುದು ಇದೇ ಕಾರಣಕ್ಕೆ. ಹಾಲು ಕುಡಿದ ಬಳಿಕ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಅನಿಲಗಳು ಹೊಟ್ಟೆಯುಬ್ಬರ ಮತ್ತು ವಾಕರಿಕೆ ಉಂಟುಮಾಡುತ್ತವೆ.ಹಿರಿಯರಲ್ಲಿ ಹೇಳಿದರೆ ಬೇರೆಯ ಅರ್ಥವನ್ನೇ ನೀಡುವ ಅವರು ಸುತಾರಾಂ ಹಾಲಿನ ಮೇಲೆ ಅಪವಾದ ಹೊರಿಸಲು ಸಿದ್ಧರಿಲ್ಲ. ಹೀಗಾದಾಗ ಹಾಲು ಮಕ್ಕಳಿಗೆ ಬೇಡವೆನಿಸುತ್ತದೆ. ಕೆಲವೊಮ್ಮೆ ವಾಕರಿಕೆ ಹೆಚ್ಚಾಗಿ ವಾಂತಿಯಾಗಲೂಬಹುದು. ಹೇಗೆ? ಇಲ್ಲೂ ಸಹಾ ಹಾಲಿನಲ್ಲಿರುವ ಸಕ್ಕರೆಯಾದ ಲ್ಯಾಕ್ಟೋಸ್ ಖಳನ ಪಾತ್ರ ವಹಿಸುತ್ತದೆ. ಕರುಳುಗಳಲ್ಲಿ ನೀಡುವ ಪ್ರಚೋದನೆ ಹೊಟ್ಟೆ ಮತ್ತು ಕರುಳುಗಳಲ್ಲಿ ಕಿರಿಕಿರಿಯುಂಟುಮಾಡಿ ವಾಕರಿಕೆಗೆ ಕಾರಣವಾಗುತ್ತದೆ. ಹಲವರಿಗೆ ಹಾಲು ಪೂರ್ಣವಾಗಿ ಜೀರ್ಣವಾಗುವುದೂ ಇಲ್ಲ.
ಹಾಲಿನ ಅತ್ಯಂತ ತೀವ್ರತರದ ಅಡ್ಡಪರಿಣಾಮವೆಂದರೆ ಸ್ತನದ ಕ್ಯಾನ್ಸರ್ ಗೆ ಕಾರಣವಾಗುವುದು. ಇದಕ್ಕೆ ಹಸುವಿನ ಅಪ್ಪಟ ಹಾಲು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣವಾಗಿದೆ. ಏಕೆಂದರೆ ಹಸುಗಳಿಂದ ಹೆಚ್ಚು ಹಾಲು ಬರುವಂತಾಗಲು recombinant bovine somatotropin ಎಂಬ ರಾಸಾಯನಿಕವನ್ನು ಹಸುಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಇದೊಂದು ತಳಿವಿಜ್ಞಾನಕ್ಕೆ ಸಂಬಂಧಪಟ್ಟ ಮತ್ತು ತಳಿಗಳನ್ನು ಬದಲಿಸಬಲ್ಲ ಗುಣವಿರುವ ಪ್ರಬಲ ರಾಸಾಯನಿಕವಾಗಿದೆ. ಈ ರಾಸಾಯನಿಕ ಹಾಲಿನ ಮೂಲಕ ಮನುಷ್ಯರ ದೇಹ ಪ್ರವೇಶಿಸಿದ ಬಳಿಕ ದೇಹದಲ್ಲಿ ಕ್ಯಾನ್ಸರ್ ಕಾರಕ ಕಣಗಳ ಉತ್ಪತ್ತಿ ಮತ್ತು ಅಭಿವೃದ್ದಿಗೆ ಇಂಬು ನೀಡುತ್ತದೆ. ಇದರ ಪರಿಣಾಮವಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಅತಿ ಹೆಚ್ಚಾಗುತ್ತದೆ(ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರಿಗೆ) ಪುರುಷರಲ್ಲಿಯೂ ಈ ಕ್ಯಾನ್ಸರ್ ಬರುವ ಅಪಾಯವಿದೆಯಾದರೂ ಪ್ರಾಬಲ್ಯ ಕಡಿಮೆ. ಈ ರಾಸಾಯನಿಕದ ಇನ್ನೊಂದು ಅಡ್ಡಪರಿಣಾಮವಿದೆ. ಹಸುಗಳಲ್ಲಿ ನೀಡಲಾಗುವ ಈ ರಾಸಾಯನಿಕದ ಪ್ರಭಾವವನ್ನು ಎದುರಿಸಲು (udder infections (mastitis)) ಹಸುಗಳಿಗೆ ಹೆಚ್ಚು ಪ್ರಬಲವಾದ ಆಂಟಿ ಬಯೋಟಿಕ್ ಗಳನ್ನು ನೀಡಲಾಗುತ್ತದೆ. ಪರಿಣಾಮವಾಗಿ ಹಸುವಿನ ದೇಹದಲ್ಲಿರುವ ಬ್ಯಾಕ್ಟೀರಿಯಾಗಳೂ ಈ ಪ್ರಬಲ ಆಂಟಿ ಬಯೋಟಿಕ್ ಗಳನ್ನು ಎದುರಿಸುವಂತೆಯೇ ಬೆಳೆಯುತ್ತವೆ. ಹಾಲಿನ ಮೂಲಕ ಮನುಷ್ಯರ ದೇಹ ಪ್ರವೇಶಿಸುವ ಈ ಬ್ಯಾಕ್ಟೀರಿಯಾಗಳು ಯಾವ ರೀತಿಯ ಅಪಾಯವನ್ನೂ ತಂದೊಡ್ಡಬಹುದು, ಆದರೆ ಇದುವರೆಗೆ ಸಂಶೋಧನೆಗಳಿಂದ ಯಾವುದೇ ನೇರ ಪರಿಣಾಮದ ಫಲಿತಾಂಶ ಹೊರಬಂದಿಲ್ಲ.
ಹಾಲು ಕುಡಿದ ಬಳಿಕ ಹೊಟ್ಟೆ ತುಂಬಿದಂತಾಗುವುದು ಹಾಗೂ ಹೊಟ್ಟೆ ಹೊರಬರುವುದು ಅಥವಾ ಊದಿಕೊಂಡಂತಿರುವುದು. ಹೇಗೆ? ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣೀಸಲು ಚಿಕ್ಕಕರುಳು ಲ್ಯಾಕ್ಟೇಸ್ ಎಂಬ ಕಿಣ್ವವನ್ನು ಉತ್ಪಾದಿಸಬೇಕು. ಆದರೆ ಪ್ರಚೋದನೆಯ ಕಾರಣ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿ ಮಾಡದೇ ಅರ್ಧಂಬರ್ಧ ಜೀರ್ಣಿಸುತ್ತದೆ. ಪೂರ್ಣವಾಗಿ ಜೀರ್ಣವಾಗದ ಆಹಾರ ದೊಡ್ಡಕರುಳಿನೊಳಗೆ ಪ್ರವೇಶಿಸುತ್ತದೆ. ಪರಿಣಾಮವಾಗಿ ಉತ್ಪತ್ತಿಯಾದ ಅನಿಲಗಳು ಸಣ್ಣಕರುಳು ಮತ್ತು ಜಠರವನ್ನು ಆವರಿಸುತ್ತವೆ. ಈ ಒತ್ತಡ ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.
ಹಸುವಿನ ಹಾಲು ಮಕ್ಕಳ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಕಡಿಮೆಗೊಳಿಸುವುದು ಆತಂಕದ ವಿಷಯವಾಗಿದೆ. ಹೇಗೆ? : ಹಸುವಿನ ಹಾಲಿನಲ್ಲಿ ಕಬ್ಬಿಣದ ಅಂಶ ಕಡಿಮೆ ಇದೆ. ಮಕ್ಕಳಿಗೆ ಹೆಚ್ಚು ಕಾಲು ಕುಡಿಸುವುದರಿಂದ ಅಷ್ಟು ಪ್ರಮಾಣದ ಇತರ ಆಹಾರಗಳ ಮೂಲಕ ಸಿಗಬಹುದಾಗಿದ್ದ ಕಬ್ಬಿಣದ ಅಂಶ ಹಾಲಿನಿಂದ ಸಿಗುವುದಿಲ್ಲ. ಇದು ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಕಡಿಮೆಗೊಳಿಸಲು ನೇರವಾಗಿ ಕಾರಣವಾಗುತ್ತದೆ. ಪಾರ್ಶ್ವ ಪರಿಣಾಮವಾಗಿ ಮಕ್ಕಳ ಕರುಳಿನಲ್ಲಿ ಸಾಕಷ್ಟು ಪ್ರಮಾಣದ ರಕ್ತ ಸರಬರಾಜು ಆಗದೇ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಹಸುವಿನ ಹಾಲಿನ ಸೇವನೆಯಿಂದ ಕಫ ಹೆಚ್ಚಾಗುತ್ತದೆ. ತನ್ಮೂಲಕ ವಿವಿಧ ಶ್ವಾಸಸಂಬಂಧಿ ರೋಗಗಳಿಗೆ ಆಹ್ವಾನ ನೀಡುತ್ತದೆ. ಹೇಗೆ? : ಕಫ ಜಾಸ್ತಿಯಾದರೆ ಹಾಲು ಕುಡಿಯಬೇಡಿ ಎಂದು ಆಯುರ್ವೇದ ಹೇಳುತ್ತದೆ. ಆದರೆ ಹಾಲಿನ ಎಲ್ಲಾ ಅಂಶಗಳ ಕಾರಣ ಕಫ ಉಂಟಾಗುವುದಿಲ್ಲ. beta-CM-7 ಎಂಬ ಹೆಸರಿನ ಪ್ರೋಟೀನ್ ಸೇವಿಸುವುದರಿಂದ ಕಫ ಹೆಚ್ಚುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಜೊತೆಗೇ ಜೀರ್ಣಾಂಗಳ ಒಳಪದರಗಳಲ್ಲಿಯೂ ಕಫ ಕಟ್ಟುವುದು ಕಂಡುಬಂದಿದೆ.
ಹಸುವಿನ ಹಾಲಿನಲ್ಲಿರುವ ವಿವಿಧ ಪ್ರೋಟೀನ್ ಗಳು ಕೆಲವರಿಗೆ ಅಲರ್ಜಿಯುಂಟುಮಾಡುತ್ತವೆ. ಹೇಗೆ?: ಮೊಸರಿನಲ್ಲಿ ಎಂಭತ್ತು ಶೇಖಡಾ ಹಾಲಿನ ಪ್ರೋಟೀನುಗಳಿವೆ. ಉಳಿದ ನೀರಿನ ಭಾಗ ಇಪ್ಪತ್ತು ಶೇಖಡಾ ಇದೆ. ಒಂದು ವೇಳೆ ಹಾಲಿನ ಅಲರ್ಜಿ ಇರುವ ವ್ಯಕ್ತಿ ಮೊಸರನ್ನು ಸೇವಿಸಿದರೆ ಆತನ ರೋಗ ನಿರೋಧಕ ವ್ಯವಸ್ಥೆ ಈ ಆಹಾರವನ್ನು ವಿಷ ಎಂದು ಪರಿಗಣಿಸುತ್ತದೆ. ಪರಿಣಾಮವಾಗಿ ಆಹಾರವಾಗಿ ಸ್ವೀಕರಿಸಿದ್ದ ಪ್ರೋಟೀನುಗಳ ವಿರುದ್ದವೇ ರಕ್ಷಣಾ ಕಾರ್ಯವನ್ನು ಪ್ರಾರಂಭಿಸುತ್ತದೆ. ಇದು ಅಲರ್ಜಿಗೆ ಕಾರಣವಾಗುತ್ತದೆ.
ಕೊನೆಯ ಮಾರ್ಪಾಟು : 4/27/2020
ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ...
ಹಾಗಲಕಾಯಿ ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ತರಕಾರ...
ಗರ್ಭಿಣಿಯಾದಾಗ ಹಾಗೂ ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಸಾ...
ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ...