ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ ಅದು ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿರು ಎಂದೇ ಹಿರಿಯರು ಆಶೀರ್ವಾದಿಸುವುದೂ ಹಾಲಿನ ಗುಣವನ್ನು ಎತ್ತಿಹಿಡಿಯುತ್ತದೆ. ಮಗುವಿನ ಜನನವಾದ ಬಳಿಕ ಮೊತ್ತಮೊದಲಾಗಿ ಕುಡಿಯುವುದೇ ಹಾಲನ್ನು. ಆದರೆ ವಯಸ್ಕರಾದ ಬಳಿಕ ಹಾಲು ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವುವಂತೆಯೇ ಕೊಂಚ ಕೆಟ್ಟದನ್ನೂ ಮಾಡುತ್ತದೆ ಎಂದರೆ ನಂಬುತ್ತೀರಾ? ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ !
ಅಡುಗೆ ಮನೆಯಲ್ಲಿರುವ ಅರಿಶಿನ ಮತ್ತು ಹಾಲು ಸೂಕ್ಷ್ಮ ಜೀವ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ನಿಮ್ಮ ನಿತ್ಯದ ಇತರ ಆಹಾರಗಳೊಂದಿಗೆ ಈ ಎರಡು ವಸ್ತುಗಳನ್ನು ಬಳಸುವುದರಿಂದ ನೀವು ಸಾಮಾನ್ಯವಾಗಿ ಕಂಡುಬರುವ ಹಲವು ಅನಾರೋಗ್ಯ ತೊಂದರೆಗಳಿಂದ ದೂರವಿರಬಹುದು. ಅರಿಶಿನಕ್ಕೆ ಹಾಲನ್ನು ಸೇರಿಸಿ ಬಳಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಇವು ಪರಿಸರದ ಅಪಾಯಕಾರಿ ಜೀವಾಣುಗಳ ವಿರುದ್ಧ ಹೋರಾಡಲು ಅತ್ಯಂತ ಸಹಾಯಕಾರಿ.
ಅರಿಶಿನ ಮತ್ತು ಹಾಲಿನ ರೆಸಿಪಿ / ಉಪಯೋಗ ಒಂದು ಇಂಚಿನ ಅರಿಶಿನ ಬೇರು/ಅರಿಶಿನ ಕೊಂಬನ್ನು ತೆಗೆದುಕೊಳ್ಳಿ. ಇದನ್ನು ಹಾಲಿನಲ್ಲಿ 15 ನಿಮಿಷಗಳ ಕಾಲ ಕುದಿಸಿ. ನಂತರ ಅರಿಶಿನ ತುಂಡನ್ನು ತೆಗೆದು ಹಾಲನ್ನು ತಣಿಸಿ ಕುಡಿಯಿರಿ. ಈ ಅದ್ಭುತ ನೈಸರ್ಗಿಕ ಕೊಡುಗೆಯಿಂದ ಉಂಟಾಗುವ 15 ಕ್ಕೂ ಹೆಚ್ಚಿನ ಉಪಯೋಗಗಳನ್ನು ನೋಡೋಣ:
ಅರಿಶಿನ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ಆಕ್ರಮಿಸುವುದನ್ನು ವಿರೋಧಿಸುತ್ತದೆ. ಇದು ಉಸಿರಾಟದ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹ ಉಷ್ಣವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆನ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು.
ಈ ಅರಿಶಿನ ಹಾಲು, ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ತನ, ಚರ್ಮ, ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಗುದನಾಳದ ಕ್ಯಾನ್ಸರ್ ನಂತಹ ಬೆಳವಣಿಯನ್ನು ತಡೆಯುತ್ತದೆ. ಇದು ಹಾನಿಕಾರಕ ಡಿಎನ್ಎಯ ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
ಬಿಸಿ ಅರಿಶಿನ ಹಾಲು ಅಮೈನೊ ಆಮ್ಲ, ಟ್ರಿಪ್ಟೊಫಾನ್ ನ್ನು ಉತ್ಪಾದಿಸುತ್ತದೆ ಇದು ಶಾಂತಿಯುತ ಮತ್ತು ಸುಖ ನಿದ್ರೆಗೆ ಕಾರಣವಾಗುತ್ತದೆ.
ಅರಿಶಿನ ಹಾಲು ವೈರಸ್ ವಿರೋದಿ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ತ್ವರಿತ ಪರಿಹಾರ ನೀಡುತ್ತದೆ.
ಅರಿಶಿನ ಹಾಲು, ಸಂಧಿವಾತವನ್ನು ಹೋಗಲಾಡಿಸಲು ಮತ್ತು ಸಂಧಿವಾತಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯಮಾಡುತ್ತದೆ. ಕೀಲು ಮತ್ತು ಸ್ನಾಯುಗಳಲ್ಲಿನ ನೋವುಗಳನ್ನೂ ಸಹ ನಿವಾರಿಸುವಲ್ಲಿ ಸಹಕಾರಿಯಾಗಿದೆ.
ಅರಿಶಿನ ಹಾಲಿನಲ್ಲಿ ಸಕಲ ನೋವುಗಳನ್ನು ನಿವಾರಿಸಬಲ್ಲ ಶಕ್ತಿಯಿದೆ. ಇದು ದೇಹದಲ್ಲಿ ಬೆನ್ನುಮೂಳೆಯ ಮತ್ತು ಕೀಲುಗಳ ಬಲಪಡಿಸಲು ಮಾಡಬಹುದು .
ಅರಿಶಿನ ಹಾಲು ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು.
ಅರಿಶಿನ ಹಾಲು, ಆಯುರ್ವೇದ ಸಂಪ್ರದಾಯದಲ್ಲಿ ಅತ್ಯುತ್ತಮ ರಕ್ತ ಶುದ್ದೀಕರಣ/ ಕ್ಲಿನ್ಸರ್ ಎಂದು ಪರಿಗಣಿಸಲಾಗುತ್ತದೆ . ಇದು ದೇಹದಲ್ಲಿ ರಕ್ತ ಪರಿಚಲನೆಯ ಪುನಶ್ಚೇತನಗೊಳಿಸಲು ಮತ್ತು ವರ್ಧಿಸಲು ಸಹಾಯ ಮಾಡಬಹುದು. ಇದು ದುಗ್ಧನಾಳ ವ್ಯವಸ್ಥೆ ಮತ್ತು ಎಲ್ಲಾ ರಕ್ತನಾಳಗಳು ಶುದ್ಧೀಕರಿಸಲು ಕೂಡ ಅತ್ಯವಶ್ಯಕ.
ಅರಿಶಿನ ಹಾಲು ಪಿತ್ತಜನಕಾಂಗದ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಶುದ್ಧೀಕರಣ ಮಾಡುವ ಲಿವರ್ ನ್ನು ಬೆಂಬಲಿಸುತ್ತದೆ ಮತ್ತು ದುಗ್ಧನಾಳ ವ್ಯವಸ್ಥೆ ಶುದ್ಧೀಕರಿಸುತ್ತದೆ.
ಅರಿಶಿನ ಹಾಲು, ಮೂಳೆಗಳು ಆರೋಗ್ಯಕರ ಮತ್ತು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಒಂದು ಉತ್ತಮ ಮೂಲವಾಗಿದೆ. ಭಾರತದ ಕ್ರಿಕೆಟ್ ದಂತಕಥೆಯಾದ ಸಚಿನ್ ತೆಂಡೂಲ್ಕರ್, ಉತ್ತಮ ಮೂಳೆ ಆರೋಗ್ಯಕ್ಕೆ ಅರಿಶಿನ ಹಾಲನ್ನೇ ದಿನವೂ ಕುಡಿಯುತ್ತಾನೆ. ಅರಿಶಿನ ಹಾಲು ಮೂಳೆ ಸವೆತ ಮತ್ತು ಸಂಧಿವಾತ ಕಡಿಮೆ ಮಾಡುತ್ತದೆ.
ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳು ಮತ್ತು ಕೊಲೈಟಿಸ್ ನ್ನು ಕಡಿಮೆಗೊಳಿಸುತ್ತದೆ. ಇದು ಒಂದು ಪ್ರಬಲ ನಂಜುನಿರೋಧಕವೂ ಆಗಿದೆ . ಇದು ಉತ್ತಮ ಜೀರ್ಣಕಾರಿ ಶಕ್ತಿ ಹೊಂದಿದ್ದು, ಹುಣ್ಣುಗಳು, ಅತಿಸಾರ ಮತ್ತು ಅಜೀರ್ಣವನ್ನು ತಡೆಯುತ್ತದೆ.
ಇದು ಮುಟ್ಟಿನ ಸೆಳೆತ ಮತ್ತು ನೋವು ಸರಾಗಗೊಳಿಸುವ ಆಂಟಿಸ್ಪಾಸ್ಮೊಡಿಕ್ ನ್ನು ಹೊಂದಿರುವ ಅರಿಶಿನ ಹಾಲು ಅದ್ಭುತ ಶಕ್ತಿಯನ್ನು ಹೊಂದಿದೆ. ಗರ್ಭಿಣಿ ಮಹಿಳೆಯರ ಸುಲಭ ಹೆರಿಗೆಗೆ ಅರಿಶಿನ ಹಾಲು ಸೇವಿಸುವುದು ಅತ್ಯಂತ ಒಳ್ಳೆಯದು. ಅಂಡಾಶಯದ ವೇಗವಾದ ಸಂಕೋಚನಕ್ಕೆ ಅರಿಶಿನ ಹಾಲನ್ನು ಸೇವಿಸಬಹುದು.
ಕ್ಲಿಯೋಪಾತ್ರ, ಮೃದು ಮತ್ತು ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲಿನ ಸ್ನಾನವನ್ನೇ ಮಾಡುತ್ತಿದ್ದರು ಎನ್ನಲಾಗುತ್ತದೆ. ಹಾಗೆಯೇ , ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲನ್ನು ಕುಡಿಯುವುದು ಒಳಿತು. ಹತ್ತಿಯಲ್ಲಿ ಅರಿಶಿನ ಹಾಲನ್ನು ನೆನೆಸಿ ಚರ್ಮ ಕೆಂಪಾಗಿರುವ ಜಾಗದಲ್ಲಿ ಅದ್ದಿ 15 ನಿಮಿಷಗಳ ಕಾಲ ಬಿಟ್ಟರೆ ಪೀಡಿತ ಪ್ರದೇಶವು ಬಹಳ ಬೇಗ ಗುಣವಾಗುತ್ತದೆ. ಇದು ಮೊದಲಿಗಿಂತ, ಚರ್ಮ ಹೆಚ್ಚು ಹೊಳೆಯುವಂತೆ ಮಾಡುತ್ತದೆ.
ಅರಿಶಿನ ಹಾಲು ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಸ್ಥಗಿತಗೊಳಿಸುತ್ತದೆ. ಈ ತೂಕವನ್ನು ನಿಯಂತ್ರಿಸಲು ಉಪಯೋಗಕಾರಿಯಾಗಿದೆ.
ಎಸ್ಜಿಮಾ ಚಿಕಿತ್ಸೆಗೆ ದಿನವು ಅರಿಶಿನ ಹಾಲನ್ನು ಕುಡಿಯುವುದು ಉತ್ತಮ.
ಹೌದು, ವಿಜ್ಞಾನ ಮುಂದುವರೆದಂತೆಲ್ಲಾ ಹೊಸ ನೀರು ಬಂದು ಹಳೆನೀರನ್ನು ಕೊಚ್ಚಿಕೊಂಡು ಹೋಗುವಂತೆ ಹಿಂದಿನ ಮಾಹಿತಿಗಳನ್ನು ಅಳಿಸಿ ಹೊಸ ವಿಷಯಗಳನ್ನು ನೀಡುತ್ತಾ ಹೋಗುತ್ತದೆ. ಇದಕ್ಕೆ ಅಪ್ಪಟ ಉದಾಹರಣೆ ಎಂದರೆ ಲ್ಯಾಂಡ್ ಲೈನ್ ಟೆಲಿಫೋನ್. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮನೆಗೊಂದು ಲ್ಯಾಂಡ್ ಲೈನ್ ಬೇಕಿದ್ದರೆ ಟೆಲಿಫೋನ್ ಸಂಸ್ಥೆಗೆ ಅರ್ಜಿ ಬರೆದು ವರ್ಷಗಟ್ಟಲೇ ಕಾಯಬೇಕಿತ್ತು. ಇಂದು ಮೊಬೈಲ್ ಯುಗ ಪ್ರಾರಂಭವಾದ ಬಳಿಕ ಲ್ಯಾಂಡ್ ಲೈನ್ ಅವನತಿಯ ಹಾದಿ ಹಿಡಿಯುತ್ತಿದೆ. ಹಾಲಿನ ಬಗ್ಗೆ ಒಳ್ಳೆಯದನ್ನೇ ಕೇಳಿ ಬಂದಿರುವ ನಮಗೆ ಇತ್ತೀಚಿನ ಸಂಶೋಧನೆಗಳು ನೀಡುವ ಮಾಹಿತಿಗಳು ಹಾಲಿನ ಅಡ್ಡಪರಿಣಾಮಗಳ ದೆಸೆಯಿಂದ ಹಾಲು ಸಹಾ ಹಾಲಾಹಲ ಎಂಬುದಾಗಿ ತಿಳಿಸುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಮೂಲ: ಅರ್ಶದ್ಹ್
ಕೊನೆಯ ಮಾರ್ಪಾಟು : 6/6/2020
ಸಾಮಾನ್ಯವಾಗಿ ಶ್ವಾಸಸಂಬಂಧಿ ರೋಗ ಎಂದರೆ ಅಸ್ತಮಾ ಒಂದೇ ಎಂದು...
ಹೆರಿಗೆ ನೋವೆಂದರೆ ಅದೊಂದು ಅತೀವ ವೇದನೆ. ಈ ನೋವಿನ ಬಳಿಕ ಮಗ...
ಈ ವಾರ ಸೂರ್ಯನ ಪ್ರಖರ ಕಿರಣಗಳು ಚರ್ಮದ ಮೇಲೆ ಮಾಡುವ ಪರಿಣಾಮ...
ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ...