অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಕ್ಕಳಿಗೆ ಸ್ತನ್ಯಪಾನವನ್ನು ಎಷ್ಟು ದಿನದ ವರೆಗೆ ನೀಡಬೇಕು

ಆರು ತಿಂಗಳ ವರೆಗೆ ಕೇವಲ ಸ್ತನ್ಯಪಾನವನ್ನು ಪಾಲಿಸಬೇಕು. ಸ್ತನ್ಯಪಾನವನ್ನು ಎರಡು ವರ್ಷದ ವರೆಗೆ ಮುಂದುವರೆಸಬಹುದು

  • ಶಿಶುಗಳ ಸಾಮಾನ್ಯ ಬೆಳವಣಿಗೆ ಮತ್ತು ಆರೋಗ್ಯಕರ ಅಭಿವೃದ್ಧಿಗಾಗಿ ಮೊಲೆ ಹಾಲು ಅತಿ ನೈಸರ್ಗಿಕ ಮತ್ತು ಪರಿಪೂರ್ಣ ಆಹಾರ.
  • ಪ್ರಥಮ ಸ್ತನ್ಯ ಪೌಷ್ಟಿಕಾಂಶಭರಿತವಾಗಿದ್ದು ರೋಗನಿರೋಧಕಗಳನ್ನು ಹೊಂದಿದೆ. ಹಾಗಾಗಿ ಕಡ್ಡಾಯವಾಗಿ ಶಿಶುವಿಗೆ ಈ ಹಾಲೂಡಿಸಬೇಕು.
  • ಸ್ತನ್ಯಪಾನ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಸ್ತನ್ಯಪಾನ ತಾಯಿ-ಶಿಶುವಿನ ಸಂಪರ್ಕ ಸ್ಥಾಪಿಸುತ್ತದೆ ಮತ್ತು ತಾಯಿ-ಶಿಶುವಿನ ಸಂಬಂಧ ಗಟ್ಟಿಗೊಳಿಸುತ್ತದೆ
  • ಇದರಿಂದ ಜನನದ ಮಧ್ಯಂತರ ಪ್ರಮಾಣ ಹೆಚ್ಚಿಸಿ ಫಲವಂತಿಕೆ ನಿಯಂತ್ರಿಸುತ್ತದೆ (ಮುಟ್ಟಿನ ತಡವ
  • ಅದ ಹಿಂತಿರುಗುವಿಕೆ).
  • ಗರ್ಭಕೋಶದ ಪ್ರತ್ಯಾಕರ್ಷಣೆಯಲ್ಲಿ ಸ್ತನ್ಯಪಾನ ಸಹಾಯಕಾರಿಯಾಗುತ್ತದೆ.
  • ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿರುವ ತಾಯಂದಿರಲ್ಲಿ ಮೊಲೆ ಕ್ಯಾನ್ಸರ್ ನ ಪ್ರಮಾಣ ಕಡಿಮೆ.
  • ಪ್ರಸವದ ಒಂದು ಘಂಟೆಯೊಳಗೆ ಸ್ತನ್ಯಪಾನವನ್ನು ಮಾಡಿಸಿರಿ ಮತ್ತು ಪ್ರಥಮ ಸ್ತನ್ಯವನ್ನು ತೊರೆಯಬೇಡಿ.
  • ಕನಿಷ್ಠ ನಾಲ್ಕರಿಂದ ಆರು ತಿಂಗಳ ವರೆಗೆ ಕೇವಲ ಸ್ತನ್ಯಪಾನವನ್ನು ಮಾಡಿಸಿರಿ.
  • ಪೂರಕ ಆಹಾರಗಳ (ಶಿಶು ಆಹಾರಗಳು) ಕೊಡಲು ಆರಂಭಿಸಿದ ನಂತರವೂ ಎರಡು ವರ್ಷಗಳವರೆಗೆ ಸ್ತನ್ಯಪಾನವನ್ನು ಮುಂದುವರೆಸಿರಿ.
  • ಹಾಲಿನ ಉತ್ತಮ ಪೂರೈಕೆಗಾಗಿ ಶಿಶುವಿಗೆ ಸ್ತನ್ಯಪಾನವನ್ನು ಆಗ್ಗಾಗೆ ಅಥವಾ ಕೇಳಿದಾಗ ಮಾಡಿರಿ.
  • ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಪೌಷ್ಟಿಕ ಮತ್ತು ಸಮರ್ಪಕ ಆಹಾರಕ್ರಮವನ್ನು ಅನುಸರಿಸಿ.
  • ಹಾಲುಣಿಸುವ ಸಮಯದಲ್ಲಿ ತಂಬಾಕು (ಧೂಮಪಾನ ಮತ್ತು ಅಗೆಯುವುದು), ಮದ್ಯ ಮತ್ತು ಮಾದಕವಸ್ತುಗಳ ಸೇವನೆಯನ್ನು ತೊರೆಯಿರಿ.

ಆರು ತಿಂಗಳ ನಡುವೆ ಶಿಶುವಿಗೆ ಪೂರಕ ಆಹಾರಗಳನ್ನು ಪರಿಚಯಿಸಿರಿ

  • 6 ತಿಂಗಳ ವಯಸ್ಸಿನ ನಂತರ ಶಿಶುವಿಗೆ ಮೊಲೆ ಹಾಲು ಮಾತ್ರ ಸಾಕಾಗುವುದಿಲ್ಲ.
  • 6 ತಿಂಗಳ ನಡುವೆ ಶಿಶುಗಳಿಗೆ ಸ್ತನ್ಯಪಾನದ ಜೊತೆಗೆ ಪೂರಕ ಆಹಾರಗಳ ಪರಿಚಯ ಅಗತ್ಯ.
  • ಚಿಕ್ಕ ಮಕ್ಕಳಿಗೆ ಸಮರ್ಪಕ ಮತ್ತು ಸೂಕ್ತ ಪೂರಕ ಆಹಾರಗಳನ್ನು ನೀಡಿದಲ್ಲಿ ಅಪೌಷ್ಟಿಕತೆಯನ್ನು ತಡೆಯಬಹುದು.
  • ಮಗುವಿಗೆ ಆಹಾರಗಳನ್ನು ತಯಾರಿಸುವಾಗ ಮತ್ತು ತಿನ್ನಿಸುವಾಗ ಸ್ವಚ್ಚತೆ ಅಭ್ಯಾಸಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಬೇಧಿಗೆ ಕಾರಣವಾಗುತ್ತದೆ.
  • ಶಿಶುವಿಗೆ ಪೂರಕ ಆಹಾರಗಳನ್ನು 6 ತಿಂಗಳ ವಯಸ್ಸಿನಿಂದ ಪ್ರಾರಂಭಿಸಿರಿ. ಸ್ತನ್ಯಪಾನವನ್ನು ಎರಡು ವರ್ಷಗಳ ವರೆಗೆ ಮುಂದುವರೆಸಿರಿ.
  • ಪೂರಕ ಆಹಾರಗಳನ್ನು ನೀಡಲು ತಡೆ ಮಾಡದಿರಿ.
  • ಮನೆಯಲ್ಲಿ ತಯಾರಿಸಿದ, ಕಡಿಮೆ ಬೆಲೆಯ ಶಿಶು ಆಹಾರಗಳನ್ನು ತಿನ್ನಿಸಿರಿ.
  • ಪೂರಕ ಆಹಾರಗಳನ್ನು ದಿನದಲ್ಲಿ 5-6 ಬಾರಿ ತಿನ್ನಿಸಿರಿ.
  • ಹಣ್ಣುಗಳನ್ನು ಮತ್ತು ಸರಿಯಾಗಿ ಬೇಯಿಸಿದ ತರಕಾರಿಗಳನ್ನು ನೀಡಿರಿ.
  • ಆಹಾರಗಳನ್ನು ತಯಾರಿಸುವಾಗ ಮತ್ತು ತಿನ್ನಿಸುವಾಗ ಸ್ವಚ್ಚತೆ ಅಭ್ಯಾಸಗಳನ್ನು ಪಾಲಿಸಿರಿ
  • ಸ್ತನ್ಯಪಾನ ಸಮರ್ಪಕವಾಗಿಲ್ಲದಿದ್ದಲ್ಲಿ (ಸಾಕಾಕದಿದ್ದಲ್ಲಿ) ಏನು ಮಾಡಬೇಕು

    • ಸ್ತನ್ಯಪಾನ ವಿಫಲವಾದಲ್ಲಿ, ಹಾಲೂಡಿಕೆಯನ್ನು ಪ್ರಚೋದಿಸಲು ಎಲ್ಲಾ ಎಲ್ಲಾ ಪ್ರಯತ್ನವನ್ನು ಮಾಡಬೇಕು. ಎಲ್ಲಾ ಕ್ರಮಗಳು ವಿಫಲವಾಗಿದ್ದಲ್ಲಿ, ಪ್ರಾಣಿ ಹಾಲನ್ನು ಅಥವ ಮಕ್ಕಳಿಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ಆಹಾರಗಳನ್ನು ಉಪಯೋಗಿಸಿರಿ.
    • ಹಾಲನ್ನು ಮಗುವಿಗೆ ಕುಡಿಸುವ ಮುನ್ನ ಕುದಿಸಬೇಕು.
    • ಮೇಲು ಹಾಲನ್ನು ಪ್ರಾರಂಭಿಸುವಾಗ ಹಾಲಿಗೆ ಸಮವಾಗಿ ನೀರನ್ನು ಬೆರೆಸಬಹುದು.
    • ಪೂರ್ಣ ಪ್ರಮಾಣದ ಹಾಲನ್ನು ಮಗುವಿಗೆ ನಾಲ್ಕನೆಯ ವಾರದಿಂದ ಶುರುಮಾಡಬಹುದು
    • ಶಿಶುವಿಗೆ ಕೊಡಲಾಗುವ ಪ್ರಾಣಿ ಹಾಲು ಕಬ್ಬಿಣಾಂಶದ ಮತ್ತು ಸಿ ಅನ್ನಾಂಗದ ಪೂರಕಗಳನ್ನು ನೀಡಬೇಕು.
    • ಸುಮಾರು ಸಿ 120-180 ಮಿಲಿ ಲೀಟರ್ ಹಾಲನ್ನು ಒಂದು ಚಮಚ ಸಕ್ಕರೆ ಬೆರೆಸಿ ಪ್ರತಿದಿನ 6-8 ಬಾರಿ ನೀಡಬೇಕು.
    • ಶಿಶುವಿಗಾಗಿ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಆಹಾರವನ್ನು ತಯಾರಿಸುವಾಗ ಅದರ ಲೇಬಲ್ (ಹೆಸರು ಪಟ್ಟಿ) ಮೇಲೆ ಬರೆದಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
    • ಎಲ್ಲಾ ರೀತಿಯ ನಿಗಾವಹಿಸಿ ಶಿಶು ಆಹಾರವನ್ನು ಸ್ವಚ್ಛ ಬಟ್ಟಲಿನಲ್ಲಿ, ಚಮಚದಿಂದ, ಬಾಟ್ಲಿಯಲ್ಲಿ ಮತ್ತು ನಿಪ್ಪಲಿನಲ್ಲಿ ನೀಡ ಬೇಕು.
    • ಹೊರ ಆಹಾರ ತಿನ್ನುತ್ತಿರುವ ಶೀಶುಗಳಲ್ಲಿ ಬೊಜ್ಜುಮೈ ತಡೆಯಲು ಅತಿ ಹೆಚ್ಚಾಗಿ ತಿನ್ನಿಸ ಬಾರದು.
    • ಕಡಿಮೆ ಬೆಲೆಯ ಮನೆಯಲ್ಲಿ ತಯಾರಿಸಿದ ಶಿಶು ಆಹಾರಗಳನ್ನು ತಿನ್ನಿಸಬೇಕು. ಸಾಧ್ಯವಾದರೆ ಮಾರುಕಟ್ಟಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಬಹುದು.

    ಮೂಲ:ರಾಷ್ಟ್ರೀಯ ಪೌಷ್ಟಿಕತೆಯ ಸಂಸ್ಥೆ, ಹೈದರಾಬಾದ್

    ಕೊನೆಯ ಮಾರ್ಪಾಟು : 6/22/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate