অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯ

ಆರೋಗ್ಯ

  • ತಾಯಿ ಹಾಗೂ ಮಕ್ಕಳ ಆರೋಗ್ಯ ಕುರಿತು ಜಾಗೃತಿ

    ಭಾರತ ತಾಯಂದಿರ ಮರಣ ಅನುಪಾತವನ್ನು ಕಡಿಮೆಮಾಡುವುದು ಮತ್ತು ಸಂತಾನೋತ್ಪತ್ತಿ ಆರೋಗ್ಯದ ಏಕಪ್ರವೇಶವನ್ನು ಒದಗಿಸಲು ಬದ್ಧವಾಗಿದೆ. ತಾಯಿ ಹಾಗೂ ಮಕ್ಕಳ ಆರೋಗ್ಯ ಕುರಿತ ಜಾಗೃತಿಯನ್ನು ಪೀಳಗೆಯಿ೦ದ ಪೀಳಿಗೆಗೆ ಮೂಡಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿ ಮತ್ತು ಮೂಲಭೂತ ಪ್ರಾಮುಖ್ಯತೆಯಾಗಿದ್ದು. ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮುಲಕ ಜಾಗೃತಿಯನ್ನು ಮೂಡಿಸುತಿದೆ.

  • ಸ್ಥಳೀಯ ವೈದ್ಯಕೀಯ ಪದ್ದತಿ.

    ಜನರು ಸ್ಥಳೀಯ ವೈದ್ಯಕೀಯ ವ್ಯವಸ್ಥೆಗಳ ಬಳಕೆಗೆ ಸಂಬಂಧಿತ ಮಾಹಿತಿಯನ್ನು ಅರಿಯುವ ಅವಶ್ಯಕವಿದೆ.ಈ ನಿಟ್ಟಿನಲ್ಲಿ ಐ.ಎನ್ ಡಿ ಜಿ ಯು ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ದಿ ಮತ್ತು ಹೋಮಿಯೋಪತಿ (ಆಯುಶ್) ಸಂಬಂಧಿಸಿದ ಮಾಹಿತಿ, ಸಂಪನ್ಮೂಲ ಸಾಮಗ್ರಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತದೆ.

  • ಮಾನಸಿಕ ಆರೋಗ್ಯದ ಅರಿವು - ೧ಗ೦ಟೆ ಸಮಯದ ಅವಶ್ಯಕವಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2020ರ ವೇಳೆಗೆ ಖಿನ್ನತೆಯು ವಿಶ್ವಾದ್ಯಂತ ಎರಡನೇ ದೊಡ್ಡ ರೋಗವಾಗಿ ಹೊರಹೊಮ್ಮುತದೆ. ಮಾನಸಿಕ ಅನಾರೋಗ್ಯವು ಬೆಳೆಯುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ವೆಚ್ಚಕ್ಕೆ ಸಂಬಂಧಿಸಿದ ಹೊರೆಯಾಗಿದ್ದು, ಮಾನಸಿಕ ಆರೋಗ್ಯ ಮತ್ತು ಮಾನಸಿಕ ಕಾಯಿಲೆಯ ಚಿಕಿತ್ಸೆಯ ಬಗ್ಗೆ ಜಾಗೃತಿ ನೀಡಲು ನಿರ್ದೇಶಿಸುತ್ತದೆ.

ಮಹಿಳೆಯರ ಆರೋಗ್ಯ

ಪ್ರೌಢಾವಸ್ಥೆಯಿಂದ ಋತುಬಂಧದವರೆಗು ಮಹಿಳೆಯರ ಜೀವನದ ಸಂಪೂರ್ಣ ಆರೋಗ್ಯ ಬಹಳ ಮುಖ್ಯ ಅ೦ಶವಾಗಿದೆ. ಹದಿಹರೆಯದವರ ಆರೋಗ್ಯ, ಗರ್ಭಧಾರಣೆಯ, ಮತ್ತು ಪುನರುತ್ಪಾದಕ ನಾಳಗಳ ಆರೋಗ್ಯ ಕಳಕಳಿಯ ಪ್ರಮುಖ ಕ್ಷೇತ್ರಗಳಾಗಿವೆ. ಭಾರತದ ೨೨.೫ % ಹದಿಹರೆಯದವರು ಇದಾರೆ. ಗರ್ಭಧಾರಣೆ ಮಹಿಳೆಯರ ಜೀವನದ ಅತ್ಯಂತ ಪ್ರಮುಖ ಹಂತ. ತಾಯಂದಿರ ಮರಣ ಮತ್ತು ಶಿಶು ಮರಣ ತಡೆಗಟ್ಟಲು ಕಾಳಜಿವಹಿಸಬೇಕು. ಈ ಪೋರ್ಟಲ್ ಸುರಕ್ಷಿತ ತಾಯ್ತನ ಮತ್ತು ಉತ್ತಮ ಪುನರುತ್ಪಾದಕ ನಾಳಗಳ ಆರೋಗ್ಯ ಕಾಳಜಿಯ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.

ಮಕ್ಕಳ ಆರೋಗ್ಯ

ಮಗುವಿನ ಆರೋಗ್ಯದಲ್ಲಿ ಮೈಲಿ ಕಲ್ಲುಗಳು, ಲಸಿಕೆ ಮತ್ತು ನವಜಾತ ಶಿಶುಗಳ ಆರೈಕೆ, ಬೆಳವಣಿಗೆ ಮತ್ತು ಅಭಿವೃದ್ಧಿ, ಅನಾರೋಗ್ಯದ ಸಂದರ್ಭದಲ್ಲಿ ಕಾಳಜಿ, ಪೋಷಣೆ ಇತ್ಯಾದಿ ಒಂದು ದೊಡ್ಡ ಪಾತ್ರವನ್ನು ವಹಿಸುತ್ತದೆ. ಮಕ್ಕಳ ಆರೋಗ್ಯಕರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೆಂಬಲ ಅಗತ್ಯವಿದೆ . ಅಪೌಷ್ಟಿಕತೆ ಮತ್ತು ಸಾಂಕ್ರಾಮಿಕ ರೋಗಗಳು, ದುರ್ಬಲ ಅಪೌಷ್ಟಿಕತೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸರಿಯಾದ ಎಚ್ಚರಿಕೆವಹಿಸಬೇಕು. ಮಕ್ಕಳ ಆರೋಗ್ಯದ ಕಾಳಜಿ ಮತ್ತು ಬೆಳವಣಿಗೆ ಬಗ್ಗೆ ಪೋಷಕರಿಗೆ ಹಲವು ವಿಷಯಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ. ಎಕೆಂದರೆ ಮಗುವಿನ ಆರೋಗ್ಯ ಬಂದಾಗ ಏನನೂ ನಿರ್ಲಕ್ಷಿಸಿಲಾಗುವುದಿಲ್ಲ . ಹೊಸ ಜನನ, ಶಿಶು, ಅಂಬೆಗಾಲಿಡುವ ಮತ್ತು ಶಾಲೆಗೆ ಹೋಗುವ ವಯಸ್ಸಿನ ಮಕ್ಕಳ ಪ್ರತಿಯೊಂದು ಹಂತದ ರಕ್ಷಣೆ ಮತ್ತು ರೋಗಗಳನ್ನು ತಡೆಯಲು ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬೆಳವಣಿಗೆ ಹಾಗೂ ಉತ್ತಮಗೊಳ್ಳಿಸಳು ವಿಶೇಷ ಗಮನ ಮತ್ತು ಆರೈಕೆಯ ಅಗತ್ಯವಿದೆ. ಈ ಪೋರ್ಟಲ್ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಎನ್. ಆರ್. ಹೆಚ್. ಎಂ

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್. ಆರ್. ಹೆಚ್. ಎಂ) ಯು ರಾಷ್ಟ್ರಾದ್ಯಂತ ಗ್ರಾಮೀಣ ಪ್ರದೇಶದ ಜನರಿಗೆ ಪರಿಣಾಮಕಾರಿ ಆರೋಗ್ಯಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ೧೨ ನೇ ಏಪ್ರಿಲ್, ೨೦೦೫ ರಲ್ಲಿ ಪ್ರಾರಂಭಿಸಲಾಯಿತು, ಮುಖ್ಯವಾಗಿ ಸಾರ್ವಜನಿಕ ಆರೋಗ್ಯ ಸೂಚಕಗಳಲ್ಲಿ ಮತ್ತು / ಅಥವ ಸಾರ್ವಜನಿಕ ಆರೋಗ್ಯ ಮೂಲಭೂತ ವ್ಯವಸ್ಥೆಯಲ್ಲಿ ದುರ್ಬಲತೆವಿರುವ ೧೮ ರಾಜ್ಯಗಳಿಗೆ ಕೇಂದ್ರಿಕರಿಸುತ್ತಿದೆ.ಶಿಶು ಮರಣ ಪ್ರಮಾಣ ಹಾಗೂ ತಾಯಿಯ ಮರಣ ಪ್ರಮಾಣವನ್ನು ಕ್ಷೀಣಿಸುವುದು.ಸಾರ್ವಜನಿಕ ಆರೋಗ್ಯ ಸೇವೆಗಳಾದಂತಹ ಮಹಿಳಾ ಆರೋಗ್ಯ, ಮಗುವಿನ ಆರೋಗ್ಯ, ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ, ಚುಚ್ಚುಮದ್ದು, ಹಾಗೂ ಆಹಾರ / ಪೋಷಣೆ ಗಳ ಸಾರ್ವತ್ರಿಕ ಲಭ್ಯತೆ.ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ, ಸ್ಥಳೀಯವಾಗಿ ಉದ್ಭವವಾಗುವ ರೋಗಗಳನ್ನು ಒಳಗೊಂಡಂತೆ, ನಿಯಂತ್ರಣ ಹಾಗೂ ತಡೆಗಟ್ಟುವಿಕೆ.ಪೂರ್ಣ ಹಾಗೂ ವ್ಯಾಪಕ ಪ್ರಾಥಮಿಕ ಆರೊಗ್ಯ ಸೇವೆಗಳ ಸಮಗ್ರ ಸುಲಭಗಮ್ಯತೆ.ಜನಸಂಖ್ಯೆಯಲ್ಲಿ ಸ್ಥಿರತೆ, ಲಿಂಗತ್ವ ಮತ್ತು ಜನವಿವರಣೆಯಲ್ಲಿ ಸಮತೋಲನ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಪೋರ್ಟಲ್ ಒದಗಿಸುತ್ತದೆ.

ಆಯುಷ್‌

ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಇಲಾಖೆ ಮಾರ್ಚ್, ೧೯೯೫ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ನವೆಂಬರ್ನಲ್ಲಿ ಯುನಾನಿ, ಮತ್ತು ಹೋಮಿಯೋಪತಿ ಮಾಹಿತಿ ಒದಗಿಸುವ ದೃಷ್ಟಿಯಿಂದ ಸ್ಥಾಪಿಸಲಾಯಿತು ಮತ್ತು ೨೦೦೩ ರಲ್ಲಿ ಆಯುಷ್‌ ಒಂದು ಇಲಾಖೆಯಾಗಿ ಮರು ಹೆಸರಿಸಲಾಯಿತು.ಆಯುಷ್‌ ಇಲಾಖೆಯು ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ದಿ ಮತ್ತು ಹೋಮಿಯೋಪತಿ ವ್ಯವಸ್ಥೆಗಳಲ್ಲಿ ಶಿಕ್ಷಣ ಹಾಗೂ ಸಂಶೋಧನಾ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿತು. ಈ ಇಲಾಖೆ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಔಷಧೀಯ ಸಸ್ಯ ವಸ್ತುಗಳನ್ನು, ವ್ಯವಸ್ಥೆಗಳ ಪರಿಣಾಮಕಾರಿತ್ವದ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಜಾಗೃತಿ ಪೀಳಿಗೆಯ ಲಭ್ಯತೆ ಸುಧಾರಣೆ, ಶೈಕ್ಷಣಿಕ ಗುಣಮಟ್ಟ, ಗುಣಮಟ್ಟ ನಿಯಂತ್ರಣ ಮತ್ತು ಔಷಧಗಳ ಗುಣಮಟ್ಟದ ಮೇಲ್ದರ್ಜೆಗೇರಿಸುವ ಪ್ರಾಧಾನ್ಯತೆಯನ್ನು ನೀಡಿತ್ತು.

ಪೌಷ್ಟಿಕತೆ

ಮಾನವನ ಆರೋಗ್ಯಪೂರ್ಣ ಜೀವನಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ. ಬೆಳವಣಿಗೆ, ಅಭಿವೃದ್ಧಿಗಾಗಿ ಹಾಗೂ ಕ್ರಿಯಾಶೀಲ ಜೀವನಕ್ಕಾಗಿ, ಎಳೆ ವಯಸ್ಸಿನಿಂದಲೆ ಸೂಕ್ತ ಆಹಾರ ತೆಗೆದುಕೊಳ್ಳುವುದು ಅತ್ಯಗತ್ಯ. ಆಹಾರವು ಒಳಗೊಂಡಿರುವ ವಿವಿಧ ಅಂಶಗಳು ಮತ್ತು ಸೂಕ್ತ ಪೋಷಣೆಯನ್ನು ಒದಗಿಸುವುದನ್ನು ಕುರಿತ ವಿಜ್ಞಾನವೇ ಪೌಷ್ಟಿಕತೆ . ಜನ ಸಮೂಹದ ಸರಾಸರಿ ಪೌಷ್ಟಿಕ ಆಹಾರದ ಪ್ರಮಾಣವನ್ನು ನಿಗದಿ ಪಡಿಸಬಹುದು. ಪೌಷ್ಟಿಕತೆಯ ಪ್ರಮಾಣವು ಮಾನವನ ಅಳೆಯಬಹುದಾದಂತಹ ಗುಣಲಕ್ಷಣಗಳಾದ ವಯಸ್ಸು, ಲಿಂಗ, ಎತ್ತರ, ತೂಕ, ಚಟುವಟಿಕೆಯ ಪ್ರಮಾಣ ಹಾಗೂ ಬೆಳವಣಿಗೆಯ ದರವನ್ನು ಆಧರಿಸಿ ಪೌಷ್ಟಿಕತೆಯ ಸರಾಸರಿ ಆವಶ್ಯಕತೆಗಳನ್ನು. ಈ ವಿಭಾಗದಲ್ಲಿ ಈ ಅಂಶಗಳನ್ನು ಕುರಿತು ಸವಿಸ್ತಾರವಾಗಿ ಪ್ರಸ್ತುತಪಡಿಸಲಾಗಿದೆ.

ಆಹಾರ ಕ್ರಮಗಳು

ನಾವು ಸೇವಿಸುವ ಆಹಾರವು ಕ್ರಮಬದ್ದವಾಗಿರಬೇಕು . ಆಹಾರ ಸೇವನೆಯಲ್ಲಿ ಸಮಯ ಪಾಲನೆ ಬಹಳ ಮುಕ್ಯ ಪಾತ್ರವನ್ನು ವಹಿಸುತ್ತದೆ.ನಿಯಮಿತವಾಗಿ ಆಹಾರ ಸೇವಿಸುವುದರಿಂದ ಬಹಳಷ್ಟು ರೋಗಗಳನ್ನು ತಡೆಗಟ್ಟಬಹುದು

ಚರ್ಮದ ಆರೈಕೆ

ಚರ್ಮದ ಆರೈಕೆ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ

ಕೂದಲ ಆರೈಕೆ

ಕೂದಲ ಆರೈಕೆ ಬಗ್ಗೆ ಇಲ್ಲಿ ತಿಳಿಸಲಾಗಿದೆ

ರೋಗಗಳು

ರೋಗ ದೇಹದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಕುಗ್ಗಿಸುತ್ತದೆ. ಈ ವಿಭಾಗವು ನೈಜ ರೋಗಗಳು, ಬಾಹ್ಯ ರೋಗಗಳು ಮತ್ತು ಅಜ್ಞಾತ ಮೂಲದ ರೋಗಗಳ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.

ನೈರ್ಮಲ್ಯ ಮತ್ತು ಸ್ವಚ್ಛತೆ

ನೈರ್ಮಲ್ಯ ಸಮಗ್ರತಾ ಸಿದ್ಧಾಂತದ ವ್ಯಾಖ್ಯಾನ ಕುಡಿಯುವ ನೀರು, ದ್ರವ ಮತ್ತು ಘನ ತ್ಯಾಜ್ಯ ನಿರ್ವಹಣೆ, ಪರಿಸರ ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯ ಒಳಗೊಂಡಿದೆ. ಮಾಲಿಕ / ಕುಟುಂಬ / ಸಮುದಾಯ ಇವುಗಳಲ್ಲಿ ಯಾವುದಾದರೂ ಒಂದು ಖಚಿತಪಡಿಸಿಕೊಳ್ಳಲು ವಿಫಲಗೂoಡರು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವoತೆ ಮಾಡಬಹುದು.

ಮಾನಸಿಕ ಆರೋಗ್ಯ

ಯಾವ ವ್ಯಕ್ತಿಗೆ ತನ್ನ ಸ್ವಂತ ಸಾಮರ್ಥ್ಯದಿoದ ಮಾನಸಿಕ ಆರೋಗ್ಯದ ಯೋಗಕ್ಷೇಮ, ಜೀವನದ ಸಾಮಾನ್ಯ ಒತ್ತಡಗಳನ್ನು ನಿಭಾಯಿಸುವ ಶಕ್ತಿ, ಉತ್ಪತ್ತಿಕರವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆಯೋ ಆಥನು ತನ್ನ ಸಮುದಾಯಕ್ಕೆ ಒಂದು ಕೊಡುಗೆಯನ್ನು ನೀಡಬಹುದು. ಈ ಧನಾತ್ಮಕ ಅರ್ಥದಲ್ಲಿ, ಮಾನಸಿಕ ಆರೋಗ್ಯ ಮಾಲಿಕ ಯೋಗಕ್ಷೇಮ ಮತ್ತು ಸಮುದಾಯ ಪರಿಣಾಮಕಾರಿ ಕ್ರಿಯೆಗಳಿಗೆ ಬುನಾದಿಯಾಗುತ್ತದೆ.ಈ ವಿಭಾಗದಲ್ಲಿ ಈ ಅಂಶಗಳನ್ನು ಕುರಿತು ಸವಿಸ್ತಾರವಾಗಿ ಪ್ರಸ್ತುತಪಡಿಸಲಾಗಿದೆ.

ಪ್ರಥಮ ಚಿಕಿತ್ಸೆ

ಪ್ರಥಮ ಚಿಕಿತ್ಸಾ ಒಂದು ಅಸ್ವಸ್ಥತೆ ಅಥವಾ ಗಾಯದ ಆರಂಭಿಕ ಆರೈಕೆ . ಯಾವುದೇ ತುರ್ತು ಅಪಘಾತ ಅಥವಾ ಸಣ್ಣ ಗಾಯದಿಂದ, ಮನೆಯಲ್ಲಿ ಅಥವಾ ಕಚೇರಿ, ಶಾಲಾ ಕಾಲೇಜು, ಕಾರ್ಖಾನೆ ಮತ್ತು ಪ್ರತಿಯೊಂದು ರಲ್ಲಿ, ಸಿದ್ಧ ಇರಿಸಿಕೊಳ್ಳಲು ಕೆಲವು ಅಗತ್ಯ ಬಿಂದುಗಳು.ಇದು ಸಾಧಾರಣವಾಗಿ ತಜ್ಞ ನಡೆಸುವುದಿಲ್ಲ ಆದರೆ ಸಿಬ್ಬಂದಿಗೆ ತರಬೇತಿ ಇರುತ್ತದೆ, ನಿರ್ಣಾಯಕ ವೈದ್ಯಕೀಯ ಚಿಕಿತ್ಸೆ ಪಡೆಯುವವರೆಗು ರೋಗಪೀಡಿತಗುರಿಗೆ ಅಥವಾ ಗಾಯಗೊಂಡ ವ್ಯಕ್ತಿಗೆ ಇದು ಸಹಾಯರೀಯಾಗುತ್ತದೆ. ಪ್ರಥಮ ಚಿಕಿತ್ಸಾ ಹಸ್ತಕ್ಷೇಪದಲ್ಲಿ ಒಂದು ಪ್ರತ್ಯೇಕ ತರಬೇತಿ ಸಮರ್ಥವಾಗಿ ಜೀವ ಉಳಿಸುವ ತಂತ್ರಗಳನ್ನು ಅತಿಚಿಕ್ಕ ಸಾಧನಗಳನ್ನು ಬಳಸುತ್ತೇವೆ. ಈ ವಿಭಾಗದಲ್ಲಿ ಈ ಅಂಶಗಳನ್ನು ಕುರಿತು ಸವಿಸ್ತಾರವಾಗಿ ಪ್ರಸ್ತುತಪಡಿಸಲಾಗಿದೆ.

ಆರೋಗ್ಯ-ಚರ್ಚೆಯ ವೇದಿಕೆ

ಗುರುತಿಸಿದ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ/ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿರುವುದು ಈ ಪೋರ್ಟಲ್ ಚರ್ಚಾ ವೇದಿಕೆಯ ವೈಶಿಷ್ಟ್ಯ. ಚರ್ಚಿಸಲು ಹಾಗೂ ಬಳಕೆದಾರರು ಸೃಜಿಸಿ ಸಲ್ಲಿಸಿರುವ ವಿಷಯವನ್ನು ಪ್ರಕಟಿಸಲು ಈ ವೆಬ್ ತಂತ್ರಾಂಶವನ್ನು ಬಳಸಲಾಗುತ್ತದೆ. ಈ ತಾಣದಲ್ಲಿ ಸಂಬಂಧಿತ ವಿಷಯಗಳ ಬಗೆಗಿನ ಚರ್ಚೆಗೆ ಅವಕಾಶವಿದೆ.

ಕೊನೆಯ ಮಾರ್ಪಾಟು : 12/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate