অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಕ್ತಿ ಸಾಮರ್ಥ್ಯ

ಅಗ್ಗದ ಬೆಲೆಯ ತಂತ್ರಜ್ಞಾನ

ಶೂನ್ಯ ಶಕ್ತಿಯ ಶೀತಲ ಕೊಠಡಿ/ ಕೋಣೆ

ಶೂನ್ಯ ಶಕ್ತಿಯ ಶೀತಲ ಕೊಠಡಿ/ ಕೋಣೆಯು ಉತ್ಪನ್ನಗಳನ್ನು ದಾಸ್ತಾನು ಮಾಡಲು ಇರುವ ಒಂದು ಕಡಿಮೆ ವೆಚ್ಚದ ಪರ್ಯಾಯ ವಿಧಾನ. ಇದು ಹಣ್ಣುಹಂಪಲು, ತರಕಾರಿ, ಹಾಗೂ ಹೂವುಗಳ ತಾಜಾತನವನ್ನು ಸುದೀರ್ಘವಾಗಿ ಕಾಪಾಡಿಕೊಳ್ಳಲು ಕೃಷಿ ಭೂಮಿಯಲ್ಲೇ ಸ್ಥಾಪಿಸಬಹುದಾದ ಒಂದು ವ್ಯವಸ್ಥೆ. ಹಣ್ಣು ಹಂಪಲು ಹಾಗೂ ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಅವುಗಳ ಆಯಸ್ಸು ಬಹಳ ಕಡಿಮೆ ಅವಧಿಯದಾಗಿರುತ್ತದೆ ಹಾಗೂ ಅವುಗಳು ಬಹು ಬೇಗನೆ ಕೊಳೆತು ಹೋಗುತ್ತವೆ. ಅವುಗಳು ಸಜೀವಿಗಳಾಗಿರುವುದರಿಂದ ಕೊಯಿಲಿನ ನಂತರವೂ ಉಸಿರಾಟ, ಬಾಷ್ಪೀಭವನ ಕ್ರಿಯೆ, ಹಾಗೂ ಮಾಗುವ ಪ್ರಕ್ರಿಯೆಯನ್ನು ಮುಂದುವರಿಸುತ್ತವೆ. ಈ ಹಣ್ಣು ಹಾಗೂ ತರಕಾರಿಗಳು ಕೊಳೆಯುವ ಪ್ರಕ್ರಿಯೆಯನ್ನು, ದಾಸ್ತಾನು ಮಾಡುವ ಉಷ್ಣತೆಯನ್ನು ಕಡಿಮೆ ಮಟ್ಟದಲ್ಲಿ ಇರುವಂತೆ ನಿಯಂತ್ರಿಸುವುದರ ಮೂಲಕ ತಡೆಗಟ್ಟಬಹುದು. ಈ ಶೂನ್ಯ ಶಕ್ತಿಯ ದಾಸ್ತಾನು ಕೊಠಡಿಯನ್ನು ಇಟ್ಟಿಗೆ, ಮರಳು, ಬಿದಿರು, ಒಣ ಹುಲ್ಲು, ಗೋಣಿಚೀಲ ಮೊದಲಾದ ಕಡಿಮೆ ವೆಚ್ಚದ ಸಾಮಗ್ರಿಗಳಿಂದ ತಯಾರಿಸಬಹುದಾಗಿದೆ. ಈ ಕೊಠಡಿಯ ಒಳಗಿನ ಉಷ್ಣತೆಯು ಹೊರಗಿನ ಉಷ್ಣತೆಯಿಂದ 10-15O ಸೆಂ. ರಷ್ಟು ಕಡಿಮೆ ಇರುತ್ತದೆ. ಜೊತೆಗೆ ಕೊಠಡಿಯ ಒಳಗಿನ ವಾತಾವರಣದಲ್ಲಿ 90% ರಷ್ಟು ತೇವಾಂಶವೂ ಅಡಕವಾಗಿರುತ್ತದೆ. ಇದು ಒಣ ಹವೆಯಲ್ಲಿ ಹೆಚ್ಚು ಪರಿಣಾಮಕಾರಿ ರಚನೆ ಹತ್ತಿರವೇ ನೀರಿನ ಮೂಲವಿರುವ ಎತ್ತರದ ಭೂಪ್ರದೇಶವನ್ನು ಆರಿಸಿಕೊಳ್ಳಿ. 165 ಸೆಂ. ಮೀ. X 115 ಸೆಂ. ಮೀ. ಅಳತೆಯ ಇಟ್ಟಿಗೆಗಳ ನೆಲಹಾಸನ್ನು ರಚಿಸಿಕೊಳ್ಳಿ. ಕೊಠಡಿಯನ್ನು ನೀರಿನಲ್ಲಿ ಒದ್ದೆ ಮಾಡಿ. ನದಿ ತಳದಿಂದ ಸಂಗ್ರಹಿಸಿದ ಸೂಕ್ಷ್ಮವಾದ ಮರಳನ್ನು ನೀರಿನಲ್ಲಿ ನೆನೆಸಿಡಿ. ಎರಡು ಪದರದ ಗೋಡೆಯ ನಡುವಿನ 7.5 ಸೆಂ. ಮೀ. ಅಳತೆಯ ಅವಕಾಶ/ ತೂತನ್ನು ಈ ಒದ್ದೆ ಮರಳಿನಿಂದ ತುಂಬಿ. 165 ಸೆಂ. ಮೀ X 115 ಸೆಂ.ಮೀ. ಅಳತೆಯ ಬಿದಿರಿನ ಚೌಕಟ್ಟನ್ನು ರಚಿಸಿ ಅದಕ್ಕೆ, ಒಣಹುಲ್ಲು, ಉಪಯೋಗಿಸಿ, ಮೇಲ್ಕವಚವನ್ನು/ ಹೊದಿಕೆಯನ್ನು ತಯಾರಿಸಿ. ನೇರ ಸೂರ್ಯನ ಕಿರಣಗಳಿಂದ ಈ ಕೊಠಡಿಗೆ ರಕ್ಷಣೆ ಒದಗಿಸಲು ಕೊಠಡಿಯ ಮೇಲ್ಭಾಗಕ್ಕೆ ಛಾವಣಿಯ ನಿರ್ಮಾಣ ಮಾಡಿ. ಕಾರ್ಯಾಚರಣೆಯ ವಿಧಾನ ಕೊಠಡಿಯಲ್ಲಿರುವ ಮರಳು, ಇಟ್ಟಿಗೆ ಮತ್ತು ಮೇಲ್ಹೊದಿಕೆಯನ್ನು ಯಾವತ್ತೂ ಒದ್ದೆಯಾಗಿಯೇ ಇರಿಸಿ. ಕೊಠಡಿಯೊಳಗೆ ಅಗತ್ಯವಿರುವ ಉಷ್ಣತೆ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ದಿನಕ್ಕೆರಡು ಬಾರಿ ನೀರು ಹಾಯಿಸಿ. ಅಥವಾ ಪ್ಲಾಸ್ಟಿಕ್ ಪೈಪುಗಳಿಂದ ಕೂಡಿದ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸುವುದರ ಮೂಲಕ ತೇವಾಂಶವನ್ನು ಕಾಪಾಡಿಕೊಳ್ಳಿ. ಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ದಾಸ್ತಾನು ಮಾಡಿ ಈ ಕೊಠಡಿಯೊಳಗೆ ಇರಿಸಿ.ತೂತಿರುವ ಪ್ಲಾಸ್ಟಿಕ್ ಕ್ರೇಟ್ ಕ್ರೇಟ್ ಗಳನ್ನು ತೆಳುವಾದ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ. ಪ್ರತಿ ಮೂರು ವರ್ಷಕ್ಕೊಮ್ಮೆ ಹೊಸ ಇಟ್ಟಿಗೆಗಳನ್ನು ಬಳಸಿ ಈ ಶೀತಲ ಕೊಠಡಿಯನ್ನು ಮರು ನಿರ್ಮಾಣ ಮಾಡಬೇಕಾಗುತ್ತದೆ. ಹಳೆಯ ಇಟ್ಟಿಗೆಗಳನ್ನು ಬೇರೆ ಉದ್ದೇಶಕ್ಕೆ ಬಳಸಲು ಇಟ್ಟುಕೊಳ್ಳಬಹುದು. ಜಾಗರೂಕತಾ ಕ್ರಮಗಳು ಚೆನ್ನಾಗಿ ಗಾಳಿಯಾಡುವ ಪ್ರದೇಶದಲ್ಲಿ ಈ ಘಟಕವನ್ನು ಸ್ಥಾಪಿಸಿ. ನೀರು ನಿಲ್ಲುವುದನ್ನು ತಡೆಯುವುದಕ್ಕಾಗಿ ಘಟಕವನ್ನು ಎತ್ತರದ ಪ್ರದೇಶದಲ್ಲಿ ಸ್ಥಾಪಿಸಿ. ಸಮರ್ಪಕವಾದ ರಂಧ್ರಗಳಿರುವ, ತುಂಡಾಗಿರದ ಇಟ್ಟಿಗೆಗಳನ್ನು ಆರಿಸಿ. ಉಪಯೋಗಿಸಲ್ಪಡುವ ಮರಳು ಶುಚಿಯಾಗಿದ್ದು, ಜೈವಿಕ ವಸ್ತು, ಆವೆ, ಇತ್ಯಾದಿಗಳಿಂದ ಮುಕ್ತವಾಗಿರಬೇಕು. ಇಟ್ಟಿಗೆ ಮತ್ತು ಮರಳು ನೀರಿನಿಂದ ತುಂಬಿ ಸಂತೃಪ್ತವಾಗಿರಬೇಕು. ನೇರ ಸೂರ್ಯನ ಕಿರಣಗಳು ಬೀಳದಂತೆ ಮೇಲ್ಛಾವಣಿ ರಚಿಸಿ. ದಾಸ್ತಾನು ಮಾಡಲು ಬಿದಿರಿನ ಬುಟ್ಟಿ, ಮರದ/ ಫೈಬರಿನ ಹಲಗೆಯ/ ಅಥವಾ ಪೆಟ್ಟಿಗೆ, ಗೋಣೀ ಚೀಲದ ಬದಲು ಪ್ಲಾಸ್ಟಿಕ್ ನ ಪೆಟ್ಟಿಗೆಗಳನ್ನು ಬಳಸಿ. ದಾಸ್ತಾನು ಮಾಡಿದ ಸಾಮಗ್ರಿಗಳ ಮೇಲೆ ನೀರಿನ ಹನಿಗಳು ನಿಲ್ಲದಂತೆ ಎಚ್ಚರ ವಹಿಸಿ. ಕೀಟನಾಶಕ/ ಶಿಲೀಂದ್ರ ನಾಶಕ/ ರಾಸಾಯನಿಕಗಳನ್ನು ಬಳಸಿ, ಕಾಲಕಾಲಕ್ಕೆ ಕೊಠಡಿಯನ್ನು ಸ್ವಚ್ಛಗೊಳಿಸಿ, ಕ್ರಿಮಿ ಕೀಟಗಳಿಂದ ರಕ್ಷಿಸಿ. ಅನ್ವಯ ಕ್ಷೇತ್ರಗಳು ತಾಜಾ ತರಕಾರಿ, ಹಣ್ಣು ಹಾಗೂ ಹೂವುಗಳನ್ನು ಅಲ್ಪಾವಧಿಗೆ ದಾಸ್ತಾನು ಮಾಡಬೇಕಾದಲ್ಲಿ ಬಿಳಿ ದುಂಡಗಿನ ಬಟನ್ ಅಣಬೆಯನ್ನು ಬೆಳೆಸಬೇಕಾದಲ್ಲಿ ಟೊಮೆಟೋ , ಬಾಳೆ ಕಾಯಿ- ಇವುಗಳನ್ನು ಹಣ್ಣಾಗಿಸಲು ಸಸಿ ಬೆಳೆಸುವಲ್ಲಿ ಸಂಸ್ಕರಿಸಿದ ಹಣ್ಣಿನ ಉತ್ಪನ್ನಗಳನ್ನು ದಾಸ್ತಾನು ಮಾಡಬೇಕಾದಲ್ಲಿ ಅನುಕೂಲಗಳು ತಾಜಾ ಹಣ್ಣುಗಳನ್ನು ಅಗತ್ಯದ ಮೊದಲೇ ಮಾರುವ ಅನಿವಾರ್ಯವನ್ನು ತಪ್ಪಿಸಬಹುದು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಪಡೆಯಬಹುದು ಉತ್ಪನ್ನದ ಪೌಷ್ಠಿಕಾಂಶವನ್ನು ಕಾಪಾಡಿಕೊಳ್ಳಬಹುದು. ಇದು ಪರಿಸರಕ್ಕೆ ಯಾವುದೇ ಹಾನಿಯನ್ನುಂಟುಮಾಡದ ಒಂದು ದಾಸ್ತಾನು ಮಾಡುವ ಪದ್ಧತಿಯಾಗಿದೆ. ಉತ್ಪಾದನಾ ಸಾಮರ್ಥ್ಯ: 100 ಕ್ಯೂ/ 6-7ಟನ್ವರೆಗಿನ ಅಳತೆಯವರೆಗೆ ಹೊಂದಿಸಬಲ್ಲ ಅವಕಾಶವಿರುವ ಛೇಂಬರ್/ಛೇಂಬರ್ ಬೇಕಾದ ಸಾಮಗ್ರಿ ಕಟ್ಟಡ: ತೆರೆದ ಶೆಡ್ (ಗಾಳಿಯಾಡುವ) ಭೂಪ್ರದೇಶ: 100 ಚ. ಮೀ. ನೀರು: 25-50 ಲೀ/ದಿನ (ಸ್ಥಳದ ಆಧಾರದ ಮೇಲೆ) ಮಾನವ ಶಕ್ತಿ: ಒಟ್ಟು: 2; ಒಬ್ಬ ತಾಂತ್ರಿಕ ಸಹಾಯಕ್ಕೆ; ಯಾವುದೇ ನೈಪುಣ್ಯತೆಯಿಲ್ಲದ ಒಬ್ಬ ಸಹಾಯಕ ಆಳು ತಗಲುವ ವೆಚ್ಚ ಒಟ್ಟು ಯೋಜನಾ ವೆಚ್ಚ: ಪ್ರತಿ ಘಟಕಕ್ಕೆ ರೂ. 3000/- (ಅಂದಾಜು)

 

ಕಡಿಮೆ ವೆಚ್ಚದ ಮೊಟ್ಟೆ ಸ೦ರಕ್ಷಣಾ ತ೦ತ್ರಜ್ನಾನ ಮೊಟ್ಟೆಗಳನ್ನು ಸ೦ರಕ್ಷಿಸುವ ಸರಳ ವಿಧಾನ ಉಪ್ಪು ಹಾಗೂ ಇತರೆ ಕೈಗೆಟಕುವ ಬೆಲೆಯ ಸಾಮಗ್ರಿಗಳಿ೦ದ ನಾವು ಮೊಟ್ಟೆಗಳನ್ನು ಸ೦ರಕ್ಷಿಸಬಹುದು . ಬೇಕಾದ ಸಲಕರಣೆಗಳು : ಇಟ್ಟಿಗೆ, ಸುತ್ತಿಗೆ, ಜರಡಿ, ಕಲ್ಲುಪ್ಪು, ಪಾತ್ರೆ ಮತ್ತು ನೀರು.

ವಿಧಾನ : ಸುತ್ತಿಗೆಯಿ೦ದ ಇಟ್ಟಿಗೆ ಹಾಗೂ ಕಲ್ಲುಪ್ಪನ್ನು ಬೇರೆ ಬೇರೆಯಾಗಿ ಪುಡಿ ಮಾಡಿ ಜರಡಿ ಹಿಡಿದಿಟ್ಟುಕೊಳ್ಳಬೇಕು, ನ೦ತರ ಇಟ್ಟಿಗೆ ಪುಡಿ ಹಾಗೂ ಉಪ್ಪಿನ ಪುಡಿಯನ್ನು ೨:೧ ರ ಪ್ರಮಾಣದಲ್ಲಿ ಸೇರಿಸಬೇಕು. ಇದಕ್ಕೆ ನೀರನ್ನು ಸೇರಿಸಿ ಗಟ್ಟಿಯಾದ ಹದಕ್ಕೆ ಕಲಸಬೇಕು. ಎರಡನೇ ಹ೦ತದಲ್ಲಿ ಮೊಟ್ಟೆಗಳನ್ನು ಸ೦ರಕ್ಷಿಸಲು ಯೋಗ್ಯವಾಗಿದೆಯೇ ಎ೦ದು ಪರೀಕ್ಷಿಸಿಕೊಳ್ಳಬೇಕು ಇದನ್ನು ಒ೦ದು ಸಣ್ಣ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ. ಒ೦ದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಮೊಟ್ಟೆಗಳನ್ನು ಹಾಕಿರಿ. ಮೊಟ್ಟೆಗಳು ತೇಲಿದಲ್ಲಿ ಅವುಗಳು ಯೋಗ್ಯವಾದ ಮೊಟ್ಟೆಗಳಲ್ಲ, ಮುಳುಗಿದ ಮೊಟ್ಟೆಗಳನ್ನು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದುಕೊ೦ಡು ಇಟ್ಟಿಗೆ ಹಾಗೂ ಉಪ್ಪಿನ ಗಟ್ಟಿ ಮಿಶ್ರಣವನ್ನು ಪೂರ್ತಿಯಾಗಿ ಮೊಟ್ಟೆಗಳ ಮೇಲೆ ಹಾಕಬೇಕು. ಪಾತ್ರೆಯನ್ನುನೆರಳಿನಲ್ಲಿ ಹತ್ತು ದಿನ ಇಡಬೇಕುಮಿಶ್ರಣದ ತೇವವು ಆರದಂತೆ ಆಗಾಗ ನೀರುಹಾಕುತ್ತಿರಬೇಕು. ಆ ಸಮಯದಲ್ಲಿ ಉಪ್ಪು ಮೊಟ್ಟೆಯಲ್ಲಿ ಪ್ರವೇಶಿಸುವುದು.ಮತ್ತು ಅದನ್ನು ಸಮರಕ್ಷಿಸುವುದು. ೧೦ ದಿನಗಳ ನಂತರ ಅವನ್ನು ತೊಳೆಯಿರಿ ಮತ್ತು ಸಂಗ್ರಹಿಸಿರಿ.

ಉಪಯೋಗ :ಈ ರೀತಿಯಾಗಿ ಉಪ್ಪಿನಿ೦ದ ಸ೦ರಕ್ಷಿಸಲ್ಪಟ್ಟಿರುವ ಮೊಟ್ಟೆಗಳು ಬಹಳ ರುಚಿಕರವಾಗಿದ್ದು ಹಾಗೂ ೪೫ ದಿನಗಳ ಕಾಲ ಕೆಡದ೦ತೆ ಶೇಖರಿಸಿ ಇಡಬಹುದು.

ಮೂಲ:ಕೇ೦ದ್ರೀಯ ಆಹಾರ ತ೦ತ್ರಜ್ನಾನ ಸ೦ಶೋಧನಾ ಸ೦ಸ್ಥೆ, ಮೈಸೂರು, ಕರ್ನಾಟಕ

ಕೊನೆಯ ಮಾರ್ಪಾಟು : 3/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate