ಇಸ್ರೋ ಉಪಗ್ರಹ ಕೇಂದ್ರ ಗ್ರಂಥಾಲಯವು ಕನ್ನಡದಲ್ಲಿ ಸಾಮಾನ್ಯ ವಿಜ್ಞಾನ ಹಾಗೂ ಜನಪ್ರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳನ್ನು ಸಂಗ್ರಹಿಸಲು ೧೯೯೫ ರಲ್ಲಿ ಆರಂಭಿಸಿ ಇದುವರೆಗೆ ೮೦೨ ಪುಸ್ತಕಗಳನ್ನು ಹೊಂದಿದೆ. ಈ ಕನ್ನಡ ಪುಸ್ತಕಗಳ ಸೂಚಿ, ಗ್ರಂಥವಿವರಣೆಯನ್ನು, ಶೀರ್ಷಿಕೆ / ಶಿರೋನಾಮೆಗಳ ಅಕ್ಷರಮಾಲೆ ಕ್ರಮದಲ್ಲಿ ಒದಗಿಸುತ್ತದೆ. ಈ ಗ್ರಂಥವಿವರಣೆಗಳು ಗ್ರಂಥಾಲಯದ ಗಣಕೀಕೃತ ದತ್ತಾಂಶ [Computerised database] ದಲ್ಲಿ ಓದುಗರ ಪರಿಶೀಲನೆಗೆ ಸ್ಥಳೀಯ ಜಾಲಬಂಧದ [LAN] ಮೂಲಕ ಲಭ್ಯವಿದೆ.ಕೇಂದ್ರದ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳಲ್ಲದೆ ಇತರರೂ ಕನ್ನಡ ಪುಸ್ತಕಗಳ ಹೆಚ್ಚಿನ ಪ್ರಯೊಜನ ಪಡೆದುಕೊಳ್ಳುವರೆಂದು ಆಶಿಸಿ, ಹೊಸ ಪುಸ್ತಕಗಳನ್ನು ಕೊಳ್ಳುವುದನ್ನೂ ಒಳಗೊಂಡಂತೆ, ಓದುಗರ ಸಲಹೆ ಮತ್ತು ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಭಾಷೆಗಳು
ಮೂಲ:ಇಸ್ರೋ
ಕೊನೆಯ ಮಾರ್ಪಾಟು : 6/19/2020
ಕರ್ನಾಟಕ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವ...
ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯಿಂದಾಗಿ ಓರ್ವ ಶಿಕ್ಷಕನ...
ಡಿಜಿಟಲ್ ಕನ್ನಡ ಡಿಂಡಿಮವದ ಕುರಿತು
ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕುರಿತಾದ ಮಾಹಿತಿ ಇಲ್ಲಿ ...