অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೌರ ಕಂದೀಲು ಕಾರ್ಯಕ್ರಮ

ಉದ್ದೇಶಗಳು

ಬತ್ತಿ ದೀಪಗಳು ಹಾಗೂ ಸೀಮೆ ಎಣ್ಣೆ ದೀಪಗಳ ಬದಲು ಸೌರ ಕಂದೀಲುಗಳನ್ನು ಬಳಸುವುದರ ಮೂಲಕ ಬೆಳಕಿಗೆ ಉಪಯೋಗಿಸುತ್ತಿರುವ ಸೀಮೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವುದು. ಯಾವುದೇ ಮಾಲಿನ್ಯವನ್ನು ಉಂಟುಮಾಡದ, ಆರೋಗ್ಯಕ್ಕೆ ಹಾನಿಕರವಲ್ಲದ, ಬೆಂಕಿಯ ಅಪಘಾತಕ್ಕೆ ಅವಕಾಶವಿಲ್ಲದ, ಪರಿಸರ ಸ್ನೇಹಿ ಸೌರ ಕಂದೀಲುಗಳನ್ನು ಬಳಸುವುದರ ಮೂಲಕ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸುವುದು. ಸಣ್ಣಪುಟ್ಟ ಬೆಳಕಿನ ಅವಶ್ಯಕತೆಯನ್ನು ಪೂರೈಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು. ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ಸಂಸ್ಥೆಗಳು ಸೌರ ಕಂದೀಲು ಕಾರ್ಯಕ್ರಮವು ಕೇವಲ ರಾಜ್ಯ ನೋಡಲ್ ಸಂಸ್ಥೆ/ ಇಲಾಖೆಯ  ಮೂಲಕ ಮತ್ತು ಅಕ್ಷಯ ಊರ್ಜಾ ಮಳಿಗೆಗಳ ಮೂಲಕ ಮಾತ್ರ ಅನುಷ್ಠಾನಕ್ಕೆ ಬರುತ್ತಿದೆ. ತಯಾರಕರೇ ಮಾಲೀಕರಾಗಿರುವ ಮಳಿಗೆಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ರಾಜ್ಯ ನೋಡಲ್ ಸಂಸ್ಥೆ/ ಇಲಾಖೆ  ಗಳಿಗೆ ತಯಾರಕರಿಗೆ ತಮ್ಮ (ನೋಡಲ್ ಸಂಸ್ಥೆಯ) ಪರವಾಗಿ ಸೌರ ಕಂದೀಲುಗಳನ್ನು ಮಾರಾಟ ಮಾಡುವ ಗುರಿಯನ್ನು ಹಾಕಿಕೊಡುವ ಪರವಾನಗಿ ಕೊಡಲಾಗುವುದಿಲ್ಲ. ಅಲ್ಲದೆ, ಸಚಿವಾಲಯವೂ ತಯಾರಕರಿಗೆ, ಯಾ ತಯಾರಕರ ಸಂಘಗಳಿಗೆ ಇಲ್ಲವೇ ಸರಕಾರೇತರ ಸಂಸ್ಥೆಗಳಿಗೆ ನೇರ ಮಾರಾಟ ಮಾಡಲು ಅನುಮತಿ ನೀಡುವುದಿಲ್ಲ. ಅರ್ಹ ಫಲಾನುಭವಿಗಳು ವಿಶೇಷ ಸ್ಥಾನ ಪಡೆದ ರಾಜ್ಯ ಹಾಗೂ ಕೇಂದ್ರಾಡಳಿತ ದ್ವೀಪಪ್ರದೇಶಗಳಲ್ಲಿರುವ, ವಿದ್ಯುದೀಕರಣಗೊಳ್ಳದ ಗ್ರಾಮಗಳ ಯಾ ವಸತಿ ಸಮುಚ್ಚಯದ ಎಲ್ಲ ವಿಭಾಗದ ವೈಯಕ್ತಿಕ ಫಲಾನುಭವಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಈ ಯೋಜನೆಯಡಿಯಲ್ಲಿ ಸೌರ ಕಂದೀಲುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಒಂದು ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ಸೌರ ಕಂದೀಲುಗಳನ್ನು ಒದಗಿಸಲಾಗುವುದಿಲ್ಲ. ಹೆಣ್ಣು ಮಕ್ಕಳ ಶಿಕ್ಷಣದ ಮುಂದುವರಿಕೆಯನ್ನು ಪ್ರೋತ್ಸಾಹಿಸಲು, ಬಡತನ ರೇಖೆಯಿಂದ ಕೆಳಗಿರುವ ಕುಟುಂಬದ, ಶಾಲೆಗೆ ಹೋಗುತ್ತಿರುವ, ಒಂಭತ್ತನೇ ಇಯತ್ತೆಯಲ್ಲಿ ಮತ್ತು ಹನ್ನೆರಡನೇ ಇಯತ್ತೆಯಲ್ಲಿ ಕಲಿಯುತ್ತಿರುವ ಒಂದು ಹೆಣ್ಣು ಮಗು ಈ ಯೋಜನೆಯಡಿಯಲ್ಲಿ ಒಂದು ಸೌರ ಕಂದೀಲನ್ನು ಉಚಿತವಾಗಿ ಪಡೆಯಲು ಅರ್ಹಳಾಗಿರುತ್ತಾಳೆ. ಆಕೆ ತನ್ನ ಶಾಲಾ ಶಿಕ್ಷಣದ ಒಟ್ಟು ಅವಧಿಯಲ್ಲಿ ಇನ್ನೊಂದು ಸೌರ ಕಂದೀಲನ್ನು ಉಚಿತವಾಗಿ ಪಡೆಯುವಂತಿಲ್ಲ. ಆಕೆಗೆ ರಾಜ್ಯ ನೋಡಲ್ ಸಂಸ್ಥೆ/ ಇಲಾಖೆಯು ಸೌರ ಕಂದೀಲನ್ನು ವಿತರಿಸುವ ಮೊದಲು ಜಿಲ್ಲಾ ಆಡಳಿತ ವ್ಯವಸ್ಥೆಯು ಆಕೆಯು ಬಡತನ ರೇಖೆಗಿಂತ ಕೆಳಗೆ ವಾಸವಾಗಿರುವ ಕುಟುಂಬಕ್ಕೆ ಸೇರಿರುವ ಕುರಿತು, ಆಕೆಯ ಶಾಲೆ ಹಾಗೂ ತರಗತಿಯ ದಾಖಲೆಗಳನ್ನು ರುಜುವಾತು ಮಾಡಿಕೊಳ್ಳಬೇಕಾಗುತ್ತದೆ. ಫಲಾನುಭವಿಗಳು ತಮ್ಮ ಗುರುತಿನ ರುಜುವಾತಾಗಿ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಇತ್ಯಾದಿಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಗೆ ಒದಗಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸೌರ ಕಂದೀಲುಗಳು: ತಮಗೆ ಕೊಟ್ಟ ಗುರಿಯಲ್ಲಿ ಕನಿಷ್ಟ ಪಕ್ಷ ಶೇ. 15 ರಿಂದ ಶೇ.10 ರಷ್ಟು ಸೌರ ಕಂದೀಲುಗಳನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿತರಿಸುವಂತೆ ಯೋಜನಾ ಅನುಷ್ಠಾನಕರು ಮನದಟ್ಟು ಮಾಡಿಕೊಳ್ಳಬೇಕು. ಸೌರ ಕಂದೀಲುಗಳ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸ್ಥಾನ-ಸೌರ ಕಂದೀಲುಗಳ ವಿತರಣೆಯ ಸಂದರ್ಭದಲ್ಲಿ ಬಾಲಕಿಯರ ವಸತಿಗೃಹಗಳಿಗೆ, ಮಹಿಳೆಯರಿಗಾಗಿ ಮೀಸಲಾದ ವಯಸ್ಕ ಶಿಕ್ಷಣ ಕೇಂದ್ರಗಳಿಗೆ, ಹಾಗೂ ದ್ವಾಕ್ರಾ ಕೇಂದ್ರಗಳಿಗೆ ಆದ್ಯತೆಯನ್ನು ನೀಡಬೇಕು. ಅಲ್ಲದೆ ಈ ಆದ್ಯತೆಯನ್ನು ಶಾಲೆಗೆ ಹೋಗುವ ಹೆಣ್ಣು ಮಗಳಿರುವ ಕುಟುಂಬಕ್ಕೂ ಮುಂದುವರಿಸಬೇಕು. ವಿತರಣೆಯನ್ನು ಒಂದು ಗುಂಪಿನಲ್ಲಿ ಮಾಡಬೇಕು. ಇದರಿಂದ ಯೋಜನೆಯ ಅನುಷ್ಠಾನ, ನಿರ್ವಹಣೆ, ಮಾರಾಟದ ನಂತರದ ಸೇವೆ, ನಿರೀಕ್ಷಣೆಗಳು ಸುಲಭವಾಗಿ ಸಾಧ್ಯವಾಗುತ್ತವೆ.

ಅನುಮೋದಿಸಲ್ಪಟ್ಟ ಸೌರ ಕಂದೀಲುಗಳ ಮಾದರಿಗಳು

ಸ್ಥಳೀಯ ಸೌರ ಕಂದೀಲುಗಳು.

ಸಂಪೂರ್ಣವಾಗಿ ಆಮದು ಮಾಡಿದ ಕಂದೀಲುಗಳು ಈ ಯೋಜನೆಯಡಿಯಲ್ಲಿ ಬರುವುದಿಲ್ಲ. ಆದರೆ ಆಮದಾದ ಬಿಡಿ ಭಾಗಗಳು ಹಾಗೂ ಕೋಶಗಳ ಬಳಕೆಗೆ ಪರವಾನಗಿಯಿದೆ. ಎಂ ಏನ್ ಆರ್ ಇ ವು ನಿರ್ಧರಿಸಿದ ಮಟ್ಟಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಮಾಣೀಕರಿಸಲ್ಪಟ್ಟ, ಆಮದಾದ ಬಿಡಿ ಭಾಗಗಳ ಬಳಕೆಗೆ ಅನುಮತಿಯಿದೆ. ಅನುಷ್ಠಾನ ಮಾಡುವ ಸಂಸ್ಥೆಗಳು ಎಂ ಏನ್ ಆರ್ ಇ ವು ನಿರ್ಧರಿಸಿದ ಮಟ್ಟಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸೌರ ಕಂದೀಲುಗಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದಾಗಿದೆ. ಅಕ್ಷಯ ಊರ್ಜಾ ಮಳಿಗೆಗಳ ಮೂಲಕ ಕಾರ್ಯಕ್ರಮದ ಅನುಷ್ಠಾನ ರಾಜ್ಯದ ಸಂಸ್ಥೆಗಳು, ಖಾಸಗಿ ಉದ್ದಿಮೆದಾರರು, ಹಾಗೂ ಸರಕಾರೇತರ ಸಂಸ್ಥೆಗಳು ಸ್ಥಾಪಿಸಿದ ಅಕ್ಷಯ ಊರ್ಜಾ ಮಳಿಗೆಗಳು, ಸಂಬಂಧಪಟ್ಟ ರಾಜ್ಯ ನೋಡಲ್ ಸಂಸ್ಥೆಗಳಿಂದ ಗುರಿ ಪಡೆದುಕೊಳ್ಳಲು ಮತ್ತು ಎಂ ಏನ್ ಆರ್ ಇ ವು ನಿರ್ಧರಿಸಿದ ಮಟ್ಟಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸೌರ ಕಂದೀಲುಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಏರ್ಪಾಡು ಮಾಡಲು ಅರ್ಹರು. ಅಕ್ಷಯ ಊರ್ಜಾ ಮಳಿಗೆಗಳು, ಪೂರ್ಣ ವಿಳಾಸ, ಮಾರಾಟದ ದಿನಾಂಕ, ಮಾರಾಟದ ದರ, ಮಾದರಿ, ತಯಾರಕರ ವಿವರ, ಒದಗಿಸಿದ ಕಂದೀಲಿನ ಹಾಗೂ ಪಿ ವಿ  ಭಾಗದ ಕ್ರಮ ಸಂಖ್ಯೆ, ಹಾಗೂ ಕೊಳ್ಳುಗರ ಗುರುತಿನ ಆಧಾರಗಳಾದ ಪಡಿತರ ಚೀಟಿ, ದೂರವಾಣಿಯ ಬಿಲ್ಲು, ವಿದ್ಯುತ್ ಬಿಲ್ಲು, ಪಾಸ್ ಪೋರ್ಟ್, ಅಥವಾ ಬ್ಯಾಂಕ್ ಖಾತೆಯ ನಕಲನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು ಒದಗಿಸುವುದರ ಮೂಲಕ ರಾಜ್ಯ ನೋಡಲ್ ಸಂಸ್ಥೆಗಳಿಂದ ಮರುಪಾವತಿಯ ಆಧಾರದ ಮೇರೆಗೆ ರಿಯಾಯಿತಿ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ. ಖಾಸಗಿ ಒಡೆತನದ ಅಥವಾ ಸರಕಾರೇತರ ಸಂಸ್ಥೆಗಳ ಒಡೆತನದ ಅಕ್ಷಯ ಊರ್ಜಾ ಮಳಿಗೆಗಳು ಬೇಡುವ ಸಬ್ಸಿಡಿಯನ್ನು ನೀಡುವುದು ಅವುಗಳು ಮಾರಾಟ ಮಾಡಿದ ಯಾವುದೇ ಕಂದೀಲುಗಳಲ್ಲಿ ಶೇ. 20 ರಷ್ಟರ ಕಾರ್ಯ ನಿರ್ವಹಣೆಯನ್ನು ರಾಜ್ಯ ನೋಡಲ್ ಸಂಸ್ಥೆಗಳು ಅಥವಾ ಎಂ ಏನ್ ಇ ಎಸ್  ಗಳು ಪರಿಶೀಲಿಸಿದ ಬಳಿಕ ಮಾತ್ರ.

ಕೇಂದ್ರ ಆರ್ಥಿಕ ನೆರವು

ಸಚಿವಾಲಯವು ಅರ್ಹ ಫಲಾನುಭವಿಗಳಿಗೆ, ರಾಜ್ಯ ನೋಡಲ್ ಸಂಸ್ಥೆ ಹಾಗೂ ಅಕ್ಷಯ ಊರ್ಜಾ ಮಳಿಗೆಗಳ ಮೂಲಕ ಪ್ರತಿ ಸೌರ ಕಂದೀಲಿನ ಖರೀದಿಗೆ ರೂ. 2,400 ರಷ್ಟು ಕೇಂದ್ರ ಆರ್ಥಿಕ ನೆರವು ನೀಡುತ್ತದೆ. ಸಚಿವಾಲಯವು ಸೇವಾ ಶುಲ್ಕದ ರೂಪದಲ್ಲಿ ರಾಜ್ಯ ನೋಡಲ್ ಸಂಸ್ಥೆಗೆ ಹಾಗೂ ಅಕ್ಷಯ ಊರ್ಜಾ ಮಳಿಗೆಗಳಿಗೆ ಪ್ರತಿ ಕಂದೀಲಿಗೆ ರು.100ರ ಧನ ಸಹಾಯ ನೀಡುತ್ತದೆ. ಎಂ ಏನ್ ಆರ್ ಇ ಯು ಸಹ ಸರಕಾರೇತರ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತಿರುವ, ಅಕ್ಷಯ ಊರ್ಜಾ ಮಳಿಗೆಗಳಿಂದ ಮಾರಲ್ಪಟ್ಟ ಸೌರ ಕಂದೀಲುಗಳ ನಿರೀಕ್ಷಣಾ ಶುಲ್ಕದ ರೂಪದಲ್ಲಿ ಪ್ರತಿ ಕಂದೀಲಿಗೆ ರು. 100 ರಂತೆ ರಾಜ್ಯ ನೋಡಲ್ ಸಂಸ್ಥೆಗಳಿಗೆ ಧನ ಸಹಾಯ ಮಾಡುತ್ತದೆ. ರಾಜ್ಯ ನೋಡಲ್ ಸಂಸ್ಥೆಗಳಿಂದ ನಡೆಸಲ್ಪಡುತ್ತಿರುವ ಮಳಿಗೆಗಳಿಗೆ ಸೇವಾ ಶುಲ್ಕದ ರೂಪದಲ್ಲಿ ಹೆಚ್ಚಿನ ಧನ ಸಹಾಯ ಮಾಡಲಾಗುವುದಿಲ್ಲ. ಎಂ ಏನ್ ಇ ಎಸ್ ಕೇಂದ್ರ ಆರ್ಥಿಕ ನೆರವಿನ ಶೇ. 50 ರಷ್ಟನ್ನು ರಾಜ್ಯ ನೋಡಲ್ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಉಳಿದ ಶೇ. 50 ಕೇಂದ್ರ ಆರ್ಥಿಕ ನೆರವು ಹಾಗೂ ಸೇವಾಶುಲ್ಕವನ್ನು ಯೋಜನೆಯು ಸಂಪೂರ್ಣವಾದ ಮೇಲೆ ಪಾವತಿ ಮಾಡಲಾಗುತ್ತದೆ.

ಮೂಲಾಧಾರ : ಎಂ ಏನ್ ಆರ್ ಇ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate