ರಾಷ್ಟ್ರೀಯ ಜೈವಿಕ ಇಂಧನ ನೀತಿಯ ಮುಖ್ಯ ಲಕ್ಷಣಗಳು 2017ರ ಒಳಗೆ ಶೇ. 20 ರಷ್ಟು ಜೈವಿಕ ಇಂಧನ-ಜೈವಿಕ ಇಥೆನಾಲ್-ಹಾಗೂ ಬಯೋಡೀಸೆಲ್ ನ ಸಮ್ಮಿಳನಕ್ಕೆ ಸೂಚಕ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. 2017ರ ಒಳಗೆ ಶೇ. 20 ರಷ್ಟು ಜೈವಿಕ ಇಂಧನ-ಬಯೋ ಇಥೆನಾಲ್-ಹಾಗೂ ಬಯೋಡೀಸೆಲ್ ನ ಸಮ್ಮಿಶ್ರಣಕ್ಕೆ ಸೂಚಕ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. ಉಪಯೋಗವಿಲ್ಲದ/ ಪಾಳುಭೂಮಿ/ ಬಂಜರು ಭೂಮಿಯಲ್ಲಿ ಖಾದ್ಯ ಬಳಕೆಯಿಲ್ಲದ ಎಣ್ಣೆ ಕಾಳುಗಳನ್ನು ಬೆಳೆಸಿ ಬಯೋಡೀಸೆಲ್ ಉತ್ಪಾದನೆಯನ್ನು ಮಾಡಲಾಗುವುದು. ಇಲ್ಲಿ ಸ್ಥಳೀಯವಾಗಿ ಬಯೋಡೀಸೆಲ್ ಉತ್ಪಾದನೆಗೆ ಆದ್ಯತೆ ಕೊಡಲಾಗುವುದಲ್ಲದೆ ಫ್ರೀ ಫ್ಯಾಟಿ ಆಸಿಡ್ ಇರುವ ಎಣ್ಣೆ, ಪಾಮೆಣ್ಣೆಯ ಆಮದಿಗೆ ಅವಕಾಶವಿರುವುದಿಲ್ಲ. ಸಮುದಾಯದ/ ಸರಕಾರೀ/ ಅರಣ್ಯ ತ್ಯಾಜ್ಯ ಪ್ರದೇಶಗಳಲ್ಲಿ ಬಯೋಡೀಸೆಲ್ ಗಾಗಿ ನೆಡುತೋಪುಗಳನ್ನು ಮಾಡಲು ಅವಕಾಶವಿರುತ್ತದೆಯೇ ಹೊರತು ಫಲವತ್ತಾದ ನೀರಾವರಿಯಿರುವ ಪ್ರದೇಶದಲ್ಲಲ್ಲ. ಬೆಳೆಗಾರರಿಗೆ ಸರಿಯಾದ ಬೆಲೆ ಸಿಗಲು ಅನುಕೂಲವಾಗುವಂತೆಬಯೋ ಡೀಸೆಲ್ ಉತ್ಪಾದಕ ಎಣ್ಣೆ ಕಾಳುಗಳ ಬೆಳೆಗೆ ಕಾಲಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಲು ಅವಕಾಶವಿರುವ ಕನಿಷ್ಠ ಬೆಂಬಲ ಬೆಲೆಯ ನ್ನು ನಿಗದಿ ಮಾಡಲಾಗುವುದು. ರಾಷ್ಟ್ರೀಯ ಜೈವಿಕ ಇಂಧನ ನೀತಿಯಲ್ಲಿ ಇದರ (ಕನಿಷ್ಠ ಬೆಂಬಲ ಬೆಲೆ ಯ) ವಿವರಗಳನ್ನು ಸೇರಿಸಲಾಗಿದ್ದು ಮುಂದೆ ಅದರ ಕುರಿತು ಹೆಚ್ಚಿನ ಕಾರ್ಯಗಳನ್ನು ಕೈಗೊಳ್ಳಲಿದೆ ಹಾಗೂ ಅದು ಜೈವಿಕ ಇಂಧನ ಚಾಲನಾ ಸಮಿತಿಯ ಮೂಲಕ ಪರಿಶೀಲಿಸಲ್ಪಡುತ್ತದೆ. ತೈಲ ಮಾರಾಟ ಮಾಡುವ ಕಂಪೆನಿಗಳು ಖರೀದಿ ಮಾಡುವ ಬಯೋ ಇಥೆನಾಲ್ ನ ಕನಿಷ್ಠ ಖರೀದಿ ಬೆಲೆ ಯು ಉತ್ಪತ್ತಿಯ ನೈಜ ಬೆಲೆ ಮತ್ತು ಆಮದು ಮಾಡಿದರೆ ಅದಕ್ಕಿರುವ ಬೆಲೆಯ ಮೇಲೆ ಆಧಾರಿತವಾಗಿದೆ. ಬಯೋಡೀಸೆಲ್ ನ ಪಕ್ಷದಲ್ಲಿ ಕನಿಷ್ಠ ಖರೀದಿ ಬೆಲೆಯು ಡೀಸೆಲ್ ನ ಸಗಟು ಮಾರಾಟ ಬೆಲೆಗೆ ಹೊಂದಿಕೊಂಡಿರಬೇಕು. ರಾಷ್ಟ್ರೀಯ ಜೈವಿಕ ಇಂಧನ ನೀತಿಯು, ರಾಜ್ಯದೊಳಗೆ ಹಾಗೂ ಹೊರಗೆ ಜೈವಿಕ ಇಂಧನದ ಮುಕ್ತ ಸಾಗಾಟ ಸಾಧ್ಯವಾಗಲು ಜೈವಿಕ ಇಂಧನವನ್ನು ಅಂದರೆ ಬಯೋಡೀಸೆಲ್ ಹಾಗೂ ಬಯೋ ಇಥೆನಾಲ್ ಅನ್ನು ಸರಕಾರದಿಂದ “ಉದ್ಘೋಷಿತ ಸರಕು” ಎಂಬ ತಲೆಬರಹದಡಿಯಲ್ಲಿ ತರಬೇಕು ಎಂಬ ಆಶಯವನ್ನು ಹೊಂದಿದೆ. ಬಯೋಡೀಸೆಲ್ ನ ಮೇಲೆ ಯಾವುದೇ ತೆರಿಗೆಯನ್ನಾಗಲೀ ಅಥವಾ ಸುಂಕವನ್ನಾಗಲೀ ವಿಧಿಸಬಾರದೆಂದು ನೀತಿಯಲ್ಲಿ ಸ್ಪಷ್ಟ ಪಡಿಸಲಾಗಿದೆ. ಮಾನ್ಯ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಬಯೋಡೀಸೆಲ್ ಸಂಯೋಜಕ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಚಿವ ಸಂಪುಟದ ಕಾರ್ಯದರ್ಶಿಯು ಬಯೋಡೀಸೆಲ್ ಸಂಚಾಲಕ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜೈವಿಕ ಇಂಧನದ ಸಂಶೋಧನೆಗೆ ಸಂಬಂಧಿಸಿದಂತೆ, ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮುಂದಾಳತ್ವದಲ್ಲಿ, ಹಾಗೂ ನವೀನ ಹಾಗೂ ನವೀಕರಿಸಬಲ್ಲ ಇಂಧನ ಸಚಿವಾಲಯದ ಸಂಯೋಜಕತ್ವದಲ್ಲಿ ಸಂಚಾಲಕ ಸಮಿತಿಯ ಕೆಳಗೆ ಒಂದು ಉಪ ಸಮಿತಿಯನ್ನು ರಚಿಸಲಾಗುವುದು. ಇಲ್ಲಿ ಹೆಚ್ಚಿನ ಆದ್ಯತೆ ಇರುವುದು ಎರಡನೇ ತಲೆಮಾರಿನ, ಸೆಲ್ಯುಲೋಸ್ ಆಧಾರಿತ ಜೈವಿಕ ಇಂಧನದ ಉತ್ಪಾದನೆಯ ತಂತ್ರಜ್ಞಾನದವನ್ನೂ ಸೇರಿದಂತೆ ಸಂಶೋಧನೆ, ಅಭಿವೃದ್ಧಿ ಹಾಗೂ ಪ್ರದರ್ಶನ. ಜೈವಿಕ ಇಂಧನದ ಮೇಲಿನ ರಾಷ್ಟ್ರೀಯ ನೀತಿ
ಮೂಲಾಧಾರ : ಎಂ ಏನ್ ಆರ್ ಇ
ಕೊನೆಯ ಮಾರ್ಪಾಟು : 2/15/2020
ಸೌರ ಶಕ್ತಿ – ಕರ್ನಾಟಕ ರಾಜ್ಯಕ್ಕೆ ಸುಸ್ಥಿರ ಇಂಧನ ಇದರ ಸಾರ...
ಇಂಧನವೆಂಬುದು ಚಲಿಸುವ ಚಕ್ರಗಳಿಗೆ ಚಾಲನೆ ದೊರಕಿಸುವ ಶಕ್ತಿ....
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ...
ಕರ್ನಾಟಕ ಸರ್ಕಾರವು ಯಾವಾಗಲೂ ವಿದ್ಯುತ್ ಕ್ಷೇತ್ರದ ಪ್ರಗತಿಗ...