ಅಗತ್ಯತೆ
ಭಾರತದಲ್ಲಿ ಬಡವರು ಅಡುಗೆ ಅನಿಲ (ಎಲ್ಪಿಜಿ)ದ ಬಳಕೆ ಯನ್ನು ಅತೀ ಅಲ್ಪವಾಗಿ ಮಾಡುತ್ತಾರೆ. ಎಲ್ಪಿಜಿ ಸಿಲಿಂಡರ್ಗಳ ಬಳಕೆ ಹೆಚ್ಚಾಗಿ ಮಧ್ಯಮ ವರ್ಗ ಮತ್ತು ಶ್ರೀಮಂತ ಕುಟುಂಬಗಳಲ್ಲಿ ನಗರ ಮತ್ತು ಅರೆ ನಗರ ವ್ಯಾಪ್ತಿ ಪ್ರದೇಶಗಳಲ್ಲಿ ಪ್ರಧಾನವಾಗಿ ಕಂಡು ಬರುತ್ತದೆ. ಆದರೆ ಬಡವರು ಪಳೆಯುಳಿಕೆ ಆಧಾರಿತ ಅಡುಗೆ ಇಂಧನವನ್ನು ಬಳಸುವುದರಿಂದ ಸಂಬಂಧಿಸಿದ ಗಂಭೀರ ಆರೋಗ್ಯ ಅಪಾಯಗಳು ಒಂಟಾಗುತ್ತದೆ.
WHO ಅಂದಾಜಿನ ಪ್ರಕಾರ ಭಾರತ ಒಂದರಲ್ಲೇ ಸುಮಾರು 5 ಲಕ್ಷ ಸಾವುಗಳು ಅಶುಚಿಯಾದ ಅಡಿಗೆ ಇಂಧನಗಳ ಕಾರಣ ಸಂಭವಿಸುತ್ತದೆ. ಈ ಅಕಾಲಿಕ ಮರಣಗಳ ಪೈಕಿ ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಬಲವಾಗಿ ಪುಪ್ಪುಸಕ್ಕೆ ತಡೆಯೊಡ್ಡುವ ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್ನಂತಹ ಅಲ್ಲದ ಸಾಂಕ್ರಾಮಿಕ ರೋಗಗಳು ಮುಖ್ಯ ವಾಗಿವೆ. ಒಳಾಂಗಣ ವಾಯು ಮಾಲಿನ್ಯ ಯುವ ಮಕ್ಕಳ ಉಸಿರಾಟದ ಕಾಯಿಲೆಗಳ ಗಮನಾರ್ಹ ಸಂಖ್ಯೆಗೆ ತೀವ್ರತೆಗೆ ಕಾರಣವಾಗಿದೆ.ತಜ್ಞರ ಒಂದು ಅಂದಾಜಿನ ಪ್ರಕಾರ, ಅಡುಗೆಮನೆಯಲ್ಲಿ ತೆರೆದ ಬೆಂಕಿ ಹೊಂದಿರುವುದು ಒಂದು ಗಂಟೆ ೪೦೦ ಸಿಗರೇಟ್ ಸುಡುವ ಮಾಲಿನ್ಯಕ್ಕೆ ಸಮ.
ಬಿಪಿಎಲ್ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವುದರಿಂದ ದೇಶದಲ್ಲಿ ಅಡುಗೆ ಅನಿಲ ಸಾರ್ವತ್ರಿಕ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಬಹುದು. ಇದರಿಂದ ಮಹಿಳೆಯರ ಅರೋಗ್ಯ ಮತ್ತು ಶಕ್ತಿಯ ರಕ್ಷಣೆ ಯಾಗುತ್ತದೆ
ಇದರಿಂದ ಪರಿಶ್ರಮ ಮತ್ತು ಸಮಯ,ಅಡುಗೆ ಖರ್ಚು ಕಡಿಮೆಯಾಗುತ್ತದೆ. ಅಲ್ಲದೆ ಇದು ಅಡುಗೆ ಅನಿಲ ಪೂರೈಕೆ ಸರಪಳಿಯಲ್ಲಿ ಗ್ರಾಮೀಣ ಯುವಕರಿಗೆ ಉದ್ಯೋಗ ಒದಗಿಸುತ್ತದೆ.
ಗುರಿಯಾಗಿಟ್ಟುಕೊಂಡಿರುವ ಫಲಾನುಭವಿಗಳು
- ಈ ಯೋಜನೆಯಡಿಯಲ್ಲಿ, ಐದು ಕೋಟಿ ಎಲ್ಪಿಜಿ ಸಂಪರ್ಕಗಳನ್ನು ಬಿಪಿಎಲ್ ಕುಟುಂಬಗಳಿಗೆ ಒದಗಿಸಲಾಗುವುದು, ಅರ್ಹ ಬಿಪಿಎಲ್ ಕುಟುಂಬಗಳನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರವನ್ನು ಸಮಾಲೋಚಿಸಿ ಗುರುತಿಸಲಾಗುವುದು.
- ಬಿಪಿಎಲ್ ವ್ಯಕ್ತಿ / ಮನೆ ಸಾಮಾಜಿಕ ಆರ್ಥಿಕ ಹಿಂದುಳಿದ ಜನಗಣತಿ ಅಡಿಯಲ್ಲಿ ಇರುವವರಾಗಿರುತ್ತಾರೆ (SECC)- 2011 (ಗ್ರಾಮೀಣ) ಡೇಟಾಬೇಸ್. ನಗರದ ಬಡವರನ್ನು ಗುರುತಿಸಲು ಪ್ರತ್ಯೇಕ ಸೂಚನೆಗಳನ್ನು ಬಿಡುಗಡೆ ಮಾಡಲಾಗುವುದು. ಫಲಾನುಭವಿಗಳ ಆಯ್ಕೆ ಬಿಪಿಎಲ್ ಕುಟುಂಬಗಳಲ್ಲಿ ಮಾತ್ರ ,ಆದ್ಯತೆ ಎಸ್ಸಿ / ಎಸ್ಟಿ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ನೀಡಲಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಹೊಸ ಸಂಪರ್ಕಗಳನ್ನು ನೀಡುವಾಗ ಆದ್ಯತೆಯನ್ನು ಕಡಿಮೆ ಎಲ್ಪಿಜಿ ವ್ಯಾಪ್ತಿ ಹೊಂದಿರುವ ರಾಜ್ಯಗಳನ್ನು ಗಮನದಲ್ಲಿರಿಸಿಕೊಂಡು ನೀಡಲಾಗುತ್ತದೆ (ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ) ೧ ನೇ ಜನವರಿ ೨೦೧೬ ಆಧಾರದ ಮೇಲೆ .
- ಈ ಯೋಜನೆಯಡಿಯಲ್ಲಿ ಬಿಡುಗಡೆಯಾದ LPG ಸಂಪರ್ಕ ಬಿಪಿಎಲ್ ಕುಟುಂಬಕ್ಕೆ ಸೇರಿದ ಮಹಿಳೆಯ ಹೆಸರಿನಲ್ಲಿರುತ್ತದೆ.
ಯೋಜನೆಯ ಅವಧಿ
ಈ ಯೋಜನೆ 2016-17, 2017-18 ಮತ್ತು 2018-19 ಮೂರು ವರ್ಷಗಳಲ್ಲಿ ದೇಶಾದ್ಯಂತ ಅನುಷ್ಠಾನಗೊಳಿಸಲಾಗುವುದು
ನಾಗರಿಕರಿಗೆ ಆಗುವ ಪ್ರಯೋಜನಗಳು
ಈ ಯೋಜನೆಯಡಿಯಲ್ಲಿ, ಐದು ಕೋಟಿ ಎಲ್ಪಿಜಿ ಸಂಪರ್ಕಗಳನ್ನು ಬಿಪಿಎಲ್ ಕುಟುಂಬಗಳಿಗೆ ಒದಗಿಸಲಾಗುವುದು. ಈ ಯೋಜನೆ LPG ಸಂಪರ್ಕದ ಪ್ರತಿ ಬಿಪಿಎಲ್ ಕುಟುಂಬಗಳಿಗೆ ರೂ 1600 ಒಂದು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಸರ್ಕಾರ ಭರಿಸುವ ಆಡಳಿತಾತ್ಮಕ ವೆಚ್ಚ.ರೂ1600 ಪ್ರತಿ ಸಂಪರ್ಕದೊಂದಿಗೆ , ಸಿಲಿಂಡರ್, ಒತ್ತಡ ನಿಯಂತ್ರಕ, ಮಾಹಿತಿ ಪುಸ್ತಕ, ಸುರಕ್ಷತೆ ಮೆದುಗೊಳವೆ, ಇತ್ಯಾದಿ ಒಳಗೊಂಡಿರುತ್ತದೆ.
ಯೋಜನೆ ಅನುಷ್ಠಾನ ವಿಧಾನಗಳು :
- ಬಿಪಿಎಲ್ ಮನೆಯ LPG ಸಂಪರ್ಕವನ್ನು ಹೊಂದಿರದ ಮಹಿಳೆ ಹೊಸ ಎಲ್ಪಿಜಿ ಸಂಪರ್ಕಕ್ಕಾಗಿ (ನಿಗದಿತ ರೂಪದಲ್ಲಿ) ಎಲ್ಪಿಜಿ ವಿತರಕರಲ್ಲಿ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವಾಗ, ಮಹಿಳೆ ವಿಳಾಸ, ಜನಧನ್ / ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ (ಆಧಾರ್ ಸಂಖ್ಯೆ ಲಭ್ಯವಿಲ್ಲ ವೇಳೆ, ಯುಐಡಿಎಐ ಜೊತೆ ಆಧಾರ್ ಸಂಖ್ಯೆ ಸಮನ್ವಯ ಕ್ರಮಗಳನ್ನು ವಿತರಣೆಗೆ ತೆಗೆದುಕೊಂಡರು )ವಿವರಗಳನ್ನು ನೀಡಬೇಕು.
- ಎಲ್ಪಿಜಿ ಫೀಲ್ಡ್ ಅಧಿಕಾರಿಗಳು OMCs ನೀಡಿದ ಲಾಗಿನ್ / ಪಾಸ್ವರ್ಡ್ ಮೂಲಕ ಮೀಸಲಿಟ್ಟ ಓಎಂಸಿ ವೆಬ್ ಪೋರ್ಟಲ್ ವಿವರಗಳನ್ನು ( SECC 2011 ಡೇಟಾಬೇಸ್ ಆಧರಿಸಿ (ಹೆಸರು, ವಿಳಾಸ ಇತ್ಯಾದಿ) ನಮೂದಿಸಬೇಕು
- OMCs ವಿದ್ಯುನ್ಮಾನ ಕ್ರಮದಲ್ಲಿ LPG ಸಂಪರ್ಕದತೊಡಗಿಕೊಳ್ಳುವವವರು ವಿವರ ನಮೂದಿಸುತ್ತದೆ
- ಅರ್ಹ ಫಲಾನುಭವಿಗಳಿಗೆ ಓಎಂಸಿ ಸಂಪರ್ಕ ಮಾಹಿತಿ ಹೊರಡಿಸುತ್ತದೆ (ಮೇಲೆ ಸೂಚಿಸಿದ ವಿವಿಧ ಹಂತ ಪೂರ್ಣಗೊಂಡ ನಂತರ)
- ಸಂಪರ್ಕ ಶುಲ್ಕವನ್ನು ಸರ್ಕಾರ ಭರಿಸುತ್ತದೆ. , ಹೊಸ ಗ್ರಾಹಕರಿಗೆ OMCs ಕಂತುಗಳ ಆಯ್ಕೆಯನ್ನು ಒದಗಿಸುತ್ತದೆ, ಮತ್ತು ಅವರು ಬಯಸಿದರೆ ಒಂದು ಅದೇಗೆ ಓಲೆ ಮತ್ತು ಒಂದು ಸಿಲಿಂಡರ್ ನ ವೆಚ್ಚವನ್ನು ನೀಡಿ ಅದನ್ನು ಕಂತುಗಳ ಆಧಾರದಮೇಲೆ ಸರಿ ಹೊಂದಿಸಲಾಗುತ್ತದೆ.ರಾಜ್ಯ ಸರ್ಕಾರ ಅಥವಾ ಸ್ವಯಂಪ್ರೇರಿತ ಸಂಸ್ಥೆ ವ್ಯಕ್ತಿಗಳಿಗೆ ಉಚಿತವಾಗಿ ಕೊಡುಗೆಯಾಗಿ ಒಲೆ/ ಮೊದಲ ರೆಫಿಲ್ ತುಂಬಿ ಕೊಡುವ ಸಂದರ್ಭದಲ್ಲಿ , ಅವರು OMCs ಸಹಕಾರದೊಂದಿಗೆ ನೆರವಿರಿಸಬಹುದು.
- OMCs ವಿವಿಧ ಸ್ಥಳಗಳಲ್ಲಿ ಮೇಳಗಳನ್ನು ಸಂಘಟಿಸಿ ಬಿಪಿಎಲ್ ಕುಟುಂಬಗಳಿಗೆ ಸಂಪರ್ಕಗಳ ಬಿಡುಗಡೆಗೆ ಮಾಡುತ್ತದೆ . ಈ ಮೇಳಗಳನ್ನು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಪ್ರದೇಶದ ವಿಶೇಷ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಮಾಡಲಾಗುತ್ತದೆ.
- ಈ ಯೋಜನೆಯಲ್ಲಿ ಬಿಪಿಎಲ್ ಕುಟುಂಬ ಗಳಿಗೆ ಅಗತ್ಯವಾದ ಎಲ್ಲಾ ಗಾತ್ರಗಳ ವಿವಿಧ ಸಿಲಿಂಡರ್ (14.2 ಕೆಜಿ, 5 ಕೆ.ಜಿ., ಮುಂತಾದವು).ಗಳು ಲಭ್ಯವಿರುತ್ತದೆ.
- ಪ್ರಧಾನ ಮಂತ್ರಿ ಉಜ್ಜ್ವಲ ಯೋಜನೆ ಅಡಿಯಲ್ಲಿ ಗುಡ್ಡಗಾಡು ಜನತೆ ಮತ್ತು ಈಶಾನ್ಯ ರಾಜ್ಯ ಗಳ ಜನತೆ ಯನ್ನು ಆದ್ಯತೆ ಯಮೇಲೆ ಪರಿಗಣಿಸಲಾಗುವುದು. ಈ ಯೋಜನೆಯು ಪರಿಣಾಮಕಾರಿಯಾಗಿ ಜಮ್ಮು ಮತ್ತು ಕಾಶ್ಮೀರದ ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ತ್ರಿಪುರ ವಾಸಿಸುವ ಬಡ ಜನರು ಅಡುಗೆ ಉದ್ದೇಶಗಳಿಗಾಗಿ ಎಲ್ಪಿಜಿ ಉಪಯೋಗಿಸಲು ಎದುರಿಸಿದ ತೊಂದರೆ ನಿವಾರಿಸುತ್ತದೆ.
- ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ ಟೂಲ್ ಫ್ರೀ ಸಂಖ್ಯೆ 18002333555 ಅಥವಾ 1906 (ಎಲ್ಪಿಜಿ ಗ್ರಾಹಕರಿಗೆ 24 X 7 ಸಹಾಯವಾಣಿ).
ಮೂಲ : ಪ್ರಧಾನ ಮಂತ್ರಿ ಉಜ್ಜ್ವಲ ಯೋಜನೆ