অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇಂಧನ ಇಲಾಖೆ

ಇಂಧನ ಇಲಾಖೆ

ಕರ್ನಾಟಕ ಸರ್ಕಾರವು ಯಾವಾಗಲೂ ವಿದ್ಯುತ್ ಕ್ಷೇತ್ರದ ಪ್ರಗತಿಗೆ ಅತಿ ಹೆಚ್ಚು ಮಹತ್ವ ನೀಡುತ್ತ ಬಂದಿದೆ. ಉತ್ಪಾದನೆ, ಪ್ರಸರಣ ಮತ್ತು ವಿತರಣೆ ವಿಭಾಗಗಳು ವಿದ್ಯುತ್ ಸಾಗಿಸುವಲ್ಲಿ ಮುಖ್ಯವಾಗಿದ್ದು, ಅವುಗಳಿಗೆ ಅದ್ಯತೆಯ ಅಗತ್ಯವಿದೆ. ಕರ್ನಾಟಕ ಸರ್ಕಾರವು ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ಕೆಳಗೆ ಸೂಚಿಸಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

  • ಕೆ.ಪಿ.ಟಿ.ಸಿ.ಎಲ್., ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳಿಂದ ಮತ್ತು ಖಾಸಗಿ ಅಭಿವೃದ್ದಿದಾರರ ಮುಖಾಂತರ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಪ್ರಸರಣ ಮತ್ತು ವಿತರಣಾ ನಷ್ಟವನ್ನು ತಾಂತ್ರಿಕ ಪ್ರಗತಿಯ ಮೂಲಕ ಕಡಿಮೆ ಮಾಡುವುದು.
  • ವಿದ್ಯುತ್ ವ್ಯವಸ್ಥೆಯಲ್ಲಿ ಸುಧಾರಣೆ ಕೆಲಸಗಳ ಮೂಲಕ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವುದು.
  • ಪ್ರಸರಣ ಮತ್ತು ವಿತರಣಾ ಜಾಲವನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವುದು.
  • ಹಂತ ಹಂತವಾಗಿ ರಾಜ್ಯದ ಎಲ್ಲಾ ಸಣ್ಣ ಹಳ್ಳಿಗಳಿಗೆ ಮತ್ತು ಮನೆಗಳಿಗೆ ವಿದ್ಯುದೀಕರಣಗೊಳಿಸುವುದು.
  • ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು.
  • ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು.
  • ಇಂಧನ ಉಳಿತಾಯದ ಕ್ರಮಗಳನ್ನು ಅನುಷ್ಠಾನಗೊಳಿಸುವುದು.

ಇಂಧನ ಇಲಾಖೆಯ ಆಡಳಿತದಡಿಯಲ್ಲಿ ಬರುವ ಸಂಸ್ಥೆಗಳು

  • ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆ.ಪಿ.ಸಿ.ಎಲ್)
  • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆ.ಪಿ.ಟಿ.ಸಿ.ಎಲ್)
  • ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ(ಕೆ.ಆರ್.ಇ.ಡಿ.ಎಲ್.)

ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ನಿಗಮ

ಕರ್ನಾಟಕ ರಾಜ್ಯವು ೧೯೯೯ರಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಒಂದು ಮಹತ್ವದ ಬದಲಾವಣೆ ಕಂಡಿತು.  ಅದರ ಮೊದಲ ಹೆಜ್ಜೆಯಾಗಿ, ಕರ್ನಾಟಕ ವಿದ್ಯುತ್ ಮಂಡಳಿಯನ್ನು ವಿಭಜನೆ ಮಾಡಲಾಯಿತು (ಕೆ.ಇ.ಬಿ.) ಮತ್ತು ಅದರ ಜಾಗದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆ.ಪಿ.ಟಿ.ಸಿ.ಎಲ್) ಸ್ಥಾಪಿಸಲಾಯಿತು. ನಂತರ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗವು ೧೯೯೯ ನವೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿತು. ಮುಂದಿನ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣೆಯ ಸಲುವಾಗಿ, ವಿತರಣಾ ಕಂಪನಿಗಳನ್ನು ಸ್ಥಾಪಿಸಲಾಯಿತು. ವಿದ್ಯುತ್ ಪ್ರಸರಣ ಮತ್ತು ವಿತರಣೆ ವ್ಯವಸ್ಥೆಯನ್ನು ನೋಡುತ್ತಿದ್ದ,  ಕೆ.ಪಿ.ಟಿ.ಸಿ.ಎಲ್. ಅನ್ನು ಜೂನ್ ೨೦೦೨ರಲ್ಲಿ ವಿಭಜಿಸಲಾಯಿತು. ಅವುಗಳು ಯಾವುದೆಂದರೆ

  • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಬೆವಿಕಂ)
  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮವಿಕಂ)
  • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಹುವಿಕಂ)
  • ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಗುವಿಕಂ)
  • ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಕಂ)(CESCO)

ಕಾಯ್ದೆ ಮತ್ತು ನಿಯಮಗಳು

  • ವಿದ್ಯುತ್‌ಚ್ಛಕ್ತಿ ಕಾಯ್ದೆ 2003
  • ಭಾರತೀಯ ವಿದ್ಯುತ್‌ಚ್ಛಕ್ತಿ ನಿಯಮಗಳು 1956
  • ಕರ್ನಾಟಕ ವಿದ್ಯುತ್‌ಚ್ಛಕ್ತಿ ಸುಧಾರಣಾ ಕಾಯ್ದೆ 1999
  • ಕರ್ನಾಟಕ ಲಿಫ್ಟ್ ಅಧಿನಿಯಮ 1974ಮತ್ತು ನಿಯಮಗಳು 1976
  • ಕರ್ನಾಟಕ ಸಿನಿಮಾ ಪ್ರದರ್ಶನ  ಕಾಯ್ದೆ 1964 ಮತ್ತು ನಿಯಮಗಳು1971
  • ಕರ್ನಾಟಕ (ವಿದ್ಯುತ್ ಗುತ್ತಿಗೆದಾರರಿಗೆ ಅನುಮತಿ ಮತ್ತು ಪ್ರಮಾಣ ಪತ್ರ ವಿತರಣೆ ಮತ್ತು ವಿದ್ಯುತ್ ಮೇಲ್ವಿಚಾರಕರಿಗೆ ಹಾಗು ಲೈನ್ ಮೆನ್‌ಗಳಿಗೆ ಅನುಮತಿ) ನಿಯಮಗಳು 1976
  • ಕರ್ನಾಟಕ ವಿದ್ಯುತ್‌ಚ್ಛಕ್ತಿ ಕಾಯ್ದೆ1959 ಮತ್ತು ನಿಯಮಗಳು 1959
  • ದೂರದರ್ಶನದಲ್ಲಿ ಕ್ಯಾಸೆಟ್ ಮುಖಾಂತರ ಕರ್ನಾಟಕ ಸಿನಿಮಾ ಪ್ರದರ್ಶನ (ಕಾಯ್ದೆ) ನಿಯಮಗಳು 1984 ಮತ್ತು ತಿದ್ದುಪಡಿ ನಿಯಮಗಳು.

ಕೇಂದ್ರ ಹಾಗು ರಾಜ್ಯ ಸರ್ಕಾರದ ಕಾರ್ಯಯೋಜನೆಗಳು

ಕೇಂದ್ರ ಸರ್ಕಾರದ ಕಾರ್ಯಯೋಜನೆಗಳು

ದೀನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ(ಡಿ.ಡಿ.ಯು.ಜಿ.ಜೆ.ವೈ)

ಕೇಂದ್ರ ಇಂಧನ ಮಂತ್ರಾಲಯ, ಭಾರತ ಸರ್ಕಾರ ತಮ್ಮ ಕಛೇರಿ ಜ್ಞಾಪನಾ ಪತ್ರ ಸಂಖ್ಯೆ: 44/44/2014-RE ದಿನಾಂಕ: 03.12.2014ರಲ್ಲಿ ದೀನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಮಂಜೂರಾತಿಯನ್ನು ನೀಡಿರುತ್ತಾರೆ. ಈ ಯೋಜನೆಯ ಪ್ರಮುಖ ಉದ್ದೇಶವು ಈ ಕೆಳಕಂಡಂತಿದೆ.
  • ಗ್ರಾಮೀಣ ಭಾಗದ ಕೃಷಿ ಮತು ಕೃಷಿಯೇತರ ಗ್ರಾಹಕರಿಗೆ ನ್ಯಾಯಯುತ ಸರದಿ ಪಟ್ಟಿ ಅನ್ವಯ ವಿದ್ಯುತ್ ಪೂರೈಕೆ ಮಾಡಲು ಅನುವಾಗುವಂತೆ ಕೃಷಿ ಮತ್ತು ಕೃಷಿಯೇತರ ಮಾರ್ಗಗಳ ವಿಭಜನೆ; ಮತ್ತು
  • ವಿದ್ಯುತ್ ಪರಿವರ್ತಕಗಳು/ಮಾರ್ಗಗಳು/ಗ್ರಾಹಕರ ಸ್ಥಾವರಗಳ ಮಾಪಕ ಸೇರಿದಂತೆ, ಗ್ರಾಮೀಣ ಭಾಗದಲ್ಲಿನ ಉಪ ಪ್ರಸರಣ ಹಾಗೂ ವಿತರಣಾ ಮೂಲ ಸೌಕರ್ಯದ ವೃದ್ಧಿ ಹಾಗೂ ಬಲವರ್ಧನೆ.
  • ಗ್ರಾಮೀಣ ವಿದ್ಯುದೀಕರಣ: ದಿನಾಂಕ 01.08.2013ರಲ್ಲಿ CCEAರವರು ಅನುಮೋದಿಸಿರುವಂತೆ ಆರ್.ಜಿ.ಜಿ.ವಿ.ವೈ 12ನೇ ಹಾಗೂ 13ನೇ ಯೋಜನೆಯಡಿಯಲ್ಲಿ ನಿಗದಿಪಡಿಸಲಾದ ಗುರಿಯನ್ನು ಪೂರ್ಣಗೊಳಿಸಲು, ಆರ್.ಜಿ.ಜಿ.ವಿ.ವೈ ಯೋಜನೆಗೆ ಮಂಜೂರಾದ ಮೊತ್ತವನ್ನು ಡಿ.ಡಿ.ಯು.ಜಿ.ಜೆ.ವೈ ಯೋಜನೆಗೆ ತರುವ ಮೂಲಕ.

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (Integrated Power Development Scheme (IPDS))


ಕೇಂದ್ರಇಂಧನ ಮಂತ್ರಾಲಯ, ಭಾರತ ಸರ್ಕಾರ ತಮ್ಮ ಕಛೇರಿ ಜ್ಞಾಪನಾ ಪತ್ರ ಸಂಖ್ಯೆ: 26/01/2014- APDRP ದಿನಾಂಕ:03.12.2014ರಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಗೆ (IPDS) ಮಂಜೂರಾತಿಯನ್ನು ನೀಡಿರುತ್ತಾರೆ. ಈ ಯೋಜನೆಯ ಪ್ರಮುಖ ಉದ್ದೇಶವು ಈ ಕೆಳಕಂಡಂತಿದೆ.

 

  • ನಗರ ಪ್ರದೇಶಗಳಲ್ಲಿ ಉಪ ಪ್ರಸರಣ ಹಾಗೂ ವಿತರಣಾ ಜಾಲದ ಬಲವರ್ಧನೆ.
  • ನಗರ ಪ್ರದೇಶಗಳಲ್ಲಿನ ವಿದ್ಯುತ್ ಪರಿವರ್ತಕಗಳು/ಮಾರ್ಗಗಳು/ಗ್ರಾಹಕರ
  • ಸ್ಥಾವರಗಳಿಗೆ ಮಾಪಕ ಅಳವಡಿಕೆ.
  • ವಿತರಣಾ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಅಳವಡಿಕೆ ಹಾಗೂ ವಿತರಣಾ ಜಾಲದ ಬಲವರ್ಧನೆ: ದಿನಾಂಕ 21.06.2013ರಲ್ಲಿ CCEA ರವರು ಅನುಮೋದಿಸಿರುವಂತೆ ಆರ್.ಎ.ಪಿ.ಡಿ.ಆರ್.ಪಿ 12ನೇ ಹಾಗೂ 13ನೇ ಯೋಜನೆಯಡಿಯಲ್ಲಿ ನಿಗದಿಪಡಿಸಲಾದ ಗುರಿಯನ್ನು ಪೂರ್ಣಗೊಳಿಸಲು, ಆರ್.ಎ.ಪಿ.ಡಿ.ಆರ್.ಪಿ ಯೋಜನೆಗೆ ಮಂಜೂರಾದ ಮೊತ್ತವನ್ನು ಐ.ಪಿ.ಡಿ.ಎಸ್ ಯೋಜನೆಗೆ ತರುವ ಮೂಲಕ.

ಜವಹರ್‌ ಲಾಲ್ ನೆಹರು ರಾಷ್ಟ್ರೀಯ ಸೌರಶಕ್ತಿ ಪ್ರಚಾರ ವೇದಿಕೆ (JNNSM)

ಜವಹರ್‌ಲಾಲ್  ನೆಹರು ರಾಷ್ಟ್ರೀಯ ಸೌರಶಕ್ತಿ ಯೋಜನೆಯು ಭಾರತ ಸರ್ಕಾರ ಹಾಗು ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾಗಿದ್ದು.ಈ ಯೋಜನೆಯ ಮೂಲಕ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗಳನ್ನು ಪೂರೈಸಲು ಪ್ರಕೃತಿ ಕೊಡುಗೆಗಳನ್ನು ಹೆಚ್ಚು ಉಪಯೋಗಿಸುವಂತೆ ಪ್ರಯತ್ನಿಸುವುದು. ಇದರ ಮುಖಾಂತರ ವಿಶ್ವವು ಬದಲಾಗುತ್ತಿರುವ ಹವಾಮಾನದಿಂದ ಎದುರಿಸುತ್ತಿರುವ ಆತಂಕವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದು.

ರಾಜ್ಯ ಸರ್ಕಾರದ ಕಾರ್ಯಯೋಜನೆಗಳು

ನಿರಂತರ ಜ್ಯೋತಿ ಯೋಜನೆಯ ಅನುಷ್ಠಾನ

  • ರಾಜ್ಯದಲ್ಲಿ ನಿರಂತರಜ್ಯೋತಿಯೋಜನೆಯನ್ನು 2008-09ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಗೊಳಿಸಲಾಯಿತು. ಈ ಯೋಜನೆಯನ್ನುಎರಡು ಹಂತಗಳಲ್ಲಿ ಒಟ್ಟು 128 ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
  • ನಿರಂತರಜ್ಯೋತಿಯೋಜನೆಯನ್ನುಒಟ್ಟು ರೂ.2123 ಕೋಟಿಗಳ ಅಂದಾಜಿನಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರದಅನುಮೋದನೆ ನೀಡಿದ್ದು, ಯೋಜನೆಯ ಶೇ.40 ರಷ್ಟು ವೆಚ್ಚವನ್ನುರಾಜ್ಯ ಸರ್ಕಾರಈಕ್ವಿಟಿಯಾಗಿಒದಗಿಸಲು, ಮತ್ತು ಉಳಿದ ಶೇ.60 ರಷ್ಟುಯೋಜನೆಯ ವೆಚ್ಚವನ್ನು ವಿತರಣಾ ಕಂಪನಿಗಳು ಸಾಲದರೂಪದಲ್ಲಿ ಭರಿಸುವುದಾಗಿರುತ್ತದೆ.
  • ನಿರಂತರಜ್ಯೋತಿಯೋಜನೆಯ ಪ್ರಗತಿಯ ವಿವರಗಳು: (30-04-2015ರ ತನಕ)

ಕ್ರ ಸಂ

ಕಂಪನಿಯ ಹೆಸರು

ಒಟ್ಟು ತಾಲ್ಲೂಕುಗಳು

ಪ್ರಸ್ತಾವಿತ ಎನ್.ಜೆ. 11 ಕೆ.ವಿ.ಮಾರ್ಗಗಳು

ಭೌತಿಕ ಪ್ರಗತಿ (11ಕೆ.ವಿ ಮಾರ್ಗಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಸಂಖ್ಯೆ)

ಶೇಕಡವಾರು ಪ್ರಗತಿ(%)

1

ಬೆಸ್ಕಾಂ

40

542

505

93%

2

ಸೆಸ್ಕ್

24

370

214

58%

3

ಹೆಸ್ಕಾಂ

34

456

376

82%

4

ಜೆಸ್ಕಾಂ

30

344

226

66%

ಒಟ್ಟು

128

1712

1321

77%

ನೀರು ಸರಬರಾಜು ಯೋಜನೆಯನ್ನು ಹೆಚ್ಚು ಚೇತನಗೊಳಿಸುವುದು

ಕುಡಿಯುವ ನೀರು ಮನುಷ್ಯನ ಮೂಲ ಅವಶ್ಯಕತೆಯಾಗಿದ್ದು, ಅದನ್ನು ಒದಗಿಸುವುದು ಪರಮ ಆದ್ಯತೆಯಾಗಿದೆ. ವರ್ಷ 2004-05 ರಿಂದ 2014-15 ರವರೆಗೆ, ಕರ್ನಾಟಕ ರಾಜ್ಯವು ನೀರಿನ ಬರದ ಹೊಡೆತಕ್ಕೆ ತೀವ್ರ ತತ್ತರಿಸಿತ್ತು. ಆಗ ನೀರು ಸರಬರಾಜನ್ನು ಇನಷ್ಟು ಚೇತನಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಈ ಸಮಯದಲ್ಲಿ ಒಟ್ಟು 68,325 ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಚೇತನಗೊಳಿಸಲಾಯಿತು(ಸ.ಯೋ.ಚೆ.)


2014-15 ರ ತನಕ ಒಟ್ಟು 65356 ಕುಡಿಯುವ ನೀರು ಸರಬರಾಜು ಯೋಜನೆಗಳ ಚೇತನಗೊಳಿಸಲಾದ ಮಾಹಿತಿಯನ್ನು ಕೆಳಗೆ ಒದಗಿಸಲಾಗಿದೆ

YEAR

TOTAL

2004-05

2383

2005-06

3934

2006-07

3345

2007-08

3198

2008-09

4821

2009-10

5579

2010-11

3906

2011-12

5714

2012-13

13472

2013-14

13231

2014-15

8652

ಗಂಗಾ ಕಲ್ಯಾಣ ಯೋಜನೆ

ಈ ಯೋಜನೆ ೦೧-೦೨-೧೯೯೭ ರಿಂದ ಅನುಷ್ಠಾನಕ್ಕೆ ಬಂದಿದೆ. ಈ ಯೋಜನೆಯ ಉದ್ದೇಶ ನೀರು ಕಡಿಮೆ ಇರುವ ಕಡೆಯಲ್ಲಿ ಬೇಸಾಯಕ್ಕೆ ಬೋರ್ವೆಲ್ ಕೊರೆದು ಅಂತರ್ಜಲದ ನೀರನ್ನು ಕೃಷಿಗೆ ಬಳಸುವುದು. ಇದರ ಲಾಭವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ರೈತರು ಪಡೆಯಬಹುದು. ವಿದ್ಯುತ್ ವಿತರಣಾ ಕಂಪನಿಗಳು ಈ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತದೆ.

ಈ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಪಂಪ್‌ಸೆಟ್‌ಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಶ್ರೀ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು ನೀಡುತ್ದೆದೆ.

 

YEAR

TOTAL

2004-05

1039

2005-06

2154

2006-07

3561

2007-08

4923

2008-09

11322

2009-10

11126

2010-11

11857

2011-12

12132

2012-13

15922

2013-14

20191

2014-15

ವಿದ್ಯುತ್ ಉತ್ಪಾದನೆ

ವಿದ್ಯುತ್‌ಚ್ಛಕ್ತಿ ಉತ್ಪಾದನೆಯ ಚಿತ್ರಣ ಮತ್ತು ಅಸ್ತಿತ್ವದಲ್ಲಿರುವ ಘಟಕಗಳ ಸಾಮರ್ಥ್ಯ

ವರ್ತಮಾನದ ಚಿತ್ರಣ    31/03/2015 ರವರೆಗೆ               
1.ಉತ್ಪಾದನೆ ಸಾಮರ್ಥ್ಯ (ಮೆಗಾವ್ಯಾಟ್ ಗಳಲ್ಲಿ)     
15052

2.ಪ್ರತಿ ವ್ಯಕ್ತಿಯ ಸರಾಸರಿ ಬಳಕೆ ಯೂನಿಟ್‌ಗಳಲ್ಲಿ

947

3.ಅಧಿಕ ಹೊರೆ ವಿದ್ಯುಚ್ಛಕ್ತಿ ಕೊರತೆ

15%

4.ವಿದ್ಯುಚ್ಛಕ್ತಿ ಕೊರತೆ

10%

 

ನವೀಕರಿಸಬಹುದಾದ ಇಂಧನ ಪ್ರಗತಿ

ವೀಕರಿಸಬಹುದಾದ ಇಂಧನ ಮೂಲ

ಹೊಂದಿರುವ ಸಾಮಥ್ರ್ಯ(ಮೆ.ವ್ಯಾಗಳಲ್ಲಿ)

ಹಂಚಿರುವ ಸಾಮಥ್ರ್ಯ(ಮೆ.ವ್ಯಾಗಳಲ್ಲಿ)

ಸ್ಥಾಪಿತ ಸಾಮಥ್ರ್ಯ(ಮೆ.ವ್ಯಾಗಳಲ್ಲಿ)

ಪವನ ವಿದ್ಯುತ್

13983

13071.72

2676.94

ಕಿರು ಜಲವಿದ್ಯುತ್

3000

2955.86

785.21

ಸಹ ಉತ್ಪಾದನೆ

2000

1677.35

1176.05

ಬಯೋಮಾಸ್ ಮತ್ತು ತ್ಯಾಜ್ಯ ಮೂಲದಿಂದ

1135

395.48

113.03

ಸೌರಶಕ್ತಿ

10000

1100.00

84

ಇತರೆ

-

-

246.77

ಒಟ್ಟು

30188

19200.41

5082

ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ

  • ನವೀಕರಿಸಬಹುದಾದ ಇಂಧನ ನೀತಿ ೨೦೦೯-೧೪

ರಾಜ್ಯದಲ್ಲಿ ಪ್ರಸ್ತುತ ಇರುವ ನವೀಕರಿಸಬಹುದಾದ ಇಂಧನದ ಸ್ಥಾಪಿತ ಸಾಮರ್ಥ್ಯ ಹೆಚ್ಚಿಸಲು ಹಾಗೂ ನವೀಕರಿಸಬಹುದಾದ ವಲಯ ಸ್ಥಾಪಿಸಲು, ನವೀರಿಸಬಹುದಾದ ಇಂಧನ ನೀತಿಯನ್ನು ಹೊರಡಿಸಿದೆ. ನೀತಿಯಡಿ ಪರಿಣಾಮಕಾರಿಯಾಗಿ ನವೀಕರಿಸಬಹುದಾದ ಇಂಧನವನ್ನು ಸ್ಥಾಪಿಸುವ ಇಚ್ಛೆ ಇದ್ದು, ವಿವಿಧ ಮೂಲಗಳಾದ ಪವನ, ವಿದ್ಯುತ್, ಕಿರುಜಲ, ಸಹ ಉತ್ಪಾದನೆ, ಸೋಲಾರ್ಗಳಿಂದ ವಿದ್ಯುತ್ ಉತ್ಪಾದನೆಗೆ ಒತ್ತು ಕೊಡುವುದಾಗಿರುತ್ತದೆ. ನವೀಕರಿಸಬಹುದಾದ ಇಂಧನ ನೀತಿಯ ಗುರಿಯು ವ್ಯವಸ್ಥಿತ ಮತ್ತು ವೇಗವಾಗಿ ಇಂಧನ ಮೂಲಗಳ ಅಭಿವೃದ್ಧಿಯಿಂದ, ೨೦೧೪ರ ವೇಳೆಗೆ ೬೬೦೦ ಮೆ.ವ್ಯಾಟ್ ಸಾಮರ್ಥ್ಯವನ್ನು ಹೊಂದುವ ಉದ್ದೇಶವಿದೆ

  • ಕರ್ನಾಟಕ ನವೀಕರಿಸಬಹುದಾದ ಇಂಧನದ ನೀತಿ ತಿದ್ದುಪಡಿಗಳು ೨೦೦೯-೧೪

ನವೀಕರಿಸಬಹುದಾದ ಇಂಧನ ನೀತಿಯಡಿಯಲ್ಲಿ ಬರುವ ಉಪಬಂಧಗಳು ಎಲ್ಲಾ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅನ್ವಯಿಸುತ್ತದೆ. ಈ ನೀತಿಯು ಈಗಾಗಲೇ ಅನುಮೋದಿತ ನವೀಕರಿಸಬಹುದಾದ ಇಂಧನ ಯೋಜನೆಗಳಿಗೂ ಈಗಾಗಲೇ ಅಭಿವೃದ್ಧಿಯಲ್ಲಿರುವ ಯೋಜನೆಗಳಿಗೂ ಮತ್ತು ಈಗಾಗಲೇ ಚೇತನಗೊಳಿಸಿರುವ ಯೋಜನೆಗಳಿಗೂ ಅನ್ವಯಿಸುತ್ತದೆ.

ಇಂಧನ ಉಳಿತಾಯ

ರಾಜ್ಯ ಸರ್ಕಾರವು ದಿನಾಂಕ 13-11-2007 ಮತ್ತು 08-04-2008 ರಂದು ಇ.ಸಿ.ಕಾಯ್ದೆ 2001ರಲ್ಲಿ 18ನೇ ಪರಿಚ್ಛೇದದ ಮೂಲಕ ಪ್ರತಿ ಸರ್ಕಾರದ ಕಟ್ಟಡ, ನಿಗಮ ಮತ್ತು ಮಂಡಳಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸೌರಶಕ್ತಿ ಮೂಲಕ ನೀರು ಕಾಯಿಸಬೇಕು.

  • ಸರ್ಕಾರವು ಕಡ್ಡಾಯವಾಗಿ 600 ಚದುರ ಅಡಿಗಿಂತ ಹೆಚ್ಚಿರುವ ಪ್ರತಿ ಕಟ್ಟಡಗಳಿಲೂ ಸೌರಶಕ್ತಿಯಿಂದ ನೀರು ಕಾಯಿಸುವ ಯಂತ್ರವನ್ನು ಅಳವಡಿಸಲು ನಿಯಮ ರೂಪಿಸಿದೆ.
  • ಪ್ರತಿ ಯೂನಿಟ್‌ಗೆ ರೂ.0.05 ಪೈಸೆ ಕಡಿತಗೊಳಿಸುವುದಲ್ಲದೆ, ಒಟ್ಟು ಪಾವತಿಸಬೇಕಾದ ಹಣದಲ್ಲಿ 50ರೂಪಾಯಿ ಕಡಿತಗೊಳಿಸುತ್ತದೆ.
  • ಬಿ.ಇ.ಇ. ಸ್ಟಾಂಡರ್ಡ್ ಹೊಂದಿರುವ ಪಂಪ್‌ಸೆಟ್ ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು.
  • ‘ಬೆಳಕು ಯೋಜನೆ’ ಮೂಲಕ, ಇನ್‌ಕ್ಯಾಂಡಿಸೆಂಟ್ ದೀಪಗಳ ಬದಲಾಗಿ ಫ್ಲೋರೊಸೆಂಟ್ ವಿದ್ಯುತ್ ದೀಪಗಳನ್ನು ಅಳವಡಿಸಿಕೊಳ್ಳುವುದು.
  • ಕಡಿಮೆ ವಿದ್ಯುತ್ ಖರ್ಚು ಬರುವಹಾಗೆ ಕಟ್ಟಡದ ನಕಾಶೆ ತಯಾರಿಸುವುದು.

ಮೂಲ : ಇಂಧನ ಇಲಾಖೆ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate