ಭಾರತದಲ್ಲಿನ ೩೦೦ ದಶಲಕ್ಷ ಮಕ್ಕಳಲ್ಲಿ ಬಹುತೇಕ ಮಕ್ಕಳು ತಮ್ಮ ಶಾರೀರಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ತಡೆಯೊಡ್ಡುವ ಸಾಮಾಜಿಕ ಮತ್ತು ಆರ್ಥಿಕ ಪರಿಸರದಲ್ಲಿ ಜೀವಿಸುತ್ತಿದ್ದಾರೆ ಎಂಬುದು ವಾಸ್ತವ. ಭವಿಷ್ಯದ ವಿಚಾರಪೂರಿತ, ಸದೃಢ ಭಾರತವನ್ನು ನಿರ್ಮಾಣ ಮಾಡಲು ಮಕ್ಕಳ ಇಂತಹ ಅಗತ್ಯಗಳಿಗೆ ಸ್ಪಂದಿಸಲು ನಾವೆಲ್ಲಾ ಸಿದ್ಧರಾಗಬೇಕಾದುದು ಸದ್ಯದ ಆವಶ್ಯಕತೆಯಾಗಿದೆ.ಭಾರತದಲ್ಲಿ ಸ್ವಾತಂತ್ರ್ಯೋತ್ತರ ದಶಕಗಳು ಮಕ್ಕಳ ಅಗತ್ಯಗಳ ಸಂವಿಧಾನಿಕ ನೀಡಿಕೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಕಾಯಿದೆ ರಚನೆಗಳ ಮೂಲಕ ಸರ್ಕಾರದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯನ್ನು ಕಂಡಿದೆ. ಈ ಶತಮಾನದ ಹಿಂದಿನ ದಶಕದಲ್ಲಿ ನಾಟಕೀಯ ತಾಂತ್ರಿಕ ಅಭಿವೃದ್ದಿಯು ಮಕ್ಕಳನ್ನು ಉದ್ದೇಶಿಸಿ, ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ ಮತ್ತು ಇತರ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಕಾಶಗಳ ನವೀನ ಆಯಾಮವನ್ನೇ ತೆರೆದಿಟ್ಟಿದೆ.ಭಾರತದಲ್ಲಿ, ಮಕ್ಕಳನ್ನೇ ಉದ್ದೇಶಿಸಿದ, ಅವರ ಸಮಸ್ಯೆಗಳಿಗೆ ಗಮನ ಕೇಂದ್ರೀಕರಿಸಿದ ಕಾರ್ಯಗಳಿಗಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೆಲ್ಲಾ ಈಗ ಕೈಜೋಡಿಸಿವೆ. ಇದರಲ್ಲಿ ಮಕ್ಕಳು ಮತ್ತು ದುಡಿಮೆಗೆ ಸಂಬಂಧಿಸಿದ ವಿಷಯಗಳು, ಬಾಲದುಡಿಮೆಯ ಸವಾಲುಗಳನ್ನು ಪರಿಹರಿಸುವುದು, ಹೆಣ್ಣು ಶಿಶುವಿಗೆ ತೋರುವ ತಾರತಮ್ಯದ ನಿವಾರಣೆ, ಬೀದಿ ಮಕ್ಕಳನ್ನು ಮೇಲೆತ್ತುವುದು, ವಿಕಲ ಚೇತನ ಮಕ್ಕಳ ವಿಶೇಷ ಅಗತ್ಯಗಳನ್ನು ಗುರುತಿಸಿ ಪೂರೈಸುವುದು ಮತ್ತು ಅವರ ಮೂಲಭೂತ ಹಕ್ಕಾದ ಶಿಕ್ಷಣವು ಪ್ರತೀ ಮಗುವಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳುವುದು.
ಎಲ್ಲ ಮಕ್ಕಳು, ಯುವಕ-ಯುವತಿಯರು ಮತ್ತು ವಯಸ್ಕರಿಗೆ ಉತ್ತಮ ಗುಣಮಟ್ಟದ ಮೂಲಶಿಕ್ಷಣವನ್ನು ನೀಡುವ ಬದ್ಧತೆಯುಳ್ಳ ಜಾಗತಿಕ ಅಭಿಯಾನವೇ ’ಸರ್ವರಿಗೂ ಶಿಕ್ಷಣ’. ೧೯೯೦ ರ ಸರ್ವರಿಗೂ ಶಿಕ್ಷಣ, ಜಾಗತಿಕ ಸಮ್ಮೇಳನದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅದಾದ ಹತ್ತು ವರ್ಷಗಳ ಬಳಿಕವೂ ಜಗತ್ತಿನ ಹಲವಾರು ದೇಶಗಳು ಲಕ್ಷ್ಯದಿಂದ ದೂರದಲ್ಲಿಯೇ ಇವೆ. ವಿವಿಧ ದೇಶಗಳ ಪ್ರತಿನಿಧಿಗಳು ಸೆನೆಗಲ್ ನ ಡಕಾರ್ ನಲ್ಲಿ ಮತ್ತೆ ಸಮಾವೇಶಗೊಂಡು ೨೦೦೫ ರ ಒಳಗೆ “ಸರ್ವರಿಗೂ ಶಿಕ್ಷಣ” ಗುರಿಯನ್ನು ತಲುಪುವುದಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅವರು ೨೦೦೫ ರ ಒಳಗೆ ಎಲ್ಲ ಮಕ್ಕಳ, ಯುವಕ-ಯುವತಿಯರ, ವಯಸ್ಕರ ಕಲಿಕೆಯ ಅಗತ್ಯಗಳನ್ನು ಪೂರೈಸಲು ಮುಖ್ಯವಾದ ಶಿಕ್ಷಣದ ಆರು ಲಕ್ಷಣಗಳನ್ನು ಗುರುತಿಸಿದರು. ’ಸರ್ವರಿಗೂ ಶಿಕ್ಷಣ’ದ ದಿಕ್ಕಿನಲ್ಲಿ ನಡೆದ ಎಲ್ಲ ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ಸಮನ್ವಯಗೊಳಿಸುವ, ಪ್ರಯತ್ನಗಳಿಗೆ ಚಾಲನೆ ನೀಡುವ ಕಾರ್ಯದಲ್ಲಿ ಯುನೆಸ್ಕೊ ಮುಂದಾಳತ್ವ ವಹಿಸಿದೆ. ಈ ಗುರಿಗಳನ್ನು ತಲುಪುವೆಡೆಗೆ ದೇಶೀಯ ಸರ್ಕಾರಗಳು, ಅಭಿವೃದ್ಧಿ ಸಂಸ್ಥೆಗಳು, ನಾಗರೀಕ ಸಮಾಜ, ಸರ್ಕಾರೇತರ ಸಂಸ್ಥೆಗಳು ಹಾಗೂ ಮಾಧ್ಯಮಗಳು ಪಾಲುಗಾರಿಕೆ ವಹಿಸಿವೆ. ಸರ್ವರಿಗೂ ಶಿಕ್ಷಣದ ಗುರಿಗಳನ್ನು ಸಾಧಿಸಲು ಹಮ್ಮಿಕೊಂಡ ಕಾರ್ಯಕ್ರಮಗಳು ಸಹಸ್ರಮಾನ ಅಭಿವೃದ್ಧಿಯ ಲಕ್ಷ್ಯಗಳನ್ನು (MDGs) ೨೦೧೫ ರ ಒಳಗೆ ತಲುಪಲು ನೆರವಾಗುತ್ತವೆ. ಅದರಲ್ಲಿಯೂ ಸಹಸ್ರಮಾನ ಅಭಿವೃದ್ಧಿಯ ಲಕ್ಷ್ಯ ೨ (MDG2) – ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಹಾಗೂ MDG3 - ಶಿಕ್ಷಣದಲ್ಲಿ ಜೆಂಡರ್ ಸಮಾನತೆ.
ಶೈಶವದಲ್ಲಿ ಸಮಗ್ರ ಆರೈಕೆ ಮತ್ತು ಶಿಕ್ಷಣದ ವಿಸ್ತರಣೆ ಅದೂ ಅತ್ಯಂತ ದುರ್ಬಲ ಮತ್ತು ಅನುಕೂಲವಿಲ್ಲದ ವರ್ಗದ ಮಕ್ಕಳಿಗೆ.ಎಲ್ಲ ಮಕ್ಕಳಿಗೆ ೨೦೧೫ ರ ಹೊತ್ತಿಗೆ ಅದರಲ್ಲೂ ನಿರ್ಧಿಷ್ಟವಾಗಿ ತೊಂದರೆಯಲ್ಲಿರುವ ಮತ್ತು ಬುಡಕಟ್ಟಿನ ಅಲ್ಪ ಸಂಖ್ಯಾತ ಹೆಣ್ಣು ಮಕ್ಕಳಿಗೆ ಸಂಪೂರ್ಣ, ಉಚಿತ ಕಡ್ಡಾಯ, ಮತ್ತು ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶದ ಖಾತ್ರಿ.ಎಲ್ಲಾ ಮಕ್ಕಳ ಮತ್ತು ವಯಸ್ಕರ ಕಲಿಕಾ ಅಗತ್ಯಗಳು, ಸೂಕ್ತ ಕಲಿಕೆ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮಗಳಿಗೆ ಸಮಾನ ಅವಕಾಶದ ಖಾತ್ರಿ.ವಯಸ್ಕರ ಶಿಕ್ಷಣದಲ್ಲಿ ೫೦ % ಸುಧಾರಣೆ ೨೦೧೫ ರ ಹೊತ್ತಿಗೆ ಆಗಬೇಕು. ಅದರಲ್ಲೂ ಮಹಿಳೆಯರಿಗೆ ಮತ್ತು ವಯಸ್ಕರಿಗೆ ಮೂಲ ಮತ್ತು ಮುಂದುವರೆದ ಶಿಕ್ಷಣಕ್ಕೆ ಸಮಾನ ಅವಕಾಶವಿರಬೇಕು.ಲಿಂಗ ಸಮಾನತೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳಲ್ಲಿ 2015ರ ಹೊತ್ತಿಗೆ ಸಾಧಿಸಬೇಕು.ಹುಡುಗಿಯರಿಗೆ ಉತ್ತಮಗುಣಮಟ್ಟದ ಮೂಲ ಶಿಕ್ಷಣಕ್ಕೆ ಅವಕಾಶದ ಖಾತ್ರಿಶಿಕ್ಷಣದ ಎಲ್ಲ ಅಂಶ ಗಳ ಗುಣ ಮತ್ತ ಸುಧಾರಿಸಬೇಕು. ಮತ್ತು ಎಲ್ಲ ಗುರುತಿ ಸಲಾಗುವ ಮತ್ತು ಅಳೆಯ ಬಹುದಾದ ಕಲಿಕಾ ಫಲಿತಗಳಲ್ಲಿ ಶ್ರೇಷ್ಟ ಸಾಧನೆಗಳ ಸುಧಾರಣೆಯಾಗಬೇಕು., ಅದರಲ್ಲೂ ಸಾಕ್ಷರತೆ ,ಅಂಕೆಗಳು ಮತ್ತು ಜೀವನದ ಅಗತ್ಯ ಕೌಶಲ್ಯಗಳಿಗೆ ಒತ್ತು ಇರಬೇಕು.
ಸರ್ವರಿಗೂ ಶಿಕ್ಷಣದ ಎಲ್ಲ ಗುರಿ ಸಾಧಿಸುವುದು 8 ಎಂ ಡಿ ಜಿ ಗಳ ಸಾಧನೆಗೆ ಅಗತ್ಯ.— ಇದು ಮಗುವಿನ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ತುಸು ಪರಿಣಾಮ ಬೀರುವುದು. ಜತೆಗೆ ಎಲ್ಲರಿಗು ಶಿಕ್ಷಣವು ಬಹು ಸಹಭಾಗಿತ್ವದಿಂದ ಅನುಭವಗಳ ಮೊತ್ತವನ್ನು ನಿರ್ಮಿಸಿ 2015 ರ ಗುರಿ ಸಾಧನೆಗೆ ಪೂರಕವಾಗಿದೆ ಜತೆಗೆ ಇತರ ಎಂ ಡಿ ಜಿ ಗಳನ್ನೂ ತಲುಪಲು ಸಹಾಯಕವಾಗಿದೆ. ಸುಧಾರಿಸಿದ ಆರೋಗ್ಯ, ಶುದ್ಧ ಕುಡಿಯುವ ನೀರಿನ ಲಭ್ಯತೆ ಬಡತನದ ನಿರ್ಮೂಲನೆ , ಪರಿಸರದ ಸುಸ್ಥಿರತೆ ಗಳು ಕೂಡಾ ಶಿಕ್ಷಣದ ಎಂ ಡಿ ಜಿ ಗಳ ಸಾಧನೆಗ ಅಗತ್ಯವಾಗಿವೆ.ಅನೇಕ ಇ ಎಪ್ಹ್ ಎ ಗುರಿಗಳನ್ನು ಸಾಧಿಸುವಲ್ಲಿ ಸತತ ಪ್ರಯತ್ನಗಳು ಸಾಗುತಿದ್ದರೂ ಇನ್ನೂಅನೇಕ ಸವಾಲುಗಳು ಇವೆ. ಈಗಲೂ ಶಾಲಾ ವಯಸ್ಸಿನ ಮಕ್ಕಳು ಅರ್ಥಿಕ, ಸಾಮಾಜಿಕ ಅಥವಾ ದೈಹಿಕ ಬದಲಾವಣೆ, ಹೆಚ್ಚಿನ ಫಲವತ್ತತೆ ಎಚ್ ಆಯ ವಿ/ ಎಡ್ಸ್ ಮತ್ತು ಸಂಘರ್ಷ ಗಳಿಂದಾಗಿ ಶಾಲೆಗೇ ಹೋಗುತ್ತಿಲ್ಲ.ಶಾಲಾ ಸೌಲಭ್ಯವು ಅಭಿವೃದ್ಧಿಶೀಲ ದೇಶಗಳಲ್ಲಿ ೧೯೯೦ ರಿಂದ ಸುಧಾರಿಸಿದೆ. ಈಗಾಗಲೇ ೧೬೩ ದೇಶಗಳಲ್ಲಿ ೪೭ ದೇಶಗಳು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಸಾಧಿಸಿವೆ ಮತ್ತು (MDG 2) ಹೆಚ್ಚುವರಿಯಾಗಿ ೨೦ ದೇಶಗಳು ಗುರಿಯನ್ನು ೨೦೧೫ ರ ಒಳಗೆ ಸಾಧಿಸುವ ಹಾದಿಯಲ್ಲಿವೆ . ಆದರೆ ಸಬ್ ಸಹಾರ ಪ್ರದೇಶದಲ್ಲಿರುವ 23 ದೇಶಗಳು ೨೦೧೫ ರ ದೇಶದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಯತ್ನ ನಡೆಯದಿದ್ದರೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಗುರಿ ಸಾಧಿಸುವ ಸಂಭವ ಕಡಿಮೆ ಶಿಕ್ಷಣದಲ್ಲಿ ಲಿಂಗ ವ್ಯತ್ಯಾಸವು ಕಡಿಮೆ ಯಾಗುತಿದ್ದರೂ (MDG 3), ಬಾಲಕಿಯರು ಇನ್ನೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯುವಲ್ಲಿ ಮತ್ತು ಮುಗಿಸುವಲ್ಲಿ ಎಡರು ತೊಡರು ಎದುರಿಸುತ್ತಿರುವರು . ಬಾಲಕಿಯರ ನೋಂದಣಿಯು ಪ್ರಾ ಥಮಿಕ ಮತ್ತು ಪ್ರೌಢ ಶಿಕ್ಷಣ ಮಟ್ಟದಲ್ಲಿ ಸುಧಾರಿಸಿದ್ದರೂ, ಅದರಲ್ಲೂ ಕಡಿಮೆ ಆದಾಯದ ದೇಶಗಳಾದ ಸಬ್ ಸಹಾರಾ ಅಫ್ರಿಕಾಮತ್ತು ದಕ್ಷಿಣ ಏಶಿಯಾದ —೨೪ ರಾಷ್ಟ್ರಗಳು ಲಿಂಗ ಸಮಾನತೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಟ್ಟದಲ್ಲಿ 2015.ರ ಹೊತ್ತಿಗೆ ಸಾಧಿಸುವುದಾಗಿದೆ . ಹೆಚ್ಚಿನ ದೇಶಗಳು (೧೩) ಸಬ್ ಸಹರಾ ಆಫ್ರಿಕಾದಲ್ಲಿವೆ ಶಿಕ್ಷಣ ರಂಗದಲ್ಲಿ ಕನಿಷ್ಠ ಕಲಿಕಾ ಫಲಿತಾಂಶಗಳು ಮತ್ತು ಕಳಪೆ ಗುಣ ಮಟ್ಟದ ಶಿಕ್ಷಣವೂ ಹೆಚ್ಚಿನ ಕಾಳಜಿಗೆ ಕಾರಣವಾಗಿವೆ.ಉದಾ: ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಪ್ರಾಥಮಿಕ ಶಾಲೆಗೆ ಸೇರುವ ಮಕ್ಕಳಲ್ಲಿ ಅಂತಿಮ ತರಗತಿಯವರೆಗೆ ಇರುವ ಮಕ್ಕಳು ಶೇಕಡಾ 60 ಕ್ಕಿಂತ ಕಡಿಮೆ. ಜತೆಗೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತವು ೪೦:೧ ಕ್ಕೂ ಹೆಚ್ಚಿದೆ. ಮತ್ತು ಅನೇಕ ಪ್ರಾಥಮಿಕ ಶಿಕ್ಷ ಕರು ಸಾಕಷ್ಟು ಶಿಕ್ಷಣ ಪಡೆದಿರುವುದಿಲ್ಲ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020
ಅದು ಮಗುವಿನ ಮನದ ಮೇಲೆ ನಿಷೇಧಾತ್ಮಕ ಪರಿಣಾಮ ಬೀರುವುದು. ಸ...
ಭಾರತದಲ್ಲಿ ಪ್ರಚಲಿತವಿರುವ ದೇಶೀಯ ಭಾಷೆಗಳೊಂದಿಗೆ ವಿದೇಶೀ ಭ...
ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಕುರಿತು
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...