ಅದು ಮಗುವಿನ ಮನದ ಮೇಲೆ ನಿಷೇಧಾತ್ಮಕ ಪರಿಣಾಮ ಬೀರುವುದು. ಸಾಮಾನ್ಯವಾಗಿ ಎಳೆಯ ಮನದಲ್ಲಿ ದ್ವೇಷ,ಭಯ ಮತ್ತು ಉಗ್ರತೆಯ ರೂಪ ಪಡೆಯುವುದು.
ಈ ರೀತಿಯ ಶಿಕ್ಷೆಯು ಕೋಪ , ಅಸಮಾಧಾನ ಮತ್ತು ಕೀಳರಿಮೆಗೆ ಕಾರಣವಾಗುವುದು. ಅದು ಅಸಹಾಯಕತೆ , ದೈನ್ಯದಭಾವನೆಗೆ ಎಡೆಮಾಡಿ ಮಗುವಿನ ಆತ್ಮ ಗೌರವಕ್ಕೆ ಘಾಸಿಮಾಡುವುದು. ಇದರಿಂದ ಮಗುವು ಹಿಂಜರಿಕೆ ಇಲ್ಲವೆ ಆಕ್ರಮಣಕಾರಿ ಮನೋಭಾವ ಬೆಳೆಸಿಕೊಳ್ಳುವುದು.
ಸಮಸ್ಯೆಯ ಪರಿಹಾರಕ್ಕೆ ಅದು ಹಿಂಸೆ ಮತ್ತು ಪ್ರತಿಕಾರವನ್ನು ಅವಲಂಬಿಸುವುದು.
ಮಕ್ಕಳು ಹಿರಿಯರು ಮಾಡುವುದನ್ನು ಅನುಕರಿಸಬಹುದು. ಮಕ್ಕಳು ಹಿಂಸೆ ಮಾಡುವುದ ಸರಿ ಅದರಲ್ಲಿ ಯಾವುದೆ ತಪ್ಪಿಲ್ಲ ಎಂದು ನಂಬುವರು. ಇದರಿಂದಾಗಿ ತಂದೆ ತಾಯಿ ಶಿಕ್ಷಕರಮೇಲೂ ಹಲ್ಲೆ ಮಾಡುವರು.ಬಾಲ್ಯದಲ್ಲಿ ಶಾರೀರಿಕ ಶಿಕ್ಷೆಗೆ ಬಲಿಯಾದವರು ಮುಂದೆ ವಯಸ್ಕರಾದಾಗ ತಮ್ಮ ಸಂಗಾತಿಗಳನ್ನು, ಮಕ್ಕಳನ್ನು, ಗೆಳೆಯರನ್ನು ಹೊಡೆಯಲು ಮೊದಲು ಮಾಡುವರು.
ಶಾರೀರಿಕ ಶಿಕ್ಷೆಯು ಶಿಸ್ತು ತರುವಲ್ಲಿ ಪರಿಣಾಮಕಾರಿಯಾದ ಸಾಧನವಲ್ಲ. ಅದು ವ್ಯಕ್ತಿಯನ್ನು ಉತ್ತೇಜಿಸುವದು ವಿರಳ. ಅದು ಮಗುವಿಗೆ ಒಳಿತಿಗಿಂತ ಕೆಡುಕು ಮಾಡುವುದೆ ಹೆಚ್ಚು..
ಶಿಕ್ಷೆಯು ಮಗುವು ಅಶಿಸ್ತಿನ ನಡವಳಿಕೆಯನ್ನು ಮತ್ತೆ ಮಾಡದಂತೆ ತಕ್ಕ ಮಟ್ಟಿಗೆ ತಡೆಯುವುದು. ಆದರೆ ಅದು ಅವನಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ. ಅವನನ್ನು ಹೆಚ್ಚು ಜಾಣನನ್ನಾಗಿಯೂ ಮಾಡುವುದಿಲ್ಲ.
ಮಗುವಿನ ಮೇಲೆ ಅದು ಹಲವು ನಿಷೇಧಾತ್ಮಕ ಪರಿಣಾಮ ಬೀರಬಹುದು..
ಅನೇಕ ಬೀದಿಬದಿಯ ಮತ್ತು ಬಾಲ ಕಾರ್ಮಿಕರಾಗಿರುವ ಮಕ್ಕಳು ತಾವು ಮನೆಯಿಂದ ಓಡಿಬರಲು ಶಾಲೆಯಲ್ಲಿನ, ಕುಟುಂಬದಲ್ಲಿನ, ಶಾರೀರಿಕ ಶಿಕ್ಷೆಯೂ ಒಂದು ಕಾರಣ ಎಂದು ಹೇಳಿದ್ದಾರೆ
ಮಕ್ಕಳಿಗೆ ಶಿಸ್ತು ಕಲಿಸುವ ಹಕ್ಕಿಗಾಗಿ ಅವರ ಬೆಳವಣಿಗೆ ಮತ್ತು ಪಾಲ್ಗೊಳ್ಳುವಿಕೆಯನ್ನು ಕುಂಠಿತ ಗೊಳಿಸಬಾರದು. ಮಕ್ಕಳ ಪಾಲುಗೊಳ್ಳುವ ಹಕ್ಕು ಅವರ ಶಿಸ್ತಿನ ಹಾದಿಯನ್ನು ಸುಗಮಗೊಳಿಸಬಲ್ಲದು.
ಏನೇಆದರೂ ಯಾವುದೇ ಧರ್ಮ ಅಥವ ಕಾನೂನು ಶಾರೀರಿಕ ಶಿಕ್ಷೆಯನ್ನು ಒಪ್ಪುವುದಿಲ್ಲ. ಯಾರಿಗೇ ಆದರೂ ತಮಗೆ ಪರಿಸ್ಥತಿಯನ್ನು ಬೇರೆ ವಿಧಾನದಲ್ಲಿ ನಿಭಾಯಿಸಲು ಆಗಲಿಲ್ಲ ಎಂದು ಮಕ್ಕಳಿಗೆ ಶಾರೀರಿಕ ಶಿಕ್ಷೆ ಕೊಡುವ ಕಾನೂನಿನ ಅಥವ ನೈತಿಕ ಅಧಿಕಾರವಿಲ್ಲ
ಶಾರೀರಿಕ ಶಿಕ್ಷೆಯು ಮಗುವಿಗೆ ಹೇಗೆ ಅಪಾಯ ಉಂಟುಮಾಡುವುದು? ಅದು ಮಗುವಿನ ಮನದ ಮೇಲೆ ನಿಷೇಧಾತ್ಮಕ ಪರಿಣಾಮ ಬೀರುವುದು. ಸಾಮಾನ್ಯವಾಗಿ ಎಳೆಯ ಮನದಲ್ಲಿ ದ್ವೇಷ,ಭಯ ಮತ್ತು ಉಗ್ರತೆಯ ರೂಪ ಪಡೆಯುವುದು.ಈ ರೀತಿಯ ಶಿಕ್ಷೆಯು ಕೋಪ , ಅಸಮಾಧಾನ ಮತ್ತು ಕೀಳರಿಮೆಗೆ ಕಾರಣವಾಗುವುದು. ಅದು ಅಸಹಾಯಕತೆ , ದೈನ್ಯದಭಾವನೆಗೆ ಎಡೆಮಾಡಿ ಮಗುವಿನ ಆತ್ಮ ಗೌರವಕ್ಕೆ ಘಾಸಿಮಾಡುವುದು. ಇದರಿಂದ ಮಗುವು ಹಿಂಜರಿಕೆ ಇಲ್ಲವೆ ಆಕ್ರಮಣಕಾರಿ ಮನೋಭಾವ ಬೆಳೆಸಿಕೊಳ್ಳುವುದು. ಸಮಸ್ಯೆಯ ಪರಿಹಾರಕ್ಕೆ ಅದು ಹಿಂಸೆ ಮತ್ತು ಪ್ರತಿಕಾರವನ್ನು ಅವಲಂಬಿಸುವುದು. ಮಕ್ಕಳು ಹಿರಿಯರು ಮಾಡುವುದನ್ನು ಅನುಕರಿಸಬಹುದು. ಮಕ್ಕಳು ಹಿಂಸೆ ಮಾಡುವುದ ಸರಿ ಅದರಲ್ಲಿ ಯಾವುದೆ ತಪ್ಪಿಲ್ಲ ಎಂದು ನಂಬುವರು. ಇದರಿಂದಾಗಿ ತಂದೆ ತಾಯಿ ಶಿಕ್ಷಕರಮೇಲೂ ಹಲ್ಲೆ ಮಾಡುವರು.ಬಾಲ್ಯದಲ್ಲಿ ಶಾರೀರಿಕ ಶಿಕ್ಷೆಗೆ ಬಲಿಯಾದವರು ಮುಂದೆ ವಯಸ್ಕರಾದಾಗ ತಮ್ಮ ಸಂಗಾತಿಗಳನ್ನು, ಮಕ್ಕಳನ್ನು, ಗೆಳೆಯರನ್ನು ಹೊಡೆಯಲು ಮೊದಲು ಮಾಡುವರು.ಶಾರೀರಿಕ ಶಿಕ್ಷೆಯು ಶಿಸ್ತು ತರುವಲ್ಲಿ ಪರಿಣಾಮಕಾರಿಯಾದ ಸಾಧನವಲ್ಲ. ಅದು ವ್ಯಕ್ತಿಯನ್ನು ಉತ್ತೇಜಿಸುವದು ವಿರಳ. ಅದು ಮಗುವಿಗೆ ಒಳಿತಿಗಿಂತ ಕೆಡುಕು ಮಾಡುವುದೆ ಹೆಚ್ಚು..ಶಿಕ್ಷೆಯು ಮಗುವು ಅಶಿಸ್ತಿನ ನಡವಳಿಕೆಯನ್ನು ಮತ್ತೆ ಮಾಡದಂತೆ ತಕ್ಕ ಮಟ್ಟಿಗೆ ತಡೆಯುವುದು. ಆದರೆ ಅದು ಅವನಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ. ಅವನನ್ನು ಹೆಚ್ಚು ಜಾಣನನ್ನಾಗಿಯೂ ಮಾಡುವುದಿಲ್ಲ.ಮಗುವಿನ ಮೇಲೆ ಅದು ಹಲವು ನಿಷೇಧಾತ್ಮಕ ಪರಿಣಾಮ ಬೀರಬಹುದು.. ಅನೇಕ ಬೀದಿಬದಿಯ ಮತ್ತು ಬಾಲ ಕಾರ್ಮಿಕರಾಗಿರುವ ಮಕ್ಕಳು ತಾವು ಮನೆಯಿಂದ ಓಡಿಬರಲು ಶಾಲೆಯಲ್ಲಿನ, ಕುಟುಂಬದಲ್ಲಿನ, ಶಾರೀರಿಕ ಶಿಕ್ಷೆಯೂ ಒಂದು ಕಾರಣ ಎಂದು ಹೇಳಿದ್ದಾರೆ ಮಕ್ಕಳಿಗೆ ಶಿಸ್ತು ಕಲಿಸುವ ಹಕ್ಕಿಗಾಗಿ ಅವರ ಬೆಳವಣಿಗೆ ಮತ್ತು ಪಾಲ್ಗೊಳ್ಳುವಿಕೆಯನ್ನು ಕುಂಠಿತ ಗೊಳಿಸಬಾರದು. ಮಕ್ಕಳ ಪಾಲುಗೊಳ್ಳುವ ಹಕ್ಕು ಅವರ ಶಿಸ್ತಿನ ಹಾದಿಯನ್ನು ಸುಗಮಗೊಳಿಸಬಲ್ಲದು.ಏನೇಆದರೂ ಯಾವುದೇ ಧರ್ಮ ಅಥವ ಕಾನೂನು ಶಾರೀರಿಕ ಶಿಕ್ಷೆಯನ್ನು ಒಪ್ಪುವುದಿಲ್ಲ. ಯಾರಿಗೇ ಆದರೂ ತಮಗೆ ಪರಿಸ್ಥತಿಯನ್ನು ಬೇರೆ ವಿಧಾನದಲ್ಲಿ ನಿಭಾಯಿಸಲು ಆಗಲಿಲ್ಲ ಎಂದು ಮಕ್ಕಳಿಗೆ ಶಾರೀರಿಕ ಶಿಕ್ಷೆ ಕೊಡುವ ಕಾನೂನಿನ ಅಥವ ನೈತಿಕ ಅಧಿಕಾರವಿಲ್ಲ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/15/2019
ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಕುರಿತು
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...
ಮಕ್ಕಳನ್ನು ರಕ್ಷಿಸಲು ಶಿಕ್ಷಕರು ಏನು ಮಾಡಬಹುದರ ಬಗ್ಗೆ ಇಲ್...
ಶಾರೀರಿಕ ಶಿಕ್ಷೆಯನ್ನು ಮಗುವಿಗೆ ದೈಹಿಕ ಬಲ ಉಪಯೋಗಿಸಿ ನೋವು...