ಅಧಿನಿಯಮದಲ್ಲಿ ಸೂಚಿಸಿದಂತೆ ಆಯೋಗದ ಕಾರ್ಯಗಳು ಈ ಕೆಳಗಿನಂತಿವೆ.ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಯಾವುದಾದರೂ ಕಾನೂನಿನಿಂದ ಅಥವಾ ಕಾನೂನಿನ ಅಡಿಯಲ್ಲಿ ಒದಗಿಸಲಾಗ ರಕ್ಷಣೆಗಳು ಪರಿಶೀಲನೆ ಮತ್ತು ಪರಿಷ್ಕರಣೆ ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಮಗಳ ಶಿಫಾರಸು ಮತ್ತು ಈ ರಕ್ಷಣೆಗಳ ಕಾರ್ಯವಿಧಾನದ ಬಗ್ಗೆ ಕೇಂದ್ರಸರ್ಕಾರಕ್ಕೆ ವರದಿಗಳನ್ನು ನೀಡುವುದು.ಭಯೋತ್ಪಾದನೆ, ಕೋಮುಗಲಭೆ, ದಂಗೆಗಳು, ಪ್ರಾಕೃತಿಕ ವಿಕೋಪಗಳು, ಸ್ವಗೃಹದಲ್ಲಿನ ಹಿಂಸೆ, ಹೆಚ್.ಐ.ವಿ/ ಏಡ್ಸ್, ಮಕ್ಕಳ ಕಳ್ಳಸಾಗಣೆ, ಅನುಚಿತ ವರ್ತನೆ, ಹಿಂಸೆ ಮತ್ತು ಶೋಷಣೆ, ಅಶ್ಲೀಲ ಸಾಹಿತ್ಯ, ಮತ್ತು ವೇಶ್ಯಾವೃತ್ತಿಗಳಿಂದ ಪ್ರಭಾವಿತರಾಗಿ ಮಕ್ಕಳು ಹಕ್ಕುಗಳನ್ನು ಅನುಭವಿಸುವುದಕ್ಕೆ ತಡೆಯೊಡ್ಡುವಂತಹ ಎಲ್ಲ ಅಂಶಗಳನ್ನು ಪರಿಶೀಲಿಸಿ ಸೂಕ್ತಪರಿಹಾರೋಪಾಯಗಳನ್ನು ಶಿಫಾರಸು ಮಾಡುವುದು.ಸಂಕಷ್ಟದಲ್ಲಿರುವ ಮಕ್ಕಳು, ಅಲಕ್ಷ್ಯಕ್ಕೆ ಒಳಗಾದ ಮತ್ತು ಅವಕಾಶ ವಂಚಿತ ಮಕ್ಕಳು, ನಿರ್ಗತಿಕ ಮಕ್ಕಳು ಮತ್ತು ಖೈದಿಗಳ ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸಿ ಸೂಕ್ತ ಪರಿಹಾರ ವಿಧಾನಗಳನ್ನು ಶಿಫಾರಸು ಮಾಡುವುದು ಮಕ್ಕಳ ಹಕ್ಕುಗಳ ಪರಿಜ್ಞಾನವನ್ನು ಸಮಾಜದ ವಿವಿಧ ಭಾಗಗಳಲ್ಲಿ ಪ್ರಸಾರಗೊಳಿಸಿ ಮಕ್ಕಳಿಗೆ ಇರುವ ರಕ್ಷಣೆಗಳು ಮತ್ತು ಹಕ್ಕುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟ ಅಥವಾ ಯಾವುದಾದರೂ ಪ್ರಾಧಿಕಾರದ ಯಾವುದಾದರೂ ಬಾಲಾಪರಾಧಿಗೃಹ ಅಥವಾ ಯಾವುದಾದರೂ ಮಕ್ಕಳ ನಿವಾಸಕ್ಕಾಗಿ ಇರುವ ಸ್ಥಳ ಅಥವಾ ಸಂಸ್ಥೆ ಅಥವಾ ಯಾವುದಾದರೂ ಸಾಮಾಜಿಕ ಸಂಸ್ಥೆಯಿಂದ ನಡೆಸಲ್ಪಡುತ್ತಿರುವ ಮಕ್ಕಳ ಸುಧಾರಣಾ ಕೇಂದ್ರ ಇವುಗಳ ತಪಾಸಣೆ ಅಥವಾ ತಪಾಸಣೆಗೆ ಕಾರಣರಾಗುವುದು.ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿ ಅಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದು ಮತ್ತು ಮಕ್ಕಳ ಹಕ್ಕುಗಳ ಅಪಹರಣ ಅಥವಾ ಉಲ್ಲಂಘನೆ ಮಕ್ಕಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಪೂರಕವಾದ ಕಾನೂನುಗಳನ್ನು ಅನುಷ್ಠಾನಕ್ಕೆ ತರದಿರುವುದು ಮಕ್ಕಳ ಕೋಟಲೆಗಳನ್ನು ಕಡಿಮೆಗೊಳಿಸುವ ಮತ್ತು ಮಕ್ಕಳ ಕಲ್ಯಾಣವನ್ನು ಖಾತ್ರಿಪಡಿಸುವ ನೀತಿ ನಿರ್ಧಾರಗಳು, ಮಾರ್ಗಸೂಚಿಗಳು ಮತ್ತು ಸೂಚನೆಗಳ ಅನುಸರಣೆ ಮಾಡದಿರುವುದು ಮತ್ತು ಅಂತಹ ಮಕ್ಕಳೀಗೆ ಪರಿಹಾರ ಒದಗಿಸುವುದು ಅಥವಾ ಅಂತಹ ವಿಷಯಗಳಿಂದ ಉದ್ಭವವಾದ ಸಮಸ್ಯೆಗಳನ್ನು ಸೂಕ್ತ ಪ್ರಾಧಿಕಾರಗಳಿಗೆ ತೆಗೆದುಕೊಂಡು ಹೋಗುವುದು.ಈ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ನಿರ್ಧಾರಗಳನ್ನು ಕೈಗೊಳ್ಳುವುದು.ಒಪ್ಪಂದಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಅಧ್ಯಯನ ಮಾಡುವುದು,
ಮಕ್ಕಳ ಹಕ್ಕುಗಳ ಪ್ರಸ್ತುತ ನೀತಿಗಳು, ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳ ಬಗ್ಗೆ ಆಗಾಗ್ಗೆ ಪರಿಷ್ಕರಣೆ ಕೈಗೊಳ್ಳುವುದು ಮತ್ತು ಅವುಗಳ ಪರಿಣಾಮಕಾರೀ ಅನುಷ್ಠಾನಕ್ಕೆ ಮಕ್ಕಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಫಾರಸುಗಳನ್ನು ಮಾಡುವುದು.ಪ್ರಸ್ತುತ ಕಾನೂನು, ನೀತಿ ಮತ್ತು ಆಚರಣೆಗಳನ್ನು ಅವುಗಳ ಅನುಸರಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಮಗುವಿನ ಹಕ್ಕುಗಳ ಹಿನ್ನಲೆಯಲ್ಲಿ, ವಿಶ್ಲೇಷಣೆ ಮಾಡುವುದು. ವಿಚಾರಣೆಗಳನ್ನು ಕೈಗೆತ್ತಿಕೊಂಡು ಮಕ್ಕಳ ಮೇಲೆ ಪ್ರಭಾವ ಬೀರುವ ಯಾವುದಾದರೂ ವಿಷಯಾಂಶ, ನೀತಿ ಅಥವಾ ಆಚರಣೆಯನ್ನು ಕುರಿತು ವರದಿಗಳನ್ನು ಸಿದ್ಧಪಡಿಸುವುದು ಮತ್ತು ಮಕ್ಕಳ ಹಕ್ಕುಗಳ ಹಿನ್ನಲೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಹೊಸ ವಿಧಿವಿಧಾನಗಳ ರಚನೆಯನ್ನು ವಿಮರ್ಶಿಸುವುದು.ಮಕ್ಕಳ ವಿಷಯವಾಗಿ ಕಾರ್ಯಮಾಡುತ್ತಿರುವ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಮಕ್ಕಳ ದೃಷ್ಟಿಕೋನವನ್ನು ಪರಿಗಣಿಸಿ ಅದರ ಬಗ್ಗೆ ಗೌರವತೋರುವ ಮನೋಭಾವನೆಯನ್ನು ಬೆಳೆಸುವುದು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಗಳನ್ನು ಸಿದ್ಧಪಡಿಸುವುದು ಮತ್ತು ಪ್ರಚಾರಗೊಳಿಸುವುದು ಮಕ್ಕಳ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಮತ್ತು ಶಾಲೆಯ ಪಠ್ಯಕ್ರಮ, ಶಿಕ್ಷಕರ ತರಬೇತಿ ಮತ್ತು ಮಕ್ಕಳ ವಿಷಯವಾಗಿ ಕೆಲಸ ನಿರ್ವಹಿಸುವವರ ತರಬೇತಿಗಳಲ್ಲಿ ಮಕ್ಕಳ ಹಕ್ಕುಗಳನ್ನು ಸೇರಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವುದು.
ಮೂರು ವರ್ಷಗಳ ಅವಧಿಗೆ ನೇಮಕಮಾಡಿದ ಈ ಕೆಳಕಂಡ ಸದಸ್ಯರುಗಳನ್ನು ಆಯೋಗ ಹೊಂದಿರುತ್ತದೆ. ಮಕ್ಕಳ ಕಲ್ಯಾಣಕ್ಕಾಗಿ ಮುಖ್ಯವಾದ ಕೆಲಸಮಾಡಿದ ಪ್ರಸಿದ್ಧ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸುವುದು.ಶಿಕ್ಷಣ, ಮಕ್ಕಳ ಆರೋಗ್ಯ, ಕಲ್ಯಾಣ, ಅಭಿವೃದ್ಧಿ, ಪೋಷಣೆ, ಮಕ್ಕಳ ನ್ಯಾಯ, ನಿರ್ಲಕ್ಷಿತ ಮಕ್ಕಳ ಆರೈಕೆ, ಅಲಕ್ಷಿತ ಮಕ್ಕಳ ಸಂರಕ್ಷಣೆ, ವಿಕಲ ಚೇತನರ ಆರೈಕೆ, ಬಾಲದುಡಿಮೆಯ ನಿವಾರಣೆ, ಶಿಶು ಮನಃಶಾಸ್ತ್ರ ಮತ್ತು ಮಕ್ಕಳಿಗಾಗಿ ರಚಿತ ಕಾನೂನು ಈ ರಂಗಗಳಲ್ಲಿ ಒಂದರಲ್ಲಾದರೂ ಪರಿಣತರಾದ, ಶೇಷ್ಠ, ಪ್ರಾಮಾಣಿಕ, ಪ್ರಸಿದ್ಧ ಆರು ಜನ ಸದಸ್ಯರು ಸಹಕಾರ್ಯದರ್ಶಿಯ ದರ್ಜೆಗೆ ಕಡಿಮೆಯಿರದ ಸದಸ್ಯ ಕಾರ್ಯದರ್ಶಿ
ಒಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿವಿಲ್ ನ್ಯಾಯಾಲಯವು ಹೊಂದಿರುವ ಎಲ್ಲ ಅಧಿಕಾರಗಳನ್ನೂ ಆಯೋಗವು ಹೊಂದಿರುತ್ತದೆ ಮತ್ತು ಈ ಕೆಳಕಂಡ ಅಧಿಕಾರಗಳನ್ನು ನಿರ್ದಿಷ್ಟವಾಗಿ ಹೊಂದಿರುತ್ತದೆ ಭಾರತದ ಯಾವುದೇ ಪ್ರದೇಶದಿಂದ ಒಬ್ಬ ವ್ಯಕ್ತಿಯನ್ನು ಕರೆಸಿ ಕೊಳ್ಳುವ, ಅವರ ಹಾಜರಾತಿಯನ್ನು ಕಡ್ಡಾಯಗೊಳಿಸಿ ಪ್ರತಿಜ್ಞಾ ವಿಧಿಯನಂತರ ಅವರನ್ನು ವಿಚಾರಿಸುವುದು ಯಾವುದೇ ದಾಖಲೆಯನ್ನು ಹುಡುಕಿ ಪ್ರಸ್ತುತ ಪಡಿಸಲು ಕ್ರಮತೆಗೆದುಕೊಳ್ಳುವುದುಶಪಥ ಪತ್ರಗಳ ಮೇಲೆ ಪುರಾವೆಗಳನ್ನು ಸ್ವೀಕರಿಸುವುದು ಯಾವುದೇ ನ್ಯಾಯಾಲಯ ಕಚೇರಿಯಿಂದ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ಪ್ರತಿಯನ್ನು ತರಿಸಿಕೊಳ್ಳುವುದು ದಾಖಲೆಗಳು ಮತ್ತು ಸಾಕ್ಷೀದಾರರನ್ನು ಪರೀಕ್ಷಿಸಲು ಕಮೀಷನ್ ಗಳನ್ನು ಜಾರಿಗೊಳಿಸುವುದು ಇದೇ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಕ್ಷೇತ್ರಾಧಿಕಾರವುಳ್ಳ ಮ್ಯಾಜಿಸ್ಟ್ರೇಟರಿಗೆ ಪ್ರಕರಣವನ್ನು ಹಸ್ತಾಂತರಿಸುವುದು.ಅಂತಹ ನ್ಯಾಯಾಲಯವು ಅಪೇಕ್ಷಿಸಿದಲ್ಲಿ ಸಂಬಂಧಿಸಿದ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಅಗತ್ಯ ಆದೇಶ ಅಥವಾ ನಿರ್ದೇಶ ಅಥವಾ ಲೇಖವನ್ನು ಪಡೆಯಲು ಮೊರೆಹೋಗಬಹುದು.
ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಗುರುತರ ಪ್ರಕರಣಗಳನ್ನು ಪ್ರಜ್ನಾಪೂರ್ವಕವಾಗಿ ಸ್ವಯಂಪ್ರೇರಿತವಾಗಿ ಆಯೋಗವು ಗುರುತಿಸಬೇಕು ಅಲ್ಲದೇ ಮಕ್ಕಳು ಹಕ್ಕುಗಳನ್ನು ಅನುಭವಿಸಲು ತಡೆಯೊಡ್ಡುವ ಅಂಶಗಳನ್ನು ಪರಿಶೀಲಿಸಬೇಕು ಸಂವಿಧಾನದ 8 ನೇ ಅನುಸೂಚಿಯಲ್ಲಿನ ಯಾವುದೇ ಭಾಷೆಯಲ್ಲಿ ಆಯೋಗಕ್ಕೆ ದೂರು ನೀಡಬಹುದು ಅಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ ದೂರಿಗೆ ಕಾರಣವಾದ ವಿಷಯದ ಸಂಪೂರ್ಣ ಚಿತ್ರವನ್ನು ದೂರಿನಲ್ಲಿ ನೀಡಬೇಕು ಅಗತ್ಯವೆನಿಸಿದಲ್ಲಿ ಆಯೋಗವು ಹೆಚ್ಚಿನ ವಿವರಗಳನ್ನು / ಶಪಥ ಪತ್ರಗಳನ್ನು ಆಯೋಗ ಕೇಳಬಹುದು ದೂರು ನೀಡುವಾಗ ಇವುಗಳನ್ನು ದಯವಿಟ್ಟು ಖಾತ್ರಿ ಮಾಡಿಕೊಳ್ಳಿರಿ ಸ್ಪಷ್ಟ ಮತ್ತು ಓದಲಾಗುವಂತಿರಬೇಕು, ಅಸ್ಪಷ್ಟವಾಗಿರಬಾರದು. ಅನಾಮಧೇಯ ಅಥವಾ ಬೇನಾಮಿ ದೂರು ಆಗಿರಬಾರದು ಇಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ವಿಧಿಸುವಂತಿಲ್ಲ
ಕೈಗೆತ್ತಿಕೊಂಡ ಪ್ರಕರಣವು ಆಸ್ತಿಯ ಹಕ್ಕುಗಳು, ಗುತ್ತಿಗೆಗೆ ಸಂಬಂಧಿಸಿದ ಭಾಧ್ಯತೆಗಳಂತಹ ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರಬಾರದು.ಕೈಗೆತ್ತಿಕೊಂಡ ಪ್ರಕರಣವು ಸೇವಾವಿಷಯಗಳಿಗೆ ಸಂಬಂಧಿಸಿರಬಾರದು ಪ್ರಕರಣವು ಕಾನೂನಿಗೆ ಅನ್ವಯವಾಗಿ ರಚಿಸಲ್ಪಟ್ಟ ಬೇರೇ ಯಾವುದೇ ಆಯೋಗದ ಮುಂದೆ ಇರಬಾರದು ಅಥವಾ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದಲ್ಲಿ ವಿಚಾರಣಾಧೀನವಾಗಿರಬಾರದು ಪ್ರಕರಣವು ಇದೇ ಆಯೋಗದಿಂದ ಈ ಮೊದಲೇ ತೀರ್ಮಾನಿಸಿದುದಾಗಿರಬಾರದು ಬೇರೆ ಯಾವುದೇ ಆಧಾರದಲ್ಲಿ ಆಯೋಗದ ವ್ಯಾಪ್ತಿಯಿಂದ ಆಚೆ ಇರಬಾರದು
ದೂರುಗಳನ್ನು ಸಂಪರ್ಕಿಸಿ :
ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ 5 ನೇ ಮಹಡಿ,
ಚಂದೆರ್ಲೋಕ್ ಕಟ್ಟಡ, 36 ಜನಪಥ್
ದೆಹಲಿ -೧೧೦೦೦೧
ದೂರವಾಣಿ: 011-23478200
ಫ್ಯಾಕ್ಸ್: 011-23724026
ದೂರು: www.ebaalnidan.nic.in
ಮೂಲ : NCPCR
ಕೊನೆಯ ಮಾರ್ಪಾಟು : 2/15/2020
ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ
ಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್...
ಭಾರತದಲ್ಲಿ ಇ -ಆಡಳಿತ “ವ್ಯವಹಾರಿಕ” ಘಟ್ಟ ತಲುಪಿರುತ್ತದೆ.
ದೂರು ದಾಖಲಿಸಲು ನಿಗದಿತ ನಮೂನೆ ಇದೆಯೇ & ದೂರಿನಲ್ಲಿ ಏನೆಲ್...