ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳು ಅತಿರೇಕದ ಹಂತ ತಲುಪಿದೆ ಆದರೆ ಕೇವಲ ಅಲ್ಪ ಪ್ರಮಾಣದಲ್ಲಿ ಶೇಕಡಾವಾರು ವರದಿ ಮುಟ್ಟುತ್ತದೆ. ಒಂದು ಅಧ್ಯಯನದ ಪ್ರಕಾರ, ಮಕ್ಕಳ ಬಗ್ಗೆ ಸಮೀಕ್ಷೆ ನಡಿಸಿದನಂತರ 53% ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಹೆಚ್ಚುಬಾರಿ ಲೈಂಗಿಕ ದುರ್ಬಳಕೆಯ ಇತರ ರೂಪ ಎದುರಿಸಿದ ವರದಿಯಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ಅಪರಾಧಿಯು ಕುಟುಂಬದ ಸದಸ್ಯ / ಹತ್ತಿದರ ಸಂಬಂಧಿ ಅಥವಾ ಪರಿಚಯಸ್ತ ರಾಗಿರುತ್ತಾರೆ.
ಅಂತಹ ಸಂದರ್ಭಗಳಲ್ಲಿ ಬಲಿಯಾದ ಮಗು ಸಾಮಾನ್ಯವಾಗಿ ಈ ಆರೋಪಗಳ ವರದಿ ಮಾಡುವುದಿಲ್ಲ
ಲೈಂಗಿಕ ನಿಂದನೆ ಮಗುವಿನ ಮನಸ್ಸಿನಲ್ಲಿ ಜೀವನಪರ್ಯಂತ ಪೀಡಿತವಾಗಿರುತ್ತದೆ. ಲೈಂಗಿಕ ದುರುಪಯೋಗಕ್ಕೆ ಒಳಪಟ್ಟ ಮಗು ಅರಿವಿನ ಕೊರತೆ, ಖಿನ್ನತೆ ಮತ್ತು ಆತಂಕದ ಸೇರಿದಂತೆ ಮುಂತಾದ ಹಿಂಸಾತ್ಮಕ ಮತ್ತು ಅಪಾಯ ನಡವಳಿಕೆ ಬಹಳ ಗಂಭೀರ ಪರಿಣಾಮಗಳು ಎದುರಿಸಬೇಕಾಗುತ್ತದೆ. ಲೈಂಗಿಕ ದುರುಪಯೋಗಪಡಿಸಿಕೊಂಡ ಮಗು ಅವಮಾನ ಮತ್ತು ತಪ್ಪಿತಸ್ಥ ಭಾವನೆ ಕೀಳು ಆತ್ಮಗೌರವದ ಇಂತಹ ದುಷ್ಪರಿಣಾಮ ಗಳನ್ನುಗಳನ್ನಎದುರಿಸುತ್ತದೆ .
ಪೋಸ್ಕೋ ಇ ಬಾಕ್ಸ್ ಪ್ರವೇಶಿಸಲು, ಇಲ್ಲಿ ಕ್ಲಿಕ್ಕಿಸಿ
ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ(NCPCR) ದ ವೆಬ್ ಸೈಟ್ ನ ಮುಖಪುಟದಲ್ಲಿ ಎದ್ದುಕಾಣುವಂತೆ ( ಈ ಕೆಳಗೆ ಕಾಣಿಸಿದಂತೆ) ಅಳವಡಿಸಲಾಗಿದೆ. ಅದರಲ್ಲಿ ಬಳಕೆದಾರ ಸುಲಭವಾಗಿ ಲಭ್ಯವಿರುವ ಪೋಸ್ಕೋ ಇ-ಬಾಕ್ಸ್ ಎಂಬ ಬಟನ್ ಒತ್ತೆದರೆ ಸಾಕು.
ಹಂತ 1 ಇದು ಅನಿಮೇಷನ್ ಚಿತ್ರ ಹೊಂದಿರುವ ವಿಂಡೋ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ. ಅನಿಮೇಷನ್ ಚಿತ್ರದಲ್ಲಿ ಮಗುವಿಗೆ ಒಬ್ಬ ಸ್ನೇಹಿತನ ರೀತಿಯಲ್ಲಿ ವಿವರಣೆ ನೀಡಲಾಗುತ್ತದೆ ಅದರಿಂದ ಮಗುವಿಗೆ ಅದರಜೊತೆ ನಡೆದ ದೌಜನ್ಯಕ್ಕೆ ತಾನು ಕಾರಣ ವಲ್ಲ ತನ್ನಿಂದ ಆದ ತಪ್ಪು ಇದಲ್ಲ ಮುಂತಾದ ತಪ್ಪಿತಸ್ಥ ಭಾವನೆಯನ್ನು ಹೋಗಲಾಡಿಸುವ ರೀತಿ ಮತ್ತು NCPCR ತನ್ನ ಸಹಾಯ ಮಾಡುವ ಒಂದು ಸ್ನೇಹಿತ ಎಂದು ತಿಳಿಸಲಾಗುತ್ತದೆ.
ಹಂತ 2
ಬಳಕೆದಾರ ಪುಟದಲ್ಲಿ ಇರುವ ಬಾಣದ ಗುರುತನ್ನು ಒತ್ತಿದ ತಕ್ಷಣ ಅದು ಮುಂದಿನ ಪುಟಕ್ಕೆ ಕೊಂಡೊಯುತ್ತದೆ ಅದರಲ್ಲಿ ತೂರಿಬರುವ ಚಿತ್ರಗಳಲ್ಲಿ ಅವನು / ಅವಳು ಕನಿಷ್ಠ ಒಂದು ಚಿತ್ರವನ್ನು ಆಯ್ಕೆಮಾಡಬಹುದು ( ತನಗಾದ ಕಿರುಕುಳ ವರ್ಗ ಅನುಸರಿಸಿ)
ಹಂತ 3 :
ಲಭ್ಯವಿರುವ ಅರ್ಜಿನ್ನು ಭರ್ತಿ ಮಾಡಬೇಕು ಅದರಲ್ಲಿ ಮೊಬೈಲ್ ನಂಬರ್ , ಇ ಮೇಲ್ ಐ ಡಿ ಮತ್ತು ಒಳಗಾದ ದೌರ್ಜನ್ಯ ವನ್ನು ನಮೂದಿಸಿ 'ಸಬ್ ಮೀಟ್ ' ಬಟನ್ ಅನ್ನು ಒತ್ತಬೇಕು. ತಕ್ಷಣದಲ್ಲಿ ಆಟೋ ಜನರೇಟ್ ಆಗಿ ಒಂದು ಸ್ವಯಂರಚಿತ ದೂರುಸಂಖ್ಯೆ ತೂರಿಬರುವುದು
ಮಕ್ಕಳ ವಿರುದ್ಧ ಅಪರಾಧಗಳ ಬಗ್ಗೆ ಕಾಳಜಿ ರೀತಿಯಲ್ಲಿ
ಸರ್ಕಾರವು ಮಕ್ಕಳನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಅಪರಾಧಗಳಿಂದ
ರಕ್ಷಿಸಲು POCSO ಆಕ್ಟ್ 20012 ಅನ್ನು ಜಾರಿಗೆ ತಂದಿದೆ. ಪ್ರತಿ ಹಂತದಲ್ಲಿ ಮಗುವಿನ ಆಸಕ್ತಿ ಸಂರಕ್ಷಿಸುವ ಅಗತ್ಯವಿದ್ದ ಸಂದರ್ಭದಲ್ಲಿ ಗೊತ್ತುಪಡಿಸಿದ ವಿಶೇಷ ನ್ಯಾಯಾಲಯಗಳ ಮೂಲಕ ಸಾಕ್ಷಿ, ತನಿಖೆ ಮತ್ತು ಅಪರಾಧಗಳ ತ್ವರಿತ ವಿಚಾರಣೆಗಾಗಿ ರೆಕಾರ್ಡಿಂಗ್, ವರದಿ,ಮಕ್ಕಳ ಸ್ನೇಹಿ ನ್ಯಾಯಯುತ ಕಾರ್ಯಗಳನ್ನು ರೂಪಿಸುವಲ್ಲಿ ಕಟಿಬದ್ಧವಾಗಿದೆ
POCSO ಕಾಯಿದೆಯಡಿ ೧೮ ವರ್ಷದ ಒಳಗಿನ ಯಾವುದೇ ಮಾನವರನ್ನು ಬಾಲ್ಯದಲ್ಲಿರುವವರು ಗುರುತಿಸಲಾಗುವುದು
ಮೂಲ : ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಮಂಡಳಿ
ಕೊನೆಯ ಮಾರ್ಪಾಟು : 5/28/2020