অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಿಕ್ಷಕರು, ಬೋಧನೆ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಗಳು

ಶಿಕ್ಷಕನ ಪಾತ್ರ

ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯಿಂದಾಗಿ ಓರ್ವ ಶಿಕ್ಷಕನ ಪಾತ್ರವನ್ನು ಸುಗಮಗೊಳಿಸುವವನದಾಗಿ ಬದಲಾಯಿಸಿದ್ದರಿಂದ ತರಗತಿಯ ಕೊಠಡಿಯಲ್ಲಿ ಅವರಿಗೆ ನಾಯಕನಾಗಿರುವುದಕ್ಕೆ ಅಡ್ಡ ಬರುವುದಿಲ್ಲ.; ಸಾಂಪ್ರದಾಯಿಕ ನಾಯಕತ್ವ ಕೌಶಲ್ಯಗಳು ಮತ್ತು ಆಚರಣೆಗಳು ಈಗಲೂ ಮುಖ್ಯ (ಮುಖ್ಯವಾಗಿ ಪಾಠದ ಯೋಜನೆ, ತಯಾರಿ ಮತ್ತು ಮುನ್ನಡೆಯಲ್ಲಿ).

ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯ ಸಮಯದಲ್ಲಿ ಪಾಠದ ಯೋಜನೆ ನಿರ್ಣಾಯಕ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆ ಸಮಯದಲ್ಲಿ ಶಿಕ್ಷಕನ ಪಾಠ ಯೋಜನೆ ಬಹು ಮುಖ್ಯ; ಎಲ್ಲಿ ಕಡಿಮೆ ಯೋಜನೆ ಯಾಗಿದೆಯೋ; ವಿದ್ಯಾರ್ಥಿಯ ಕಾರ್ಯವೂ ಕೇಂದ್ರೀಕೃತವಾಗಿರುವುದಿಲ್ಲ ಫಲಿತಾಂಶದ ಪ್ರಮಾಣ ಕಡಿಮೆ ಯಾಗುವುದೆಂದು ಸಂಶೋಧನೆಯಿಂದ ತಿಳಿಬಂದಿದೆ.

ಬೋಧನ ಕಲೆ

ತಂತ್ರಜ್ಞಾನದ ಪರಿಚಯವೊಂದೆ ಕಲಿಕೆ ಮತ್ತು ಬೋಧನೆ ಪ್ರಕ್ರಿಯೆಯನ್ನು ಬದಲಾಯಿಸುವುದಿಲ್ಲ ಮಾಹಿತಿ ಸಂವಹನ ತಂತ್ರಜ್ಞಾನಗಳ ಅಸ್ತಿತ್ವ ಮಾತ್ರ ಶಿಕ್ಷಕ ಆಚರಣೆಗಳನ್ನು ಪರಿವರ್ತಿಸುವುದಿಲ್ಲ. ಆದರೆ, ಮಾಹಿತಿ ಸಂವಹನ ತಂತ್ರಜ್ಞಾನಗಳು ಶಿಕ್ಷಕರಿಗೆ ತಮ್ಮ ಶಿಕ್ಷಕ ಆಚರಣೆಗಳನ್ನು ಪರಿವರ್ತಿಸಿಕೊಳ್ಳಲು ಸಾಧ್ಯಗೊಳಿಸುತ್ತದೆ. ಶಿಕ್ಷಕರ ಬೋಧನ ಕಲೆಯ ವಿಧಾನಗಳು ಮತ್ತು ವಿಚಾರಗಳು ಅವರ ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆ ಹಾಗೂ ಇದರಿಂದಾಗುವ ವಿದ್ಯಾರ್ಥಿಗಳ ಸಾಧನೆಯ ಮೇಲೆ ಪ್ರಭಾವ ಬೀರುತ್ತದೆ.

ವಿದ್ಯಾರ್ಥಿ ಕೇಂದ್ರಿತ ಕಲಿಕಾ ಪರಿಸರವನ್ನು ಕಲ್ಪಿಸಲು ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಶಿಕ್ಷಕರಿಗೆ ಸಹಾಯಕ ಸಾಧನಗಳನ್ನಾಗಿ ನೋಡಲಾಗುತ್ತಿದೆ ಓರ್ವ ಶಿಕ್ಷಕನು, ಇಡಿ ತರಗತಿಯಲ್ಲೆ ಚರ್ಚೆ ಮೂಲಕ ಅಥವ ವೈಯುಕ್ತಿಕವಾಗಿಗಿ / ಸಣ್ಣ ಗುಂಪುಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ ಬಳಸಿ ಕಾರ್ಯ ಮಾಡುವ ಮೂಲಕ ವಿದ್ಯಾರ್ಥಿಯ ಗ್ರಹಿಕೆ ಮತ್ತು ಯೋಚನೆಗೆ ಸವಾಲು ಹಾಕುವನೋ , ಅಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಒ.ಈ.ಸಿ.ಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ರಾಷ್ಟ್ರಗಳಲ್ಲಿ ಸಂಶೋಧನೆಯ ಫಲಿತಾಂಶ ತೋರುತ್ತದೆ. ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಸಾಂಪ್ರದಾಯಿಕ ಶಿಕ್ಷಕ ಕೇಂದ್ರಿತ ಬೋಧನೆ ಶೈಲಿಯಿಂದ ಕಲಿಯುವವ ಕೇಂದ್ರಿತ ವಿಧಾನವನ್ನು ಬೆಂಬಲಿಸುವ ಮುಖ್ಯ ಸಾಧನ ಗಳೆಂದು ಪರಿಗಣಿಸಲಾಗುತ್ತಿದೆ.

ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಪ್ರಸ್ತುತ ಬೋಧನೆಯ ಆಚರಣೆಗಳನ್ನು ಬೆಂಬಲಿಸಲು/ವಿಸ್ತರಿಸಲು ಬಳಸುವುದು ಸಾಧ್ಯ.ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೊಂದಿಗೆ ಶಿಕ್ಷಕರ ಬೋಧನೆನಾ ಕಲೆಯ ಆಚರಣೆಗಳು ಕೇವಲ ಸಣ್ಣ ಪ್ರಮಾಣದಲ್ಲಿ ಸಹಕಾರಿಯಾಗಿದ್ದು, ಅವರ ಬೋಧನೆಯ ಶೈಲಿಯಲ್ಲಿ ಮೂಲ ಬದಲಾಣೆಗಾಗಿ ಮುಖ್ಯವಾಗಿ ಸಾಂಪ್ರದಾಯಿಕ ವಿಧಾನಗಳ ಬಳಕೆಯಾಗುತ್ತಿದೆ. ಚಾಲನೆಯಲ್ಲಿರುವ ಬೋಧನೆ ಶೈಲಿಗಳಲ್ಲಿ ಹಾಗೂ ಶಿಕ್ಷಕರ ಮತ್ತು ವಿದ್ಯಾರ್ಥಿಗ ನಡುವಿನ ಸಂವನದಲ್ಲಿ ವ ವಿಧಾನದ ಬದಲಾವಣೆ ತರುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನಗಳನ್ನು ಬಳಸಬಹುದು.

ಮಾಹಿತಿಯನ್ನು ಪ್ರಸ್ತುತ ಪಡಿಸಲು ಮಾಹಿತಿ ಸಂವಹನ ತಂತ್ರಜ್ಞಾನದ ಸಾಧನಗಳ ಬಳಕೆಯು ಸಂಮಿಶ್ರವಾಗಿತ ಪರಿಣಾಮಕಾರಿಯಾಗಿದೆ ಮಾಹಿತಿಯನ್ನು ಪ್ರಸ್ತುತ ಪಡಿಸುವ ಸಾಧನಗಳಾಗಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೂ (ಎಲ್.ಸಿ.ಡಿ ಮತ್ತು ಓವರ್ ಹೆಡ್ ಪ್ರೋಜೆಕ್ಟರ್ ಗಳು, ಟೆಲಿವಿಝನ್, ಎಲೆಕ್ಟ್ರಾನಿಕ್ ಬಿಳಿ ಹಲಗೆಗಳು, ವಿದ್ಯಾರ್ಥಿಗಳು ಗಣಕಯಂತ್ರ ಸ್ಕ್ರೀನ್ ಗಳ ಮೇಲೆ ಸಮಾನ ಸಂಪನ್ಮೂಲಗಳನ್ನು ವೀಕ್ಷಿಸುವ ಮಾರ್ಗದರ್ಶಿತ ವೆಬ್ ಪ್ರವಾಸಗಳು) ಮಿಶ್ರಿತವಾಗಿ ಪರಿಣಾಮಕಾರಿಯಾಗಿದೆ. ಇದು ತರಗತಿಯಲ್ಲಿನ ಅರ್ಥೈಸುವಿಕೆ ಮತ್ತು ಕಠಿನ ಪರಿಕಲ್ಪನೆಗಳ ಕುರಿತು ಚರ್ಚೆಯನ್ನು ಪ್ರೋತ್ಸಾಹಿಸುತ್ತದೆ (ಮುಖ್ಯವಾಗಿ ಅನುಕರಣೆಯ ಪ್ರದರ್ಶನದಿಂದ), ಮಾಹಿತಿ ಸಂವಹನ ತಂತ್ರಜ್ಞಾನಗಳ ಇಂತಹ ಬಳಕೆಯೂ ಸಾಂಪ್ರದಾಯಿಕ ಪೆಡಗಾಗಿಯ ಆಚರಣೆಗಳನ್ನು ಪುನಃ ಚಲಾಯಿಸುವುದಲ್ಲದೆ ಚರ್ಚಿಸುತ್ತಿರುವ ಅಥವ ಪ್ರದರ್ಶನಗೊಳ್ಳುತ್ತಿರುವ ಪರಿವಿಡಿಯ ಸಾಧನದಿಂದ ಗಮನವನ್ನು ಸೆಳೆಯುತ್ತದೆ.

ಶಿಕ್ಷಕರ ತಾಂತ್ರಿಕ ಸಾಮರ್ಥ್ಯಗಳು ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಗಳ ಅರಿವು

ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯ ಲಾಭವನ್ನು ಪಡೆಯಲು ಶಿಕ್ಷಕರನ್ನು ಸಿದ್ಧಗೊಳಿಸುವುದು ಬರಿ ತಾಂತ್ರಿಕ ಕೌಶಲ್ಯಗಳಿಂದ ಹೆಚ್ಚಿನದಾಗಿದೆ.ಬೋಧನೆಯಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಯಶಸ್ವಿ ಸಮಗ್ರೀಕರಣವೂ ಶಿಕ್ಷಕರ ತಾಂತ್ರಿಕ ಕೌಶಲ್ಯಗಳ ಆಧಿಪತ್ಯಕ್ಕೆ ಮಾತ್ರ ಪೂರ್ವಭಾವಿ ಷರತ್ತಲ್ಲ.

ಕೇವಲ ಒಂದು ತರಬೇತಿ ಸಾಲದ್ದು ಅತಿ ಸೂಕ್ತ ಸಂಪನ್ಮೂಲವನ್ನು ಆರಿಸಲು ಮತ್ತು ಅರ್ಹತೆ ನಿರ್ಧರಿಸಲು ಶಿಕ್ಷಕರಿಗೆ ಮಾಹಿತಿ ಸಂವಹನ ತಂತ್ರಜ್ಞಾನಗಳ ವ್ಯಾಪಕ ಮತ್ತು ನಿರಂತರ ಮಾಹಿತಿ ಬೇಕಾಗುತ್ತದೆ. ಆದರೆ ಮಾಹಿತಿ ಸಂವಹನ ತಂತ್ರಜ್ಞಾನಗಳ ತಾಂತ್ರಕ ಆಧಿಪತ್ಯಕ್ಕಿಂತ ಸೂಕ್ತ ಪೆಡಗಾಗಿ ಆಚರಣೆಗಳ ಅಭಿವೃದ್ಧಿಯೂ ಮುಖ್ಯವೆಂದು ಪರಿಗಣಿಸಲಾಗುತ್ತಿದೆ.

ಕೆಲವು ಶಿಕ್ಷಕರು ತಮ್ಮ ಬೋಧನೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಪರಿಣತಿ ಹೊಂದಿರುತ್ತಾರೆ ಓ.ಈ.ಸಿ.ಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ರಾಷ್ಟ್ರಗಳ ಅತಿ ಹೆಚ್ಚಾಗಿ ಮುಂದುವರೆದ ಶಾಲೆಗಳಲ್ಲೂ ಸಹ ಕೆಲವೇ ಕೆಲವು ಶಿಕ್ಷಕರಿಗೆ ಮಾತ್ರ ಮಾಹಿತಿ ಸಂವಹನ ತಂತ್ರಜ್ಞಾನದ ಸಾಧನಗಳ ಮತ್ತು ಸಂಪನ್ಮೂಲಗಳ ವ್ಯಾಪಕ ಮಾಹಿತಿವಿರುತ್ತದೆ.

ಓ.ಈ.ಸಿ.ಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ರಾಷ್ಟ್ರಗಳಲ್ಲಿ, ಗಣಕಯಂತ್ರ ಸಾಕ್ಷರತೆ ಪ್ರೋತ್ಸಾಹಕ್ಕಾಗಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೂ ಬೋಧನೆ ಮತ್ತು ಕಲಿಕೆಯ ಸಾದನಗಳಾಗಿ ಬಳಸುವುದು ಮುಖ್ಯ ಓ.ಈ.ಸಿ.ಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ರಾಷ್ಟ್ರಗಳ ಅನುಭವದಲ್ಲಿ ಪ್ರತಿನಿತ್ಯದ ಬೋಧನೆ ಮತ್ತು ಕಲಿಕೆ ಚಟುವಟಿಕೆಗಳಲ್ಲಿ ತಂತ್ರಜ್ಞಾದ ಬಳಕೆಯೂ ಗಣಕಯಂತ್ರ ತರಗತಿಗಳಿಗಿಂತ ಅತಿ ಮುಖ್ಯವೆಂದು ವ್ಯಕ್ತವಾಗುತ್ತದೆ. ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಕೌಶಲ್ಯಗಳ ಅಭಿವೃದ್ಧಿಗೆ ಪಾತ್ರವಿದ್ದು, ಇತರೆ ಬೋಧನೆ ಮತ್ತು ಕಲಿಕೆ ಆಚರಣೆಗಳನ್ನು ಪ್ರಚೋದಿಸಲು ಮುಖ್ಯ. ಅದರದ್ದೆ ಆದ ಮಹತ್ವ ಹೊಂದಿರುವುದಿಲ್ಲ. ವಿದ್ಯಾರ್ಥಿಗಳ ಮಾಹಿತಿ ಸಂವಹನ ತಂತ್ರಜ್ಞಾನ ಕುರಿತ ಕೌಶಲ್ಯಗಳ ಮತ್ತು ಅನುಭವದ ಉನ್ನತ ಶ್ರೇಣಿ ತೋರು ಶಾಲೆಗಳೆಂದರೆ ಹೆಚ್ಚಿನ ಗಣಕಯಂತ್ರ ಕೋರ್ಸ್ ಬೇಡಿಕೆಗಳು ಹೊಂದಿರುವ ಶಾಲೆಗಳಲ್ಲ ಬದಲಾಗಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಮತ್ತು ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯಲ್ಲಿ ನಿರಂತರವಾಗಿ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆ ಮಾಡುತ್ತಿರುವ ಶಾಲೆಗಳು.

ಶಿಕ್ಷಕರಿಗಿಂತ ವಿದ್ಯಾರ್ಥಿಗಳು ತಮ್ಮ ತಂತ್ರಜ್ಞಾನದ ಬಳಕೆಯಲ್ಲಿ ನುರಿತವರು ಓ.ಈ.ಸಿ.ಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ರಾಷ್ಟ್ರಗಳಲ್ಲಿ, ವಿದ್ಯಾರ್ಥಿಗಳ ಜ್ಞಾನ ಹಾಗೂ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆ ಮತ್ತು ಶಿಕ್ಷಕರ ಮಾಹಿತಿ ಸಂವಹನ ತಂತ್ರಜ್ಞಾನದ ಜ್ಞಾನ ಮತ್ತು ಬಳಕೆಯ ಸಾಮರ್ಥ್ಯದಲ್ಲಿ ಅತಿ ಹೆಚ್ಚಾದ ವ್ಯತ್ಯಾಸವನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳ ತಮ್ಮ ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯು ಶಿಕ್ಷಕನ ಕೌಶಲ್ಯದಿಂದ ಪ್ರಭಾವ ಬೀರುವುದೆಂದು ಇದರಿಂದ ತಿಳಿಯುತ್ತದೆ.

ಶಿಕ್ಷಕನಿಂದ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆ

ಶಿಕ್ಷಕರು ಸಾಮಾನ್ಯವಾಗಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೂ ಆಡಳಿತಾತ್ಮಕ ಕಾರ್ಯಗಳಲ್ಲಿ ಬಳಸುವರು (ಶಿಕ್ಷಕರು ಸಾಮಾನ್ಯವಾಗಿ ಮಾಹಿತಿ ಸಂವಹನ ತಂತ್ರಜ್ಞಾನವನ್ನು ದೈನಂದಿನ ಕೆಲಸ ಗಳಲ್ಲಿ ಬಳಸುವರು (ದಾಖಲೆಗಳನ್ನು ಇಡುವುದು, ಪಠ್ಯ ಯೋಜನೆ ಅಭಿವೃದ್ಧಿ, ಮಾಹಿತಿಯ ಪ್ರದರ್ಶನ, ಅಂತರ್ಜಾಲದಲ್ಲಿ ಮೂಲ ಮಾಹಿತಿ ಹುಡುಕಲು).

ಹೆಚ್ಚಿನ ತಿಳುವಳಿಕೆ ಇರುವ ಶಿಕ್ಷಕರು ಗಣಕಯಂತ್ರ ಸಹಾಯದ ಬೋಧನೆ ಮೇಲೆ ಹೆಚ್ಚಾಗಿ ಅವಲಂಬಿತರಾಗಿರುವುದಿಲ್ಲ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯಲ್ಲಿ ಹೆಚ್ಚಿನ ಜ್ಞಾನವುಳ್ಳ ಶಿಕ್ಷಕರು ಗಣಕಯಂತ್ರ ಸಹಾಯಕ ಬೋಧನೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ.

ಶಿಕ್ಷಕರ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆ ಅವರ ಸಾಮಾನ್ಯ ಬೋಧನೆ ಶೈಲಿಗಳ ಮೇಲೆ ಅವಲಂಬಿಸಿದೆ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯ ವಿಧಾನಗಳು ಶಿಕ್ಷಕರ ಶೈಕ್ಷಣಿಕ ಕಲೆಯ ತತ್ವಗಳೊಂದಿಗೆ ಪರಸ್ಪರ ಸಂಬಂಧಹೊಂದಿದೆ. ಹೆಚ್ಚಾಗಿ ಪರಿಣಾಮಕಾರಿಯಾಗಿ ಮಾಹಿತಿ ಸಂವಹಣ ತಂತ್ರಜ್ಞಾನಗಳನ್ನು ಬಳಸುವ ಶಿಕ್ಷಕರು ಪೆಡಗಾಗಿಯ ಸಾಂಪ್ರದಾಯಿಕ ಪ್ರಸರಣ ವಿಧಾನವನ್ನು ಬಳಸುವುದು ಕಡಿಮೆ. ಹೆಚ್ಚಿನ ವಿಧದ ಸಾಪ್ಟ್ ವೇರ್ ಬಳಸುವ ಶಿಕ್ಷಕರು ಹೆಚ್ಚಾದ ಪರಿಣಾಮಕಾರಿ ಶೈಕ್ಷಣಿಕ ಕಲೆಯ ಅಭ್ಯಾಸ ಮಾಡುತ್ತಾರೆ.

ಮಾಹಿತಿ ಸಂವಹನ ತಂತ್ರಜ್ಞಾನಗಳೊಂದಿಗಿನ ಬೋಧನೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಬೋಧನೆಗೆ ಮತ್ತು ಕಲಿಕೆಗೆ ಬೆಂಬಲಿಸುವ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯೂ ಶಿಕ್ಷಕರಿಗೆ ಶೈಕ್ಷಣಿಕ ಕಲೆಯ ತತ್ವಗಳನ್ನು ಹಾಗು ಕಾರ್ಯತಂತ್ರಗಳನ್ನು ಪರಿವರ್ತಿಸಲು ಮತ್ತು ಅವುಗಳನ್ನು ನಿರಂತರವಾಗಿ ಬಳಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಶಿಕ್ಷಕರ ಆತ್ಮವಿಶ್ವಾಸ ಮತ್ತು ಪ್ರೇರಣೆ

ಕೆಲ ಶಿಕ್ಷಕರು ಮಾಹಿತಿ ಸಂವಹನ ತಂತ್ರಜ್ಞಾನಗಳ ಭರವಸೆಯ ಕೆಲ ಶಿಕ್ಷಕರು ಮಾಹಿತಿ ಸಂವಹನ ತಂತ್ರಜ್ಞಾನ ಸಂಪನ್ಮೂಲಗಳ ಬಳಕೆಯಲ್ಲಿ ಭರವಸೆಯುಳ್ಳವರು, ಮತ್ತು ಭರವಸೆಯ ಕೊರತೆ ಬೋಧನಾ ವಿಧಾನದ ಮೇಲೆ ಪರಿಣಾಮ ಬೀರುತ್ತದೆ.

ಹಲವಾರು ಶಿಕ್ಷಕರು ಭಯದಿಂದ ಮಾಹಿತಿ ಸಂವಹನ ತಂತ್ರಜ್ಞಾನವನ್ನು ಬಳಸುವುದಿಲ್ಲ ಓ.ಈ.ಸಿ.ಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ರಾಷ್ಟ್ರಗಳಲ್ಲಿ ಈಗಲೂ ಸಹ ಹಲವಾರು ಶಿಕ್ಷಕರು ಮಾಹಿತಿ ಸಂವಹನ ತಂತ್ರಜ್ಞಾನದ ಬಳಸಲು ಹೆದರುವರು, ಹಾಗಾಗಿ ತಮ್ಮ ಬೋಧನೆಯಲ್ಲಿ ಬಲಸಲು ಹಿಂಜರಿಯುವರು.

ಮಾಹಿತಿ ಸಂವಹನ ತಂತ್ರಜ್ಞಾನಗಳು (ಕೆಲವು) ಶಿಕ್ಷಕರಿಗೆ ಪ್ರೇರಣೆ ನೀಡುತ್ತವೆ,ಕನಿಷ್ಠ ಆರಂಭದಲ್ಲಿ ಕನಿಷ್ಠ ಪ್ರಾರಂಭದಲ್ಲಿ, ಮಾಹಿತಿ ಸಂವಹನ ತಂತ್ರಜ್ಞಾನದ ತಿಳುವಳಿಕೆಯೂ ಪ್ರೇರೇಪಣೆಯ ಮುಖ್ಯ ಸಾಧನವಾಗಿದೆ. ಇದರಿಂದ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ಮತ್ತು ಸಶಕ್ತಗೊಳಿಸಲು . ಸಹಾಯವಾಗುತ್ತದೆ.

ವೃತ್ತಿಪರ ಅಭಿವೃದ್ಧಿ ಮುಂದುವರಿಸಲು ಪರಿಣಾಮಕಾರಿ ಶಿಕ್ಷಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಉತ್ತೇಜನಗಳನ್ನು ಅಭಿವೃದ್ಧಿಗೊಳಿಸಬೇಕು ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗವಹಿಸಲು ಶಿಕ್ಷಕರಿಗೆ ಹೆಚ್ಚಿನ ಪ್ರೇರಣೆ ಹಾಗೂ ಉತ್ತೇಜಕ ಸವಲತ್ತುಗಳು ಬೇಕಾಗುತ್ತದೆ. ಪ್ರಮಾಣ ಪತ್ರ, ವೃತ್ತಿಪರ ಪ್ರಗತಿ, ಸಂಬಳದಲ್ಲಿ ಹೆಚ್ಚಳ, ವೃತ್ತಿಪರ ಅಭಿವೃದ್ಧಿಯಲ್ಲಿ ಭಾಗವಹಿಸಲು ಸಂಬಳರಹಿತ ರಜೆ, ಶಾಲಾ ಹಾಗೂ ಸಮುದಾಯ ಮಟ್ಟದಲ್ಲಿ ಮತ್ತು ಸಹುದ್ಯೋಗಿಗಳೊಂದಿಗೆ ಔಪಚಾರಿಕ ಹಾಗೂ ಅನೌಪಚಾರಿಕ ಗುರುತಿಸುವಿಕೆ, ಕಡಿಮೆಗೊಳಿಸಿದ ಪ್ರತ್ಯೇಕೀಕರಣ, ಮತ್ತು ಉತ್ಪಾದನೆ ಯ ಹೆಚ್ಚಳ ಹಲವಾರು ಉತ್ತೇಜಕಗಳನ್ನು ಬಳಸಬಹುದು ಮಾಹಿತಿ ಸಂವಹಣ ತಂತ್ರಜ್ಞಾನಗಳ ಸುಲಭಗಮ್ಯತೆಯೂ ಶಿಕ್ಷಕರಿಂದ ಅವುಗಳ ಬಳಕೆಗಿಂತ ಮುಖ್ಯ ಅಂಶ ಶಿಕ್ಷಕರ ಮಾಹಿತಿ ಸಂವಹನ ತಂತ್ರಜ್ಞಾನ ಕುರಿತ ಕೌಶಲ್ಯಗಳ ಅಭಿವೃದ್ಧಿ ಮುಂದುವರೆಸಲು ಅವರಿಗೆ ಪ್ರಸಕ್ತ ಮಾಹಿತಿ ಸಂವಹನ ತಂತ್ರಜ್ಞಾನದ ಸಾಧನಗಳ ಕಾರ್ಯವಿಧಾನಗಳಿಗೆ ನಿರಂತರ ಲಭ್ಯತೆಯು ಅತಿ ಮುಖ್ಯ ಅಂಶ.

ವಿಷಯ ಜ್ಞಾನ

ಶಿಕ್ಷಕರ ವಿಷಯ ಜ್ಞಾನವು ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯ ಮೇಲೆ ಪ್ರಭಾವ ಬೀರುತ್ತದೆ ಪಾಠಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯೂ ವಿಷಯಗಳ ಮೇಲೆ ಶಿಕ್ಷಕರ ಅಧಿಪತ್ಯ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನದ ಸಂಪನ್ಮೂಲಗಳ ಬಳಕೆ ಹಾಗೂ ಅವರ ಸಂಬಂಧಗಳಿಂದ ಪ್ರಭಾವಗೊಳ್ಳುತ್ತದೆ.

ಶಿಕ್ಷಕರ ವಿಷಯದ ಪ್ರಾವಿಣ್ಯ ಮತ್ತು ವಿದ್ಯಾರ್ಥಿಯ ಗ್ರಹಿಕೆಯು ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯು ಪರಿಣಾಮಕಾರಿಯಾಗಿಸುತ್ತದೆ ಶಿಕ್ಷಕರು ತಮ್ಮ ವಿಷಯ ಜ್ಞಾನ ಮತ್ತು ವಿದ್ಯಾರ್ಥಿಗಳು ವಿಷಯವನ್ನು ಗ್ರಹಿಸುವ ವಿಧಾನವನ್ನು ಅರಿತುಕೊಂಡರೆ, ಅವರಿಂದ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯೂ ವಿದ್ಯಾರ್ಥಿಯ ಸಾಧನೆ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಾಕ್ಷಿಗಳು ತೋರಿಸುತ್ತವೆ.

ಮಾಹಿತಿ ಸಂವಹನ ತಂತ್ರಜ್ಞಾನಗಳ ಮೂಲಕ ಹೊಸ / ಹೆಚ್ಚುವರಿ ಮಾಹಿತಿಗೆ ಅನಾವರಣ ವಾದರೆ ಸಾಲದು ಹೊಸ ಮತ್ತು ಹೆಚ್ಚಿನ ಮಾಹಿತಿಗೆ ಅನಾವೃಣ ಗೊಳಿಸುವ ಬದಲು ವಿದ್ಯಾರ್ಥಿಗಳಿಗೆ ಯೋಚನೆ ಮಾಡಿ ತಮ್ಮ ಗ್ರಹಿಕೆಗಳನ್ನು ಕುರಿತು ಪ್ರಶ್ನೆ ಮಾಡಲು ಸವಾಲು ಒಡ್ಡಿದಾಗ ಮಾತ್ರ ಸಾಧನೆಯ ಪರಿಣಾಮವೂ ಅತ್ಯುನ್ನತವಾಗುವುದು.

ಮಾಹಿತಿ ಸಂವಹನ ತಂತ್ರಜ್ಞಾನಗಳು ಶಿಕ್ಷಕರಿಗೆ ವಿಷಯದ ಕುರಿತು ಸ್ವ-ಕಲಿಕೆಗೆ ಸಹಕಾರಿಯಾಗುತ್ತವೆ ನವೀಕರಿಸಿದ ಹಾಗೂ ಹೆಚ್ಚುವರಿ ಕಲಿಕಾ ಸಂಪನ್ಮೂಲಗಳ ಲಭ್ಯತೆಯಿಂದ ಶಿಕ್ಷಕರಿಗೆ ತಮ್ಮ ವಿಷಯದ ಕ್ಷೇತ್ರಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನವು ಸ್ವ-ಕಲಿಕೆ ಸಾಧ್ಯಗೊಳಿಸುತ್ತದೆ.

ಶಿಕ್ಷಕರ ವೃತ್ತಿಪರ ಅಭಿವೃದ್ಧಿ

ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಯಶಸ್ವಿ ಬಳಕೆಯೂ ಚಾಲನೆಯಲ್ಲಿರುವ ಶಿಕ್ಷಕರ ತರಬೇತಿ ಮತ್ತು ಬೆಂಬಲ ನಿರ್ಣಾಯಕ ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನಗಳ ಯಶಸ್ವಿ ಬಳಕೆಯನ್ನು ಶಿಕ್ಷಕರ ತರಬೇತಿ ಮತ್ತು ವೃತ್ತಿಪರ ಅಭಿವೃದ್ಧಿಯಲ್ಲಿ ಮುಖ್ಯ ಅಂಶವೆಂದು ಪರಿಗಣಿಸಲಾಗಿದೆ.

ಶಿಕ್ಷಕರ ವೃತ್ತಿಪರ ಅಭಿವೃದ್ಧಿಯೂ ಒಂದು ಪ್ರಕ್ರಿಯವಾಗಿದ್ದು ಒಂದು ಘಟನೆಯಲ್ಲ ಸಾಂಪ್ರದಾಯಿಕ ಒಂದುಸಲದ ಶಿಕ್ಷಕರ ತರಬೇತಿ ಕಾರ್ಯಾಗಾರಗಳು ಮಾಹಿತಿ ಸಂವಹನ ತಂತ್ರಜ್ಞಾನದ ಬಳೆಕೆಗೆ ಶಿಕ್ಷಕರಿಗೆ ತೃಪ್ತಿತರುವಷ್ಟು ಪರಿಣಾಮಕಾರಿಯಾಗಿಲ್ಲ.ಅವರ ಬೋಧನೆಯನ್ನು ಸಮಗ್ರಗೊಳಿಸುವದು ಹಾಗಿರಲಿ ಒಂದು ಸಲ ತರಬೇತಿ ಕಾರ್ಯಕ್ರಮಗಳು ಚಾಲನೆಯಲ್ಲಿರುವ ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳಿಗಿಂತ ಕಡಿಮೆ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಮಾಹಿತಿ ಸಂವಹನ ತಂತ್ರಜ್ಞಾನಗಳ ಪರಿಚಯವೂ ಶಿಕ್ಷಕರಿಗೆ ನಿರಂತರ ವೃತ್ತಿಪರ ಅಭಿವೃದ್ಧಿಯ ಆವಶ್ಯಕತೆಯನ್ನು ಹೆಚ್ಚಿಸುತ್ತದೆ ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯು ಶಿಕ್ಷಕರಿಗೆ ತರಬೇತಿಯ ಹಾಗೂ ವೃತ್ತಿಪರ ಅಭಿವೃದ್ಧಿಯ ಆವಶ್ಯಕತೆಯನ್ನು ಹೆಚ್ಚಿಸುತ್ತದೆ. ಅಧಿಕ ಮತ್ತು ಉತ್ತಮ ಶೈಕ್ಷಣಿಕ ವಿಷಯಜ್ಞಾನ ಲ್ಲಿ, ದೈನಂದಿನ ಆಡಳಿತಾತ್ಮಕ ಕಾರ್ಯಗಳಲ್ಲಿ, ಪರಿಣಾಮಕಾರಿ ಬೋಧನೆ ಆಚರಣೆಗಳ ಮಾದರಿಗಳನ್ನು ಮತ್ತು ಅನುಕರಣೆಗಳನ್ನು ನೀಡಿ ಕಲಿಯುವವನಿಗೆ ಮುಖಾ ಮುಖಿ ಮತ್ತು ದೂರ ಶಿಕ್ಷಣದ ವಾತಾವರಣಗಳಲ್ಲಿ ನೆಟ್ ವರ್ಕ್ ಗಳ ಬೆಂಬಲದ ಜೊತೆ ಲಭ್ಯತೆ ನೀಡುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನವೂ ಸಹಕಾರಿಯಾಗುತ್ತದೆ.

ಯಶಸ್ವಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಮಾದರಿಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದಾಗಿದೆ ಚಾಲನೆಯಲ್ಲಿರುವ ಯಶಸ್ವಿ ನಿರಂತರ ವೃತ್ತಿಪರ ಅಭಿವೃದ್ಧಿ ಮಾದರಿಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದಾಗಿದೆ:

  1. ಸೇವಾ ಪೂರ್ವ, ಪೆಡಗಾಗಿ ಕುರಿತು ಪ್ರಾರಂಭಿಕ ತಯಾರಿಯನ್ನು ಕೇಂದ್ರೀಕರಿಸುತ್ತ, ವಿಷಯದ ಮೇಲೆ ಹತೋಟಿತ್ಯ, ನಿರ್ವಹಣಾ ಕೌಶಲ್ಯಗಳು ಮತ್ತು ಹಲವು ಬೋಧನೆಯ ಸಾಧನಗಳ ಬಳಕೆ (ಮಾಹಿತಿ ಸಂವಹನ ತಂತ್ರಜ್ಞಾನಗಳು ಸೇರಿದಂತೆ);
  2. ಸೇವಾಂತರರ್ಗತ , ವ್ಯವಸ್ಥಿತವಾದದು ಸೇರಿದಂತೆ, ಮುಖಾ ಮುಖಿ ಮತ್ತು ದೂರಶಿಕ್ಷಣ ದ ಅವಕಾಶಗಳು ಸೇರಿದಂತೆ ಸೇವಾ ಪೂರ್ವ ತರಬೇತಿಯನ್ನು ನಿರ್ಮಿಸಲು ಮತ್ತು ಶಿಕ್ಷಕರ ಆವಶ್ಯತೆಗಳಿಗೆ ನೇರವಾಗಿ ಸಂಬಂಧಿಸಿದಂತೆ; ಮತ್ತು
  3. ನಿರಂತರ ಔಪಚಾರಿಕ ಮತ್ತು ಅನೌಪಚಾರಿಕ ಬೋಧನ ಕಲೆ ಮತ್ತು ತಾಂತ್ರಿಕ ನೆರವು, ಮಾಹಿತಿ ಸಂವಹನ ತಂತ್ರಜ್ಞಾನದಿಂದ ಸಾಧ್ಯಗೊಂಡು ಶಿಕ್ಷಕರಿಗೆ ದಿನನಿತ್ಯದ ಆವಶ್ಯಕತೆಗಳನ್ನು ಮತ್ತು ಸವಾಲುಗಳನ್ನು ಕೇಂದ್ರೀಕರಿಸುತ್ತದೆ ಪರಿಣಾಮಕಾರಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯೂ ಪರಿಣಾಮಕಾರಿ ಬೋಧನೆಯ ರೂಢಿಗಳಿಗೆ ಮಾದರಿಯಾಗ ಬೇಕು ಪರಿಣಾಮಕಾರಿ ಶಿಕ್ಷಕ ವೃತ್ತಿಪರ ಅಭಿವೃದ್ಧಿಯೂ ಸಾಧ್ಯವಾದಷ್ಟು ತರಗತಿಯ ವಾತಾವರಣಕ್ಕೆ ಹೊಂದಿಕೊಳ್ಳ ಬೇಕು. ಬೋಧನೆಯ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ ಮುಖ್ಯ ಅಂಶಗಳಾದಲ್ಲಿ, ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆ ಕುರಿತು ತುಸು ಶಿಕ್ಷಣ ಬೇಕಾಗುತ್ತದೆ. ಜೊತೆಗೆ, ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳು ಪರಿಣಾಮಕಾರಿ ರೂಢಿಗಳಿಗೆ ಮತ್ತು ವರ್ತನೆಗೆ ಮಾದರಿಯಾಗಿ ಶಿಕ್ಷಕರ ನಡುವೆ ಸಹಯೋಗ ವರ್ಧಿಸಬೇಕು. ನಿರಂತರ ಮಾಹಿತಿ ಸಂವಹನ ತಂತ್ರಜ್ಞಾನಗಳ ಸೌಲಭ್ಯಗಳನ್ನು ಬಳಸಿಕೊಂಡು ಶಾಲಾ ಮಟ್ಟದ ವೃತ್ತಿ ಪರ ಅಭಿವೃದ್ಧಿಯನ್ನು ಯಶಸ್ಸಿಗೆ, ಮುಖ್ಯವಾಗಿ ಶಿಕ್ಷಕರ ಪ್ರತಿದಿನದ ಆವಶ್ಯಕತೆಗಳಿಗೆ ಮತ್ತು ಆಚರಣೆಗಳಿಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಮತ್ತು ಕೌಶಲ್ಯಗಳನ್ನು ಕೇಂದ್ರೀಕರಿಸುವುದೆ , ಮುಖ್ಯ ಅಂಶವಾಗಿ ಪರಿಗಣಿಸಲಾಗಿದೆ.

ಮೌಲ್ಯಮಾಪನ ವಿಧಾನಗಳಲ್ಲಿ ತರಬೇತಿ ಮುಖ್ಯ ವೃತ್ತಿಪರ ಅಭಿವೃದ್ಧಿಯೂ ಮೌಲ್ಯಮಾಪನ ಮಾಡುವ ವಿಧಾನಗಳಿಂದ ಮತ್ತು ಬೋಧನ ಕಲೆಯ ಆಚರಣೆಗಳನ್ನು ಪರಿವರ್ತಿಸುವ ಮತ್ತು ಶಿಕ್ಷಕರಿಗೆ ಹಲವಾರು ನಿರ್ಧಾರಣೆ ವಿಧಾನಗಳನ್ನು ತೋರುವ ಕ್ರಮಗಳನ್ನು ಹೊಂದಿರಬೇಕು.

ಪರಿಣಾಮಕಾರಿ ವೃತ್ತಿಪರ ಅಭಿವೃದ್ಧಿಗೆ ವಾಸ್ತವಿಕ ಯೋಜನೆ ಬೇಕಾಗುತ್ತದೆ ವೃತ್ತಿಪರ ಅಭಿವೃದ್ಧಿಯು ಶಿಕ್ಷಕರ ಆವಶ್ಯಕತೆಗಳಿಗೆ ಅನುಗುಣವಾಗಲು ಮತ್ತು ಪರಿಣಾಮಕಾರಿಯಾಗಲು, ಆವಶ್ಯಕತೆಗಳ ಮೌಲ್ಯಮಾಪನವು ಶಿಕ್ಷಕ ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಹಾಗೂ ಭಾಗವಹಿಸುವಿಕೆಯೊಂದಿಗೆ ಮುಂದುವರೆಯ ಬೇಕು. ಈ ಚಟುವಟಿಕೆಗಳಲ್ಲಿ ನಿಯಮಿತ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನೆ ಒಂಗೊಂಡಿದ್ದು, ಅಭಿಪ್ರಾಯಗಳ ಕುಣಿಕೆಗಳನ್ನು ಗುರುತಿಸ ಬೇಕು.

ಶಿಕ್ಷಕರಿಗೆ ನಿರಂತರ ಮತ್ತು ನಿಯಮಿತ ಬೆಂಬಲ ಅತ್ಯಾವಶಕ ಶಿಕ್ಷಕರ ವೃತ್ತಿ ಪರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ನಿರಂತರ ಹಾಗು ನಿಯಮಿತ ಬೆಂಬಲ ಅತಿ ಮುಖ್ಯ. ಇದನ್ನು ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯಿಂದ ವ್ಯವಸ್ಥಿತಗೊಳಿಸಬಹುದು (ವೆಬ್ ಸೈಟ್ಸ್, ಚರ್ಚಾ ಗುಂಪುಗಳು, ಈ-ಮೇಲ್ ಸಮುದಾಯಗಳು, ರೇಡಿಯೋ ಅಥವ ಟೆಲಿವಿಜ ನ್ ಪ್ರಸರಣಗಳ ಮೂಲಕ).

ಸಾಧ್ಯಗೊಳಿಸುವ ಅಂಶಗಳು

ಶಿಕ್ಷಕರಿಂದ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯ ಲಾಭವನ್ನು ಪಡೆಯಲು ಹಲವಾರು ಬದಲಾವಣೆಗಳನ್ನು ಅನುಷ್ಠಾನಗೊಳಿಸಬೇಕು ಬೋಧನ ಕಲೆಗಳ ಪರಿವರ್ತನೆ, ಪಠ್ಯಕ್ರಮ ಮತ್ತು ನಿರ್ಧರಣೆಗಳನ ಪುನರ್ರೂಪಣೆ, ಹಾಗೂ ಶಾಲೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದರಿಂದ ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯ ಲಾಭಗಳನ್ನು ಪಡೆಯಬಹುದು. ಬೇಕಾಗುವಷ್ಟು ಸಾಧ್ಯಗೊಳಿಸುವ ಅಂಶಗಳನ್ನು ಪರಿಗಣಿಸಿ ಶಿಕ್ಷಕರು ಮಾಹಿತಿ ಸಂವಹನ ತಂತ್ರಜ್ಞಾನವನ್ನು ತಮ್ಮ ಬೋಧನ ಕಲೆಯ ತತ್ವಗಳ ಆಧಾರದ ಮೇಲೆ ಪರಿಣಾಮಕಾರಿಯಾಗಿ ಬಳಸಬಹುದು,

ಕಾರ್ಯನಿರತ ತಾಂತ್ರಿಕ ಮೂಲಭೂತ ಸೌಕರ್ಯ (ಸ್ಪಷ್ಟವಾಗಿ)ಶಿಕ್ಷಕರಿಗೆ ಕಾರ್ಯನಿರತ ಗಣಕಯಂತ್ರಗಳ ಸೂಕ್ತ ಲಭ್ಯತೆಯಿರಬೇಕು , ಸಮರ್ಪಕ ತಾಂತ್ರಿಕ ನೇರವು ನೀಡಬೇಕಾಗುತ್ತದೆ. ಇದರಿಂದ ಅವರು ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮಾಡುತ್ತಾರೆ.

ಮಾಹಿತಿ ಸಂವಹನ ತಂತ್ರಜ್ಞಾನಗಳ ಪರಿಚಯ ಸಮಯ ತೆಗೆದುಕೊಳ್ಳುತ್ತದೆ ಮಾಹಿತಿ ಸಂವಹನ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆಗಾಗಿ ಶಿಕ್ಷಕರಿಗೆ ಹೊಸ ಕೌಶಲ್ಯಗಳನ್ನು ಅಬಿವೃದ್ಧಿಸಿಕೊಳ್ಳು, ಅವರ ಪ್ರಸ್ತುವ ಬೋಧನೆಯ ಆಚರಣೆಗಳನ್ನು ಸಮನ್ವಯಗೊಳಿಸಲು ಮತ್ತು ಅಧಿಕವಾಗಿ ಬೇಕಾಗುವ ಪಾಠದ ಯೋಜನೆ ತಯಾರಿಸಲು ಸಾಕಾಗುವಷ್ಟು ಸಮಯ ನೀಡಬೇಕಾಗುತ್ತದೆ.

ಸಮುದಾಯದಿಂದ ಮತ್ತು ಶಾಲಾ ಆಡಳಿತದಿಂದ ಬೆಂಬಲ ಮುಖ್ಯ ಶಿಕ್ಷಕರಿಂದ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಮತ್ತು ಕೆಲವೊಂದು ಪ್ರಕರಣಗಳಲ್ಲಿ ಸುತ್ತಮುತ್ತಲಿನ ಸಮುದಾಯದಿಂದ ಸಹಕಾರ ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿ ಎರಡೂ ಗುಂಪುಗಳನ್ನು ತಲುಪಲು ಮತ್ತು ಶಿಕ್ಷಣದ ಬೆಂಬಲಕ್ಕಾಗಿ ಮಾಹಿತಿ ಸಂವಹನ ತಂತ್ರಜ್ಞಾನಗಳಲ್ಲಿ ಬಂಡವಾಳ ಹೂಡಿಕೆಯೂ ಮುಖ್ಯವಾಗುತ್ತದೆ.

ಶಿಕ್ಷಕ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಆಚರಣೆಗಳ ಸಮುದಾಯಗಳು ಮುಖ್ಯ ಸಾಧನಗಳು ಶಿಕ್ಷಣ ಕಾರ್ಯಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನವನ್ನು ಬೆಂಬಲಿಸಲು ಔಪಚಾರಿಕ ಮತ್ತು ಅನೌಪಚಾರಿಕ ಸಮುದಾಯಗಳ ಮತ್ತು ಸಮಾನರ ನೆಟ್ ವರ್ಕ್ ಗಳ ಇರುವಿಕೆಯು ಮುಖ್ಯವಾಗುತ್ತೆದೆ. ಇಂತಹ ಬೆಂಬಲಗಳನ್ನು ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯಿಂದ ವ್ಯವಸ್ಥಿತಗೊಳಿಸಬಹುದಾಗಿದೆ.

ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಚಯದಿಂದ ಕಲಿತ ಪಾಠಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಚಯವೂ ದೊಡ್ಡ ಮಟ್ಟದ ಬದಲಾವಣೆ ಅಥವ ಸರಿಪಡಿಸುವ ಪ್ರಕ್ರಿಯೆಯ ಭಾಗವಾಗಿರುವುದರಿಂದ, ಮಾಹಿತಿ ಸಂವಹನ ತಂತ್ರಜ್ಞಾನಗಳ ಯಶಸ್ವಿ ಬಳಕೆಯನ್ನು ಪ್ರೋತ್ಸಾಹಿಸಿ ಹಂಚಿಕೊಳ್ಳಬೇಕಾಗುತ್ತದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate