ಒಂದಕ್ಕಿಂತ ಹೆಚ್ಚು ವಿಧದ ಕಲಿಕೆಗಳಿವೆ. ಬೆಂಜಮಿನ್ ಬ್ಲೂಮನ ನೇತೃತ್ವದಲ್ಲಿ ಕಾಲೇಜುಗಳ ಸಮಿತಿಯು (1956), ಮೂರು ಕಲಿಕಾ ಚಟುವಟಿಕೆಗಳ ಕ್ಷೆತ್ರಗಳನ್ನು ಗುರುತಿಸಿದೆ.
ಉನ್ನತ ಶಿಕ್ಷಣವು ಸೈಕೋ ಮೋಟಾರ್ ಕಾರ್ಯ ನಿರ್ವಹಿಸುವುದರಿಂದ ಆ ಪದಗಳು ನಾವು ಸಾಮಾನ್ಯವಾಗಿ ಬಳಸುವುದಕ್ಕಿಂತ ಬಹಳ ಗುರುತರವಾಗಿ ಕಾಣುತ್ತವೆ. ಕ್ಷೇತ್ರಗಳನ್ನು ಗುಂಪು ಎಂದೂ ಪರಿಗಣಿಸಬಹುದು. ತರಬೇತಿದಾರರು ಈ ಕ್ಷೇತ್ರಗಳನ್ನು (ಜ್ಞಾನ, ಕೌಶಲ್ಯ, ಮನೋಭಾವ) ಎಂದು ವಿಂಗಡಿಸಿದ್ದಾರೆ. ಈ ಕಲಿಕಾ ವರ್ತನೆಗಳ ವರ್ಗೀಕರಣವನ್ನು “ ತರಬೇತಿ ಪ್ರಕ್ರಿಯೆಯ ಗುರಿಗಳು” ಎಂದು ಭಾವಿಸಬಹುದು. ಅಂದರೆ ತರಬೇತಿಯ ಅವಧಿ ಮುಗಿದ ನಂತರ ಕಲಿಯಲು ಬಂದಿರುವವರು ಹೊಸ ಕೌಶಲ್ಯಗಳು, ಜ್ಞಾನ ಮತ್ತು ಮನೋಭಾವವನ್ನು ಪಡೆದಿರಬೇಕು. ಸಮಿತಿ
ಯು ಸುಧೀರ್ಘವಾಗಿ ಯೋಚನಾ ಮತ್ತು ಭಾವನಾ ಕ್ಷೇತ್ರಗಳ ಸಂಕಲನ ಮಾಡಿದೆ ಮತ್ತು ಸೈಕೋಮೋಟಾರು ಕ್ಷೇತ್ರದಲ್ಲಿ ಏನನ್ನೂ ಮಾಡಿಲ್ಲ. ಅದಕ್ಕೆ ಅವರ ವಿವರಣೆ ಏನೆಂದರೆ ಈ ಕಣ್ತಪ್ಪಿಗೆ ಕಾರಣ ಅವರಿಗೆ ದೈಹಿಕ ಕೌಶಲ್ಯಗಳನ್ನು ಕಲಿಸಲು ಕಾಲೇಜಿನ ಹಂತದಲ್ಲಿ ಅನುಭವ ಇಲ್ಲದೆ ಇರುವುದು.
ಸಂಕಲನವು ಮೂರೂ ಕ್ಷೇತ್ರಗಳನ್ನು ಉಪ ವಿಭಾಗಗಳಾಗಿ ವಿಂಗಡಿಸಿದೆ. ತುಂಬ ಸರಳ ವರ್ತನೆಯಿಂದ ಹಿಡಿದು ಅತಿ ಸಂಕೀರ್ಣ ವರ್ತನೆಯವರೆಗೆ ವಿಭಾಗ ಮಾಡಲಾಗಿದೆ. ಈ ರೀತಿಯಾದ ವಿಭಾಗಗಳು ಅಂತಿಮವಲ್ಲ. ಶಿಕ್ಷಣ ಮತ್ತು ತರಬೇತಿ ಜಗತ್ತಿನಲ್ಲಿ ಇನ್ನಿತರ ವ್ಯವಸ್ಥೆಗಳು ಅಥವ ಶ್ರೇಣಿಗಳನ್ನು ಸಹಾ ರೂಪಿಸಲಾಗಿದೆ. ಆದಾಗ್ಯೂ ಬ್ಲೂಮನ ವರ್ಗೀಕರಣವು ಈಗಲೂ ಸುಲಭವಾಗಿ ಅರ್ಥಮಾಡಿ ಕೊಳ್ಳಬಹುದಾಗಿದೆ ಮತ್ತು ಹೆಚ್ಚಾಗಿ ಅನ್ವಯವಾಗುವುದರಿಂದ ಉಪಯೋಗದಲ್ಲಿದೆ
ಯೋಚನಾ ಕ್ಷೇತ್ರವು ( ಬ್ಲೂಮ್,1956) ಜ್ಞಾನ ಮತ್ತು ಬೌದ್ಧಿಕ ಕೌಶಲ್ಯಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಇದು ನಿರ್ದಿಷ್ಟ ಅಂಶಗಳನ್ನು ನೆನಪು ಮಾಡಿಕೊಳ್ಳುವುದು ಅಥವ ಗುರುತು ಹಿಡಿಯುವುದು, ಪ್ರಕ್ರಿಯೆಗಳ ಮಾದರಿ ಮತ್ತು ಬೌದ್ಧಿಕ ಸಾಮರ್ಥ್ಯಗಳ ಮತ್ತು ಕೌಶಲ್ಯಗಳ ಅಭಿವೃದ್ಧಿಗೆ ಅನುವಾಗುವ ತತ್ವವಾಗಿದೆ. ಇಲ್ಲಿ ಆರು ಪೂರಕವಾದ ಗುಂಪುಗಳು ಇವೆ. ಅವುಗಳನ್ನು ಕ್ರಮವಾಗಿ ಕೆಳಗೆ ಪಟ್ಟಿ ಮಾಡಿದೆ. ತುಂಬ ಸರಳವಾದ ವರ್ತನೆಯಿಂದ ಪ್ರಾರಂಭಮಾಡಿ ಅತ್ಯಂತ ಸಂಕೀರ್ಣ ವರ್ತನೆಯವರೆಗೆ ಜೋಡಿಸಲಾಗಿದೆ. ಈ ಗುಂಪಗಳನ್ನು ಕಠಿನತೆಯ ಮಟ್ಟದ ಆಧಾರದ ಮೇಲೆ ಮಾಡಲಾಗಿದೆ. ಅಂದರೆ ಮೊದಲನೆಯದನ್ನು ಪೂರ್ಣ ಕಲಿತ ಮೇಲೆಯೇ ಮುಂದಿನದಕ್ಕೆ ಹೋಗಬೇಕು.
ಭಾವನಾ ಕ್ಷೇತ್ರವು (ಕ್ರಾತ್ವ್ಹೊಲ್, ಬ್ಲೂಮ್, ಮಸಿಯಾ, 1973) ನಾವು ಭಾವನಾತ್ಮಕ ವಸ್ತುಗಳ ವಿಷಯದಲ್ಲಿ ವರ್ತಿಸುವ ವೀಧಾನವನ್ನು ಒಳಗೊಂಡಿರುವವು ಉದಾಹರಣೆ: ಭಾವಗಳು, ಮೌಲ್ಯಗಳು, ಮೆಚ್ಚಿಗೆ, ಉತ್ಸಾಹ,ಸ್ಪೂರ್ತಿ ಮತ್ತು ಮನೋಭಾವ. ಐದು ಪ್ರಮುಖ ವರ್ಗಗಳನ್ನು ಅತ ಸರಳದಿಂದ ಅತಿ ಸಂಕೀರ್ಣ ವರ್ತನೆಗಳವರೆಗೆ ಪಟ್ಟಿ ಮಾಡಿರುವನು.
ಸೈಕೋಮೋಟಾರ್ ಕ್ಷೇತ್ರ (ಸಿಂಪ್ಸನ್, 1972) ದೈಹಿಕ ಚಲನೆ, ಸಮನ್ವಯ ಮತ್ತು ಚಲನಾ ಕೌಶಲ್ಯ ಕ್ಷೇತ್ರದ ಬಳಕೆಯನ್ನು ಒಳಗೊಂಡಿದೆ. ಈ ಕೌಶಲ್ಯಗಳ ಅಭಿವೃದ್ಧಿಯು ಅಭ್ಯಾಸವನ್ನು ಅವಲಂಬಿಸಿದೆ ಮತ್ತು ವೇಗ, ನಿಖರತೆ, ಅಂತರ, ಪ್ರಕ್ರಿಯೆ ಅಥವ ಅನುಷ್ಠಾನದ ತಂತ್ರಗಳ ಮೂಲಕ ಅಳಿಯಲಾಗುವುದು. ಏಳು ಪ್ರಮುಖ ಗುಂಪುಗಳನ್ನು ಕೆಳಗೆ ಸರಳತೆಯಿಂದ ಸಂಕೀರ್ಣತೆಯವರೆಗೆ ಕ್ರಮವಾಗಿ ಪಟ್ಟಿಮಾಡಲಾಗಿದ:
|
ಈ ಹಿಂದೆಯೆ ಹೇಳಿದಂತೆ, ಸಮಿತಿಯು ಸೈಕೊ ಮೋಟಾರ್ ಕ್ಷೇತ್ರದ ಮಾದರಿ ಬಗ್ಗೆ ಸಂಕಲಿಸಲಿಲ್ಲ ಇತರರು ಮಾಡಿದ್ದಾರೆ. ಮೇಲೆ ಚರ್ಚೆ ಮಾಡಿರುವುದು ಸಿಂಪ್ಸನ್ (1972)ಅವರದು. ಅದಲ್ಲದೆ ಇನ್ನೂ ಎರಡು ಜನಪ್ರಿಯ ಅವೃತ್ತಿಗಳಿವೆ ಡೇವನ(1975):
ಸ್ವಂತ ಕೃತಿಯನ್ನು ಕಲಿತು ರಚಿಸುವುದು.
ಹಾರೋನ(1972):
ಲೋರಿನ್ ಆಂಡರಸನ್, ಬ್ಲೂಮನ ಮಾಜಿ ವಿದ್ಯಾರ್ಥಿ, ಇವನು ತೊಂಬತ್ತರ ದಶಕದ ಮಧ್ಯದಲ್ಲಿ ಕಲಿಕೆಯ ವರ್ಗೀಕರಣದಲ್ಲಿನ ಜ್ಞಾನ ಕ್ಷೇತ್ರವನ್ನು ಪುನಃ ಪರಿಶೀಲಿಸಿದ. ಮತ್ತು ಕೆಲವು ಬದಲಾವಣೆ ಮಾಡಿದ. ಅದರಲ್ಲಿ ಬಹುಶಃ ಅತಿ ಮುಖ್ಯವಾದವುಗಳು, 1) ಆರು ಗುಂಪುಗಳ ಹೆಸರನ್ನು ನಾಮವಾಚಕದಿಂದ ಕ್ರಿಯಾವಾಚಕಗಳಿಗೆ ಬದಲಾಯಿಸಿದ್ದು ಮತ್ತು 2) ಅವುಗಳನ್ನು ತುಸು ಮರು ಜೋಡನೆ ಮಾಡಿದ್ದು
ಈ ಹೊಸ ವರ್ಗೀಕರಣವು ಹೆಚ್ಚು ಕ್ರಿಯಾಶೀಲ ಆಲೋಚನಾಶಕ್ತಿಯನ್ನು ಪ್ರತಿಫಲಿಸುವುದು ಮತ್ತು ಬಹುಶಃ ಹೆಚ್ಚು ನಿಖರವಾಗಿದೆ :
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/24/2020