ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡುವಲ್ಲಿ ನಿಮ್ಮಶಾಲೆಗೆ ಸರಿ ಹೊಂದುವ ತಂತ್ರಜ್ಞಾನ ಉಪಕರಣದ ಆಯ್ಕೆಯು ನೀವು ತೆಗೆದುಕೊಳ್ಳುವ ಪ್ರಮುಖ ಹೆಜ್ಜೆಯಾಗಿದೆ. ಈ ವಿಭಾಗವು ನೀವು ಬಳಸಬಹುದಾದ ತಂತ್ರಜ್ಞಾನಗಳ ಮಾಹಿತಿಯನ್ನು ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ವನ್ನು ಶಿಕ್ಷಣದಲ್ಲಿ ಉಪಯೋಗಿಸುವಾಗ ಎದುರಾಗುವ ಸವಾಲುಗಳನ್ನು ಕುರಿತು ತಿಳಿಸುವುದು.
ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ), ಈ ಶಬ್ದ ವು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಂಕ್ಷಿಪ್ತ ರೂಪ. ಇದು ಮಾಹಿತಿಯನ್ನು ವಿದ್ಯುನ್ಮಾನದ ಮೂಲಕ ಪ್ರಸರಿಸಲು, ಸಂಗ್ರಹಿಸಲು, ನಿರ್ಮಿಸಲು, ಹಂಚಲು ಮತ್ತು ವಿನಿಮಯ ಮಾಡಿಕೊಳ್ಳವ ತಂತ್ರಜ್ಞಾನದ ರೂಪಗಳನ್ನು ಸೂಚಿಸುವುದು. ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ದ ಈ ಸ್ಥೂಲ ನಿರೂಪಣೆಯು, ರೆಡಿಯೋ, ಟೆಲಿವಿಷನ್, ವಿಡಿಯೋ, ಡಿವಿಡಿ, ದೂರವಾಣಿ (ಸ್ಥಿರ ಮತ್ತು ಮೊಬೈಲು ಎರಡೂ), ಉಪಗ್ರಹ ವ್ಯವಸ್ಥೆಗಳು. ಕಾಂಪ್ಯೂಟರ್ ಮತ್ತು ಅಂತರ್ ಜಾಲ, ಸಾಫ್ಟ ವೇರ್ ಹಾಗೂ ಹಾರ್ಡವೆರ್ ಗಳನ್ನು ಒಳಗೊಂಡಿದೆ. ಇದಲ್ಲದೆ ಇದಕ್ಕೆ ಸಂಬಂಧಿಸಿದ ಉಪಕರಣಗಳು ಮತ್ತು ತಂತ್ರಜ್ಞಾನಗಳಾದ ವಾಯ್ಸ ಕಾನ್ ಫರೆನ್ಸ , ಈ- ಮೇಲ್ ಮತ್ತು ಬ್ಲಾಗುಗಳನ್ನು ಸಹ ಹೊಂದಿರುವುದು. ಈ” ಮಾಹಿತಿ ಯುಗದ ಶೈಕ್ಷಣಿಕ ಉದ್ದೇಶಗಳನ್ನು ಗಮನಿಸಿ ಹೊಸ ಮಾದರಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು (ಐಸಿಟಿ) ಶಿಕ್ಷಣದಲ್ಲಿ ಅಳವಡಿಸಬೇಕಿದೆ. ಇದನ್ನು ಪರಿಣಾಮಕಾರಿಯಾಗಿ ಸಾಧಿಸಲು ಶೈಕ್ಷಣಿಕ ಯೋಜಕರು, ಪ್ರಾಂಶುಪಾಲರುಗಳು, ಶಿಕ್ಷಕರು ಮತ್ತು ತಂತ್ರಜ್ಞಾನ ಪರಿಣಿತರು ಅನೇಕ ರಂಗಗಳಲ್ಲಿ ಅಂದರೆ ತಂತ್ರಜ್ಞಾನ, ತರಬೇತಿ, ಆರ್ಥಿಕ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ದೃಢ ನಿರ್ಧಾರ ತೆಗೆದು ಕೊಳ್ಳಬೇಕಿದೆ. ಅನೇಕರಿಗೆ ಇದು ಹೊಸ ಭಾಷೆಯನ್ನು ಕಲಿಯುವುದಷ್ಟೆ ಅಲ್ಲ , ಹೊಸ ಭಾಷೆಯಲ್ಲಿ ಬೋಧಿಸಲು ಕಲಿಯ ಬೇಕಾಗಿರುವಷ್ಟು ಸಂಕೀರ್ಣವಾಗಿದೆ. ಈ ವಿಭಾಗವು ಆ ಉಪಕರಣಗಳ ಮೇಲೆಯೇ ದೃಷ್ಟಿಯನ್ನು ಕೇಂದ್ರೀಕರಿಸಿದೆ. ರಾಷ್ಟ್ರಗಳನ್ನು ಸೇರಿಸುವ ಉಪಗ್ರಹದಿಂದ ಹಿಡಿದು ತರಗತಿಯಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡುವ ಯಂತ್ರಗಳವರೆಗೆ ಇದರ ವ್ಯಾಪ್ತಿ ಇದೆ. ಇದು ಶಿಕ್ಷಣ ನೀಡುವ, ಶಿಕ್ಷಣ ನೀತಿ ನಿರೂಪಿಸುವ, ಪಠ್ಯ ಕ್ರಮ ಅಭಿವೃದ್ಧಿಪಡಿಸುವ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ದ ಉಪಕರಣಗಳು, ಪಾರಿಭಾಷಿಕಗಳು ಮತ್ತು ಸಿಸ್ಟಮ್ ಗಳ ಗೋಜಲಿನಿಂದ ಹೊರ ಬರಲಾರದ ಇತರ ಅನೇಕರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ.
ಸಾಮಾನ್ಯವಾಗಿ ಹೇಳಬೇಕೆಂದರೆ ಶಿಕ್ಷಣ ನೀಡುವವರು, ನೀತಿ ನಿರೂಪಕರು , ಸಂಶೋಧಕರು, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ವೂ ಶಿಕ್ಷಣದ ಮೇಲೆ ಮಾಡಬಹುದಾದ ಸಕಾರಾತ್ಮಕ ಪ್ರಭಾವಗಳ ಬಗ್ಗೆ ಸಹಮತ ಹೊಂದಿದ್ದಾರೆ. ಈಗ ಇನ್ನೂ ಚರ್ಚೆ ವಾಗುತ್ತಿರುವ ವಿಷಯವೆಂದರೆ ಶಿಕ್ಷಣದ ಸುಧಾರಣೆಯಲ್ಲಿ ಐಸಿಟಿಯು ನಿರ್ವಹಿಸಬೇಕಾದ ಪಾತ್ರ ಮತ್ತು ಅದನ್ನು ಅತ್ಯುತ್ತಮವಾಗಿ ಬಳಸಿ ಕೊಳ್ಳುವ ಬಗ್ಗೆ ಈ ವಿಭಾಗವು ಲೇಖನಗಳು, ವರದಿಗಳು ಮತ್ತು ಆನ್ ಲೈನ್ ಜರ್ನಲ್ಲುಗಳು ಮತ್ತು ವೆಬ್ ಸೈಟುಗಳ ಲಿಂಕುಗಳನ್ನು ನೀಡುವುದು . ಅದರಿಂದ ಐಸಿಟಿ ಯು ಶಿಕ್ಷಣದ ಮೇಲೆ ಮಾಡಿರುವ ಪ್ರಭಾವ ಮತ್ತು ಶಾಲೆಗಳಲ್ಲಿ ತಂತ್ರಜ್ಙಾನವು ಸಾಗುತ್ತಿರುವ ದಿಶೆಯನ್ನು ಗುರುತಿಸಬಹುದು.( ಈ ವಿಭಾಗವು ಐಸಿಟಿಯನ್ನು ಶಿಕ್ಷಣದಲ್ಲಿ ಬಳಸುವುದರಿಂದ ಆಗುವ ಅನುಕೂಲಗಳ ವಿವರ ನೀಡುವ ಲೇಖನಗಳನ್ನು ಕೂಡಾ ಕೊಡುವುದು. ಅದರ ಜತೆಗೆ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆ ಐಸಿಟಿ ಯನ್ನು ಒಗ್ಗೂಡಿಸಲು ಮಾರ್ಗದರ್ಶನ ನೀಡುವ ಲೇಖನಗಳನ್ನು, ಕೇಸ್ ಸ್ಟಡಿಗಳನ್ನು ಕೊಟ್ಟಿದೆ. ಮತ್ತು ಗಮನಿಸ ಬೇಕಾದ ಅಂಶಗಳು ಹಾಗೂ ನಿವಾರಿಸಬೇಕಾದ ಸರ್ವೆ ಸಾಮಾನ್ಯ ತಪ್ಪುಗಳ ಬಗ್ಗೆ ವಿವರ ಇದೆ )
ಸಂಶೋಧನೆಯ ಕಥೆಗಳು, ವಿಶ್ವಾದ್ಯಂತದ ವಿಜಯ ಮತ್ತು ವಿಫಲತೆಗಳು, ನೀತಿ ನಿರೂಪಣೆಯ ಪ್ರಾತ್ಯಕ್ಷಿಕೆ ಮತ್ತು ತಂತ್ರ ಜ್ಞಾನದ ಬಳಕೆಯ ಪ್ರಾಯೋಗಿಕ ಕ್ರಮಗಳು ಮೊದಲಾದ ವಿಷಯಗಳು ಒಂದೊಂದಾಗಿ ಅಥವ ಒಟ್ಟಾಗಿ ಈ ಕೆಳಗಿನಂತೆ ಇರುತ್ತವೆ.
ಇಂದಿನ ತಂತ್ರಜ್ಞಾನಗಳು .ಕಲಿಕೆಗೆ ದೊರೆಯುವ ವಿವಿಧ ತಂತ್ರಜ್ಞಾನಗಳ ಪರಿಶೀಲನೆ:
ನಾಳಿನ ತಂತ್ರಜ್ಞಾನಗಳು ಈಗಾಗಲೇ ತೊಡಗಿಸಿ ಕೊಂಡಿರುವವರ , ನಿರ್ಧಾರ ತೆಗೆದು ಕೊಳ್ಳುವವರ ಕಲ್ಪನೆಯನ್ನು ಉತ್ತೇಜಿಸಲು ಭವಿಷ್ಯದ ತಂತ್ರಜ್ಞಾನಗಳ ಬಗೆಗಿನ ಮುನ್ನೋಟ. ಅವರಿಗೆ ಈಗಿರುವುದೇನು ಎಂದು ಮಾತ್ರ ತಿಳಿಸುವುದಲ್ಲದೆ ಮುಂದೆ ಬರಬಹುದಾದ್ದು ಏನು ಎಂಬ ಮಾಹಿತಿ ನೀಡಿ ಯೋಜನೆ ಮಾಡಲು ಸಹಾಯ ಮಾಡುವುದು.
ರೆಡಿಯೋ ಮತ್ತು ಟೆಲಿವಿಷನ್ ಗಳು ಶಿಕ್ಷಣ ಕ್ಷೇತ್ರದಲ್ಲಿ 20ನೆ ಶತಮಾನದ ಪ್ರಾರಂಭದಿಂದಲೇ ಬಳಕೆಯಲ್ಲಿವೆ. ಐಸಿಟಿ ಯ ಈ ರೂಪವನ್ನು ಮೂರು ವಿಧಾನಗಳಲ್ಲಿ ಮುಖ್ಯವಾಗಿ ಬಳಸಬಹುದು:
ಸಾಮಾನ್ಯ ಶಿಕ್ಷಣದ ಕಾರ್ಯಕ್ರಮಗಳು: ಅವು ಸಾಮಾನ್ಯ ಜ್ಞಾನ ಮತ್ತು ಅಸಂಪ್ರದಾಯಿಕ ಶೈಕ್ಷಣಿಕ ಅವಕಾಶಗಳನ್ನು ಒದಗಿಸುತ್ತವೆ.ಐಆರ್ ಐ (IRI) ದೈನಂದಿನ ಆಧಾರದ ಮೇಲೆ ತರಗತಿಗಳಿಗೆ ಪಾಠವನ್ನು ಪ್ರಸಾರ ಮಾಡುತ್ತದೆ. ರೇಡಿಯೋ ಪಾಠಗಳನ್ನು ನಿರ್ಧಿಷ್ಟವಾದ ವಿಷಯದ ಮೇಲೆ ನಿಗದಿತ ಹಂತದವರಿಗೆ ನಿಯಮಿತವಾಗಿ ಶಿಕ್ಷಕರಿಗೆ ಸಹಾಯವಾಗುವಂತೆ ಪ್ರಸಾರ ಮಾಡಲಾಗುವುದು. ಇದರಿಂದ ಬೋಧನೆಯ ಗುಣಮಟ್ಟ ಹೆಚ್ಚುವುದು ಮತ್ತು ಕಲಿಕೆಯು ಉತ್ತಮವಾಗುವುದು. ಐಆರ್ ಐ ನಿಂದ ಕಲಿಕೆಯು ಹೆಚ್ಚು ಜನಕ್ಕೆ ತಲುಪುವುದು. ಯಾವದೋ ಮೂಲೆಯಲ್ಲಿರುವ ಮತ್ತು ಯಾವುದೆ ಸಂಪನ್ಮೂಲ ಇಲ್ಲದ ಶಾಲೆಗೆ ಮತ್ತು ಕಲಿಕಾ ಕೇಂದ್ರಕ್ಕೆ ಸಿದ್ಧವಾದ ಪಾಠ ಸಿಗುವುದು. ಒಂದು ಅಧ್ಯಯನದ ಪ್ರಕಾರ ಐ ಆರ್ ಐ ಯೋಜನೆಯಿಂದ ಲಭ್ಯತೆ ಹಾಗೂ ಸಂಪ್ರದಾಯಿಕ ಮತ್ತು ಅಸಂಪ್ರದಾಯಿಕ ಶಿಕ್ಷಣಗಳ ಗುಣ ಮಟ್ಟ ಸುಧಾರಿಸಿದೆ. ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಅತಿ ಅಗ್ಗವಾಗಿ ಶಿಕ್ಷಣ ತಲುಪಿಸುವ ಸಾಧನವಾಗಿದೆ. ದೂರದರ್ಶನದ ಪಾಠಗಳು ಅಭ್ಯಾಸದ ಸಾಮಗ್ರಿಗೆ ಪೂರಕವಾಗಿ ಅಥವ ಪ್ರತ್ಯೇಕವಾಗಿ ಇರಬಹುದು. ಈ ಕಾರ್ಯ ಕ್ರಮಗಳು ಕ್ರಮೇಣ ಬದಲಾಗುತ್ತಿವೆ ಮೊದಲಿಗೆ ಶಿಕ್ಷಕರು ಬರಿ ಮಾತನಾಡುತ್ತಿದ್ದರು. ಈಗ ಚಟುವಟಿಕೆಗಳಿಂದ ಕೂಡಿದ್ದು ,ವಿದ್ಯಾರ್ಥಿಗಳೊಂದಿಗೆ ಅವರಿಗೆ ಸಂಬಂಧಿಸಿದ ವಿಷಯದ ಬಗ್ಗೆ ಸಂವಾದ ನೆಡೆಸುವರು.ಅನೇಕ ಬಾರಿ ಪ್ರಸಾರದೊಡನೆ ಮುದ್ರಿತ ಸಾಮಗ್ರಿಯೂ ಇರುವುದು. ಇದರಿಂದ ಕಲಿಯುವಿಕೆ ಮತ್ತು ಸಂವಹನ ಹೆಚ್ಚುವುದು.ಶೈಕ್ಷಣಿಕ ಪ್ರಸಾರವು ಏಷಿಯಾ ಪೆಸಿಫಿಕ್ ಪ್ರದೇಶದಲ್ಲಿ ವ್ಯಾಪಕವಾಗಿದೆ. ಉದಾಹರಣೆಗೆ , ಭಾರತಲ್ಲಿ ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾಲಯವು ಟೆಲಿವಿಷನ್ ಮತ್ತು ವಿಡಿಯೋ ಕಾನ್ಫರೆನ್ಸ ಮೂಲಕ ಅಧ್ಯಯನ ವಿಷಯಗಳನ್ನು ಪ್ರಸಾರ ಮಾಡುವುದು. ನಿರ್ದಿಷ್ಟ ಪಾಠಗಳನ್ನು ಪ್ರಸಾರ ಮಾಡುವುದಲ್ಲದೆ, ರೇಡಿಯೋ ಮತ್ತು ಟೆಲಿವಿಷ ನ್ ಗಳನ್ನು ಸಾಮಾನ್ಯ ಶಿಕ್ಷಣದ ಕಾರ್ಯ ಕ್ರಮಗಳನ್ನು ಪ್ರಸಾರ ಮಾಡಲು ಬಳಸಬಹುದು. ಮೂಲತಃ ಯಾವುದೆ ಶೈಕ್ಷಣಿಕ ಮೌಲ್ಯವುಳ್ಳ ರೇಡಿಯೋ ಮತ್ತು ಟೆಲಿವಿಷ ನ್ ಕಾರ್ಯಕ್ರಮಗಳನ್ನು “ಸಾಮಾನ್ಯ ಶಿಕ್ಷಣದ ಕಾರ್ಯ ಕ್ರಮ “ ವೆನ್ನಬಹುದು ಅಮೇರಿಕಾ ಸಂಯುಕ್ತ ಸಂಸ್ಥಾನದ ’”ಸೀಸೇಮ್ ಸ್ಟ್ರಿಟ್”” ಎನ್ನುವ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮ ಮತ್ತು ಕೆನಡಾದ ” ಫಾರ್ಮ ರೇಡಿಯೋ ಫೋರಮ್ ” ಎಂಬ ಚರ್ಚಾ ವೇದಿಕೆ. ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ.
ರೇಡಿಯೋ ಮತ್ತು ಟಿ.ವಿ ಗಳನ್ನು ಶೈಕ್ಷಣಿಕ ಸಾಧನಗಳಾಗಿ 1920 ರಿಂದ ಮತ್ತು 1950 ರಿಂದ ಕ್ರಮವಾಗಿ ಬಳಸಲಾಗುತ್ತಿದೆ. ರೇಡಿಯೋ ಮತ್ತು ಟಿ.ವಿ ಯ ಪ್ರಸಾರವನ್ನು ಶಿಕ್ಷಣದಲ್ಲಿ ಉಪಯೋಗಿಸಲು ಪ್ರಮುಖವಾಗಿ ಮೂರು ವಿಧಾನಗಳಿವೆ.
ನೇರ ತರಗತಿಗೆ ಬೋಧನೆ ಮಾಡುವ ವಿಧಾನವೆ ಸಂವಹನಶೀಲ ರೇಡಿಯೋ ಪಾಠ (IRI). ಇದು 20-30 ನಿಮಿಷದ ಸಿದ್ಧ ಪಾಠ. ಈ ಕಾರ್ಯ ಕ್ರಮವು ಒಂದು ಉತ್ತಮ ಉದಾಹರಣೆಯಾಗಿದೆ ಮತ್ತು ಚೆನ್ನಾಗಿ ದಾಖಲಾಗಿದೆ ಬೋಧನೆ ಹಾಗೂ ಕಲಿಕೆಯ ಅಭ್ಯಾಸಗಳನ್ನು ದೈನಂದಿನ ಆಧಾರದ ಮೇಲೆ ಪ್ರಸಾರ ಮಾಡಲಾಗತಿತ್ತು. ರೇಡಿಯೋ ಪಾಠಗಳನ್ನು ಒಂದು ನಿರ್ದಿಷ್ಟ ಕಲಿಕೆಯ ಉದ್ದೇಶಕ್ಕಾಗಿ , ನಿಗದಿತ ಹಂತದ ಮಕ್ಕಳಿಗಾಗಿ ರಾಷ್ಟ್ರ ಮತ್ತು ರಾಜ್ಯದ ಪಠ್ಯ ಕ್ರಮಕ್ಕೆ ಅನುಗುಣವಾಗಿ ; ಗಣಿತ, ವಿಜ್ಞಾನ,ಆರೋಗ್ಯ ಮತ್ತು ಭಾಷೆಗಳ ಪಾಠಗಳನ್ನು ತಯಾರಿಸಲಾಗುತ್ತಿತ್ತು. ಇದರಿಂದ ತರಗತಿಯ ಬೋಧನೆಯ ಮಟ್ಟದಲ್ಲಿ ಸುಧಾರಣೆ ಮತ್ತು ಸಂಪನ್ಮೂಲದ ಕೊರತೆ ಇರುವ , ಸರಿಯಾದ ತರಬೇತಿ ಪಡೆದ ಶಿಕ್ಷಕರಿಲ್ಲದ ಶಾಲೆಗಳಿಗೆ ನಿಯಮಿತವಾದ ರಚನಾತ್ಮಕ ಸಹಾಯವಾಗುತ್ತದೆ .ಐ ಆರ್ ಐ ಯೋಜನೆಗಳನ್ನು ಭಾರತ ಮತ್ತು ದಕ್ಷಿಣ ಏಸಿಯಾ ದೇಶಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಏಷಿಯಾದಲ್ಲಿ ಥಾಯಲ್ಯಾಂಡಿನಲ್ಲಿ ೧೯೮೦ ರಲ್ಲಿ ಜಾರಿಗೆ ಬಂದಿತು. ಇಂಡೋನೇಷಿಯಾ, ಪಾಕಿಸ್ತಾನ, ಬಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಐ ಆಆರ್ ಐ ಯೋಜನೆಯೂ ೧೯೯೦ರಲ್ಲಿ ಜಾರಿಗೆ ಬಂದಿತು .ಐಆರ್ ಐ ಮತ್ತು ಇನ್ನಿತರ ದೂರ ಶಿಕ್ಷಣದ ನಡುವಣ ವ್ಯತ್ಯಾಸ ಎಂದರೆ, ಇದರ ಮುಖ್ಯ ಗುರಿ ಶಿಕ್ಷಣದ ಮಟ್ಟವನ್ನು ಹೆಚ್ಚಿಸುವುದು .ಬರಿ ಶಿಕ್ಷಣದ ಲಭ್ಯತೆಯ ಅವಕಾಶವನ್ನು ವಿಸ್ತರಿಸುವುದಲ್ಲ.
ಇದು ಸಂಪ್ರದಾಯಿಕ ಮತ್ತು ಅಸಂಪ್ರದಾಯಿಕ ಎರಡೂ ಶಿಕ್ಷಣ ರಂಗದಲ್ಲಿ ಯಶಸ್ಸು ಸಾಧಿಸಿದೆ. ಪ್ರಪಂಚದಲ್ಲಿ ನಡೆಸಿದ ಅನೇಕ ಸಂಶೋಧನೆಗಳು ತೋರಿಸಿದಂತೆ ಐ ಆರ್ ಐ ಯೋಜನೆಗಳು ಕಲಿಕೆಯ ಫಲಿತದ ಮತ್ತು ಶೈಕ್ಷಣಿಕ ಸಮಾನತೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿರುವುದನ್ನು ಕಾಣ ಬಹುದು. ಆರ್ಥಿಕವಾಗಿ ಇದು ಇತರ ಮಧ್ಯವರ್ತನೆಗಳಿಗೆ ಹೋಲಿಸಿದರೆ ಒಂದು ಅತ್ಯಂತ ಅಗ್ಗದ ವಿಧಾನವಾಗಿದೆ.ಕೇಂದ್ರದಲ್ಲಿ ನಿರ್ಮಿಸಿದ ಟೆಲಿವಿಷನ್ ಕಾರ್ಯಕ್ರಮಗಳನ್ನು ಉಪಗ್ರಹಗಳ ಮೂಲಕ ದೇಶಾದ್ಯಂತ ನಿಗದಿತ ಶಾಲಾ ಅವಧಿಯಲ್ಲಿ ಬಿತ್ತರಿಸಲಾಗುವುದು. ಸಾಮಾನ್ಯವಾಗಿ ಎಲ್ಲ ಕಡೆ ಇರುವ ಪೌಢ (ಸೆಕೆಂಡರಿ) ಶಾಲಾ ಪಠ್ಯ ಕ್ರಮವನ್ನು ಅನುಸರಿಸಲಾಗಿದೆ. ಪ್ರತಿ ಪ್ರಸಾರವು ವಿವಿಧ ವಿಷಯಗಳನ್ನು ಕೇಂದ್ರಿಕರಿಸುವುದು ಮತ್ತು ಶಿಕ್ಷಕನ ನಾಯಕತ್ವದಲ್ಲಿ ನಡೆಸಬಹುದಾದ ಚಟುವಟಿಕೆಗಳನ್ನು ಒಳಗೊಂಡಿರುವುದು. ಮಕ್ಕಳಿಗೆ ದೂರದರ್ಶನದಲ್ಲಿ ಬೇರೆ ಬೇರೆ ಶಿಕ್ಷಕರ ಪಾಠ ಕೇಳುವ ಅವಕಾಶ ಸಿಗುವುದು . ಅದೆ ಶಾಲೆಯಲ್ಲಾದರೆ ಒಂದು ತರಗತಿಗೆ ಒಂದು ವಿಷಯಕ್ಕೆ ಒಬ್ಬರೆ ಶಿಕ್ಷಕರು ಇರುತ್ತಾರೆ.ಕಾರ್ಯ ಕ್ರಮದ ವಿನ್ಯಾಸವು ವರ್ಷದಿಂದ ವರ್ಷಕ್ಕೆ ಅನೇಕ ಬದಲಾವಣೆಗಳನ್ನು ಹೊಂದಿದೆ. “ಮಾತನಾಡುವ ಮುಖ” ದಿಂದ ಹೆಚ್ಚು ಸಂವಹನಕಾರಿಯಾದ ಮತ್ತು ಚಲನಶೀಲ ಕಾರ್ಯ ಕ್ರಮಗಳು ಸಮುದಾಯದೊಂದಿಗೆ ಸಂಪರ್ಕ ಪಡೆದು ಬೋಧನ ವಿಧಾನವನ್ನು ತಿಳಿಸುತ್ತಿವೆ. ಈ ತಂತ್ರವು ಸಮುದಾಯದ ವಿಷಯಗಳನ್ನು ಕಾರ್ಯಕ್ರಮಗಳಾಗಿಸುವುದು. ಇದರಿಂದ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಸಮುದಾಯದೊಡನೆ ತೊಡಗಿಸುವುದು. ಸಮುದಾಯವನ್ನು ಶಾಲೆಯ ವ್ಯವಸ್ಥೆ ಮತ್ತು ನಿರ್ವಹಣೆಯಲ್ಲಿ ತೊಡಗಿಸಿ ಮತ್ತು ವಿದ್ಯಾರ್ಥಿಗಳು ಸಮುದಾಯದ ಚಟುವಟಿಕೆಯಲ್ಲಿ ಭಾಗ ವಹಿಸುವಂತೆ ಉತ್ತೇಜಿಸುವುದು.ಟೆಲಿವಿಷನ್ ಕಾರ್ಯಕ್ರಮದ ಮೌಲ್ಯ ಮಾಪನವು ಉತ್ತೇಜನ ಕಾರಿಯಾಗಿದೆ . ಶಾಲೆ ಬಿಡುವವರ ಸಂಖ್ಯೆಯು ಇತರ ಪೌಢ (ಸೆಕೆಂಡರಿ) ಶಾಲೆಗಳಿಗಿಂತ ಕಡಿಮೆಯಾಗಿದೆ.
ತಾಂತ್ರಿಕ ಶಾಲೆಗಳಿಗಿಂತ ಹಾಜರಾತಿ ಉತ್ತಮವಾಗಿತ್ತು . ಏಷಿಯಾದಲ್ಲಿ, ಅದರಲ್ಲೂ ಚೀನಾದಲ್ಲಿ ೪೪ ರೆಡಿಯೋ ಮತ್ತು ಟಿ.ವಿ ವಿಶ್ವ ವಿದ್ಯಾಲಯಗಳಿವೆ. ( ಚೀನಾದ ಕೇಂದ್ರೀಯ ರೇಡಿಯೋ ಮತ್ತು ಟೆಲಿವಿಷನ್ ವಿಶ್ವವಿದ್ಯಾಲಯ ಸೇರಿದಂತೆ ), ಟೆರ್ಬುಕಾ ವಿಶ್ವವಿದ್ಯಾಲಯ, ಇಂಡೋನೇಷಿಯ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯಗಳು ರೇಡಿಯೋ ಮತ್ತು ಟಿ .ವಿ. ಗಳನ್ನು ವ್ಯಾಪಕವಾಗಿ ಬಳಸಿವೆ. ನೇರವಾಗಿ ತರಗತಿಯಲ್ಲಿ ಬೋಧಿಸಿವೆ ಮತ್ತು ಪ್ರಸಾರದಿಂದ ಹೆಚ್ಚು ಹೆಚ್ಚು ಜನರಿಗೆ ತಲುಪಿವೆ. ಈ ಸಂಸ್ಥೆಗಳಲ್ಲಿ ಪ್ರಸಾರದ ಜೊತೆಗೆ ಮುದ್ರಿತ ಸಾಮಗ್ರಿ ಮತ್ತು ಆಡಿಯೋ ಕೆಸಟ್ಟುಗಳೂ ಇರುತ್ತವೆ ಜಪಾನಿನ ವಿಶ್ವವಿದ್ಯಾಲಯವು . 160 ರೇಡಿಯೋ ಮತ್ತು 160 ಟೆಲಿವಿಷನ್ ಆಧಾರಿತ ಕೋರ್ಸಗಳ ಪ್ರಸಾರಗಳನ್ನು ಮಾಡಿದೆ. ಪ್ರತಿ ವಿಷಯದ ಅಧ್ಯಯನವು 15-45 ನಿಮಿಷದ ಅವಧಿಯದಾಗಿದ್ದು ದೇಶಾದ್ಯಂತ ವಾರಕ್ಕೆ ಒಂದು ಸಲದಂತೆ 15 ವಾರ ವಿಶ್ವವಿದ್ಯಾಲಯದ ಸ್ವಂತ ನಿಲಯಗಳಿಂದ ಬೆಳಿಗ್ಗೆ 6 ಘಂಟೆಯಿಂದ 12 ಘಂಟೆಯ ವರೆಗೆ ಪ್ರಸಾರ ಮಾಡಿತು. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ, ಮುದ್ರಿತ ಸಾಮಗ್ರಿ, ಮುಖಾ ಮುಖಿ ಬೋಧನೆ ಮತ್ತು ಆನ್ ಲೈನ್ ಬೋಧನೆಯನ್ನು ಒದಗಿಸಲಾಗಿತ್ತು.ಅನೇಕ ಸಲ ಮುದ್ರಿತ ಸಾಮಗ್ರಿ , ಕ್ಯಾಸೆಟ್ಸ್ಮತ್ತು ಸಿ ಡಿ ರಾಮ್ಗಳನ್ನು ನೇರ ಬೋಧನೆಯ ತರಹ ಶಾಲಾ ಪ್ರಸಾರಗಳನ್ನು ಹೊಂದಿರುವವು. ರಾಷ್ಟ್ರೀಯ ಪಠ್ಯಕ್ರಮ ಮತ್ತು ವಿವಿಧ ವಿಷಯಗಳ ಬಗೆಗೆ ಅವುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನೇರ ತರಗತಿಯ ಬೋಧನೆಯಂತೆ , ಶಾಲಾ ಪ್ರಸಾರನ್ನು ಶಿಕ್ಷಕರ ಬದಲಾಗಿ ಬಳಸಲಾಗುವುದು. ಇದು ಸಂಪ್ರದಾಯಿಕ ತರಗತಿಯನ್ನು ಬೋಧನೆಯನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿಸುವುದು. ಶಾಲಾ ಪ್ರಸಾರವು ಐ ಆರ್ ಐ ಗಿಂತ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವುದು. ಏಕೆಂದರೆ ಶಿಕ್ಷಕರು ಪ್ರಸಾರ ಸಾಮಗ್ರಿಯನ್ನು ತರಗತಿಯಲ್ಲಿನ ಪಾಠದ ಜೊತೆ ಒಂದಾಗಿಸಿರುವರು. ಶಾಲಾ ಪ್ರಸಾರಮಾಡುವ ದೊಡ್ಡ ಪ್ರಸಾರ ಕರ್ಪೊರೇಷನ್ ಗಳಲ್ಲಿ ಬ್ರಿಟನ್ ನ ಬಿ. ಬಿ. ಸಿ. ಶಿಕ್ಷಣ ರೆಡಿಯೋ ಮತ್ತು ಟಿವಿ ಮತ್ತು ಜಪಾನನ ಎನ್ .ಕೆ. ಎಚ್ ಬ್ರಾಡಕಾಸ್ಟಿಂಗ್ ಕಾರ್ಪೊರೇಷನ್ ಹೆಸರಾಗಿವೆ.ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶಾಲಾ ಪ್ರಸಾರವನ್ನು ಶಿಕ್ಷಣ ಸಚಿವಾಲಯ ಮತ್ತು ಸಮಾಚಾರ ಸಚಿವಾಲಯಗಳ ಸಹಭಾಗತ್ವದ ಫಲವಾಗಿವೆ.ಸಾಮನ್ಯವಾಗಿ ಶಿಕ್ಷಣ ಕಾರ್ಯಕ್ರಮಗಳು ವೈವಿದ್ಯ ಪೂರ್ಣವಾಗಿರುವವು- ಸುದ್ಧಿ ಸಮಾಚಾರ, ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ಕಾರ್ಯಗಳು, ರಸ ಪ್ರಶ್ನೆಗಳು, ಶೈಕ್ಷಣಿಕ ಕಾರ್ಟೂನುಗಳು, ಇತ್ಯಾದಿ ಇರುತ್ತವೆ.
ಅವು ಅಸಂಪ್ರದಾಯಿಕವಾದ ಶಿಕ್ಷಣದ ಅವಕಾಶಗಳನ್ನು ಎಲ್ಲ ರೀತಿಯ ಕಲಿಯುವವರಿಗೆ ಒದಗಿಸುವುದು. ಒಟ್ಟಿನಲ್ಲಿ ಯಾವುದೆ ರೇಡಿಯೋ ಅಥವ ಟಿವಿ ಕಾರ್ಯಕ್ರಮವು ಮಾಹಿತಿ ಮತ್ತು ಶೈಕ್ಷಣಿಕ ಮೌಲ್ಯವನ್ನು ಹೊಂದಿದ್ದರೆ ಅವುಗಳನ್ನು ಶೈಕ್ಷಣಿಕ ಪ್ರಸಾರ ವೆನ್ನಬಹುದಾಗಿದೆ.ಇದಕ್ಕೆ ಉದಾಹರಣೆ ಎಂದರೆ ವಿಶ್ವ ವ್ಯಾಪ್ತಿ ಹೊಂದಿರುವ ಅಮೇರಿಕಾ ಮೂಲದ ಟಿವಿ ಷೋ ಆದ ಸೀಸೇಮ್ ಸ್ಟ್ರೀಟು ಪೂರ್ತಿ ಮಾಹಿತಿಪೂರ್ಣವಾಗಿರುವ ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಡಿಸ್ಕವರಿ. ಟಿ ವಿ ಚಾನಲ್ ಗಳು. ರೆಡಿಯೋ ಕಾರ್ಯಕ್ರಮಗಳಾದ “ ವಾಯ್ಸ ಅಫ್ ಅಮೇರಿಕಾ,” ಕೆನಡಾದಲ್ಲಿ ೧೯೪೦ ರಲ್ಲಿ ಪ್ರಾರಂಭವಾದ “ಫಾರ್ಮ ಪೋರಂ” , ಇಂದಿಗೂ ಜಗತ್ತಿನಾದ್ಯಂತ ಚರ್ಚೆ ಮತ್ತು ಸಂವಾದ ಕಾರ್ಯಕ್ರಮಗಳಿಗೆ ಮಾದರಿ ಎಂದು ಹೆಸರಾಗಿವೆ. ಅವು ಅಸಂಪ್ರದಾಯಿಕ ಶಿಕ್ಷಣ ಕಾರ್ಯಕ್ರಮಗಳಿಗೆ ಉತ್ತಮ ಉದಾಹರಣೆಯಾಗಿವೆ.
ಸಂಶೋಧನೆ ಯ ಪ್ರಕಾರ ಐ ಸಿ ಟಿ ಯ ಸರಿಯಾದ ಬಳಕೆ ಯಿಂದ ಶೈಕ್ಷಣಿಕ ಮತ್ತು ವಿಷಯದ ವ್ಯಾಪ್ತಿಯಲ್ಲಿ ಸಾಕಷ್ಟು ಬದಲಾವಣೆಗೆ ಚಾಲನೆ ಸಿಗುವುದೆಂದು ಗೊತ್ತಾಗಿದೆ. ಅದೆ 21 ನೆ ಶತಮಾನದ ಶೈಕ್ಷಣಿಕ ಸುಧಾರಣೆಯ ಸಾರವಾಗಿದೆ. ಸರಿಯಾಗಿ ವಿನ್ಯಾಸ ಮಾಡಿ ಅನುಷ್ಠಾನ ಮಾಡಿದರೆ ಐಸಿಟಿ ಬೆಂಬಲ ಪಡೆದ ಶಿಕ್ಷಣವು ವಿದ್ಯಾರ್ಥಿಗೆ ಆಜೀವವಾಗಿ ಸಬಲನ್ನಾಗಿಸಿ ಜ್ಞಾನ ಮತ್ತು ಕೌಶಲ್ಯಗಳ ಕಲಿಕೆಯ ಅವಕಾಶ ನೀಡುವುದು ಐಸಿಟಿಯನ್ನು ಸೂಕ್ತವಾಗಿ ಉಪಯೋಗಿಸಿದರೆ – ವಿಶೇಷವಾಗಿ ಅಂತರ್ಜಾಲ ಮತ್ತು ಕಾಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿದರೆ – ಈ ಹಿಂದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾಡಿದ್ದನ್ನೆ ತುಸು ಚೆನ್ನಾಗಿ ಮಾಡುವುದಕ್ಕಿಂತ ಬೋಧನೆ ಮತ್ತು ಕಲಿಕೆಯಲ್ಲಿ ಹೊಸ ಹಾದಿಯನ್ನು ಹಿಡಿಯಲು ಸಾಧ್ಯ ಈ ಹೊಸ ಬೋಧನೆಯ ಮತ್ತು ಕಲಿಕೆಯ ವಿಧಾನಗಳು ರಚನಾತ್ಮಕ ಕಲಿಕೆಯ ತತ್ವಗಳನ್ನು ಆಧರಿಸಿರುವುದರಿಂದ, ಶಿಕ್ಷಕ ಕೇಂದ್ರಿತ ಶೈಕ್ಷಣಿಕ ಕ್ರಮವಾದ- ಕಂಠಪಾಠ , ಗಿಳಿ ಪಾಠದ ತರಹದ ಅತಿ ಕನಿಷ್ಟ ಕಲಿಕೆಯ ವಿಧಾನದಿಂದ- ವಿದ್ಯಾರ್ಥಿ ಕೇಂದ್ರಿತ ವಿಧಾನಕ್ಕೆ ಬದಲಾಯಿಸಬಹುದು.
ಐಸಿಟಿ ಯ ಶೈಕ್ಷಣಿಕ ಪರಿಣಾಮವು ಅದನ್ನು ಹೇಗೆ ಬಳಸಲಾಗಿದೆ ಮತ್ತು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದನ್ನು ಅವಲಂಬಿಸಿದೆ. ಇತರ ಶೈಕ್ಷಣಿಕ ಉಪಕರಣಗಳಂತೆ ಹಾಗೂ ಬೋಧನಾ ವಿಧಾನದಂತೆ ಐ ಸಿ ಟಿ ಯು ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಒಂದೆ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲ.
ಮೂಲ ಶಿಕ್ಷಣದ ವಿಸ್ತರಣೆಗೆ ಐ ಸಿ ಟಿ ಯು ಯಾವ ಪ್ರಮಾಣದಲ್ಲಿ ಉಪಯುಕ್ತವಾಗಿದೆ ಎಂದು ಅರಿಯುವುದು ಕಷ್ಟದ ಕೆಲಸ. ಬಹಳಷ್ಟು ಮಧ್ಯವರ್ತನೆಗಳು ಕಡಿಮೆ ಪ್ರಮಾಣಗಳದಾಗಿದ್ದು ಅವುಗಳ ವರದಿಯೂ ಸರಿಯಾಗಿ ಆಗಿಲ್ಲ. ಪ್ರಾಥಮಿಕ ಹಂತದಲ್ಲಿ ಐಸಿಟಿ ಮಾದರಿಯು ಅಭಿವೃದ್ಧಿಯಾಗಿದೆ ಎನ್ನಲು ಸಾಕ್ಷ್ಯಾಧಾರಗಳ ಕೊರತೆ ಇದೆ. ಉನ್ನತ ಶಿಕ್ಷಣ ಮತ್ತು ವಯಸ್ಕರ ತರಬೇತಿಯಲ್ಲಿ, ಶಿಕ್ಷಣದ ಅವಕಾಶಗಳನ್ನು ಕೆಲವು ವಿಶ್ವವಿದ್ಯಾಲಯಗಳಿಗೆ ಹೋಗಲಾಗದ ವ್ಯಕ್ತಿಗಳಿಗೆ ಮತ್ತು ಗುಂಪುಗಳಿಗೆ ದೊರಕಿಸಿದೆ. ಜಗತ್ತಿನ ಹನ್ನೊಂದು ಮೆಗಾ ವಿಶ್ವ ವಿದ್ಯಾಲಯಗಳಲ್ಲಿ ಪ್ರತಿಯೊಂದು ಮುಕ್ತ ಮತ್ತು ದೂರಶಿಕ್ಷಣ ನೀಡುವಲ್ಲಿ ಹೆಸರು ಮಾಡಿವೆ (ಬ್ರಟನ್ನಿನ ಮುಕ್ತ ವಿಶ್ವ ವಿದ್ಯಾಲಯ , ಭಾರತದ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯ, ಚೀನಾದ ಟಿ.ವಿ ಯೂನಿವರ್ಸಿಟಿ ಸಿಸ್ಟಮ್, ಇಂಡೊನೇಷಿಯಾದ ಟೆರ್ಬೂಕಾ ಯುನಿವರ್ಸಿಟಿ ಮತ್ತು ದಕ್ಷಿಣ ಆಫ್ರಿಕಾದ ವಿಶ್ವ ವಿದ್ಯಾಲಯ ಹಾಗು ಇತರೆಯವು ಸೇರಿವೆ) ಅವುಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ 100,000 ಕ್ಕಿಂತ ಹೆಚ್ಚು ನೊಂದಾವಣೆಗಳಾಗಿವೆ. ಅವು ಒಟ್ಟಾಗಿ 2.8 ಮಿಲಿಯನ್ ಜನರಿಗೆ ಸೇವೆ ಸಲ್ಲಿಸುತ್ತಲಿವೆ. ಇದನ್ನು ಅಮೆರಿಕಾದಲ್ಲಿನ 3,500 ಕಾಲೆಜುಗಳ ಒಟ್ಟುವಿದ್ಯಾರ್ಥಿಗಳ ಸಂಖ್ಯೆ 14 ಮಿಲಿಯನ್ ಜೊತೆ ಹೋಲಿಸಿ ನೋಡುವಂತಿದೆ.
ಗುಣಮಟ್ಟದ ಉನ್ನತೀಕರಣ
ರೆಡಿಯೋ ಮತ್ತು ಟೆಲಿವಿಷನ್ ಪ್ರಸಾರವು ಮೂಲ ಶಿಕ್ಷಣದ ಮೇಲೆ ಮಾಡುವ ಪರಿಣಾಮದ ಬಗ್ಗೆ ಇನ್ನೂ ಸಾಕಷ್ಟು ಸಂಶೋಧನೆ ಆಗಬೇಕಿದೆ. ಆದರೆ ಈಗಾಗಲೆ ಅಗಿರುವ ಸಂಶೋಧನೆಗಳು ಸಾಂಪ್ರದಾಯಿಕ ತರಗತಿಯ ಬೋಧನೆಯ ಮೇಲೆ ಅವುಗಳ ಪರಿಣಾಮವು ಸಾಕಷ್ಟು ಗಾಢವಾಗಿದೆ ಎಂದು ಸೂಚಿಸುತ್ತವೆ. ಇವೆಲ್ಲ ಪ್ರಸಾರ ಕಾರ್ಯಕ್ರಮಗಳಲ್ಲಿ ಸಂವಹನ ರೇಡಿಯೋ ಬೋಧನೆಯ ಯೋಜನೆಯು ಆಳವಾದ ವಿಶ್ಲೇಷಣೆಗೆ ಒಳಗಾಗಿದೆ. ಅದರ ಪ್ರಕಾರ ಶಿಕ್ಷಣದ ಮಟ್ಟವು ಹೆಚ್ಚಿದೆ. ಈ ರೇಡಿಯೋ ಕಾರ್ಯಕ್ರಮದ ಯಶಸ್ಸಿಗೆ ನಿಗದಿತವಾದ ಪರೀಕ್ಷೆಯಲ್ಲಿ ಹೆಚ್ಚಾದ ಅಂಕಗಳು ಮತ್ತು ಸುಧಾರಿಸಿದ ಹಾಜರಾತಿ ಸಾಕ್ಷಿಯಾಗಿವೆ.
ಇದಕ್ಕೆ ವಿರುದ್ಧವಾಗಿ, ಕಾಂಪ್ಯೂಟರ್, ಅಂತರ್ಜಾಲ ಮತ್ತು ಇತರ ಸಂಬಂಧಿತ ತಂತ್ರಜ್ಞಾನವನ್ನು ದೂರ ಶಿಕ್ಷಣದಲ್ಲಿ ಬಳಕೆಯ ಮೌಲ್ಯಮಾಪನವು ಸಂದಿಗ್ದವಾಗಿದೆ. ರಸೆಲ್ ನ ಸಮಗ್ರ ಸಂಶೋಧನೆಯ ವಿಮರ್ಶೆಯು ಹೇಳುವಂತೆ “ಐಸಿಟಿ ಆಧಾರಿತ ಬೋಧನೆ ಪಡೆದವರು ಮತ್ತು ಮುಖಾಮುಖಿ ಯಾಗಿ ಪಾಠ ಕೇಳಿದವರೂ ಪರಿಕ್ಷೆಯಲ್ಲಿ ಪಡೆದ ಅಂಕಗಳ ನಡುವೆ ಅಂತಹ ದೊಡ್ಡ ಅಂತರವಿಲ್ಲ. ಆದರೂ ಇತರರು ಹೇಳುವಂತೆ ಈ ರೀತಿಯ ಸಾಮಾನ್ಯೀಕರಣವು ಪರಿಪೂರ್ಣವಲ್ಲ. ಏಕೆಂದರೆ ಐಸಿಟಿ ಆಧಾರಿತ ದೂರ ಶಿಕ್ಷಣದ ಬಗೆಗಿನ ಅನೇಕ ಲೇಖನಗಳು ಮೂಲ ಪ್ರಾಯೋಗಿಕ ಸಂಶೋಧನೆ ಅಥವ ಕೇಸ್ ಅಧ್ಯಯನಗಳನ್ನು ಒಳಗೊಂಡಿಲ್ಲ. ಕೆಲವು ಅಧ್ಯಯನಗಳ ಪ್ರಕಾರ ದೂರ ಶಿಕ್ಷಣವನ್ನು ಐಸಿಟಿ ಆಧಾರಿತವಾಗಿ ನೀಡುವಾಗ ಮಧ್ಯದಲ್ಲಿ ಬಿಡುವವರ ಸಂಖ್ಯೆಯು ಅಧಿಕವಾಗಿರುವುದು. ಇನ್ನೂ ಅನೇಕ ಅಧ್ಯಯನಗಳೂ ಕಂಪ್ಯೂಟರ್ ಬಳಕೆಯು ಈಗಿರುವ ಪಠ್ಯಕ್ರಮವನ್ನು ಉನ್ನತೀಕರಿಸುವುದು ಮತ್ತು ಅಧಿಕಗೊಳಿಸುವುದು ಎಂದಿವೆ, ಇದನ್ನು ಪ್ರಮಾಣಿಕರಿಸಿದ ಪರೀಕ್ಷೆಗಳು ದೃಢ ಪಡಿಸುತ್ತವೆ ನಿರ್ದಿಷ್ಟವಾಗಿ ಸಂಶೋಧನೆಯು ತೋರಿಸುವುದೇನೆಂದರೆ ಕಂಪ್ಯೂಟರ್ ಅನ್ನು, ಪಾಠ ಮಾಡಲು, ಪುನರಾವರ್ತನೆ ಮತ್ತು ಅಭ್ಯಾಸ ಮಾಡಿಸಲು, ಅವರಿಗೆ ಸೂಚನೆ ನೀಡಲು, ಸಂಪ್ರದಾಯಿಕ ಬೋಧನೆಯ ಯಲ್ಲಿ ಬಳಸಿದರ ಸಾಂಪ್ರದಾಯಿಕ ಪಠ್ಯಕ್ರಮದ ಮತ್ತು ಮೂಲ ಕೌಶಲ್ಯಗಳ ಕಲಿಕೆಯಲ್ಲಿ ಉತ್ತಮ ಸಾಧನೆ ಗೋಚರವಾಗಿದೆ. ಅದಲ್ಲದೆ ಕೆಲವು ವಿಷಯಗಳಲ್ಲಿ ಮೊದಲಿನ ವಿಧಾನದಲ್ಲಿನ ಕಲಿಕೆಗಿಂತ ಅತಿ ಹೆಚ್ಚು ಪರಿಣಾಮ ಕಂಡುಬಂದಿದೆ. ವಿದ್ಯಾರ್ಥಿಗಳು ಬೇಗ ಕಲಿಯುತ್ತಾರೆ, ಹೆಚ್ಚು ಕಾಲ ನೆನಪಿಟ್ಟು ಕೊಳ್ಳುತ್ತಾರೆ ಮತ್ತು ಕಂಪ್ಯೂಟರೊಡನೆ ಕೆಲಸ ಮಾಡುವಾಗ ಹೆಚ್ಚು ಉತ್ತೇಜಿತರಾಗುತ್ತಾರೆ.ಆದರೆ ಹಲವರು ಇವೆಲ್ಲದರ ಉಪಯೋಗ ಬಹು ಕಡಿಮೆ ಎನ್ನುವರು. ಈ ವಿಷಯದಲ್ಲಿ ಮಾಡಿದ ಬಹುತೇಕ ಸಂಶೋಧನೆಗಳು ದೋಷ ಪೂರಿತ ವಿಧಾನವನ್ನು ಅನುಸರಿಸಿವೆ ಎನ್ನುತ್ತಾರೆ.
ಅದರಂತೆ ಸಂಶೋಧನೆಗಳು ಕೂಡಾ ಕಂಪ್ಯೂಟರ್ ಅಂತರ್ಜಾಲಗಳ ಮತ್ತು ಸಂಬಂಧಿತ ತಂತ್ರಜ್ಞಾನಗಳ ಜೊತೆ ಸಾಕಷ್ಟು ಶಿಕ್ಷಕರ ತರಬೇತಿ ಮತ್ತು ಬೆಂಬಲ ನೀಡಿದರೆ ಶೈಕ್ಷಣಿಕ ವಾತಾವರಣನ್ನು ವಿದ್ಯಾರ್ಥಿ ಕೇಂದ್ರಿತವಾಗಿ ಸುಧಾರಣೆ ತರುವಲ್ಲಿ ಅನುಕೂಲವಾಗುವುದು. ಆದರೆ ಈ ಅಧ್ಯಯನಗಳು ಪರಿಶೋಧನೆ ಮತ್ತು ವಿವರಣಾತ್ಮಕವಾಗಿದ್ದು ಪ್ರಾಯೋಗಿಕತೆಗೆ ಒತ್ತು ನೀಡವುದಿಲ್ಲ ಎಂಬ ಟೀಕೆಗಳಿವೆ. ಈ ಹೊಸ ಕಲಿಕೆಯ ಪರಿಸರವು ಸುಧಾರಿಸಿದ ಕಲಿಕಾ ಫಲಿತಾಂಶಗಳನ್ನು ಕೊಡುವುದೆಂಬುದಕ್ಕೆ ಖಚಿತ ಸಾಕ್ಷ್ಯಾಧಾರಗಳಿಲ್ಲ ಈಗ ಇರುವುದು. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪರಿಶೀಲನೆ ಮತ್ತು ವಿಶ್ಲೇಷಣೆಯಿಂದ ಅರಿತ ಗುಣ ಮಟ್ಟದ ದತ್ತಾಂಶ ಮಾತ್ರ. ಅದು ಕಲಿಕೆಯ ಮೇಲಿನ ಸಕಾರಾತ್ಮಕ ಪರಿಣಾಮವನ್ನು ಸೂಚಿಸತ್ತದೆ. ಕಂಪ್ಯೂಟರ್ ಮತ್ತು ಅಂತರ್ ಜಾಲಗಳು ಬದಲಾವಣೆಯ ಪರಿಕರಗಳಾಗಿ ಬೀರುವ ಪರಿಣಾಮವನ್ನು ಮೌಲ್ಯ ಮಾಪನ ಮಾಡುವುದು ತುಂಬ ಕ್ಲಿಷ್ಟಕರ ವಿಷಯ. ಪ್ರಮಾಣಿಕೃತ ಪರೀಕ್ಷೆಗಳು ವಿದ್ಯಾರ್ಥಿ ಕೇಂದ್ರಿತ ಪರಿಸರವು ಮಾಡಿದ ಲಾಭವನ್ನು ಅಳೆಯಲಾರವು. ಅದಲ್ಲದೆ ತಂತ್ರಜ್ಞಾನದ ಬಳಕೆಯು ಬೃಹತ್ತಾದ ಕಲಿಕಾ ವ್ಯವಸ್ಥೆಯ ಭಾಗವಾಗಿರುವುದರಿಂದ, ತಂತ್ರಜ್ಞಾನವನ್ನು ಮಾತ್ರ ಅದರಿಂದ ಬೇರ್ಪಡಿಸಿ, ಕಂಡು ಬರಬಹುದಾದ ಸುಧಾರಣೆಯು ತಂತ್ರ ಜ್ಞಾನದ ಬಳಕೆಯಿಂದ ಮಾತ್ರ ಆಗಿದೆಯಾ ಅಥವ ಬೇರೆ ಯಾವುದಾದರೂ ಅಂಶದಿಂದ ಆಗಿದೆಯಾ ಇಲ್ಲವೆ ಇತರ ಎಲ್ಲ ಅಂಶಗಳ ಒಟ್ಟಾರೆ ಪರಿಣಾಮವೆ ಎಂದು ತಿಳಿಯುವುದು ಸುಲಭವಲ್ಲ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/5/2020
ಭೋಧನೆ ಮತ್ತು ಕಲಿಕೆ ಹಲವು ಚಂಚಲತೆಗಳಿಂದ ಕೂಡಿರುವ ಪ್ರಕ...