অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೋಧನೆ ಮತ್ತು ಕಲಿಕೆ

ಬೋಧನೆ ಮತ್ತು ಕಲಿಕೆ

  1. ರಚನಾತ್ಮಕತೆಯ ತತ್ವ
    1. ವಿವರಣೆ
    2. ವ್ಯಾಪ್ತಿ / ಅನ್ವಯಿಸುವಿಕೆ
  2. ಮೂಲ ತತ್ವಗಳು
  3. ಅನುಭವಕ್ಕೆ ಸಂಭಂದಿಸಿದ ಕಲಿಕೆ
    1. ವಿವರಣೆ
  4. ಕಾರ್ಯಗತಗೊಳಿಸುವಿಕೆ
  5. ಮೂಲತತ್ವಗಳು
  6. ಕಲ್ಪನಾತ್ಮಕ ಕಲಿಕೆ
    1. ನಾವು ಕಲ್ಪನಾತ್ಮಕ ಕಲಿಕೆಯನ್ನು ಹೇಗೆ ಕಲಿಯುತ್ತೇವೆ ?
  7. ಕಲಿಸುವ ಮತ್ತು ಕಲಿಯುವ ಕಾರ್ಯತಂತ್ರಗಳು
    1. ೬ಇ ಗಳ ಮತ್ತು ಎಸ್ ಗಳ ಪಠ್ಯಯೋಜನೆಯ ಆಕಾರ
    2. ಗೊತ್ತುಮಾಡಿಕೊಳ್ಳುವುದು
    3. ಪರಿಶೋಧಿಸುವುದು
    4. ವಿವರಿಸುವದು
    5. ಪರಿಸ್ಕರಿಸುವದು
    6. ಮೌಲ್ಲೀಕರಿಸುವುದು
    7. ವೃದ್ಧಿಸುವುದು
    8. ನಿದಿ೯ಷ್ಟ ಮಾನಗಳು
  8. ಪಾತ್ರ ನಿರ್ವಹಣೆ ಆಟ ಮತ್ತು ಅಣಕು ಪ್ರದಶ೯ನ
  9. ಅನೇಕ ವಯಸ್ಸಿನ ವಗ೯ದವರಿಗೆ ಭೋಧಿಸುವುದು.
  10. ಸಹಕಾರಿ – ಕಲಿಕೆ
  11. ಕಲಿಕೆಯ ಶೈಲಿಗಳು
    1. ಕಲಿಕೆ ಶೈಲಿಗಳ ವಿಧಗಳು ಯಾವುವು ?
      1. ನೋಡಿ ಕಲಿಯುವವರು:-
    2. ಚಲನವಲನೆಯಿಂದ ಕಲಿಯುವವರು / ಸ್ಪಶೆ೯೦ದ್ರೀಯದ ಚಲಿಸುತ್ತ,ಮಾಡಿ,ಸ್ಪಶಿ೯ಸಿ ಕಲಿಯುವವರು :-

ಭೋಧನೆ  ಮತ್ತು ಕಲಿಕೆ ಹಲವು  ಚಂಚಲತೆಗಳಿಂದ  ಕೂಡಿರುವ ಪ್ರಕ್ರಿಯೆಗಳು.  ಕಲಿಯುವವರ  ಕಲಿಕೆಯ ಅನುಭವಗಳ ವ್ಯಾಪ್ತಿಯನ್ನು ವೃಧ್ಧಿಸುವಂತಹ ಗುರಿಯನ್ನು  ತಲುಪಲು  ಶ್ರಮಿಸುವಾಗ  ಮತ್ತು  ಹೊಸ    ಜ್ಞಾನವನ್ನು , ವತ೯ನೆ ಹಾಗೂ  ಕೌಶಲ್ಯವನ್ನು  ಸಂಯೋಜಿಸುವಾಗ ಈ ಭೇಧಗಳು  ಪರಸ್ಪರ  ವತಿ೯ಸುತ್ತವೆ.ಕಳೆದ  ಶತಮಾನದಿಂದ  ಕಲಿಕೆಯ  ಮೇಲೆ  ಅನೇಕ ದೃಷ್ಟಿವೈಶಾಲ್ಯಗಳು  ಮೂಡಿ ಬಂದಿವೆ  .  ಅವುಗಳಲ್ಲಿ  ಅರಿವು  ಮೂಡಿಸಬಲ್ಲ ( ಕಲಿಕೆ ಒಂದು ಮಾನಸಿಕ ಕಾರ್ಯಕ್ರಿಯೆ): ಮತ್ತು  ರಚನಾತ್ಮಕ (ಜ್ಞಾನವು  ಕಲಿಯುವ  ಪ್ರಕ್ರಿಯೆಯ ಫಲಿತಾಂಶದ ಒಂದು ಭಾಗ)  ಮುಖ್ಯವಾದವು.   ನಿಜವಾಗಿ  ಹೇಳುವುದಾದರೆ  ಈ ಎರಡೂ  ವಾದಗಳನ್ನು  ಬೇರೆಬೇರೆಯಾಗಿ  ಆಲೋಚಿಸುವದಕ್ಕಿಂತ  ಇವುಗಳನ್ನು  ಕಲಿಕೆಯ  ಅನುಭವಗಳ  ಸಮಾಗಮ  ಮಾಡುವ  ಸಂಭವನೀಯ  ವ್ಯಾಪ್ತಿಯ ಜೊತೆಗೆ  ಕಲ್ಪಿಸಿಕೊಳ್ಳುವುದು ಬಹು ಸೂಕ್ತ.  ಅನುಕಲನ ಪ್ರಕ್ರಿಯೆ ಮಾಡುವಾಗ  ಅರಿವು ಮೂಡಿಸಬಲ್ಲ ಶೈಲಿ, ಕಲಿಕೆಯ  ಶೈಲಿ, ನಮ್ಮ  ಬುದ್ಧಿಸೂಕ್ಷ್ಮತೆ ಬಹು ಸಂಖ್ಯಾ ಪ್ರಕೃತಿ ಮತ್ತು  ವಿಶೇಷ  ಬೇಡಿಕೆಯುಳ್ಳ  ಹಾಗೂ ವಿವಿಧ  ಸಂಸ್ಕೃತಿಯ  ಹಿನ್ನೆಲೆಯಿಂದ  ಬಂದಂತಹ ಜನರಿಗೆ  ಸಂಬಂಧಿತ ಕಲಿಕೆ , ಈ ಎಲ್ಲ ಅಂಶಗಳನ್ನು  ಗಣನೆಗೆ ತೆಗೆದುಕೊಳ್ಳುವುದು ಅತಿ ಮುಖ್ಯ.

ರಚನಾತ್ಮಕತೆಯ ತತ್ವ

ರಚನಾತ್ಮಕತೆಯು  ವಿದ್ಯಾಥಿ೯ಗಳ  ಪ್ರಚಲಿತ  ಜ್ಞಾನ,  ನಂಬಿಕೆ  ಮತ್ತು   ಕೌಶಲ್ಯಗಳನ್ನು  ಸೆಳೆಯುವ ಒಂದು  ಕಲಿಕಾ ಯುಕ್ತಿಯಾಗಿದೆ.    ಈ ರಚನಾತ್ಮಕವಾದ ಮಾಗ೯ದಿಂದ ವಿದ್ಯಾಥಿ೯ಗಳು , ಕಲಿಕಾ  ಮುಂಚಿನ  ಅವಸ್ಥೆ  ಹಾಗೂ  ಹೊಸ ಮಾಹಿತಿಯ  ಮುಖಾಂತರ  ಹೊಸ ತಿಳುವಳಿಕೆಯನ್ನು ಸಂಯೋಜಿಸಿಕೊಳ್ಳುತ್ತಾರೆ.ರಚನಾತ್ಮಕವಾದ ಶಿಕ್ಷಕನು  ಸಮಸ್ಯೆಗಳನ್ನು  ನಿದಶಿ೯ಸುತ್ತಾನೆ.  ವಿದ್ಯಾಥಿ೯ಗಳ  ಪರಿಶೋಧನೆಯನ್ನು  ನಿಯಂತ್ರಿಸುತ್ತಾನೆ  ಮತ್ತು   ವಿದ್ಯಾಥಿ೯ಗಳ  ವಿಚಾರಣೆಗಳಿಗೆ  ಮಾಗ೯ದಶ೯ಕನಾಗಿರುತ್ತಾನೆ  ಹಾಗೂ  ಹೊಸ ವಿಚಾರದ ಪದ್ಧತಿಗೆ ಉತ್ತೇಜನ  ನೀಡುತ್ತಾನೆ.    ಅತ್ಯಧಿಕವಾದ ಅಸಿದ್ಧ   ಆಧಾರಾಂಶಗಳೊಂದಿಗೆ ಪ್ರಾಥಮಿಕ  ಸಾಧನೋಪಾಯಗಳು  ಮತ್ತು  ಪರಸ್ಪರ  ವತಿ೯ಸುವ  ಸಾಮಗ್ರಿಗಳೊಂದಿಗೆ  ಕಾರ್ಯೋನ್ಮುಖವಾಗಿಸುವ  ರಚನಾತ್ಮಕ ಬೋಧನೆಯು  ವಿದ್ಯಾಥಿ೯ಗಳಿಗೆ  ತಮ್ಮ ಸ್ವಂತ  ಆಧಾರಾಂಶಗಳೊಂದಿಗೆ  ಕೆಲಸ ಮಾಡಲು  ತಮ್ಮ ಸ್ವಂತ  ಪರಿಶೋಧನೆಗಳಿಗೆ  ಮಾಗ೯ನಿದೇ೯ಶನ  ಮಾಡಲು  ಪ್ರಚೋದಿಸುತ್ತದೆ.    ಅಂತಿಮವಾಗಿ  ವಿದ್ಯಾಥಿ೯ಗಳು  ಕಲಿಕೆಯನ್ನು ಒಂದು  ವಿಕಸಿತವಾದ  ಜ್ಞಾನದ  ಶೇಖರಣೆ ಎಂದು  ಆಲೋಚಿಸಲು ಪ್ರಾರಂಭಿಸುತ್ತಾರೆ.    ರಚನಾತ್ಮಕ ವಾದದ  ಮಾಗ೯ಗಳು  ವಯಸ್ಕರನ್ನೊಳಗೊಂಡು  ಎಲ್ಲ  ವಯೋಮಾನದ  ಜ್ಞನಾಭಿಸಕ್ತರಲ್ಲಿ ಒಳ್ಳೆಯ ಪ್ರಭಾವವನ್ನು ಬೀರುತ್ತದೆ.

ವಿವರಣೆ

ಬ್ರೂನರ್  ಅವರ  ತಾತ್ವಿಕ ಚೌಕಟ್ಟಿನಲ್ಲಿರುವ  ಒಂದು ಪ್ರಮುಖವಾದದ  ಅನ್ವಯ  ಕಲಿಕೆಯು  ಕಲಿಯುವವರ  ತಮ್ಮ  ಪ್ರಚಲಿತ / ಹಿಂದಿನ ಜ್ಞಾನದ  ಆಧಾರದ ಮೇಲೆ  ಹೊಸ  ವಿಚಾರ ಅಥವಾ  ಕಲ್ಪನೆಯನ್ನು  ರಚಿಸುವ  ಒಂದು  ಆಸಕ್ತ  ಪ್ರಕ್ರಿಯೆಯಾಗಿರುತ್ತದೆ.   ಕಲಿಯುವವರು ಅರಿವು ಮೂಡಿಸಬಲ್ಲ ರಚನೆಯ  ಆಧಾರದ ಮೇಲೆ  ಮಾಹಿತಿಯನ್ನು  ಆಯ್ದು ಮಾಪ೯ಡಿಸುತ್ತಾರೆ.  ಪೂವ೯  ಸಿದ್ಧಾಂತವನ್ನು  ರಚಿಸುತ್ತಾರೆ  ಮತ್ತು  ನಿಣ೯ಯಗಳನ್ನು  ಕೈಗೊಳ್ಳುತ್ತಾರೆ.   ಅರಿವು  ಮೂಡಿಸಬಲ್ಲ ರಚನೆಯು (ಅಂದರೆ   ನಕ್ಷೆ, ಮಾನಸಿಕ ಮಾದರಿಗಳು.) ಅನುಭವಗಳ  ಅಥ೯  ಮತ್ತು  ಸಂಘಟನೆಯನ್ನು  ಪೂರೈಸುತ್ತದೆ .  ಮತ್ತು  ಒಬ್ಬ ವ್ಯಕ್ತಿಯನ್ನು  ದತ್ತ  ತತ್ರಾಂಶದ  ಆಚೆಗೆ ಹೋಗಿ  ಚಿಂತಿಸುವಂತೆ  ಸಮ್ಮತಿಸುತ್ತದೆ.

ಸಲಹೆ  ಸೂಚನೆಗಳಿಗೆ  ಸಂಬಂಧಿಸಿದಂತೆ  ವಿದ್ಯಾಥಿ೯ಗಳು  ತಮ್ಮಷ್ಟಕ್ಕೆ  ತಾವೇ ಮೂಲ  ತತ್ವಗಳನ್ನು  ಕಂಡು ಹಿಡಿಯುವಂತೆ  ಭೋಧಿಸುವವರು  ವಿದ್ಯಾಥಿ೯ಗಳಿಗೆ  ಆ ವಿಷಯದಲ್ಲಿ  ಉತ್ತೇಜನ  ಕೊಡಲು  ಪ್ರಯತ್ನಿಸಬೇಕು.   ಭೋಧಕ  ಮತ್ತು  ವಿದ್ಯಾಥಿ೯  ಅತ್ಯಂತ ಆಸಕ್ತಿಯಿಂದ  ಮಾತುಕತೆಯಲ್ಲಿ  ತೊಡಗಬೇಕು.   (ಅಂದರೆ ಸಾಕ್ರೆಟಿಸ್ ನ ಕಲಿಕೆ) ಕಲಿಯಬೇಕಾದ  ಮಾಹಿತಿಯನ್ನು  ಕಲಿಯುವವರ  ಹಾಲಿ  ತಿಳುವಳಿಕೆಗೆ   ಅನುಗುಣವಾಗುವ  ಆಕಾರದಲ್ಲಿ  ಭಾಷಾಂತರಿಸುವುದು ಬೋಧಕನ   ಕೆಲಸವಾಗಿದೆ.   ವಿದ್ಯಾಥಿ೯ಗಳು ಈಗಾಗಲೇ  ಕಲಿತದ್ದನ್ನು  ನಿರಂತರವಾಗಿ  ತಮ್ಮಷ್ಟಕ್ಕೆ  ತಾವೇ ರಚಿಸಿಕೊಳ್ಳುವಂತೆ  ಪಠ್ಯಕ್ರಮವನ್ನು  ‘ಸುರುಳಿ ವಿಧಾನ ’  ಅನುಸರಿಸಿ  ಆಯೋಜಿಸಬೇಕು. ಬ್ರೂನರ್ (೧೯೬೬) ರ ಕೃತಿಯ  ಪ್ರಕಾರ ಭೋಧನೆಯ  ಈ ಕೆಳಕಂಡ  ನಾಲ್ಕು ಮುಖ್ಯ ವಿಷಯಗಳನ್ನು  ಸಂಭೋದಿಸಬೇಕೆಂದು  ಹೇಳುತ್ತದೆ.

  • ಕಲಿಯುವ ಕಡೆಗೆ ಒಲವು ( ಮನೋಭಾವ)
  • ಕಲಿಯುವವರಿಗೆ  ಅತಿ ಮನ:ಪೂವ೯ಕವಾಗಿ ಗ್ರಹಿಸುವಂತೆ. ಜ್ಞಾನಕೋಶವನ್ನು ರಚಿಸುವ ವಿಧಾನಗಳು.
  • ವಾಸ್ತವಿಕ ‘ ವಾದವನ್ನು ’ ಪ್ರಸ್ತುತ ಪಡಿಸಲಿಕ್ಕೆ  ಬರುವಂತಹ  ಅತಿ ಪರಿಣಾಮಕಾರಿಯಾದ  ಕ್ರಮಾನುಗತಿ.
  • ಪ್ರತಿಫಲ ಮತ್ತು  ಶಿಕ್ಷಯ ಸೃಷ್ಟಿ ಮತ್ತು  ಗತಿ.

ರಚನಾತ್ಮಕ  ಜ್ಞಾನದ ಒಳ್ಳೆಯ  ವಿಧಾನಗಳು  ಹೊಸ  ಪ್ರಸ್ತಾಪಗಳನ್ನು  ಸುಲಭಗೊಳಿಸಲು , ಉತ್ಪತ್ತಿ ಮಾಡಲು  ಮತ್ತು  ಪ್ರಗತಿಪರ  ಯುಕ್ತಿಯಿಂದ  ನಿವ೯ಹಣೆ  ಮಾಡಲು  ಫಲಿಸುವಂತಿರಬೇಕು. ಇತ್ತೀಚಿನ ಬ್ರೂನರ್ (೧೯೮೬,೧೯೯೦,೧೯೯೬) ರ  ಕೃತಿಗಳಲ್ಲಿ  ಅವರು  ತಮ್ಮ ತಾತ್ವಿಕ ಚೌಕಟ್ಟನ್ನು  ಕಾನೂನಿನ ಬಳಕೆ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ  ಕಲಿಕೆಯ ಅಂಶಗಳನ್ನು  ಒಳಗೊಳ್ಳುವಂತೆ  ವಿಸ್ತರಿಸಿದ್ದಾರೆ.

ವ್ಯಾಪ್ತಿ / ಅನ್ವಯಿಸುವಿಕೆ

ಬ್ರೂನರ್ ಅವರ  ರಚನಾತ್ಮಕ ವಾದದ  ತತ್ವವು  ಚಿಂತನದ  ಅಭ್ಯಾಸವನ್ನು ಆಧರಿಸಿದ ಸಲಹೆ  ಸೂಚನೆಗಳ  ಒಂದು  ಸಾಮಾನ್ಯ  ಚೌಕಟ್ಟಾಗಿರುತ್ತದೆ.   ಈ ತತ್ವದ  ಹೇರಳವಾದ  ಭಾಗವು  ಮಕ್ಕಳ  ಅಭಿವೃದ್ಧಿ  ಸಂಶೋಧನೆಗೆ ಸಂಬಂಧಿಸಿದೆ.  ಬ್ರೂನರ್ (೧೯೬೦) ರ ವಿಚಾರದ  ಮುಖ್ಯಾಂಶಗಳು  ವಿಜ್ಞಾನ ಮತ್ತು  ಗಣಿತದ ಕಲಿಕೆಯ  ಮೇಲೆ  ಕೇಂದ್ರೀಕೃತವಾದ  ಒಂದು  ಸಮ್ಮೇಳನದಿಂದ  ಉತ್ಪತ್ತಿಯಾಗಿದೆ.   ಬ್ರೂನರ್  ಅವರು  ಯುವ ಮಕ್ಕಳಿಗಾಗಿ  ಆಯೋಜಿಸಿದ  ಗಣಿತ  ಮತ್ತು  ಸಮಾಜ ವಿಜ್ಞಾನದ  ಕಾಯ೯ಕ್ರಮಗಳಲ್ಲಿ  ತಮ್ಮ ತತ್ವಗಳನ್ನು  ವಿವರಿಸಿದ್ದಾರೆ.  ಬ್ರೂನರ್ , ಗುಡ್ನೌ  ಮತ್ತು  ಆಸ್ಟಿನ್ (೧೯೫೧) ರವರು  ತಮ್ಮ ತಾಕಿ೯ಕ ಪ್ರಕ್ರಿಯೆಗಳ ಮುಖಾಂತರ  ಮೂಲ ಅಭಿವೃದ್ಧಿಯ  ಚೌಕಟ್ಟನ್ನು  ವಣಿ೯ಸಿದ್ದಾರೆ.   ಬ್ರೂನರ್ (೧೯೮೩) ರವರ  ಕೃತಿಯು  ಯುವ ಮಕ್ಕಳ ಭಾಷಾ ಕಲಿಕೆಯನ್ನು  ಏಕಾಗ್ರಗೊಳಿಸುತ್ತದೆ.   ರಚನಾತ್ಮಕ  ವಾದವು  ತತ್ವಜಾನ ಮತ್ತು  ವಿಜ್ಞಾನದಲ್ಲಿ  ಒಂದು ಅತಿ ವಿಶಾಲವಾದ  ಕಲ್ಪನೆಗಳ  ಚೌಕಟ್ಟು ಆಗಿರುತ್ತದೆ ಎಂದು  ಗಮನಿಸಬೇಕು.  ಬ್ರೂನರ್ ರವರ  ವಾದವು  ಒಂದು  ನಿದಿ೯ಷ್ಟ ದೃಷ್ಟಿಯನ್ನು  ಬಿಂಬಿಸುತ್ತದೆ.ಉದಾಹರಣೆ:- ಈ ಉದಾಹರಣೆಯನ್ನು ಬ್ರೂನರ್ (೧೯೭೩) ರವರ ಕೃತಿಯಿಂದ ಆಯ್ದಿರುತ್ತದೆ.

ಮಗುವು ಯಾವಾಗ  ತನ್ನ ಮುಷ್ಟಿಯಲ್ಲಿರುವ  ಹುರಳೆ ಬೀಜಗಳನ್ನು  ಸಂಪೂಣ೯ವಾಗಿ  ಉದ್ದ ಮತ್ತು ಅಡ್ಡ  ಸಾಲುಗಳಲ್ಲಿ  ಇಡಲಾಗದೆಂದು ರಚನಾ ಮೂಲಕ  ಕಂಡುಕೊಂಡಾಗ ಪ್ರಧಾನ  ಸಂಖ್ಯೆಗಳ  ಕಲ್ಪನೆಯು  ಅತ ಸರಳವಾಗಿ  ಅಳಿಯುತ್ತದೆ  ಎಂದು  ತೋರುತ್ತದೆ.   ಇಂತಹ ಪರಿಣಾಮಗಳನ್ನು  ಒಂದೇ ಒಂದು ಉದ್ದ ಸಾಲಿನಲ್ಲಿ  ಇಡಬಹುದು ಅಥವಾ ಅವುಗಳನ್ನು  ‘ ಉದ್ದ-ಅಡ್ಡ ಸಾಲಿನ ವಿನ್ಯಾಸದಲ್ಲಿ   ಒಂದು  ಅಥವಾ ಹಲವು ಬೀಜಗಳು  ತುಂಬಲಿಕ್ಕೆ  ಉಳಿಯುವಂತೆ  ಮಾಡುವ  ಪದ್ಧತಿಯಲ್ಲಿ  ಜೋಡಿಸಬೇಕು.    ಈ ಪದ್ಧತಿಗಳಿಂದ  ಮಗು  ಕಲಿತಾಗ ಅದನ್ನು ಪ್ರಧಾನ ಎಂದು ಕರೆಯಬಹುದಾಗಿದೆ.  ಮಗುವು ಮೊದಲನೇ  ಮೆಟ್ಟಿಲಿನಿಂದ  ಗುಣಕ ಕೋಷ್ಟಕ (ಪರಿಣಾಮದ ಪೂತಿ೯ಯಾದ ಗುಣಕದ ಉದ್ದ  ಮತ್ತು ಅಡ್ಡ  ಸಾಲುಗಳ ದಾಖಲೆ ಪತ್ರ) ಗುರುತಿಸುವದರೆಡೆಗೆ  ಹೋಗಲು ಇದು ಸಹಾಯಕವಾಗುತ್ತದೆ.  ಇಲ್ಲಿ  ಅಪವತ೯ನ, ಗುಣಾಕಾರ ಮತ್ತು ಪ್ರಮುಖ  ಸಂಖ್ಯೆಗಳ  ರಚನೆಯನ್ನು  ಸಚೇತನಗೊಳಿಸಬಹುದಾಗಿದೆ.

ಮೂಲ ತತ್ವಗಳು

  • ವಿದ್ಯಾಥಿ೯ಯು  ಮನಸಾರೆ ಕಲಿಯಲು  ಮತ್ತು ಸಬಲರಾಗಲು  ಮಾಡುವಂತಹ  (ಸಿದ್ಧೊಪ್ರಜತೆ)  ಸಂದಭ೯  ಮತ್ತು  ಅನುಭವಗಳಿಗೆ  ಸಲಹೋಪದೇಶವು  ಸಂಬಂಧಿಸಿರಲೇಬೇಕು.
  • ಸಲಹೋಪದೇಶವನ್ನು  ವಿದ್ಯಾಥಿ೯ಗಳು  ಅತೀ ಸರಳವಾಗಿ  ಗ್ರಹಿಸುವಂತೆ  ರಚಿಸಿರಲೇಬೇಕು (ಸುರಳಿಯಾಕಾರದ ಸಂಘಟನೆ)
  • ಗೊತ್ತಿರುವ  ಮತ್ತು ಗೊತ್ತಿರದ ಎರಡು ಯೋಜನೆಗಳನ್ನು  ಸಮಾನಾಂತರವಾಗಿ  ಅಂದಾಜಿಸಲು  ಅನುಕೂಲ ಮಾಡುವಂತೆ  ಮತ್ತು ಅಂತರವನ್ನು  ತುಂಬುವಂತೆ  ಸಲಹೋಪದೇಶವನ್ನು  ವಿನ್ಯಾಸಗೊಳಿಸತಕ್ಕದ್ದು.  (ದತ್ರ ಮಾಹಿತಿಯಿಂದಾಚೆಗೆ ವಿಚಾರಮಾಡುವುದು.)

ಅನುಭವಕ್ಕೆ ಸಂಭಂದಿಸಿದ ಕಲಿಕೆ

ಅನುಭವದ – ಕಲಿಕೆ’ ಯ ವಾದವು ಕಲಿಕೆಯ ಪ್ರಕ್ರಿಯೆಯ ಒಂದು ಸಮಗ್ರ ಮಾದರಿಯನ್ನು ಸರಳಾನೇಕ ಮಾದರಿಯನ್ನು ಪೂರೈಸುತ್ತದೆ. ಈ ಎರಡೂ ಮಾದರಿಗಳು , ಜನರು ಹೇಗೆ ಕಲಿಯುವರು , ಹೇಗೆ ಬೆಳೆಯುವರು ಮತ್ತು ಹೇಗೆ ಅಭಿವೃದ್ಧಿ ಹೊಂದುವರು ಎಂಬುದರ ಬಗ್ಗೆ ನಾವು ತಿಳಿದಿದ್ದರ ಜೊತೆಗೆ ಏಕರೂಪವಾಗಿರುತ್ತದೆ. ಈ ವಾದವನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಅನುಭವಗಳು ಬೀರುವ ಕೇಂದ್ರ ಪಾತ್ರವನ್ನು ಒತ್ತಿ ಹೇಳಲು ಮತ್ತು ಅನುಭವಗಳ ಕಲಿಕೆಯನ್ನು ಬೇರೆಲ್ಲ ವಾದಗಳಿಗಿಂದ ಭಿನ್ನ ವೆಂದು ಸ್ಪಷ್ಟಪಡಿಸಲಿಕೆ “ ಅನುಭವದ ಕಲಿಕೆ ” ಎಂದು ಕರೆಯಲ್ಪಡುತ್ತದೆ. ಅದಕ್ಕಾಗಿ ‘ ಅನುಭವದ ’ ಈ ಪದವನ್ನು ಮಾನಸಿಕ ಪ್ರಕ್ರಿಯೆನ್ನೊಳಗೊಂಡ ಜ್ಞಾನದ-ಕಲಿಕೆಯ ವಾದ ಮತ್ತು ವತ೯ನೆಯ ಅಧ್ಯಯನದ ಕಲಿಕೆಯ ವಾದಗಳನ್ನು ಬೇರ್ಪಡಿಸಲು ಉಪಯೋಗಿಸಲಾಗುತ್ತದೆ. ಅನುಭವವನ್ನು ಮಾಪ೯ಡಿಸಿ ಅದರ ಮುಖಾಂತರ ಜ್ಞಾನವನ್ನು ತಯಾರಿಸುವ ಒಂದು ಪ್ರಕ್ರಿಯೆಯೇ ‘ ಕಲಿಕೆ ’ ಎಂದು ಅನುಭವದ ಕಲಿಕೆಯ ವಾದವು ಅದನ್ನು ವಾಖ್ಯಾನ ಮಾಡುತ್ತದೆ. ಗ್ರಹಿಕೆ ಮತ್ತು ಅನುಭವಗಳ ಮಾಪಾ೯ಡುಗಳಿಂದ ಕೂಡಿದ ಪ್ರತಿಫಲದಿಂದಲೇ ಜ್ಞಾನವಾಗುತ್ತದೆ.

ವಿವರಣೆ

ರೋಜರ್ಸ ಅವರು ಮಾನಸಿಕ  ಪ್ರಕ್ರಿಯೆನ್ನೊಳಗೊಂಡ  ಕಲಿಕೆ  (ಅಥ೯ ಗಭಿ೯ತ) ಗಳನ್ನು  ವಿಂಗಡಿಸಿದ್ದಾರೆ.  ಮೊದಲನೆಯ  ವಾದವು ಶಬ್ದಸಂಗ್ರಹವನ್ನು   ಕಲಿಯುವುದು ಅಥವಾ ಗುಣಾಕಾರದ ಕೋಷ್ಟಕವನ್ನು   ಕಲಿಯುವಂತಹ  ಶೈಕ್ಷಣಿಕ  ಜಾನಕ್ಕೆ  ಅನುಗುಣವಾಗಿದೆ.    ಎರಡನೆಯದು ಕಾರನ್ನು ರಿಪೇರಿ ಮಾಡಲು  ಇಂಜಿನ್ ಗಳ  ಬಗ್ಗೆ  ಕಲಿಯುವಂತಹ ವ್ಯಾವಹಾರಿಕ ಜ್ಞಾನವೆಂದು  ಉಲ್ಲೇಖಿಸಲಾಗುತ್ತದೆ. ಈ ಭಿನ್ನತೆಯ  ಸಂಕೇತವು  ಏನೆಂದರೆ  ‘ ಅನುಭವದ-ಕಲಿಕೆ ’ಯು ಕಲಿಯುವವರ  ಬೇಡಿಕೆ ಮತ್ತು  ಆವಶ್ಯಕತೆಗಳನ್ನು  ಸಂಭೋಧಿಸುತ್ತದೆ.  ರೋಜರ್ಸ್ ಅವರು ಈ ಅನುಭವಗಳ  ಕಲಿಕಾ ಗುಣಗಳ  ಪಟ್ಟಿಯನ್ನು  ಹೀಗೆ  ಮಾಡುತ್ತಾರೆ:  ವೈಯಕ್ತಿಕ ಸಮಾವೇಶ , ಸ್ವಂತ: ಪರಿಚಯಿಸಿದ  ಕಲಿಯುವವರಿಂದ  ಮೌಲ್ಯಮಾಪನ  ಮಾಡಿದ , ಮತ್ತು ಕಲಿಯುವವರ ಮೇಲೆ  ಪೂಣ೯  ವ್ಯಾಪ್ತಿ  ಪರಿಣಾಮಕಾರಿಯಾಗುವಂತಹದ್ದು.ರೋಜರ್ಸ ಅವರಿಗೆ  ‘ ಅನುಭವದ – ಕಲಿಕೆ ’ ಯು ವೈಯಕ್ತಿಕ ಬದಲಾವಣೆ ಮತ್ತು  ಬೆಳವಣಿಗೆಗೆ  ಸಮಾನಾಥ೯ವಾಗಿರುತ್ತದೆ.  ರೋಜರ್ಸ  ಅವರು ತಿಳಿದ ಹಾಗೆ ಎಲ್ಲ  ಮಾನವರಿಗೆ  ಕಲಿಯುವ ನೈಸಗಿ೯ಕ ಒಲವು  ಇದ್ದೇ ಇರುತ್ತದೆ.   ಭೋದಕನ ಪಾತ್ರವೇನೆಂದರೆ ಅವನು  ಈ ತರಹದ ಕಲಿಕೆಗೆ ಅನುಕೂಲವನ್ನು ಮಾಡಿಕೊಡಬೇಕು.  ಇದು ಈ ಕೆಳಗಿನ ವಿಷಯಗಳನ್ನೊಳಗೊಂಡಿರುತ್ತದೆ.

  1. ಕಲಿಕೆಯು  ಧನಾತ್ಮಕ ವಾತಾವರಣವನ್ನು  ಸ್ಥಾಪಿಸುವುದು .
  2. ಕಲಿಯುವವನ (ರ) ಮೂಲೋದ್ದೇಶವನ್ನು  ಸ್ಪಷ್ಟಗೊಳಿಸಬೇಕು.
  3. ಕಲಿಯಲು ಬೇಕಾದ ಮೂಲಾಧಾರಗಳನ್ನು  ಉಪಲಬ್ಧವಾಗುವಂತೆ ಮಾಡುವುದು  ಮತ್ತು  ಸಂಯೋಜಿಸುವುದು.
  4. ಕಲಿಕೆಯ ಬೌದ್ಧಿಕ ಮತ್ತು  ಭಾವನಾತ್ಮಕ ಭಾಗಗಳನ್ನು  ಸಮತೋಲನವಾಗಿರಿಸುವುದು.
  5. ಕಲಿಯುವವರ ಜೊತೆಗೆ  ವಿಚಾರ ಮತ್ತು  ಭಾವನೆಗಳನ್ನು  ಹಂಚಿಕೊಳ್ಳಬೇಕು.  ಆದರೆ  ಪ್ರಭುತ್ವ ತೋರುವಂತಿರಬಾರದು.

ರೋಜರ್ಸ ಅವರ ಪ್ರಕಾರ ಯಾವಾಗ ಕಲಿಕೆಯು ಅನುಕೂಲಕರವಾಗಿರುತ್ತದೆ ಎಂದರೆ

  1. ವಿದ್ಯಾಥಿ೯ಯು  ಕಲಿಯುವ ಪ್ರಕ್ರಿಯೆಯಲ್ಲಿ  ಸಂಪೂಣ೯ವಾಗಿ  ಭಾಗವಹಿಸಿದಾಗ  ಮತ್ತು ಅದರ ಸೃಷ್ಟಿ ಮತ್ತು ಗುರಿಯ ಬಗ್ಗೆ  ಹಿಡಿತವಿದ್ದಾಗ .
  2. ಅದು  ಪ್ರಾಥಮಿಕವಾಗಿ  ಕಾಯ೯ರೂಪದ , ಸಾಮಾಜಿಕ , ವೈಯಕ್ತಿಕ ಅಥವಾ ಸಂಶೋಧನೆಗಳ  ವಾದಾತ್ಮಕ  ವಿಷಯದ  ಮೇಲೆ ನೇರ   ಮುಖಾಮುಖಿಯಾದಾಗ.
  3. ಮುನ್ನಡೆ ಮತ್ತು  ಯಶಸ್ಸಿನ ಮೌಲ್ಯಾಂಕನಕ್ಕೆ  ಸ್ವಮೌಲ್ಯಮಾಪನವು  ಒಂದು ಪ್ರಧಾನ ವಿಧಾನವಾದಾಗ.
  4. ರೋಜರ್ಸ ಅವರು  ಕಲಿಯಲಿಕ್ಕೆ ಕಲಿಯುವವರ  ಮತ್ತು  ಬದಲಾವಣೆಗೆ ಔದಾರ್ಯತೆಯನ್ನು  ಮಹತ್ವವನ್ನು ಕೂಡಾ ಒತ್ತಿ ಹೇಳುತ್ತಾರೆ.

ಕಾರ್ಯಗತಗೊಳಿಸುವಿಕೆ

ಅನುಭವದ ಕಲಿಕೆ ಒಂದು  ಅತೀ ಪರಿಣಾಮಕಾರಿ ಶೈಕ್ಷಣಿಕ  ವಿಧಾನವಾಗಬಹುದು .  ಅದು  ಕಲಿಯುವವರ  ಬೇಕು ಬೇಡಿಕೆಗಳನ್ನು  ಅತಿ ವೈಯಕ್ತಿಕವಾಗಿ  ಸಂಭೋದಿಸುವುದರ  ಮೂಲಕ ಕಲಿಯುವವರನ್ನು ಕಾರ್ಯನಿರತರನ್ನಾಗಿ ಮಾಡುತ್ತದೆ. ಅನುಭವದ ಕಲಿಕೆಗೆ  ಸ್ವ ಪ್ರಚೋದನೆ  ಮತ್ತು  ಸ್ವ ಮೌಲ್ಯಮಾಪನದಂತಹ ಗುಣಗಳು  ಬೇಕಾಗುತ್ತವೆ.   ಅನುಭವದ ಕಲಿಕೆಯು  ನಿಜವಾಗಿ  ಪರಿಣಾಮಕಾರಿಯಾಗಬೇಕಾದರೆ ಅದು ಸಂಪೂಣ೯ವಾಗಿ  ಕಲಿಕೆಯ ಚಕ್ರವನ್ನು  ಅಂದರೆ ಗುರಿನಿದ೯ರಿಸುವುದರಿಂದ   ಪರೀಕ್ಷಸುವವರೆಗೆ  ಮತ್ತು ವೀಕ್ಷಿಸುವವರೆಗೆ , ಪುನವಿ೯ಮಶೆ೯ಯಿಂದ ಕೊನೆಯ ಕಾರ್ಯಗತ ಯೋಜನೆಯವರೆಗೆ  ಉಪಯೋಗಿಸಬೇಕು. ಈ ತರಹದ  ಪರಿಪೂಣ೯ ಪ್ರಕ್ರಿಯೆಯು  ಕೌಶಲ್ಯಗಳನ್ನು  ಕಲಿಸಲಿಕ್ಕೆ , ಹೊಸ ಮನೋವೃತ್ತಿಯನ್ನು  ಕಲಿಯಲಿಕ್ಕೆ ಅಥವಾ ಸಂಪೂಣ೯  ಹೊಸ ವಿಚಾರದ  ದಾರಿಗಳನ್ನು  ಕಲಿಯಲಿಕ್ಕೆ  ಎಡೆಮಾಡಿಕೊಡುತ್ತದೆ. ನಾವು ಚಿಕ್ಕವರಿದ್ದಾಗ  ನಾವು ಆಡಿದಂತಹ ಆಟಗಳನ್ನು  ನೆನಪಿಸಿಕೊಳ್ಳಿ . ಸಾದಾ ಆಟವಾದ  ಕುಂಟೆಬಿಲ್ಲೆ ಆಟವು ಗುಂಪು ನಿವ೯ಹಣೆ , ಸಂವಹನ ಮತ್ತು   ಪ್ರತಿನಿಧಿತ್ವದಂತಹ ಅನೇಕ ಅಮೂಲ್ಯವಾದ  ಶೈಕ್ಷಣಿಕ ಶಿಸ್ತು ಮತ್ತು  ಸಾಮಾಜಿಕ  ಕೌಶಲ್ಯಗಳನ್ನು  ಕಲಿಸುತ್ತದೆ.  ಆಟಗಳು ಅನುಭವದ  ಕಲಿಕೆಯಲ್ಲಿ  ಲೋಕಪ್ರಿಯವಾಗಲು ಕಾರಣವೆಂದು, ಅದು ತಮಾಷೆ ವಿಷಯವಾಗಿದೆ.  ವಿನೋದದ ಕಲಿಕೆಯು ಕಲಿಯುವವರಿಗೆ ಪಾಠವನ್ನು  ಹೆಚ್ಚು ಸಮಯದವರೆಗೆ  ನೆನಪಿಡಲು ಸಹಾಯ ಮಾಡುತ್ತದೆ.ಅತಿ ವಿದ್ಯಾವಂತರು  ಕಲಿಕೆಯ ಪ್ರಕ್ರಿಯೆಯಲ್ಲಿ  ಅನುಭವ ಯಾವ ಮುಖ್ಯ ಪಾತ್ರವನ್ನು  ವಹಿಸುತ್ತದೆ ಎಂದು ತಿಳಿದುಕೊಳ್ಳುತ್ತಾ  ಅತಿಯಾದ ನಗುವಿನ ಜೊತೆಗೆ ಕಲಿಯುವವರ ಸಾಮಥ್ಯ೯ ಸನ್ಮಾನದ ಜೊತೆಗೆ ವಿನೋದ ಕಲಿಕೆಯ ಪರಿಸರವು  ಒಂದು  ಪರಿಣಾಮಕಾರಿ ಅನುಭವದ  ಕಲಿಕೆಯ  ಪರಿಸರವನ್ನು  ಪ್ರೋತ್ಸಾಹಿಸುತ್ತದೆ.  ಇದು  ಮುಖ್ಯವಾಗಿ  ವ್ಯಕ್ತಿಯು  ಹೊಸಜ್ಞಾನದ  ತಿಳುವಳಿಕೆಯನ್ನು ಪಡೆಯಲು  ಮತ್ತು  ಮಾಹಿತಿಯನ್ನು ಬಹುಕಾಲದವರೆಗೆ  ಶೇಖರಿಸಿ ನೇರವಾಗಿ ತಮ್ಮಷ್ಟಕ್ಕೆ ತಾವೇ ಅನುಭವದಲ್ಲಿ  ಸಮಾವೇಶಗೊಳ್ಳುವಂತೆ ಉತ್ತೇಜಿಸುತ್ತದೆ.

ಮೂಲತತ್ವಗಳು

  • ಯಾವಾಗ ವಿಷಯದ ಪ್ರಕೃತಿಯು   ವಿದ್ಯಾಥಿ೯ಯ ವೈಯಕ್ತಿಕ  ಅಭಿರುಚಿಗೆ  ಸಮಂಜಸ ವಾಗಿರುತ್ತದೆಯೋ ಆಗ  ಅಥ೯ಗಭಿ೯ತ  ಕಲಿಕೆಯು  ಸಂಭವಿಸುತ್ತದೆ.
  • ಬಾಹ್ಯ ಬೆದರಿಕೆ  ಅತಿಕಡಿಮೆ  ಇದ್ದಾಗ  ವೈಯಕ್ತಿಕ ಬೆದರಿಕೆಯನ್ನುಂಟು  ಮಾಡುವ  ಕಲಿಕೆ ( ಹೊಸ ಮನೋವೃತ್ತಿ ಅಥವಾ  ಯಥಾದೃಶ್ಯರೂಪಣ )ಗಳ  ಸದೃಶೀಕರಣ  ಅತೀ ಸರಾಗವಾಗುತ್ತದೆ.
  • ವೈಯಕ್ತಿಕ  ಬೆದರಿಕೆ  ಕಡಿಮೆ  ಮಟ್ಟದಲ್ಲಿದ್ದಾಗ  ಕಲಿಕೆಯು  ಅತಿ  ವೇಗವಾಗಿ  ಮುನ್ನಡೆಯುತ್ತದೆ.
  • ಸ್ವಯಂ –ಪ್ರಚೋದಿತ  ಕಲಿಕೆಯು ಅತ್ಯಂತ  ಕೊನೆಯವರೆಗೆ  ಉಳಿಯುತ್ತದೆ ಮತ್ತು  ಸವೋ೯ತ್ತಮವಾಗಿರುತ್ತದೆ.

ಕಲ್ಪನಾತ್ಮಕ ಕಲಿಕೆ

ಮಾನವರು , ಅವಲೋಕನದ ಮೂಲಕ, ಟಿಪ್ಪಣಿ ತೆಗೆದುಕೊಳ್ಳುವ ಮೂಲಕ ಮತ್ತು  ಬೇರೆಯವರ ನಡವಳಿಕೆಯ  ಅನುಕರಣೆಯ  ಮೂಲಕ  ಅತಿ ಪರಿಣಾಮಕಾರಿ ಯಾಗಿ ಕಲಿಯಬಲ್ಲರು.   “ ಕಲ್ಪನಾತ್ಮಕ ಕಲಿಕೆಯು ಕೇಳುವುದರಿಂದ ” ಗಮನಿಸುವುದರಿಂದ , ಸ್ಪಶ೯ದಿಂದ ಅಥವಾ  ಅನುಭವಿಸುವುದರಿಂದ  ಆದ ಸ್ಪಷ್ಟ ಫಲಿತಾಂಶವಾಗಿರುತ್ತದೆ. ಕಲ್ಪನಾತ್ಮಕ ಕಲಿಕೆಯು  ಜ್ಞಾನ ಸಾಧನೆಯನ್ನು  ನೀಡುವ  ಮತ್ತು  ಬೇರೆಯವರ ಅನುಕರಣೆಯಿಂದಾಚೆಗೆ  ಇರುವ  ಒಂದು  ಬಲಿಷ್ಟ ಯಂತ್ರಕ್ರೀಯೆಯಾಗಿರುತ್ತದೆ.   ನಮ್ಮ  ಅಂತಜಾ೯ಲದಿಂದ ಓದುವುದರಿಂದ  ನೀವು  ಏನು ಕಲಿಯುತ್ತಿರುತ್ತೀರೆಂದು  ಯಾವುದೇ  ವಿದ್ಯಮಾನಗಳು  ವಿವರಿಸಲಿಕ್ಕೆ  ಸಾಧ್ಯವಿಲ್ಲ.  ಈ ತರಹದ ಕಲಿಕೆಯು  ಕಲ್ಪನಾ ಕಲಿಕೆಯು  ಪ್ರಾಮುಖ್ಯತೆಯನ್ನು  ವಿವರಿಸುತ್ತದೆ.ಕಲ್ಪನಾ ಕಲಿಕೆಯನ್ನು  ನಮ್ಮ ತಲೆಯಲ್ಲಿರುವ  ಮಾಹಿತಿಯನ್ನು ಯುಕ್ತಿಯಿಂದ ನಿಭಾಯಿಸುವ ಒಂದು ಕಾರ್ಯವಿಧಾನವೆಂದು  ಅಥವಾ  ಮನಸ್ಸಿನಿಂದ ಜ್ಞಾನ ಮತ್ತು ಕೌಶಲ್ಯಗಳನ್ನು  ಪಡೆಯುವದು  ಎಂದು ವ್ಯಾಖ್ಯಾನ ಮಾಡಲಾಗುತ್ತದೆ.   ಕಲ್ಪನಾತ್ಮಕ  ಪ್ರಕ್ರಿಯೆಯು ಭೌತಿಕ  ವಸ್ತುಗಳ  ಘಟನೆಗಳ ಮತ್ತು  ಬೇರೆ ರೀತಿಯ  ಮಾಹಿತಿ  ಕಾರ್ಯವಿಧಾನಗಳನ್ನು  ಮಾನಸಿಕವಾಗಿ  ಪ್ರದಶ೯ನ  ತಯಾರಿಸುವದನ್ನು  ಒಳಗೊಂಡಿರುತ್ತದೆ.

ನಾವು ಕಲ್ಪನಾತ್ಮಕ ಕಲಿಕೆಯನ್ನು ಹೇಗೆ ಕಲಿಯುತ್ತೇವೆ ?

ಕಲ್ಪನಾತ್ಮಕ  ಕಲಿಕೆಯಲ್ಲಿ   ವ್ಯಕ್ತಿಯು  ಆಲಿಸುವುದರಿಂದ  , ಗಮನಿಸುವುದರಿಂದ , ಸ್ಪಶ೯ದಿಂದ  , ಓದುವುದರಿಂದ ಅಥವಾ ಅನುಭವಿಸುವುದರಿಂದ  ತದನಂತರ  ಮಾಹಿತಿಯನ್ನು  ನೆನಪಿಟ್ಟುಕೊಂಡು  ಪ್ರತಿಕ್ರಿಯಿಸುವ  ಮೂಲಕ ಕಲಿಯುತ್ತಾನೆ.   ಚಾಲನೆಕೊಡುವ  ಸ್ನಾಯು ಸಂಯುಕ್ತಕ್ರಿಯೆ ಇಲ್ಲದೇ ಇರುವುದರಿಂದ  ಕಲ್ಪನಾತ್ಮಕ ಕಲಿಕೆಯು  ನಿಷ್ಕ್ರೀಯ ಕಲಿಕೆಯಂತೆ  ತೋರಬಹುದು .  ಏನೇ ಆದರೂ ಕಲಿಯುವವನು ಪರಿಕಲ್ಪನಾ ರೀತಿಯಲ್ಲಿ  ಹೊಸದಾಗಿ  ಒಳಬರುವ ಮಾಹಿತಿಯನ್ನು  ನೆನಪಿಡುವಲ್ಲಿ  ಮತ್ತು ತಯಾರಿಸುವಲ್ಲಿ  ಅತಿ ಕ್ರಿಯಾಶೀಲನಾಗಿರುತ್ತಾನೆ.ಕಲ್ಪನಾತ್ಮಕ  ಕಲಿಕೆಯು ನಮಗೆ ಗುರುತುಗಳ , ಮೌಲ್ಯಗಳ , ನಂಬಿಕೆಗಳ ಮತ್ತು  ಆದಶ೯ಗಳನ್ನೊಳಗೊಂಡ ಸಂಕೀಣ೯ ಸಂಸ್ಕೃತಿಯನ್ನು  ರಚಿಸಲು ಮತ್ತು ಸಾಗಿಸಲು ನಮ್ಮನ್ನು  ಸಮಥ೯ಗೊಳಿಸುತ್ತದೆ.  ಏಕೆಂದರೆ ಕಲ್ಪನಾತ್ಮಕ ಕಲಿಕೆಯ  ಚಟುವಟಿಕೆಯು ಮಾನವನ ವತ೯ನೆಯ ವಿವಿಧ  ರೀತಿಗಳನ್ನು  ಒಳಪಟ್ಟಿರುತ್ತದೆ.  ಅದು ಮೇಲ್ನೋಟಕ್ಕೆ  ಕಲ್ಪನಾತ್ಮಕ ಕಲಿಕೆಯು  ಕೇವಲ ಮಾನವರಿಂದ ಸಾಧ್ಯವೆಂದು  ತೋರಬಹುದು. ಏನೇ ಆದರೂ   ಅನೇಕ ರೀತಿಯ ಪ್ರಭೇದಗಳ  ಪ್ರಾಣಿಗಳು  ಅವಲೋಕನಾ  ಕಲಿಕೆಯ ಸಾಮಥ್ಯ೯ವನ್ನು  ಹೊಂದಿರುತ್ತದೆ.    ಉದಾಹರಣೆಗೆ:- ಪ್ರಾಣಿ ಸಂಗ್ರಹಾಲಯದಲ್ಲಿರುವ  ಒಂದು ಕೋತಿಯು  ಕೆಲವು ಸಲ ಬೇರೆ ಕೋತಿಗಳಿಂದ ಅಥವಾ  ಪ್ರಾಣಿಸಂಗ್ರಹಾಲಯ  ಭೇಟಿ  ನೀಡಿದ  ಮಾನವರಿಂದ ಅನುಕರಿಸುತ್ತದೆ.

ಕಲಿಸುವ ಮತ್ತು ಕಲಿಯುವ ಕಾರ್ಯತಂತ್ರಗಳು

೬ಇ ಗಳ ಮತ್ತು ಎಸ್ ಗಳ ಪಠ್ಯಯೋಜನೆಯ ಆಕಾರ

೬ಇ ಗಳ ಮತ್ತು ಎಸ್ (ಕಾರ್ಯನಿರತವಾಗುವುದು, ಪರಿಶೋಧಿಸುವುದು, ವಿಸ್ತರಣೆ ಮಾಡುವುದು , ವಿವರಿಸುವುದು, ಮೌಲ್ಯೀಕರಿಸುವುದು, ವಿಸ್ತರಿಸುವುದು ಮತ್ತು  ನಿದಿ೯ಷ್ಟಮಾನಗಳು) ಗಳ ಪಠ್ಯಯೋಜನೆಯ   ಆಕಾರವು ಶಾಲಾ ಶಿಕ್ಷಣ ವಿಭಾಗೀಯ ಪ್ರಾಧ್ಯಾಪಕರಿಂದ  ಪರ್ಯಾಲೋಚನೆ ಮಾಡಿ  ಶಿಕ್ಷಕರಿಂದ ಪೂಣ೯ ವಿಕಸನ  ಮಾಡಲ್ಪಟ್ಟಿತ್ತು. ಮತ್ತು ಕಲಿಕೆಯ  ರಚನಾತ್ಮಕ ಮಾದರಿಯನ್ನು  ಆಧರಿಸಲಾಗಿದೆ.  ಸದರಿ  ಪಠ್ಯಯೋಜನೆಗಳು  ರನಚಾತ್ಮಕವಾದದ ಭೋದನೆಯ  ಮಾದರಿಯನ್ನು  ಆಧರಿಸಿರುತ್ತವೆ.  ಮತ್ತು  ಇವುಗಳ  ಕೆಲ ಭಾಗಗಳನ್ನು  ವಿದ್ಯಾಥಿ೯ಗಳು ನಿರಂತರವಾಗಿದ್ದ ಜ್ಞಾನದ  ಮೇಲೆ ಹೊಸ ಜ್ಞಾನವನ್ನು ರಚಿಸುವಂತೆ ವಿನ್ಯಾಸ ಮಾಡಿರಬೇಕು. ಪ್ರತಿಯೊಂದು  ೬ ಇ  ಗಳು  ಕಲಿಕೆಯ ಪದಸಮುಚ್ಛಯವನ್ನು   ವಣಿ೯ಸುತ್ತವೆ.  ಮತ್ತು  ಪ್ರತಿ ಪದಸಮುಚ್ಛಯವು  “ಎ”(ಇ) ಅಕ್ಷರದಿಂದ  ಪ್ರಾರಂಭವಾಗುತ್ತವೆ.  ಎಂಗೇಜ್ , ಎಕ್ಸಪ್ಲೋರ,  ಎಕ್ಸಪ್ಲೇನ್, ಎಲ್ಯಾಬೋರೇಟ್, ಇವ್ಯಾಲ್ಯೂವೇಟ್ ಮತ್ತು  ಎಕ್ಸಟೆಂಡ (ಗೊತ್ತು ಮಾಡಿಕೊಳ್ಳುವುದು,  ಪರಿಶೋಧಿಸುವುದು , ವಿವರಿಸುವುದು, ಪರಿಷ್ಕರಿಸುವುದು , ಮೌಲ್ಲೀಕರಿಸುವುದು ಮತ್ತು ವೃದ್ಧಿಸುವುದು)  ಸದರಿ  ೬(ಇ) ಎ ಗಳು  ಶಿಕ್ಷಕ ಮತ್ತು  ಬೋಧಕರಿಗೆ ಸಾಮಾನ್ಯ  ಚಟುವಟಿಕೆಗಳನ್ನು  ಅನುಭವಿಸುವಂತೆ  ಮತ್ತು  ಮೊದಲಿನ  ಜ್ಞಾನವನ್ನು  ಮತ್ತು ಅನುಭವಗಳನ್ನು  ಉಪಯೋಗಿಸಲು ಮತ್ತು  ಅದನ್ನು  ವೃದ್ಧಿಸಲು ಮತ್ತು  ಅಥ೯ಗಳನ್ನು  ರಚಿಸಲು ಮತ್ತು ಅವರು  ತಮ್ಮ  ಪರಿಕಲ್ಪನೆಯ  ತಿಳುವಳಿಕೆಯನ್ನು  ನಿರಂತರ  ನಿಣ೯ಯ  ಕೈಗೊಳ್ಳಲು ದಾರಿ ಮಾಡಿಕೊಡುತ್ತದೆ.

ಗೊತ್ತುಮಾಡಿಕೊಳ್ಳುವುದು

“ ಗೊತ್ತುಮಾಡಿಕೊಳ್ಳುವ” ಚಟುವಟಿಕೆ ಭೂತ ಮತ್ತು  ಭವಿಷತ್  ಅನುಭವಗಳ  ಕಲಿಕೆಯ ಸಂಬಂಧಗಳನ್ನು  ಕಲ್ಪಿಸಲೇಬೇಕು.  ಮತ್ತು  ಚಟುವಟಿಕೆಗಳನ್ನು  ಪೂವ೯ಭಾವಿಸಿ  ವಿದ್ಯಾಥಿ೯ಗಳ  ಚಾಲ್ತಿ  ಚಟುವಟಿಕೆಗಳ  ಕಲಿಕೆಯು  ಪರಿಣಾಮಗಳ  ಮೇಲೆ ಕೇಂದ್ರೀಕರಿಸಬೇಕು.   ವಿದ್ಯಾಥಿ೯ಗಳು  ಮಾನಸಿಕವಾಗಿ  ಕಲಿಕೆಯ ಪರಿಕಲ್ಪನೆಯಲ್ಲಿ  ಪ್ರಣಾಳಿಕೆಯಲ್ಲಿ  ಅಥವಾ  ಕೌಶಲ್ಯದಲ್ಲಿ  ಕಾರ್ಯೋನ್ಮುಖವಾಗಿರಲೇಬೇಕು.   ಪ್ರತಿಯೊಂದು ಪಠ್ಯಯೋಜನೆಯಲ್ಲಿ  ತಮ್ಮ  ಶೋಧನೆಯ  ಆಧಾರಿತ  ‘ ಅತ್ಯವಶ್ಯಕ ಪ್ರಶ್ನೆ ’ ಯನ್ನು  ಹೊಂದಿರಬೇಕು.   ಸಾಧಾರಣವಾಗಿ  ಈ ಭಾಗವು  ಮುಂಬರುವ ಪರಿಶೋಧನಾ ಭಾಗದಲ್ಲಿ  ಸಹಾಯಮಾಡುವ  ಕೆಲ ಪ್ರಮುಖ ಪ್ರಶ್ನೆಗಳನ್ನು  ಹೊಂದಿರಬೇಕು.

ಪರಿಶೋಧಿಸುವುದು

ಇಲ್ಲಿ ವಿದ್ಯಾಥಿ೯ಯು  ವಿಷಯದ ಮೇಲೆ  ಅತೀ ಸಂಪೂಣ೯ವಾಗಿ  ತನಿಖೆ ಮಾಡುತ್ತಾನೆ.   ಇಲ್ಲಿ ಪ್ರಾಮುಖ್ಯವಾಗಿರುವುದೇನೆಂದರೆ  ವಿದ್ಯಾಥಿ೯ಗಳಿಗೆ  ಕೊಟ್ಟ  ಸಾಧನಗಳಿಂದ  ನಿರಂತರವಾಗಿ  ಕಾರ್ಯವಹಿಸಲು  ಅವಕಾಶವನ್ನು  ಒದಗಿಸುತ್ತದೆ.  ಅವುಗಳಿಗೆ  ಕೆಲ ನಿದೇ೯ಶನಗಳು  ಬೇಕಾಗುತ್ತವೆ ಮತ್ತು ಭೋದಕನು  ಕೆಲವು  ಮುಖ್ಯ ಪ್ರಶ್ನೆಗಳನ್ನು  ಕೇಳುವುದರ ಮುಖಾಂತರ  ಪ್ರಸರಣ  ಮಾಡಬಹುದು .  ಅವರವರ  ವಾದ-ಸಂವಾದಗಳನ್ನು  ಕೇಳಬಹುದು, ಮತ್ತು  ಅವರೆಲ್ಲರೂ  ಕಾರ್ಯೋನ್ಮುಖರಾಗಿರುವಂತೆ ನೋಡಿಕೊಳ್ಳಲೇಬೇಕು.

ವಿವರಿಸುವದು

ಈ ಪದ ಸಮುಚ್ಛಯವು  ವಿದ್ಯಾಥಿ೯ಗಳಿಗೆ  ತಾವು ಪರಿಶೋಧಿಸುತ್ತಿರುವ  ಪರಿಕಲ್ಪನೆಯನ್ನು  ವಿವರಿಸಲು  ಸಹಾಯ ಮಾಡುತ್ತದೆ.  ವಿದ್ಯಾಥಿ೯ಗಳಿಗೆ  ತಾವು ತಿಳಿದುಕೊಂಡ ಪರಿಕಲ್ಪನೆಯನ್ನು  ಕಂಠೋಕ್ತಿಗೊಳಿಸಲು  ಅಥವಾ ಹೊಸ ಕೌಶಲ್ಯಗಳ  ಅಥವಾ ನಡುವಳಿಕೆಗಳನ್ನು  ತೋರಿಕೊಡಲು  ಅವಕಾಶಗಳು  ಸಿಗುತ್ತವೆ.  ಈ  ಪದಸಮುಚ್ಛಯವು  ಭೋದಕರಿಗೆ  ಪರಿಕಲ್ಪನೆಗಳ, ಪ್ರಣಾಳಿಕೆಗಳ,ಕೌಶಲ್ಯಗಳಂತಹ  ಸಾಂಪ್ರದಾಯಿಕ  ಪದಗಳನ್ನು , ವಾಖ್ಯಗಳನ್ನು  ಮತ್ತು ವಿವರಣೆಗಳನ್ನು  ಪರಿಚಯಿಸಲು  ಅವಕಾಶಗಳನ್ನು  ಒದಗಿಸಿಕೊಡುತ್ತದೆ.

ಪರಿಸ್ಕರಿಸುವದು

ಇಲ್ಲಿ  ವಿದ್ಯಾಥಿ೯ಗಳು  ನೇರವಾಗಿ ದತ್ತ  ಹಂಚಿಕೆಯ  ಮೇಲೆ ಕೆಲಸ ಮಾಡುವಂತೆ  ನಿರೀಕ್ಷಸಲಾಗುತ್ತದೆ.  ಇಲ್ಲಿ  ವಿದ್ಯಾಥಿ೯ಗಳಿಗೆ  ತಮ್ಮ ಹೊಸವಿಚಾರದ  ಅನ್ವಯಿಸುವಿಕೆ ಮತ್ತು  ಅವರು  ಬೇರೆಯವರ ಮುಂದೆ ತನಿಖಾ ನಿಧಾ೯ರದ ಅಥವಾ  ಉಪಸಂಹಾರದ ವಿವರ ಸಾದರಪಡಿಸಲು  ಒಂದು ಸದಾವಕಾಶ .  ಇದು ವಿಷಯವನ್ನು  ಮೌಲ್ಯಮಾಪನಕ್ಕೆ  ಸಲ್ಲಿಸಲು , ಸಾದರಪಡಿಸಲು  ಮತ್ತು  ಯೋಜನೆ ಅಥವಾ  ಹಂಚಿಕೆಯನ್ನು  ಪೂಣ೯ಗೊಳಿಸಲು  ಒಂದು ಒಳ್ಳೆಯ ಸಮಯ.

ಮೌಲ್ಲೀಕರಿಸುವುದು

ಮೌಲ್ಯಮಾಪನವು  ಕಾರ್ಯವಿಧಾನದಲ್ಲಿ  ಸಂಪೂಣ೯ವಾಗಿ  ಮುಂದುವರಿಸುವಂತೆ  ನಿರೀಕ್ಷಸಲಾಗುತ್ತಿರುವ  ಈ ಕಾಲದಲ್ಲಿ  ಬೋಧಕನು  ಈಗಾಗಲೇ  ಸಂಭವಿಸಿದ  ಕಲಿಕೆಯ  ಮೌಲ್ಯಮಾಪನ  ಮಾಡುತ್ತಾನೆ.    ವಿದ್ಯಾಥಿ೯ಗಳು  ಸಾಧಾರಣವಾಗಿ  ತಮ್ಮ ಕೆಲಸ ಅಥವಾ ಹಂಚಿಕೆಯನ್ನು  ಈ ವೇಳೆಯಲ್ಲಿ  ಸಲ್ಲಿಸುತ್ತಾರೆ.   ಈ ಘಟ್ಟದಲ್ಲಿ  ವಿದ್ಯಾಥಿ೯ಗಳನ್ನು  ಸ್ವ-ಮೌಲ್ಯಮಾಪನದಲ್ಲಿ , ಗುಂಪು ಮೌಲ್ಯ ಮಾಪನದಲ್ಲಿ ಮತ್ತು  ತಮ್ಮ ಸಂತ ಉಪಕರಣಗಳನ್ನು  ವಿವರಿಸಲು  ಕಾರ್ಯನಿರತವಾಗುವಂತೆ ಪ್ರೋತ್ಸಾಹಿಸುವುದು ತುಂಬ ಮುಖ್ಯವಾಗಿರುತ್ತದೆ.

ವೃದ್ಧಿಸುವುದು

ಈ ವಿಭಾಗವು  ಪಾಠದ ವಿಷಯದ ಆಚೆಗೆ  ಕರೆದೊಯ್ಯಲು  ನೀಡುವ  ಪ್ರಸ್ತಾಪಗಳನ್ನು  ಒಳಗೊಂಡಿರುತ್ತದೆ.   ಇದರ ಮೂಲೋದ್ದೇಶವು   ವಿದ್ಯಾಥಿ೯ಗಳು  ಹೇಗೆ  ತಮ್ಮ  ನಿಣ೯ಯಗಳನ್ನು  ಬೇರೆಯವರಿಗೆ  ಸಾದರಪಡಿಸುವ  ವಿವಿಧ  ದಾರಿಗಳಲ್ಲಿ  ಪರೀಕ್ಷಿಸುತ್ತಾರೋ  ಅಥವಾ  ತಮ್ಮ  ತಿಳುವಳಿಕೆಗಳನ್ನು  ಹೊಸ ಅಥವಾ  ಆಪ್ತ ಪರಿಚಯವಲ್ಲದ  ಸಂಬಂಧಗಳಿಗೆ  ಅನ್ವಯಿಸುತ್ತಾರೋ  ಎಂದು ಪರಿವೀಕ್ಷಸಲಾಗುತ್ತದೆ.  ಸಾಮಾನ್ಯವಾಗಿ  ಈ ತರಹದ ಚಟುವಟಿಕೆಯು  ಅವರು  ಕಾರ್ಯ ಯಶಸ್ವಿಯಾದದ್ದಕ್ಕೆ  ಭಾವೋದ್ವಿಗ್ನತೆಯಿಂದ ಹೊರಹೊಮ್ಮುವಂತೆ  ಮಾಡುತ್ತದೆ.  ವಿದ್ಯಾಥಿ೯ಗಳು ತಮ್ಮ  ಸ್ವಂತ  ಶಾಲೆಗಿಂತ  ಬೇರೆ  ಸ್ಥಳಕ್ಕೆ  ತೆಗೆದುಕೊಂಡು   ಹೋಗಲು ಬೋಧಕರು ನಾಜೂಕಾಗಿ ಸಲಹೆ ಮಾಡಿದರೂ ಕೂಡ ಈ ವಿಭಾಗವು ಅತ್ಯಂತ ವಿದ್ಯಾಥಿ೯ಚಾಲಿತವಾಗಿರುತ್ತದೆ.

ನಿದಿ೯ಷ್ಟ ಮಾನಗಳು

ಪಠ್ಯ ಯೋಜನೆಯಿಂದ  ಪಠ್ಯ ಯೋಜನೆಯನ್ನು  ಒಂದು ಗೂಡಿಸುವಲ್ಲಿ  ಹಾಲಿ ಪ್ರಕ್ರಿಯೆಯಲ್ಲಿ  ನಿದಿ೯ಷ್ಟಮಾನಗಳು  ಇರುತ್ತವೆ. ಅಥವಾ ವಿಭಾಗದಲ್ಲಿ   ಪಾಠಗಳನ್ನು ರಾಜ್ಯ , ಪ್ರಾಂತ ಮತ್ತು  / ಅಥವಾ ದೇಶದ  (ರಾಷ್ಟ್ರದ) ನಿದಿ೯ಷ್ಟ ಮಾನಗಳಿಗೆ   ಹೋಲಿಸಲಾಗುತ್ತದೆ.  ಇದು ಪ್ರಾಥಮಿಕವಾಗಿ  ಬೋಧಕನ ಮಾಹಿತಿಗಾಗಿ  ಇರುತ್ತದೆ.  ಮತ್ತು ಇದು ಸ್ಥಾನಿಕ  ಮಂಡಳಿ , ಜಿಲ್ಲೆ ಅಥವಾ  ಶಾಲೆಯ ಪಠ್ಯಕ್ರಮವನ್ನು  ಅಳವಡಿಸಲು ಉಪಯುಕ್ತ ವಿಷಯವನ್ನು  ಪೂರೈಸಲೇಬೇಕು.

ಪಾತ್ರ ನಿರ್ವಹಣೆ ಆಟ ಮತ್ತು ಅಣಕು ಪ್ರದಶ೯ನ

ಪರಸ್ಪರ ಕಲಿಕೆಯು ರಣನೀತಿಗಳಾದ ಪಾತ್ರ ನಿರ್ವಹಣೆ ಆಟ ಮತ್ತು ಅಣಕು ಪ್ರದಶ೯ನ ಇವುಗಳನ್ನು ಸ್ವಯಂ ಪ್ರೇರಿತವಾಗಿ ವಿದ್ಯಾಥಿ೯ಗಳಿಗೆ ಪ್ರದಶಿ೯ಸಿದಾಗ ಅತಿ ಚೆನ್ನಾಗಿ ಕೆಲಸ ಮಾಡುತ್ತವೆ. ಏನೇ ಆದರೂ ಪರಿಣಾಮಕಾರಿಯಾದ ಪಾತ್ರ ನಿರ್ವಹಣೆ ಆಟಕ್ಕೆ ಪೂವ೯ ತಯಾರಿ – ನಿದಿ೯ಷ್ಟ ಚೌಕಟ್ಟು, ಸ್ಪಷ್ಟವಾದ ಗುರಿಗಳು ಮತ್ತು ಫಲಿತಾಂಶಗಳು ಮತ್ತು ಅಣಕು ಪ್ರದಶ೯ನ ಮಾಡಿದ ನಂತರ ಅವರಿಂದ ಕೊನೆಯ ವರದಿಯನ್ನು ಕೇಳುವುದು ಅತ್ಯವಶ್ಯಕ. ಪಾತ್ರ ನಿರ್ವಹಣೆ -ಆಟ ಮತ್ತು ಅಣಕು ಪ್ರದಶ೯ನಗಳನ್ನು ಮಾಡುವುದಕ್ಕೆ ವಿದ್ಯಾಥಿ೯ಗಳು ತಮಗೆ ಲಭ್ಯವಿರುವ ಮಾಹಿತಿಯಿಂದ ಆಶುಭಾಷಣ ತಯಾರು ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ವಿಮಶಾ೯ತ್ಮಕ ವಿಚಾರ ಮತ್ತು ಸಹಕಾರದ ಕಲಿಕೆಗಳಿಗೆ ಉತ್ತೇಜನ ಕೊಡುತ್ತಾರೆ. ಈ ಕೆಲಸದ ಉಪಕರಣ (ಸಾಧನ)ಗಳು ವಿದ್ಯಾಥಿ೯ಗಳಿಗೆ ಅವರ ಮನೋವೃತ್ತಿ ಮತ್ತು ವಿಚಾರ ಶಾಸ್ತ್ರಗಳನ್ನು ಮತ್ತು ಅವರ ಭಾವನಾರೂಪದ ಕಲ್ಪನೆ ಮತ್ತು ನಿಜಜಗತ್ತಿನ ಘಟನೆಗಳ ಸಂಬಂಧವನ್ನು ಕಲ್ಪಿಸಲು ಪರಿಣಾಮಕಾರಿಯಾಗಿ ಮಾಡಬಲ್ಲವು.

ಅನೇಕ ವಯಸ್ಸಿನ ವಗ೯ದವರಿಗೆ ಭೋಧಿಸುವುದು.

ಅನೇಕ ವಯಸ್ಸಿನ  ವಗ೯ದಲ್ಲಿ ಕಲಿಕೆಯು  ಕಲಿಯುವವರ ವಿವಿಧತೆಯ  ಅನುಕೂಲತೆಯಿಂದ ಪ್ರೇರೇಪಿಸಲ್ಪಡುತ್ತದೆ.  ಘಟಕಗಳನ್ನು  ವಿಷಯವಾರು ಸಂಯೋಜಿಸಲಾಗುತ್ತದೆ.    ಮತ್ತು ವಿದ್ಯಾಥಿ೯ಗಳು ಪ್ರತಿ ಹಂತದಲ್ಲಿ  ಘಟಕದಲ್ಲಿಯೇ  ಬೇರೆ ಬೇರೆ ಹಂಚಿಕೆಗಳಲ್ಲಿ  ಕೆಲಸ ಮಾಡುತ್ತಾರೆ.   ವಿದ್ಯಾಥಿ೯ಗಳು  ಒಬ್ಬರು ಮತ್ತೊಬ್ಬರಿಗೆ  ಬೋಧಿಸುವ  ಪರಿಸರದಲ್ಲಿ   ಸಹಾಯಮಾಡಲು ಪ್ರೇರೇಪಿಸಲ್ಪಡುತ್ತಾರೆ.  ಮತ್ತು ಬೇರೆ ಬೇರೆ ವಯಸ್ಸಿನ ಮತ್ತು  ಕ್ಷಮತೆಯ ವಿದ್ಯಾಥಿ೯ಗಳಲ್ಲಿ  ಭಿನ್ನತೆಗಳ ಮೌಲ್ಯ ಮಾಡಲು  ಮತ್ತು  ಶಿಕ್ಷಣ ಆರೈಕೆ ನೀಡುವ  ಪರಿಸರದಲ್ಲಿ  ಸಹಾಯಮಾಡಲು  ವಿದ್ಯಾಥಿ೯ಗಳು ಪ್ರೇರೇಪಿಸಲ್ಪಡುತ್ತಾರೆ.   ಸಹಕಾರಿ  ಕೆಲಸದಲ್ಲಿ  ಹಿರಿಯ ವಿದ್ಯಾಥಿ೯ಗಳು  ಮಾದರಿ-ಪಾತ್ರಧಾರಿಗಳ ಮತ್ತು  ಪ್ರೌಢ ಕಲಿಕರಿಗೆ  ವಿಶ್ವಸನೀಯ ಸಲಹೆಗಾರರಾಗುತ್ತಾರೆ.
ವಿವಿಧ ವಯಸ್ಸಿನ ವಗ೯ ಕೋಣೆಯಲ್ಲಿ  ಬೋಧಿಸುವವರು ಸವಿಸ್ತಾರವಾದ  ಬೋಧನೆಯನ್ನು ಬಳಸಲು ಮತ್ತು ರಣನೀತಿಗಳ  ಮೌಲ್ಯಾಂಕನ ಮಾಡಲು ವಿವಿಧ  ವಯಸ್ಸಿನ ತಮ್ಮ ವಿದ್ಯಾಥಿ೯ಗಳಿಗೆ   ಸಂಬೋಧನೆ  ಮಾಡಲು , ನಮನೀಯತೆ  ನಮೂನೆಯ  ಗುಂಪುಗಾರಿಕೆಯನ್ನು ಕಾರ್ಯಗತಗೊಳಿಸಲು , ಕಲಿಕೆಯ ನಿದಿ೯ಷ್ಟ ಗುರಿಗಳನ್ನು  ಒದಗಿಸಲು , ಎಲ್ಲ  ವಿದ್ಯಾಥಿ೯ಗಳನ್ನು  ಆಸಕ್ತಿಯಿಂದ ಭಾಗವಹಿಸುವಂತೆ ಮಾಡಲು  ಮತ್ತು ತಮಗೆ ಮತ್ತು ಬೇರೆಯವರಿಗೆ  ಗೌರವಭಾವದ ವತ೯ನೆಯನ್ನು  ತೋರುವ  ರಚನೆಗೆ ಪ್ರೋತ್ಸಾಹಿಸಲು ಪ್ರೇರೇಪಿಸುತ್ತದೆ.

ಸಹಕಾರಿ – ಕಲಿಕೆ

ಸಹಕಾರಿ ಕಲಿಕೆಯು ಬೋಧಿಸುವ ಎಲ್ಲ  ರಣನೀತಿಗಳಲ್ಲಿ  ಅತ್ಯುತ್ತಮ ಪರಿಶೋಧಿಸಿದಂತಹದ್ದಾಗಿದೆ.   ಯಾವ ವಿದ್ಯಾಥಿ೯ಗಳಿಗೆ  ಸಹಪ್ರವತಿ೯ಸುವ ಕೆಲಸದಲ್ಲಿ  ಅವಕಾಶಗಳಿವೆಯೋ, ಅವರು  ಅತಿ ಶೀಘ್ರವಾಗಿ ಮತ್ತು ಅತಿ ದಕ್ಷರಾಗಿ ಕಲಿಯುವವರು.   ಅಂತಹವರಿಗೆ ಗಣನೀಯ ಧಾರಣಾಶಕ್ತಿವಿರುತ್ತದೆ.   ಮತ್ತು ಅವರು   ಅನುಭವದ ಕಲಿಕೆಯನ್ನು ಅತಿ  ಧನಾತ್ಮಕವಾಗಿ  ತಿಳಿದುಕೊಳ್ಳುತ್ತಾರೆ ಎಂದು ಫಲಿತಾಂಶಗಳು  ತೋರಿಸುತ್ತವೆ.  ಇದೆಲ್ಲ ವಿದ್ಯಾಥಿ೯ಗಳನ್ನು  ಗುಂಪುಗಳಲ್ಲಿಟ್ಟು ಅವರಿಗೆ  ಯಾವುದೇ ಯೋಜನೆಯನ್ನು  ಪೂತಿ೯ಗೊಳಿಸಿ  ಎಂದು ಹೇಳಲಿಕ್ಕೆ ಅಲ್ಲ.  ಗುಂಪು ಕೆಲಸದಲ್ಲಿ  ಯಶಸ್ಸಿನ  ಭರವಸೆ  ಕೊಡಲು ಅಲ್ಲಿ  ತುಂಬ  ನಿದಿ೯ಷ್ಟ ವಿಧಾನಗಳಿವೆ.   ಮತ್ತು ಇಲ್ಲಿ ಬೋಧಕ ಮತ್ತು ವಿದ್ಯಾಥಿ೯ಗಳಿಗೆ  ತಮ್ಮ ಬಗ್ಗೆ  ತಿಳಿದಿರುವುದು ಅತ್ಯವಶ್ಯಕ.   ಇತ್ತೀಚೆಗೆ  ಇದರ  ದುರುಪಯೋಗದ ಫಲವಾಗಿ  ಈ ಪ್ರಕ್ರಿಯೆಯ ಮೇಲೊಂದು ವಿಮಶೆ೯ ಇತ್ತು.    ಸಂಪೂಣ೯ವಾಗಿ  ಅರಿತುಕೊಳ್ಳಲು ಇದು  ಬೋಧಕನು ವಿದ್ಯಾಥಿ೯ಗಳ ಗುಂಪಿನಲ್ಲಿ  ಕೆಲಸ   ಮಾಡುವಾಗ ಅವರನ್ನು ಬಿಟ್ಟು ದೂರದಲ್ಲಿ ಕುಳಿತು ಉತ್ತರ  ಪತ್ರಿಕೆ ಮೌಲ್ಯ  ಮಾಪನ ಮಾಡಿದರೆ ಅಲ್ಲ. ಇದು ವಿದ್ಯಾಥಿ೯ಗಳಿಗೆ  ಅತ್ಯವಶ್ಯಕ ಅಂತರ ವೈಯಕ್ತಿಕ ಜೀವನ ಕೌಶಲ್ಯವನ್ನು  ಕಲಿಯಲು  ಮತ್ತು   ಸಹ ಪ್ರವತ೯ನೆಯ ಕೆಲಸದ  ಕ್ಷಮತೆಯನ್ನು (ಕೆಲಸದ  ಜಾಗದಲ್ಲಿ ಈಚೆಗೆ ಅತೀ ಬೇಡಿಕೆ  ಇರುವ  ಕೌಶಲ್ಯ)  ವೃದ್ಧಿಸಲು  ಒಂದು ದಾರಿ.  ಇದು ವಿದ್ಯಾಥಿ೯ಗಳ  ಬೇರೆ ಬೇರೆ ಪಾತ್ರಗಳಾದ –ಅನುಕೂಲ ಮಾಡಿಕೊಡುವುದು,  ವರದಿ   ಮಾಡುವುದು, ದಾಖಲು ಮಾಡಿಕೊಳ್ಳುವುದು.  ಮುಂತಾದವುಗಳ ಕಡೆಗೆ  ದಿಶೆಯನ್ನು ಬದಲಿಸುವ ಒಂದು ದಾರಿ.  ಸಹಕಾರಿ  ಗುಂಪಿನಲ್ಲಿ  ವಿದ್ಯಾಥಿ೯ಗೆ ಒಂದು ನಿದಿ೯ಷ್ಟ ಕೆಲಸವಿರುತ್ತದೆ.  ಪ್ರತಿಯೊಬ್ಬರು  ಕಲಿಯಲು   ಅಥವಾ ಯೋಜನೆಯಲ್ಲಿ ಕಾಯ೯ನಿರತಗೊಳ್ಳಲೇಬೇಕು.   ಮತ್ತು   ಯಾರೊಬ್ಬರು   ಮತ್ತೊಬ್ಬರನ್ನು ಬೆನ್ನ   ಮೇಲೆ  ಹೊತ್ತು ಒಯ್ಯಬೇಕಿಲ್ಲ.  ವಿದ್ಯಾಥಿ೯ಗಳು ಶೈಕ್ಷಣಿಕ  ಕೆಲಸಗಳಲ್ಲಿ  ಚಿಕ್ಕ ಗುಂಪುಗಳಲ್ಲಿ  ಜೊತೆಗೆ ಕೆಲಸ ಮಾಡಿ ತಮಗೂ  ಸಹಾಯ ಮಾಡಿಕೊಂಡು ಮತ್ತು  ಜೊತೆಗಾರರ ಜೊತೆಗೂಡಿ ಕಲಿಯಬಹುದು.  ಸಾಮಾನ್ಯವಾಗಿ   ಸಹಕಾರಿ ಕಲಿಕೆಯ ವಿಧಾನವು ಈ ಕೆಳಗೆ  ನಮೂದಿಸಿದ  ಐದು ಗುಣಧಮ೯ಗಳನ್ನು ಹಂಚಿಕೊಳ್ಳುತ್ತದೆ.

  • ವಿದ್ಯಾಥಿ೯ಗಳು ಸಾಮಾನ್ಯ ಕೆಲಸದಲ್ಲಿ  ಜೊತೆಗೂಡಿ ಶ್ರಮಿಸುತ್ತಾರೆ.  ಅಥವಾ ಕಲಿಕೆಯ –ಚಟುವಟಿಕೆಗಳು  ಗುಂಪು ಕೆಲಸದ  ಮುಖಾಂತರ ಅತಿ ಶ್ರೇಷ್ಟತೆಯಿಂದ ನಿವ೯ಹಿಸಬಹುದು.
  • ವಿದ್ಯಾಥಿ೯ಗಳು ಇಬ್ಬರಿಂದ  ಐದು ಜನ ಸದಸ್ಯರ ಚಿಕ್ಕ ಗುಂಪುಗಳಲ್ಲಿ ಜೊತೆಗೂಡಿ ಕೆಲಸ ಮಾಡುತ್ತಾರೆ.
  • ವಿದ್ಯಾಥಿ೯ಗಳು ತಮ್ಮ  ಸಾಮಾನ್ಯ  ಕೆಲಸಗಳು ಅಥವಾ ಕಲಿಕೆಯ ಚಟುವಟಿಕೆಗಳನ್ನು ನೆರವೇರಿಸಲು ಸಹಭಾಗಿತ್ವ, ಸಾಮಾಜಿಕ-ಪರ  ನಡವಳಿಕೆಗಳನ್ನು  ಬಳಸುತ್ತಾರೆ.
  • ವಿದ್ಯಾಥಿ೯ಗಳು ಧನಾತ್ಮಕವಾಗಿ ಅನ್ಯೋನಾಶ್ರಿತರಾಗಿರುತ್ತಾರೆ.   ವಿದ್ಯಾಥಿ೯ಗಳಿಗೆ  ಸಾಮಾನ್ಯ  ಕೆಲಸಗಳು  ಅಥವಾ  ಕಲಿಕೆಯ  ಚಟುವಟಿಕೆಗಳನ್ನು  ನೆರವೇರಿಸಲು  ಅವರಿಗೆ ಬೇರೊಬ್ಬರು ಬೇಕಾಗುವಂತೆ ಚಟುವಟಿಕೆಗಳನ್ನು  ರಚಿಸಿರುತ್ತಾರೆ.
  • ಕೆಲಸಕ್ಕೆ ಅಥವಾ ಕಲಿಯಲಿಕ್ಕೆ  ವಿದ್ಯಾಥಿ೯ಗಳು ವೈಯಕ್ತಿಕವಾಗಿ  ಜವಾಬ್ದಾರರು  ಅಥವಾ ಉತ್ತರದಾಯಿಯಾಗಿರುತ್ತಾರೆ.

ಕಲಿಕೆಯ ಶೈಲಿಗಳು

ಕಲಿಕೆಯ ಶೈಲಿಗಳು ಕಲಿಯುವ ವಿಧಾನಗಳ ಅಥವಾ ಸರಳವಾದ ವಿವಿಧ ಅನುಸಂಧಾನಗಳು

ಕಲಿಕೆ ಶೈಲಿಗಳ ವಿಧಗಳು ಯಾವುವು ?

ನೋಡಿ ಕಲಿಯುವವರು:-

ಈ ಶೈಲಿಯ ವಿದ್ಯಾಥಿ೯ಗಳು ಸಂಪೂಣ೯ವಾಗಿ ಪಾಠದ ಸಾರವನ್ನು ತಿಳಿದುಕೊಳ್ಳಲು ಭೋದಕನ ಅಂಗಮುದ್ರಾ ವಿನ್ಯಾಸ ಮತ್ತು ಮುಖ ಭಂಗಿಯನ್ನು ಗಮನಿಸಬೇಕಾಗುತ್ತದೆ. ಅವರ ವಗ೯ ಕೋಣೆಯಲ್ಲಿ ದೃಷ್ಟಿಯ ಅಡೆತಡೆ ಆಗಬಾರದೆಂದು (ಉದಾ-ಜನರ ತಲೆಗಳು) ಮುಂದಿನ ಸಾಲುಗಳಲ್ಲಿ ಕುಳಿತುಕೊಳ್ಳಲು ಇಚ್ಛಿಸುತ್ತಾರೆ. ಅವರು ಚಿತ್ರಗಳ ಮುಖಾಂತರ ವಿಚಾರ ಮಾಡಬಹುದು. ಮತ್ತು ದೃಷ್ಟಿಪ್ರದಶ೯ನಗಳಾದಂತಹ –ರೇಖಾ ಚಿತ್ರ, ನಿದಶ೯ನಗಳನ್ನೊಳಗೊಂಡ ಪಠ್ಯ ಪುಸ್ತಕಗಳು ,ಬೆಳಕಿನಿಂದ ಗೋಡೆಯ/ಪರದೆಯ ಮೇಲೆ ಬಿಂಬಿಸುವ ಪಾರದಶ೯ಕತ್ವ(ಒ.ಎಚ್.ಪಿ) ಚಿತ್ರ ಮತ್ತು ಧ್ವನಿಗಳನ್ನೊಳಗೊಂಡ ಪ್ರಾತ್ಯಕ್ಷಕೆ(ವಿಡಿಯೋ) ರೇಖಾಪಟ ಮತ್ತು ಕರಪತ್ರಗಳ (ಹ್ಯಾಂಡಆವುಟ) ಮುಖಾಂತರ ಚೆನ್ನಾಗಿ ಕಲಿಯುತ್ತಾರೆ. ಉಪನ್ಯಾಸದ ಸಂದಭ೯ದಲ್ಲಿ ಅಥವಾ ವಗ೯ಕೋಣೆಯ ಚಚೆ೯ಯಲ್ಲಿ ನೋಡಿ ಕಲಿಯುವವರು ಮಾಹಿತಿಯನ್ನು ಅಂತಗ೯ತ ಮಾಡಿಕೊಳ್ಳಲು ಆಗಾಗ್ಗೆ ವಿವರವಾಗಿ ಟಿಪ್ಪಣಿ ಮಾಡಿಕೊಳ್ಳಲು ಇಷ್ಟ ಪಡುತ್ತಾರೆ.

ಅವರು ವಾಚಕ  ಉಪನ್ಯಾಸಗಳು, ಚಚೆ೯ಗಳು , ಬೇರೆಯವರು ಏನು ಹೇಳಬೇಕೆಂದು  ಹೇಳುತ್ತ ಮಾತನಾಡುವ  ಮೂಲಕ  ಚೆನ್ನಾಗಿ  ಕಲಿಯುತ್ತಾರೆ.  ಕೇಳಿ ಕಲಿಯುವವರು  ಭಾಷಣದ ಅಂತಗ೯ತ  ಅಥ೯ವನ್ನು  ಧ್ವನಿಯನಾದ, ಏರಿಳಿತ, ವೇಗದಂತಹ ಬೇರೆ ಬೇರೆ ಸೂಕ್ಷ ವಿಚಾರಗಳ ಮುಖಾಂತರ  ಅಥ೯ ವಿವರಣೆಯನ್ನು  ಮಾಡುತ್ತಾರೆ.   ಬರೆದಂತಹ ಮಾಹಿತಿಯನ್ನು  ಅದನ್ನು ಕೇಳುವವರೆಗೆ  ಅದಕ್ಕೆ ಕಿರು  ಅಥ೯ವಿರಬಹುದು.  ಈ ತರಹದ ಕಲಿಯುವವರು ಆಗಾಗ್ಗೆ  ಪಠ್ಯವನ್ನು  ಜೋರಾಗಿ ಓದುವುದರಿಂದ ಮತ್ತು  ಧ್ವನಿ ಮುದ್ರಣ  ಸುರಳಿ ಉಪಯೋಗಿಸುವುದರಿಂದ  ಲಾಭವನ್ನು ಪಡೆಯುತ್ತಾರೆ.

ಚಲನವಲನೆಯಿಂದ ಕಲಿಯುವವರು / ಸ್ಪಶೆ೯೦ದ್ರೀಯದ ಚಲಿಸುತ್ತ,ಮಾಡಿ,ಸ್ಪಶಿ೯ಸಿ ಕಲಿಯುವವರು :-

ಚಲನವಲನದ ಅಥವಾ  ಸ್ಪಶೇ೯೦ದ್ರೀಯ  ಮೂಲಕ  ಅಭ್ಯಾಶಿಸುವವರು  ಕರ-ಅನುಸಂಧಾನದಿಂದ, ಚುರುಕಿನಿಂದ ತಮ್ಮ  ಸುತ್ತಮುತ್ತಲಿನ  ಜಗತ್ತನ್ನು ಪರಿಶೋಧಿಸುವ ಮೂಲಕ ಚೆನ್ನಾಗಿ  ಕಲಿಯುತ್ತಾರೆ.    ಅವರಿಗೆ  ಅಚಲವಾಗಿ , ಅತಿ ದೊಡ್ಡ ಅವಧಿಗಳಲ್ಲಿ  ಕುಳಿತುಕೊಳ್ಳುವುದು  ತುಂಬ ತೊಂದರೆಯನ್ನುಂಟು ಮಾಡಬಹುದು.  ಮತ್ತು  ಅವರ ಈ ಕಾರಣಕ್ಕಾಗಿ ಚಟುವಟಿಕೆಗಳಿಗೆ ಮತ್ತು  ಪರಿಶೋಧನೆಗೆ  ವಿಚಲಿತಗೊಳ್ಳಬಹುದು.

ಮೂಲ:- ಎಲ್  ಡಿ  ಪ್ರೈಡ್

ಕೊನೆಯ ಮಾರ್ಪಾಟು : 5/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate