অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಕ್ಷರ ಭಾರತ್

ಪೀಠಿಕೆ

ಸಾಕ್ಷರ ಭಾರತ್ 2012 ಗೆ ಸುಸ್ವಾಗತ

ಸಾಕ್ಷರ ಭಾರತ್ ಇದೊಂದು ಮಹತ್ವಾಕಾಂಕ್ಷಿ ಕಾರ್ಯಕ್ರಮ. ಇದು ಸಮಗ್ರ ಮತ್ತು ವ್ಯಾಪಕ ಕಾರ್ಯಕ್ರಮವಾಗಿದೆ. ಮಹಿಳಾ ಸಾಕ್ಷರತಾ ಪ್ರಮಾಣ ಶೇ. 50 ಕ್ಕಿಂತ ಕಡಿಮೆ ಇರುವ 26 ರಾಜ್ಯಗಳ 365 ಜಿಲ್ಲೆಗಳಲ್ಲಿ ಬರುವ 1,70,000 ಗ್ರಾಮಗಳಲ್ಲಿ ಅನುಷ್ಠಾನಗೊಳ್ಳಬೇಕಿದೆ. 15 + ವರ್ಷ ವಯೋಮಾನದ 70 ದಶಲಕ್ಷ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸಬೇಕಿದೆ. ಸಾಕ್ಷರ ಭಾರತ್ ಕಾರ್ಯಕ್ರಮದ ರಾಜ್ಯಗಳಲ್ಲಿ ಕನರ್ಾಟಕವು ಒಂದಾಗಿದೆ. ಸಾಕ್ಷರತಾ ಕಾರ್ಯಕ್ರಮವು ಮೂಲ ಸಾಕ್ಷರತೆ, ಸಮಾನ ಶಿಕ್ಷಣ, ವೃತ್ತಿ ಕೌಶಲ ತರಬೇತಿ ಮತ್ತು ಮುಂದುವರಿಕೆ ಶಿಕ್ಷಣ ಕಾರ್ಯಕ್ರಮವನ್ನೊಳಗೊಂಡ ಸಮಗ್ರ ಸಾಕ್ಷರತಾ ಕಾರ್ಯಕ್ರಮವಾಗಿದೆ. 2012ರ ಸಮಯಕ್ಕೆ ಸಾಕ್ಷರತಾ ಪ್ರಮಾಣ ಶೇ 80ಕ್ಕೆ ಏರಿಸುವುದು. 2015ರ ಸಮಯಕ್ಕೆ 100ಕ್ಕೆ ನೂರರಷ್ಟು ಸಾಕ್ಷರ ಪ್ರಮಾಣ ತಲುಪುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. 15+ ವಯೋಮಿತಿಯ 36.64 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವುದು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಜನರ ಸಾಕಷರತೆಗೆ ಆದ್ಯತೆ ನೀಡಿ, ಅವರ ಜೀವನ ಮಟ್ಟ ಸುಧಾರಣೆಗಾಗಿ ವೃತ್ತಿ ಕೌಶಲ ತರಬೇತಿ, ಜೀವನ ಪರ್ಯಂತ ಕಲಿಕೆಗೆ ಮುಂದುವರಿಕೆ ಶಿಕ್ಷಣಕ್ಕೆ ಅವಕಾಶವಿದೆ.

ಶೇಕಡಾ 50ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಪ್ರಮಾಣ ಇರುವ 18 ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 107 ತಾಲ್ಲೂಕು, 3451 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸಕರ್ಾರದ ಸಹಯೋಗದಲ್ಲಿ ಶೇಕಡಾ 75:25 ಅನುಪಾತದಲ್ಲಿ ಅನುದಾನ ಭರಿಸುವುದಾಗಿದೆ.

ಈ ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಥರ್ಿಕ ಇಲಾಖೆ, ಸಕರ್ಾರೇತರ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸ್ವಸಹಾಯ ಸಂಘ, ಸ್ತ್ರೀ ಶಕ್ತಿ ಸಂಗ ಯುವಜನ ಮಂಡಲಿಗಳು., ಈ ಎಲ್ಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕಾಗಿದೆ.

ಉದ್ದೇಶ

  • 15 ರಿಂದ 35 ವಯೋಮಾನದ ಎಲ್ಲಾ ಅನಕ್ಷರಸ್ಥರೂ ಮೂಲ ಸಾಕ್ಷರತೆ ಪಡೆಯುವ ಅವಕಾಶ ಕಲ್ಪಿಸುವುದು.
  • ಮೂಲ ಸಾಕ್ಷರತೆ ಪಡೆದವರು ಅದನ್ನು ಸ್ಥಿರೀಕರಿಕೊಳ್ಳಲು, ಉನ್ನತೀಕರಿಸಲು ಹಾಗೂ ಬಳಸಿಕೊಳ್ಳಲು ಸಹಾಯಕ ಚಟುವಟಿಕೆಗಳನ್ನು ಕೈಕೊಳ್ಳುವುದು.
  • ನವಸಾಕ್ಷರರಿಗೆ ಮತ್ತು ಸಾಕ್ಷರರಿಗೆ ನಿರಂತರ ಶಿಕ್ಷಣ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು. ಜೀವನ ಪರ್ಯಂತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಕಲಿಕಾ ವಾತಾವರಣ (ಐಜಚಿಡಿಟಿಟಿರ ಂಣಟಠಠಿಜಡಿಜ) ಸೃಷ್ಟಿಸುವುದು.

ಆದ್ಯತಾ ವಲಯ

  • ನಗರ ಮತ್ತು ಗ್ರಾಮೀಣ ಪ್ರದೇಶದ ಸಾಕ್ಷರತಾ ಪ್ರಮಾಣದ ಅಂತರವನ್ನು ಅಳಿಸಲು ಗ್ರಾಮೀಣ ಪ್ರದೇಶದ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವುದು. ಪ್ರತಿಯೊಬ್ಬ ಅನಕ್ಷರಸ್ಥ ಮಹಿಳೆಯನ್ನು ಕಲಿಕೆಗೆ ಒಳಪಡಿಸಿ ಪುರುಷ ಮತ್ತು ಮಹಿಳಾ ಸಾಕ್ಷರತಾ ಪ್ರಮಾಣದ ಅಂತರವನ್ನು ಇಳಿಸುವುದು.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಶೋಷಿತ ವರ್ಗದ ಅನಕ್ಷರಸ್ಥರ ಕಲಿಕೆಗೆ ಒತ್ತು ನೀಡುವುದು.
  • ಸಾಕ್ಷರತೆಯ ಮೂಲಕ ತಳಸ್ತರದ ಪ್ರಜಾತಂತ್ರ ಸಂಸ್ಥೆಗಳನ್ನು ಬಲಗೊಳಿಸುವುದು ಸಾಕ್ಷರತೆಯೊಂದಿಗೆ ವೃತ್ತಿ ಕೌಶಲ ಒದಗಿಸುವುದರ ಮೂಲಕ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಹೆಚ್ಚಳ.

ಗುರಿ

  • ಈ ಕಾರ್ಯಕ್ರಮವು 18 ಜಿಲ್ಲೆಗಳ 107 ತಾಲ್ಲೂಕು, 3451 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಬರುವ ಗ್ರಾಮ, ಉಪಗ್ರಾಮಗಳ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವುದಾಗಿದೆ. ಉತ್ಪಾದನಾ ರಂಗದಲ್ಲಿ ತೊಡಗಿರುವ 15 + ವಯೋಮಾನದ 36 ಲಕ್ಷ ಅನಕ್ಷರಸ್ಥರನ್ನು ಕಲಿಕೆಗೆ ಒಳಪಡಿಸಬೇಕಾಗಿದೆ.
  • ರಾಜ್ಯದ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ, ಬೀದರ್, ಬಿಜಾಪುರ, ಬೆಳಗಾಂ, ಚಿತ್ರದುರ್ಗ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ಮೈಸೂರು, ಮಂಡ್ಯ, ಚಾಮರಾಜನಗರ, ರಾಯಚೂರು, ತುಮಕೂರು, ಗದಗ ಈ 18 ಜಿಲ್ಲೆಗಳಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.

ಮೂಲ : ಸಾಕ್ಷರ ಭಾರತ್

ಕೊನೆಯ ಮಾರ್ಪಾಟು : 4/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate