ಲೋಕ ಶಿಕ್ಷಣ ನಿರ್ದೇಶನಾಲಯದಲ್ಲಿ ಇ - ಆಡಳಿತ ಲೋಕ ಶಿಕ್ಷಣ ನಿರ್ದೇಶನಾಲಯದಲ್ಲಿ ಇ - ಆಡಳಿತ ವಿಭಾಗ ಕರ್ತವ್ಯ ನಿರ್ವಹಿಸುತ್ತಿದ್ದು ಎಲ್ಲಾ ಜಿಲ್ಲೆಗಳಿಂದ ವಿವಿಧ ಕಾರ್ಯಕ್ರಮದ ಮಾಹಿತಿಯನ್ನು ಇಂಟರ್ ನೆಟ್ ಮುಖಾಂತರ ತರಿಸಿ ವಿಷಯಗಳನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ವೆಬ್ ಸೈಟ್ ಅಭಿವ್ರದ್ಧಿಗೊಲಿಸಲಾಗಿದೆ. ಎಲ್ಲಾ ಜಿಲ್ಲೆಗಳಿಗೆ ಬ್ರಾಂಡ್ ಬ್ಯಾಂಡ್ ಇಂಟರ್ ನೆಟ್ ಸೇವೆ ವ್ಯವಸ್ಥೆಯಿದೆ. ಎಲ್ಲಾ ಜಿಲ್ಲಾ ಸಾಕ್ಷರತಾ ಸಮಿತಿಗಳಿಗೆ ಹಾಗೂ ನಿರ್ದೇಶನಾಲಯಕ್ಕೆ ಇ - ಮೇಲ್ ವಿಳಾಸಗಳನ್ನು ಸಿದ್ಧಪಡಿಸಿ ವರದಿಗಳನ್ನು ಇ - ಮೇಲ್ ಮತ್ತು ಫ್ಯಾಕ್ಸ್ ಮೂಲಕ ನೀಡುವುದು ಮತ್ತು ತರಿಸಿಕೊಳ್ಳುವುದು ಆಗುತ್ತುದೆ.
ವಯಸ್ಕರ ಸಾಕ್ಷರತೆಗಾಗಿ ರಾಜ್ಯ ಸಂಪನ್ಮೂಲ ಕೇಂದ್ರ ಸಿದ್ಧಪಡಿಸಿದ ' ಬಾರವ್ವ ಕಲಿಯಾಕ ' ಪಠ್ಯಪುಸ್ತಕವನ್ನು ಆಧರಿಸಿ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಮೂಲಕ ಅನಕ್ಷರಸ್ಥರು ಸಾಕ್ಷರತಾ ಕೌಶಲ ಪಡೆಯಬಹುದಾಗಿದೆ. ಕಂಪ್ಯೂಟರ್ ಮೂಲಕ ಮೌಸ್ ಬಳಿಸಿ, ಅಕ್ಷರ ಪದಗಳನ್ನು ಉಚ್ಚಾರಣೆ ಮೂಲಕ ಕಲಿಯಬಹುದು. ಕನ್ನಡ ಅಕ್ಷರಗಳು, ಸ್ವರ ಚಿಹ್ನೆ , ಒತ್ತಕ್ಷರಗಳನ್ನು ಸೇರಿಸಿ ಬರೆಯುವ ಕ್ರಮವನ್ನು ಸರಳವಾಗಿ ಇದರಲ್ಲಿ ಪರಿಚಯಿಸಲಾಗಿದೆ. ಮೌಸ್ ಬಳಸಿ ಅಕ್ಷರ ಅಭ್ಯಾಸ ಮಾಡಬಹುದು. ಕಲಿಕಾರ್ಥಿಗಳು ಮೌಸ್ ನಿಂದ ಅಕ್ಷರ ಕಲ್ಪಿಸಲಾಗಿದೆ. ಹಾಗೆಯೇ ಅಕ್ಷರ ಬರೆಯುವ ಕ್ರಮವನ್ನು ಪರಿಚಯಿಸಲಾಗಿದೆ.
ಮಾಹಿತಿ ಹಕ್ಕು -2015-16 4(i) (a)
ಮಾಹಿತಿ ಹಕ್ಕು -2015-16 4(i) (b)
ಮಾಹಿತಿ ಹಕ್ಕು -2014-15 4(i) (a)
ಮಾಹಿತಿ ಹಕ್ಕು -2014-15 4(i) (b)
ಮಾಹಿತಿ ಹಕ್ಕು -2013-14 4(1) (a)
ಮಾಹಿತಿ ಹಕ್ಕು -2013-14 4(1) (b)
ಮಾಹಿತಿ ಹಕ್ಕು - 2012 - 13 4(1) (a)
ಮಾಹಿತಿ ಹಕ್ಕು -2012-13 4(1) (b)
ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ ಸ್ಥಾಪನೆಯಾಗಿದ್ದು, ದಿನಾಂಕ 18.03.1995 ರಿಂದ ಕಾರ್ಯನಿರ್ವಹಿಸುತ್ತಿದೆ. ಲೋಕ ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸಚಿವಾಲಯವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಸಂಸ್ಥೆಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
3.2006ರಲ್ಲಿ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಕ್ಕೆ ನಿರ್ದೇಶಕರನ್ನು ನಿಯುಕ್ತಿಗೊಳಿಸಿರುವುದರ ಪ್ರಯುಕ್ತ ಲೋಕ ಶಿಕ್ಷಣ ಇಲಾಖೆ ಎಂದು ನಾಮಧೇಯ ಪಡೆದಿದೆ
ಈ ನಿರ್ದೇಶನಾಲಯವು ವಯಸ್ಕರ ಶಿಕ್ಷಣ ಕಾರ್ಯಕ್ರಮಗಳನ್ನು ಜಿಲ್ಲಾ ಸಾಕ್ಷರತಾ ಸಮಿತಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕಾರ್ಯಕ್ರಮದ ಅನುಷ್ಠಾನದಲ್ಲಿ ಅಗತ್ಯವಾದ ಮಾರ್ಗದರ್ಶನ, ಸೂಚನೆ ಮತ್ತು ಮಾರ್ಗೊಪಾಯಗಳಿಗೆ ಸಂಬಂಧಿಸಿದಂತೆ ನಿರ್ದೇಶನ ಮತ್ತು ತರಬೇತಿ ನೀಡಲಾಗುತ್ತದೆ.
ಈ ನಿರ್ದೇಶನಾಲಯಕ್ಕೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ ನಿಯಮಗಳು ಇಲ್ಲದೇ ಇರುವುದರಿಂದ ಪ್ರಧಾನವಾಗಿ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ನಿಯೋಜನೆ ಮೇರೆಗೆ ತೊಡಗಿಸಿಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
ಲೋಕ ಶಿಕ್ಷಣ ನಿರ್ದೇಶನಾಲಯಕ್ಕೆ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಲೋಕ ಶಿಕ್ಷಣ ನಿರ್ದೇಶನಾಲಯದ ಒಟ್ಟಾರೆ ಆಡಳಿತ ಜವಾಬ್ದಾರಿ ನಿರ್ದೇಶಕರದ್ದಾಗಿರುತ್ತದೆ. ರಾಜ್ಯಮಟ್ಟದ ಅಧಿಕಾರಿಗಳಾದ ನಿರ್ದೇಶಕರಿಗೆ ಇಬ್ಬರು ಉಪನಿರ್ದೇಶಕರು ಮತ್ತು ನಾಲ್ಕು ಮಂದಿ ಸಹಾಯಕ ನಿರ್ದೇಶಕರು ಸಹ ಅಧಿಕಾರಿಗಳಾಗಿರುತ್ತಾರೆ.
ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಸಾಕ್ಷರತಾ ಕಾರ್ಯಕ್ರಮಗಳನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನ ಮಾಡುತ್ತದೆ. ಲೋಕ ಶಿಕ್ಷಣ ನಿರ್ದೇಶನಾಲಯಕ್ಕೆ ಅದರ ಸಚಿವಾಲಯ (ಕಾರ್ಯಾಲಯದ) ವಾಗಿರುತ್ತದೆ. ಲೋಕ ಶಿಕ್ಷಣ ನಿರ್ದೇಶನಾಲಯ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳ ಕಛೇರಿ ಆಡಳಿತ, ನಿರ್ವಹಣೆ ಮತ್ತು ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸುತ್ತದೆ
ಮೂಲ : ಲೋಕ ಶಿಕ್ಷಣ ನೀರ್ದೆಶನಲಾಯ
ಕೊನೆಯ ಮಾರ್ಪಾಟು : 5/29/2020
ಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್...
ಪದವಿ ಶಿಕ್ಷಣದಲ್ಲಿನ ಸೆಮಿಸ್ಟರ್ ಪದ್ದತಿ ಕುರಿತಾದ ಮಾಹಿತಿ ...
ವರದಕ್ಷಿಣಯು ನಮ್ಮ ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿದ್ದು, ಊಹ...
ಭಾರತದಲ್ಲಿ ಪ್ರಚಲಿತವಿರುವ ದೇಶೀಯ ಭಾಷೆಗಳೊಂದಿಗೆ ವಿದೇಶೀ ಭ...