অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗ್ರಂಥಾಲಯ

ಗ್ರಂಥಾಲಯ

ಪುರಾತನ ಕಾಲದಿಂದಲೂ ನಾವು ಗ್ರಂಥಾಲಯಗಳನ್ನು ಕಾಣಬಹುದು ಆದರೆ ಅವು ಸಾವ೯ಜನಿಕರ ಸ್ವತ್ತಾಗದೇ ರಾಜರ , ಉಳ್ಳವರ ಸ್ವತ್ತಾಗಿದ್ದವು . ಕ್ರಮೇಣ ಗ್ರಂಥಾಲಯಗಳು ಸಾವ೯ಜನಿಕರಿಗೆ ಮುಕ್ತ ಪ್ರವೇಶ ನೀಡಿ ಓದುಗರಿಗೆ ಅನುಕೂಲ ಕಲ್ಪಿಸಿಕೊಟ್ಟವು . ಇದೀಗ ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ ಕೆಲಸ ನಿವ೯ಹಿಸುವ ಮತ್ತು ಸ್ಪದಾ೯ತ್ಮಕ ಅಧ್ಯಯನ

ಕೇಂದ್ರಗಳಾಗಿ ಕೆಲಸ ನಿವ೯ಹಿಸುವಷ್ಟು  ಬೆಳದು ನಿಂತಿವೆ  . ಹಿಂದೆ ಗ್ರಂಥಪಾಲಕನನ್ನು  ಉಗ್ರಾಣಿಕನೆಂದು , ಗ್ರಂಥಾಲಯವನ್ನು ಉಗ್ರಾಣ ಎಂದು ಕರೆಯುತ್ತಿದ್ದರು  . ಅಧುನಿಕ  ಕಾಲದಲ್ಲಿ  ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ , ಸ್ಪಧಾ೯ತ್ಮಕ ಅಧ್ಯಯನ ಕೇಂದ್ರ , ಮಕ್ಕಳ, ವೃದ್ದರ , ಸಂಶೋಧನಾ ,ಶೈಕ್ಷಣಿಕ , ವಿಶೇಷ,ವಿಶ್ವವಿದ್ಯಾಲಯ  ಹೀಗೆ ಅನೇಕ  ಪ್ರಕಾರದ ಗ್ರಂಥಾಲಯಗಳು ಓದುಗರಿಗೆ ಗ್ರಂಥ  ದೊರಕಿಸಿಕೊಡುವ ಕೆಲಸ ಮಾಡುತ್ತಿವೆ ಇಂತಹ  ಗ್ರಂಥಾಲಯಗಳ ಅಭಿವೃದ್ಧಿ ಗೆ ಶ್ರಮಿಸಿದ ಅನೇಕ  ಮಹನೀಯರಿದ್ದಾರೆ . ಅವರ ಕಿರುಪರಿಚಯ ಹೀಗಿದೆ .

ಆಂಡ್ರ್ಯೂ ಕಾನೇ೯ಗಿ :  ಇವರು ಅಮೇರಿಕಾದ ಕೈಗಾರಿಕೋದ್ಯಮಿ  ಗ್ರಂಥಾಲಯ ಸ್ಥಾಪನೆಗಾಗಿ ಹೆಚ್ಚು ಹಣ ವಿನಿಯೋಗಿಸಿದ್ದಾರೆ . ಇವರು ವ್ಯಯ ಮಾಡಿದ ಹಣದಲ್ಲಿ ಸುಮಾರು ೨೮೧೧ , ಸಾವ೯ಜನಿಕ ಗ್ರಂಥಾಲಯಗಳನ್ನು  ಕ್ರಿ . ಶ ೧೯೧೧ . ರ ಹೊತ್ತಿಗೆ  ಸ್ಥಾಪಿಸಿದ್ದರು . ಗ್ರಂಥಾಲಯದಿಂದಾಗುವ ಮುಖ್ಯ ಲಾಭ    ಜ್ಞಾನಾಜ್ಞ೯ನೆ  , ನಾವೇನಾದರೂ ಕೊಡದಿದ್ದರೆ ಅವು ನಮಗೇನೂ ಕೊಡಲಾರವು ಎಂಬುದು ಅವರ ಅಭಿಪ್ರಾಯವಾಗಿತ್ತು .

ಚಾಲ್ಸ್೯ಅಮ್ಮಿ ಕಟ್ಟರ್  :  ಅಮೇರಿಕಾ ದೇಶದ ಬಾಸ್ಟನ ನಗರದವರಾದ ಇವರು , ತಮ್ಮ ಶಿಕ್ಷಣದ ನಂತರ ಧಮೊ೯ಪದೇಶಕರಾಗಿ ಕಾಯ೯ನಿವ೯ಹಿಸುವ ಸಂದಭ೯ದಲ್ಲಿ  ಗ್ರಂಥಾಲಯ ನಿವ೯ಹಣೆ ಜವಾಬ್ದಾರಿ ಇವರದಾಯಿತು , ಕೆಲಸ ನಿವ೯ಹಿಸುವ ಸಮಯದಲ್ಲಿ   ಗ್ರಂಥಾಲಯ ವಿಜ್ಞಾನದಲ್ಲಿ ಆಸಕ್ತಿ ಬೆಳಸಿಕೊಂಡು , ಸೂಚಿಗಳನ್ನು ರಚಿಸಿ  , ಪರಿಷ್ಕರಿಸಿ ತಮ್ಮ ಪರಿಶ್ರಮದಿಂದ  ( ರೂಲ್ಸ್ ಫಾರ್ ಎ ಡಿಕ್ಸನರಿ ಕ್ಯಾಟಲಾಗ್ ) ೧೮೭೫ ರಲ್ಲಿ ಕೃತಿ ರಚಿಸಿದರು . ಈ ಪದ್ದತಿ ಇಂದು ಅನೇಕ ಗ್ರಂಥಾಲಯಗಳಲ್ಲಿ ಚಾಲ್ತಿಯಲ್ಲಿದೆ .

ಖುದಾಭಕ್ಷ ಖಾನ್ :   ಇವರು  ಪ್ರಾಚ್ಯ ಸಾವ೯ಜನಿಕ ಗ್ರಂಥಾಲಯ ಸಂಸ್ಥಾಪಕರು .  ತಮ್ಮ ತಂದೆಯ ಸಂಗ್ರಹದಿಂದ ದೊರೆತ ೧೪೦೦ ಹಸ್ತಪ್ರತಿಗಳೊಂದಿಗೆ ಸಾವ೯ಜನಿಕ ಗ್ರಂಥಾಲಯ ತೆರೆದರು , ಪ್ರಾಚೀನ ವಸ್ತು ಮಾರಲು ಬಂದವರಿಗೆ ಒಂದಕ್ಕೆ ಎರಡರಷ್ಟು ಬೆಲೆ ಕೊಟ್ಟು ಖರೀದಿಸಿ ಪ್ರಾಚ್ಯವಸ್ತು ಸಾವ೯ಜನಿಕ ಗ್ರಂಥಾಲಯ ಬೆಳೆಯುವಂತೆ ಅದರ ವಿಸ್ತಾರ ಹೆಚ್ಚಿಸಿದರು . ಕಾಲಾನಂತರ ಅದು ಖುದಾಭಕ್ಷ  ಸಾವ೯ಜನಿಕ ಗ್ರಂಥಾಲಯ ಎಂದು ಪ್ರಸಿದ್ಧವಾಯಿತು . ಬಂಗಾಳ ಸಕಾ೯ರ ಗ್ರಂಥಾಲಯವನ್ನು ತನ್ನ  ಆಡಳಿತಕ್ಕೆ  ಒಳಪಡಿಸಿತು . ಇವರ ಸೇವೆಯನ್ನು ಗುರುತಿಸಿ ಅಂದಿನ ಬ್ರಿಟಿಷ್ ಸಕಾ೯ರ ಖಾನ್ ಬಹಾದೂರ ೧೮೮೧ , ಸಿ. ಐ. ಇ ೧೯೦೩ ರಲ್ಲಿ ,ಬಿರುದುಗಳನ್ನು  ನೀಡಿ ಗೌರವಿಸಿವೆ .ಇದಲ್ಲದೆ ಅವರು ಪಾಟ್ನಾದಲ್ಲಿ ಪ್ರಸಿದ್ದ  ವಕೀಲರಾಗಿದ್ದರು . ಹೈದಬಾದ ಸಂಸ್ಥಾನದ ಮುಖ್ಯ ನ್ಯಾಯಾಧೀಶರಾಗಿಯ ಸೇವೆ ಸಲ್ಲಿಸಿದ್ದಾರೆ .

ಹೆನ್ರಿ ಎವ್ಲಿನ್ ಬ್ಲಿಸ್  :  ಅಮೆರಿಕಾ ದೇಶದ ನ್ಯೂಯಾಕ೯ ನಗರ ವಾಸಿಯಾಗಿದ್ದ ಇವರು , ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಹಲವಾರು ಬದಲಾವಣೆ ತಂದು ಅಲ್ಲಿಯವರೆಗೂ ಚಾಲ್ತಿಯಲ್ಲಿದ್ದ ದಶಾಂಶ ಮತ್ತು ವ್ಯಾಪಕ ವಗೀ೯ಕರಣ ಪದ್ದತಿಗಳನ್ನು ಪರಿಷ್ಕರಿಸಿದರು . ನಿಯತಕಾಲಿಕೆ,  ಗ್ರಂಥಗಳ ಮುಖಾಂತರ ವಗೀ೯ಕರಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗೆ ಕಾರಣೀಕತ೯ರಾದರು .   ಇವರ ದಿ  ಆಗ೯ನೈಸೇಷನ ಆಫ್ ನಾಲೆಡ್ಜ  ಆಂಡ್ ಸಿಸ್ಟಂ ಆಫ್ ಸೈನ್ಸಸ್ , ಮತ್ತು ದಿ ಆಗ೯ನೈಸೇಷನ್ ಆಫ್ ನಾಲೆಡ್ಜ್ ಇನ್ ಲೈಬ್ರರೀಸ್ ಆಂಡ್ ಸಬ್ಜೆಕ್ಟ ಅಪ್ರೋಚ್ ಟು ಬುಕ್ಸ ಎಂಬ ಗ್ರಂಥಾಲಯಗಳನ್ನು ರಚಿಸಿದ್ದಾರೆ .

ಮೆಲವಿಲ್ ಡ್ಯೂಯಿ :  ಮೆಲವಿಲ್ ಡ್ಯೂಯಿ ೧೦ ಡಿಸಂಬರ್ ೧೮೫೧ ರಲ್ಲಿ ತಂದೆ ಜೋಯಲ್ ಡ್ಯೂಯಿ  ತಾಯಿ ಎಲಿಜಾ ಗ್ರೀನ್ ರ ಮಗನಾಗಿ ನ್ಯೂಯಾಕ೯ ನ ಆಡಂಸೆಂಟರನಲ್ಲಿ ಜನಿಸಿದರು . ಚಪ್ಪಲಿ ಹೊಲೆಯುವ ಮನೆ ಕಸುಬಾಗಿದ್ದ ಕುಟುಂಬದಿಂದ ಬಂದ ಮೆಲವಿಲ್ ಡ್ಯೂಯಿ ಮುಂದೆ ಇಡೀ ಜಗತ್ತೇ ವಿಶ್ವ ಗ್ರಂಥಾಲಯ ಚಳುವಳಿಯ ಪಿತಾಮಹನಾಗುತ್ತಾನೆಂದು ಯಾರು ಉಹಿಸಿರಲಿಲ್ಲ . ಗ್ರಂಥಾಲಯದ ಸಂಗ್ರಹವನ್ನು ವ್ಯವಸ್ಥಿತವಾಗಿ ಮತ್ತು ಕ್ರಮಬದ್ದವಾಗಿ ಜೋಡಿಸುವ ವಿಧಾನವನ್ನು ಕಂಡು ಹಿಡಿದರು . ೧೮೭೬ ರಲ್ಲಿ  ದಶಾಂಶ ವಗೀ೯ಕರಣ  ಪದ್ದತಿಯನ್ನು ಕಂಡುಹಿಡಿದರು , ಈ ಪದ್ದತಿ ೦೦೦-೯೯೯ ಸಂಖ್ಯೆಗಳನ್ನು ಬಳಸಿ ಅವಿಷ್ಕಾರ ಮಾಡಿದ ಡ್ಯೂಯಿ ದಶಾಂಶ ವಗೀ೯ಕರಣ ಇಂದಿಗೂ  ಜಗತ್ತಿನಾದ್ಯಂತ ಹೆಚ್ಚು ಪ್ರಸ್ತುತ . ಇದಲ್ಲದೆ ವೃತ್ತಿನಿರತರಾಗ ಬಯಸುವವರಿಗೆ ಗ್ರಂಥಪಾಲಕರ ತರಬೇತಿ ಶಾಲೆ ಪ್ರಾರಂಬಿಸಿದ್ದು , ಇವರ ಸಂಪಾದಕತ್ವದಲ್ಲಿ ಗ್ರಂಥಪಾಲಕರಿಗೆ ಉಪಯುಕ್ತವಾಗುವಂತಹ ಲೈಬ್ರರಿ ನೋಟ್ಸ ಪತ್ರಿಕೆ  ಪ್ರಾರಂಬಿಸಿದರು. ಸಾವ೯ಜನಿಕ ಗ್ರಂಥಾಲಯದ    ವಿಸ್ತಾರಣಾ ಸೇವೆಯಾದ ಸಂಚಾರಿ ಗ್ರಂಥಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ .  ಮೆಲವಿಲ್ ಡ್ಯೂಯಿಗೆ ಅವರಿಗೆ ಸಂದ ಮನ್ನಣೆಗಳು ಕೊಲಂಬಿಯಾ ಕಾಲೇಜಿನ ಗ್ರಂಥಪಾಲಕ ಮತ್ತು ಗ್ರಂಥಾಲಯ ತರಬೇತಿ ಶಾಲೆಯ ಮುಖ್ಯಸ್ಥ , ಅಮೆರಿಕಾ ಗ್ರಂಥಾಲಯ ಸಂಘದ ಕಾಯ೯ದಶಿ೯ , ಅಧ್ಯಕ್ಷ . ನ್ಯೂಯಾಕ೯ ಸ್ಟೇಟ್ ಗ್ರಂಥಾಲಯದ ನಿದೇ೯ಶಕ , ಹೀಗೆ ಒಟ್ಟಾರೆ ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿ ೨೬ ಡಿಸಂಬರ್ ೧೯೩೧ ರಂದು ಈ ಮಹಾನಚೇತನ ಜಗತ್ತನ್ನು ಅಗಲಿತು .

ಡಾ.ಎಸ್.ಆರ್.ರಂಗನಾಥನ್: ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನರವರ ಪೂಣ೯ ಹೆಸರು ಶಿಯ್ಯಾಳಿ ರಾಮಾಮೃತ ರಂಗನಾಥನ್ ಇವರು ೧೨ ಆಗಸ್ಟ ೧೮೯೨ ರಲ್ಲಿ ತಮಿಳುನಾಡಿನ ತಂಜಾವುರ ಜಿಲ್ಲೆಯ ಶಿಯ್ಯಾಳಿ ಎಂಬ ಗ್ರಾಮದಲ್ಲಿ ಜನಿಸಿದರು ತಂದೆ ರಾಮಾಮೃತ ಅಯ್ಯಾರ ತಾಯಿ ಸೀತಾಲಕ್ಷ್ಮಿ ಮಗನಾಗಿ ಜನಿಸಿದ ರಂಗನಾಥನರವರು ಮುಂದೆ ಭಾರತೀಯ ಗ್ರಂಥಾಲಯ ಪಿತಾಮಹರಾಗುತ್ತಾರೆಂದು ಯಾರು ಅಂದು ಕೂಂಡಿರಲಿಲ್ಲ.

ಡಾ.ಎಸ್.ಆರ್.ರಂಗನಾಥನರವರು ಮೂಲತಹ ತಮ್ಮನ್ನು ಗುರುತಿಸಿಕೂಂಡಿದ್ದು. ಒಬ್ಬ ಗಣಿತ ಪ್ರಾಧ್ಯಾಪಕರಾಗಿ ನಂತರದ  ದಿನಗಳಲ್ಲಿ ಶೈಕ್ಷಣಿಕ ವಿದ್ಯಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದರು. ಈ ಸೇವೆಯ ಅವರನ್ನು ಗ್ರಂಥಾಲಯಗಳ ಬಗ್ಗೆ ಚಿಂತೆ ಮಾಡುವಂತೆ ಮಾಡಿ ಮುಂದೆ ಗ್ರಂಥಾಲಯ ವಿಜ್ಞಾನಕ್ಕೆ ಮಹತ್ತರ ಕೂಡುಗೆ ನೀಡುವಂತೆ ಮಾಡಿತು.

ಗ್ರಂಥಾಲಯ ವಿಜ್ಞಾನಕ್ಕೆ ಹಲವಾರು ಮಹತ್ವದ ಕೂಡುಗೆಗಳನ್ನು ನೀಡಿದ್ದಾರೆ. ಅವುಗಳೆಂದರೆ. ಗ್ರಂಥಾಲಯದ ಪಂಚಸೂತ್ರಗಳು, ದ್ವಿಬಿಂದು ವಗಿ೯ಕರಣ, ಸೂಚೀಕರಣ ಪರಾಮಶ೯ನ ಸೇವೆ. ಹೀಗೆ ಮುಂತಾದ ಹಲವಾರು ಮಹತ್ವದ ಕೂಡುಗೆಯನ್ನು ನೀಡಿದ್ದಾರೆ. ಇವರು ನೀಡಿದ ಪಂಚಸೂತ್ರಗಳುಹೀಗಿವೆ.

  • ಗ್ರಂಥಗಳು ಉಪಯೋಗಕ್ಕಾಗಿವೆ.
  • ಪ್ರತಿಯೊಬ್ಬ ಓದುಗನಿಗೂ ಅವರದೇ ಆದ ಗ್ರಂಥ.
  • ಪ್ರತಿಯೊಂದು ಗ್ರಂಥಕ್ಕೆ ಅದರದೇ ಆದ ಓದುಗ.
  • ಓದುಗರ ಸಮಯವನ್ನು ಉಳಿಸಿ.
  • ಗ್ರಂಥಾಲಯ ಬೆಳೆಯುತ್ತಿರುವ ಸಂಸ್ಥೆ.

ಯಾವುದೇ ಗ್ರಂಥಾಲಯಗಳು ವ್ಯವಸ್ಥಿತವಾಗಿ ಕಾಯ೯ ನಿವ೯ಹಿಸಬೇಕಾದರೆ ಗ್ರಂಥಾಲಯ ಪಂಚಸೂತ್ರಗಳು ಅಗತ್ಯವಾಗಿವೆ.

ಡಾ.ಎಸ್.ಆರ್.ರಂಗನಾಥನರವರು ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಮತ್ತು ನೀಡಿದ ಕೂಡುಗೆಗಳನ್ನು ಪರಿಗಣಿಸಿ ಅನೇಕ ರಾಷ್ಟೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿ ಬಿರುದುಗಳು ಬಂದಿವೆ. ದೆಹಲಿ ವಿಶ್ವವಿದ್ಯಾಲಯವು ೧೯೪೮ ರಲ್ಲಿ ಪಿಟ್ಸ್ ಬಗ೯ ವಿಶ್ವವಿದ್ಯಾಲಯ ೧೯೬೪ ರಲ್ಲಿ ಇವರಿಗೆ ಡಿಲಿಟ್ ಪದವಿ ನೀಡಿ ಗೌರವಿಸಿದೆ. ೧೯೩೫ ರಲ್ಲಿ ಅಂದಿನ ಬ್ರಿಟಿಷ್ ಸಕಾ೯ರವು ಇವರಿಗೆ ರಾವ್ ಸಾಹೇಬ್ ಎಂಬ ಬಿರುದು ನೀಡಿತ್ತು. ೧೯೫೭ ರಲ್ಲಿ ಭಾರತ ಸರಕಾರ ಪದ್ಮಶ್ರೀಯನ್ನು ನೀಡಿ ಗೌರವಿಸಿದೆ. ೧೯೭೦ ರಲ್ಲಿ ಅಮೇರಿಕಾದ ಮಾಗ೯ರೆಟ್ ಮಾನ್ ಪಾರಿತೋಷಕ ಪಡೆದ ಪ್ರಥಮ ಭಾರತೀಯರು ಹೌದು. ಅಮೇರಿಕಾದ ಮಾಕ೯ಟೈನ್ ಸೊಸೈಟಿ ಗ್ರ್ಯಾಂಡ್ ನೈಟ್ ದಿ ಪೀಸ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ ಇನ್ನು ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಆಡುಮುಟ್ಟದ ಸೊಪ್ಪಿಲ್ಲ ರಂಗನಾಥನರವರು ಗ್ರಂಥಾಲಯಗಳಿಗೆ ನೀಡದ ಕೊಡುಗೆಗಳಿಲ್ಲ ಎಂದರೆ ಅತಿಶೋಯುಕ್ತಿ ಆಗಲಾರದು. ಇಂತಹ ಮಹಾನ್ ಚೇತನ್ ಭಾರತದ ಗ್ರಂಥಾಲಯದ ಪಿತಾಮಹ ಡಾ.ಎಸ್.ಆರ್.ರಂಗನಾಥನರವರು. ೨೭ ಸಪ್ಟಂಬರ ೧೯೭೨ ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳದರು. ಅವರು ಹುಟ್ಟಿದ ದಿನವನ್ನೇ ಆಗಸ್ಟ ೧೨ ನ್ನು ಗ್ರಂಥಾಪಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಇವರಷ್ಟೇ ಅಲ್ಲದೆ ಖಲೀಫ್ ಮಹ್ಮದ ಅಸುದುಲ್ಲ  , ಮಾಷ೯ಲ್.ಡಿ.ಎನ , ಇವರಲ್ಲದೆ ಇನ್ನು ಅನೇಕ ಮಹನೀಯರು ಗ್ರಂಥಾಲಯ ವಿಜ್ಞಾ ನ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳನ್ನು ನೀಡಿ ಗ್ರಂಥಾಲಯ ವಿಜ್ಙಾನ ಕ್ಷೇತ್ರದ ಭಾಷ್ಯ ಬರೆದ   ಮಹನೀಯರೆನಿಸಿಕೊಂಡಿದ್ದಾರೆ .

- ನಾಗರಾಜನಾಯಕ ಡಿ ಡೊಳ್ಳಿನ :ಕೊಪ್ಪಳ ೫೮೩೨೩೧.೯೯೦೧೧೩೫೮೭೪ .

ಮೂಲ : ಕನ್ನಡ ನೆಟ್

ಮನೆಯ ಗ್ರಂಥಾಲಯ

ಗ್ರಂಥಾಲಯ ಮನೆಯ ಯಾವ ಭಾಗದಲ್ಲಿ, ಹೇಗೆ ಇರಬೇಕು ಎನ್ನುವ ಪ್ರಶ್ನೆಗಳು ಅನೇಕರಲ್ಲಿ ಇರುತ್ತವೆ. ಅವಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವಿದು.

ಸಾಹಿತ್ಯದಲ್ಲಿ ಒಲವಿರುವವರಿಗೆ ಪುಸ್ತಕಗಳೆಂದರೆ ಅತೀ ಮುದ್ದು... ಒಂದೊಂದೇ ಪುಸ್ತಕವನ್ನು ಖರೀದಿ ಮಾಡಲು ಆರಂಭಿಸಿ ಕೊನೆಗೆ ಮನೆಯಲ್ಲಿ ಪುಸ್ತಕಗಳನ್ನು ಇಡಲು ಜಾಗವೇ ಇಲ್ಲದಂತಾಗಿರುವ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು.  ಇಂತಹ ಪುಸ್ತಕ ಪ್ರೇಮಿಗಳು ಅವರ ಸಂಗ್ರಹದ ಪುಸ್ತಕಗಳನ್ನು ಮಕ್ಕಳಂತೆ ಜೋಪಾನ ಮಾಡಿರುತ್ತಾರೆ. ಇವರು ಹೊಸದಾಗಿ ಮನೆಯನ್ನೇನಾದರೂ ಕಟ್ಟಿಸಲು ಇಚ್ಛಿಸಿದರೆ ಮೊದಲು ಪ್ರಾಶಸ್ತ್ಯ ಕೊಡುವುದು ಈ ಪುಸ್ತಕಗಳಿಗೆ.

ಇಷ್ಟು ದಿನ ದೂಳು ಹಿಡಿದಿದ್ದ ಹೊತ್ತಿಗೆಗಳಿಗೆ ತಾವು ನಿರ್ಮಿಸುವ ಮನೆಯಲ್ಲಿ ಒಂದು ಸುಂದರ ಸ್ಥಳಾವಕಾಶ ಕಲ್ಪಿಸಬೇಕೆಂಬ ಆಸೆ ಎಲ್ಲಾ ಪುಸ್ತಕ ಪ್ರೇಮಿಗಳದ್ದು. ಇವರಿಗೆ ಹೊತ್ತು ಕಳೆಯಲು ನೆರವಾಗುವುದು ಈ ಹೊತ್ತಿಗೆಗಳೇ. ಕೆಲವರಿಗಂತೂ ಪುಸ್ತಕಗಳೇ ಸ್ನೇಹಿತರಂತೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪುಸ್ತಕ ಪ್ರೇಮಿಗಳಿಗೆ ಇ–ಬುಕ್‌ಗಳಿಗಿಂತ ಹೆಚ್ಚು ಆಪ್ತವಾಗುವುದು ಕೈಯಲ್ಲಿ ಪುಸ್ತಕ ಹಿಡಿದು ಓದುವುದು. ಹಾಗಾಗಿ ಆನ್‌ಲೈನ್‌ನಲ್ಲಿ ಪುಸ್ತಕಗಳು ಲಭ್ಯವಿದ್ದರೂ ಕೆಲವರು ಪುಸ್ತಕ ಖರೀದಿ ಮಾಡಿ ಓದುವ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ.

ಹಾಗಾದರೆ ಹೊಸ ಮನೆಗಳಲ್ಲಿ ಸುಂದರ ಗ್ರಂಥಾಲಯಗಳನ್ನು ನಿರ್ಮಿಸುವುದು ಹೇಗೆ? ಯಾವ ಯಾವ ಅಂಶಗಳತ್ತ ಗಮನ ಹರಿಸಬೇಕು? ಎಂಬೆಲ್ಲಾ ವಿಷಯಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಕುರಿತು ವಾಸ್ತುಶಿಲ್ಪಿ ಚೇತನ್‌ ಶಿವಪ್ರಸನ್ನ ಅವರು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸುವಾಗ ಗಮನ ಹರಿಸಬೇಕಾದ ವಿಷಯಗಳೇನು

ವಾಸ್ತುಶಿಲ್ಪ ಎನ್ನುವುದು ಸಂಪೂರ್ಣವಾಗಿ ನಮ್ಮ ಗ್ರಾಹಕರನ್ನು ಅವಲಂಬಿಸಿರುತ್ತದೆ. ಅವರು ನೀಡುವ ಜಾಗದ ಅಳತೆ, ಆರ್ಥಿಕ ಸಬಲತೆ ಹಾಗೂ ಅವಶ್ಯಕತೆಗಳನ್ನು ಹೇಳಿದರೆ ಅದಕ್ಕೆ ತಕ್ಕಂತೆ ನಾವು ಯೋಜನೆಗಳನ್ನು ರೂಪಿಸುತ್ತೇವೆ. ಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸುವಾಗಲೂ ನಾವು ಇದೇ ನಿಯಮಗಳನ್ನು ಪಾಲಿಸುವುದು. ಅವರಿಗೆ ಯಾವ ರೀತಿಯ ಗ್ರಂಥಾಲಯ ಬೇಕು ಎನ್ನುವುದನ್ನು ಮೊದಲು ಖಾತರಿಪಡಿಸಿಕೊಳ್ಳುತ್ತೇವೆ.  ಫ್ಯಾಮಿಲಿ ಫ್ರೆಂಡ್ಲಿ ಲೈಬ್ರರಿ (ಕುಟುಂಬ ಸ್ನೇಹಿ ಗ್ರಂಥಾಲಯ), ಸೀರಿಯಸ್‌ ಲೈಬ್ರರಿ (ಗಂಭೀರ ಗ್ರಂಥಾಲಯ), ಡಿಸ್‌ಪ್ಲೇ ಲೈಬ್ರರಿ (ಪ್ರದರ್ಶನ ಯೋಗ್ಯ ಗ್ರಂಥಾಲಯ) ಹೀಗೆ ಹಲವಾರು ಬಗೆಯ ಗ್ರಂಥಾಲಯಗಳಿವೆ. ಹಾಗೆಯೇ ಅವರ ವೃತ್ತಿ ಹಾಗೂ ಜೀವನ ಶೈಲಿಯನ್ನು ಗಮನದಲ್ಲಿರಿಸಿಕೊಂಡು ಗ್ರಂಥಾಲಯಗಳ ಯೋಜನೆಯನ್ನು ರೂಪಿಸಲಾಗುತ್ತದೆ.

ಮನೆಯಲ್ಲಿ ಗ್ರಂಥಾಲಯಗಳ ನಿರ್ಮಾಣ ಸವಾಲಿನದ್ದು ಎನ್ನಬಹುದು. ನಮಗೆ ಇತ್ತೀಚೆಗೆ ಹೆಚ್ಚು ಜಾಗ ಸಿಗುವುದಿಲ್ಲ. ಸಿಗುವ ಕಡಿಮೆ ಜಾಗದಲ್ಲಿ ಸೃಜನಶೀಲತೆ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ನ್ಯಾಚುರಲ್‌ ಲೈಟಿಂಗ್‌ ಅತ್ಯವಶ್ಯಕ. ಬೇಸ್‌ಮೆಂಟ್‌ಗಳಲ್ಲಿ ಗ್ರಂಥಾಲಯ ನಿರ್ಮಿಸಿದರೆ ಬಹಳ ಉಪಯೋಗವಿದೆ.

ಮೊಬೈಲ್‌ ಫೋನ್‌ ನೆಟ್‌ವರ್ಕ್‌ಗಳು ಬೇಸ್‌ಮೆಂಟ್‌ಗೆ ತಲುಪುವುದಿಲ್ಲ, ಹೆಚ್ಚಿನ ಗಲಾಟೆ ಇರುವುದಿಲ್ಲ.ಇವೆಲ್ಲಾ ಚಿಕ್ಕಪುಟ್ಟ ಸಂಗತಿಗಳಾದರೂ ನಮ್ಮ ಮನಸ್ಸು ಅತ್ತಿತ್ತ ಹರಿದಾಡದೆ, ಏಕಾಗ್ರತೆ ಮೂಡುವಲ್ಲಿ ಸಹಾಯವಾಗುತ್ತದೆ. ಗ್ರಂಥಾಲಯಗಳಿಗೆ ನೈಸರ್ಗಿಕ ಬೆಳಕು ಬಿದ್ದರೆ ಸಕಾರಾತ್ಮಕ ಶಕ್ತಿ ಆ ಕೋಣೆಯಲ್ಲಿರುತ್ತದೆ. ಇದರ ಕುರಿತೂ ಗಮನ ಹರಿಸಬೇಕಾಗುತ್ತದೆ.

ಗ್ರಂಥಾಲಯದಲ್ಲಿ ಏನೇನಿರಬೇಕು

ಪುಸ್ತಕಗಳ ರ್‍ಯಾಕ್‌ಗಳೇ ಗ್ರಂಥಾಲಯಗಳ ಆಕರ್ಷಣೆ. ಒಂದು ರ್‍ಯಾಕ್‌ ಅನ್ನು ನಾಲ್ಕು ಹಂತದಲ್ಲಿ ತಯಾರಿಸಲಾಗುತ್ತದೆ. 7 ಇಂಚು, 10 ಇಂಚು, 13 ಇಂಚು ಹಾಗೂ ಎರಡು ಅಡಿಯ ಶೆಲ್ಫ್‌ಗಳನ್ನು ಬುಕ್‌ ರ್‍ಯಾಕ್‌ಗೆ ಅಳವಡಿಸಲಾಗುತ್ತದೆ. ಬುಕ್‌ ರ್‍ಯಾಕ್‌ ಹೊರತುಪಡಿಸಿದರೆ ಗ್ರಂಥಾಲಯಗಳಿಗೆ ಉತ್ತಮ ಲೈಟಿಂಗ್‌ ಅವಶ್ಯಕತೆಯಿದೆ. ದೊಡ್ಡ ದೊಡ್ಡ ಕಲಾಕೃತಿಗಳನ್ನು ಗೋಡೆಯ ಮೇಲೆ ನೇತು ಹಾಕಿದರೆ ವಿಭಿನ್ನ ಲುಕ್‌ ನೀಡುತ್ತದೆ.

ಮನೆಯ ಯಾವ ಜಾಗದಲ್ಲಿ ಗ್ರಂಥಾಲಯ ಇದ್ದರೆ ಸೂಕ್ತ

ಆಗಲೇ ಹೇಳಿದಂತೆ ನೆಲಮಾಳಿಗೆ ನನ್ನ ಮೊದಲ ಆದ್ಯತೆ. ಇದು ಬಿಟ್ಟರೆ ಮನೆಯ ಯಾವುದೇ ಜಾಗದಲ್ಲಾದರೂ  ಗ್ರಂಥಾಲಯ ನಿರ್ಮಿಸಬಹುದು. ಬೆಳಕು   ಹಾಗೂ ಗಾಳಿ ಚೆನ್ನಾಗಿ ಬರುವ ಕಡೆ ನಿರ್ಮಿಸಲು ಸೂಚಿಸುತ್ತೇವೆ.

ಕೆಲವರು ಪುಸ್ತಕಗಳನ್ನಿಡಲು ಪ್ರತ್ಯೇಕ ಜಾಗ ಕೇಳಿದರೆ, ಇನ್ನು ಕೆಲವರು ತಾವು  ಮಲಗುವ ಕೋಣೆಯಲ್ಲಿಯೇ ಪುಸ್ತಕಗಳನ್ನಿಡುವಂತೆ ಗ್ರಂಥಾಲಯ ನಿರ್ಮಿಸಿಕೊಡಿ ಎಂದು ಕೇಳುತ್ತಾರೆ.  ಉಳಿದರುವ ಜಾಗವನ್ನು ಖಾಲಿ ಬಿಡುವ ಬದಲು ಪುಸ್ತಕಗಳನ್ನಿಡಲು ಬಳಸಿಕೊಳ್ಳುವವರೂ ಇದ್ದಾರೆ. ಉದಾಹರಣೆಗೆ ಮೆಟ್ಟಿಲ ಕೆಳಗೆ ಸಿಗುವ ಖಾಲಿ ಜಾಗದಲ್ಲಿ ಷೋಕೇಸ್‌ ನಿರ್ಮಿಸಿ, ಅಲ್ಲಿ ಪುಸ್ತಕಗಳನ್ನು ಇಡುವಂತೆ ಅವಕಾಶ ಕಲ್ಪಿಸಿಕೊಡಿ ಎಂದು ಕೇಳುತ್ತಾರೆ. ಓದುವ ಕೋಣೆ ಹಾಗೂ ಗ್ರಂಥಾಲಯವನ್ನು ಒಟ್ಟಿಗೆ ಮಾಡಿದರೆ ಅನುಕೂಲ ಹೆಚ್ಚು.

ಯಾವ ಕಚ್ಚಾ ವಸ್ತುಗಳಿಂದ ಬುಕ್‌ ರ್‍ಯಾಕ್‌ ಮಾಡಿಸಿದರೆ ಸೂಕ್ತ

ಯಾವುದಾದರೂ ಆಗಬಹುದು. ಆದರೆ ಉತ್ತಮ ಗುಣಮಟ್ಟದ್ದಾಗಿರಬೇಕು. ಮರದ ಹಲಗೆಗಳು, ಮೆಟಲ್‌ ರೋಪ್ಸ್‌, ಗಾಜು, ಕಬ್ಬಿಣದ ರ್‍ಯಾಕ್‌ಗಳು, ಆ್ಯಂಟಿಕ್‌ ಸಲಕರಣೆಗಳು ಹೀಗೆ ಅನೇಕ ಕಚ್ಚಾ ವಸ್ತುಗಳನ್ನು  ಬಳಸಬಹುದು.

ಗ್ರಂಥಾಲಯ ನಿರ್ಮಾಣಕ್ಕೆ ತಗುಲುವ ವೆಚ್ಚ ಎಷ್ಟು

ಕೋಟಿ ರೂಪಾಯಿ ಇದ್ದರೆ ಹೈಫೈ ಗ್ರಂಥಾಲಯಗಳನ್ನು ಮಾಡಿಕೊಡುತ್ತೇನೆ. ಸಾವಿರ ರೂಪಾಯಿಯಿದ್ದರೆ ಇಟ್ಟಿಗೆ ಹಾಗೂ ಚಪ್ಪಡಿ ಕಲ್ಲುಗಳನ್ನು ಬಳಸಿ ಮಾಡಿಕೊಡುತ್ತೇನೆ. ವಾಸ್ತುಶಿಲ್ಪವೇ ಹಾಗೆ.. ಇಲ್ಲಿ ಕೆಲಸ ಮಾಡುವುದು ಕ್ರಿಯಾತ್ಮಕತೆಯಷ್ಟೆ.

ಯಾವ ವೃತ್ತಿಯವರು ಹೆಚ್ಚಾಗಿ ಗ್ರಂಥಾಲಯಗಳ ಮೊರೆಹೋಗುತ್ತಿದ್ದಾರೆ

ಇಂಥದ್ದೇ ವೃತ್ತಿ ಎಂದಿಲ್ಲ. ಪ್ರಾಧ್ಯಾಪಕರು, ಸಾಹಿತಿಗಳು ಸ್ವಲ್ಪ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆಯಾದರೂ ಎಂಜಿನಿಯರ್‌ಗಳು ಸೇರಿದಂತೆ ಭೀನ್ನ ವೃತ್ತಿಯವರು  ನನ್ನ ಬಳಿ ಬರುವ ಅನೇಕ ಬೇರೆ ವೃತ್ತಿಯವರಾದರೂ ಪುಸ್ತಕಗಳನ್ನು ಪ್ರೀತಿಸುವವರಾಗಿದ್ದಾರೆ. ಆಸಕ್ತಿಕರ ವಿಷಯವೆಂದರೆ, ಯುವಕರಲ್ಲಿ ಹೆಚ್ಚಾಗಿ ಪುಸ್ತಕ ಪ್ರೀತಿಯನ್ನು ಕಾಣುತ್ತಿದ್ದೇನೆ.

ಕೆಲವು ಪೋಷಕರು ತಮ್ಮ ಮಕ್ಕಳಿಗಾಗಿ ಗ್ರಂಥಾಲಯಗಳನ್ನು ನಿರ್ಮಿಸುವಾಗ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪುಸ್ತಕಗಳತ್ತ ಅವರು ಆಕರ್ಷಿತರಾಗಲು ಪೂರಕವಾದ ವಾತಾವರಣ ಸೃಷ್ಟಿ ಮಾಡಲು ಪ್ರಯತ್ನಿಸುತ್ತೇವೆ.

ಕಲಾತ್ಮಕತೆಯ ಸ್ಪರ್ಶ

‘ಗ್ರಂಥಾಲಯ ಎಂದಾಕ್ಷಣ ಕೇವಲ ಪುಸ್ತಕಗಳನ್ನು ತುಂಬುವುದಷ್ಟೇ ಅಲ್ಲ. ಆ ಜಾಗದಲ್ಲಿ ಗೋಡೆಗಳಿಗೆ ಯಾವ ಬಣ್ಣದ ಪೇಂಟ್‌ ಮಾಡಿಸಬೇಕು ಎಂಬ ಸಣ್ಣ ಸಣ್ಣ ಅಂಶದ ಮೇಲೆಯೂ ಗಮನ ಹರಿಸಬೇಕಾಗುತ್ತದೆ. ಇದೊಂದು ಪ್ರಶಾಂತ ಸ್ಥಳವಾಗಿರಬೇಕು. ಗ್ರಂಥಾಲಯಗಳಿಗೆ ಕಾಲಿಟ್ಟೊಡನೆ ಶಾಂತ ಭಾವ ಕೈಬೀಸಿ ಕರೆದು ಓದುವ ಆಸಕ್ತಿ ಮೂಡಿಸುವಂತಿರಬೇಕು. ಹಾಗಾಗಿ ಅಲ್ಲಲ್ಲಿ ಗ್ರಂಥಾಲಯಗಳಿಗೆ ಕಲಾಸ್ಪರ್ಶ ನೀಡಿದರೆ ಮತ್ತೂ ಆಕರ್ಷಕವಾಗಿರುತ್ತದೆ’ ಎನ್ನುತ್ತಾರೆ ವಾಸ್ತುಶಿಲ್ಪಿ ಚೇತನ್‌.

ಜಾಗ ಕಡಿಮೆ ಇತ್ತು

‘ನನಗೆ ಮೊದಲಿನಿಂದಲೂ ಪುಸ್ತಕಗಳೆಂದರೆ ನನಗೆ ತುಂಬಾ ಇಷ್ಟ.  ಇಂಥದ್ದೇ ಎನ್ನುವ ಮಿತಿ ಇಲ್ಲದೆ  ಪುರಾಣಗಳಿಗೆ ಸಂಬಂಧಿಸಿದ ಪುಸ್ತಕಗಳು, ಕಾದಂಬರಿಗಳು, ಕಾನೂನು ಸಂಬಂಧಿತ ಪುಸ್ತಕಗಳು, ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ಗೆ ಸಂಬಂಧಪಟ್ಟ ಪುಸ್ತಕಗಳು ಸೇರಿದಂತೆ ಸುಮಾರು ಮೂರುಸಾವಿರದಷ್ಟು ಪುಸ್ತಕಗಳ ಸಂಗ್ರಹವಿತ್ತು. 35/15 ರಷ್ಟು ಜಾಗದಲ್ಲಿ ಮನೆ ನಿರ್ಮಾಣವೇ ಕಷ್ಟ ಅದರಲ್ಲಿ ನನ್ನ ಪುಸ್ತಕಗಳಿಗೆ ಹೇಗೆ ಜಾಗ ಒದಗಿಸಬಹುದು ಎಂಬ ಆಲೋಚನೆಯಲ್ಲಿದ್ದಾಗ ಆರ್ಟಿಟೆಕ್ಟ್ ಚೇತನ್‌ ನನ್ನ ಎಲ್ಲ ಪುಸ್ತಕಗಳಿಗೂ ಅದ್ಭುತವಾದ ಜಾಗ ಒದಗಿಸಿಕೊಟ್ಟರು. ಎರಡನೇ ಮಹಡಿಯ ಅಟ್ಟದಲ್ಲಿ ಮೂವೆಬಲ್‌ ಶೆಲ್ಫ್‌ಗಳನ್ನು ಮಾಡಿಕೊಟ್ಟು  ಪುಸ್ತಕಗಳ ಜೋಡಣೆಗೆ ಅವಕಾಶ ಮಾಡಿಕೊಟ್ಟರು’ ಎನ್ನುತ್ತಾರೆ 41 ವರ್ಷದ ಉದ್ಯಮಿ ಅಚ್ಯುತ.

ಪುಸ್ತಕಗಳ ಜೋಡಣೆ ಹೀಗಿದ್ದರೆ ಚೆಂದ

ಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಿದ್ದರೂ ಕೆಲವೊಮ್ಮೆ ನಮಗೆ ಬೇಕಾದ ಪುಸ್ತಕಗಳು ತಕ್ಷಣ ಸಿಗುವುದಿಲ್ಲ. ಹಾಗಾಗಿ ಪುಸ್ತಕಗಳನ್ನು ವಿಂಗಡಿಸಿಕೊಂಡು ಪತ್ಯೇಕವಾಗಿ ಜೋಡಿಸಿಕೊಳ್ಳಬಹುದು. ಅತೀ ಅವಶ್ಯವಿರುವ ಪುಸ್ತಕಗಳು, ಓದಿರುವ ಹಾಗೂ ಓದಬೇಕಾದ ಪುಸ್ತಕಗಳು, ವೃತ್ತಿಗೆ ಸಂಬಂಧಿಸಿದ ಪುಸ್ತಕಗಳು ಹೀಗೆ  ಪುಸ್ತಕಗಳನ್ನು ವಿಂಗಡಿಸಿ ಜೋಡಿಸಿಕೊಳ್ಳುವುದರಿಂದ ನಮಗೆ ಬೇಕಾದ ಪುಸ್ತಕಗಳು ಬೇಗನೇ ಕೈಗೆ ಸಿಗುತ್ತದೆ. ಪುಸ್ತಕಗಳ ಗಾತ್ರಕ್ಕೆ ತಕ್ಕಂತೆ ಜೋಡಿಸಿದರೆ ರ್‍ಯಾಕ್‌ಗಳ ಅಂದ ಹೆಚ್ಚುತ್ತದೆ. ವರ್ಣಾಕ್ಷರದ ಅನುಕ್ರಮವಾಗಿ ಕೂಡ ಜೋಡಿಸಿಕೊಂಡರೂ ಅನುಕೂಲವಾಗುತ್ತದೆ.

ಮೂಲ :ಪ್ರಜಾವಾಣಿ

ಕೊನೆಯ ಮಾರ್ಪಾಟು : 5/29/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate