অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇಂದು ನಮ್ಮ ಮಕ್ಕಳಿಗೆ ಅಗತ್ಯವಿರುವ ಸಾಹಿತ್ಯ

ಇಂದು ನಮ್ಮ ಮಕ್ಕಳಿಗೆ ಅಗತ್ಯವಿರುವ ಸಾಹಿತ್ಯ

’ಬೆಳೆಯುವ ಪೈರು ಮೊಳಕೆಯಲ್ಲಿಯೇ’, ’ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ’ ಎಂಬಂತೆ ಮಕ್ಕಳಿಗೆ ಎಳೆವಯಸ್ಸಿನಿಂದಲೇ ಅಂದರೆ ಅವರು ಪ್ರಪಂಚವನ್ನು ಗುರುತಿಸುವಂತಾಗುತ್ತಿದ್ದಂತೆಯೆ ಪ್ರಸ್ತುತ ವಾತಾವಣಕ್ಕೆ ಅನುಗುಣವಾದ ವ್ಯಕ್ತಿತ್ವವು ರೂಪಗೊಳ್ಳಲು ಸಹಕಾರಿಯಾಗುವಂತೆ ಮಾಡುವುದು ಅಗತ್ಯ. ವೇಗವಾಗಿ ಚಲನಶೀಲವಾದ ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳು ಮಕ್ಕಳ ಮೇಲೆ ಅಪಾರ ಪ್ರಭಾವ ಬೀರಿ ವ್ಯಕ್ತಿತ್ವ ರೂಪಿಸುವಲ್ಲಿ ಎರಡು ಮಾತಿಲ್ಲ. ಅದು ಮತ್ತೊಬ್ಬರಿಗೆ ಮಾಧರಿಯಾದ ವ್ಯಕ್ತಿತ್ವವಾಗಿರಬಹುದು, ಇಲ್ಲವೇ ಸಮಾಜಕ್ಕೆ ತೊಂದರೆಯನ್ನೊಡ್ಡುವ ವ್ಯಕ್ತಿತ್ವವಾಗಿರಬಹುದು.

ಈ ಶರವೇಗದ ಪ್ರಪಂಚಕ್ಕೆ ಶರವೇಗದಲ್ಲಿ ಕಾರ್ಯಪ್ರವೃತ್ತವಾಗುವವರಿದ್ದಾಗ ಮಾತ್ರ ಪ್ರಗತಿಯ ಪಥವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಬರುವ ಎಲ್ಲಾ ಸವಾಲುಗಳನ್ನು ಎದುರಿಸಿಕೊಂಡು ಹೋಗುವಂತಾಗುತ್ತದೆ. ಹೀಗಾಗಿಯೇ ಬೆಳೆಯುವ ಮಕ್ಕಳಿಗೆ ಆಧುನಿಕ ಮುಂದುವರಿದ ಜಗತ್ತಿಗೆ ಆಧರಿಸಿದ ವಾತಾವರಣ ರೂಪಿಸುವುದು ಸರ್ಕಾರ, ಸಮಾಜ ಮತ್ತು ಕುಟುಂಬದವರಿಂದ ಹಿಡಿದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಇದಕ್ಕೆ ಸಾಹಿತ್ಯ ಕ್ಷೇತ್ರವು ಹೊರತಾಗಿಲ್ಲ. ಅದರಲ್ಲೂ ಸಾಹಿತ್ಯದ ಬಹು ಆಕರ್ಷಣೀಯ, ರಮಣೀಯ, ಮನೋರಂಜನಾತ್ಮಕ, ಜ್ಞಾನಾತ್ಮಕ ಕ್ಷೇತ್ರ ಮಕ್ಕಳ ಸಾಹಿತ್ಯ. ಈ ಹೀನ್ನೆಲೆಯಲ್ಲಿ ಮಕ್ಕಳಿಗಾಗಿ ಎಂತಹ ಸಾಹಿತ್ಯ ರಚನೆಯಾಗಬೇಕು ಎಂಬ ಪ್ರಶ್ನೆಯು ಎದುರಾಗುವುದು ಸಹಜ.

ಪರಂಪರಾಗತವಾಗಿ ಕೇಳಿಬರುತ್ತಿದ್ದ, ಅಜ್ಜಿಕಥೆಗಳು ಇಂದಿನ ಆಧುನಿಕ ಒತ್ತದಯುಕ್ತ ಜೀವನದಲ್ಲಿ ಮರೆಯಾಗುತ್ತಿದೆ. ಪಂಡಿತವರ್ಗದಿಂದ ವಿರಚಿತ ರಾಜ-ರಾಣಿ ಕಥೆಗಳು, ಪರಾಕು ಹೇಳಿ ರಾಜನಿಂದ ಮೆಚ್ಚುಗೆ ಪಡೆಯಲು ಬರೆದ ಕಥೆಗಳು, ಪ್ರಾಣಿ-ಪಕ್ಷಿಗಳನ್ನು ಆಧರಿಸಿ ವಿರಚಿತ ಕಥೆಗಳು, ಯಾಕ್ಷ-ಯಕ್ಷಿಣಿ-ಗಂದರ್ವರ ಕಥೆಗಳು ಬಹಳಷ್ಟು ರಚಿತಗೊಂಡಿದ್ದು ಮತ್ತೆ ಮತ್ತೆ ಅದನ್ನೆ ಕೇಳಿ ಕೇಳಿ ಮಕ್ಕಳಿಗೆ ಅವು ಹಳಸಿ ಮೂಲೆಗುಂಪು ಸೇರಿರುವುದನ್ನು ಕಾಣಬಹುದು. ಅಲ್ಲದೆ ಇಂದಿನ ಆಧುನಿಕ ಯುಗಕ್ಕೆ ಅವು ಹೊಂದಿಕೊಳ್ಳುವಲ್ಲಿ ತೊಂದರೆಯನ್ನು ಅನುಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಆದುದರಿಂದ ಇಂದಿನ ಸೃಜನಾತ್ಮಕ, ಕ್ರಿಯಾಶೀಲ ಮಕ್ಕಳ ಮನಸ್ಸಿಗೆ ಸ್ಪಂಧಿಸುವ ಹೊಚ್ಚ ಹೊಸ ವಿಷಯಗಳು, ವರ್ಣ-ವರ್ಗ ವೈಶಮ್ಯಗಳ ವಿರುದ್ಧ ಹೋರಾಡುವ ವಸ್ತುವುಳ್ಳ ವಿಷಯಗಳು, ತಾಂತ್ರಿಕ, ವೈಜ್ಞಾನಿಕ ಆವಿಷ್ಕಾರಗಳ ವಿಷಯಗಳು, ಮೌಲ್ಯಗಳನ್ನು ಜಾಗೃತಗೊಳಿಸುವ ಆಶಯಗಳು ಮೊದಲಾದವುಗಳನ್ನು ಇಂದಿನ ಮಕ್ಕಳ ಸಾಹಿತ್ಯ ರಚನೆಯಲ್ಲಿ ಆದ್ಯತೆ ನೀಡುವುದು ಅತ್ಯಗತ್ಯ ಅನಿವಾರ್ಯ. ಈ ದಿಸೆಯಲ್ಲಿ ಪಠ್ಯಪುಸ್ತಕಗಳ ಪಾತ್ರ ಹಿರಿದಾದುದಾಗಿದ್ದು, ಇದಕ್ಕೆ ಸೂಕ್ತ ವಾತಾವರಣವನ್ನು ಅವಕಾಶಗಳನ್ನು ಒದಗಿಸುವ ಸಾಮರ್ಥ್ಯ ಸರ್ಕಾರಕ್ಕಿದ್ದು, ಸರ್ಕಾರವು ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆಸುವಂತಾಗಬೇಕು.

ಕೊನೆಯ ಮಾರ್ಪಾಟು : 3/31/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate