অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ

ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ

ಹಿನ್ನೆಲೆ

ಕೇಂದ್ರ ಸರ್ಕಾರದಿಂದ ಪ್ರಾಯೋಜಿತ ಯೋಜನೆಯಾದ “ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಡಿಸೆಂಬರ್ 2004 ರಂದು ಚಾಲನೆಯಾಗಿರುತ್ತದೆ. ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಕೌಶಲ್ಯಗಳನ್ನು ಪಡೆಯುವ ಅವಕಾಶಗಳನ್ನು ನೀಡುವುದು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ನೆರವಿನಿಂದ ಕಲಿಕೆಯ ಪ್ರಕ್ರಿಯೆಯನ್ನು ಸಾದರಪಡಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯು ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ತಡೆಗಳಿಂದಾದ ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸವನ್ನು ಹೋಗಲಾಡಿಸುವಲ್ಲಿ ಇದು ಪ್ರಮುಖ ವೇಗವರ್ಧಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಸ್ಥಿರತೆ ಆಧಾರದ ಮೇರೆಗೆ ಗಣಕಯಂತ್ರ ಪ್ರಯೋಗಾಲಯ (ಕಂಪ್ಯೂಟರ್ ಲ್ಯಾಬ್) ಸ್ಥಾಪಿಸಲು ಈ ಯೋಜನೆ ನೆರವು ನೀಡುತ್ತದೆ.  ಕೇಂದ್ರೀಯ ವಿದ್ಯಾಲಯಗಳಲ್ಲಿ ಮತ್ತು ನವೋದಯ ವಿದ್ಯಾಲಯಗಳಲ್ಲಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯಾಗಿ ಕಾರ್ಯನಿರ್ವಹಿಸಲು ಸ್ಮಾರ್ಟ್(SMART)ಶಾಲೆಗಳ ಸ್ಥಾಪಿಸುವ ಗುರಿ ಇರಿಸಿಕೊಂಡಿದೆ ಮತ್ತು ಇದರಿಂದ ನೆರೆಹೊರೆಯ ಶಾಲೆಗಳ ವಿದ್ಯಾರ್ಥಿಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪ್ರಚುರಪಡಿಸುವ ಉದ್ದೇಶವೂ ಇದರದ್ದಾಗಿದೆ.

ಈ ಯೋಜನೆಯು ಪ್ರಸ್ತುತ ಸರ್ಕಾರಿ ಮತ್ತು ಸರ್ಕಾರದ ನೆರವು ಪಡೆಯುತ್ತಿರುವ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅನುಷ್ಠಾನವಾಗುತ್ತಿದೆ. ಗಣಕಯಂತ್ರ, ಇತರ ಸಾಮಗ್ರಿಗಳ ಮತ್ತು ಶೈಕ್ಷಣಿಕ ಸಾಪ್ಟ್ ವೇರ್ ಖರೀದಿ, ಶಿಕ್ಷಕರಿಗೆ ತರಬೇತಿ ಮತ್ತು ಅಂತರ್ಜಾಲದ ಜೋಡಣೆ, ಇತ್ಯಾದಿಗಳಿಗಾಗಿ ಈ ಯೋಜನೆಯಿಂದ ನೆರವು ನೀಡಲಾಗುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ಯೋಜನೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಗುಂಪಿನ (PM&EG)  ಶಿಫಾರಸ್ಸಿನ ಮೇರೆಗೆ ರಾಜ್ಯಕ್ಕೆ ಮತ್ತು ಇತರೆ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಲಾಗುವುದು.

ಪೀಠಿಕೆ

ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ICT) ಸಾಮಾಜಿಕ ಪರಿವರ್ತನೆಯ ಮತ್ತು ರಾಷ್ಟ್ರೀಯ ಮುನ್ನಡೆಯ ಪ್ರಮುಖ ವೇಗವರ್ಧಕವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತಿದೆ. ಆದಾಗ್ಯೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ICT) ಸಿದ್ಧತೆಯ ಹಂತಗಳಲ್ಲಿನ ಅಸಮಾನತೆಗಳು ಮತ್ತು    ಬಳಕೆಯಲ್ಲಿನ ಅಸಮಾನತೆಯನ್ನು ಪರಿವರ್ತಿಸಿಕೊಂಡು, ದೇಶದ ಆರ್ಥಿಕ ಬೆಳವಣಿಗೆಯ ಮಟ್ಟದ ಮೇಲೆ ಪರಿಣಾಮ ಬೀರಬಹುದಾಗಿದೆ.

ಆದುದರಿಂದ ನಿರಂತರ ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಗಾಗಿ ಸೆಣಸುತ್ತಿರುವ ದೇಶಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಅರಿವು ಮತ್ತು ಬಳಕೆ ಅತಿ ನಿರ್ಣಾಯಕವಾಗಿರುತ್ತದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಬಳಕೆಯಲ್ಲಿ ಭಾರತವು ಭೌಗೋಳಿಕವಾಗಿ ಮತ್ತು  ಜನಸಂಖ್ಯೆಯಲ್ಲಿ ಅಪಾರ ವ್ಯತ್ಯಾಸವನ್ನು ತೋರುತ್ತದೆ. ವಿಶ್ವದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದಲ್ಲಿ ಭಾರಿ ಕಾರ್ಯಪಡೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ತಂತ್ರಜ್ಞಾನದ  ಗುಚ್ಛಗಳಾದ (ಕ್ಲಸ್ಟರು) ಬೆಂಗಳೂರು ಮತ್ತು ಗುಡಗಾಂ ಅಥವ  ಹೆಚ್ಚು ಆದಾಯದ ಮೇಲಿನ ಹಂತದ ಮಧ್ಯವರ್ತಿಗಳಲ್ಲಿ ಅತಿ ಹೆಚ್ಚಿನ ಬಳಕೆಯನ್ನು ಕಾಣಬಹುದಾಗಿದೆ. ಇನ್ನೊಂದು ಆರೋಪವೆಂದರೆ ದೇಶದ ಅತಿ ಹೆಚ್ಚಿನ ಭಾಗಗಳಲ್ಲಿ ಟೆಲಿಫೋನ್ ಸಂಪರ್ಕ ಕೂಡ ಇರುವುದಿಲ್ಲ.

ಐ.ಟಿ. ಕಾರ್ಯಪಡೆ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಮತ್ತು ಸಾಪ್ಟ್ ವೇರ್ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಪಡೆ (ಐ.ಟಿ. ಕಾರ್ಯಪಡೆ)

ಪ್ರಧಾನ ಮಂತ್ರಿಗಳಿಂದ ಜುಲೈ 1998 ರಲ್ಲಿ ನಿಯೋಜಿಸ್ಪಟ್ಟ ಶಾಲೆಗಳೂ ಸೇರಿದಂತೆ ಶಿಕ್ಷಣ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಸೇರ್ಪಡೆ ಕುರಿತು ಕೆಲ ನಿರ್ಧಿಷ್ಟ ಶಿಫಾರಸ್ಸುಗಳನ್ನು ಮಾಡಿರುತ್ತದೆ. ಮುಖ್ಯ ಪರಿಚ್ಛೆದಗಳನ್ನು ಈ ಕೆಳಗೆ ನಮೂದಿಸಲಾಗಿದೆ:

ಗಣಕಯಂತ್ರಗಳನ್ನು ಖರೀದಿಸುವ ಇಚ್ಛೆ ಇರುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಥವ ಶಾಲೆಗಳಿಗೆ ಅನುಕ್ರಮವಾಗಿ ವಿದ್ಯಾರ್ಥಿ ಗಣಕಯಂತ್ರ ಯೋಜನೆ, ಶಿಕ್ಷಕ ಗಣಕಯಂತ್ರ ಯೋಜನೆ ಮತ್ತು ಶಾಲಾ ಗಣಕಯಂತ್ರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಆಕರ್ಷಕ ಹಣಕಾಸಿನ ನೆರವಿನೊಡನೆ ಇವುಗಳನ್ನು ಖರೀದಿಸಬಹುದಾಗಿದೆ. ಈ ಯೋಜನೆಗಳನ್ನು ಕೆಲವೊಂದು ತೊಡಗುವಿಕೆಗಳಿಂದ ಬೆಂಬಲಿಸಲಾಗಿದ್ದು, ಗಣಕಯಂತ್ರಗಳ ಬೆಲೆಯಲ್ಲಿ ಕಡಿತ, ಬ್ಯಾಂಕಿನಿಂದ ಸುಲಭ ಕಂತಿನ ಸಾಲ, ಮಾಹಿತಿ ತಂತ್ರಜ್ಞಾನ ಕಂಪನಿಗಳಿಂದ ಮತ್ತು ಇತರೆ ವಾಣಿಜ್ಯ ಗೃಹಗಳಿಂದ ಗಣಕಯಂತ್ರಗಳ ದಾನ, ಅನಿವಾಸಿ ಭಾರತೀಯ ಸಂಸ್ಥೆಗಳಿಂದ ಗಣಕಯಂತ್ರಗಳ ಬೃಹತ್ ಪ್ರಮಾಣದ ದಾನ, ದೊಡ್ಡ ಪ್ರಮಾಣದಲ್ಲಿ ಆಮದು ಮಾಡಲು ದರದಲ್ಲಿ ಸೋಡಿ, ಬಹುಮುಖಿ ಹಣಕಾಸಿನ ನೆರವು, ಇತ್ಯಾದಿಗಳನ್ನು ಪರಿಚಯಿಸಲಾಗಿದೆ.

ಗಣಕಯಂತ್ರಗಳ ಮತ್ತು ಅಂತರ್ಜಾಲದ ಲಭ್ಯತೆಯ ವ್ಯವಸ್ಥೆಯನ್ನು ಶಾಲೆಗಳಲ್ಲಿ, ಪಾಲಿಟೆಕ್ನಿಕ್ ಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ 2003 ರ ಒಳಗೆ ಮಾಡಲಾಗುವುದು.

ಸ್ಮಾರ್ಟ್ ಶಾಲೆಗಳ ಪರಿಕಲ್ಪನೆಯು ಕೇವಲ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಪ್ರಚೋದಿಸದೆ, ಮುಂದಿನ ಸಹಸ್ರಮಾನದಲ್ಲಿ ಬಹು ಮುಖ್ಯವಾಗಿರುವ ಕೌಶಲ್ಯಗಳ ಮತ್ತು ಮೌಲ್ಯಗಳ ಬಳಕೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಇದನ್ನು ಪ್ರತಿ ರಾಜ್ಯದಲ್ಲಿ ಪ್ರಾಯೋಗಿಕ ಆಧಾರದಮೇರೆಗೆ ಆರಂಭಿಸಲಾಗುವುದು. ಇದರ ಉದ್ದೇಶಗಳು ಹೀಗಿವೆ:

ಉದ್ದೇಶಗಳು

ಗ್ರಾಮೀಣ ಪ್ರದೇಶಗಳ ಮುಖ್ಯವಾಗಿ ಪ್ರೌಢ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಬಳಕೆಯನ್ನು ಉತ್ತೇಜಿಸಲು ಸೂಕ್ತ ವಾತಾವರಣವನ್ನು ನಿರ್ಮಿಸಲಾಗುವುದು. ಇಂತಹ ವಾತಾವರಣದ ಮುಖ್ಯಾಂಶಗಳೆಂದರೆ ಉಪಯೋಗಿಸುವ ಸಲಕರಣೆಗಳ ಲಭ್ಯತೆ, ಅಂತರ್ಜಾಲದ ಸಂಪರ್ಕ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಸಾಕ್ಷರತೆಯ ಪ್ರಚೋದನೆ.

ಆನ್ ಲೈನ್  ಮತ್ತು ಉಪಯೋಗಿಸುವ ಸಲಕರಣೆಗಳ ಮುಖೇನ ಗುಣಮಟ್ಟದ ಪರಿವಿಡಿಯ ಲಭ್ಯತೆಯನ್ನು ಖಾಸಗಿ ಕ್ಷೇತ್ರ ಮತ್ತು ಎಸ್.ಐ.ಈ.ಟಿಗಳಿಂದ ಖಾತ್ರಿಪಡಿಸುವುದು.

ಬೋಧನೆ ಮತ್ತು ಕಲಿಕೆಗಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉಪಕರಣಗಳ ಬಳಕೆಯಿಂದ ಪ್ರಸ್ತುತ ವಿರುವ ಪಠ್ಯಕ್ರಮ ಮತ್ತು (ಶಿಕ್ಷಣಶಾಸ್ತ್ರ )ಪೆಡಗಾಗಿಯನ್ನು ಪುಷ್ಠಿಕರಿಸಲಾಗುವುದು.

ಉನ್ನತ ಶಿಕ್ಷಣ ಮತ್ತು ಉಪಯುಕ್ತ ಉದ್ಯೋಗಕ್ಕಾಗಿ ಬೇಕಿರುವ (ಡಿಜಿಟಲ್ ಲೋಕದ)ಅಂಕೀಯ ಕೌಶಲ್ಯಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುವುದು.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉಪಕರಣಗಳ ಬಳಕೆಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪರಿಣಾಮಕಾರಿ ಮತ್ತು ಸೂಕ್ತ ಕಲಿಕಾ ವಾತಾವರಣವನ್ನು ನೀಡಲು.

ಸ್ವ-ಕಲಿಕೆಯನ್ನು ಅಭಿವೃದ್ಧಿಪಡಿಸಿ ವಿಮರ್ಶಾತ್ಮಕ ಯೋಚನೆಯನ್ನು ಮತ್ತು ವಿಶ್ಲೇಷ*ಣೆಯ ಕೌಶಲ್ಯವನ್ನು ಪ್ರಚೋದಿಸುವುದು. ಇದು ಶಾಲಾ ಕೊಠಡಿಯ ವಾತಾವರಣವನ್ನು ಶಿಕ್ಷಕ ಕೇಂದ್ರಿತದಿಂದ ವಿದ್ಯಾರ್ಥಿಕೇಂದ್ರಿತವಾಗಿ ಪರಿವರ್ತನೆ ಮಾಡುತ್ತದೆ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉಪಕರಣಗಳು ಬಳಕೆಯನ್ನು ದೂರ ಶಿಕ್ಷಣ ಸೇರಿದಂತೆ ದೃಕ್ ಶ್ರವಣ ಮಾಧ್ಯಮದ ಮತ್ತು ಉಪಗ್ರಹ ಆಧಾರಿತ ಸಲಕರಣೆಗಳ ಉಪಯೋಗವನ್ನು ಪ್ರಚೋದಿಸುತ್ತದೆ.

ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate