ಯಾವುದಾದರೊಂದು ಭಾಷೆಯಲ್ಲಿ ನಾವು ದಾಸ್ತಾವೇಜುಗಳನ್ನು ಮಾಡುವಾಗ ನಮಗೆ ಬೇಕು
- word processing ತಂತ್ರಾಂಶ
- ಕನ್ನಡ ಟೈಪ್ ಮಾಡಲು ಬೇಕಾಗುವ ತಂತ್ರಾಂಶ
- ಫಾಂಟ್ ಗಳು
ಉಬುಂಟುವಿನಲ್ಲಿ ಕನ್ನಡ ಓದುವುದು, ಬರೆಯುವುದು ಬಹಳ ಸುಲಭ. ಇತ್ತೀಚಿನ ಉಬುಂಟು ಆವೃತ್ತಿಗಳಲ್ಲಿ ಕನ್ನಡವನ್ನು ಯಾವುದೇ ಕಷ್ಟವಿಲ್ಲದೇ ಓದಬಹುದು. ಅದಕ್ಕೆ ಬೇಕಿರುವ ಕೆಲವು ಫಾಂಟ್ ಗಳು ಉಬುಂಟುವಿನ ಜೊತೆಯಲ್ಲಿಯೇ ಸ್ಥಾಪಿತವಾಗಿರುತ್ತವೆ.
ಕನ್ನಡದಲ್ಲಿ ಟೈಪಿಸಲು ಐ-ಬಸ್ (ibus) ಎಂಬ ತಂತ್ರಾಂಶ ಲಭ್ಯವಿದ್ದು ಬಹಳ ಸಕ್ಷಮವಾಗಿ ಕೆಲಸ ಮಾಡುತ್ತಿದೆ. ಇದನ್ನು ನಿಮ್ಮ ಉಬುಂಟುವಿನಲ್ಲಿ ಸ್ಥಾಪಿಸಿಕೊಳ್ಳುವುದು ಸುಲಭ ಸಾಧ್ಯ. ಕೆಳಗೆ ಕೊಟ್ಟಿರುವ ಸಲಹೆಗಳನ್ನು ಅಂತೆಯೇ ಬಳಸಿ.
IBUS ಅನ್ನು ಆಯ್ದು ಕೊಳ್ಳುವುದು
ಭಾಷೆಯ ಆಯ್ಕೆ ಇತ್ಯಾದಿಗಳಿಗೆ ಸಹಕರಿಸುವ ತಂತ್ರಾಂಶವನ್ನು ಈ ಮೆನುವಿನಿಂದ ಪಡೆಯಬಹುದು Application → System Tools → System Settings → Language Support
ಅದು ಈ ಕೆಳಕಂಡಂತೆ ಕಾಣುತ್ತದೆ.
- ಇಲ್ಲಿ Install / Remove Languages ಕ್ಲಿಕ್ ಮಾಡಿ, ಮುಂದಿನ ವಿಂಡೋದಲ್ಲಿ ಕನ್ನಡ ಆಯ್ಕೆ ಮಾಡಿ, ಅಪ್ಲೈ ಕ್ಲಿಕ್ ಮಾಡಿ.
- ನಂತರ, ಮೊದಲನೆ ವಿಂಡೋದಲ್ಲಿ “Keyboard Input Method System” ನಲ್ಲಿ “ibus” ಆಯ್ಕೆ ಮಾಡಿಕೊಂಡು, ವಿಂಡೋವನ್ನು ಮುಚ್ಚಿ.
IBUS ಅನ್ನು ಕ್ರಿಯಾಶೀಲಗೊಳಿಸುವುದು:
ನೀವು ಲಾಗಿನ್ ಆದಾಗ IBUS ಸ್ವಯಂ ಆಗಿ ಪ್ರಾರಂಭವಾಗುವುದಿಲ್ಲ ,ಹಾಗಾಗಬೇಕಾದರೆ ಅದನ್ನು startup applications list ನಲ್ಲಿ ಸೇರಿಸಬೇಕು.
- ಡೆಸ್ಕ್ ಟಾಪ್ ಮೇಲಿರುವ Applications → System Tools → Preferences → Startup Applications ಮೇಲೆ ಕ್ಲಿಕ್ ಮಾಡಿ.
- "Add" ಬಟನ್ ಮೇಲೆ ಕ್ಲಿಕ್ ಮಾಡಿ.
- "ibus-daemon" ಎಂದು ಕಮಾಂಡ್ ಟೈಪ್ ಮಾಡಿ.
- "Add" ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಭಾಷೆಯನ್ನು ಸೆಟ್ ಮಾಡುವುದು:
- ಡೆಸ್ಕ್ ಟಾಪ್ ಮೇಲಿರುವ Application → System Tools → Preferences → Ibus Preferences ಮೇಲೆ ಕ್ಲಿಕ್ ಮಾಡಿ.
- 'Input Method' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಭಾಷೆಯನ್ನು drop down ಮೆನುವಿನಿಂದ ಆರಿಸಿ.
- "Add" ಬಟನ್ ಮೇಲೆ ಕ್ಲಿಕ್ ಮಾಡಿ.
- ಅದನ್ನು ಎಲ್ಲಕ್ಕಿಂತ ಮೇಲೆ ತನ್ನಿ.
- Close ಬಟನ್ ಮೇಲೆ ಕ್ಲಿಕ್ ಮಾಡಿ.
Word Processor ನಲ್ಲಿ ಮಾಡಬೇಕಾದಂತಹ ಸೆಟ್ಟಿಂಗ್ಸ್
- Application → Office → OpenOffice.org Word processor ಮೇಲೆ ಕ್ಲಿಕ್ ಮಾಡಿ
- Menu bar ಮೇಲಿರುವ Tools → Options ಮೇಲೆ ಕ್ಲಿಕ್ ಮಾಡಿ.
- Tools → Options ಪಟ್ಟಿ ಯಲ್ಲಿರುವ Language settings ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
- Languages ಆಯ್ಕೆ ಮಾಡಿ.
- Enabled for Complex Text Layout(CTL) ಬಾಕ್ಸ್ ಅನ್ನು ಕ್ರಿಯಾಶೀಲ (Enable)ಗೊಳಿಸಿ ಮತ್ತು
- Default languages for Documents ನ CTL ನಲ್ಲಿ Kannada ಆಯ್ಕೆ ಮಾಡಿ.
- OK ಮೇಲೆ ಕ್ಲಿಕ್ ಮಾಡಿ.
- ಪುನಃ Menu bar ಮೇಲಿರುವ Tools → Options ಮೇಲೆ ಕ್ಲಿಕ್ ಮಾಡಿ.
- Tools → Options ಪಟ್ಟಿ ಯಲ್ಲಿರುವ OpenOffice.org Writer ಮೇಲೆ ಎರಡು ಬಾರಿ ಕ್ಲಿಕ್ ಮಾಡಿ, Basic Fonts( CTL) ಅನ್ನು ಆಯ್ಕೆ ಮಾಡಿ .
- Basic Fonts( CTL) ಡೈಲಾಗ್ ಬಾಕ್ಸ್ ನಲ್ಲಿ Default, Heading, List, Caption, Index ಗಳ ಮುಂದಿನ ಬಾಕ್ಸ್ ಗಳಲ್ಲಿ Lohit Kannada ವನ್ನು ಆಯ್ಕೆ ಮಾಡಿ .
- OK ಮೇಲೆ ಕ್ಲಿಕ್ ಮಾಡಿ.
- ಗಣಕ ಯಂತ್ರವನ್ನು ಒಮ್ಮೆ Log off ಮಾಡಿ ಮತ್ತು login ಆಗಿ.
ಮೂಲ: ಕರ್ನಾಟಕ ಶಿಕ್ಷಣ
ಕೊನೆಯ ಮಾರ್ಪಾಟು : 6/21/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.