অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗಣಕಯಂತ್ರ

ಗಣಕಯಂತ್ರ

  1. ಹಾರ್ಡ್ ವೇರ್
  2. ಸಾಫ್ಟ್ ವೇರ್
  3. ಗಣಕಯಂತ್ರದಿಂದ ಏನು ಮಾಡಬಹುದು?
  4. ಡೆಸ್ಕ್ ಟಾಪ್ ಗಣಕಯಂತ್ರಗಳು
  5. ಲ್ಯಾಪ್ ಟಾಪ್ ಗಣಕಯಂತ್ರಗಳು
  6. ಸಾಫ್ಟ್ ವೇರನ ಅರ್ಥ
  7. ಸಿಸ್ಟಮ್ ಸಾಫ್ಟ್ ವೇರ್
  8. ಪ್ರೋಗ್ರಾಮಿಂಗ್  ಸಾಫ್ಟ್ ವೇರ್
  9. ಅಪ್ಲಿಕೇಷನ್ ಸಾಫ್ಟ್ ವೇರ್
  10. ಉಬಂಟು
  11. ಡೆಸ್ಕ್ ಟಾಪ್‌ನಲೇಔಟ್‌
  12. ಮುಖ್ಯವಾದ ಮೆನುಗಳು
  13. ಮೈಂಡ್  ಮ್ಯಾಪ್
  14. ಗಣಕಯಂತ್ರ ಕಾರ್ಯಾಗಾರದಲ್ಲಿನ  ಚಟುವಟಿಕೆ
  15. ಮೈಂಡ್ ಮ್ಯಾಪ್  ರಚಿಸುವುದು
  16. ಮೈಂಡ್ ಮ್ಯಾಪ್ನಲ್ಲಿ ಬರೆಯುವ ಕ್ರಮ
  17. ಫ್ರೀ ಮೈಂಡ್  ನ ಮೈಂಡ್  ಮ್ಯಾಪ್  ಅನ್ನು ಸೇವ್ ಮಾಡುವುದು
  18. ಫ್ರೀ ಮೈಂಡ್  ನಲ್ಲಿ ಮೈಂಡ್ ಮ್ಯಾಪ್ ಅನ್ನು  ತೆರೆಯುವುದು(Open)
  19. ಕಾರ್ಯಗಾರದ ನಂತರದ ಚಟುವಟಿಕೆಗಳು
  20. ಪೂರಕ ಸಂಪನ್ಮೂಲ
  21. ಸಿಸ್ಟಮ್
  22. ಅಳವಡಿಸುವುದು ಹೇಗೆ?
  23. ಡೆಡ್ ಕಂಪ್ಯೂಟರ್
  24. ಸಿಸ್ಟಮ್ ಗಮನಿಸಬೇಕಾದ ಅಂಶಗಳು
  25. ಸರ್ವರ್ ಅನ್ನು ಸಿದ್ಧಗೊಳಿಸುವುದು
  26. ಕ್ಲಯಂಟ್ಸ್ ಗಳನ್ನು ಸಿದ್ಧ ಪಡಿಸುವುದು
  27. ಅಂತರ್ಜಾಲದೊಂದಿಗೆ ಸಂಪರ್ಕ
  28. ಆರ್ಕಾ

ಗಣಕಯಂತ್ರಗಳು ನಿರ್ದಿಷ್ಟ, ಸೂಚನೆಗಳಂತೆ ಕೆಲಸ ಮಾಡುವ ಸಾಧನಗಳು. ಗಣಕಯಂತ್ರ ಇಲೆಕ್ಟ್ರಾನಿಕ್ ಸಾಧನವಾಗಿದ್ದು, ಸರಳವಾಗಿ ತಾರ್ಕಿಕ, ಗ್ರಾಫಿಕಲ್ ಹಾಗೂ ಲೆಕ್ಕ ಇತ್ಯಾದಿ ಚಟುವಟಿಕೆಗಳನ್ನು ಮಾಡುವುದಾಗಿದೆ. (computer is an electronic device that can perform activities that involve mathematical, logical and graphical manipulations).

ಗಣಕಯಂತ್ರಗಳು ಸಾಫ್ಟ್ ವೇರ್ (ತಂತ್ರಾಂಶ) ಮತ್ತು ಹಾರ್ಡ್ ವೇರ್ (ಯಂತ್ರಾಂಶ)ಗಳ ಪರಸ್ಪರ ಸಂವಹನದಿಂದ ಕಾರ್ಯ ನಿರ್ವಹಿಸುತ್ತವೆ.

ಹಾರ್ಡ್ ವೇರ್

ಹಾರ್ಡ್ ವೇರ್ ಎನ್ನುವುದು, ನಾವು ನೋಡಬಹುದಾದ ಮತ್ತು ಸ್ಪರ್ಶಿಸಬಹುದಾದ ಗಣಕಯಂತ್ರದ ಭಾಗಗಳನ್ನು ಒಳಗೊಂಡಿರುತ್ತದೆ. ಗಣಕಯಂತ್ರದಲ್ಲಿರುವ ಸಣ್ಣ ಆಯತಾಕಾರದ ಚಿಪ್ ಹಾರ್ಡ್ ವೇರ್‌ನ ಪ್ರಮುಖ ತುಣುಕು, ಇದನ್ನು ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ (CPU) ಅಥವಾ ಮೈಕ್ರೋ ಸಂಸ್ಕಾರಕ (microprocessor) ಎಂದು ಕರೆಯುತ್ತಾರೆ. ಇದು ಗಣಕಯಂತ್ರದ ಮೆದುಳಾಗಿದ್ದು , ಸೂಚನೆಗಳನ್ನು ಪರಿವರ್ತಿಸುವ ಮತ್ತು ಲೆಕ್ಕಾಚಾರಗಳನ್ನು ಮಾಡುವ ಭಾಗವಾಗಿದೆ. ಹಾರ್ಡ್ ವೇರ್ ಉಪಕರಣಗಳೆಂದರೆ, ಮಾನಿಟರ್, ಕೀಲಿ ಮಣೆ (Keyboard), ಮೌಸ್, ಪ್ರಿಂಟರ್ ಇತ್ಯಾ ದಿ.

ಸಾಫ್ಟ್ ವೇರ್

ಹಲವು  ಸೂಚನೆಗಳ ಅಥವಾ ಪ್ರೋಗ್ರಾಮ್ ಗಳ ಗುಂಪಿಗೆ  ಸಾಫ್ಟ್ ವೇರ್ ಎನ್ನುತ್ತಾರೆ. ಈ ಸೂಚನೆಗಳು ಹಾರ್ಡ್ ವೇರ್ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ನಿರ್ದೇಶಿಸುತ್ತವೆ.

ಗಣಕಯಂತ್ರದಲ್ಲಿ ಅಕ್ಷರಗಳನ್ನು ಟೈಪ್ ಮಾಡಲು ಬಳಸುವ ವರ್ಡ್ ಪ್ರೋಸೆಸಿಂಗ್ ಎಂಬುದು ಒಂದು ಸಾಫ್ಟ್ ವೇರ್. ಗಣಕಯಂತ್ರ ಮತ್ತು ಅದರ ಸಂಪರ್ಕದಲ್ಲಿರುವ ಸಾಧನಗಳನ್ನು ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಮ್ , ಒಂದು ಸಾಫ್ಟ್ ವೇರ್ ಆಗಿದೆ. ನಿಮ್ಮ ಗಣಕಯಂತ್ರವು  GNU/Linux ಎಂಬ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸಿಕೊಳ್ಳು ತ್ತದೆ.

ಹಾರ್ಡ್ ವೇರ್:ಹಾರ್ಡ್ ವೇರ್ ಎನ್ನುವುದು, ನಾವು ನೋಡಬಹುದಾದ ಮತ್ತು ಸ್ಪರ್ಶಿಸಬಹುದಾದ ಗಣಕಯಂತ್ರದ ಭಾಗಗಳನ್ನು ಒಳಗೊಂಡಿರುತ್ತದೆ. ಗಣಕಯಂತ್ರದಲ್ಲಿರುವ ಸಣ್ಣ ಆಯತಾಕಾರದ ಚಿಪ್ ಹಾರ್ಡ್ ವೇರ್‌ನ ಪ್ರಮುಖ ತುಣುಕು, ಇದನ್ನು ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ (CPU) ಅಥವಾ ಮೈಕ್ರೋ ಸಂಸ್ಕಾರಕ (microprocessor) ಎಂದು ಕರೆಯುತ್ತಾರೆ. ಇದು ಗಣಕಯಂತ್ರದ ಮೆದುಳಾಗಿದ್ದು , ಸೂಚನೆಗಳನ್ನು ಪರಿವರ್ತಿಸುವ ಮತ್ತು ಲೆಕ್ಕಾಚಾರಗಳನ್ನು ಮಾಡುವ ಭಾಗವಾಗಿದೆ. ಹಾರ್ಡ್ ವೇರ್ ಉಪಕರಣಗಳೆಂದರೆ, ಮಾನಿಟರ್, ಕೀಲಿ ಮಣೆ (Keyboard), ಮೌಸ್, ಪ್ರಿಂಟರ್ ಇತ್ಯಾ ದಿ.ಸಾಫ್ಟ್ ವೇರ್:ಹಲವು  ಸೂಚನೆಗಳ ಅಥವಾ ಪ್ರೋಗ್ರಾಮ್ ಗಳ ಗುಂಪಿಗೆ  ಸಾಫ್ಟ್ ವೇರ್ ಎನ್ನುತ್ತಾರೆ. ಈ ಸೂಚನೆಗಳು ಹಾರ್ಡ್ ವೇರ್ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ನಿರ್ದೇಶಿಸುತ್ತವೆ. ಗಣಕಯಂತ್ರದಲ್ಲಿ ಅಕ್ಷರಗಳನ್ನು ಟೈಪ್ ಮಾಡಲು ಬಳಸುವ ವರ್ಡ್ ಪ್ರೋಸೆಸಿಂಗ್ ಎಂಬುದು ಒಂದು ಸಾಫ್ಟ್ ವೇರ್. ಗಣಕಯಂತ್ರ ಮತ್ತು ಅದರ ಸಂಪರ್ಕದಲ್ಲಿರುವ ಸಾಧನಗಳನ್ನು ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಮ್ , ಒಂದು ಸಾಫ್ಟ್ ವೇರ್ ಆಗಿದೆ. ನಿಮ್ಮ ಗಣಕಯಂತ್ರವು  GNU/Linux ಎಂಬ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸಿಕೊಳ್ಳು ತ್ತದೆ.

ಗಣಕಯಂತ್ರದಿಂದ ಏನು ಮಾಡಬಹುದು?

ದತ್ತಾಂಶಗಳನ್ನು (Data) ಶೇಖರಿಸಲು, ದತ್ತಾಂಶಗಳನ್ನು ವಿಶ್ಲೇಷಿಸಲು, ಸಂಶೋಧನೆ ಮಾಡಲು ಮತ್ತು ಯೋಜನೆಗಳನ್ನು ನಿರ್ವಹಿಸಲು ಗಣಕಯಂತ್ರಗಳನ್ನು ಬಳಸುತ್ತಾರೆ. ಮನೆಗಳಲ್ಲಿ, ಮಾಹಿತಿಯನ್ನು ನೋಡಲು, ಚಿತ್ರಗಳು ಮತ್ತು ಸಂಗೀತಗಳನ್ನು ಶೇಖರಿಸಲು, ಹಣಕಾಸು ವ್ಯವಹಾರಕ್ಕಾಗಿ, ಆಟ ಆಡಲು ಮತ್ತು ಇತರರ ಜೊತೆ ಸಂಪರ್ಕದಲ್ಲಿರಲು ಗಣಕಯಂತ್ರಗಳನ್ನು ಬಳಸುತ್ತಾರೆ.

ಗಣಕಯಂತ್ರವನ್ನು , ವಿಶ್ವದಾದ್ಯಂತ ಹರಡಿರುವ ಜಾಲಗಳ ಜಾಲವಾದ ಇಂಟರ್ನೆಟ್‌ಗೆ ಸಂಪರ್ಕಿಸಬಹುದು. ಇಂಟರ್ನೆಟ್‌ನ ಸಹಾಯದಿಂದ, ವಿಶ್ವದಾದ್ಯಂತ ಇತರರನ್ನು ಸಂಪರ್ಕಿಸಬಹುದು ಮತ್ತು ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ಪಡೆದುಕೊಳ್ಳ ಬಹುದು.

ಗಣಕಯಂತ್ರಗಳ ವಿಧಗಳು

ಡೆಸ್ಕ್ ಟಾಪ್ ಗಣಕಯಂತ್ರಗಳು

ಮೇಜಿನ ಅಥವಾ ಟೇಬಲ್ ಮೇಲೆ ಕಾರ್ಯ ನಿರ್ವಹಿಸಲು ಡೆಸ್ಕ್ ಟಾಪ್ ಗಣಕಯಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳು ಸಾಮಾನ್ಯವಾಗಿ ಇತರೆ ವೈಯಕ್ತಿಕ ಗಣಕಯಂತ್ರಗಳಿಗಿಂತ ದೊಡ್ಡ ಮತ್ತು ಶಕ್ತಿಯುತವಾಗಿವೆ. ಡೆಸ್ಕ್ ಟಾಪ್ ಗಣಕಯಂತ್ರಗಳು  ಪ್ರತ್ಯೇಕ ಘಟಕಗಳಿಂದ ಮಾಡಲ್ಪಟ್ಟಿ ವೆ.

ಲ್ಯಾಪ್ ಟಾಪ್ ಗಣಕಯಂತ್ರಗಳು

ಲ್ಯಾಪ್ ಟಾಪ್ ಗಣಕಯಂತ್ರಗಳು ಹಗುರ ಮತ್ತು ತೆಳುವಾದ ಪರದೆಯನ್ನು ಹೊಂದಿರುವ ವೈಯಕ್ತಿಕ ಕಂಪ್ಯೂಟರ್‌ಗಳು. ಅವುಗಳು ಸಣ್ಣಗಾತ್ರಕ್ಕನುಸಾರವಾಗಿ, ಅವುಗಳನ್ನು ನೋಟ್‌ಬುಕ್ ಗಣಕಯಂತ್ರಗಳೆಂದೂ ಸಹ ಕರೆಯುತ್ತಾರೆ. ಲ್ಯಾಪ್ ಟಾಪ್ ಗಣಕಯಂತ್ರಗಳು ಬ್ಯಾಟರಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳನ್ನು ಬೇಕಾದಲ್ಲಿಗೆ ಕೊಂಡೊಯ್ಯಬಹುದು.

ಸಾಫ್ಟ್ ವೇರನ ಅರ್ಥ

ಸಾಫ್ಟ್ ವೇರ್ ಅಥವಾ ಗಣಕಯಂತ್ರ ಸಾಫ್ಟ್ ವೇರ್ ಎನ್ನುವುದು ಗಣಕಯಂತ್ರದ ಪ್ರೋಗ್ರಾಮ್‌ಗಳ ಸಂಗ್ರಹವಾಗಿದ್ದು , ಸಂಬಂಧಿತ  ದತ್ತಾಂಶಗಳನ್ನು ಒದಗಿಸಿ ಗಣಕಯಂತ್ರಕ್ಕೆ ಕಾರ್ಯನಿರ್ವಹಣೆ ಕುರಿತು ನಿರ್ದೇಶನವನ್ನು ಒದಗಿಸುತ್ತದೆ. ಹಾರ್ಡ್ ವೇರ್ ಎಂಬ ಪದವು ಭೌತಿಕ ಸಾಧನವೆಂದು ಅರ್ಥೈಸಿದರೆ, ಸಾಫ್ಟ್ ವೇರ್ ಎಂಬ ಪದವು  ಭೌದ್ಧಿಕ ಸಾಧನವೆಂದು ಅರ್ಥೈಸಲ್ಪಡುತ್ತದೆ. ಮುಖ್ಯವಾಗಿ ಮೂರು ವಿಧಗಳಿವೆ. 1. ಸಿಸ್ಟಮ್‌ ಸಾಫ್ಟ್ ವೇರ್ 2.ಪ್ರೋಗ್ರಾಮಿಂಗ್  ಸಾಫ್ಟ್ ವೇರ್   3.ಅಪ್ಲಿಕೇಷನ್ (ಅನ್ವಯಿಕ)  ಸಾಫ್ಟ್ ವೇರ್

ಸಿಸ್ಟಮ್ ಸಾಫ್ಟ್ ವೇರ್

ಗಣಕಯಂತ್ರದ ಹಾರ್ಡ್‌ ವೇರ್ ಮತ್ತು ಗಣಕಯಂತ್ರದ ವ್ಯವಸ್ಥೆ ಕಾರ್ಯ ನಿರ್ವಹಿಸಲು ಸಿಸ್ಟಮ್ ಸಾಫ್ಟ್ ವೇರ್ ಸಹಾಯಕವಾಗಿದೆ. ಅಪರೇಟಿಂಗ್ ಸಿಸ್ಟಮ್ (operating systems) ಸಿಸ್ಟಮ್ ಸಾಫ್ಟ್ ವೇರ್ ನ ಉದ್ದೇಶವು ಪ್ರೋಗ್ರಾಮರ್ ಅಪ್ಲಿ ಕೇಶನ್‌ಗಳ ಕ್ಲಿಷ್ಟತೆಯನ್ನು ಸರಳೀಕರಣಗೊಳಿಸುವುದಾಗಿದೆ. ಇದು ನಿರ್ದಿಷ್ಟ ಗಣಕಯಂತ್ರದ ಕ್ಲಿಷ್ಟತೆಯ ವಿವರಣೆಯನ್ನು ಒಳಗೊಂಡಿರುತ್ತದೆ. ಇದು ಸಂಪರ್ಕ ಸಾಧನಗಳು, ಮುದ್ರಕಗಳು, ಸಾಧನ ಓದುಗರು, ಪ್ರದರ್ಶನಗಳು , ಕೀಲಿಮಣೆಗಳು, ಗಣಕಯಂತ್ರದ ಸಂಪನ್ಮೂಲ ಸ್ಮರಣೆ ಹಾಗೂ ಪ್ರೊಸೆಸರ್ ಸಮಯ . ಉದಾಹರಣೆಗಳೆಂದರೆ : GNU/Linux, MS Windows ಮತ್ತು Mac OS X.

ಪ್ರೋಗ್ರಾಮಿಂಗ್  ಸಾಫ್ಟ್ ವೇರ್

ಪ್ರೋಗ್ರಾಮಿಂಗ್ ಸಾಫ್ಟ್ ವೇರ್ ಸಾಮಾನ್ಯವಾಗಿ ಒಂದು ಅನುಕೂಲಕರ ರೀತಿಯಲ್ಲಿ ವಿವಿಧ ಪ್ರೋಗ್ರಾಮಿಂಗ್ ಭಾಷೆ ಬಳಸಿ , ಕಂಪ್ಯೂಟರ್ ಪ್ರೋಗ್ರಾಂಗಳನ್ನು  ಬರೆಯಲು ಪ್ರೋಗ್ರಾಮರ್ ಗೆ ನೆರವಾಗುವ ಉಪಕರಣಗಳನ್ನು  ನೀಡುತ್ತದೆ.

ಅಪ್ಲಿಕೇಷನ್ ಸಾಫ್ಟ್ ವೇರ್

ಅಪ್ಲಿಕೇಷನ್ ಸಾಫ್ಟ್ ವೇರ್ ಒಂದು ಅಥವಾ ಹೆಚ್ಚು ನಿರ್ದಿಷ್ಟ (ಪರೋಕ್ಷವಾಗಿ ಕಂಪ್ಯೂಟರ್ ಅಭಿವೃದ್ಧಿಗೆ ಸಂಬಂಧಪಟ್ಟ) ಕೆಲಸಗಳನ್ನು ಸಾಧಿಸಲು ಬಳಕೆದಾರರಿಗೆ ಸಹಾಯಕವಾಗಿದೆ.

ಉಬಂಟು

ಗಣಕ ಯಂತ್ರವನ್ನು ಆನ್‌ ಮಾಡಿದಾಗ ಕೆಲವು ಕ್ಷಣ ಅದು boot ಆಗುತ್ತದೆ . ಆಗ ನಿಮ್ಮ ಆಯ್ಕೆ windows ಅಥವ ubuntu ಕೇಳುತ್ತದೆ. ನಿಮ್ಮ ಆಯ್ಕೆ ubuntu ಎಂದು ನೀಡಿರಿ . ಹೀಗೆ ನೀಡಿದ ನಂತರ ತಮ್ಮ user name, ಮತ್ತು password ಅನ್ನು ಟೈಪ್‌ ಮಾಡಿ, Enter ಬಟನ್‌ ಒತ್ತಿರಿ. ತಮ್ಮ user name, ಮತ್ತು password ಸರಿಯಿದೆ ಎಂದಾದಲ್ಲಿ desktop ಬರುತ್ತದೆ.

ಡೆಸ್ಕ್ ಟಾಪ್‌ನಲೇಔಟ್‌

ಡೆಸ್ಕ್ ಟಾಪ್‌ ಮೇಲೆ ಒಂದು ಪ್ಯಾನೆಲ್ ಇರುತ್ತದೆ. ಮೇಲೆ ಕಾಣುವ ಪ್ಯಾನೆಲ್‌ ಮಾಹಿತಿ ನೀಡುವ, programಗಳನ್ನು ಸ್ಟಾರ್ಟ್ ಮಾಡುವ ಮತ್ತು systemಅನ್ನು ವ್ಯವಸ್ಥಿತ (configuring)ಗೊಳಿಸುವ ಮಾಹಿತಿಯನ್ನು ನೀಡುತ್ತದೆ .

ಮುಖ್ಯವಾದ ಮೆನುಗಳು

ಸ್ಕ್ರೀನ್‌ನ ಮೇಲೆ ಕಾಣುವ ಎರಡು ಮೆನುಗಳನ್ನು ಮುಖ್ಯವಾದ ಮೆನುಗಳೆನ್ನುತ್ತೇವೆ . ಅವುಗಳೇ Applications, Places ಮೆನುಗಳಾಗಿವೆ. ಇವು ಸ್ಕ್ರೀನ್‌ನ ಮೇಲೆ ಯಾವಾಗಲೂ ಇರುತ್ತವೆ. ಯಾವುದಾದರೂ application ಆರಂಭವಾದರೆ ಅದು ಈ ಯಾವುದಾದರೂ ಮೆನುವಿನಲ್ಲಿರುವ ವಿಂಡೋವಿನದೇ ಆಗಿರುತ್ತದೆ.

The Applications ಮೆನುವು ಸ್ಕ್ರೀನ್‌ ಮೇಲಿನ ಎಡತುದಿಯಲ್ಲಿದ್ದು ಇದು ಸಿಸ್ಟಮ್‌ ನ ಒಳಗಡೆ ಇರುವ software ಅನ್ನು access ಮಾಡಲು ಅನುಕೂಲಿಸುತ್ತದೆ.

The Places ಮೆನುವು ಸಿಸ್ಟಮ್‌ನೊಳಗೆ ಇರುವ ಲೊಕೇಶನ್‌ಗಳಿಗೆ ತಕ್ಷಣದ (quick) access ಒದಗಿಸುತ್ತದೆ. ಇದಲ್ಲದೇ USBಗೆ ಲಗತ್ತಿಸಿದ memory stickಗಳು, ಡಿಜಿಟಲ್‌ ಕ್ಯಾಮೆರಾಗಳು, ಎಂಪಿ ೩ ಪ್ಲೇಯರ್‌ಗಳ access ಅನ್ನೂ ಸಹ ಇದು ಒದಗಿಸುತ್ತದೆ.

Reboot ಮತ್ತು shutdown ಮಾಡುವುದು:

ಕಂಪ್ಯೂಟರ್‌ ಅನ್ನು shut-down ಅಥವ reboot ಮಾಡಲು ಸಿಸ್ಟಮ್‌ ಮೆನುವಿನಲ್ಲಿರುವ Shut Down ಐಕಾನ್‌ಅನ್ನು click ಮಾಡಿರಿ. (Ubuntu 11.04 ರಲ್ಲಿ , Quit ಐಕಾನ್‌ಅನ್ನು ಆಯ್ಕೆ ಮಾಡಿಕೊಳ್ಳಿ). ಈ ರೀತಿ ಕ್ಲಿಕ್‌ ಮಾಡಿದಾಗ ಬರುವ dialog box ನಲ್ಲಿ ತಮಗೆ ಅಗತ್ಯವೆನಿಸಿದ ಆಯ್ಕೆಯನ್ನು ಮಾಡಿಕೊಳ್ಳಿರಿ .

ಮೈಂಡ್  ಮ್ಯಾಪ್

ಒಂದು  ಕ್ಷಣ  ಕಣ್ಮುಚ್ಚಿಕೊಂಡು  ಒಂದು PLANTನ್ನು  (ಗಿಡವನ್ನು ) ಕುರಿತು ಯೋಚಿಸಿದಾಗ ಆ ಗಿಡಕ್ಕೆ   ಸಂಬಂಧಿಸಿದ ಹಲವಾರು ಶಬ್ದಗಳು ನಮ್ಮ ಮನದಾಳದಲ್ಲಿ ಬರುತ್ತವೆ. ಅಂತಹ ಶಬ್ದಗಳನ್ನು ನಿಮ್ಮ ಪುಸ್ತಕದಲ್ಲಿ  ಬರೆಯಿರಿ.

ಒಂದು  PLANT( ಗಿಡ)ಅನ್ನು  ಕುರಿತು ಯೋಚಿಸಿದಾಗ  ನಮ್ಮ  ಮನದಾಳದಲ್ಲಿ  ಸಾಮಾನ್ಯವಾಗಿ  ಬರುವ  ಶಬ್ದಗಳೆಂದರೆ: PLANT, WATER, PHOTOSYNTHESIS, LEAF, FLOWER, ROOT, STEM, SOIL, SUNLIGHT, CARBON DI OXIDE etc.,(ಸಸ್ಯ, ನೀರು, ದ್ಯುತಿಸಂಶ್ಲೇಷಣೆ, ಬೇರು, ಕಾಂಡ, ಮಣ್ಣು ,   ಬೆಳಕು ಮತ್ತು ಇಂಗಾಲದ ಡೈ ಆಕ್ಸೈಡ್ ಇತ್ಯಾದಿ).

ಈ ಶಬ್ದಗಳು ಅರ್ಥಬದ್ಧವಾಗಿದ್ದು , ಮನಸ್ಸಿನಲ್ಲಿ ಅವುಗಳ ಚಿತ್ರಗಳು ಮೂಡುವ ಕಾರಣ ಅವುಗಳನ್ನು ಕಾಲ್ಪನಿಕ ಶಬ್ದಗಳೆಂದು ಕರೆಯಲಾಗುತ್ತದೆ. ಕಲ್ಪನೆ ಎನ್ನುವುದು ಮನಸ್ಸಿನಲ್ಲಿ ಮೂಡುವ ಚಿತ್ರಗಳ ವರ್ಣನೆಯಾಗಿದೆ . ಇದು ಒಂದು ಅನಿಸಿಕೆ, ವಿಚಾರ ಅಥವಾ ಚಿತ್ರಣವಾಗಿದ್ದು ನಾವು ಒಂದು ಶಬ್ದವನ್ನು ಅಥವಾ ವಿಷಯವನ್ನು ಕುರಿತು ಯೋಚಿಸಿದಾಗ ಅದು ರೂಪುಗೊಳ್ಳುತ್ತದೆ . ಹೀಗೆ ರೂಪುಗೊಳ್ಳುವ ಒಂದು ಪದ ಬೇರೆ ಬೇರೆ ಆಯಾಮಗಳನ್ನು ಸಂಬಂಧಿಸುವುದೇ ಪರಿಕಲ್ಪನೆ.

ಈ ಕೆಳಗಿನ ಚಿತ್ರಗಳನ್ನು ಗಮನಿಸಿರಿ :

HAVE   USING  NEED   CARRY-OUT

ಈ  ಶಬ್ದಗಳು “ಕಾಲ್ಪನಿಕ” ಶಬ್ದಗಳಾಗಿರುವುದಿಲ್ಲ ಆದರೆ ಅವು ಎರಡು ಅಥವಾ ಎರಡಕ್ಕಿಂತ ಹೆಚ್ಚು    “ಕಾಲ್ಪನಿಕ” ಶಬ್ದಗಳನ್ನು ಸಂಪರ್ಕಿಸುತ್ತವೆ. ಉದಾಹರಣೆಗೆ: PLANTS have ROOTS, LEAVES, STEM, FLOWER. ಹೀಗಾಗಿ  ಒಂದು “ಕಾಲ್ಪನಿಕ”  ಪದವು ಹಲವಾರು “ಕಾಲ್ಪನಿಕ” ಪದಗಳನ್ನು ಸಂಪರ್ಕಿಸಬಹುದು. ಇದನ್ನು   ಸೂಚಿಸುವ ಚಿತ್ರವನ್ನು  ಈ  ಕೆಳಗಿನಂತೆ  ತೋರಿಸಬಹುದು .

 

 

ಮೇಲಿನ ಚಿತ್ರಕ್ಕೆ  ಹೆಚ್ಚು  ಕಾಲ್ಪನಿಕ  ಶಬ್ದಗಳನ್ನು ಜೋಡಿಸುವ ಮೂಲಕ ಅಥವಾ ಒಂದಕ್ಕೆ  ಹೆಚ್ಚು ಹೆಚ್ಚು ಕಾಲ್ಪನಿಕ ಶಬ್ದಗಳನ್ನು  ಜೋಡಿಸುವ  ಮೂಲಕ  'PLANT'ನ ಘಟಕಕ್ಕೆ  Mind Map ನ್ನು ರಚಿಸಿರಿ.

'ಗಿಡ'ದ ಘಟಕಕ್ಕೆ  'Mind Map' ಅನ್ನು ರಚಿಸುವಾಗ ಈ ಕೆಳಗಿನ ಎರಡನೆಯ ಚಿತ್ರದಲ್ಲಿ ತೋರಿಸಿದಂತೆ ಹಲವು ಶಬ್ದಗಳನ್ನು ನಾವು ಕಾಣಬಹುದು.

ಮೇಲಿನ ಎರಡೂ ಚಿತ್ರಗಳನ್ನು ಅವಲೋಕಿಸಿದಾಗ ಮುಖ್ಯವಾಗಿ ಯಾವ ವ್ಯತ್ಯಾಸಗಳು ಕಂಡುಬರುತ್ತವೆ ಎಂದರೆ,   ಮೊದಲನೆಯ ಚಿತ್ರದಲ್ಲಿ ಎಲ್ಲಾ ಕಾಲ್ಪನಿಕ ಶಬ್ದಗಳನ್ನು ಜೋಡಿಸಲಾಗಿಲ್ಲ ಹಾಗೂ ಹಾಳೆ ಮತ್ತು ಪೆನ್ನಿನ ಸಹಾಯದಿಂದ Mind Map ಅನ್ನು ರಚಿಸಲಾಗಿದೆ. ಆದರೆ ಎರಡನೆಯ ಚಿತ್ರದಲ್ಲಿ  Mind-map ನ್ನು ರಚಿಸಲು  FREEMIND ಎಂದು ಕರೆಯಲ್ಪಡುವ ಸಾಫ್ಟ್ ವೇರ್ ತಂತ್ರಾಂಶವು ಉಪಯೋಗಿಸಲ್ಪಟ್ಟಿದೆ.

ಗಣಕಯಂತ್ರ ಕಾರ್ಯಾಗಾರದಲ್ಲಿನ  ಚಟುವಟಿಕೆ

Freemind ಎಂದರೇನು? ಅದನ್ನು ಹೇಗೆ ಉಪಯೋಗಿಸಬಹುದು ?

Freemind ಇದು Mind Mapನ ರಚನೆ, ಸೇರ್ಪಡೆ ಅಥವಾ ಬದಲಾವಣೆಯ ಒಂದು ಶೈಕ್ಷಣಿಕ ಸಾಹಿತ್ಯದ (ಸಾಫ್ಟ್   ವೇರ್)ತಂತ್ರಾಂಶವಾಗಿರುತ್ತದೆ .

Freemind ಅನ್ನು ತೆರೆಯುವುದು:

  • Ubuntu  menu ಸೆಲೆಕ್ಟ್  ಮಾಡಿ Applications →   Office → Freemind ಮೂಲಕ ತೆರೆಯಿರಿ.

ಮೈಂಡ್ ಮ್ಯಾಪ್  ರಚಿಸುವುದು

  • Freemind Menu ಮೂಲಕ Maps →  Mindmap Mode (Shortcut Key ALT+1) ಅನ್ನು  ಕ್ರಿಯಾಶೀಲಗೊಳಿಸಿ .
  • File → Newಆಯ್ಕೆ ಮಾಡಿಕೊಳ್ಳಿ  ಅಥವಾ  Shortcut Key Ctrl+Nಅನ್ನು  ಒತ್ತಿ .

ಈ ಕೆಳಗೆ ತೋರಿಸಿದಂತೆ ಪರದೆಯನ್ನು ಕಾಣಬಹುದು :

ಮೈಂಡ್ ಮ್ಯಾಪ್ನಲ್ಲಿ ಬರೆಯುವ ಕ್ರಮ

  • ಮೇಲಿನ ಚಿತ್ರದಲ್ಲಿ ತೋರಿಸಿದಂತೆ  New Mindmap Node ನ ಮೇಲೆ ಡಬಲ್ ಕ್ಲಿಕ್ ಮಾಡಿ.
  • “New Mindmap” Nodeನಲ್ಲಿರುವ ಅಕ್ಷರಗಳನ್ನು ಡಿಲೀಟ್ ಮಾಡಿ 'PLANT' ಎಂಬ ಮೂಲ ಕಾಲ್ಪನಿಕ ಶಬ್ದವನ್ನು ಟೈಪ್ ಮಾಡಿ.
  • ಸಂಪರ್ಕ ಶಬ್ದವನ್ನು ಸೇರಿಸಲು ಕರ್ಸರನ್ನು PLANT node  (Parent Node) ಮೇಲೆ ಇರಿಸಿ ಹಾಗೂ ಕೆಳಗಿನ ಯಾವುದಾದರೊಂದು ಕ್ರಮವನ್ನು ಅನುಸರಿಸಿ .
  • Right click ಮಾಡಿ  New Child Node (Shortcut Key Insert) ಮೇಲೆ ಕ್ಲಿಕ್ ಮಾಡಿ.
  • New  Child node ನಲ್ಲಿ  have ಎಂಬ ಶಬ್ದವನ್ನು ಟೈಪ್ ಮಾಡಿ.
  • Menu option ಮೂಲಕ Format → Fork ಮೇಲೆ ಕ್ಲಿಕ್ ಮಾಡಿ.

ಮತ್ತೊಂದು ಕಾಲ್ಪನಿಕ ಶಬ್ದವನ್ನು ಸೇರಿಸಲು  ಕರ್ಸರನ್ನು  'have' node (Parent Node) ಮೇಲೆ ಇರಿಸಿ ಹಾಗೂ ಕೆಳಗಿನ ಯಾವುದಾದರೊಂದು ಕ್ರಮವನ್ನು ಅನುಸರಿಸಿ .

  • Right click ಮಾಡಿ  New Child Node  (Short cut Key: Insert) ಮೇಲೆ ಕ್ಲಿಕ್ ಮಾಡಿ.
  • New Child node ನಲ್ಲಿ  STEM ಎಂಬ ಶಬ್ದವನ್ನು ಟೈಪ್ ಮಾಡಿ.
  • Menu option ಮೂಲಕ Format → Bubble ಮೇಲೆ ಕ್ಲಿಕ್ ಮಾಡಿ.

LEAVES ಎಂಬ ಕಾಲ್ಪನಿಕ ಶಬ್ದವನ್ನು  ಸೇರಿಸಲು  ಕರ್ಸರನ್ನು STEM (Sibling Node) ಮೇಲೆ ಇರಿಸಿ ಹಾಗೂ ಕೆಳಗಿನ ಯಾವುದಾದರೊಂದು ಕ್ರಮವನ್ನು ಅನುಸರಿಸಿ

  • Right click ಮಾಡಿ New Sibling Node (Shortcut Key: Enter) ಮೇಲೆ ಕ್ಲಿಕ್ ಮಾಡಿ.
  • New Sibling node ನಲ್ಲಿ  LEAVES  ಎಂಬ ಶಬ್ದವನ್ನು ಟೈಪ್ ಮಾಡಿ .
  • Menu option ಮೂಲಕ Format →  Bubble ಮೇಲೆ ಕ್ಲಿಕ್ ಮಾಡಿ

ಇದೇ ಕ್ರಮವನ್ನು ಅನುಸರಿಸಿ ನೀವು  PLANTನ  ಸಂಪೂರ್ಣ Mindmapಅನ್ನು ರಚಿಸಬಹುದು

ಫ್ರೀ ಮೈಂಡ್  ನ ಮೈಂಡ್  ಮ್ಯಾಪ್  ಅನ್ನು ಸೇವ್ ಮಾಡುವುದು

ನೀವು ರಚಿಸಿರುವ  Freemind ನmind map ಅನ್ನು ಸೇವ್ ಮಾಡಲು ಈ ಕೆಳಗಿನ ಕ್ರಮವನ್ನು  ಅನುಸರಿಸಿ

Menu option ಮೂಲಕ File → Save As ಮೇಲೆ ಕ್ಲಿಕ್ ಮಾಡಿ.

ಈ ಕೆಳಗೆ ತೋರಿಸಿದಂತೆ ಪರದೆಯನ್ನು ಕಾಣಬಹುದು:

  • ನಲ್ಲಿರುವ ನಿಮ್ಮ ಪೋಲ್ಡರ್ ಮೇಲೆ ಎರಡು ಬಾರಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಪೊಲ್ಡರನ್ನು  ಆಯ್ಕೆ ಮಾಡಿಕೊಳ್ಳಿ.. ನೀವು ಆಯ್ಕೆ ಮಾಡಿಕೊಂಡಿರುವ ಪೋಲ್ಡರ್  /Home/Bindu/Documents ಆಗಿರುತ್ತದೆ.
  • ನಿಗದಿತ ಬಾಕ್ಸ್ ನಲ್ಲಿ ಫೈಲ್ ಹೆಸರನ್ನು ಟೈಪ್ ಮಾಡಿರಿ.
  • OK ಕ್ಲಿಕ್ ಮಾಡಿರಿ.
  • Freemind ನ ಪರದೆಯ ಮೇಲ್ಭಾಗದ ಪಟ್ಟಿಯಲ್ಲಿ ನೀವು ಸೂಚಿಸಿದ ಹೆಸರಿನಲ್ಲಿ ಫೈಲ್ ಸೇವ್ ಆಗಿರುವುದನ್ನು ಅಥವಾ ಬದಲಾಗಿರುವುದನ್ನು ಕಾಣುವಿರಿ.
  • ನಿಮ್ಮ ಫೈಲ್ plant.mm ಎಂದು ಸೇವ್ ಆಗಿರುತ್ತದೆ. ಎಲ್ಲಾ Freemind ಫೈಲ್ ಗಳು .mm ಎಂಬ ವಿಸ್ತಾರ ರೂಪವನ್ನು   ( extension ) ಹೊಂದಿರುತ್ತವೆ.

ಫ್ರೀ ಮೈಂಡ್  ನಲ್ಲಿ ಮೈಂಡ್ ಮ್ಯಾಪ್ ಅನ್ನು  ತೆರೆಯುವುದು(Open)

  • Menu option ಮೂಲಕ File → Open  ಮೇಲೆ ಕ್ಲಿಕ್ ಮಾಡಿ.
  • ನಿರ್ದಿಷ್ಟ ನಮೂನೆಯ ಪರದೆಯಲ್ಲಿ ಈಗಾಗಲೆ ನೀವು ರಚಿಸಿರುವ ಫೋಲ್ಡರ್‌ನ ಮೇಲೆ ಕ್ಲಿಕ್ ಮಾಡಿ.
  • ನೀವು ಈಗಾಗಲೆ ಸೇವ್ ಮಾಡಿರುವ ಫೈಲನ್ನು  ಆಯ್ಕೆ ಮಾಡಿ.
  • ನಂತರ OK ಆಪ್ಷನ್‌ಅನ್ನು  ಕ್ಲಿಕ್ ಮಾಡಿ.

ಕಾರ್ಯಗಾರದ ನಂತರದ ಚಟುವಟಿಕೆಗಳು

  • ಇಲ್ಲಿ  TRANSPORTATION ಎಂಬ ವಿಷಯವನ್ನು ಒಂದು ಘಟಕವಾಗಿ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಧಿಸಿದಂತೆ AIR, SLOW, SEA, PETROL, AEROPLANE, FAST, SUBMARINE, CAR, BYCYCLE, SHIP, HELICOPTER, FUEL, WATER, DIESEL ಎಂಬ ಹಲವಾರು ಶಬ್ದಗಳನ್ನು ಕೊಡಲಾಗಿದೆ. ಇವುಗಳಲ್ಲದೇ, ನಿಮ್ಮ ವಿಚಾರದಲ್ಲಿರುವ ಇನ್ನೂ ಹಲವು ಶಬ್ದಗಳನ್ನು ಸೇರಿಸುವ ಮೂಲಕ Freemind Mindmap ಅನ್ನು ರಚಿಸಿ. ನೀವು ರಚಿಸುವ ಫೈಲ್ಗೆ Transportation.mm ಎಂದು ಹೆಸರಿಸಿ.
  • ANIMALS ಎನ್ನುವ ಘಟಕವನ್ನು ತೆಗೆದುಕೊಂಡು REPTILES, MAMMALS, FISH, BIRDS, AMPHIBIANS ಇತ್ಯಾದಿ ನಿಮಗೆ ತಿಳಿದಿರುವ ಆಯಾ ವರ್ಗಕ್ಕೆ ಸೇರಿದ ಪ್ರಾಣಿಗಳ ಹೆಸರನ್ನು ಪಟ್ಟಿ ಮಾಡಿ ಹಾಗೂ  ನಿಮಗೆ ತಿಳಿದಿರುವ ಎಲ್ಲಾ ಪ್ರಾಣಿಗಳ ಹೆಸರುಗಳನ್ನು ಬಳಸಿ mindmap ಅನ್ನು ರಚಿಸಿ .
  • MY VILLAGE ಎನ್ನುವ ಘಟಕವನ್ನು ತೆಗೆದುಕೊಂಡು ಅಥವಾ ನೀವು ನಗರವಾಸಿಗಳಾಗಿದ್ದಲ್ಲಿ MY LOCALITY ಎನ್ನುವ ಘಟಕವನ್ನು ತೆಗೆದುಕೊಂಡು, ನಿಮ್ಮ village/locality ಕುರಿತ ಚಿತ್ರಣವನ್ನು Mindmapನ  ಮೂಲಕ ರಚಿಸಿರಿ.

ಪೂರಕ ಸಂಪನ್ಮೂಲ

http://www.gnowledge.org/ ಮೂಲಕ ಬೇರೆ ಬೇರೆ ವಿಷಯಗಳ ಸಾಕಷ್ಟು Mindmaps ಗಳನ್ನು ಪಡೆಯಬಹುದು

ಸಿಸ್ಟಮ್

  • 20 ಥಿನ್ ಕ್ಲಯಂಟ್ಸ್ ಬಳಕೆದಾರರಿದ್ದರೆ, ಕನಿಷ್ಠ 4GB RAM. (ಒಂದೇ ಕಂಪ್ಯೂಟರ್ನಲ್ಲಿ ಅಳವಡಿಸುವುದಾದರೆ 1GB RAM ಇದ್ದರೆ ಸಾಕು)
  • 160 GB ಹಾರ್ಡ್ ಡಿಸ್ಕ್
  • Core 2 Duo ಪ್ರಾಸೆಸ್ಸರ್

ಅಳವಡಿಸುವುದು ಹೇಗೆ?

  • ಕಂಪ್ಯೂಟರ್  CD/DVD ಯನ್ನು ಬಳಸಿ ಶುರುವಾಗಬೇಕು. (ಸಾಮಾನ್ಯವಾಗಿ ಅದು ಹಾರ್ಡ್ ಡಿಸ್ಕ್ ಅನ್ನು ಬಳಸಿ ಶುರುವಾಗುತ್ತದೆ)
  • DVDಯನ್ನು  ಕಂಪ್ಯೂಟರ್ ನಲ್ಲಿ ಹಾಕಿ ಪುನ: ಪ್ರಾರಂಭಿಸಿ ಅದು DVD ಯನ್ನು ಬಳಸಿ ಶುರುವಾದರೆ ಈ ಸ್ಕ್ರೀನ್ ಅನ್ನು ನೋಡುತ್ತೀರ.
  • ಇಲ್ಲದಿದ್ದರೆ ಯಾವಗಲೂ ಶುರುಆಗುವ ರೀತಿಯಲ್ಲಿ ಶುರುವಾಗುತ್ತದೆ.

ಆಗ, ನಿಮ್ಮ ಕಂಪ್ಯೂಟರ್ ಅನ್ನು ಪುನ: ಶುರುಮಾಡಿ. ಶುರುವಾದ ತಕ್ಷಣ ಬರುವ ಮೆಸೆಜ್ ಓದಿ, ಅಲ್ಲಿ setupಗೆ ತೋರಿಸುವ key ಅನ್ನು ಒತ್ತಿ. (ಸಾಮಾನ್ಯವಾಗಿ ಅದು F2, F8, F12 ಅಥವಾ Delete key ಆಗಿರುತ್ತದೆ) Arrow keyಗಳನ್ನು ಬಳಸಿ Boot ಅನ್ನು ಆಯ್ದುಕೊಳ್ಳಿ, ಮತ್ತು Boot Device Priority ಮೇಲೆ enter ಒತ್ತಿ

ಈಗಾಗಲೇ ಆಯ್ಕೆ  ಆಗಿರುವ 1st Boot Device ಮೇಲೆ Enter ಒತ್ತಿ.  ಪಟ್ಟಿ ಇಂದ CD/DVD ROM ಅನ್ನು ಆಯ್ದು ಕೊಳ್ಳಿ.

F10 ಒತ್ತಿ, ಮಾಡಿರುವ ಬದಲಾವಣೆಗಳನ್ನು ಹಾಗೆ ಇರಿಸಿ ಹೊರಬರಲು, Enter ಒತ್ತಿ. ಈಗ ನಿಮ್ಮ ಕಂಪ್ಯೂಟರ್ DVD ಇಂದ ಶುರು ಆಗುತ್ತದೆ.

ಆಗ, ನಿಮ್ಮ ಕಂಪ್ಯೂಟರ್ ಅನ್ನು ಪುನ: ಶುರುಮಾಡಿ. ಶುರುವಾದ ತಕ್ಷಣ ಬರುವ ಮೆಸೆಜ್ ಓದಿ, ಅಲ್ಲಿ setupಗೆ ತೋರಿಸುವ key ಅನ್ನು ಒತ್ತಿ. (ಸಾಮಾನ್ಯವಾಗಿ ಅದು F2, F8, F12 ಅಥವಾ Delete key ಆಗಿರುತ್ತದೆ) Arrow keyಗಳನ್ನು ಬಳಸಿ Boot ಅನ್ನು ಆಯ್ದುಕೊಳ್ಳಿ, ಮತ್ತು Boot Device Priority ಮೇಲೆ enter ಒತ್ತಿ ಈಗಾಗಲೇ ಆಯ್ಕೆ  ಆಗಿರುವ 1st Boot Device ಮೇಲೆ Enter ಒತ್ತಿ.  ಪಟ್ಟಿ ಇಂದ CD/DVD ROM ಅನ್ನು ಆಯ್ದು ಕೊಳ್ಳಿ.F10 ಒತ್ತಿ, ಮಾಡಿರುವ ಬದಲಾವಣೆಗಳನ್ನು ಹಾಗೆ ಇರಿಸಿ ಹೊರಬರಲು, Enter ಒತ್ತಿ. ಈಗ ನಿಮ್ಮ ಕಂಪ್ಯೂಟರ್ DVD ಇಂದ ಶುರು ಆಗುತ್ತದೆ.

ಆಗ, ನಿಮ್ಮ ಕಂಪ್ಯೂಟರ್ ಅನ್ನು ಪುನ: ಶುರುಮಾಡಿ. ಶುರುವಾದ ತಕ್ಷಣ ಬರುವ ಮೆಸೆಜ್ ಓದಿ, ಅಲ್ಲಿ setupಗೆ ತೋರಿಸುವ key ಅನ್ನು ಒತ್ತಿ. (ಸಾಮಾನ್ಯವಾಗಿ ಅದು F2, F8, F12 ಅಥವಾ Delete key ಆಗಿರುತ್ತದೆ) Arrow keyಗಳನ್ನು ಬಳಸಿ Boot ಅನ್ನು ಆಯ್ದುಕೊಳ್ಳಿ, ಮತ್ತು Boot Device Priority ಮೇಲೆ enter ಒತ್ತಿಈಗಾಗಲೇ ಆಯ್ಕೆ  ಆಗಿರುವ 1st Boot Device ಮೇಲೆ Enter ಒತ್ತಿ.  ಪಟ್ಟಿ ಇಂದ CD/DVD ROM ಅನ್ನು ಆಯ್ದು ಕೊಳ್ಳಿ.F10 ಒತ್ತಿ, ಮಾಡಿರುವ ಬದಲಾವಣೆಗಳನ್ನು ಹಾಗೆ ಇರಿಸಿ ಹೊರಬರಲು, Enter ಒತ್ತಿ. ಈಗ ನಿಮ್ಮ ಕಂಪ್ಯೂಟರ್ DVD ಇಂದ ಶುರು ಆಗುತ್ತದೆ.

ಡೆಡ್ ಕಂಪ್ಯೂಟರ್

ಜಗತ್ತಿನಲ್ಲಿ ಉತ್ಪನ್ನಗಳನ್ನು ನಾವು ಎಚ್ಚು ಬಳಸಿದಂತೆಲ್ಲಾ ಅದು ಕೈ ಕೊಡುವ ಸಂಭವವವೇ ಹೆಚ್ಚು. ಒಮ್ಮೊಮ್ಮೆ ಈ ಉತ್ಪನ್ನಗಳು ಬಳಕೆದಾರ ಸ್ನೇಹಿಯಾಗಿದ್ದರೆ ಮತ್ತೆ ಕೆಲವೊಮ್ಮೆ ತಲೆನೋವಿಗೆ ಕಾರಣವಾಗುತ್ತವೆ. ಇಂದಿನ ಲೇಖನದಲ್ಲಿ ಇಂತಹುದ್ದೇ ಒಂದು ಆಸಕ್ತಿಕರ ವಿಷಯವನ್ನು ಚರ್ಚಿಸಲಿದ್ದೇವೆ. ನಿಮ್ಮ ಕಂಪ್ಯೂಟರ್ ಡೆಡ್ ಆದಾಗ ಏನು ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ನಿಮ್ಮ ಕಂಪ್ಯೂಟರ್ ಡೆಡ್ ಆಗಿದೆ ಎಂದೊಡನೆಯೇ ಕೆಲವೊಂದು ಸಲಹೆಗಳನ್ನು ನೀವು ಪಾಲಿಸಿದರೆ ಸಾಕು ಇದನ್ನು ಹೊಂದಿಸುವುದು ಹೇಗೆ ಎಂಬುದನ್ನು ನಿಮಗೆ ಅರಿತುಕೊಳ್ಳಬಹುದು.

ಪವರ್ ಕಾರ್ಡ್ :

ಪವರ್ ಕಾರ್ಡ್ ಮೂಲಕ ನಿಮ್ಮ ಕಂಪ್ಯೂಟರ್ ವಿದ್ಯುತ್ ಪೂರೈಕೆಯಾಗುತ್ತದೆ. ಇದನ್ನು ಪರೀಕ್ಷಿಸುವುದಕ್ಕಾಗಿ ಪವರ್ ಕಾರ್ಡ್ ಅನ್ನು ನೇರವಾಗಿ ಗೋಡೆಯಲ್ಲಿರುವ ಪ್ಲಗ್ ಬೋರ್ಡ್‌ಗೆ ಮತ್ತು ಇನ್ನೊಂದು ಬದಿಗೆ ಬಲ್ಬ್ ಅನ್ನು ಸಂಪರ್ಕಪಡಿಸಿ.

ವೋಲ್ಟ್ ಸ್ವಿಚ್

ಕಂಪ್ಯೂಟರ್‌ನ ಹಿಂಭಾಗದಲ್ಲಿರುವ ವೋಲ್ಟೇಜ್ ಸೆಟ್ಟಿಂಗ್ ಅನ್ನು ಪರಿಶೀಲಿಸಿಕೊಳ್ಳಿ.

ಮಾನಿಟರ್

ನಿಮ್ಮ ಕಂಪ್ಯೂಟರ್ ಮಾನಿಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ.

ಎಸ್‌ಎಮ್‌ಪಿಎಸ್

ಸ್ವಿಚ್ ಮೋಡ್ ಪವರ್ ಸಪ್ಲೈ ಎಂದು ಕರೆಯಲಾದ ಎಸ್‌ಎಮ್‌ಪಿಎಸ್ ಇದು ಪರ್ಯಾಯ ಕರೆಂಟ್ ಅನ್ನು ನೇರ ಕರೆಂಟ್‌ಗೆ ಪರಿವರ್ತಿಸುತ್ತದೆ. ಕಂಪ್ಯೂಟರ್‌ಗೂ ಸಿಪಿಯು ಎಸ್‌ಎಮ್‌ಪಿಎಸ್ ಒಂದೇ ತೆರನಾಗಿ ಕಾರ್ಯನಿರ್ವಹಿಸುತ್ತದೆ.


ರಾಮ್

ರಾಂಡಮ್ ಏಕ್ಸಸ್ ಮೆಮೊರಿ ಎಂದು ಕರೆಯಲಾದ RAM ಎರಡು ವಿಧಗಳನ್ನು ಹೊಂದಿದೆ. ಒಂದು ಡ್ರಾಮ್ ಇನ್ನೊಂದು ಸ್ರಾಮ್ ಎಂದಾಗಿದೆ. ಇದನ್ನು ಪರಿಶೋಧಿಸಿ ನಂತರ RAM ಅನ್ನು ಮರುಫಿಟ್ಟಿಂಗ್ ಮಾಡಿದ ನಂತರ ಇನ್ನೊಮ್ಮೆ ಪರಿಶೀಲಿಸಿ. RAM ಕನೆಕ್ಟರ್ ಅನ್ನು ಚೆನ್ನಾಗಿ ಸ್ವಚ್ಛ ಮಾಡಿ.

ಔಟ್‌ಪುಟ್ ಕನೆಕ್ಟರ್
ಆಡಿಯೊ ಸಿಸ್ಟಮ್, ಪ್ರಿಂಟರ್ ಹೀಗೆ ಯುಎಸ್‌ಬಿ ಸಂಪರ್ಕದ ಡಿವೈಸ್ ಪರಿಶೀಲಿಸಿ.

ಬಯೋಸ್ ರಿಸೆಟ್ಟಿಂಗ್

ಸಿಮೋಸ್ ಬ್ಯಾಟರ್ ಅನ್ನು ಮರುಜೋಡಿಸುವ ಮೂಲಕ ಬಯೋಸ್ ಮರುಹೊಂದಿಸಬಹುದು. ಮೊದಲಿಗೆ ಬಯೋಸ್ ಬ್ಯಾಟರಿಯನ್ನು ತೆಗೆಯಿರಿ 2 ನಿಮಿಷಗಳ ನಂತರ ಅದನ್ನು ಇನ್‌ಸ್ಟಾಲ್ ಮಾಡಿ.

ಎಕ್ಸ್‌ಟರ್ನಲ್ ಕಾರ್ಡ್

ಯಾವುದೇ ಎಕ್ಸ್‌ಟರ್ನಲ್ ಕಾರ್ಡ್, ಗ್ರಾಫಿಕ್ ಕಾರ್ಡ್, ಸೌಂಡ್ ಕಾರ್ಡ್ ಇವುಗಳನ್ನು ಹೊರತೆಗೆಯಿರಿ ಮತ್ತು ಪರಿಶೀಲಿಸಿ.

ಸಿಸ್ಟಮ್ ಗಮನಿಸಬೇಕಾದ ಅಂಶಗಳು

ಗಮನಿಸಿ: ಇಲ್ಲಿ mouse ಕೆಲಸ ಮಾಡುವುದಿಲ್ಲ. ಎಲ್ಲಾ ಕಂಪ್ಯೂಟರ್ ಗಳಲ್ಲಿ ಇದೆ ತರಹದ ಚಿತ್ರಗಳು ಕಾಣದೇ ಇರಬಹುದು, ಬೇರೆ ರೀತಿಯಲ್ಲಿ ಕಂಡರೂ ಸಮಾನವಾದ ಆಯ್ಕೆಗಳು ಇರುತ್ತವೆ.

ಗಮನಿಸಿ: ಇಲ್ಲಿ mouse ಕೆಲಸ ಮಾಡುವುದಿಲ್ಲ. ಎಲ್ಲಾ ಕಂಪ್ಯೂಟರ್ ಗಳಲ್ಲಿ ಇದೆ ತರಹದ ಚಿತ್ರಗಳು ಕಾಣದೇ ಇರಬಹುದು, ಬೇರೆ ರೀತಿಯಲ್ಲಿ ಕಂಡರೂ ಸಮಾನವಾದ ಆಯ್ಕೆಗಳು ಇರುತ್ತವೆ.

ಮೊದಲನೆ ಚಿತ್ರದಲ್ಲಿ ಕಾಣುವ ಸ್ಕ್ರೀನ್ ನಿಮಗೆ ಕಾಣುತ್ತದೆ.. ಕೀಲಿಮಣೆಯನ್ನು ಬಳಸಿ Install – start the installer directly ಎನ್ನುವುದನ್ನು ಆಯ್ದುಕೊಳ್ಳಿ.

ಈ ಹಂತದಲ್ಲಿ ನೀವು ಭಾಷೆಯನ್ನು ಆಯ್ದುಕೊಳ್ಳಿ.. ಆದೇ ಭಾಷೆಯಲ್ಲೇ ಎಡುಬುಂಟು ಅನುಸ್ಥಾಪನೆಯಾಗುತ್ತದೆ. Forward ಗುಂಡಿಯನ್ನು ಒತ್ತಿ.

ಗಮನಿಸಿ: ಇಲ್ಲಿ mouse ಕೆಲಸ ಮಾಡುವುದಿಲ್ಲ. ಎಲ್ಲಾ ಕಂಪ್ಯೂಟರ್ ಗಳಲ್ಲಿ ಇದೆ ತರಹದ ಚಿತ್ರಗಳು ಕಾಣದೇ ಇರಬಹುದು, ಬೇರೆ ರೀತಿಯಲ್ಲಿ ಕಂಡರೂ ಸಮಾನವಾದ ಆಯ್ಕೆಗಳು ಇರುತ್ತವೆ.

ಮುಂದಿನ ಹಂತದಲ್ಲಿ ಅವಶ್ಯಕವಾದಷ್ಟು ಜಾಗ ಕಂಪ್ಯೂಟರ್ ನಲ್ಲಿ ಇದೆಯೇ, ವಿದ್ಯುತ್ ಸಂಪರ್ಕ ಹೊಂದಿದೆಯೇ, ಮತ್ತು Internet ಇದೆಯೇ ಎಂದು ಪರಿಶೀಲಿಸುತ್ತದೆ. ಸುಮ್ಮನೆ Forward ಗುಂಡಿ ಮೇಲೆ ಒತ್ತಿ.

ಮುಂದಿನ ಹಂತದಲ್ಲಿ ಅವಶ್ಯಕವಾದಷ್ಟು ಜಾಗ ಕಂಪ್ಯೂಟರ್ ನಲ್ಲಿ ಇದೆಯೇ, ವಿದ್ಯುತ್ ಸಂಪರ್ಕ ಹೊಂದಿದೆಯೇ, ಮತ್ತು Internet ಇದೆಯೇ ಎಂದು ಪರಿಶೀಲಿಸುತ್ತದೆ. ಸುಮ್ಮನೆ Forward ಗುಂಡಿ ಮೇಲೆ ಒತ್ತಿ.

ಇಲ್ಲಿ ನೀವು ಎಡುಬುಂಟುವನ್ನು ಹೇಗೆ install ಮಾಡಬೇಕೆಂದು ಆಯ್ಕೆ ಮಾಡಿ, ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಬೇರೆ ಆಪರೇಟಿಂಗ್  ಸಿಸ್ಟಮ್ ಇದ್ದು ಅದರೊಟ್ಟಿಗೆ ಎಡುಬುಂಟುವನ್ನು ಅಳವಡಿಸಬೇಕೆಂದರೆ ಮೊದಲನೇಯದನ್ನು ಆಯ್ದು ಕೊಳ್ಳಿ . ಇಲ್ಲವಾದರೆ ಎರಡನೇಯದನ್ನು ಆಯ್ದುಕೊಳ್ಳಿ.. Forward ಗುಂಡಿ ಒತ್ತಿ.

ನಂತರದ ಹಂತದಲ್ಲಿ ನಿಮ್ಮ ನೆಲೆಯನ್ನು ನಕ್ಷೆಯಮೇಲೆ ಗುರುತಿಸಿ. Forward ಗುಂಡಿಯನ್ನು ಒತ್ತಿ.

ಮುಂದೆ, ನೀವು ಬಳಸುವ ಕೀಲಿಮಣೆ ಎಂತಹುದು ಎಂದು ತಿಳಿಸಿ (ಸಾಮಾನ್ಯವಾಗಿ ಅದು English (US)) ಆಗಿರುತ್ತದೆ. Forward ಗುಂಡಿಯನ್ನು ಒತ್ತಿ.

ಕೊನೆಯದಾಗಿ, ನಿಮ್ಮ ಹೆಸರು, ಕಂಪ್ಯೂಟರಿಗೊಂದು ಹೆಸರು ಮತ್ತು ಪಾಸ್ ವರ್ಡ್ ಅನ್ನು ನಮೂದಿಸಿ Forward ಗುಂಡಿಯನ್ನು ಒತ್ತಿ.

ಇಲ್ಲಿಂದ ಮುಂದಿನ ಕೆಲಸವನ್ನು ಕಂಪ್ಯೂಟರ್ ಮಾಡುತ್ತದೆ.

ಅನುಸ್ಥಾಪನೆ ಮುಗಿದ ನಂತರ ನಿಮಗೆ Installation Complete ಎಂಬ ಸಂದೇಶ ಕಾಣುತ್ತದೆ. Restart now ಮೇಲೆ click ಮಾಡಿ, DVD ಅನ್ನು ಹೊರಗೆ ತೆಗೆಯಿರಿ.

ಈಗ ಎಡುಬುಂಟು ಉಪಯೋಗಿಸಲು ಸಿದ್ಧ.

ಮುಂದಿನ ಹಂತದಲ್ಲಿ ಅವಶ್ಯಕವಾದಷ್ಟು ಜಾಗ ಕಂಪ್ಯೂಟರ್ ನಲ್ಲಿ ಇದೆಯೇ, ವಿದ್ಯುತ್ ಸಂಪರ್ಕ ಹೊಂದಿದೆಯೇ, ಮತ್ತು Internet ಇದೆಯೇ ಎಂದು ಪರಿಶೀಲಿಸುತ್ತದೆ. ಸುಮ್ಮನೆ Forward ಗುಂಡಿ ಮೇಲೆ ಒತ್ತಿ.

ಸರ್ವರ್ ಅನ್ನು ಸಿದ್ಧಗೊಳಿಸುವುದು

ಟರ್ಮಿನಲ್ (Terminal) ಅನ್ನು ತೆರೆಯಿರಿ. Applications → Accessories → Terminal ಮೇಲೆ ಕ್ಲಿಕ್ ಮಾಡಿ.

ಹಂತ 1:

$ ಚಿಹ್ನೆ ಮುಂದೆ sudo gedit /etc/network/interfaces ಎಂದು type ಮಾಡಿ enter ಒತ್ತಿ. ಆಗ ನಿಮ್ಮ password (ಎಡುಬುಂಟು ಅಳವಡಿಸುವಾಗ ನಮೂದಿಸಿರುವ password) ಅನ್ನು   type ಮಾಡಬೇಕಾಗುತ್ತದೆ. interfaces ಎನ್ನುವ ಕಡತ ತೆರೆದುಕೊಳ್ಳುತ್ತದೆ. ಅದರಲ್ಲಿ ಈ ಕೆಳಕಂಡ ಸಾಲುಗಳನ್ನು ಸೇರಿಸಿ

ಕಡತವನ್ನು ಉಳಿಸಿ (File → Save), ಮುಚ್ಚಿ  (File → Close)

ಹಂತ  2:

ಮತ್ತೆ Terminal ನಲ್ಲಿ  $ ಚಿಹ್ನೆ ಮುಂದೆ  sudo gedit /etc/default/isc-dhcp-server ಎಂದು type ಮಾಡಿ. isc-dhcp-server ಎಂಬ ಕಡತ ತೆರೆದುಕೊಳ್ಳುತ್ತದೆ. ಅಲ್ಲಿ ನೀವು INTERFACES ="" ಎಂಬ ಸಾಲನ್ನು ನೋಡುತ್ತೀರ. ಅದನ್ನು INTERFACES="eth0 eth1" ಎಂದು ಬದಲಾಯಿಸಿ. ಕಡತವನ್ನು ಉಳಿಸಿ, ಮುಚ್ಚಿ.

ಹಂತ  3:

$ ಚಿಹ್ನೆ  ಮುಂದೆ sudo service isc-dhcp-server restart ಎಂದು type ಮಾಡಿ enter ಒತ್ತಿ. ಮತ್ತೆ, sudo gedit /etc/lightdm/lightdm.conf ಎಂದು type ಮಾಡಿ enter ಒತ್ತಿ. ತೆರೆದುಕೊಳ್ಳುವ ಕಡತದಲ್ಲಿ

ಉಳಿದ ಎರೆಡು ಸಾಲುಗಳನ್ನು ಹಾಗೆ ಇರಿಸಿ.  ಕಡತವನ್ನು ಉಳಿಸಿ, ಮುಚ್ಚಿ. ಟರ್ಮಿನಲ್ ನಲ್ಲಿ $ sudo service lightdm restart ಎಂದು type ಮಾಡಿ. ನಿಮ್ಮ ಕಂಪ್ಯೂಟರ್ ಪುನರಾರಂಬಗೊಳ್ಳುತ್ತದೆ. ಎಡುಬುಂಟು ಸರ್ವರ್ ಸಿದ್ಧ.

ಕ್ಲಯಂಟ್ಸ್ ಗಳನ್ನು ಸಿದ್ಧ ಪಡಿಸುವುದು

ಈ ಪುಸ್ತಕದಲ್ಲಿ HCL Winbee Thin client ಗಳನ್ನು ಸಿದ್ಧ ಪಡೆಸುವ ಬಗ್ಗೆ ಮಾಹಿತಿ ಇದೆ. ಕ್ಲಯಂಟ್ ಗಳು  LAN (local area network) ಮೂಲಕ ಸರ್ವರ್ ನೊಡನೆ ಸಂಪರ್ಕ ಹೊಂದಿರುತ್ತದೆ. ಸರ್ವರ್ ಅನ್ನು  on ಮಾಡಿ, ಕ್ಲಯಂಟ್ ಕಂಪ್ಯೂಟರ್ ಶುರುವಾದಾಗ ಈ ಮಾಹಿತಿಯನ್ನು ನಮೂದಿಸಿ.

Connection Manager ಕಿಟಕಿಯಲ್ಲಿ , Configure  ಗುಂಡಿಯ ಮೇಲೆ ಕ್ಲಿಕ್ ಮಾಡಿ, Add ಗುಂಡಿ ಮೇಲೆ ಕ್ಲಿಕ್ ಮಾಡಿ.

Connection type ಕಿಟಕಿ ತೆರೆದುಕೊಳ್ಳುತ್ತಿದೆ

ಪಟ್ಟಿ ಯಿಂದ N-XDMCP ಯನ್ನು ಆಯ್ದುಕೊಳ್ಳಿ

OK ಗುಂಡಿಯನ್ನು ಒತ್ತಿ.

ಚಿತ್ರದಲ್ಲಿ ಇರುವ ಹಾಗೆ ಮಾಹಿತಿಯನ್ನು N-XDMCP ಕಿಟಕಿಯಲ್ಲಿ ನಮೂದಿಸಿ

Edubuntu ಎನ್ನುವುದು connection manager ಪಟ್ಟಿಯಲ್ಲಿ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ setup ಗುಂಡಿಯನ್ನು ಒತ್ತಿ.

Network ಟ್ಯಾಬ್ ನ ಮೇಲೆ ಕ್ಲಿಕ್  ಮಾಡಿದಾಗ ಕಾಣುವ IP Address ಎನ್ನುವಲ್ಲಿ 192.168.0.20 ಎಂದು type ಮಾಡಿ. Gateway ಎನ್ನುವಲ್ಲಿ 192.168.0.1 ಎಂದು type ಮಾಡಿ Add ಗುಂಡಿಯನ್ನು  ಒತ್ತಿ. ನಂತರ Update ಟ್ಯಾಬ್ ನ ಮೇಲೆ ಕ್ಲಿಕ್  ಮಾಡಿ. Enable DHCP Upgrade  ಎನ್ನುವುದನ್ನು ಟಿಕ್ ಮಾಡಿ. ಸರ್ವರ್ ಎನ್ನುವ ಕಡೆ 192.168.0.1 ಎಂದು type ಮಾಡಿ.

Save ಕ್ಲಿಕ್ ಮಾಡಿ, Restart System ಅನ್ನು ಕ್ಲಿಕ್ ಮಾಡಿ

ಕ್ಲಯಂಟ್ ಪುನಃ ಪ್ರಾರಂಭವಾದಾಗ, Connection Managerನಲ್ಲಿ, Edubuntu  ಅನ್ನು ಆಯ್ಕೆ ಮಾಡಿ connect ಮೇಲೆ ಕ್ಲಿಕ್ ಮಾಡಿ.

ಆಗ ಸರ್ವರ್ ಅನ್ನು ಬಳಸಿ ಕ್ಲಯಂಟ್ ಪ್ರಾರಂಭವಾಗುತ್ತದೆ.

ಈ ಪುಸ್ತಕದಲ್ಲಿ HCL Winbee Thin client ಗಳನ್ನು ಸಿದ್ಧ ಪಡೆಸುವ ಬಗ್ಗೆ ಮಾಹಿತಿ ಇದೆ. ಕ್ಲಯಂಟ್ ಗಳು  LAN (local area network) ಮೂಲಕ ಸರ್ವರ್ ನೊಡನೆ ಸಂಪರ್ಕ ಹೊಂದಿರುತ್ತದೆ. ಸರ್ವರ್ ಅನ್ನು  on ಮಾಡಿ, ಕ್ಲಯಂಟ್ ಕಂಪ್ಯೂಟರ್ ಶುರುವಾದಾಗ ಈ ಮಾಹಿತಿಯನ್ನು ನಮೂದಿಸಿ.username – adminpassword – hclpdConnection Manager ಕಿಟಕಿಯಲ್ಲಿ , Configure  ಗುಂಡಿಯ ಮೇಲೆ ಕ್ಲಿಕ್ ಮಾಡಿ, Add ಗುಂಡಿ ಮೇಲೆ ಕ್ಲಿಕ್ ಮಾಡಿ.

ಅಂತರ್ಜಾಲದೊಂದಿಗೆ ಸಂಪರ್ಕ

ಅಂತರ್ಜಾಲದೊಂದಿಗೆ ಸಂಪರ್ಕದ ನಿರ್ವಾಹಣೆಯನ್ನು  Network Manager ಎನ್ನುವ ಅನ್ವಯ ಮಾಡುತ್ತದೆ. Network Manager ತಂತಿ, ನಿಸ್ತಂತು, ಬ್ಲೂಟೂತ್, ಮೊಬೈಲ್ ಬ್ರಾಡ್ ಬ್ಯಾಂಡ್ ಮತ್ತು ಎಲ್ಲಾ ರೀತಿಯ ನೆಟ್ವರ್ಕ್ ಗಳನ್ನು ನಿರ್ವಾಹಿಸುತ್ತದೆ.

ಸಾಮಾನ್ಯವಾಗಿ, ನಿಮ್ಮ ಮಾಡೆಮ್ ನಿಂದ ಬರುವ ಕೇಬಲ್ ಅನ್ನು ನಿಮ್ಮ ಕಂಪ್ಯೂಟರ್ ಗೆ ಜೋಡಿಸಿದರೆ, ತಂತಾನೆ ಅಂತರ್ಜಾಲಕ್ಕೆ ಸಂಪರ್ಕ ಹೊಂದುತ್ತದೆ. ಕೇಬಲನ್ನು ತೆಗೆದಾಗೆ ಲಭ್ಯವಿರುವ ನಿಸ್ತಂತು ನೆಟ್ವರ್ಕ್ ಗೆ ತಂತಾನೆ ಸಂಪರ್ಕ ಹೊಂದುತ್ತದೆ. ಕೆಳಗಿನ ಚಿತ್ರದಲ್ಲಿ  ಸಂಪರ್ಕ್ಗಳ ಮಾಹಿತಿ ನಿಮಗೆ ಕಾಣಿಸುತ್ತದೆ

ನಿಮಗೆ ಎನಾದರೂ ಬದಲಾವಣೆಗಳು ಮಾಡಬೇಕಾದಲ್ಲಿ 'Edit Connection' ಅನ್ನು ಆಯ್ದುಕೊಂಡು ಬದಲಾವಣೆಗಳನ್ನು ಮಾಡಬಹುದು

ಆರ್ಕಾ

ಆರ್ಕಾ ದೃಷ್ಟಿ ದೋಷ ಜನರಿಗೆ, ಹೊಂದಿಕೊಳ್ಳುವ, ವಿಸ್ತರಿಸಬಹುದಾದ, ಮತ್ತು ಪ್ರಬಲವಾದ ಸಹಾಯಕ ತಂತ್ರಜ್ಞಾನ., ಒಂದು ಸ್ಕ್ರೀನ್ ರೀಡರ್. ಧ್ವನಿ ಸಮನ್ವಯ, ಬ್ರೈಲ್, ಮತ್ತು ವರ್ಧನಗಳನ್ನು ಬಳಸಿಕೊಂಡು, ಆರ್ಕಾ ಅನ್ವಯಗಳನ್ನು ಬಳಸಲು  ಸಹಾಯ ಮಾಡುತ್ತದೆ. ಆರ್ಕಾ ಅನೇಕ ಭಾಷೆಗಳಲ್ಲಿ ಸ್ಕ್ರೀನ್ ಓದುತ್ತದೆ.

ಆರ್ಕಾ ಅನ್ನು ಶುರುಮಾಡಲು, Applications -> Universal Access -> Orca ಅನ್ನು ಕ್ಲಿಕ್ ಮಾಡಬೇಕು.

ಮೊದಲ ಬಾರಿ ಬಳಸುವಾಗ Preferences ಗುಂಡಿಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ನಮಗೆ ಬೇಕಾದ ಭಾಷೆ, ಒದುವ ಪರಿಯನ್ನು, ವೇಗವನ್ನು ಆಯ್ದು ಕೊಳ್ಳಬಹದು.

Voice tab ಮೇಲೆ ಕ್ಲಿಕ್ ಮಾಡಿ, ಅಲ್ಲಿ person ಎನ್ನುವ ಬಳಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ, Rate, pitch, volume ಅನ್ನು ಹೊಂದಿಸಬಹುದು.

ಇಷ್ಟು ಮಾಡಿದ ಮೇಲೆ, ಸ್ಕ್ರೀನ್ ಮೇಲೆ ಎಲ್ಲೇ ಕ್ಲಿಕ್ ಮಾಡಿದರು, ನಿಮ್ಮ  ಸ್ಕ್ರೀನ್ ಮೇಲೆ ಇರುವುದನ್ನು ಆರ್ಕಾ ಒದುತ್ತದೆ.

ಮೂಲ: ಕರ್ನಾಟಕ ಶಿಕ್ಷಣ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate