ಕಾಯ್, ಎಂ. ಸೀಗ್‍ಬನ್ –(1918--) ೧೯೮೧ ಸ್ವೀಡನ್-ಭೌತಶಾಸ್ತ್ರ-ರೋಹಿತ ಅಧ್ಯಯನಗಳ ಮುಂದಾಳು.
ಕಾಯ್ ಸೀಗ್‍ಬನ್ 20 ಏಪ್ರಿಲ್ 1918 ರಂದು ಸ್ವೀಡನ್‍ನ ಲಂಡನ್‍ನಲ್ಲಿ ಜನಿಸಿದನು. ಉಪ್ಸಾಲ ಪಟ್ಟಣದ ಜಿಮ್ನಾಷಿಯಂನಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಓದಿದನು. 1936ರಿಂದ 1942ರವರೆಗೆ ಉಪ್ಸಾಲ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಕಾಯ್ ಸೀಗ್‍ಬನ್ 1944ರಲ್ಲಿ ಸ್ಟಾಕ್‍ಹೋಂನಿಂದ ಪದವಿ ಪಡೆದನು. 1942 ರಿಂದ 1951ರವರೆಗೆ ಈತ ಸ್ಟಾಕ್‍ಹೋಂನಲ್ಲಿರುವ ನೊಬೆಲ್ ಇನ್ಸ್ಟಿಟ್ಯೂಟ್‍ನಲ್ಲಿ ಸಂಶೋಧಕ ಸಹಾಯಕನಾಗಿದ್ದನು. 1951ರಿಂದ 1954ರವರೆಗೆ ಸ್ಟಾಕ್‍ಹೋಂನ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕನಾದನು. 1954ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ಸೀಗ್‍ಬನ್ ಅಣ್ವಯಿಕ, ಬೈಜಿಕ, ಪ್ಲಾಸ್ಮಾ ಭೌತಶಾಸ್ತ್ರ, ಎಲೆಕ್ಟ್ರಾನ್ ದ್ಯುತಿ ಶಾಸ್ತ್ರಗಳಲ್ಲಿ ಆಸಕ್ತಿ ಹೊಂದಿದ್ದನು. ಎಲೆಕ್ಟಾನ್ ರೋಹಿತಶಾಸ್ತ್ರದಲ್ಲಿ ಅಪಾರ ಸಾಧನೆ ಮಾಡಿದ ಸೀಗ್‍ಬನ್ ಆಲ್ಪಾ, ಬೀಟಾ,ಗಾಮಾ ಕಿರಣ ರೋಹಿತಶಾಸ್ತ್ರದ ಮುಂಚೂಣಿಗನೆಂದು ಖ್ಯಾತನಾದನು. ಈ ರಂಗದಲ್ಲಿನ ಸಾಧನೆಗಾಗಿ ಕಾಯ್ ಸೀಗ್‍ಬನ್ 1981ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಈತನ ತಂದೆ ಕಾರ್ಲ್ ಮನ್ನೆ ಸೀಗ್‍ಬನ್ 1924ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದನು. 1945 ರಲ್ಲಿ ಲಿಂಡ್‍ಮನ್ ಪ್ರಶಸ್ತಿ 1955ರಲ್ಲಿ ಜೋರ್ಕೆನ್ ಪ್ರಶಸ್ತಿ 1962ರಲ್ಲಿಸೆಲ್ಸಿಯಸ್ ಪದಕ, 1971ರಲ್ಲಿ ಗುಥೆನ್‍ಬರ್ಗ್ ವಿಶ್ವವಿದ್ಯಾಲಯದ ಸಿಕ್ಸೆಟನ್ ಹೆಯ್‍ಮನ್ ಪ್ರಶಸ್ತಿ, 1973ರಲ್ಲಿ ರೊಚೆನ್ಟಿರ್‍ನ ಹಾರಿಸನ್ ಹೋಲ್ ಪ್ರಶಸ್ತಿ, 1979ರಲ್ಲಿ ಟೋರ್‍ಬರ್ನ ಬರ್ಗ್‍ಮನ್ ಪದಕ, 1982ರಲ್ಲಿ ಪಿಟ್ಸ್‍ಬರ್ಗ್ ಅವಾರ್ಡ್ ಫಾರ್ ಸ್ಪೆಕ್ಟ್ರೋಸ್ಕೋಪ್ ಸೀಗ್‍ಬನ್‍ನನ್ನು ಅರಸಿಬಂದವು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/22/2020