অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೈಪಿಡಿ

ಮಕ್ಕಳ ಹಕ್ಕುಗಳ ಕೈಪಿಡಿ

ಜಾರ್ಜ್ ಬರ್ನಾಡ್ ಷಾ ರವರ  ಹೆಸರಾಂತ ಹೇಳಿಕೆಯನ್ನು ನೀವು ಕೇಳಿರಬಹುದು-: ಮಾನವೀಯತೆಯ ಬಿಡುಗಡೆಯ ಏಕಮೇವ ಭರವಸೆ  ನನಗೆ ಅನಿಸುವಂತೆ  ಬೋಧನೆಯಲ್ಲಿದೆ .   ಒಂದು ನಾಗರೀಕತೆಯಾಗಿ  ಭಾರತದಲ್ಲಿ ನಾವು ಶಿಕ್ಷಕರನ್ನು  ದೇವರ ನಂತರದಲ್ಲಿ ಅತಿ ಎತ್ತರವಾದ ಸ್ಥಾನದಲ್ಲಿ ಇರಿಸಿ ಗೌರವಸಿದ್ದೇವೆ.

ಯಾಕೆ ಇರಿಸಬಾರದು


ಶಿಕ್ಷಕನು ವ್ಯಕ್ತಿಯ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾನೆ.  ಉತ್ತಮ ಶಿಕ್ಷಕನು ಚಿಕ್ಕಮಕ್ಕಳ ಮನದಲ್ಲಿ ಗಣನೀಯ ಮತ್ತು ಗೌರವದ ಸ್ಥಾನ ಪಡೆದಿರುವನು. ಮಕ್ಕಳ ಮೇಲೆ  ಪರಿಣಾಮ ಬೀರುವುದು ತಾಯಿತಂದೆಯರ ನಂತರ ಗುರುವೇ ಹೆಚ್ಚು. ಅವರ  ವ್ಯಕ್ತಿತ್ವ ರೂಪಿಸುವಲ್ಲಿ ಅವನ ಕೊಡುಗೆ ಅಪಾರ.
ನಿಮಗೆಲ್ಲ ತಿಳಿದಿರುವಂತೆ, ಎಲ್ಲ ಸಮಾಜಗಳಲ್ಲೂ ಮಕ್ಕಳು  ದುರ್ಬಳಕೆ, ಹಿಂಸೆ ಮತ್ತು ಶೋಷಣೆಗೆ ಒಳಗಾಗಿರುವರು. ಸುತ್ತಮುತ್ತ  ನೋಡಿದರೆ ಸಾಕು ಅದು ನಿಮ್ಮ ಕಣ್ಣಿಗೆ ಬೀಳುವುದು.   ಚಿಕ್ಕ ಮಕ್ಕಳು ಕೆಲಸದಲ್ಲಿ ತೊಡಗಿರುವರು ಮತ್ತು ಶಾಲೆಗೆ  ಹೋಗುವ ಅವಕಾಶದಿಂದ ವಂಚಿತರಾಗಿರುವರು. ಬಹಳ ಜನ ಒಂದಲ್ಲ ಒಂದು ರೀತಿಯ ಬಂಧನಕ್ಕೆ ಒಳಗಾಗಿರುವರು. ತಾಯಿತಂದೆಯರಿಂದ ಮನೆಯಲ್ಲಿ ಹೊಡೆತ, ಶಿಕ್ಷಕರಿಂದ ತರಗತಿಯಲ್ಲಿ ಹೊಡೆತ ಬೀಳುವವು.  ಇಲ್ಲವೇ ಜಾತಿ, ಧರ್ಮದಿಂದಾಗಿ ತಾರತಮ್ಯಕ್ಕೆ ಗುರಿಯಾಗುವರು. ಹೆಣ್ಣು ಮಗುವನ್ನು ಜನ್ಮ ತಾಳಲು / ಹುಟ್ಟಲು ಬಿಡವುದಿಲ್ಲ, ಇಲ್ಲವೇ ಹುಟ್ಟಿದ  ಕೂಡಲೇ ಕೊಲ್ಲುವರು.  ಅವರು ಬಾಲ್ಯ ವಿವಾಹ, ಅತ್ಯಾಚಾರ,  ನಿಷಿದ್ದ ಸಂಭೋಗಕ್ಕೆ ಗುರಿಯಾಗುವರು...
ನಿಜ, ಇದು ಅನೇಕ ಮಕ್ಕಳ ಜೀವನದ ವಾಸ್ತವ. ಕೆಲವರು ನಿಮ್ಮ ತರಗತಿಯಲ್ಲಿ ಅಥವ, ನಿಮ್ಮ ಶಾಲೆಯಲ್ಲಿಯೇ ಇರಬಹುದು.
ಶಿಕ್ಷಕರಾಗಿ ನೀವು ಶೋಷಣೆಗೆ , ದುರ್ಬಳಕೆಗೆ  ಒಳಗಾದ ಮಗುವನ್ನು ನೋಡಿದರೆ ಅಥವಾ ಆ ಬಗ್ಗೆ ಕೇಳಿದರೆ ಏನು ಮಾಡುವವಿರಿ ?

  • ಏನಾದರೂ ಮಾಡುವಿರಲ್ಲವೇ?
  • ವಿಧಿಯನ್ನು ಹಳಿಯುವಿರಾ?
  • ಎಲ್ಲ ಬೆಳೆದವರೂ ಇದನ್ನು ಅನುಭವಿಸಿಯೇ ಇದ್ದಾರೆ, ಅದರಲ್ಲಿ ಏನು ತಪ್ಪು ಎಂದು ವಾದಿಸುವಿರಾ?
  • ಇದು ಸಂಪ್ರದಾಯ, ಪದ್ಧತಿ ಆದುದರಿಂದ ಏನೂ ಮಾಡಲಾಗುವುದಿಲ್ಲ ಎಂದು ವಾದಿಸುವಿರಾ?
  • ಬಡತನವನ್ನು ದೂಷಿಸುವಿರಾ?
  • ಭ್ರಷ್ಟಾಚಾರವನ್ನು ದೂಷಿಸುವಿರಾ?
  • ಏನನ್ನು ಮಾಡದೇ ಕುಟುಂಬವನ್ನು ದೂಷಿಸುವಿರಾ?
  • ಮಗು ನಿಮ್ಮ ವಿದ್ಯಾರ್ಥಿಯಲ್ಲದಿದ್ದರೆ ಏಕೆ ಚಿಂತೆ ಮಾಡಬೇಕು ಎನ್ನುವಿರಾ?
  • ಮಗುವಿಗೆ  ನೈಜವಾಗಿ ರಕ್ಷಣೆ ಬೇಕೆಂದು ಸಾಧಿಸಲು ಸಾಕ್ಷಿ ಹುಡುಕುವಿರಾ?
  • ನಿಮಗೆ ಸಾಕ್ಷಿ ದೊರೆಯುವ ತನಕ ಕ್ರಮತೆಗೆದು ಕೊಳ್ಳದೆ ಕಾಯುವಿರಾ?

ಅಥವಾ ನೀವು ...

  • ಮಗುವನ್ನು ಸುರಕ್ಷಿತ ವಾತಾವರಣದಲ್ಲಿ ಇಡುವ ವ್ಯವಸ್ಥೆ ಮಾಡುವಿರಾ?
  • ಮಗುವಿನ ಜೊತೆ ಮಾತನಾಡುವಿರಾ?
  • ಮಗುವಿನ ತಾಯಿ ತಂದೆಯರ ಜೊತೆ ಮಾತನಾಡಿ, ಮಗುವಿಗೆ ಸುರಕ್ಷಿತ ಬಾಲ್ಯವನ್ನು ಒದಗಿಸುವುದು, ಮಕ್ಕಳ ಯೋಗಕ್ಷೇಮ ನೋಡಿ ಕೊಳ್ಳುವುದು  ಅವರ  ಪ್ರಾಥಮಿಕ ಹೊಣೆ ಎಂಬುದನ್ನು ಮನದಟ್ಟು ಮಾಡುವಿರಾ?
  • ಮಗುವಿಗೆ ಮತ್ತು ಆ ಕುಟುಂಬಕ್ಕೆ ಅಗತ್ಯ ಬಿದ್ದರೆ ಸಹಾಯ ಮಾಡುವಿರಾ?
  • ಮಗುವಿನ ಸುರಕ್ಷಿತೆಗೆ ಮಾರಕವಾಗಿರುವದು ಯಾವುದು ಎಂದು ಕಂಡು ಹಿಡಿಯುವಿರಾ?
  • ಮಗುವಿಗೆ ಹಿಂಸೆಗೆ ಗುರಿಮಾಡಿದವರ ಮೇಲೆ  ಅಥವ  ಮಗುವನ್ನು ಯಾರಿಂದ ರಕ್ಷಿಸಬೇಕು ಅವರ ವಿರುದ್ಧ  ಕ್ರಮ ತೆಗೆದುಕೊಳ್ಳುವಿರಾ?
  • ಪೋಲೀಸರಿಗೆ ಅಥವಾ ಮಕ್ಕಳ  ಸಹಾಯವಾಣಿಗೆ  ಕಾನೂನಿನ ಪ್ರಕಾರ ರಕ್ಷಣೆಗೆ ಮತ್ತು ಪರಿಹಾರಕ್ಕಾಗಿ ವರದಿ ಮಾಡುವಿರಾ ?
  • ನೀವು  ಹೇಗೆ ಸ್ಪಂದಿಸುವಿರಿ ಎಂಬುದು ನಿಮ್ಮನ್ನು ನೀವು ಹೇಗೆ ಪರಿಗಣಿಸುವಿರಿ ಎಂಬುದರ ಮೇಲೆ ಅವಲಂಬಿಸಿದೆ.ನೀವು ನಿಮ್ಮನ್ನು  ಶಿಕ್ಷಕ, ನಾಯಕ,  ಮಾರ್ಗದರ್ಶಕ,ನಂಬುಗೆಯ ಸಲಹೆಗಾರ ಇವರಲ್ಲಿ ಯಾರೆಂದು ಪರಿಗಣಿಸಿರುವಿರಿ ?

ಏಕೆಂದರೆ  ನಾಯಕ,  ಮಾರ್ಗದರ್ಶಕ,ನಂಬುಗೆಯ ಸಲಹೆಗಾರರಾದವರು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವರು,ರಕ್ಷಕರು ಮತ್ತು ಸಮಾಜಿಕ ಬದಲಾವಣೆಯ ನಿಯೋಗಿಯ ಪಾತ್ರ ವಹಿಸುವಿರಾ.
ನೀವು ಶಿಕ್ಷಕರಾಗಿ ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುತ್ತೀರಿ ಏಕೆಂದರೆ..

ನೀವು ಮಗುವಿನ ಸಮುದಾಯ ಮತ್ತು ವಾತಾವರಣದ ಭಾಗವಾಗಿದ್ದೀರಿ. ಆದ್ದರಿಂದ ಅವರ ಹಕ್ಕುಗಳಿಗೆ ಉತ್ತೇಜನ ಕೊಡುವ ಮತ್ತು ಅವರನ್ನು ರಕ್ಷಿಸುವ ಕೆಲಸ ಮಾಡಬೇಕಿದೆ.

ನೀವು ಅವರಿಗೆ ಮಾದರಿ. ನೀವು ಒಂದು ಮಟ್ಟವನ್ನು  ಕಾಪಾಡಿ ಕೊಳ್ಳಲೇಬೇಕು.

ಶಿಕ್ಷಕರಾಗಿ ನೀವು    ವಿದ್ಯಾರ್ಥಿಗಳ  ಬೆಳವಣಿಗೆ, ಅಭಿವೃದ್ಧಿ,ನೆಮ್ಮದಿ ಮತ್ತು ಸುರಕ್ಷತೆಗೆ ಜವಾಬ್ದಾರರಾಗಿರುವಿರಿ.

ನಿಮ್ಮ ಸ್ಥಾನದ ಬಲದಿಂದಾಗಿ ನಿಮಗೆ  ಆ  ಅಧಿಕಾರ ಮತ್ತು ಜವಾಬ್ದಾರಿ ಬಂದಿದೆ.

ನೀವು ಪಠ್ಯಕ್ರಮವನ್ನು ಪೂರೈಸಿ , ಉತ್ತಮ ಫಲಿತಾಂಶವನ್ನು ತರುವ  ಬರಿ ಶಿಕ್ಷಕರಾಗುವುದಕ್ಕಿಂತ ಹೆಚ್ಚಾಗಿ - ಸಾಮಾಜಿಕ ಬದಲಾವಣೆ ತರುವ ಹರಿಕಾರನಾಗುವ ಸಾಧ್ಯತೆ ಇದೆ.

ಈ ಕೈಪಿಡಿಯನ್ನು ನಿಮಗಾಗಿಯೇ ವಿಶೇಷವಾಗಿ ರಚಿಸಲಾಗಿದೆ. ಇದರಿಂದ ನೀವು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಅವರನ್ನು ದುರ್ಬಳಕೆ ಮತ್ತು ಶೋಷಣೆಯಿಂದ ರಕ್ಷಿಸಬಹುದು.

ನೀವು ನ್ಯಾಯವಾದಿಗಳಿಂದ ಕಾನೂನು ಸಲಹೆಯನ್ನು ಪಡೆಯುವುದು ಅತಿ ಮುಖ್ಯ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate