ರಾಷ್ಟ್ರೀಯ ಪ್ರೌಢ / ಮಾಧ್ಯಮಿಕ ಶಿಕ್ಷಣ ಅಭಿಯಾನವು (RMSA) ಪೌಢ ಶಿಕ್ಷಣವನ್ನು ವಿಸ್ತರಿಸುವ ಮತ್ತು ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ. ಅದು VIII ರಿಂದ X ನೆ ತರಗತಿಯ ವರೆಗಿನ ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ದೇಶದ ಮೂಲೆ ಮೂಲೆಗೂ ಹರಡುವ ಗುರಿಹೊಂದಿದೆ. . RSMA ಯು ರಾಷ್ಟ್ರದ ಪ್ರತಿಯೊಂದು ಪ್ರದೇಶದಲ್ಲಿ 5 ಕಿ ಮೀ.ಒಳಗೆ ಪ್ರೌಢ / ಮಾಧ್ಯಮಿಕ ಶಾಲೆಯನ್ನು (Xನೇ ತರಗತಿವರೆಗೆ) ಒದಗಿಸಲು ಯೋಜಿಸಿದೆ. ಭಾರತ ಸರ್ಕಾರದ ಇತ್ತೀಚಿನ ನಡೆಯಾದ ರಾಷ್ಟ್ರೀಯ ಪ್ರೌಢ / ಮಾಧ್ಯಮಿಕ ಶಿಕ್ಷಣ ಅಭಿಯಾನ(RMSA).ವು ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕರಣ (USE) ಗೊಳಿಸುವ ಗುರಿಯನ್ನು ಮುಟ್ಟುವ ಸಾಧನವಾಗಿದೆ.
ಸರ್ಕಾರವು ಹಮ್ಮಿಕೊಂಡ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮವು ಮಿಲಿಯನ್ ಗಟ್ಟಲೆ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ತಲುಪಿಸಲು ಬಹು ಮಟ್ಟಿಗೆ ಯಶಸ್ವಿಯಾಗಿದೆ. ಅದರಿಂದ ಪ್ರೌಢ / ಮಾಧ್ಯಮಿಕ ಶಿಕ್ಷಣದ ಮೂಲ ಸೌಕರ್ಯವನ್ನು ರಾಷ್ಟ್ರದಲ್ಲಿ ಬಲಪಡಿಸುವ ಅಗತ್ಯಉಂಟಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಇದನ್ನು ಗಮನಿಸಿ ಪ್ರೌಢ / ಮಾಧ್ಯಮಿಕ ಶಿಕ್ಷಣ ಕಾರ್ಯಕ್ರಮವಾದ ರಾಷ್ಟ್ರೀಯ ಪ್ರೌಢ / ಮಾಧ್ಯಮಿಕ ಶಿಕ್ಷಣ ಅಭಿಯಾನವನ್ನು (RMSA) 11ನೇ ಯೊಜನಾಅವಧಿಯಲ್ಲಿ ೨೦,೧೨೦ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಯೋಜಿಸಿದೆ.
ಸರ್ವಶಿಕ್ಷಣ ಅಭಿಯಾನದ ಯಶಸ್ವಿ ಅನುಷ್ಠಾನದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಶಾಲೆಯಿಂದ ಹೊರ ಬರುತ್ತಿದ್ದಾರೆ. ಅದರಿಂದ ಪ್ರೌಢ / ಮಾಧ್ಯಮಿಕ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವೂ ತಿಳಿಸಿದೆ.
ಪ್ರೌಢ / ಮಾಧ್ಯಮಿಕ ಶಿಕ್ಷಣದ ಗುರಿಯು , ಉತ್ತಮ ಗುಣ ಮಟ್ಟದ ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ಎಲ್ಲ 14-18 ವಯೋಮಾನದ ಹದಿಹರೆಯದವರಿಗೆ ದೊರೆಯುವಂತೆ, ಪಡೆಯಲು ಶಕ್ತರಾಗುವಂತೆ ,ಅವಕಾಶ ಮಾಡುವ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಳಗಿನವುಗಳ ಸಾಧನೆಗೆ ಎಳೆಸಿದೆ.:
ಯಾವುದೆ ವಾಸ ಸ್ಥಳದಿಂದ ಐದು ಕಿ. ಮೀ ಅಂತರದೊಳಗೆ ಪ್ರೌಢ / ಮಾಧ್ಯಮಿಕ ಶಿಕ್ಷಣಕ್ಕೆ ಅವಕಾಶವಿರುವಂತೆ ಮತ್ತು ಉನ್ನತ ಪ್ರೌಢ / ಮಾಧ್ಯಮಿಕ ಶಾಲೆಯನ್ನು ೭-೧೦ ಕಿ. ಮೀ ದೂರದೊಳಗೆ ಒದಗಿಸುವುದು.
೨೦೧೭ರೊಳಗೆ ಪ್ರೌಢ / ಮಾಧ್ಯಮಿಕ ಶಿಕ್ಷಣಕ್ಕೆ ಸಾರ್ವತ್ರಿಕ ಅವಕಾಶವನ್ನು ಖಾತ್ರಿಗೊಳಿಸುವುದು.(ಜಿ.ಇ.ಆರ್ ೧೦೦%) ಮತ್ತು 2020,ರೊಳಗೆ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ಕ್ರಿಯೆಯ ಸಾರ್ವತ್ರಿಕರಣ.
ಪ್ರೌಢ / ಮಾಧ್ಯಮಿಕ ಶಿಕ್ಷಣದ ಲಭ್ಯತೆಯನ್ನು ವಿಶೇಷವಾಗಿ ಸಮಾಜದ ಆರ್ಥಿಕ ವಾಗಿ ದುರ್ಬಲ ವರ್ಗದವರಿಗೆ, ಶೈಕ್ಷಣಿಕವಾಗಿ ಹಿಂದುಳಿದವರಿಗೆ, ಹುಡುಗಿಯರಿಗೆ, ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ವಿಕಲಚೇತನರಿಗೆ, ನಿರ್ಲಕ್ಷಿತ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ಗುಂಪು, ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರಿಗೆ ಒದಗಿಸಬೇಕು (EBM).
ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣದ ಸವಾಲನ್ನು ಎದುರಿಸಲು ಪ್ರೌಢ / ಮಾಧ್ಯಮಿಕ ಶಿಕ್ಷಣದ ಪರಿಕಲ್ಪನೆಯ ವಿನ್ಯಾಸದ ಮಾದರಿಯ ಬದಲಾವಣೆಯ ಅಗತ್ಯವಿದೆ. ಈ ದಿಶೆಯಲ್ಲಿನ ಮಾರ್ಗದರ್ಶಿ ತತ್ವಗಳು ಹೀಗಿವೆ: ಸಾರ್ವತ್ರಿಕ ಲಭ್ಯತೆ, ಸಮಾನತೆ, ಸಾಮಾಜಿಕ ನ್ಯಾಯ, ಸುಸಂಬದ್ಧತೆ ಮತ್ತು ಅಭಿವೃದ್ಧಿ ಮತ್ತು ಪಠ್ಯದ ರಚನಾತ್ಮಕ ಅಂಶಗಳು. ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣವು ಸಮಾನತೆಯತ್ತ .ಸಾಗಲು ಅವಕಾಶ ಕೊಡುತ್ತದೆ. ಸಮಾನ ಶಾಲೆ ಎಂಬ ಪರಿಕಲ್ಪನೆಯನ್ನು ಉತ್ತೇಜಿಸಲಾಗುವುದು. ಈ ಮೌಲ್ಯಗಳು ವ್ಯವಸ್ಥೆಯಲ್ಲಿ ಬೇರೂರಿದರೆ, ಎಲ್ಲ ರೀತಿಯ ಶಾಲೆಗಳು , ಅನುದದಾನರಹಿತ ಖಾಸಗಿಶಾಲೆಗಳೂ ಸೇರಿದಂತೆ. ಸಮಾಜದಲ್ಲಿ ಅವಕಾಶ ವಂಚಿತ ಮತ್ತು ಬಡತನರೇಖೆಯ ಕೆಳಗಿನ ( ಬಿಪಿ ಎಲ್ ) ಕುಟುಂಬಗಳ ಮಕ್ಕಳನ್ನು ದಾಖಲೆ ಮಾಡಿಕೊಳ್ಳುವ ಮೂಲಕ ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ(ಯು ಎಸ್ ಇ) ಕೊಡುಗೆ ನೀಡಬಹುದು
ಎಲ್ಲ ಪ್ರೌಢ / ಮಾಧ್ಯಮಿಕ ಶಾಲೆಗಳಿಗೆ ಭೌತಿಕ ಸೌಲಭ್ಯಗಳನ್ನು, ಸಿಬ್ಬಂದಿ, ಮತ್ತು ಇತರೆ ಅಗತ್ಯಗಳನ್ನು ಪೂರೈಸುವ ಖಾತ್ರಿ ಇರಬೇಕು. ಅದಕ್ಕೆಅಗತ್ಯವಾದ ಆರ್ಥಿಕ ನೆರವನ್ನು ಸರ್ಕಾರ / ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರಿ ಅನುದಾನಿತ ಶಾಲೆಗಳಿಗೆ ಕೊಡಬೇಕು.ಇತರೆ ಶಾಲೆಗಳ ವಿಷಯದಲ್ಲಿ ಸೂಕ್ತವಾದ ನಿಯಂತ್ರಣ ವ್ಯವಸ್ಥೆ ಇರಬೇಕು.
ಎಲ್ಲ ಹದಿಹರೆಯದವರಿಗೆ ಮಾದರಿಯ ಪ್ರಕಾರ ಪ್ರೌಢ / ಮಾಧ್ಯಮಿಕ ಶಾಲಾ ಶಿಕ್ಷಣದ ಲಭ್ಯತೆಯನ್ನು ಒದಗಿಸಬೇಕು.- ಹತ್ತಿರದ ಸ್ಥಳದಲ್ಲಿ (ಪ್ರೌಢ / ಮಾಧ್ಯಮಿಕ ಶಾಲೆಯು ೫ ೧೦ ಕಿ. ಮೀ. ಅಂತರದೊಳಗೆ ಇರಬೇಕು) ಸುವ್ಯವಸ್ಥಿತ ಮತ್ತು ಸುರಕ್ಷಿತ ಸಾಗಣಿಕೆ ಮತ್ತು ವಸತಿಯನ್ನು ಸ್ಥಳೀಯ ಅನುಕೂಲತೆ ಗಮನಿಸಿ ಮಾಡಬೇಕು. ಮುಕ್ತ ಶಾಲೆಯನ್ನು ಹೊಂದಬಹುದು. ಆದರೂ ಬೆಟ್ಟ ಮತ್ತು ಕಠಿನಪ್ರದೇಶಗಳಲ್ಲಿ ಮಾದರಿಯನ್ನು ತುಸು ಸಡಲಿಸಬಹುದು. ಇಂಥಹ ಪ್ರದೇಶಗಳಲ್ಲಿ ವಸತಿ ಶಾಲೆಯ ಸ್ಥಾಪನೆಗೆ ಆದ್ಯತೆ ಇರಬೇಕು.
ಯಾವುದೆ ಮಗುವು ಲಿಂಗ, ಜಾತಿ, ಆರ್ಥಿಕ, ಸಾಮಾಜಿಕ, ವಿಕಲಚೇತನತೆ ಮತ್ತು ಇತರೆ ಅಡೆತಡೆಗಳಿಂದಾಗಿ ಗುಣಾತ್ಮಕ ಪ್ರೌಢ / ಮಾಧ್ಯಮಿಕ ಶಿಕ್ಷಣದಿಂದ ವಂಚಿತನಾಗದಂತೆ ಖಾತ್ರಿ ನೀಡಬೇಕು. ಬೌದ್ಧಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಿಯುವಿಕೆಯ ಪರಿಣಾಮವಾಗಿ ಪ್ರೌಢ / ಮಾಧ್ಯಮಿಕ ಶಿಕ್ಷಣದ ಗುಣ ಮಟ್ಟ ಹೆಚ್ಚಾಗಬೇಕು.
ಪ್ರೌಢ / ಮಾಧ್ಯಮಿಕ ಶಿಕ್ಷಣ ಪಡೆಯುವ ಎಲ್ಲ ಮಕ್ಕಳೂ ಉತ್ತಮ ಗುಣಮಟ್ಟ ಶಿಕ್ಷಣ ಪಡೆವ ಖಾತ್ರಿ ಇರಬೇಕು.
ಮೇಲೆ ಕಾಣಿಸಿದ ಈ ಎಲ್ಲ ಉದ್ದೇಶಗಳನ್ನು ಸಾಧಿಸಿದರೆ ತನ್ನಿಂದ ತಾನೆ ಇತರೆ ವಿಷಯಗಳ ಜೊತೆ ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿ ಗಣನೀಯ ಪ್ರಗತಿ ಕಾಣುವುದು.
ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣದ ಸಂದರ್ಭದಲ್ಲಿ, ಹೆಚ್ಚಿನ ಪ್ರಮಾಣದ ಹೂಡಿಕೆ, ಹೆಚ್ಚುವರಿ ಶಾಲೆಗಳು, ಹೆಚ್ಚುವರಿ ಕೋಣೆಗಳು, ಶಿಕ್ಷಕರು ಮತ್ತು ಇತರೆ ಸೌಲಭ್ಯಗಳ ಸಂಖ್ಯೆಯ ಸವಾಲನ್ನು ಎದುರಿಸಲು, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗಾಗಿ ಮಾಡಲೇ ಬೇಕು ಇದಲ್ಲದೆ ಶೈಕ್ಷಣಿಕ ಅಗತ್ಯಗಳು, ಮೂಲ ಅಸೆಸ್ಮೆಂಟ್ / ಅವಕಾಶ ಭೌತಿಕ ಮೂಲ ಸೌಕರ್ಯಗಳು, ಮಾನವ ಸಂಪನ್ಮೂಲ, ಶೈಕ್ಷಣಿಕ ಇನ್ಪುಟ್, ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮಕಾರಿ ಮೇಲುಸ್ತುವಾರಿಯು ಅಗತ್ಯ.ಈ ಯೋಜನೆಯು ಮೊದಲಲ್ಲಿ Xನೆ ತರಗತಿಯವರೆಗೆ ಇದ್ದು ತದನಂತರ ಹಿರಿಯ ಪ್ರೌಢ / ಮಾಧ್ಯಮಿಕ ಹಂತವನ್ನು ಸಾಧ್ಯವಾದಷ್ಟು ಮಟ್ಟಿಗೆ ಎರಡು ವರ್ಷದಲ್ಲೆ ಒಳಗೊಳ್ಳುವುದು. ಪ್ರೌಢ / ಮಾಧ್ಯಮಿಕ ಶಿಕ್ಷಣದ ಲಭ್ಯತೆಯನ್ನು ಸಾರ್ವತ್ರಿಕರಿಸಲು ಮತ್ತು ಗುಣ ಮಟ್ಟವನ್ನು ಸುಧಾರಿಸಲು ಈ ಕೆಳ ಕಂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ದೇಶದ ವಿಭಿನ್ನ ಪ್ರದೇಶಗಳಲ್ಲಿ ದೊರೆಯುವ ಶಾಲಾ ಸೌಲಭ್ಯಗಳ ನಡುವೆ ಬಹಳ ವ್ಯತ್ಯಾಸವಿದೆ. ಖಾಸಗಿ ಶಾಲೆ ಮತ್ತು ಸರಕಾರಿ ಶಾಲೆಗಳ ನಡುವೆಯೂ ವ್ಯತ್ಯಾಸವಿದೆ. ಗುಣಾತ್ಮಕ ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕ ವಾಗಿ ಒದಗಿಸಲು ರಾಷ್ಟ್ರ ಮಟ್ಟದಲ್ಲಿ ವಿಶೇಷ ವಿನ್ಯಾಸದ ಮಂಡಳಿಯ ಮಾದರಿಯ ರಚನೆ ಅತ್ಯಗತ್ಯ. ಪ್ರತಿರಾಜ್ಯದ / ಕೇಂದ್ರಾಡಳಿತ ಪ್ರದೇಶಗಳ ಭೌಗೋಳಿಕ, ಸಾಂಸ್ಕೃತಿಕ, ಸಮಾಜಿಕ, ಭಾಷಾ ಮತ್ತು ಜನಸಂಖ್ಯೆಯ ಅಂಶಗಳನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳದೆ ಅಗತ್ಯವಿದ್ದಲ್ಲಿ ಸ್ಥಳೀಯ ಅಂಶಗಳನ್ನೂ ಪರಿಗಣಿಸಬೇಕು. ಪ್ರೌಢ / ಮಾಧ್ಯಮಿಕ ಶಾಲೆಯನ್ನು ಸಾಧಾರಣವಾಗಿ ಕೇಂದ್ರೀಯ ವಿದ್ಯಾಲಯಗಳ ಮಾದರಿಗೆ ತುಲನಾತ್ಮಕವಾಗಿರುವಂತೆ ಇರಬೇಕು. ಮೂಲ ಸೌಕರ್ಯಗಳ ಮತ್ತು ಕಲಿಕೆಯ ಸಂಪನ್ಮೂಲದ ಅಭಿವೃದ್ಧಿಯನ್ನು ಈ ವಿಧಾನದಲ್ಲಿ ಮಾಡಲಾಗುವುದು:
ಅಗತ್ಯ ಮೂಲ ಸೌಲಭ್ಯಗಳಾಧ , ಕಪ್ಪು ಹಲಗೆ, ಪೀಠೋಪಕರಣಗಳು,ಗ್ರಂಥಾಲಯ, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ, ಗಣಕಯಂತ್ರ ಪ್ರಯೋಗಾಲಯ (ಕಾಂಪ್ಯೂಟರ್ ಲ್ಯಾಬ್) ಗಳು, ಶೌಚಾಲಯ (ಟಾಯಲೆಟ್) ಗಳನ್ನು ಒದಗಿಸಲಾಗುವುದು.
ಹೆಚ್ಚುವರಿ ಶಿಕ್ಷಕರನ್ನು , ಸೇವಾನಿರತ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. VIII ನೇ ತರಗತಿ ಪಾಸಾದ ಮಕ್ಕಳಿಗೆ ಕಲಿಕೆ ಸಾಮರ್ಥ್ಯ ಹೆಚ್ಚಿಸಲು ಸೇತು ಬಂಧ ತರಗತಿಗಳು. NCF, 2005 ಮಾದರಿಗಳಿಗೆ ಅನುಗುಣವಾಗಿ ಪಠ್ಯಕ್ರಮದ ವಿಮರ್ಶೆ.
ಗ್ರಾಮಾಂತರ ಮತ್ತು ಕಠಿನ ಪ್ರದೇಶ, ಬೆಟ್ಟ ಪ್ರದೇಶದ ಶಿಕ್ಷಕರಿಗೆ ವಸತಿ ಸೌಕರ್ಯ. ಮಹಿಳಾ ಬೋಧಕರಿಗೆ ಆದ್ಯತೆಯ ಮೇರೆಗೆ ವಸತಿ ನೀಡಲಾಗುವುದು.
ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (SC,ST,OBC) ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಹಾಸ್ಟೆ ಲ್ ಗಳು / ವಸತಿ ಶಾಲೆಗಳು, ನಗದು ಉತ್ತೇಜಕಗಳು, ಸಮವಸ್ತ್ರ, ಪುಸ್ತಕಗಳು,ಹೆಣ್ಣು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ (ಟಾಯಿಲೆಟ್) ಗಳು ಪ್ರೌಢ / ಮಾಧ್ಯಮಿಕ ಹಂತದಲ್ಲಿ ಅರ್ಹತೆಯಿರುವ ವಿದ್ಯಾರ್ಹತೆಯಿರುವ/ ಅಗತ್ಯವಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುವುದು.
ಸರ್ವಾಂಗಿಣ ಶಿಕ್ಷಣವು ಎಲ್ಲ ಚಟುವಟಿಕೆಗಳ ವಿಭಿನ್ನ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ಎಲ್ಲ ಶಾಲೆಗಳಲ್ಲಿ ಅಗತ್ಯ ಸೌಲಭ್ಯ ದೊರಕಿಸಲು ಪ್ರಯತ್ನ ಮುಕ್ತ ಮತ್ತು ದೂರ ಶಿಕ್ಷಣದ ಅಗತ್ಯಗಳ ವಿಸ್ತರಣೆ , ವಿಶೇಷವಾಗಿ ಯಾರಿಗೆ ಪೂರ್ಣಾವಧಿ ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಆಗುವುದಿಲ್ಲವೋ, ಅಂಥಹವರಿಗಾಗಿ/ ಮತ್ತು ಪೂರಕವಾಗಿ/ ಮುಖಾ ಮುಖಿ ಬೋಧನೆಯ ಹೆಚ್ಚಳ . ಈ ವ್ಯವಸ್ಥೆಯಿಂದ ಶಾಲೆಯಿಂದ ಹೊರಗಿರುವ ಮಕ್ಕಳ ಶಿಕ್ಷಣಕ್ಕೆ ತುಂಬ ಸಹಾಯಕ ವಾಗುವುದು. ಸಾಂಸ್ಥಿಕ ಪರಿವರ್ತನೆ ಮತ್ತು ಸಂಪನ್ಮೂಲ ಸಂಸ್ಥೆಗಳ ನ್ನು ಬಲಪಡಿಸುವುದು.
ಕೇಂದ್ರದ ಸಹಾಯಕ್ಕೆ ರಾಜ್ಯಗಳು ಅಗತ್ಯ. ಆಡಳಿತಾತ್ಮಕ ಪರಿವರ್ತನೆ ಮಾಡುವುದು ಪೂರ್ವ ಶರತ್ತಾಗಿರುವುದು. ಸಂಸ್ಥಾ ಪರಿವರ್ತನೆಯು ಒಳಗೊಂಡಿರವವು ಶಾಲಾ ಆಡಳಿತ ಪರಿವರ್ತನೆಯು - ತಮ್ಮ ನಿರ್ವಹಣೆ ಮತ್ತು ಉತ್ತರ ದಾಯಿತ್ವ ವನ್ನು ವಿಕೇಂದ್ರಿಕರಿಸಿ ಶಾಲೆಯ ಸಾಧನೆಯನ್ನು ಸುಧಾರಿಸುವುದು.
ವಿವೇಚನಾಯುಕ್ತ ನೀತಿಯ ಮೇರೆಗೆ ಶಿಕ್ಷಕರ ನೇಮಕಾತಿ ನಿವೃತ್ತಿ, ತರಬೇತಿ , ಸಂಭಾವನೆ ಮತ್ತು ವೃತ್ತಿಯಲ್ಲಿ ಮುಂಬಡ್ತಿ.
ಶಾಲಾ ಆಡಳಿತದಲ್ಲಿ , ನವೀಕರಣ / ಈ-ಆಡಳಿತ (ಈ. ಗರ್ವನೆನ್ಸ) ಮತ್ತು ವಿಕೇಂದ್ರಿಕರಣಗಳು ಸೇರಿದಂತೆ ಸುಧಾರಣೆ ಮಾಡುವುದು.
ಪ್ರೌಢ / ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯ ಎಲ್ಲ ಹಂತಗಳಲ್ಲಿ ಅಗತ್ಯ ವೃತ್ತಿಪರ ಮತ್ತು ಶೈಕ್ಷಣಿಕ ಇನ್ ಪುಟ್ ಗೆ ಅವಕಾಶ, ಅದೇನೆಂದರೆ, ಶಾಲಾ ಹಂತದಿಂದ ಮೇಲ್ಪಟ್ಟು. ಮತ್ತು ನಿಧಿಯ ತ್ವರಿತ ವಿತರಣೆಗಾಗಿ ಮತ್ತು ಅವುಗಳ ಗರಿಷ್ಟ ಬಳಕೆಗಾಗಿ ಆರ್ಥಿಕ ಕಾರ್ಯವಿಧಾನಗಳ ಕ್ರೋಢಿಕರಣ.
ವಿವಿಧ ಹಂತದಲ್ಲಿ ಸಂಪನ್ಮೂಲ ಸಂಸ್ಥೆಗಳ ಅಗತ್ಯ ಬಲ ವೃದ್ಧಿ, ಉದಾಹರಣೆಗೆ, ರಾಷ್ಟ್ರೀಯ ಮಟ್ಟದಲ್ಲಿ NCERT ( RIEs ಸೇರಿದಂತೆ ), NUEPA ಮತ್ತು NIOS, ; ರಾಜ್ಯ ಮಟ್ಟದಲ್ಲಿ SCERTs, ರಾಜ್ಯದ ಮುಕ್ತ ಶಾಲೆಗಳು, SIEMATs, ಇತರೆ ವಿಶ್ವ ವಿದ್ಯಾಲಯಗಳ ಶಿಕ್ಷಣ ವಿಭಾಗಗಳು, ಪ್ರಖ್ಯಾತ ವಿಜ್ಞಾನ/ಸಮಾಜ ವಿಜ್ಞಾನ/ ಮಾನವಿಕ ಶಿಕ್ಷಣ/ ಶಿಕ್ಷಣ ಕಾಲೇಜುಗಳು (ಸಿಟಿಇ ಗಳು) / ಕೇಂದ್ರ ಸರ್ಕಾರದ ಪ್ರಾಯೋಜಿತ ಶಿಕ್ಷಕರ ಶಿಕ್ಷಣ (ಟೀಚರ್ ಎಜುಕೇಷನ್) ದಲ್ಲಿ ಕೈಗೊಂಡ ಶಿಕ್ಷಣಶಾಸ್ತ್ರದಲ್ಲಿ ಮುಂದುವರೆದ ಅಧ್ಯಯನ ಸಂಸ್ಥೆಗಳು(ಐಎಎಸ್ಇಗಳು)
ಪಂಚಾಯತ್ ರಾಜ್ ಸಂಸ್ಥೆಗಳ , ಮುನಿಸಿಪಾಲಿಟಿ ಸಂಸ್ಥೆಗಳ , ಸಮುದಾಯದ ತಾಯಿತಂದೆಯರು , ಪ್ರೌಢ / ಮಾಧ್ಯಮಿಕ ಶಿಕ್ಷಣದಲ್ಲಿ ಹಿತಾಸಕ್ತಿ ಇರುವ ವ್ಯವಸ್ಥಾಪಕರ , ಶಾಲಾ ಆಡಳಿತ ಸಮಿತಿ , ಶಿಕ್ಷಕ-ತಂದೆ ತಾಯಿ ಪೋಷಕರ (ಟೀಚರ್ ಪೇರೆಂಟ) ಸಮಿತಿ , ಶಿಕ್ಷಕರ ಸಂಘಗಳ ನ್ನು ಯೋಜನಾ ಪ್ರಕ್ರಿಯೆ, ಅನುಷ್ಠಾನ, ಮೇಲುಸ್ತುವಾರಿ ಮತ್ತು ಮೌಲ್ಯಮಾಪನಗಳಲ್ಲಿ ತೊಡಗಿಸಿಕೊಳ್ಳ ಬೇಕು.
ಸರ್ಕಾರವು ನಾಲ್ಕು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಕೈಗೊಂಡಿದೆ ಕೇಂದ್ರ ಸರ್ಕಾರವು ನಾಲ್ಕು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಕೈಗೊಂಡಿದೆ ಶಾಲೆಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ (ICT@ schools) ರಾಜ್ಯಸರ್ಕಾರಗಳಿಗೆ , ಕಾಂಪ್ಯೂಟರ್ ಶಿಕ್ಷಣಕ್ಕಾಗಿ , ಪ್ರೌಢ / ಮಾಧ್ಯಮಿಕ ಮತ್ತು ಹಿರಿಯ ಪ್ರೌಢ / ಮಾಧ್ಯಮಿಕ ಶಾಲೆಗಳಲ್ಲಿ ಕಾಂಪ್ಯೂಟರ್ ಸಹಾಯದ ಶಿಕ್ಷಣ ನೀಡುವುದಕ್ಕಾಗಿ
ಕೇಂದ್ರೀಯ ವಿದ್ಯಾಲಯ ಮತ್ತು ಜವಾಹರ್ ನವೋದಯ ವಿದ್ಯಾಲಯಗಳು
ಕೇಂದ್ರೀಯ ವಿದ್ಯಾಯಗಳ ಮತ್ತು ಜವಹರ್ ನವೋದಯ ವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ ಮಾರ್ಗದರ್ಶಿ ಶಾಲೆಗಳಾಗಿರುವುದರಿಂದ ಅವುಗಳ ಪಾತ್ರವನ್ನು ಬಲಪಡಿಸಬೇಕು.
ಹಣಕಾಸು ಪೂರೈಕೆಯ ವಿಧಾನ ಮತ್ತು ಬ್ಯಾಂಕ್ ಖಾತೆ ಪ್ರಾರಂಭ
ಕೇಂದ್ರಸರ್ಕಾರವು ಶೆಖಡಾ 75 ವೆಚ್ಚವನ್ನು ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ( ಹಣ ಕಾಸನ್ನು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳಬೇಕಾದಲ್ಲಿ) ಎಲ್ಲ ರಾಜ್ಯಗಳಿಗೆ /ಕೇಂದ್ರ ಆಡಳಿತ ಪ್ರದೇಶ ಗಳಿಗೆ 11ನೇ ಯೋಜನೆಯ ಅವಧಿಯಲ್ಲಿ ಈಶಾನ್ಯ ರಾಜ್ಯಗಳನ್ನು ಹೊರತು ಪಡಿಸಿ ನೀಡುವುದು. ಈಶಾನ್ಯ ರಾಜ್ಯಗಳಿಗೆ ಶೆಖಡಾ 90 ಭಾಗವನ್ನು ಕೇಂದ್ರವೇ ನೀಡುವುದು.
ಎಲ್ಲ ರಾಜ್ಯಗಳು / ಕೇಂದ್ರ ಆಡಳಿತ ಪ್ರದೇಶ ಎಲ್ಲವುಗಳ ಅನುಷ್ಠಾನ ವೆಚ್ಚದ 25% ಅನ್ನು ಮೊದಲು ( ಹಣ ಕಾಸನ್ನು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳಬೇಕಾದಲ್ಲಿ) 11ನೆ ಯೋಜನಾ ಅವಧಿಯಲ್ಲಿ ಭರಿಸಬೇಕು. ಈಶಾನ್ಯ ರಾಜ್ಯಗಳು 10% ವೆಚ್ಚವನ್ನು ಮಾತ್ರ ಕೊಡಬೇಕಾಗುವುದು. ರಾಜ್ಯ ಸರ್ಕಾರವು –ವ್ಯಾಪಕ ಆರ್ಥಿಕ ನಿರ್ವಹಣಾ ವ್ಯವಸ್ಥೆಯನ್ನು ನಿರ್ಮಿಸಿ ಹಣಕಾಸಿನ ವರ್ಗಾವಣೆ ಮತ್ತು ಬಳಕೆಗಳನ್ನು ಈಗಿರುವ ಸರ್ವ ಶಿಕ್ಷಣ ಅಭಿಯಾನ (ಎಸ್ ಎಸ್ ಎ) ಸೊಸೈಟಿಗಳ ಮೂಲಕ ಮಾಡುವುದು. ಇದರಿಂದ ಪಾರದರ್ಶಕತೆ, ಕಾರ್ಯಕ್ಷಮತೆ, ಉತ್ತರದಾಯಿತ್ವ ಮತ್ತು ಅಂತಿಮ ಫಲಿತದ ವರೆಗಿನ ನಿಧಿಯ ಬಳಕೆಯಲ್ಲಿ ಹಾದು ಹೋದ ಹಾದಿಯನ್ನು ಗುರುತಿಸಬಹುದು.
ರಾಜ್ಯ, ಜಿಲ್ಲೆ, ಶಾಲಾ ಮಟ್ಟದಲ್ಲಿ ನಿಧಿಗಾಗಿ ಪ್ರತ್ಯೇಕ ಖಾತೆಯನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತೆರೆಯಬೇಕು. ಮುಖ್ಯೋಪಧ್ಯಾಯರು ಅಥವ ಪ್ರಾಂಶುಪಾಲರು ,ಶಾಲಾ ಶಿಕ್ಷಣ ಸಮಿತಿಯ ಉಪ ಪ್ರಾಂಶುಪಾಲರು ಶಾಲಾ ಮಟ್ಟದಲ್ಲಿ ಜಂಟಿ ಖಾತೆ ಹೊಂದಿರುವರು..ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಯು ಜಿಲ್ಲಾ ಮಟ್ಟದಲ್ಲಿ ಜಂಟಿ ಖಾತೆಯನ್ನು ಹೊಂದಿರುವರು.
12ನೆ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಹಂಚಿಕೆ ಪ್ರಮಾಣವು 50:50. ಪ್ರಮಾಣಕ್ಕೆ ಬದಲಾಗುವುದು. ಈಶಾನ್ಯ ರಾಜ್ಯಗಳಿಗೆ ಹಂಚಿಕೆ ಪ್ರಮಾಣವು ಎರಡೂ, 11ನೆ ಮತ್ತು 12ನೆ ಪಂಚವಾರ್ಷಿಕ ಯೋಜನೆಗಳೀಗೆ 90:10 ಪ್ರಮಾಣದಲ್ಲಿರುವುದು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 5/3/2020
ಶಿಫಾರಸು ಮಾಡಲಾದ- ಉತ್ತಮ- ಬಳಕೆ,ನೀರಿನ ಗುಣಮಟ್ಟ ಮಾನದಂಡ ...
ಸರ್ವ ಶಿಕ್ಷಣ ಅಭಿಯಾನದ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ರಾಷ್ಟ್ರೀಯ ಉಚ್ಛತಾ ಶಿಕ್ಷಣ ಅಭಿಯಾನ ಅಂದರೆ ರಾಷ್ಟ್ರೀಯ ...
ಪ್ರಧಾನ ಮಂತ್ರಿ ಸುರಕ್ಷಿತಾ ಮತ್ರಿತ್ವ ಅಭಿಯಾನ ಬಗ್ಗೆ ಇಲ್...