ಗ್ರೀಕ್ ಗಾದೆಯೊಂದು ಹೇಳುವಂತೆ Excerciese to the body, music to the soul ಅಂದರೆ ದೇಹಕ್ಕೆ ವ್ಯಾಯಾಮ ಆತ್ಮಕ್ಕೆ ಸಂಗೀತ ಮನುಷ್ಯನಿಗೆ ಬೇಕೆಂಬುದು ಸಾರ್ವಕಾಲಿಕ ಸತ್ಯವಾದುದು. ಆದ್ದರಿಂದ ಯೋಗ ಏರೋಬಿಕ್, ಕ್ಯಾಲಸ್ಥಾನಿಕ್, ಜಿಮ್ನಾಸ್ಟಿಕ್ ನಮ್ತಹ ವ್ಯಾಯಾಮದ ಮಂದಿರಗಳು ಪಟ್ಟಣ ಪ್ರದೇಶದ ಆರೋಗ್ಯ ಕೇಂದ್ರಗಳಾಗಿ ಆರ್ಥಿಕ ಲಾಭವನ್ನು ಪಡೆಯುವ ವ್ಯವಸ್ಥೆಯಾಗಿದೆ. ಇದಕ್ಕೆ ಸಂಗೀತವೂ ಹೊರತಾಗಿಲ್ಲ. ಸದೃಢವಾದ ದೇಹವನ್ನು ನಿರ್ಮಿಸಿ ಅದರಲ್ಲಿ ಸದೃಢ ಮನಸ್ಸನ್ನು ಸ್ಥಿರಗೊಳಿಸುವಲ್ಲಿ ಅನೇಕ ವ್ಯಾಯಾಮ ಪೂರಕವಾಗಿದ್ದು ಇದು ದೈಹಿಕ ಶಿಕ್ಷಣದ ಪ್ರಕಾರಗಳಲ್ಲಿ ಬಹಳ ಮುಖ್ಯವಾದದ್ದು.
ಇವುಗಳನ್ನು ಅಭ್ಯಾಸಗೊಳಿಸುವ ದೃಷ್ಠಿಯಿಂದ ಹಾಗೂ ಅವುಗಳ ವಿಶೇಷತೆಯನ್ನು ಆದರಿಸಿ ಈ ಕೆಳಗಿನಂತೆ ವ್ಯಾಯಾಮಗಳನ್ನು ವಿಂಗಡಿಸಲಾಗಿದೆ.
ಕ್ರಮಬದ್ಧವಾದ ಪಾದಗಳ ಮತ್ತು ಕೈಗಳ ಚಲನೆಯಲ್ಲಿ ಪಾದದ ಚಲನೆಯನ್ನು ಮುಖ್ಯವಾಗಿ ತೆಗೆದುಕೊಳ್ಳುವುದರಿಂದ ಇದನ್ನು ಅಥವಾ FootDrill ಎಂದು ಹೇಳುವರು .
ಉದಾ: ಮಾರ್ಚ್ ಫಾಸ್ಟ್ (ತೇಜ್ ಚಲ್) ಇಲ್ಲಿ ಕಾಲಿನ ಚಲನೆಯನ್ನು ಗಣನೆಗೆ ತೆಗೆದುಕೊಂಡು ಅಜ್ಞೆಗಳನ್ನು ಪ್ರತಿಬಾರಿ ಕಾಲುಗಳಿಗೆ ನೀಡುತ್ತಾ ಹೋಗಲಾಗುವುದು ಆದರೆ ಕೈಗಳು ನಡಿಗೆಯಲ್ಲಿ ಶಿಸ್ತು ಬದ್ಧವಾಗಿ ಚಲಿಸುವುದು ಕಡ್ಡಾಯವಾಗಿದೆ.
ಪದಕವಾಯಿತು ದೈಹಿಕ ಶಿಕ್ಷಣದ ಗುರಿಯನ್ನು ಯಶಸ್ವಿಗೊಳಿಸಲು ಇರುವ ಪ್ರಮುಖವಾದ ಸಾಧನವಾಗಿದೆ. ಇವುಗಳಿಂದ ಶಾಲೆಯಲ್ಲಿ, ಕ್ರೀಡಾ ತರಬೇತಿಯಲ್ಲಿ ಆಟೋಟಗಳಲ್ಲಿ ಶಿಸ್ತು ತರಲು ಈ ಚಟುವಟಿಕೆಯನು ಮಾಡಿಸಲಾಗುವುದು.
ಈ ಚಟುವಟಿಕಗಳು ಕ್ರೀಡೋತ್ಸವ, ರಾಷ್ಟ್ರೀಯ ಉತ್ಸವ, ಶಾಲಾ ಉತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟು ಜನರಿಗೆ ಮನರಂಜನೆ ಹಾಗೂ ಆಥಿತಿಗಳಿಗೆ ಏಕಮೇಯವಾಗಿ ಗೌರವ ಸಲ್ಲಿಸುತ್ತದೆ. ಇದರಿಂದ ಮಕ್ಕಳಲ್ಲಿ ಸಹಿಷ್ಣತೆಯ ಗುಣದೊಂದಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಇಂತಹ ಚಟುವಟಿಕೆಗಳು ದೇಶ ಪ್ರೇಮ ವಿನಯ ತ್ಯಾಗಗಳಿಗೆ ಸ್ಪೂರ್ತಿಯನ್ನು ತುಂಬುತ್ತದೆ.
ಕೊನೆಯ ಮಾರ್ಪಾಟು : 7/20/2020