অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾರತದಲ್ಲಿ ಇ -ಆಡಳಿತ

ಭಾರತದಲ್ಲಿ ಇ -ಆಡಳಿತ: ಸೇವಾ ವಿತರಣೆ ವ್ಯವಸ್ಥೆಯಲ್ಲಿ ಮಾರ್ಪಾಡು

ಭಾರತದಲ್ಲಿ ಇ -ಆಡಳಿತ “ವ್ಯವಹಾರಿಕ” ಘಟ್ಟ ತಲುಪಿರುತ್ತದೆ, ಹಾಗೂ ಕೇಂದ್ರ ಸರ್ಕಾರದ ನಿಯೋಗಗಳಿಂದ ಮತ್ತು ವಿಭಿನ್ನ ರಾಜ್ಯ ಸರ್ಕಾರ ಇಲಾಖೆಗಳಿಂದ ನಾಗರೀಕರಿಗೆ, ವ್ಯವಹಾರಗಳಿಗೆ ಮತ್ತು ಸರ್ಕಾರಿ ಸಂಘಟನೆಗಳಿಗೆ / ಸಂಸ್ಥೆಗಳಿಗೆ ಒದಗಿಸಲಾಗುವ ವಿವಿಧ ಸೇವೆಗಳನ್ನು ನೀಡುತ್ತಿದೆ. ರಾಷ್ಟ್ರೀಯ ಈ-ಆಡಳಿತ ಯೋಜನೆ 2006 ರಲ್ಲಿ ಪ್ರಾರಂಭಗೊಂಡು, ಎಲ್ಲಾ ಸರ್ಕಾರಿ ಸೇವೆಗಳು ಭಾರತ ರಾಷ್ಟ್ರಾದ್ಯಂತ ಸ್ಥಾಪನೆಗೊಳ್ಳುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಸಾಮಾನ್ಯ ಮನುಷ್ಯನಿಗೆ ಆತನ ನೆರೆಹೊರೆಯಲ್ಲಿ ಸುಲಭವಾಗಿ ಒದಗಿಸುವಂತೆ ಪ್ರಯತ್ನಿಸುತ್ತಿದೆ. ಫೆಬ್ರುವರಿ 2012 ರ ವರೆಗೆ ಸುಮಾರು 97,159 (ಸಿ ರು ಸಿ ಸುದ್ದಿಪತ್ರ - 2012) ಸಾಮಾನ್ಯ ಸೇವಾ ಕೇಂದ್ರಗಳು ವಿವಿಧ ಅಂಕಿತ ಹೆಸರುಗಳೊಂದಿಗೆ ಕಾರ್ಯಕಾರಿವಾಗಿರುತ್ತವೆ ಮತ್ತು ಜನರಿಗೆ ಸೇವೆಗಳನ್ನು ವತರಿಸಲು ಪ್ರಾರಂಭಿಸಿದೆ. ಹಲವಾರು ಸಂಸ್ಥೆಗಳಿಂದ, ಬಹು ಸ್ಪಷ್ಟವಾಗಿ ಸಾಮಾನ್ಯ ಸೇವಾ ಕೇಂದ್ರ ಗಳಿಂದ, ಗ್ರಾಮಿಣ ಪ್ರದೇಶಗಳು ಅಭ್ಯುದಯವಾಗುತ್ತಿರುವ ಐ. ಸಿ. ಟಿ ಉಪಕ್ರಮಗಳ ಲಾಭಗಳನ್ನು ಪಡೆಯಲು ಸಜ್ಜಾಗುತ್ತಿದ್ದು, ಭಾರತೀಯ ಅಭಿವ್ರದ್ಧಿ ದ್ವಾರ ದ ಪ್ರಾರಂಭ ಬಹು ಅಪೇಕ್ಷಿತ ಪರಿಮಿಡಿ ಹಾಗೂ ಸೇವೆಗಳನ್ನು, ಗ್ರಾಮೀಣ ಜನರ ಬದುಕಿನಲ್ಲಿ ವ್ಯತ್ಯಸವನ್ನುಂಟು ಮಾಡುವ, ಪ್ರಾದೇಶಿಕ ಭಾಷೆಗಳಲ್ಲಿ ನೀಡುತ್ತಿದೆ. ಆನ್ ಲೈನ್ ನಾಗರೀಕ ಸೇವೆಗಳು, ರಾಜ್ಯ ಸ್ಪಷ್ಟ ಈ-ಆಡಳಿತ ಉಪಕ್ರಮಗಳು ಮತ್ತು ಆನ್ ಲೈನ್ ಕಾನೂನು ಸೇವೆಗಳು, ಸಂಚಾರಿ ಆಡಳಿತ, ಮಾಹಿತಿ ಹಕ್ಕು, ಇತ್ಯಾದಿ ನೀಡುವುದರ ಮೂಲಕ ಭಾರತದಲ್ಲಿ ಚಲನೆಯಲ್ಲಿರು ಈ-ಆಡಳಿತ ಚಳವಳಿಯನ್ನು ನೆರವು ನೀಡುವುದು ಪೋರ್ಟಲ್ ನ ಈ-ಆಡಳಿತ ವಿಭಾಗದ ಮುಖ್ಯ ಕೇಂದ್ರಬಿಂದು ವಾಗಿದೆ. ಗ್ರಾಮ ಮಟ್ಟದ ಉದ್ಯಮಿಗಳಿಗೆ ಅಧಿಕಾರ ನೀಡುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಸಂಪನ್ಮೂಲ ವಸ್ತುಗಳಿಂದ ಅಭಿವ್ರದ್ಧಿಗೊಳಿಸಲು ಮತ್ತು ತಮ್ಮದೆಯಾದ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲು, ಭಾರತೀಯ ಅಭಿವ್ರದ್ಧಿ ದ್ವಾರವು ಗ್ರಾಮ ಮಟ್ಟದ ಉದ್ಯಮಿಗಳಮೂಲೆ ವೆಂಬ ಒಂದು ಹೊಸ ಭಾಗವನ್ನು ಸೇರ್ಪಡೆ ಮಾಡಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate