ಮಾಹಿತಿಗಾಗಿ ಹಕ್ಕು ಎಂದರೆ ಏನು ?
ಮಾಹಿತಿಗಾಗಿ ಹಕ್ಕು ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ಹೊಂದಲ್ಪಟ್ಟಿರುವ ಅಥವಾ ನಿಯಂತ್ರಣದಲ್ಲಿರುವ ಮಾಹಿತಿಗೆ ಸುಲಭಗಮ್ಯತೆಯನ್ನು ಒದಗಿಸುತ್ತದೆ ಹಾಗು ಇದು ಕಾಮಗಾರಿಯನ್ನು, ದಾಖಲಾತಿಗಳನ್ನು, ದಾಖಲೆಗಳನ್ನು ಪರಿಶೀಲಿಸಲು, ಟಿಪ್ಪಣಿಗಳನ್ನು ತೆಗೆದುಕೊಳ್ಳಲು, ದಸ್ತಾವೇಜುಗಳು /ದಾಖಲೆಗಳು ಹಾಗು ಸಾಮಗ್ರಿಗಳ ಪ್ರಮಾಣೀಕೃತ ಮಾದರಿಗಳನ್ನು ಹಾಗು ವಿದ್ಯುನ್ಮಾನ ನಮೂನೆಯಲ್ಲಿ ಸಂಗ್ರಹಿಸಿದಲಾಗಿರುವ ಮಾಹಿತಿಯನ್ನು ಪದೆಯುವುದನ್ನೂ ಒಳಗೊಂಡಿದೆ.
ಮಾಹಿತಿಯನ್ನು ಯಾರು ಕೇಳಬಹುದು ?
ಯಾವುದೇ ನಾಗರಿಕನು ಲಿಖಿತ ರೂಪದಲ್ಲಿ ಒಂದು ಅರ್ಜಿಯನ್ನು ಸಲ್ಲಿಸುವ ಮೂಲಕ ಅಥವಾ ವಿದ್ಯುನ್ಮಾನೀಯ ಮಾರ್ಗದಲ್ಲಿ ಅಂಗ್ಲ/ಹಿಂದಿ/ಅರ್ಜಿಯನ್ನು ಯಾವ ಪ್ರಾಂತ್ಯದಲ್ಲಿ ಸಲ್ಲಿಸಲಾಗುತ್ತಿರುವುದೋ, ಅ ಪ್ರಾಂತ್ಯದ ಅಧಿಕೃತ ಭಾಷೆಯಲ್ಲಿ , ನಿರ್ದಿಷ್ಟ ಶುಲ್ಕಗಳೊಂದಿಗೆ ಮಾಹಿತಿಗಾಗಿ ಕೋರಬಹುದು.
ಮಾಹಿತಿಯನ್ನು ಯಾರು ಒದಗಿಸುತ್ತಾರೆ ?
ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವೂ ಓರ್ವ ಕೇಂದ್ರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ವಿವಿಧ ಹಂತಗಳಲ್ಲಿ ನೇಮಕ ಮಾಡಬೇಕು, ಅವರು ಸಾರ್ವಜನಿಕರಿಂದ ಮಾಹಿತಿಗಾಗಿ ಕೋರಿಕೆಗಳನ್ನು ಸ್ವೀಕರಿಸುವರು. ಎಲ್ಲಾ ಆಡಲಿತಾತ್ಮಕ ಘಟಕಗಳಲ್ಲಿನ/ಕಚೇರಿಗಳಲ್ಲಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲು ವ್ಯವಸ್ಥೆ ಮಾಡುವರು. ಮಾಹಿತಿಗಾಗಿನ ಅರ್ಜಿಯನ್ನು/ಕೋರಿಕೆಯನ್ನು ಮಾಹಿತಿಯನ್ನು ಒದಗಿಸುವ ಮೂಲಕ ಅಥವಾ ಕೋರಿಕೆಯನ್ನು ತಿರಸ್ಕರಿಸುವ ಮೂಲಕ 30 ದಿನಗಳ ಒಳಗೆ ವಿಲೇವಾರಿ ಮಾಡಬೇಕು.
ಅಧಿನಿಯಮದ ಅಡಿಯಲ್ಲಿ ಮಾಹಿತಿಗಾಗಿ ಹಕ್ಕು ಅರ್ಜಿ ಶುಲ್ಕಗಳನ್ನು ಯುಐಎಡಿಎ ನ ಪಾವತಿ ಮತ್ತು ಲೆಕ್ಕಪತ್ರಗಳ ಅಧಿಕಾರಿಗಳಿಗೆ ಪಾವತಿಸ ಬೇಕಾದ ನಗದು/ಡಿಮಾಂಡ ಡ್ರಾಫ್ಟ್/ಭಾರತೀಯ ಅಂಚೆ ಇಲಾಖೆಯ ಆದೇಶ, ಇವುಗಳ ರೂಪದಲ್ಲಿ ಪಾವತಿಸಬೇಕು.
1 | ಅದರ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು ಹಾಗು ಕರ್ತವ್ಯಗಳು | ಸವಿವರ ಮಾಹಿತಿ |
2 | ಮೇಲ್ವಿಚಾರಣೆ ಹಾಗು ಉತ್ತರದಾಯಿತ್ವವೂ ಸೇರಿದಂತೆ, ತನ್ನ ನಿರ್ಣಯಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ, ಅನುಸರಿಸುತ್ತಿರುವ ಕಾರ್ಯವಿಧಾನಗಳು | ಭಾರತ ಸರ್ಕಾರದ ಮಂತ್ರಾಲಯಗಳು/ಇಲಾಖೆಗಳಿಗೆ ಅನ್ವಯಗೊಳ್ಳುವ ಸಾಮಾನ್ಯ ರೂಢಿಯ ನಡವಳಿಕೆಗಳು/ನಿರ್ದೇಶನಗಳು ಯುಐಎಡಿಎಗೆ ಕೂಡ ತನ್ನ ಆಡಳಿತ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನ್ವಯವಾಗುತ್ತದೆ. |
3 | ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವಲ್ಲಿ ಅದು ನಿರ್ದಿಷ್ಠ ಪಡಿಸಿರುವ ಪರಿಮಾಣಗಳು. | ಭಾರತ ಸರ್ಕಾರದ ಮಂತ್ರಾಲಯಗಳು/ಇಲಾಖೆಗಳಿಗೆ ಅನ್ವಯಗೊಳ್ಳುವ ಸಾಮಾನ್ಯ ರೂಢಿಯ ನಡವಳಿಕೆಗಳು/ನಿರ್ದೇಶನಗಳು ಯುಐಎಡಿಎಗೆ ಕೂಡ ತನ್ನ ಆಡಳಿತ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನ್ವಯವಾಗುತ್ತದೆ. |
4 | ಅದರ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವಲ್ಲಿ ಅದರ ಸಿಬ್ಬಂದಿಗಳು ಬಳಸುವ ನಿಯಮಗಳು, ನಿಯಂತ್ರಣಗಳು, ನಿರ್ದೇಶನಗಳು, ಕೈಪಿಡಿಗಳು ಮತ್ತು ದಾಖಲೆಗಳು | ಭಾರತ ಸರ್ಕಾರದ ಮಂತ್ರಾಲಯಗಳು/ಇಲಾಖೆಗಳಿಗೆ ಅನ್ವಯಗೊಳ್ಳುವ ಸಾಮಾನ್ಯ ರೂಢಿಯ ನಡವಳಿಕೆಗಳು/ನಿರ್ದೇಶನಗಳು ಯುಐಎಡಿಎಗೆ ಕೂಡ ತನ್ನ ಆಡಳಿತ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನ್ವಯವಾಗುತ್ತದೆ. |
5 | ಅದು ತನ್ನ ನಿಯಂತ್ರಣದ ಅಡಿಯಲ್ಲಿ ಹೊಂದಿರುವ ಪ್ರವರ್ಗವಾರು ದಾಖಲೆಗಳ ಒಂದು ತ:ಖ್ತೆ | ಯುಐಎಡಿಎಯು ಯುಐಡಿ ಯೋಜನೆಗೆ ಸಂಬಂಧಿತ ದಾಖಲೆಗಳನ್ನು ಹೊಂದಿದೆ ಹಾಗು ಅವುಗಳು ಜಾಲತಾಣದಲ್ಲಿ ಯುಐಎಡಿಎ ದಾಖಲೆಗಳ ವಿಭಾಗದಲ್ಲಿ ಲಭ್ಯವಿವೆ. |
6 | ಸಲಹೆಸಮಾಲೋಚನೆಗಾಗಿ ಇರುವ ಯಾವುದಾದರೂ ನಿರ್ದಿಷ್ಟ ವ್ಯವಸ್ಥೆಯ ವಿವರಗಳು, ಅಥವಾ ಕಾರ್ಯನೀತಿಯನ್ನು ರೂಪಿಸುವುದಕ್ಕೆ ಅಥವಾ ಅದನ್ನು ಅನುಷ್ಥಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸದಸ್ಯರಿಂದ ಇರುವ ಪ್ರತಿನಿಧಿತ್ವ | ಯುಐಎಡಿಎ ಒಂದು ನಿರ್ದಿಷ್ಠ ವಿಷಯಗಳ ಮೇಲೆ ವಿವಿಧ ಪಾಲುದಾರರ ಜೊತೆ ಸಮಾಲೋಚಿಸುತ್ತದೆ. ಮುಂದುವರಿದು, ಸಾರ್ವಜನಿಕ ಸದಸ್ಯರಿಂದ ಇಮೇಲ್ ಮೂಲಕ ಸಲಹೆಗಳನ್ನು ತೆಗೆದುಕೊಳ್ಳುತ್ತದೆ. |
7 | ಅದು ರಚಿಸಿರುವ ಎರಡು ಅಥವಾ ಅದಕ್ಕೂ ಹೆಚ್ಚಿನ ವ್ಯಕ್ತಿಗಳನ್ನು ಒಳಗೊಂಡಿರುವ ಮಂಡಳಿಗಳು,ಮಂಡಲಗಳು, ಸಮಿತಿಗಳು ಹಾಗು ಇತರೆ ಸಂಸ್ಥೆಗಳು, ಹೆಚ್ಚಿನದ್ದಾಗಿ, ಇವುಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿದ್ದವೆ, ಅಥವಾ ಅಂತಹ ಸಭೆಗಳ ನಡಾವಳಿಗಳನ್ನು ಸಾರ್ವಜನಿಕರು ವೀಕ್ಷಿಸುವಂತಿದ್ದವೆ.. | ಯುಐಎಡಿಎ ರಚಿಸಿರುವ ಸಮಿತಿಗಳು:
ಯುಐಎಡಿಎ ನೀಡಿರುವ ಪತ್ರಿಕಾ ಪ್ರಕಟಣೆಗಳು ಯುಐಎಡಿಎನ ಜಾಲತಾಣದಲ್ಲಿ ಲಭ್ಯವಿವೆ. (ಸವಿವರ ಮಾಹಿತಿ ) |
8 | ತನ್ನ ಅಧಿಕಾರಿಗಳ ಮತ್ತು ಸಿಬ್ಬಂದಿಯ ನಿರ್ದೇಶಿಕೆ | ನಮ್ಮನ್ನು ಸಂಪರ್ಕಿಸಿ’ಯನ್ನು ನೋಡಿ (ಸವಿವರ ಮಾಹಿತಿ ) |
9 | ತನ್ನ ನಿಯಂತ್ರಣಗಳಲ್ಲಿ ಅನುವು ಮಾಡಿರುವ ರೀತಿಯಲ್ಲಿ ಪರಿಹಾರದ ವ್ಯವಸ್ಥೆಯೂ ಒಳಗೊಂಡಂತೆ , ತನ್ನ ಪ್ರತಿಯೋರ್ವ ಅಧಿಕಾರಿಗೆ ಮತ್ತು ಸಿಬ್ಬಂದಿಯು ಸ್ವೀಕರಿಸಿರುವ ಮಾಸಿಕ ವೇತನ. | (ಸವಿವರ ಮಾಹಿತಿ ) |
10 | ಎಲ್ಲಾ ಯೋಜನೆಗಳು, ಪ್ರಸ್ತಾಪಿಸಲಾಗಿರುವ ವೆಚ್ಚಗಳು ಹಾಗು ಮಾಡಲಾಗಿರುವ ವಿತರಣೆಗಳ ಮೇಲಿನ ವರದಿಗಳನ್ನು ಸೂಚಿಸಿದಂತೆ,ತನ್ನ ಪ್ರತಿಯೊಂದು ಸಂಸ್ಥೆಗೂ ಹಂಚಿಕೆ ಮಾಡಲಾಗಿರುವ ಅಯವ್ಯಯ, | (ಸವಿವರ ಮಾಹಿತಿ ) |
11 | ಹಂಚಿಕೆಯಾದ ಮೊತ್ತ ಹಾಗು ಅಂತಹ ಕಾರ್ಯಕ್ರಮಗಳ ಫಾಲಾನುಭಾವಿಗಳ ವಿವರಗಳನ್ನು ಒಳಗೊಂಡಂತೆ, ಸಹಾಯಾನುಧಾನದ ಕಾರ್ಯಕ್ರಮಗಳ ಅನುಷ್ಥಾನದ ಕಾರ್ಯವೈಖರಿ. | ಅನ್ವಯಿಸುವುದಿಲ್ಲ. |
12 | ರಿಯಾಯಿತಿಗಳು, ಪರವಾನಿಗೆಗಳು ಅಥವಾ ಅದು ನೀಡಿರುವ ಮಂಜೂರಾತಿಗಳು | ಅನ್ವಯಿಸುವುದಿಲ್ಲ. |
13 | ಒಂದು ವಿದ್ಯುನ್ಮಾನ ನಮೂನೆಯಲ್ಲಿ ಇಳಿಸಲ್ಪಟ್ಟಿರುವಂತೆ, ಲಭ್ಯವಿರುವ ಅಥವಾ ಅದು ಹೊಂದಿರುವ ಮಾಹಿತಿಯ ವಿವರಗಳು | Information in electronic form are available on the website. |
14 | ಸಾರ್ವಜನಿಕ ಬಳಕೆಗಾಗಿ ಯಾವುದಾದನ್ನು ನಿರ್ವಹಿಸಿದ್ದಲ್ಲಿ, ಒಂದು ಪುಸ್ತಕ ಭಂಡಾರ ಅಥವಾ ವಾಚನಾಲಯದ ಕೆಲಸದ ವೇಳೆಯೂ ಸೇರಿದಂತೆ, ಮಾಹಿತಿಯನ್ನು ಪಡೆಯುವುದಕ್ಕಾಗಿ ನಾಗರಿಕರಿಗೆ ಲಭ್ಯವಿರುವ ಅನುಕೂಲತೆಗಳ ವಿವರಗಳು | ಯುಐಎಡಿಎ ನಿರ್ವಹಿಸುವ ಯಾವುದೇ ಸಾರ್ವಜನಿಕ ಪುಸ್ತಕ ಭಂಡಾರವಾಗಲೀ ಅಥವಾ ವಾಚನಾಲಯವಾಗಲೀ ಇರುವುದಿಲ್ಲ. |
15 | ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರೆ ವಿವರಗಳು | (ಸವಿವರ ಮಾಹಿತಿ ) |
ಮೂಲ :ಯು ಐ ಡಿ ಆ ಐ
ಕೊನೆಯ ಮಾರ್ಪಾಟು : 2/15/2020
ಮಾಹಿತಿ ಹಕ್ಕು ಕಾಯಿದೆ ಬಳಸುವುದು ಹೇಗೆ ಕುರಿತು ಇಲ್ಲಿ ತಿ...
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...
ಮಗುವಿನ ಹಕ್ಕುಗಳು ಬಗ್ಗೆ ಇಲ್ಲಿ ತಿಳಿಸಲಾಗಿದೆ.
ರೈಲ್ವೇ ಪ್ಲಾಟ್ ಫಾರಂಗಳಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷ...