ಡಿಜಿಟಲ್ ಇಂಡಿಯಾ ಕಾರ್ಯಕ್ರಮ
- ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಇದರ ಗುರಿಯು " ಭಾರತ ವನ್ನು ಡಿಜಿಟಲ್ ಆಗಿ ಸಬಲೀಕರಣ ಗೊಳಿಸುವುದು ಮತ್ತು ಜ್ಞಾನದ ಭಂಡಾರ ವನ್ನು ಹೆಚ್ಹಿಸುವುದು ಆಗಿದೆ "
- ಇದರ ಉದ್ದೇಶವು I T ( ಇಂಡಿಯನ್ ಟ್ಯಾಲೆಂಟ್ ಅಂದರೆ ಭಾರತದ ಪ್ರತಿಭೆ ) ಮತ್ತು I T (ಇನ್ಫಾರ್ಮಶನ್ ಟೆಕ್ನಾಲಜಿ ಅಂದರೆ ಮಾಹಿತಿ ತಂತ್ರಜ್ಞಾನ ) ಇವೆರಡರ ಸುಮ್ಯೋಜನೆ ಇಂದ I T (ಇಂಡಿಯಾ ಟುಮಾರೋ) ನಾಳಿನ ಭವ್ಯ ಭಾರತ ವನ್ನು ನಿರ್ಮಿಸುವುದು ಆಗಿದೆ.
- ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ದೂರದೃಷ್ಟಿಯು ಇಲೆಕ್ಟ್ರಾನಿಕ್ ಉದ್ಯಮಗಳು , ಉತ್ಪನ್ನಗಳು ಮತ್ತು ಉತ್ಪಾದನ ಕ್ಷೇತ್ರ ದಲ್ಲಿ ಬೆಳವಣಿಗೆ ಸಾಧಿಸುವುದು ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸುವುದು ಆಗಿದೆ.
- ಈ ಕಾರ್ಯಕ್ರಮವು (೧) ಎಲ್ಲಾ ನಾಗರಿಕರಿಗೂ ಮೂಲಭೂತ ಸೌಕರ್ಯ ಒದಗಿಸುವುದು (೨) ಬೇಡಿಕೆಯ ಮೇರೆಗೆ ಆಡಳಿತ ಮತ್ತು ಸೇವೆಗಳನ್ನು ಒದಗಿಸುವುದು (೩) ಡಿಜಿಟಲ್ ವ್ಯವಸ್ಥೆ ಯಲ್ಲಿ ಸಮಾಜವನ್ನು ಸಬಲೀಕರಣ ಗೊಳಿಸುವುದು ಎಂಬ ಮೂರು ಅಂಶ ಗಳನ್ನು ಹೊಂದಿದೆ
- ಈ ಕಾರ್ಯಕ್ರಮವನ್ನು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಸಹಯೋಗದಲ್ಲಿ ರೂಪಿಸಿ ಪ್ರಸ್ತುತ ಪಡಿಸಿದೆ.
ಮುಖ್ಯ ಉದ್ದೇಶಗಳು :
- ಅಂಚೆ ಕಚೇರಿ , ಶಾಲಾ ಕಾಲೇಜು , ಗ್ರಾಮ ಪಂಚಾಯತಿ ಮುಂತಾದ ಸ್ಥಳ ಗಳಲ್ಲಿ ಡಿಜಿಟಲ್ ಪಾಯಿಂಟ್ ಗಳನ್ನು ಸ್ಥಾಪಿಸಿ ಕಾರ್ಯಕ್ರಮ ವನ್ನು ಹಮ್ಮಿಕೊಂಡು ನಾಗರಿಕರಿಗೆ ಶಿಕ್ಷಣ ಮತ್ತು ಮಾಹಿತಿ ಒದಗಿಸುವುದು.
- ಡಿಜಿಟಲ್ ಮಾಧ್ಯಮ ಮದ ಪ್ರಚಾರ ಮತ್ತು ಕಾರ್ಯಕ್ರಮ ದಮೂಲಕ ಎಲ್ಲಾ ನಾಗರಿಕರಲ್ಲಿ ಸಂಪರ್ಕ ಏಪ್ರಡಿಸುವುದು
- ಕಾರ್ಯಕ್ರಮದ ಉದ್ದೇಶ, ಸೇವೆಗಳು, ಪ್ರಯೋಜನ ಗಳ ಬಗ್ಗೆ ಎಲ್ಲಾ ಮಾಹಿತಿ ಒದಗಿಸುವುದು
- ನೂತನ ಮತ್ತು ಚಾಲ್ತಿಯಲ್ಲಿರುವ ಇ-ಸೇವೆ ಯೋಜನೆ ಗಳನ್ನು ಜನಪ್ರಿಯ ಗೊಳಿಸುವುದು
- ಡಿಜಿಟಲ್ ಇಂಡಿಯಾ ವಾರ ದಲ್ಲಿ ಮತ್ತು ನಂತರವೂ ಡಿಜಿಟಲ್ ಸಾಕ್ಷರತೆ, ಸೈಬರ್ ಭದ್ರತೆ , ಸೈಬರ್ ನೈರ್ಮಲ್ಯ , ಡಿಜಿಟಲ್ ಮೂಲ ಸೌಕರ್ಯ ಗಳ ಸದ್ಬಳಕೆ ಬಗ್ಗೆ ನಾಗರಿಕರಿಗೆ ತಿಳುವಳಿಕೆ ನೀಡುವುದು.
- ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿ ನಾಗರೀಕ ರನ್ನು ಪ್ರೇರೇಪಿಸಿ ಸಂಪರ್ಕ ಎಪ್ರಡುವಂತೆ ಮಾಡುವುದು ಮತ್ತು ಅನುದಾನ ಒದಗಿಸುವುದು
ಡಿಜಿಟಲ್ ಇಂಡಿಯಾ ವಾರ ಕಾರ್ಯಕ್ರಮ
- ಡಿಜಿಟಲ್ ಇಂಡಿಯಾ ವಾರ ಕಾರ್ಯಕ್ರಮ ವನ್ನು ಪ್ರಧಾನಿ ನರೇಂದ್ರ ಮೋದಿಯವರು ಜುಲೈ ಒಂದು ೨೦೧೫ ರಂದು ಔಪಚಾರಿಕವಾಗಿ ನೆರವೇರಿಸುವರು ಈ ಸಂದರ್ಭ ದಲ್ಲಿ ಕೆಲ ನೂತನ ಉತ್ಪನ್ನ ಗಳು ಮತ್ತು ನೂತನ ಇ-ಸೇವೆ ಗಳಾದ ಡಿಜಿಟಲ್ ಲಾಕರ ಅನ್ನು ಸಹ ಬಿಡುಗಡೆ ಮಾಡುವರು
- ಜುಲೈ 1 ರಿಂದ ಒಂದು ವಾರ ಪರಿಣಾಮಕಾರಿಯಾಗಿ ಜನತೆಗೆ ಡಿಜಿಟಲ್ ಭಾರತದ ಸಂದೇಶವನ್ನು ತಲುಪಿಸಲು ದೇಶಾದ್ಯಂತ ಸಂಘಟಿತ ಜಾಗೃತಿ ಮತ್ತು ಸಂವಹನ ಒಳಗೊಂಡ ಕಾರ್ಯಕ್ರಮಗಳನ್ನು ಮೀಸಲಿಡಗಿದೆ .ಈ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಲು ಎಲ್ಲಾ ಮಟ್ಟದಲ್ಲಿ ಅಂದರೆ ಹಳ್ಳಿ , ತಾಲೂಕ , ಮುನಿಸಿಪಾಲಿಟಿ , ಜಿಲ್ಲಾ, ರಾಜ್ಯ ,ಮತ್ತು ರಾಷ್ಟ್ರ ದಲ್ಲಿ ನಡಿಸಿ ಸಮಸ್ತ ಭಾರತೀಯರಿಗೂ ಡಿಜಿಟಲ್ ಭಾರತ ಕಾರ್ಯಕ್ರಮದ ಮಾಹಿತಿಯನ್ನು ಪರಿಣಾಮಯಾಗಿ ಒದಗಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಪಾಯಿಂಟುಗಳನ್ನು ಸಾಮಾನ್ಯ ಸೇವಾ ಕೇಂದ್ರಗಳು, ಅಂಚೆ ಕಚೇರಿ , ಶಾಲೆಗಳು , ಗ್ರಾಮ ಪಂಚಾಯತ್ ಗಳಲ್ಲಿ ದೊಡ್ಡ ಪ್ರಮಾಣ ದಲ್ಲಿ ಆಯೋಜಿಸಲಾಗಿದೆ
- ಈ ಡಿಜಿಟಲ್ ನಡೆಯಲ್ಲಿ ಭಾಗವಹಿಸಿ ಭಾರತವನ್ನು ಡಿಜಿಟಲ್ ಆಗಿ ಮುನ್ನಡೆಸುವಲ್ಲಿ ನಿಮ್ಮ ಕೊಡುಗೆ ನೀಡಿ
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.