ಡಿಜಿ ಲಾಕರ್ ಒಂದು ವೈಯಕ್ತಿಕ ಸಂಗ್ರಹ ಸ್ಥಳ, ಇದನ್ನು ಪ್ರತಿ ನಿವಾಸಿಯ ಆಧಾರ್ ಸಂಖ್ಯೆಯನ್ನು ಆಧರಿಸಿ ಲಿಂಕ್ ಮಾಡಲಾಗಿ ಮೀಸಲಿಟ್ಟ ವೈಯಕ್ತಿಕ ಸಂಗ್ರಹ ಸ್ಥಳ ಎಂದು ಪರಿಗಣಿಸಬಹುದು. ವಿವಿಧ ಇಲಾಖೆಗಳು ಜಾರಿಮಾಡಿದ ಇ-ದಾಖಲೆಗಳನ್ನುಯೂನಿಫಾರ್ಮ್ ರಿಸೋರ್ಸ್ ಐಡೆಂಟಿಫೈಯರ್ (URI) ಅಡಿಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಬಳಸಬಹುದು. ಇ ಸೈನ್ ಸೌಲಭ್ಯವನ್ನು ಡಿ ಜಿ ಲಾಕರ್ ನ ಒಂದು ಭಾಗ ವಾಗಿ ನೀಡಲಾಗುವುದು ಇದನ್ನು ಇ ದಾಖಲೆ ಗಳಿಗೆ ಇ ಸೈನ್ ಮಾಡಲು ಬಳಸಬಹುದಾಗಿದೆ
ಡಿ ಜಿ ಲಾಕರ್ ಅನ್ನು ವೆಬ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದಾಗಿದೆ.
ಪ್ರತಿ ನಿವಾಸಿಯ ಡಿ ಜಿ ಲಾಕರ್ ಖಾತೆ ಕೆಳಗಿನ ವಿಭಾಗಗಳನ್ನು ಹೊಂದಿದೆ
ಈ ವಿಭಾಗವು ನೀವು ಪ್ರವೇಶಿಸಿದಾಗ ನೋಡುವ ಮೊದಲ ಪುಟ ಇದರಲ್ಲಿ ನೀವು ವೀಕ್ಷಿಸಿದ ಎಲ್ಲಾ ನಿಮ್ಮ ದಾಖಲೆಗಳ ಸಾರಾಂಶ ತೋರಿಬರುತ್ತದೆ.
ಈ ವಿಭಾಗವು ಸರ್ಕಾರ ಅಥವಾ ಡಿ ಜಿ ಲಾಕರ್ ನಲ್ಲಿ ಭಾಗವಹಿಸುವ ಇತರ ಸಂಸ್ಥೆಗಳು ನೀಡಲಾಗುವ ದಾಖಲೆಗಳನ್ನು, ಪ್ರಮಾಣಪತ್ರಗಳ URI ಗಳನ್ನು (ಕೊಂಡಿಗಳನ್ನು ) ತೋರಿಸುತ್ತದೆ.
ಈ ವಿಭಾಗವು ನೀವು ಅಪ್ಲೋಡ್ ಮಾಡುವ ಎಲ್ಲಾ ದಾಖಲೆಗಳನ್ನು ತೋರಿಸುತ್ತದೆ. ನೀವು ದಾಖಲೆ ಪ್ರಕಾರ, ಇ ಸೈನ್ ನವೀಕರಿಸಬಹುದು ಮತ್ತು ಈ ಅಪ್ಲೋಡ್ ದಾಖಲೆಗಳನ್ನು ಹಂಚಿಕೊಳ್ಳ ಬಹುದು
ಹಂಚಿಕೆ ಮಾಡಲಾದ ಡಾಕ್ಯುಮೆಂಟ್ಗಳು - ಈ ವಿಭಾಗವು ನೀವು ಇತರರೊಂದಿಗೆ (ಇಮೇಲ್ ಮೂಲಕ) ಹಂಚಿಕೊಂಡ ದಾಖಲೆಗಳ ಪಟ್ಟಿಯನ್ನು ತೋರಿಸುತ್ತದೆ.
ಈ ವಿಭಾಗ ನೀವು ಡಿ ಜಿ ಲಾಕರ್ ಖಾತೆಯಲ್ಲಿ ನಡಿಸಿದ ಚಟುವಟಿಕೆಗಳ ದಾಖಲೆ ಆಗಿದೆ. ನೀವು ಲಾಗ್ ಆದ ವಿವರ,ಫೈಲ್ ಅಪ್ಲೋಡ್, ಡೌನ್ಲೋಡ್, ಇ ಸೈನ್ ಇತ್ಯಾದಿ ಚಟುವಟಿಕೆಗಳ ಬಗ್ಗೆ ವಿವರಗಳನ್ನು ಒಳಗೊಂಡಿರುತ್ತದೆ.
ಈ ವಿಭಾಗದಲ್ಲಿ ಸರ್ಕಾರ ಅಥವಾ ಇತರ ಇ - ಇಲಾಖೆಗಳು ನಿಮಗೆ ನೀಡಿದ ಯಾವುದೇ ದಾಖಲೆ / ಪ್ರಮಾಣಪತ್ರವನ್ನು URI (ಲಿಂಕ್) ರೂಪದಲ್ಲಿ ಕಾಣಿಸುತ್ತದೆ.
ಪ್ರತಿ ನಿವಾಸಿ ಡಿಜಿಟಲ್ ಲಾಕರ್ ಕೆಳಗಿನ ವಿಭಾಗಗಳನ್ನು ಹೊಂದಿದೆ:
ನನ್ನ ಪ್ರಮಾಣಪತ್ರಗಳುಈ ವಿ ಭಾಗವು ಎರಡು ಉಪ ವಿಭಾಗಗಳನ್ನು ಒಳಗೊಂಡಿದೆ
ಇದು ಸರಕಾರ ಅಥವಾ ಇತರ ಇಲಾಖೆಗಳು ನಿವಾಸಿಗಳಿಗೆ ಬಿಡುಗಡೆ ದಾಖಲೆಗಳನ್ನು (ಕೊಂಡಿಗಳು) ಹೊಂದಿರುತ್ತದೆ. ಪ್ರತಿ ಡಾಕ್ಯುಮೆಂಟ್ ಕೆಳಗಿನ ಮಾಹಿತಿಯನ್ನು ಹೊಂದಿರುತ್ತದೆ.
URI
ಡಾಕ್ಯುಮೆಂಟ್ ಹೆಸರು
ನೀಡಲಾದ ದಿನಾಂಕ
ಹಂಚಿಕೊಳ್ಳುವ ವಿವರ
ಡಾಕ್ಯುಮೆಂಟ್ ಹೆಸರು
ಅಪ್ಲೋಡ್ ದಿನಾಂಕ
ಸ್ಟೇಟಸ್ : ಡಾಕ್ಯುಮೆಂಟ್ ಇ ಸೈನ್ ಆಗಿದೆಯಾ ಇಲ್ಲವಾ ಎಂದು ಸೂಚಿಸಲು.
ಆಕ್ಷನ್ : ಡಿಜಿಟಲ್ ಲಾಕರ್ ನಿಂದ ಹೊರಬರಲು ಅಥವಾತೆಗೆದುಹಾಕಲು, ಡಾಕ್ಯುಮೆಂಟ್ ಅಳಿಸಲು.
ವಿವರಗಳು
ಹಂಚಿಕೊಳ್ಳಿ: ಇಮೇಲ್ ಮೂಲಕ ಅಪ್ಲೋಡ್ ಡಾಕ್ಯುಮೆಂಟ್ ಹಂಚಿಕೊಂಡಿರುವುದು
ಡಿ ಜಿ ಸೈನ್ ಆಯ್ಕೆ : ಒಮ್ಮೆ ದಾಖಲೆಯಲ್ಲಿ ಇ ಸೈನ್ ಮಾಡಿದನಂತರ √ ತೋರಿಸಲಾಗುತ್ತದೆ
ಸ್ವ ಭೂಮಿಕೆ (ಮೈ ಪ್ರೊಫೈಲ್ )ಈ ವಿಭಾಗವು ಸಂಪೂರ್ಣವಾಗಿ ನಿವಾಸಿಯ (ಹೆಸರು, ಜನನ, ಲಿಂಗ, ವಸತಿ ವಿಳಾಸ, ಇಮೇಲ್, ಮೊಬೈಲ್ ಸಂಖ್ಯೆ ದಿನಾಂಕ) ಯುಐಡಿಎಐ ಡೇಟಾಬೇಸ್ ವಿವರವನ್ನು ತೋರಿಸುತ್ತದೆ.
ನನಗೆ ನೀಡುವವರು :
ಈ ವಿಭಾಗವು ನಿವಾಸಿಗೆ ದಸ್ತಾವೇಜುಗಳನ್ನು ನೀಡುವವರ ಹೆಸರು ಮತ್ತು ನೀಡಲ್ಪಟ್ಟ ದಸ್ತಾವೇಜುಗಳನ್ನು ಸಂಖ್ಯೆ ತೋರಿಸುತ್ತದೆ.
ನನ್ನನ್ನುವಿನಂತಿಸುವವರು :
ಈ ವಿಭಾಗವು ವಿನಂತಿಸುವವರ ಹೆಸರು ಮತ್ತು ವಿನಂತಿದಾರ ನಿವಾಸಿಗೆ ಕೋರಿದ ದಾಖಲೆಗಳ ಸಂಖ್ಯೆ ತೋರಿಸುತ್ತದೆ.
ನಿರ್ದೇಶಿಕೆಗಳು :
ಈ ವಿಭಾಗವು ತಮ್ಮ URL ಜೊತೆಗೆ ನೋಂದಾಯಿತ ವಿತರಕರು ಮತ್ತು ವಿನಂತಿದಾರರ ಸಂಪೂರ್ಣ ಪಟ್ಟಿಯನ್ನು ತೋರಿಸುತ್ತದೆ.
ಹೇಗೆ ನಾನು ನನ್ನ ಡಿಜಿಟಲ್ ಲಾಕರ್ನಲ್ಲಿ ಡಾಕ್ಯುಮೆಂಟ್ ಅಪ್ಲೋಡ್ ಮಾಡಬಹುದು
ಅಪ್ಲೋಡ್ ದಾಖಲೆಗಳ ಸೌಲಭ್ಯ 'ನನ್ನ ಪ್ರಮಾಣಪತ್ರಗಳು' ವಿಭಾಗದಲ್ಲಿ ಲಭ್ಯವಿದೆ
ಯಶಸ್ವಿ ಅಪ್ಲೋಡ್ ಮೇಲೆ, ಡಾಕ್ಯುಮೆಂಟ್ 'ಅಪ್ಲೋಡ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ ಪಟ್ಟಿ ತೋರಿಬರುವುದು.
ನನ್ನ ಡಿಜಿಟಲ್ ಲಾಕರ್ ಇ-ದಾಖಲೆಗಳನ್ನು ಹೇಗೆ ಹಂಚಿಕೊಳ್ಳಬಹುದು?
ನಿಮ್ಮ ಇ ಡಾಕ್ಯುಮೆಂಟ್ ಹಂಚಿಕೊಳ್ಳಲು ( 'ಅಪ್ಲೋಡ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ 'ಡಿಜಿಟಲ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ URI ಎಂದು ಸೂಚಿಸಲಾಗಿದೆ) ನೀವು ಹಂಚಿಕೊಳ್ಳಲು ಬಯಸುವ ಡಾಕ್ಯುಮೆಂಟ್ ಮುಂದೆ ಒದಗಿಸಿದ 'ಹಂಚಿಕೊಳ್ಳಿ' ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಒಂದು ಸಂವಾದ ಪೆಟ್ಟಿಗೆಯ ಪಾಪ್ ಅಪ್ ತೋರಿಬರುತ್ತದೆ . ದಯವಿಟ್ಟು ಸಂವಾದ ಪೆಟ್ಟಿಗೆಯಲ್ಲಿ ಸ್ವೀಕರಿಸುವವರ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು 'ಹಂಚಿಕೊಳ್ಳಿ' ಬಟನ್ ಕ್ಲಿಕ್ ಮಾಡಿ.
ಡಾಕ್ಯುಮೆಂಟ್ ಸ್ವೀಕರಿಸುವವರಿಗೆ no-reply@digitallocker.gov.in
ಇಮೇಲ್ ಮೂಲಕ ಸ್ವೀಕರಿಸುವವರಿಗೆ ಹಂಚಿಕೆಯಾಗುತ್ತದೆ. ಇಮೇಲ್ ವಿಷಯದ ಸಾಲಿನಲ್ಲಿ ಡಾಕ್ಯುಮೆಂಟ್ ಕುರಿತ ಬಗ್ಗೆ ತೋರಿಬರುತ್ತದೆ. ಇಮೇಲ್ ವಿವರದ ವಿಭಾಗ ಡಾಕ್ಯುಮೆಂಟ್ URI ಲಿಂಕ್ ಮತ್ತು ಕಳುಹಿಸುವವರ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ಹೊಂದಿರುತ್ತದೆ.
ಸ್ವೀಕರಿಸುವವರು ಇಮೇಲ್ ಒದಗಿಸಿದ URI ಅನ್ನು ಲಿಂಕ್ ಬಳಸಿ ಡಾಕ್ಯುಮೆಂಟ್ ಪ್ರವೇಶಿಸಬಹುದು
ಇದು ಹೇಗೆ ಸಹಾಯ ಮಾಡುತ್ತದೆ
ಇದು ಭೌತಿಕ ದಾಖಲೆಗಳ ಕಡಿಮೆ ಬಳಕೆ ಮತ್ತು ಇ-ದಾಖಲೆಗಳ ದೃಢೀಕರಣವನ್ನು ಒದಗಿಸುತ್ತದೆ. ಸರ್ಕಾರ ನೀಡಲ್ಪಟ್ಟ ದಸ್ತಾವೇಜುಗಳ ವೀಕ್ಷಣೆಗೆ ಸುರಕ್ಷಿತ ಪ್ರವೇಶವನ್ನು ಒದಗಿಸುತ್ತದೆ. ನಿವಾಸಿಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಸರ್ಕಾರದ ಮತ್ತು ಇತರ ಇಲಾಖೆಗಳ ಆಡಳಿತಾತ್ಮಕ ವೆಚ್ಚವನ್ನು ಸಹ ಕಡಿಮೆಗೊಳಿಸುತ್ತದೆ
ಈಗಲೇ ನೋಂದಯಿಸಿ
ಇಮೇಲ್ ಮೂಲಕ ಡಿ ಜಿ ಲಾಕರ್ ಬೆಂಬಲ ತಂಡ: support@digitallocker.gov.in
ಮೂಲ: ಡಿಜಿ ಲಾಕರ್
ಕೊನೆಯ ಮಾರ್ಪಾಟು : 3/6/2020