অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಳಾಸದ ಪುರಾವೆ

ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್ ಸಂಪರ್ಕಕ್ಕೆ SIM ಕಾರ್ಡ್ ಪಡೆಯಲು, PAN ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ LPG ಸಂಪರ್ಕ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ಸಂಬಂಧಿತ ಅಧಿಕಾರಿಗೆ ಸಲ್ಲಿಸಲು ಎಲ್ಲಾ ಕಡೆ ಒಂದು ಊರ್ಜಿತವಾಗುವ "ವಿಳಾಸದ ಪುರಾವೆ" ಅಗತ್ಯ. ಹೊಸ ಸ್ಥಳದಲ್ಲಿ ಇತ್ತೀಚೆಗೆ ವಾಸಿಸಲು ಪ್ರಾರಂಭಿಸಿದವರು , ಅಥವಾ ಖಾಸಗಿ ವ್ಯವಹಾರ ಮಾಡುವವರು ಅಥವಾ ವಿಳಾಸದ ಪುರಾವೆಯನ್ನು ಇನ್ನೂ ಪಡೆಯದೆ ಇರುವ ವ್ಯಕ್ತಿಗಳು, "ವಿಳಾಸದ ಪುರಾವೆ"ಯನ್ನು ಸಲ್ಲಿಸದೆ ಯಾವುದೇ ರೀತಿಯ ಸೇವೆಗಳನ್ನು ಪಡೆಯುವುದು ಕಷ್ಟ

ಭಾರತ ಅಂಚೆ ಭಾರತದ ಪ್ರಜೆಗಳಿಗೆ ಸಾಮಾನ್ಯ ಶುಲ್ಕಗಳಲ್ಲಿ "ವಿಳಾಸದ ಪುರಾವೆ"ಯನ್ನು ಒದಗಿಸಲು ಪರಿಹಾರವನ್ನು ಕಂಡು ಕೊಂಡಿದೆ. ವ್ಯಕ್ತಿಯ ಭಾವಚಿತ್ರವನ್ನು ಹೊಂದಿರುವುದರಿಂದ, ನಿವಾಸ ಮತ್ತು ಕಚೇರಿಯ ವಿಳಾಸಗಳು, ಜನ್ಮ ದಿನಾಂಕ, ರಕ್ತದ ಗುಂಪು ಹಾಗೆಯೇ ಆ ವ್ಯಕ್ತಿಯ ಸಹಿಯವರೆಗೆ ಎಲ್ಲಾ ಪ್ರಮುಖ ಲಕ್ಷಣಗಳನ್ನು ಕಾರ್ಡ್ ಹೊಂದಿರುತ್ತದೆ.

ಈ ಸೌಲಭ್ಯ ಎಲ್ಲಿ ದೊರೆಯುತ್ತದೆ?

  • ಈ ಸೌಲಭ್ಯವು ನಗರದ ನಿವಾಸಿಗಳಿಗೆ ಮಾತ್ರ ಲಭ್ಯವಿದೆ
  • ಪ್ರಸ್ತುತವಾಗಿ ಈ ಸೌಲಭ್ಯವು ಭಾರತದ ಈ ನಗರಗಳಲ್ಲಿ ಮಾತ್ರ ಲಭ್ಯವಿದೆ- ಭುವನೇಶ್ವರ (ಒರಿಸ್ಸಾ), ಚೆನ್ನೈ & ಮಧುರೈ (ತಮಿಳು ನಾಡು), ಹೈದರಾಬಾದ್ ಮತ್ತು ವಾರಂಗಲ್ (ಆಂಧ್ರ ಪ್ರದೇಶ)

"ವಿಳಾಸದ ಪುರಾವೆ" ಕಾರ್ಡ್ ಗೆ ಯಾರು ಅರ್ಜಿ ಸಲ್ಲಿಸಬಹುದು?

  • ಯಾವುದೇ ಭಾರತೀಯ ಪ್ರಜೆ "ವಿಳಾಸದ ಪುರಾವೆ" ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
  • "ವಿಳಾಸದ ಪುರಾವೆ" ಕಾರ್ಡ್ ಪಡೆಯಲು ಯಾವುದೇ ವಯಸ್ಸಿನ ನಿರ್ಬಂಧವಿಲ್ಲ.

ವಿಳಾಸದ ಪುರಾವೆ" ಕಾರ್ಡ್ ನ ಊರ್ಜಿತತ್ವ

  • ಈ "ವಿಳಾಸದ ಪುರಾವೆ" ಕಾರ್ಡ್ ನ ಊರ್ಜಿತತ್ವ ಕೇವಲ 3 ವರ್ಷಗಳು,
  • ಪ್ರತಿ 3 ವರ್ಷಗಳ ನಂತರ , ಆಸಕ್ತಿ ಇರುವ ವ್ಯಕ್ತಿ ಹೊಸ "ವಿಳಾಸದ ಪುರಾವೆ" ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು,
  • 3 ವರ್ಷಗಳ ಊರ್ಜಿತತ್ವದ ಹೊರತಾಗಿ, ಪ್ರತಿ ವರ್ಷ ಕಾರ್ಡ್ ಅನ್ನು ನವೀಕರಣಗೊಳಿಸಬೇಕು

ವಿಳಾಸದ ಪುರಾವೆ" ಕಾರ್ಡ್ ಪಡೆಯಲು ಶುಲ್ಕಗಳು

  • ಆಸಕ್ತ ವ್ಯಕ್ತಿ "ವಿಳಾಸದ ಪುರಾವೆ" ಕಾರ್ಡ್ ಪಡೆಯಲು 240 ರೂಪಾಯಿ ಶುಲ್ಕಗಳನ್ನು ಪಾವತಿಸ ಬೇಕು (ಅರ್ಜಿಯ ಶುಲ್ಕ: 10 ರೂಪಾಯಿ ಮತ್ತು ಪ್ರಕ್ರಿಯೆ ಶುಲ್ಕ ಕಾರ್ಡ್ ನ ಬೆಲೆ 240 ರೂಪಾಯಿಗಳು)
  • ಪ್ರತಿ ನವೀಕರಣದ ಸಮಯದಲ್ಲಿ, ಭಾರತ ಅಂಚೆಗೆ 140 ರೂಪಾಯಿಗಳನ್ನು ಪಾವತಿಸಬೇಕು.

ವಿಳಾಸದ ಪುರಾವೆ" ಕಾರ್ಡ್ ಗೆ ಎಲ್ಲಿ ಅರ್ಜಿ ಸಲ್ಲಿಸುವುದು?

  • ಆಸಕ್ತ ವ್ಯಕ್ತಿ ಸಮೀಪದ ಅಂಚೆ ಕಚೇರಿಯಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಹೇಗೆ ಸಲ್ಲಿಸುವುದು

  • ಅರ್ಜಿಯನ್ನು ಇಂಗ್ಲಿಷ್ ನಲ್ಲಿ ಜಾಗರೂಕತೆಯಿಂದ ಭರ್ತಿ ಮಾಡಿ ಮತ್ತು ಪೂರ್ಣ ವಿವರಗಳನ್ನು ನೀಡಿ
  • ಅರ್ಜಿಯಲ್ಲಿ ಎರಡು ಪಾಸ್ ಪೊರ್ಟ್ ಅಳತೆಯ ಕಲರ್ ಭಾವಚಿತ್ರ ಲಗತ್ತಿಸಿ
  • ಅರ್ಜಿಯನ್ನು ಸಹಿ ಮಾಡಿ ಮತ್ತು 250 ರೂಪಾಯಿಗಳ ಶುಲ್ಕದೊಂದಿಗೆ ಸಲ್ಲಿಸಿ
  • ಶುಲ್ಕವನ್ನು ಹಣದ ರೂಪದಲ್ಲೇ ಪಾವತಿಸಬೇಕು

ವಿಳಾಸದ ಪುರಾವೆ" ಕಾರ್ಡ್ ಪಡೆಯಲು ಪ್ರಕ್ರಿಯೆ

  • ಅರ್ಜಿಯನ್ನು ಸ್ವೀಕರಿಸಿದ ನಂತರ, ಭಾರತದ ಅಂಚೆಯ ಪಬ್ಲಿಕ್ ರಿಲೇಷನ್ ಇನ್ ಸ್ಪೆಕ್ಟರ್, ಅರ್ಜಿದಾರನಿಂದ ನೀಡಲಾಗಿರುವ ವಿಳಾಸವನ್ನು ಪರಿಶೀಲಿಸುತ್ತಾರೆ.
  • ನೀಡಲಾಗಿರುವ ಮಾಹಿತಿಯು ತೃಪ್ತಿಕರ ಎನಿಸಿದ ನಂತರವಷ್ಟೆ "ವಿಳಾಸದ ಪುರಾವೆ" ಕಾರ್ಡ್ ಅನ್ನು ನೀಡುತ್ತಾರೆ.

ಕಾರ್ಡಿನ ನವೀಕರಣ

  • ಪ್ರತಿ ಕಾರ್ಡ್ ದಾರನು ತನ್ನ ಕಾರ್ಡ್ ಅನ್ನು ಪ್ರತಿ ವರ್ಷ 140 ರೂಪಾಯಿಗಳ ಶುಲ್ಕ ಪಾವತಿಸಿ ನವೀಕರಣಗೊಳಿಸಬೇಕು,
  • 3 ವರ್ಷಗಳ ನಂತರ, ಕಾರ್ಡಿನ ಊರ್ಜಿತತ್ವ ಮುಕ್ತಾಯವಾಗುತ್ತದೆ ಮತ್ತು ಹೊಸ "ವಿಳಾಸದ ಪುರಾವೆ" ಕಾರ್ಡ್ ಗೆ ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate