অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೈಲಿನ ಇ - ಟಿಕೆಟ್

ಇ-ಟಿಕೆಟ್ ಬಗ್ಗೆ

ಇ-ಟಿಕೆಟ್ ಅಂದರೆ ರೈಲ್ವೆ ಮುಂಗಟ್ಟೆಗೆ ಹೋಗದೆ ಆನ್‌ಲೈನ್ ನಲ್ಲಿ ಮನೆಯಿಂದ, ಮಾಹಿತಿ ಕೇಂದ್ರ ಇತ್ಯಾದಿಗಳಿಂದ ರೈಲು ಟಿಕೆಟ್ ಅನ್ನು ಕಾಯ್ದಿರಿಸುವುದು. ಇ-ಟಿಕೆಟ್, ರೈಲು ನಿಲ್ದಾಣದಲ್ಲಿ ನೀಡಲಾಗುವ ಟಿಕೆಟಿನಂತೆಯೇ ಅಧಿಕೃತವಾದುದಾಗಿದೆ. ಆದರೆ ಇ-ಟಿಕೆಟ್ ಹೊಂದಿದಾತ ಪ್ರಯಾಣದ ವೇಳೆಯಲ್ಲಿ ಗುರುತಿನ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ.

ಅವಶ್ಯಕತೆ:

  • ಸಮಂಜಸವಾದ ಇ ಮೇಲ್ ಐಡಿ
  • ಬ್ಯಾಂಕ್ ಖಾತೆ (ಎಟಿಎಂ ಜೊತೆಗೆ ಡೆಬಿಟ್ ಕಾರ್ಡ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಅಥವಾ ಕ್ರೆಡಿಟ್ ಕಾರ್ಡ್)
  • ಇಂಟರ್ ನೆಟ್ ಹೊಂದಿದ ವೈಯಕ್ತಿಕ ಕಂಪ್ಯೂಟರ್ (ಪಿಸಿ)
  • ಇ-ಟಿಕೆಟ್ ನೊಂದಿಗೆ ನೋಂದಣಿ ಮತ್ತು ಸಮಂಜಸವಾದ ಯೂಸರ್ ಐಡಿ ಮತ್ತು ಪಾಸ್ವರ್ಡ್

ಟಿಕೆಟ್ ಅನ್ನು ಯಾರು ಕಾಯ್ದಿರಿಸಲು ಸಾಧ್ಯ?

  • ಭಾರತೀಯ ರೈಲಿನಲ್ಲಿ ಪ್ರಯಾಣಿಸಲು ಬಯಸುವ, ಮೇಲಿನ ಸೌಲಭ್ಯಗಳನ್ನು ಹೊಂದಿದ ಯಾವುದೇ ವ್ಯಕ್ತಿ ಇ-ಟಿಕೆಟ್ ಅನ್ನು ಕಾಯ್ದಿರಿಸಬಹುದು.
  • ನೀವು ಟಿಕೆಟ್ ಅನ್ನು ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಪರವಾಗಿ ಸಹ ಕಾಯ್ದಿರಿ ಕಾಯ್ದಿರಿಸಬಹುದು.

ಗುರುತಿನ ಕಾರ್ಡ್ ನ ಅವಶ್ಯಕತೆ

ಒಬ್ಬ ಇ-ಟಿಕೆಟ್ ಹೊಂದಿದ ವ್ಯಕ್ತಿಯು ತನ್ನ ಪ್ರಯಾಣದ ಸಮಯದಲ್ಲಿ ಗುರುತಿನ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯ. ಕೆಳಗಿನವುಗಳಲ್ಲಿ ಒಂದನ್ನು ಗುರುತಿನ ಕಾರ್ಡ್ ರೀತಿಯಲ್ಲಿ ಬಳಸಲು ಸಾಧ್ಯ:

  • ಪಾಸ್ಪೋರ್ಟ್
  • ಮತದಾರರ ಗುರುತಿನ ಚೀಟಿ
  • ಪ್ಯಾನ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ಕೇಂದ್ರ/ರಾಜ್ಯ ಸರ್ಕಾರದ ಫೋಟೋ ಐಡಿ ಕಾರ್ಡ್

ಇ-ರೈಲು ಟಿಕೆಟಿನ ಕಾಯ್ದಿರಿಸುವಿಕೆಯನ್ನು ಹೇಗೆ ಪ್ರಾರಂಭಿಸುವುದು?

  • ಕ್ರಮ-1: ಐ.ಆರ್.ಸಿ.ಟಿ.ಸಿ ನೊಂದಿಗೆ ನೋಂದಣಿ ಮಾಡಿಕೊಳ್ಳಿ.
  • ಕ್ರಮ-2: ಇ-ಟಿಕೆಟ್ಗೆ ದಾಖಲಾಗಿ ಮತ್ತು ಸೈನ್ ಅಪ್ ಪರಿವಿಡಿ ಮೇಲೆ ಕ್ಲಿಕ್ ಮಾಡಿ
  • ಕ್ರಮ-3: ಐ.ಆರ್.ಸಿ.ಟಿ.ಸಿ ಪೊರ್ಟಲ್ ನೊಂದಿಗೆ ನೋಂದಾಯಿತರಾದ ನಂತರ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಪಡೆಯುವಿರಿ.
  • ಕ್ರಮ-4: ಇ-ಟಿಕೆಟ್ ಗೆ ದಾಖಲಾಗಿ ಮತ್ತು ನಿಮ್ಮ ಯುಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಮತ್ತು ಲಾಗ್ಇನ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಕ್ರಮ-5: ದಯವಿಟ್ಟು ನಿಮ್ಮ ಪ್ರಯಾಣದ ಆರಂಭದ ಸ್ಥಳದ ಹೆಸರನ್ನು ನಮೂದಿಸಿ ಮತ್ತು ಇಂದ ಮೆನುವಿನ ಅಡಿಯಲ್ಲಿ ಕೊಟ್ಟಿರುವ ಡ್ರಾಪ್ ಡೌನ್ ಬಾಕ್ಸ್ ನಿಂದ ಕೋಡ್ ಆಯ್ಕೆ ಮಾಡಿಕೊಳ್ಳಿ.
  • ಕ್ರಮ-6: ಗೆ ಪರಿವಿಡಿ ಅಡಿಯಲ್ಲಿ ನೀವು ಪ್ರಯಾಣಿಸಲು ಬಯಸುವ ಕೊನೆಯ ನಿಲ್ದಾಣದ ಹೆಸರನ್ನು ನಮೂದಿಸಿ ಮತ್ತು ಡ್ರಾಪ್ ಡೌನ್ ಬಾಕ್ಸ್ ನಿಂದ ಕೋಡ್ ಆಯ್ಕೆ ಮಾಡಿ ಕೊಳ್ಳಿ.
  • ಕ್ರಮ-7: ಪ್ರಯಾಣದ ದಿನಾಂಕ ಮತ್ತು ಕ್ಲಾಸ್ ಅಯ್ಕೆ ಮಾಡಿಕೊಳ್ಳಿ.
  • ಕ್ರಮ-8: ಇ-ಟಿಕೆಟ್ ಬಾಕ್ಸ್ ಪರಿಶೀಲಿಸಿ , ನೀವು ತತ್ಕಾಲ್ ಅಡಿಯಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಬಯಸಿದರೆ , ತತ್ಕಾಲ್ ಬಾಕ್ಸ್ ನೋಡಿ.
  • ಕ್ರಮ--9: ಫೈಂಡ್ ಟ್ರೈನ್ ಪರಿವಿಡಿಯನ್ನು ಕ್ಲಿಕ್ ಮಾಡಿ, ನಂತರ ರೈಲುಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ.
  • ಕ್ರಮ-10: ನಿಮ್ಮ ವೇಳಾಪಟ್ಟಿಗೆ ಅನುಗುಣವಾಗಿ ಯಾವುದೇ ರೈಲನ್ನು ಆಯ್ಕೆ ಮಾಡಿಕೊಳ್ಳಿ.ನಂತರ ಸೀಟುಗಳು ಲಭ್ಯವಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಲಭ್ಯತೆ ಪರಿವಿಡಿ ಮೇಲೆ ಕ್ಲಿಕ್ ಮಾಡಿ.
  • ಕ್ರಮ-11: ಅಗತ್ಯವಾದ ಸೀಟುಗಳು ಲಭ್ಯವಾದರೆ, ಟಿಕೆಟ್ ಕಾಯ್ದಿರಿಸಿ ಪರಿವಿಡಿ ಮೇಲೆ ಕ್ಲಿಕ್ ಮಾಡಿ.
  • ಕ್ರಮ-12: ಹೆಸರು, ವಯಸ್ಸು, ಲಿಂಗ ಮತ್ತು ಪ್ರಯಾಣಿಕ ಬಯಸುವ ಮಲಗುವ ಸ್ಥಳ/ಬರ್ತ್ ಆಯ್ಕೆಯನ್ನು ನಮೂದಿಸಿ.
  • ಕ್ರಮ-13: ಪುಟದ ಕೆಳಗೆ ನೀಡಿರುಅವ ಹೋಗು ಪರಿವಿಡಿ ಮೇಲೆ ಕ್ಲಿಕ್ ಮಾಡಿ.
  • ಕ್ರಮ-14: ನಿಮ್ಮ ಮುಂದೆ ಪೂರ್ಣ ಟಿಕೆಟ್ ನ ವಿವರ ಕಾಣಿಸಿ ಕೊಳ್ಳುತ್ತದೆ, ವಿವರಗಳು ಸರಿಯಾಗಿದ್ದರೆ, ನಂತರ ಹಣ ಪಾವತಿ ಮಾಡು ಬಟನ್ ಮೇಲೆ ಕ್ಲಿಕ್ ಮಾಡಿ.
  • ಕ್ರಮ-15: ಎಲ್ಲಾ ಬ್ಯಾಂಕ್ ಗಳ ಪಟ್ಟಿ ಸಿಗುತ್ತದೆ, ದಯವಿಟ್ಟು ನಿಮ್ಮ ಬ್ಯಾಂಕ್ ಆಯ್ಕೆಮಾಡಿ ಕೊಳ್ಳಿ ಮತ್ತು ಅದು ನೀಮ್ಮನ್ನು ಬ್ಯಾಂಕ್ ವೆಬ್ ಸೈಟ್ ಗೆ ರವಾನಿಸುತ್ತದೆ.
  • ಕ್ರಮ-16: ಆ ಬ್ಯಾಂಕಿನ ಯುಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಅಥವಾ ಬ್ಯಾಂಕ್ ನಿಂದ ಕೇಳಲಾದ ಇತರೆ ಯಾವುದೇ ಮಾಹಿತಿಯನ್ನು ನಮೂದಿಸಿ ಮತ್ತು ನಂತರ ಹಣ ವರ್ಗಾವಣೆ ಮಾಡಿ.
  • ಕ್ರಮ-17: ನಂತರ ರೈಲು ಟಿಕೆಟ್ ಕಾಣಿಸುತ್ತದೆ. ದಯವಿಟ್ಟು ಅದರ ಪ್ರಿಂಟ್ ತೆಗೆದು ಕೊಳ್ಳಿ.
  • ಕ್ರಮ-18:ಪಿಎನ್ಆರ್ ವಿವರಗಳೊಂದಿಗೆ ರೈಲು ಟಿಕೆಟ್ ಕಾಯ್ದಿರಿಕೆಗೆ ಸಂಬಂಧಿಸಿದ ಎಸ್ಎಂಎಸ್ ಮತ್ತು ಮೇಲ್ ನಿಮಗೆ ಬರುತ್ತದೆ.
  • ಕ್ರಮ-19: ರೈಲು ಟಿಕೆಟ್ನ ಪ್ರಿಂಟ್ ತೆಗೆದು ಕೊಂಡ ನಂತರ, ಐ.ಆರ್.ಸಿ.ಟಿ.ಸಿ ವೆಬ್ ಸೈಟ್ ನಿಂದ ಹೊರಬರಲು ಲಾಗ್ ಔಟ್ ಬಟನ್ ಅನ್ನು ಕ್ಲಿಕ್ ಮಾಡಿ.

ಕಾಯ್ದಿರಿಸಿದ ಟಿಕೆಟ್‌ನ್ನು ಹೇಗೆ ರದ್ದುಪಡಿಸುವುದು?

  • ಕ್ರಮ-1: ಇ-ಟಿಕೆಟ್ ಗೆ ದಾಖಲಾಗಿ ಮತ್ತು ನಿಮ್ಮ ಯುಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ
  • ಕ್ರಮ-2: ಮೈ ಟ್ಯ್ರಾನ್ಸಾಕ್ಷನ್ ಪರಿವಿಡಿ ಅಡಿಯಲ್ಲಿ ಲಭ್ಯವಿರುವ ಕ್ಯಾನ್ಸಲ್ ಇ-ಟಿಕೆಟ್ ಅಥವಾ ಬುಕ್ಡ್ ಹಿಸ್ಟರಿ ಬಟನ್ ಮೇಲೆ ಕ್ಲಿಕ್ ಮಾಡಿ
  • ಕ್ರಮ-3: ನಿಮ್ಮ ಐ.ಆರ್.ಸಿ.ಟಿ.ಸಿ ಪಾಸ್‌ವರ್ಡ್ ನಮೂದಿಸಿ ಮತ್ತು ಹೋಗು ಬಟನ್ ಮೇಲೆ ಕ್ಲಿಕ್ ಮಾಡಿ.
  • ಕ್ರಮ-4: ನೀವು ರದ್ದುಪಡಿಸುವ ಟಿಕೆಟ್ ಅನ್ನು ಆಯ್ಕೆ ಮಾಡಿ, ಮತ್ತು ಕ್ಯಾನ್ಸಲ್ ಇ-ಟಿಕೆಟ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಅನುಸರಿಸಿ.
  • ನಿಮ್ಮ ಟಿಕೆಟಿನ ಪಿಎನ್ಆರ್ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?

    ಮೊಬೈಲ್ ಮೂಲಕ

  • ಕ್ರಮ-1: 139 ಡೈಯಲ್ ಮಾಡಿ, ಸೂಚನೆಗಳನ್ನು ಪಾಲಿಸಿ ಮತ್ತು 10 ಅಂಕೆಗಳ ಪಿಎನ್ಆರ್ ಸಂಖ್ಯೆಯನ್ನು ನಮೂದಿಸಿ.
  • ವೆಬ್ ಸೈಟ್ ಮೂಲಕ

    • ಕ್ರಮ-1:ಇ-ಟಿಕೆಟ್ ಅಥವಾ ಇ-ಟಿಕೆಟ್ ಗೆ ದಾಖಲಾಗಿ ಮತ್ತು 10 ಅಂಕೆಗಳ ಪಿಎನ್ಆರ್ ಸಂಖ್ಯೆಯನ್ನು ನಮೂದಿಸಿ.

    ಮೂಲ: ಪೋರ್ಟಲ್ ತಂಡ

    ಕೊನೆಯ ಮಾರ್ಪಾಟು : 3/25/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate